ಮಾಡಿದೆನೆಂಬುದು ಮನದಲ್ಲಿ ಹೊಳೆದರೆ
ಏಡಿಸಿ ಕಾಡಿತ್ತು ಶಿವನ ಡಂಗುರ.
ಮಾಡಿದೆನೆನ್ನದಿರಾ ಲಿಂಗಕ್ಕೆ!
ಮಾಡಿದೆನೆನ್ನದಿರಾ ಜಂಗಮಕ್ಕೆ!
ಮಾಡಿದೆನೆಂಬುದು ಮನದಲಿಲ್ಲದಿದ್ದರೆ
ಬೇಡಿದ್ದನೀವ ಕೂಡಲಸಂಗಮದೇವ!
TRANSLITERATION
mADideneMbudu(About my service) manadalli(In the mind) hoLedare(flashed)
EDisi (harshly) kADittu(hunts) Sivana (Lord Shiva's) DaMgura (Drum).
mADidenu (I Served) ennadirA(never say) liMgakke(the Lord)!
mADidenu ennadirA jaMgamakke(moving saints)!
mADideneMbudu manadali lladiddare(does not occur)
bEDiddanu (whatever aspired) Iva(grant) kUDalasaMgamadEva!
mADideneMbudu manadalli hoLedare
EDisi kADittu Sivana DaMgura.
mADidenennadirA liMgakke!
mADidenennadirA jaMgamakke!
mADideneMbudu manadalilladiddarebEDiddanIva kUDalasaMgamadEva!
CLICK TO HEAR IT
http://www.youtube.com/watch?v=ejIJuTiAPXE
TRANSLATION
If it flashes across the mind that one is performing service,
the drum of Lord Shiva warns with a harsh sound.
Never say that you served the Lord!
Never say that you served His wandering (mobile) devotees!
If the thought that you served does not occur in your mind,
the Lord Kudala Sangama will grant you whatever you aspire for.
COMMENTARY
Man is born to ‘act’ in this world. It is highly impossible to be alive and not do anything. Existence in a body demands continuous action. Whenever one performs a task, one invariably gets attached to it by focusing the attention on the results (fruit) of the task. Basavanna says, if it flashes in your mind that you are doing a service, the drum of Lord Shiva (essentially your conscience) sounds harshly and warns you not to feel that way. Never say that you are serving the Lord or His devotees. If you can develop this mental capacity to be detached from the action while performing the action, Lord Kudala Sangama will grant whatever you aspire for. This vachana points us towards the path of action (Karma Yoga) to realize God.
The ‘path of action’ does not just mean ‘just to act.’ It means that one should be always in action and still be unattached to action. Even when one performs good action, or renders service to God, or renders service to his fellow beings one should not be attached to it. It should never occur that one is performing a service. The left hand should not know what service the right hand did!
The Bhagavadgita upholds the theory of action in the following famous Sloka:
Karmanyevadhikaras te ma phalesu kadachna
Ma karma phalahetur bhuh ma te sangostu akarmani.
It advises man that he should pursue a profession truthfully and sincerely without worrying about the results. It also admonishes man against laziness or inaction. It preaches ‘Nishkama Karma”, i.e. performing one’s duty without longing for its fruits. Work is holy, work is worship, work is sacred and one should never renounce it.
The greatest contribution of Basavanna and other sharanas to the world is the principle of ‘Kaayaka ’. According to it, every human being, irrespective of his caste, creed, knowledge, status and wealth, should perform labour of one type or the other. All productive and useful work is kaayaka. All work is equally respectable and dignified. Performing one’s work honestly to the best of one’s ability is the worship of Shiva. Such work takes the individual to Kailasa, the abode of Shiva.
The main purpose of our life is to understand and experience the ultimate reality behind the visible flux which we call ‘the World’. That ultimate reality is the God (i.e. Linga), the supreme soul. The aim of each of us (the individual souls i.e. Anga) is to eventually merge (Aikya or Linga anga saamarasya) into the supreme soul. Path of Action (Karma Yoga) is one approach our spiritual leaders, sages and seers have provided us to accomplish that. The other three approaches are: Path of devotion (Bhakti Yoga), Path of Knowledge (Jnana Yoga) and Path of Meditation or Dhyana (Raja Yoga). Vachanas address all the four paths. This posting covered the first path. We will address the remaining three in subsequent postings of this blog.
FOR THOSE OF YOU WHO CAN READ KANNADA
ಮಾನವನ ಮನಸ್ಸು ಬಲು ಸಂಕೀರ್ಣವಾದದ್ದು. ಅದನ್ನು ಅರ್ಥಮಾಡಿಕೊಳ್ಳುವುದು ಕಡು ಕಷ್ಟ. ಅದರ ಅನೇಕ ಮುಖಗಳಲ್ಲಿ ಚಂಚಲತೆಯೂ ಒಂದು. ಅದು ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದಿಲ್ಲ. ನಾವು ನಮ್ಮ ಮನಸ್ಸಿನಂತೆಯೇ ಕೆಲಸ ಮಾಡುತ್ತಿದ್ದೇವೆ ಎಂದುಕೊಂಡಿರುತ್ತೇವೆ, ನಾವು ಯಾವುದೋ ಸತ್ಕಾರ್ಯ ಮಾಡುತ್ತೇವೆ. ಅದರಲ್ಲಿ ನಾವು ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತೇವೆ. ನಿಜವಾಗಿಯೂ ನಾವು ಹೊಗಳಿಕೆಗಾಗಿ ಅದನ್ನು ಮಾಡಿರುವುದಿಲ್ಲ, ಅಥವಾ ಹೊಗಳಿಕೆಗಾಗಿ ಮಾಡುತ್ತಿಲ್ಲ ಎಂದುಕೊಳ್ಳುತ್ತೇವೆ. ಆದರೆ ನಮ್ಮ ಆ ಕಾರ್ಯವನ್ನು ಜನರು ಮೆಚ್ಚುತ್ತಾರೆ ಮತ್ತು ಮೆಚ್ಚಿಗೆಯ ನುಡಿ ನುಡಿಯುತ್ತಾರೆ. ಇಲ್ಲಿಯವರೆಗೂ ವಿನಯದ ಮೂರ್ತಿಯಾಗಿದ್ದ ನಮ್ಮ ಮನವು ಒಮ್ಮಿಲೆ, ನಮಗೇ ತಿಳಿಯದಂತೆ “ನಾನೇ ಆ ಕೆಲಸ ಮಾಡಿದ್ದು” ಎಂದು ಬೀಗುತ್ತದೆ. ಮಾಡಿದ್ದ ಆ ಸತ್ಕಾರ್ಯ ತನ್ನ ಬೆಲೆಯನ್ನು ಕಳೆದು ಕೊಳ್ಳುತ್ತದೆ. ಆಗ “ಶಿವನ ಡಂಗುರ” ಅಂದರೆ ನಮ್ಮ ಅಂತರಂಗ ನಮ್ಮನ್ನು ಮೂದಲಿಸುತ್ತದೆ. ಮಾಡುವವನು ಮತ್ತು ಮಾಡಿಸುವವನು ತಾನಲ್ಲ. ಯಾವುದೋ ಶಕ್ತಿ ತನ್ನಿಂದ ಮಾಡಿಸುತ್ತದೆ ಎಂಬುದು ಎಲ್ಲರ ಅಂತರಂಗಕ್ಕೂ ತಿಳಿದ ಮಾತು. ಆದರೂ “ನಾನೇ ಮಾಡಿದೆ” ಎಂಬ ಅಹಂಕಾರ ಮೂಡುತ್ತದೆ. ಆದ್ದರಿಂದ ಬಸವಣ್ಣನವರು ನಾನು ಮಾಡಿದೆ ಎನ್ನ ಬೇಡಿರಿ ಎನ್ನುತ್ತಾರೆ. ನಾವು ಮಾಡುವುದೆಲ್ಲವನ್ನೂ “ನಾನು” ಎಂಬುದನ್ನು ಬಿಟ್ಟು ಮಾಡಿದರೆ ಕೂಡಲಸಂಗಮನು ನಮ್ಮ ಎಲ್ಲ “ಬೇಕು” ಗಳನ್ನು ಪೂರೈಸುತ್ತಾನೆ ಎನ್ನುತ್ತಾರೆ. ಏನಿದರರ್ಥ? ಅಂತರಂಗದ ನಿಸ್ವಾರ್ಥವಾದ ಹಂಬಲ ಅನಾಯಾಸವಾಗಿ ಕೈಗೂಡುವುದು ನಮ್ಮೆಲ್ಲರ ಅನುಭವಕ್ಕೆ ಬಂದೇ ಇರುತ್ತದೆ. ಇದು ನಮ್ಮೆಲ್ಲರ ಜೀವನದಲ್ಲಿ ವಿರಳವಾಗಿ ನಡೆಯುವ ಸಂಗತಿ. ಏಕೆಂದರೆ ಬಹು ಬೇಗ ನಮ್ಮ ಅಹಂಕಾರ ತಲೆ ಎತ್ತುತ್ತದೆ. ಆದರೆ ಅನೇಕ ಮಹಾತ್ಮರ ಜೀವನದಲ್ಲಿ ಇಂತಹದು ನಡೆಯುವುದನ್ನು ನಾವು ಕಾಣುತ್ತೇವೆ. ಅದು ಒಂದು ಪವಾಡದಂತೆಯೇ ಕಾಣುತ್ತದೆ. ಹೌದು, ಸಂದೇಹವೇ ಇಲ್ಲ. ಅದು ಪವಾಡವೇ ಸರಿ. ಏಕೆಂದರೆ ನಿಮಿಷ ನಿಮಿಷಕ್ಕೂ ಹೊಸ ರೂಪತಾಳುತ್ತ, ನಮ್ಮ ಪ್ರತಿಯೊಂದು ನಡೆಯ ಮರೆಯಲ್ಲಿಯೇ ಚೆನ್ನಾಗಿ ಅರಳುವ ಅಹಂಕಾರವನ್ನು ತೊರೆಯುವುದು ಸಾಮಾನ್ಯ ವಿಷಯವಲ್ಲ. ಅದು ಪವಾಡವೇ ಅಲ್ಲವೆ?
