"ಏನು ಬಂದಿರಿ, ಹದುಳವಿದ್ದಿರೆ?" ಎಂದರೆ
ನಿಮ್ಮ ಮೈಸಿರಿ ಹಾರಿಹೋಹುದೇ?
ಕುಳ್ಳಿರೆಂದರೆ ನೆಲ ಕುಳಿಹೋಹುದೇ ?
ಒಡನೆ ನುಡಿದರೆ ಶಿರ-ಹೊಟ್ಟೆ ಒಡೆವುದೆ ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿದ್ದರೆ
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮ ದೇವನು ?
TRANSLITERATION
"Enu baMdiri, haduLaviddire?" eMdare
nimma maisiri hArihOhudE ?
kuLLireMdare nela kuLihOhudE ?
oDane nuDidare Sira-hoTTe oDevude ?
koDalilladiddaroMdu guNavilladiddare
keDahi mUga koyyade mANbane kUDalasaMgama dEvanu ?
CLICK TO HEAR IT:
http://www.youtube.com/watch?v=0fIIFCTuH3w
TRANSLATION
If you greet others at the first sight with "Please come in, How do you do?”
does your physical beauty disappear? (do you turn ugly?)
If you say "Please sit down",
does your floor cave in?
If you are the first one to greet (without waiting for the other to be the first),
does your head or belly burst?
You may not have anything to give. But, if you do not have the grace to greet,
the Lord (Kudala Sangama) will pull you down and chop your nose!
COMMENTARY
This vachana advocates the importance of developing positive environments for all our interactions. This can only be done by taking the initiative to greet the other party, enquiring about their well being, offering them any support needed to make them comfortable. Even though there is not much to offer, or an inclination to yield to the other party during the ensuing interactions, the gracious gesture is a must.
We often tend to ignore other’s presence because of our state of mind at that time, or preoccupation with other tasks, or out of willful negligence. These scenarios are more apt to occur in the multitasking world of today. Reflecting on what might have contributed to similar scenarios in fairly simple lives of twelfth century when this vachana was written; it is easy to see that the ego of the individual is the main contributing factor. Our ego stops us from greeting people properly and respecting every individual as equal. By saying that we should develop the grace to greet, the vachana is advocating the containment of ego and development of respect for all. The last line mentions that the Lord will pull you down and chop the nose. Chopping the nose is considered the harshest punishment on an individual. The Lord being referred to in this line is the Lord within us. He does not physically chop our nose. But, our egotistic behavior will eventually pull us down, punishing us to the level equivalent to chopping the nose.
Very often we see that our friends, colleagues and family members seem bored, distant or even alienated. We often react by mirroring their behavior. It is essential thus, to get people to react more positively to us throughout the day whether in the office, at home or on the street. We can establish a pleasant environment by being first to greet with a smile, enquiring about the well being of the individuals and their families, and making them comfortable by offering a seat, or a drink, etc. if needed. Such welcome clears the air even if one has arrived to discuss an unpleasant matter. This vachana urges us to be the first to take such an initiative. Even if we do not have anything to offer (give), we should develop the grace to greet to start off a positive interpersonal relationship and environment.
It is natural to think “why do I have to set the tone?” We have to take the initiative because most people have already defined their life patterns and are not likely to change them. If we want our interaction with them to be upbeat, we have to create an environment where we can get the reaction we want. We must use positive words and tone, even when we have to give instructions or express dislike for someone’s behavior. Let us remember “we get back what we give out”.
