ಒಳಗೆ ನೋಡಿದರೆ ಒಳಗೆ ಬಯಲು,
ಹೊರಗೆ ನೋಡಿದರೆ ಹೊರಗೆ ಬಯಲು,
ನೆನೆದಿಹೆನೆಂದರೆ ಮನ ಬಯಲು
ನಾನೂ ಬಯಲು ನೀನೂ ಬಯಲು ನೋಡಾ.
ಅರುಹು ಶೂನ್ಯವಾದುದೇ ಅಖಂಡ ನಿರಾಳ ನೋಡಾ ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೆ. (ತೋಂಟದ ಸಿದ್ಧಲಿಂಗ ಯತಿಗಳು)
TRANSLITERATION
oLage nODidare oLage bayalu,
horage nODidare horage bayalu,
nenediheneMdare mana bayalu
nAnU bayalu nInU bayalu nODA.
aruhu SUnyavAdudE aKaMDa nirALa nODA mahAliMga guru Siva siddhESvara praBuve. (tOMTada siddhaliMga yatigaLu)
CLICK HERE TO HEAR IT:
TRANSLATION
oLage(inside) nODidare(if looked) oLage(inside is) bayalu(whole, plenary),
horage(outside) nODidare(if looked) horage(outside is) bayalu(whole, plenary),
nenediheneMdare(if I want to remember) mana(mind is) bayalu (whole, plenary)
nAnU(I too am) bayalu(whole, plenary) nInU(you too are) bayalu(whole, plenary) nODA(you see).
Aruhu(knowledge) SUnyavu(whole)AdudE(becoming itself) aKaMDa(complete, unbroken) nirALa(calm) nODA(you see) mahAliMga guru Siva siddhESvara praBuve(Lord mahAliMga guru Siva siddhESvara).
- By tOMTada siddhaliMga yatigaLu
Looking inside, the inside is whole,
Looking outside, the outside is whole,
If I want to remember, my mind is whole,
I too am whole and you too are whole, you see!
With the knowledge complete, I am at complete calmness, Oh Lord! mahAliMga guru Siva siddhESvara praBu!
COMMENTARY
In the previous posting, we used the words ‘Shoonya’ and ‘Bayalu’ to represent the ultimate state one should strive to achieve. This is the state of ‘Shoonya Sampaadane’ or ‘Linga anga saamarasya – merging of God and Man’ or ‘filling the trench of you and I’ or complete bliss of being one with God. In this vachana, Sharana Tontada Siddalingeswara describe the state of bliss further. He says, it is the state in which both the inside and outside have achieved the completeness; the mind does not strive to recall old memories or create new ones; one does not see the duality of I and you, and there is a complete, unbounded calmness within.
Being a part of this mundane world, what do we see when we examine ourselves inside? We see the various pressures we are subjected to, the pain created by those pressures, unsatisfactory work habits to escape from these pressures, yet expectation of great results, guilt of nonperformance, various desires, happiness and sadness, so on and so forth. The outside scene is not much different from the one inside – violence, pain, dissatisfaction, anger, jealousy, etc. Although none of these are permanent, they never let us be at complete peace. We are so immersed in all these, that we do not even think about getting out of them. We get involved more and more and begin to think that that state of mind is the norm and we do not have to do anything different.
Sharanas probe into the fundamental cause for the agitation of mind, gain the knowledge needed to combat the cause, and develop the inner strength to achieve the complete peace.
The key for us then, is to question the basic causes of the disturbance of our mind and eliminate those to achieve the complete peace. Successful journey through the spiritual path and acquisition of complete knowledge of within and without, erases the dualities of life and provides the basis for ‘bayalu’ or ‘shoonya’ state.
Let us eliminate duality and achieve the ultimate peace.
KANNADA COMMENTARY
ಈ ವಚನದಲ್ಲಿ ತೋಂಟದ ಸಿದ್ಧಲಿಂಗೇಶ್ವರವರು “ಬಯಲು” ಸ್ಥಿತಿಯಲ್ಲಿ ಏನಾಗುತ್ತದೆ ಎಂಬುದನ್ನು ಹೇಳುತ್ತಿದ್ದಾರೆ. ಒಳಗೆ ನೋಡಿದರೆ ಒಳಗೆ ಬಯಲು, ಹೊರಗೆ ನೋಡಿದರೆ ಹೊರಗೆ ಬಯಲು. ನೆನೆಯಬೇಕೆಂದು ಕೊಂಡರೆ ಮನಸ್ಸು ಕೂಡ ಬಯಲಾಗಿದೆ. ಬುದ್ಧಿ ಶೂನ್ಯವಾಗಿ ಅಖಂಡವಾದ ಶಾಂತ ಸ್ಥಿತಿಯುಂಟಾಗಿದೆ ಎಂದು ಹೇಳುತ್ತಿದ್ದಾರೆ.
“ಒಳಗೆ ನೋಡಿದರೆ ಒಳಗೆ ಬಯಲು, ಹೊರಗೆ ನೋಡಿದರೆ ಹೊರಗೆ ಬಯಲು” ಏನು ಹೀಗೆಂದರೆ? ಮನಸ್ಸನ್ನು ಒಳಹೊಕ್ಕು ನೋಡಿಕೊಂಡರೆ ಅಥವಾ ಹೊರಗೆ ನೋಡಿದರೆ ಅಲ್ಲಿ ಎಲ್ಲಿಯೂ ಅಂತರವಿಲ್ಲದ ಪೂರ್ಣತೆ ತುಂಬಿಕೊಂಡಿದೆ ಎನ್ನುತ್ತಾರೆ ಅನುಭಾವಿಗಳು. ನಮ್ಮಂತಹ ಸಾಮಾನ್ಯರು ಒಳಗೆ ನೋಡಿಕೊಂಡಾಗ ಏನು ಕಾಣುತ್ತದೆ ನೋಡೋಣ: ನಾನಾ ರೀತಿಯ ಒತ್ತಡಗಳು, ಅವುಗಳಿಂದ ಹಿಂಸೆ, ಆ ಒತ್ತಡಗಳಿಗೆ ಒಳಗಾಗಿ ಅಸಮರ್ಪಕವಾಗಿ ನಿರ್ವಹಿಸುವ ಕೆಲಸಗಳು, ಆದರೂ ಉತ್ಕೃಷ್ಟವಾದ ಫಲದ ನಿರೀಕ್ಷೆ, ಇಲ್ಲವೆ ಅಸಮರ್ಪಕವಾದ ಕೆಲಸದಿಂದ ಅಪರಾಧಿ ಭಾವ, ನಾನಾ ಆಸೆಗಳು, ಆಸೆಗಳು ಕೈಗೂಡಿದಾಗ ಉಂಟಾಗುವ ಸಂತಸದಿಂದ ಬೀಗುವಿಕೆ, ಎಲ್ಲ ಆಸೆಗಳು ಕೈಗೂಡದ ಕಾರಣ ನಿರಾಸೆ, ಅತೃಪ್ತಿ, ಕೋಪ, ನಮಗಿಂತ ಚೆನ್ನಾಗಿ ಇರುವವರನ್ನು ಕಂಡಾಗ ಉಂಟಾಗುವ ಅಸೂಯೆ, ನಾನಾ ಸುಖಗಳಿಗೆ ಅಂಟಿಕೊಳ್ಳುವಿಕೆ, ಅವುಗಳು ದೂರವಾದಾಗ ಉಂಟಾಗುವ ಖಿನ್ನತೆ, ಹೀಗೆ ಲೆಕ್ಕವಿಲ್ಲದ ವಿಷಯಗಳು ಕಂಡು ಬರುತ್ತವೆ. ಹೊರಗೆ ಕೂಡ ಇದೇ ಸ್ಥಿತಿಯಿದೆ: ಹಿಂಸೆ, ಗೊಂದಲ, ನೋವು, ಖಿನ್ನತೆ, ಕೋಪ, ಅಹಂಕಾರ, ಈರ್ಷ್ಯೆ, ಕ್ಷಣಿಕ ಸುಖ, ಅದಕ್ಕೆ ಅಂಟಿಕೊಳ್ಳುವಿಕೆ, ಅದು ಕಳೆದು ಹೋಗುವುದೆಂಬ ಭಯ, ಒಂದಲ್ಲ ಒಂದು ರೀತಿಯ ಒತ್ತಡ, ನಿತಂತರವಾದ ಧಾವಂತ, ಉದ್ವೇಗ ಇತ್ಯಾದಿ. ಇಲ್ಲಿ ಕಂಡು ಬರುವ ಪ್ರತಿಯೊಂದೂ ಅಪೂರ್ಣವೇ. ಯಾವುದೂ ಸದಾ ಇರುವಂತಹುದಲ್ಲ. ಇದ್ಯಾವುದಕೂ ಗಟ್ಟಿಯಾದ ತಳಹದಿಯಿಲ್ಲ. ಪ್ರತಿಯೊಂದೂ ಮನಸ್ಸಿಗೆ ಕಿರಿಕಿರಿ ಉಂಟುಮಾಡುವಂತಹವೇ. ಎಲ್ಲಿಯೂ ಅಖಂಡವಾದ ಶಾಂತಿಯ ಲವಲೇಶವೂ ಇಲ್ಲ. ನಾವು ಇದರಿಂದ ಹೊರಬರುವ ಉಪಾಯವನ್ನೂ ಮಾಡುವುದಿಲ್ಲ. ಅವುಗಳಿಂದ ನಾವು ತೊಳಲಾಡುತ್ತಿದ್ದೇವೆ ಎಂದು ಕೂಡ ನಾವು ಅರಿಯುವುದಿಲ್ಲ. ಇದು ಸಾಮಾನ್ಯನ ಮನಸ್ಸಿನ ಸ್ಥಿತಿ. ಆದರೆ ಶರಣರು, ಇದನ್ನು ಗುರುತಿಸುತ್ತಾರೆ, ಇದರಿಂದ ಮುಕ್ತವಾಗುವ ಆಳವಾದ ಹಂಬಲದಿಂದ ಹೊರಬರುವ ಮಾರ್ಗವನ್ನು ಕೈಗೊಳ್ಳುತ್ತಾರೆ. ಮೊಟ್ಟಮೊದಲಿಗೆ ಈ ಎಲ್ಲವುಗಳು ಹುಟ್ಟಿಕೊಳ್ಳಲು ಕಾರಣವೇನು ಎಂಬುದನ್ನು, ಮನಸ್ಸಿನ ವ್ಯಾಪಾರವನ್ನು, ಅದು ಕೆಲಸಮಾಡುವ ಪ್ರಕ್ರಿಯೆಯನ್ನು, ಮನಸ್ಸಿನ ಈ ಎಲ್ಲ ಆಯಾಮಗಳ ಅಸ್ತಿತ್ವವೇನು, ಎಂಬುದರ ಕಡೆಗೆ ಗಮನ ಹರಿಸುತ್ತಾರೆ. ಆಂತರಿಕ ಶಿಸ್ತಿನ ಬದುಕಿನಿಂದ ಅವುಗಳ ಅಸ್ತಿತ್ವವೇ ಇಲ್ಲದಂತೆ ಮಾಡುತ್ತಾರೆ. ಅದರ ಮುಂದಿನದು ಅನುಭಾವಿಗಳಿಗೆ ಮಾತ್ರ ನಿಲುಕುವಂತಹದು. ಮನಸ್ಸಿನ ಆಯಾಮದಲ್ಲಿಯೇ ಇರುವಂತಹ ನಾವು ಅವರ ಉದ್ಗಾರಗಳಿಂದ ಆ ಬಯಲಿನ ಕಲ್ಪನೆ ಮಾತ್ರ ಮಾಡಬಹುದು. ಅಲ್ಲಿ, ಗಟ್ಟಿಯಾದ ತಳಹದಿಇಲ್ಲದುದರ ಮೇಲೆ ನಾನಾ ಸೌಧಗಳನ್ನು ನಿರ್ಮಾಣ ಮಾಡಿ ಎಲ್ಲವೂ “ನಿಜ”ವೇ ಎಂದು ಭ್ರಮೆ ಹುಟ್ಟಿಸುವಂತಹ ಬುದ್ಧಿಯು ಶೂನ್ಯವಾಗುತ್ತದೆ, ದೇವರು, ತಾನು ಎಂಬ ದ್ವೈತ ಭಾವ ಅಳಿಯುತ್ತದೆ, ಅಲ್ಲಿ ಕೇವಲ ಒಂದೇ ಇರುತ್ತದೆ, ಅದು ಇರದ ಠಾವೇ ಇರುವುದಿಲ್ಲ. ಎಲ್ಲವು ಅದರಿಂದಲೇ ತುಂಬಿರುತ್ತದೆ. ಅಲ್ಲಿ ಅಖಂಡವಾದ ಶಾಂತಿ, ಆನಂದ ಕಂಡುಬರುತ್ತದೆ ಎನ್ನುತ್ತಾರೆ ಶರಣರು.