Vachanas (sayings) of Veerashiva philosophers (Sharanas)of the 12th century are a treasure house of philosophical and spiritual thoughts tinged with the contemporary social context. They are pertinent to our lives today. Please feel free to share this blog with your friends and family and let us know if you have comments, through the comments window at the end of the posting! Thanks!
Thursday, November 25, 2010
Friday, November 19, 2010
Vachana 14 Papiya Dhana Prayaschitakallade - Appropriateness of Wealth
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ,
ಸತ್ಪಾತ್ರಕ್ಕೆ ಸಲ್ಲದಯ್ಯ!
ನಾಯ ಹಾಲು ನಾಯಿಂಗಲ್ಲದೆ,
ಪಂಚಾಮೃತಕ್ಕೆ ಸಲ್ಲದಯ್ಯ!
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯ.
TRANSLITERATION
pApiya (sinner's) dhana (wealth) prAyaScittakke (repentence) allade(only, but not),
satpAtrakke(deserving) salladayya(does not befit)!
nAya(dog's) hAlu(milk) nAyiMge (for dogs) allade,
paMcAmRutakke(nectar of five) salladayya!
namma(our) kUDalasaMgana SaraNarige (sharanas) allade
mADuva(acquiring) artha(money) vyartha(useless) kaMDayya(Please see).
pApiya dhana prAyaScittakkallade,
satpAtrakke salladayya!
nAya hAlu nAyiMgallade,
paMcAmRutakke salladayya!
namma kUDalasaMgana SaraNarigallade
mADuva artha vyartha kaMDayya.
CLICK TO HEAR IT
http://www.youtube.com/watch?v=KxaQzXoL72w
MUSICAL RENDERING
http://www.raaga.com/player4/?id=173118&mode=100&rand=3.14159265
TRANSLATION
The sinner’s wealth befits nothing other than to expiate his sins (his own repentance), and certainly not to render as charity to the deserving!
The dog’s milk befits nothing other than its own puppies, and certainly not as an ingredient of the nectar of five ingredients (fit for the Lord’s worship)!
Mark Sir! The wealth spent for any purpose other than the welfare of the devotees of our Lord Kudala Sangama, is verily a waste!
COMMENTARY
Basavanna advocated ‘Kaayaka (duty)' as a must to acquire wealth (to feed the body and the family) and ‘dasoha (giving to community)' to dispose the excess wealth for community needs. In this vachana he specifies the right means for Kaayaka and Dasoha - wealth should be acquired by noble means and it should be disposed off as charity to deserving noble individuals for the welfare of the society.
We all know and feel that the ‘money moves the world’. It is hard to have a comfortable life without money, and people look down upon poor. No wonder, we spend all our energies to earn money. While there is nothing wrong in earning money, it should be done by noble means, without hurting others, and without resorting to lying and cheating. Basavanna says that the money earned through sinful ways can only be used to expiate such sins or as a medium for sinner’s repentance.
In practice, those who resort to sinful ways of accumulating wealth hardly think about the welfare of the others around them. Even if they share their wealth, it is usually to put their names on society’s bulletin boards, to compensate for the ills they have brought upon others, or to gain notoriety as a philanthropist. There is always a selfish motive, not the selfless willingness to contribute to the welfare of the society.
It is interesting that Basavanna compares the wealth accumulated through sinful ways to Dog’s milk, which can only be used to feed its puppies; it cannot be used for making the nectar (typically the five ingredients are milk, honey, Ghee, Banana, yogurt) fit for the Lord’s worship. Basavanna is simply giving the example of current day practice of using cow’s rather than dog’s milk for offers to the Lord. He is not implying that dog’s are inferior.
Basavanna says that the wealth should be disposed off as charity to the deserving (devotees of the Lord) and to the welfare of the society. He is using the word ‘devotee’ in a larger context to refer to those who have found the Lord within them, those who are above the fray of caste and creed, and those who consider all their deeds and wealth as belonging to the Lord. Obviously, when wealth is rendered to such individuals, it is guaranteed that that it will be used for the noblest purpose!
My favourite stanza in the Aarathi ‘Jaya Jagadeesha Hare’ is “Than Man Dhan sub hi teera, sub kuch hi tera; tera tujko arpan kya laage mera” meaning “Oh Lord! My body, mind and wealth are all yours and I am offering all of them back to you. I do not own anything”. If we can only develop such God mindedness, we will be a long way in reaching Him!
Let us not shy away from working hard to acquire wealth, but only by noble means! Let us share it with fellow beings to enhance the peace and happiness of all!
FOR THOSE OF YOU WHO CAN READ KANNADA
“ದುಡ್ಡೇ ದೊಡ್ಡಪ್ಪ” ಎಂಬ ಮಾತು ಬಹು ಪ್ರಚಲಿತ. ಸಾಮಾನ್ಯವಾಗಿ ದುಡ್ಡಿಲ್ಲದಿದ್ದವನನ್ನು ಎಲ್ಲರೂ ಅಸಡ್ಢೆಯಿಂದಲೇ ನೋಡುತ್ತಾರೆ. ದುಡ್ಡಿಲ್ಲದೆ ಬದುಕುವುದು ಸಾಮಾನ್ಯನಿಗೆ ಅಸಾಧ್ಯವೇ ಆಗುತ್ತದೆ. ಆದ್ದರಿಂದ ಎಲ್ಲರೂ ದುಡ್ದು ಗಳಿಸುವುದರಲ್ಲಿ ತೊಡಗುವುದು ಆಶ್ಚರ್ಯವೂ ಅಲ್ಲ, ಪಾಪವೂ ಅಲ್ಲ. ಆದರೆ ಅದನ್ನು ಪಾಪದಿಂದ ಗಳಿಸುವುದು ತರವಲ್ಲ ಎನ್ನುತ್ತಾರೆ ವಚನಕಾರರು. ಪಾಪದಿಂದ ಗಳಿಸುವುದು ಎಂದರೇನು? ಎಂದು ಹುಟ್ಟುವ ಪ್ರಶ್ನೆಗೆ, ಸುಳ್ಳು, ಮೋಸ, ಶೋಷಣೆಗಳ ಮೂಲಕ ಹಣ ಗಳಿಸುವುದು ಎಂದು ಹೇಳಬಹುದು. ಇತರರ ಮನ ನೋಯಿಸಿ, ವಂಚಿಸಿ ಗಳಿಸುವವನ ಹಣ ಆತನ ಪ್ರಾಯಶ್ಚಿತ್ತಕ್ಕೆ ಮಾತ್ರ ಸಲ್ಲುವುದೇ ಹೊರತು ಸತ್ಪಾತ್ರರಿಗೆ ಸಲ್ಲುವುದಿಲ್ಲವೆಂದು ಹೇಳುತ್ತಾರೆ ಬಸವಣ್ಣನವರು.
ಇನ್ನೊಬ್ಬರನು ನೋಯಿಸಿ ಧನಗಳಿಸುವವನಿಗೆ ಕಷ್ಟದಲ್ಲಿರುವವರಿಗೆ ಸಹಾಯಮಾಡಬೇಕೆಂಬ ಮನಸ್ಸು ಉಂಟಾಗುವುದೇ ಇಲ್ಲ. ಹಾಗೇನಾದರು ಅವನು ಸಹಾಯ ಮಾಡಿದ್ದಾದರೆ, ಅದರ ಹಿಂದೆ ಸ್ವಾರ್ಥ ಭಾವವಿರುತ್ತದೆ. ಸಹಾಯ ಪಡೆದವರು ತನ್ನನ್ನು ಹೊಗಳಲಿ, ತಾನು ಪ್ರಸಿದ್ದನಾಗಲಿ ಇತ್ಯಾದಿ. ಅಥವಾ ಅಷ್ಟಿಷ್ಟು ಪಾಪ ಪ್ರಜ್ಞೆ ಇರುವವನಿಗೆ ಸ್ವಲ್ಪ ಪುಣ್ಯಮಾಡಿ ಪಾಪವನ್ನು ಕಳೆದುಕೊಳ್ಳಬೇಕು ಎಂಬ ಭಾವನೆಯಿರುತ್ತದೆ. ಇದೇ ಪ್ರಾಯಶ್ಚಿತ್ತ. ಇಲ್ಲವೆ, ನನಗೆ ಇಂತಿಷ್ಟು ಲಾಭವಾದರೆ ಇಂತಿಷ್ಟು ದಾನಮಾಡುತ್ತೇನೆ ಎಂದು ಹೊತ್ತ ಹರಕೆಯನ್ನು ತೀರಿಸುವಸಲುವಾಗಿ ದಾನ ಮಾಡುತ್ತಾನೆ. ಒಟ್ಟಿನಲ್ಲಿ ಎಲ್ಲವೂ ಲೆಕ್ಕಾಚಾರದ ವ್ಯಾಪಾರ. ಈ ರೀತಿಯಾಗಿ ಪಾಪಿಯ ಹಣ ಪ್ರಾಯಶ್ಚಿತ್ತಕ್ಕೆ ಮಾತ್ರ ಸಲ್ಲುತ್ತದೆ. ಇದಕ್ಕೆ ಒಂದು ಉದಾಹರಣೆ ಕೊಡುತ್ತಾರೆ ಬಸವಣ್ಣನವರು. ನಾಯಿಯ ಹಾಲು ನಾಯಿ ಮರಿ ಕುಡಿಯುತ್ತದೆಯೇ ಹೊರತು ಅದನ್ನು ಯಾರೂ ಪಂಚಾಮೃತಕ್ಕೆ ಬಳಸುವುದಿಲ್ಲ. ಅದೇ ರೀತಿಯಾಗಿ ಪಾಪಿಯ ಹಣ ಸತ್ಪಾತ್ರರಿಗೆ ಸಲ್ಲುವುದಿಲ್ಲ. ಇಲ್ಲಿ ಲೋಕದ ರೀತಿಯನ್ನು ಒಂದು ಉದಾಹರಣೆಯಾಗಿ ಬಳಸಿದ್ದಾರೆ ಅಷ್ಟೆ. ಅದನ್ನು ಹೆಚ್ಚು ವಿಶ್ಲೇಷಣೆಗೆ ಒಳಪಡಿಸುವ ಅಗತ್ಯವಿಲ್ಲ. ನಾಯಿ ಯನ್ನು ಅವರು ಕೀಳೆಂದು ಹೇಳುತ್ತಿದ್ದಾರೆಂದು ಅರ್ಥವಲ್ಲ.
ಸತ್ಪಾತ್ರರು ಎಂದರೆ ಯಾರು? ಲೋಕದ ಜಂಜಾಟಗಳಿಂದ ಬಿಡಿಸಿಕೊಂಡವರು, ಮತ ಧರ್ಮ ಜಾತಿಗಳನ್ನು ಮೀರಿ ನಿಂತವರು, ಮೇಲು ಕೀಳುಗಳೆಂಬ ಭೇದಭಾವವನ್ನು ಎಣಿಸದವರು, ಪರಮದಯಾಮಯರು, ಸಕಲ ಜೀವಾತ್ಮರಿಗೆ ಲೇಸನೆ ಬಯಸುವವರು, ನುಡಿದಂತೆ ನಡೆವವರು, ಎಲ್ಲದರಲ್ಲಿಯೂ ಪರಮತತ್ವವನ್ನು ಕಾಣುವವರು, “ನಾನು” ಎಂಬುದನ್ನು ಕಳೆದುಕೊಂಡು ಅರಿವನ್ನು ಪಡೆದವರು. ಇಂತಹವರಿಗೆ ಯಾರ ಹಂಗೂ ಇರುವುದಿಲ್ಲ. ಅವರು ಯಾರ ಹಣವನ್ನೂ ಬಯಸುವುದಿಲ್ಲ. ಅವರು ಮಾಡುವ ಕೆಲಸಕ್ಕೆ ಬೇಕಾದದ್ದು ತಾನಾಗಿಯೇ ಹರಿದು ಬರುತ್ತದೆ. “ನೀನೊಲಿದರೆ ಸಕಲ ಪಡಿಪದಾರ್ಥಗಳು ಇದಿರಲಿಪ್ಪವು” ಎಂಬುದು ಅವರ ಅಖಂಡ ನಂಬಿಕೆ.