ಶಿವಶರಣರ ಜೀವನ ದೃಷ್ಟಿ ಅದ್ಭುತವಾದದ್ದು. ಅವರು ’ಈ ಜಗತ್ತು ಮಿಥ್ಯ’ ಎಂದು ಹೇಳದೆ “ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು” ಎಂದು ಹೇಳಿರುವರು. ಈ ಸಮಾಜದಲ್ಲಿ ನಾವು ಯೋಗ್ಯರಾಗಿ ಬಾಳಬೇಕು. ಜನರೊಂದಿಗಿನ ಒಳ್ಳೆಯ ಸಂಬಂಧ ಎಲ್ಲರಿಗೂ ನೆಮ್ಮದಿ ಕೊಡುವಂತಹದು. ಆದರೆ ಅಹಮ್ಮಿನ ನಡತೆಯಿಂದ ಎಲ್ಲರ ನೆಮ್ಮದಿಯೂ ಕೆಡುತ್ತದೆ. ಒಳ್ಳೆಯ ಸಂಬಂಧ ಬೆಳೆಸುವಲ್ಲಿ ಕನಿಷ್ಠ ಪಕ್ಷ ಪ್ರೀತಿಯ ಮಾತು ಮುಖ್ಯವಾದದ್ದು. ಅದಕ್ಕೆ ಅಡ್ಡಿಯಾಗಿ ಬರುವುದು ಅಹಂಕಾರ. ಈ ವಚನದಲ್ಲಿ ಬಸವಣ್ಣನವರು ಮನೆಗೆ ಬಂದವರೊಂದಿಗೆ ವರ್ತಿಸುವ ಬಗೆಯನ್ನು ಹೇಳುತ್ತಿದ್ದಾರೆ.
ಮನೆಗೆ ಬಂದವರೊಂದಿಗೆ ಪ್ರೀತಿಯಿಂದ ಮಾತನಾಡದವರನ್ನು ಕುರಿತು, ಅವರು ಹಾಗೆ ಮಾಡಲು, ಸಂಭವಿಸಲಾರದ ಪರಮಾವಧಿಯ (extreme) ಕಾರಣಗಳನ್ನು ತಾವೇ ಕೊಡುತ್ತ “ತಾವು ಕುಶಲವೇ? ಯಾವ ಕೆಲಸದ ನಿಮಿತ್ತ ತಾವು ಬಂದಿರುವಿರಿ? ಎಂದು ವಿಚಾರಿಸಿದರೆ ನಿಮ್ಮ ದೇಹದ ಸಿರಿಗೆ ಕುಂದುಂಟಾಗುವುದೇ? ಕುಳಿತುಕೊಳ್ಳಿರಿ ಎಂದರೆ ನಿಮ್ಮ ಮನೆಯ ನೆಲದಲ್ಲಿ ಕುಳಿಯುಂಟಾಗುವುದೇ? ಬಂದವರನ್ನು ಕಾಯಿಸದೆ ಬಂದಕೂಡಲೆ ಮಾತನಾಡಿಸಿದರೆ ನಿಮ್ಮ ತಲೆ ಹೊಟ್ಟೆಗಳು ಒಡೆದು ಹೋಗುವವೇ?” ಎಂದು ಪ್ರಶ್ನಿಸುತ್ತಾರೆ. ಖಂಡಿತವಾಗಿಯೂ ಮೇಲೆ ಹೇಳಿದಂತೆ ಆಗುವುದಿಲ್ಲ. ಹೀಗೆ ಪ್ರಶ್ನಿಸುವುದರ ಮೂಲಕ, ಇದಾವುದೂ ಆಗುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುತ್ತಾರೆ. ಇದಾವುದನ್ನೂ ಯೋಚಿಸದೆ ನಾವು ಮನೆಗೆ ಬಂದವರನ್ನು ನಿರ್ಲಕ್ಷಿಸುತ್ತೇವೆ. ಅಥವಾ ಬಂದವರಿಗೆ ತಮ್ಮದೇನನ್ನೋ ಕೊಡಬೇಕಾಗುತ್ತದೆ ಎಂಬ ಭಯದಿಂದ, ಇಲ್ಲವೆ ಯಾವುದೋ ಕಾಲ್ಪನಿಕ ಪ್ರತಿಷ್ಠೆಗೆ ಒಳಗಾಗಿ ಪ್ರೀತಿಯ ಮಾತನಾಡುವುದಿಲ್ಲ, ಬಂದವರನ್ನು ಸರಿಯಾಗಿ ವಿಚಾರಿಸಿಕೊಳ್ಳುವುದಿಲ್ಲ. ಇದರಿಂದ ಮನೆಗೆ ಬಂದವರಿಗೆ ಅವಮಾನ ಉಂಟಾಗಿ ಅವರ ನೆಮ್ಮದಿ ಹಾಳಾಗುತ್ತದೆ, ಅದರ ಪರಿಣಾಮವಾಗಿ ದ್ವೇಷ ಅಸೂಯೆಗಳು ಹುಟ್ಟಬಹುದು, ಅವರ ಮನ ನೋಯಬಹುದು. ಇವೆಲ್ಲ ಇನ್ನೂ ಹೆಚ್ಚಿನ ನಕಾರಾತ್ಮಕವಾದ ಭಾವನೆಗಳಿಗೆಡೆಮಾಡಿಕೊಟ್ಟು ಜೀವನವನ್ನು ನರಕಮಯವಾಗಬಹುದು. ಈ ಎಲ್ಲದರ ಕಾರಣ ವ್ಯಕ್ತಿಯ ಒಣ ಪ್ರತಿಷ್ಠೆ ಮತ್ತು ಅಹಂಕಾರ. ಇನ್ನೊಬ್ಬರಿಗೆ ಕೈಯೆತ್ತಿ ಕೊಡುವ ಸದ್ಬುದ್ಧಿಯಿಲ್ಲದಿದ್ದರೂ ಪ್ರೀತಿಯಿಂದ ಮಾತಾಡುವ ಗುಣವಿರಬೇಕು. ಅದೂಕೂಡ ಇಲ್ಲದ, ಅಹಂಕಾರದ ವ್ಯಕ್ತಿಯನ್ನು ಕೂಡಲಸಂಗಮನು ಕೆಳಗೆ ಬೀಳಿಸಿ ಆತನ ಮೂಗು ಕೊಯ್ಯುತ್ತಾನೆ ಎಂದು ಹೇಳುತ್ತಾರೆ ಬಸವಣ್ಣನವರು. ಎಂದರೆ ವ್ಯಕ್ತಿಯ ಅಂತಸ್ತು, ಪ್ರತಿಷ್ಠೆಗಳು ಶಾಶ್ವತವಲ್ಲ. ಒಂದಿಲ್ಲ ಒಂದು ದಿನ ಅವು ಮಣ್ಣುಗೂಡುತ್ತವೆ. ಆಗ ಅವನು ಕೆಳಗೆ ಬಿದ್ದಂತೆಯೇ, ಅವನ ಮೂಗು ಕೊಯ್ದಂತೆಯೇ, ಅಂದರೆ ಅವನ ಅವಮಾನವಾದಂತೆಯೇ ಸರಿ. ವಿನಯ ಮತ್ತು ಪ್ರೀತಿ ಎಲ್ಲರಿಗೂ, ವಿಶೇಷವಾಗಿ ಆತ್ಮೋನ್ನತಿಯ ದಾರಿಯಲ್ಲಿರುವವರಿಗಂತೂ ಬಹು ಮುಖ್ಯ. ಈ ದಾರಿಯಲ್ಲಿ ಅಹಂಕಾರವು ಒಂದು ಬೃಹತ್ ಅಡಚಣೆಯಾಗುತ್ತದೆ.
Thank you for enlightening us with vachanas. Like the 'nudidare muttina...' vachana, your commentary is simple, straight forward and unambiguous. We look forward for more vachanas.
ReplyDelete_Jaideva.
this vachana is familiar with the words...
ReplyDeleteAthithi DevoBHava...
Meaning the guests are referred to GOD...