ಮೇಲೆ ಹೇಳಿದಂತಹ ಸತ್ಪಾತ್ರರಿಗೆ ಹಣ ಕೊಟ್ಟಾಗ ಅದರ ಸದ್ವಿನಿಯೋಗವಾಗುತ್ತದೆ. ಹಣವನ್ನು ತೃಣವಾಗಿ ಕಾಣುವವರಿಗೆ ಹಣ ಕೊಡುವುದು ಹೇಗೆ? “ಕೊಡುವವನು ಕೊಂಬುವವನು ಕೂಡಲ ಸಂಗಮದೇವನು” ಎಂಬ ಭಾವದಿಂದ ಕೊಟ್ಟಾಗ ಈ ಸತ್ಪಾತ್ರರು ಸಹ ಅದೇ ಭಾವದಿಂದ ಸ್ವೀಕರಿಸುತ್ತಾರೆ. ಹಾಗಲ್ಲದೆ ಅದನ್ನು ತನ್ನ ಸ್ವಾರ್ಥಕ್ಕಾಗಿ, ಕೀರ್ತಿಗಾಗಿ, ಹರಕೆ ತೀರಿಸುವುದಕ್ಕಾಗಿ, ಪುಣ್ಯಗಳಿಸುವಸಲುವಾಗಿ ದಾನಮಾಡಲು ಗಳಿಸುವ ಹಣ ವ್ಯರ್ಥವಾಗುತ್ತದೆ, ಈ ಯಾವುದಕ್ಕೂ ಯಾವ ಬೆಲೆಯೂ ಇಲ್ಲ. ಯಾರೇ ಆಗಲಿ ತಾವು, ಸತ್ಯ ಶುದ್ಧ ಕಾಯಕದಿಂದ ಗಳಿಸಿದ ಹಣವನ್ನು ಇಂತಹ ಶರಣರಿಗೆ ಕೊಡದೆ ಇದ್ದರೆ ಆ ಅರ್ಥವು ವ್ಯರ್ಥವೆಂದು ಹೇಳುತ್ತಾರೆ ಬಸವಣ್ಣನವರು.

Saturday, November 13, 2010
Vachana 13 Bettada Melondu Maneya Maadi - Equanimity
ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾಜುನದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
TRANSLITERATION
beTTada (Mountain) mElE (On) oMdu (one) maneya (house) mADi (built), mRugaMgaLige (wild animals) aMjidoDe (afraid of) eMtayya(how)?
Samudrada(Sea) taDiyalli (shore) oMdu maneya mADi, noreteregaLige (waves) aMjidoDe (afraid of) eMtayya(how)?
saMteyoLage (In the Market) oMdu maneya mADi, Sabdakke(noise) nAcidoDe (shy of) eMtayya (how)?
cennamallikAjunadEva (Lord) kELayya(listen)
lOkadoLage(In the world) huTTida(born) baLika(after), stuti (praise)-niMdegaLu(blames) baMdare(if arrived)
manadalli (in the mind) kOpava(anger) tALade(not subject to) samAdhAni (calm and collected) yAgirabEku(must be)
beTTada mEloMdu maneya mADi, mRugaMgaLigaMjidoDeMtayya?
samudrada taDiyaloMdu maneya mADi, noreteregaLigaMjidoDeMtayya?
saMteyoLagoMdu maneya mADi, Sabdakke nAcidoDeMtayya?
cennamallikAjunadEva kELayya
lOkadoLage huTTida baLika, stuti-niMdegaLu baMdare
manadalli kOpava tALade samAdhAniyAgirabEku
CLICK TO HEAR IT
http://www.youtube.com/watch?v=3LnAau-tr08
A MUSICAL RENDERING:
http://www.kannadaaudio.com/Songs/Devotional/home/BasaveshwaraVachanagalu-SubhadraMansoor.php
select play all
TRANSLATION
After building a house on the mountain, how can you be afraid of wild animals around it?
After building a house on the sea shore, how can you be afraid of lofty waves?
After building a house in the shanty town (flea market), how can you be concerned with the noise?
Oh! Lord Chenna Mallikarjuna, listen!
While born and living in this world, if praise and blames (criticism) come along, you have to face them without getting angry and maintaining the calmness of mind.
COMMENTARY
This is one of the popular vachanas by Akka Mahadevi. Shiva sharane (feminine form for sharana) Mahadevi is affectionately and respectfully called Akka (elder sister), just as Shiva sharana Basava is called Basavanna (aNNa, Elder brother). Akka Mahadevi was probably the first sharane to gain access to Anubhava Mantapa, a platform for sharing experiences and discussing philosophy and practices organized by Basavanna and presided by prominent sharanas such as Allama prabhu. Akka uses the ‘Chenna Mallikarjuna’ (another name of the Lord Shiva) as signature in her vachanas.
In this vachana Akka portrays her realization of how one must stay equanimous while handling life’s situations. She advises us not to lose our temper, become angry or annoyed at world’s disapproval or adomnition, and not to become proud at world's approval or admiraition. She advocates that the admirations and admonitions coming our way should not disturb our balance and calmness of mind. She provides three human situations as examples.
Once we build a house on the mountain, we should be ready to live with the wild animals that might be roaming around the house. After all, we have built our house in their natural habitat. Roaming around their habitat, when and where they like is their nature. We should have considered this aspect before building the house. Once the house is built, the only right choice is to develop a mindset of cooperative living rather than perturbed by the presence of the wild animals. Along the same lines, it is only natural that waves hit a house built on the sea shore. We should be prepared for high tides and tsunami! Similarly, we should be prepared for the noise of the market, once we build a house in the midst a market.
My mother once told me “ once we have a dog in the house, we should be ready to be bitten by it - Naayi Kattidamele, adarinda kacchisikolluvudakku siddavagirabeku”. I must have been complaining about something! I wonder if she got the idea from this vachana!
The natural tendency of the world we live in is to throw admiration and admonition at us. The admiration should not make us unnecessarily proud; the admonition should not make us unnecessarily depressed. Neither of these should make us lose our balance. We should be equanimous. Akka is praying the Lord Chenna Mallikarjuna to give us the strength to achieve such equanimity.
How can we achieve such equanimity under the pressures of success and failure, happiness and sorrow? According to philosopher J. Krishnamoorthy, the fundamental reason behind why these situations tend to throw us out of balance is the image of ourselves and others, we have created in our minds. These perceived images are due to past actions, successes and failures, status in life, our position in society, etc. We will be happy when our image is recognized by others and we will be sad when it is perturbed by others. In general, life is a competition between these images. Note that these images are formed by past actions and may not be pertinent to today. If we can only remove the “I” that contributes to these images, we will be a long way towards achieving the equanimity!
Let us ‘plan’ before we ‘build’! Once built, let us strive to be equanimous under successes and failures!
FOR THOSE OF YOU WHO CAN READ KANNADA
ಲೋಕದ ಜನರು ಬದುಕಿನಲ್ಲಿ ನಿವಾರಿಸಲಾಗದೆ ಇರುವುದರ ಬಗ್ಗೆ ದೂರುವುದನ್ನು, ಸಂಕಟಪಡುವುದನ್ನು ಕಂಡು ಹೀಗೆ ತಿಳಿಯ ಹೇಳುತ್ತಾಳೆ ಅಕ್ಕ ಮಹಾದೇವಿ. ಬೆಟ್ಟದ ಮೇಲೆ ಮನೆಮಾಡಿಯಾಗಿದೆ. ಅದರಲ್ಲಿ ವಾಸಮಾಡುತ್ತಿರುವಾಗ, ಸುತ್ತಲಿನ ಕಾಡಿನ ಪ್ರಾಣಿಗಳು ಅಲ್ಲಿಗೆ ಬರುವುದು ಸಹಜ. ತಮ್ಮ ಮನ ಬಂದೆಡೆ ತಿರುಗಾಡುವುದು ಅವುಗಳ ಸ್ವಭಾವ. ಅವುಗಳಿಗೆ ಅಂಜಿದಡೆ ಹೇಗೆ? ಅವುಗಳಿರುವೆಡೆ ನಾವು ವಾಸಿಸಬೇಕಾಗಿರುವುದರಿಂದ ಅವುಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಹಜವಾದುದನ್ನು ನಾವು ನಿವಾರಿಸಲು ಸಾಧ್ಯವೇ? ಅದನ್ನು ಮೊದಲೇ ನಿರೀಕ್ಷಿಸಿ ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು. ಅದೇ ರೀತಿ ಸಮುದ್ರದ ತಡಿಯಲ್ಲಿ ಮನೆ ಮಾಡಿದಾಗ ನೊರೆತುಂಬಿದ ಅಲೆಗಳು ಬಂದು ಅಪ್ಪಳಿಸುತ್ತವೆ. ಅದು ಕೂಡ ಸಹಜವೆ. ಅದು ಪ್ರಕೃತಿಯ ನಿಯಮ. ಅದನ್ನು ನಾವು ನಮಗೆ ಬೇಕಾದಂತೆ ಪರಿವರ್ತಿಸಲು ಸಾಧ್ಯವಿಲ್ಲ. ಸಂತೆಯಲ್ಲಿ ಮನೆ ಮಾಡಿದ ಮೇಲೆ ಅಲ್ಲಿ ಉಂಟಾಗುವ ಶಬ್ದಕ್ಕೆ ನಾಚಿಕೊಂಡರೆ ಹೇಗೆ? ನೂರಾರು ಮಂದಿ ನೆರೆಯುವ ಸಂತೆಯಲ್ಲಿ ನಿಶ್ಶಬ್ದತೆ ನಿರೀಕ್ಷಿಸಬಹುದೆ? ಅಲ್ಲಿ ಗದ್ದಲ ಉಂಟಾಗುವುದು ಸಹಜ. ಅದೇ ರೀತಿಯಾಗಿ ಸಂಸಾರದಲ್ಲಿ ಹುಟ್ಟಿದ ಬಳಿಕ ಜನರು ನಮ್ಮನ್ನು ಸ್ತುತಿಸುತ್ತಾರೆ ಹಾಗೂ ನಿಂದಿಸುತ್ತಾರೆ. ಇದು ಲೋಕದ ಸಹಜ ವರ್ತನೆ. ಜನರ ನಿಂದನೆಯನ್ನು ಕೇಳಿ ಕೋಪ ಮಾಡಿಕೊಂಡರೆ ನಮ್ಮ ಮನಸ್ಸಿನ ನೆಮ್ಮದಿ ಕೆಡುತ್ತದೆ. ಅದರಿಂದ ನಷ್ಟವಾಗುವುದು ನಮಗೇ ಹೊರತು ಜನರಿಗಲ್ಲ. ಅದನ್ನು ಅರಿತುಕೊಂಡು ನಮಗಾಗುವ ನಷ್ಟವನ್ನು ತಡೆಯಲು ಜನರ ಸ್ತುತಿನಿಂದೆಗಳನ್ನು ಕಡೆಗಣಿಸಿ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ಎನ್ನುತ್ತಾಳೆ ಅಕ್ಕ.
ಇಲ್ಲಿ "ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿವಾಗಿರಬೇಕು” ಎಂಬುದನ್ನು ಗಮನಿಸಬೇಕು. ನಿಂದೆಯನ್ನು ಕೇಳಿ ಕೋಪ ತಾಳುವುದು ಸಹಜ. ಆದರೆ ಸ್ತುತಿಯನ್ನು ಕೇಳಿದಾಗ ಕೋಪ ಉಂಟಾಗುವುದಿಲ್ಲ. ಮನಸ್ಸು ಬೀಗುತ್ತದೆ. ಇಲ್ಲಿ ಅಕ್ಕ ಎರಡೂ ಸಂದರ್ಭದಲ್ಲಿ ಉದ್ವೇಗಗೊಳ್ಳದೆ ಸಮಾಧಾನಿಯಾಗಿರಬೇಕೆನ್ನುವ ಮೂಲಕ ಸ್ಥಿತಪ್ರಜ್ಞತೆಯನ್ನು ಕಾಪಾಡಿಕೊಳ್ಳಬೇಕೆಂದು ಹೇಳುತ್ತಿದ್ದಾಳೆ.
ಆ ಸ್ಥಿತಪ್ರಜ್ಞತೆಯನ್ನು ತಂದುಕೊಳ್ಳುವುದು ಹೇಗೆ? ಮನಸ್ಸು ಏಕೆ ಸುಖಿ ಅಥವಾ ದುಃಖಿಯಾಗುತ್ತದೆ ಎಂಬುದನ್ನು ಅರಿತುಕೊಂಡರೆ ಅದು ಸಾಧ್ಯವಾಗಬಹುದು. ನಮ್ಮೆಲ್ಲರಲ್ಲಿಯೂ ನಾನು ಎಂಬುದು ಬಹಳ ಬಲವಾಗಿ ಬೇರೂರಿದೆ. ಈ “ನಾನು’ ವಿಗೆ ಧಕ್ಕೆಯಾದಾಗ ನೋವು, ದುಃಖ, ಅವಮಾನ, ನಿರಾಶೆ ಉಂಟಾಗುತ್ತದೆ. ಅದರ ಇಷ್ಟದಂತೆ ಸಂದರ್ಭಗಳು ಕೂಡಿ ಬಂದಾಗ, “ನಾನು” ಅನ್ನು ಹೊಗಳಿದಾಗ, ಸುಖ, ಸಂತೋಷ, ಅಭಿಮಾನ, ಅಹಂಕಾರ ಉಂಟಾಗುತ್ತವೆ.ಅಂದರೆ ಎಲ್ಲವೂ ಈ “ನಾನು” ವಿನ ಮೇಲೆಯೇ ಅವಲಂಬಿಸಿದೆ. ಈ “ನಾನು” ಎಂಬುದು ಏನು ಎಂಬುದನ್ನು ವಿಶ್ವ ಗುರು ಎಂದೇ ವಿಖ್ಯಾತರಾದ ಜಿಡ್ಡು ಕೃಷ್ಣಮೂರ್ತಿಯವರು ವಿವರಿಸಿ ಹೇಳುತ್ತಾರೆ: ನನ್ನ ಬಗ್ಗೆ ನನ್ನ ಮನಸ್ಸಿನಲ್ಲಿ ಒಂದು ರೂಪವಿರುತ್ತದೆ, ಇತರರ ಬಗ್ಗೆಯೂ ನನ್ನ ಮನಸ್ಸಿನಲ್ಲಿ ಒಂದು ರೂಪವಿರುತ್ತದೆ. ಮತ್ತು ನಾವಿಬ್ಬರೂ ಈ ರೂಪಗಳೊಂದಿಗೆ ಸ್ಪಂದಿಸುತ್ತೇವೆ. ಅಂದರೆ ಪ್ರತಿಯೊಬ್ಬನೂ ತಾನು ತನ್ನ ಮನಸ್ಸಿನಲ್ಲಿ ಮಾಡಿಕೊಂಡ ರೂಪದೊಂದಿಗೆ ತನ್ನ ರೂಪದಮೂಲಕ ಪ್ರತಿ ಸ್ಪಂದಿಸುತ್ತಾನೆ. ಇಲ್ಲಿ ಗಮನಿಸಬೇಕಾದದು ಎಂದರೆ ಯವುದೂ ವಾಸ್ತವಲ್ಲ. ನಮ್ಮೆಲ್ಲರ ರೂಪಗಳು ಸಮಾಜ, ಕುಟುಂಬ ಮತ್ತು ನಾವು ಸ್ವತಃ ಸೃಷ್ಟಿಸಿಕೊಂಡ ರೂಪಗಳು. ಉದಾಹರಣೆಗೆ: ನಾನು ಇಂತಿಂಥವರ ಸಂತಾನ, ಇಂತಿಂಥ ಪದವಿಹೊಂದಿದವನು, ಇಂತಿಂಥ ಕ್ಷೇತ್ರದಲ್ಲಿ ಇಷ್ಟಿಷ್ಟು ಅನುಭವ ಹೊಂದಿರುವವನು ಇತ್ಯಾದಿ ಇತ್ಯಾದಿ. ಇದೇ ರೀತಿ ಪ್ರತಿಯೊಬ್ಬರಿಗೂ ಅವರವರದೇ ರೂಪವಿರುತ್ತದೆ. ಮತ್ತು ಪ್ರತಿಯೊಬ್ಬರೂ ಆಯಾ ರೂಪಗಳಿಂದ ಆಯಾ ರೂಪಗಳೊಂದಿಗೆ ಪ್ರತಿಸ್ಪಂದಿಸುತ್ತಾರೆ. ಅಂದರೆ ನಮ್ಮೆಲ್ಲರ ಪ್ರತಿಸ್ಪಂದನೆಯಲ್ಲಿ ಎಲ್ಲಿಯೂ ವಾಸ್ತವತೆ ಮತ್ತು ವರ್ತಮಾನವಿರುವುದಿಲ್ಲ. ಎಲ್ಲವೂ ಒಂದು ರೀತಿಯ ಕಲ್ಪನೆ ಮತ್ತು ಇತಿಹಾಸವಾಗಿರುತ್ತದೆ. ಅಂದರೆ ಒಬ್ಬ ವ್ಯಕ್ತಿಯ ಬಗ್ಗೆ ನಮ್ಮಲ್ಲಿ ಉಂಟಾದ ಚಿತ್ರ ನಾವು ಆತನ ಬಗ್ಗೆಇತರರು ಹೇಳಿದಂತೆ, ನಮಗೆ ಅನುಭವವಾದಂತೆ ಅಥವಾ ನಮ್ಮ ಇಷ್ಟದಂತೆ ಮಾಡಿಕೊಂಡದ್ದಾಗಿರುವುದರಿಂದ ಅದು ವಾಸ್ತವವಾಗಿರುವುದಿಲ್ಲ ಮತ್ತು ಆಗಲೇ ಮಾಡಿಕೊಂಡದ್ದರಿಂದ ಅದು ವರ್ತಮಾನವಲ್ಲ. ಅದು ಆಗಲೇ ಇತಿಹಾಸವಾಗಿರುತ್ತದೆ. ವರ್ತಮಾನದಲ್ಲಿ ಆ ವ್ಯಕ್ತಿ ಬೇರೆಯೇ ಆಗಿರಬಹುದು. ಆದರೆ ನಾವು ಹಿಂದಿನ ನೆನಪಿನನೆಲೆಯಿಂದಲೇ ಪ್ರತಿಸ್ಪಂದಿಸುತ್ತೇವೆ. ಅಂದರೆ ಈ “ನಾನು” ಎಂಬುದು ಎಲ್ಲವೂ ಒಂದು ಚಿತ್ರ ಒಂದು ಇಮೇಜ್ ಅಷ್ಟೆ. ಇದನ್ನು ಹೃದ್ಗತ ಮಾಡಿಕೊಂಡರೆ ಈ ಸಂಸಾರದಲ್ಲಿ ಸಮಾಧಾನಿಯಾಗಿರಬಹುದು.

Friday, November 5, 2010
Vachana 12 Samsaaravembudondu - On Life and Wealth
ಸಂಸಾರವೆಂಬುದು ಒಂದು ಗಾಳಿಯ ಸೊಡರು!
ಸಿರಿಯೆಂಬುದು ಒಂದು ಸಂತೆಯ ಮಂದಿ ಕಂಡಯ್ಯ!
ಇದ ನೆಚ್ಚಿ ಕೆಡಬೇಡ;
ಸಿರಿಯೆಂಬುದ ಮರೆದು ಪೂಜಿಸು
ನಮ್ಮ ಕೂಡಲಸಂಗಮದೇವನ.
TRANSLITERATION
saMsAraveMbudu oMdu gALiya soDaru!
siriyeMbudu oMdu saMteya maMdi kaMDayya!
ida necci keDabEDa;
siriyeMbuda maredu pUjisu
namma kUDalasaMgamadEvana.
CLICK TO HEAR IT:
http://www.youtube.com/watch?v=YLTYH2DSaRk
TRANSLATION
saMsAraveMbudu(Life is) oMdu (a) gALiya(wind blown) soDaru (Lamp)!
siriyeMbudu(Wealth is) oMdu(a) saMteya(FleeMarket) maMdi(people) kaMDayya (you see)!
ida(these) necci(belief) keDabEDa(do not ruin yourself);
siriyeMbuda(wealth) maredu(forget) pUjisu(worship)
namma (our) kUDalasaMgamadEvana (Lord Kudakla Sangama Deva).
Life is an open-flamed lamp, exposed to winds!
Wealth is people in a flea market!
Do not ruin yourself by believing in this!
Ignore (forget) the wealth and worship
our Lord Kudala Sangama Deva!
COMMENTARY
Basavanna is comparing our life to an open-flamed lamp (candle) exposed to winds. Such a lamp hardly stays steady. It sways in the direction of the wind. So is life! When we encounter problems and stresses we are unhappy. When things go our way, we are happy. The happiness and sorrow are phases of life and neither is permanent.
Wealth is compared to people in a flea market. They come and go as they wish! So is wealth! It is not permanent!
Basavanna suggests not being carried away by the impermanent aspects of life and wealth, but gain self awareness and permanent happiness through worshipping the Lord Kudala Sangama Deva!
Is Basavanna advocating running away from life? Is he saying that acquiring wealth is a sin? Definitely, the answer to both questions is a ‘no’. Basavanna advocated passionate performance of our chosen profession (Kaayakave Kailaasa – work is heaven) and community service (Daasoha). He was the finance minister of King Bijjala. He said that the body is the temple and we must take care of the body. Wealth is necessary to maintain the body. The message of this vachana is that while we strive to do the best in this life, we should keep in mind the temporariness of life’s events and not be swayed by them, by developing God mindedness.
Worshipping the Lord in the context of this vachana is developing the ‘awareness’ on the temporariness of life and events. Consider the case of a sky diver. Certainly, he will be ‘aware’ of the risks involved and will have been trained to mitigate these risks. As such, this activity becomes an enjoyable sport for him. But, to others who are not ‘aware’ of his training and practice, the event brings worries and anxiety! Becoming aware of risks and training with a teacher to mitigate them for sports such as sky diving is well within our reach. But, becoming aware of the temporariness of life and wealth while we are completely immersed in them is not easy. Having a teacher helps. But, even a great teacher cannot bring awareness to us unless we are ready to receive his teachings. We must be ready to develop a mental framework to gain the awareness needed. Such mental framework development is the ‘worship of the Lord’, Basavanna is referring to in this vachana. Let us worship the Lord to:
Make us ignore the things we cannot control!
Give us strength to change the things we can control!
Grant us intelligence to distinguish between the two! and
Move us towards Him with self awareness!
Let us enjoy this beautiful life! Let us not be swayed by its ups and downs!
FOR THOSE OF YOU WHO CAN READ KANNADA:
ಈ ಸಂಸಾರವೆಂಬುದು ಗಾಳಿಯಲ್ಲಿಟ್ಟ ದೀಪದಂತೆ. ಗಾಳಿಯಲ್ಲಿಟ್ಟ ದೀಪವು ಹೇಗೆ ತಾನೆ ಒಂದೇ ರೀತಿಯಾಗಿ ಉರಿಯಲು ಸಾಧ್ಯ? ಅದುಗಾಳಿಗೆ ಹೊಯ್ದಾಡುತ್ತಲೇ ಇರುತ್ತದೆ. ಆರಿಯೂ ಹೋಗುತ್ತದೆ. ಅದೇ ರೀತಿಯಾಗಿ ಸಂಸಾರದಲ್ಲಿ ಕಷ್ಟ ಕೋಟಲೆಗಳು ಉಂಟಾದಾಗ ದುಃಖ ಉಂಟಾಗುತ್ತದೆ. ಬದುಕು ಹೊಯ್ದಾಡುತ್ತದೆ. ಅಲ್ಲಿ ಸುಖ ದುಃಖಗಳು ಸ್ಥಿರವಲ್ಲ. ಬದುಕೂ ಶಾಶ್ವತವಲ್ಲ. ಶಾಶ್ವತವಲ್ಲದ ಈ ಬದುಕಿನಲ್ಲಿ ಸಿರಿತನವು ಸಂತೆಯಲ್ಲಿ ನೆರೆವ ಮಂದಿಯಂತೆ. ಸಂತೆ ನಡೆವಾಗ ಕೆಲವು ಗಂಟೆಗಳ ಕಾಲ ಜನಜಂಗುಳಿ ಇರುತ್ತದೆ. ಆಮೇಲೆ ಎಲ್ಲರೂ ಹೊರಟು ಹೋಗುತ್ತಾರೆ. ಅದೇ ರೀತಿಯಾಗಿ ಸಿರಿತನವೂ ಕೂಡ ಬಂದು ಹೋಗುವಂತಹದು. ಶಾಶ್ವತವಾಗಿ ಇರುವಂತಹುದಲ್ಲ. ಆದ್ದರಿಂದ ಸಿರಿತನವನ್ನು ಮರೆತು ಕೂಡಲಸಂಗಮನನ್ನು ಪೂಜಿಸು ಎನ್ನುತ್ತಾರೆ ಬಸವಣ್ಣನವರು. ಶಾಶ್ವತವಲ್ಲದ ಸಂಸಾರವನ್ನು ಪೂರ್ತಿಯಾಗಿ ನಂಬಿ ಸುಖವನ್ನು ಪಡೆಯುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಬದುಕು ಮತ್ತು ಸಿರಿತನದ ಅಸ್ಥಿರತೆಯನ್ನು ಮನವರಿಕೆ ಮಾಡಿಕೊಡಲು ಬಸವಣ್ಣನವರು ಗಾಳಿಗೊಡ್ಡಿದ ದೀಪ ಮತ್ತು ಸಂತೆಯ ಮಂದಿಯ ಉದಾಹರಣೆಯನ್ನು ಕೊಟ್ಟಿದ್ದಾರೆ. ಹಾಗಾದರೆ ಬದುಕನ್ನೇ ಬಿಟ್ಟು ಓಡಿಹೋಗಬೇಕೆ? ಹಣವನ್ನು ಗಳಿಸಲೇಬಾರದೆ? ಶ್ರೀಮಂತಿಕೆ ಪಾಪವೇ?ಖಂಡಿತವಾಗಿಯೂ ಅಲ್ಲ. ಬಸವಣ್ಣನವರು ಸ್ವತಃ ಮಂತ್ರಿಯಾಗಿದ್ದರು. ದೇಹವೇ ದೇಗುಲ ಎಂದು ಅವರೇ ಹೇಳಿದ್ದಾರೆ. ನಾವು ನಮ್ಮ ದೇಹವನ್ನು ದೇಗುಲವನ್ನಾಗಿ ಮಾಡಬೇಕು. ದೇಹವನ್ನು ಪೋಷಿಸಲು ಹಣದ ಅಗತ್ಯವಿದೆ. ಅದನ್ನು ಗಳಿಸಬೇಕು. ಮತ್ತು ಗಳಿಸಿದುದನ್ನು ದೇಹವನ್ನು ದೇಗುಲ ಮಾಡಿಕೊಂಡಂತಹವರಿಗಾಗಿ ವಿನಿಯೋಗಿಸಬೇಕು. ಈ ವಚನದಲ್ಲಿ ಅವರು ಹೇಳುತ್ತಿರುವುದೇನೆಂದರೆ, ಸಂಸಾರ ಮತ್ತು ಸಿರಿತನ ಎರಡೂ ಶಾಶ್ವತವಲ್ಲ. ಅವನ್ನೇ ನೆಚ್ಚಿಕೊಂಡಿದ್ದರೆ ಸುಖವಿಲ್ಲ. ನಾವು ಇದನ್ನು ಸದಾ ನೋಡುತ್ತೇವೆ. ಉದಾಹರಣೆಗೆ ಜಾಗತಿಕ ಆರ್ಥಿಕ ಹಿನ್ನಡೆ. “ ಓ! ಆರ್ಥಿಕ ಮುನ್ನಡೆಯಾಯಿತು, ಬಯಸಿದ ಸಿರಿತನ ಬಂದೇ ಬಿಟ್ಟಿತು, ಇನ್ನು ನಾವು ಬೇಕಾದುದನ್ನು ಪಡೆದು ಸುಖವಾಗಿರಬಹುದು” ಎಂದುಕೊಂಡ ಜನರು ಜಾಗತಿಕ ಆರ್ಥಿಕ ಹಿನ್ನಡೆಯಿಂದಾಗಿ ಒಮ್ಮಿಲೇ ಕುಸಿಯುತ್ತಾರೆ. ಅವರ ಮೇಲೆ ಆಕಾಶವೇ ಕಳಚಿಬೀಳುತ್ತದೆ. ಯುದ್ಧ, ಬಡತನ, ಭೂಕಂಪ, ಸುನಾಮಿ ಇತ್ಯಾದಿಗಳು ಅನೇಕರನ್ನು ಅಳಸಿ ಹಾಕುತ್ತವೆ. ಇವೆಲ್ಲವು ನಮಗೆ ಸಂಸಾರವೆಂಬುದು ಗಾಳಿಯ ಸೊಡರು, ಸಿರಿತನೆವೆಂಬುದು ಸಂತೆಯ ಮಂದಿ ಎಂಬುದನ್ನು ಮನದಟ್ಟು ಮಾಡಿಕೊಡುತ್ತವೆ. ಅವುಗಳ ನಶ್ವರತೆಯನ್ನು ಅರ್ಥಮಾಡಿಕೊಳ್ಳ ಬೇಕಾದವರು ನಾವು. ನಮಗೆ ನಿಜವಾದ ಮತ್ತು ಶಾಶ್ವತವಾದ ಸುಖ ಬೇಕಾದರೆ ಕೂಡಲ ಸಂಗಮನನ್ನು ಪೂಜಿಸಬೇಕು, ಎಂದು ಹೇಳುತ್ತಾರೆ ಬಸವಣ್ಣನವರು.
ಕೂಡಲ ಸಂಗಮನನ್ನು ಪೂಜಿಸುವುದು ಎಂದರೇನು? ಸುಲಭವಾಗಿ ನಮಗೆ ಅರ್ಥವಾಗುವಂತೆ ಹೇಳಬೇಕೆಂದರೆ ಅದನ್ನು “ಅರಿವು” ಎನ್ನಬಹುದು. ಸಂಸಾರ ಮತ್ತು ಸಿರಿತನದ ನಶ್ವರತೆಯನ್ನು ಅರ್ಥಮಾಡಿಕೊಳ್ಳುವುದು. ಆಗ ಅವುಗಳಿಂದುಂಟಾಗುವ ದುಃಖ ನಮಗೆ ತಟ್ಟುವುದಿಲ್ಲ. ಉದಾಹರಣೆಗೆ, ಜನರು ಅನೇಕ ಸಾಹಸಗಳನ್ನು ಕೈಗೊಳ್ಳುತ್ತಾರೆ. ಆಳವಾದ ಸಮುದ್ರದ ತಳದಲ್ಲಿ ಅಪಾಯಕಾರಿ ದೈತ್ಯ ಮೀನುಗಳೊಂದಿಗೆ ಈಜುವುದು, ಅಥವಾ ಎತ್ತರದ ಬೆಟ್ಟದ ಕೋಡು ಬಂಡೆಯಿಂದ ಕೆಳಗೆ ಹಾರುವುದು ಇತ್ಯಾದಿ. ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ಅವುಗಳಿಂದ ಭಯವಿಲ್ಲ. ಅವರು ತಾವು ಹೊಗುತ್ತಿರುವ ಕ್ಷೇತ್ರದ ಆಳ, ಹರಹು, ಅದರಿಂದ ಆಗುವ ಅಪಾಯ, ಅವುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಬಗೆ, ಆ ಕ್ರೀಡೆಯಲ್ಲಿ ಉಂಟಾಗುವ ಸುಖ, ಎಲ್ಲವೂ ಅವರು ತಿಳಿದು ಕೊಂಡಿರುತ್ತಾರೆ. ಅಂದರೆ ಅವರಿಗೆ ಆ ಎಲ್ಲದರ ಒಂದು ರೀತಿಯ ಅರಿವು ಇರುತ್ತದೆ. ಹಾಗಾಗಿ ಆ ಅಪಾಯಕಾರಿ ಸಾಹಸವೂ ಅವರಿಗೆ ಒಂದು ಕ್ರೀಡೆಯಾಗುತ್ತದೆ. ಆದರೆ ಅದರಿಂದ ದೂರವಿರುವಂತಹ ನಾವು ಅವುಗಳಿಗೆ ಹೆದರಿ ಹೌಹಾರುತ್ತೇವೆ. ಇದೇ ಮಾತು ಸಂಸಾರಕ್ಕೂ ಅನ್ವಯಿಸುತ್ತದೆ. ಸಂಸಾರ ಮತ್ತು ಸಿರಿತನದಿಂದಾಗುವ ಸುಖ ದುಃಖಗಳನ್ನು, ಅವುಗಳ ನಶ್ವರತೆಯನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡರೆ ಅದೂ ಒಂದು ಕ್ರೀಡೆಯಾಗುತ್ತದೆ. ಅದರಿಂದುಂಟಾಗುವ ಕಷ್ಟ ಕೋಟಲೆಗಳು ನಮಗೆ ತಟ್ಟುವುದಿಲ್ಲ. ಆದರೆ ಈ ಉದಾಹರಣೆಯಲ್ಲಿ ಒಂದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೇಲೆ ಹೇಳಿದ ಅರಿವು ಬಹಳ ಸೀಮಿತವಾದದ್ದು, ಸಾಹಸಗಳು ಭೌತಿಕವಾದವುಗಳು. ಪ್ರಯತ್ನಪಟ್ಟರೆ ಅವುಗಳು ನಮ್ಮ ಅನುಭವಕ್ಕೆ ಬರುವಂತಹವು. ಅವುಗಳನ್ನು ನಮ್ಮ ಅನುಭವಕ್ಕೆ ತಂದುಕೊಡುವಂತಹ ತರಬೇತುದಾರರು ಸಿಗುತ್ತಾರೆ. ಆದರೆ ಸಂಸಾರದ ನಶ್ವರತೆಯನ್ನು ಅರಿತುಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಬೇಕಾದ ಅರಿವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಅದನ್ನು ನಮ್ಮ ಅನುಭವಕ್ಕೆ ತಂದುಕೊಡಬಲ್ಲ ತರಬೇತುದಾರರು (ಗುರುಗಳು) ಸಿಗುವುದು ಸುಲಭವಲ್ಲ. ಅಂತಹ ಗುರುಗಳು ಇದ್ದರೂ ಸಹ ನಮ್ಮ ಮನಸ್ಸು ಆ ಅರಿವನ್ನು ಪಡೆಯುವುದಕ್ಕಾಗಿ ಸಿದ್ಧವಾಗಿರುವುದಿಲ್ಲ. ಅದಕ್ಕೆ ಮಾನಸಿಕ ಸಿದ್ಧತೆ ಬೇಕಾಗುತ್ತದೆ. ಮನಸ್ಸು ಸದಾ ಜಾಗೃತವಾಗಿರಬೇಕಾಗುತ್ತದೆ. ಮನಸ್ಸನ್ನು ಸದಾ ಜಾಗೃತವಾಗಿಟ್ಟುಕೊಳ್ಳುವುದೇ ಪೂಜೆ ಎನಿಸುತ್ತದೆ ನನಗೆ.

Subscribe to:
Posts (Atom)