Monday, September 13, 2010

Vachana 4 Ullavaru Shivalaya Maduvaru

VACHANA 4 ULLAVARU SHIVALAYAVA MADUVARU


ಉಳ್ಳವರು ಶಿವಾಲಯವ ಮಾಡುವರು !

ನಾನೇನ ಮಾಡುವೆ ? ಬಡವನಯ್ಯ!

ಎನ್ನ ಕಾಲೇ ಕಂಬ, ದೇಹವೇ ದೇಗುಲ,

ಶಿರವೇ ಹೊನ್ನ ಕಳಶವಯ್ಯ!

ಕೂಡಲಸಂಗಮದೇವ ಕೇಳಯ್ಯ,

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!



TRANSLITERATION

uLLavaru SivAlayava mADuvaru !

nAnEna mADuve ? baDavanayya!

enna kAlE kaMba, dEhavE dEgula,

SiravE honna kaLaSavayya!

kUDalasaMgamadEva kELayya,

sthAvarakkaLivuMTu, jaMgamakkaLivilla!



CLICK TO HEAR IT

http://videos.desishock.net/index.php?module=item&action=show_item_full&itemid=975707&itemurl=aHR0cDovL3d3dy55b3V0dWJlLmNvbS93YXRjaD92PW5mX3JzcE5neWxvJmZlYXR1cmU9eW91dHViZV9nZGF0YQ==

http://il.youtube.com/watch?v=3ylUZGusB5w&feature=related

TRANSLATION

Those who have money, build temples for Shiva!

What can a poor man like me build?

My legs are pillars, my body is the Shrine,

My head is the golden pinnacle!

Hear me! Oh Lord Kudala Sangama!

There is destruction for what stands,

but not for what moves!



COMMENTARY

This Vachana depicts three distinct aspects: Humility, Sanctity of the Body, and Dynamism.

The first two lines say that those who are wealthy construct temples for you, Oh Lord. But, I am so poor that I cannot construct a temple for you! The third and fourth lines describe the body as the temple, with legs being pillars, body being the shrine with the head becoming the golden pinnacle.

Temples have served an important role in our lives serving as places of worship, as venues for community discussions, discourses, service and interactions. It is not just enough to build a temple and install the image of the Lord and worship there. The Lord should reside within us. That is why, the body is the temple. It is a place fit to install the Lord. Since the body is the residence of the Lord, it is imperative on our part to keep it austere enough to be worthy of Lord's residence.

The last two lines emphasize that, that which is dynamic is permanent while that which is static is impermanent. The idol installed in a temple is impermanent like all physical, static structures. The idol realized within one's body (the temple), resides there forever! Any matter is likely to be destroyed, while the spirit (ideology) is timeless!

It is important to note the humility portrayed by the first part of this vachana. Indeed none of us are rich enough compared to Lord's grace. As such, the richness we have acquired should only lead us to the humility recognizing that there is not much we can offer to the Lord and the fellow beings. The only thing we possess is our body which again is a gift of the Lord. It is a must to take care of the body. It is a must to cultivate the mind to make the Lord resident of the body. It is a must to be humble in return for the gifts showered by the Lord and our fellow beings.

The last line of the vachana provides a powerful message as to how we must live. It discourages static nature and advocates dynamism in all aspects of our lives. Indeed, Basavanna coined the phrase ‘work is heaven (Kaayakave Kailaasa)’. There is no time for us to be inactive. We must perform our duties with the utmost sincerity, thus creating a heaven here on Earth.

Building of temples by the rich and exhibiting them as monuments of their creation has been an age-old practice. It was probably true during Basavanna’s time also. Temples definitely serve the society culturally and socially. But, the inner sanctity of an individual is not enhanced just by building temples and by ritualistic worship. One should see God in every object around and strive to reach the God within. Basavanna is not blaming anyone; rather he is reflecting his inner feelings. He is implying that we should sanctify the body through proper conduct and speech to receive the God. This is better than building temples. Further, the God realized within (Jangama) is there forever compared to an idol (Sthavara) installed in a temple.
ಉಳ್ಳವರು ಶಿವಾಲಯವ ಮಾಡುವರು.......




ಈ ವಚನದಲ್ಲಿಯ ಮಾತುಗಳನ್ನು ಬಸವಣ್ಣನವರು ಯಾರಿಗೆ ಹೇಳುತ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟುತ್ತದೆ.ತಮಗೆ ತಾವೇ ಹೇಳಿಕೊಳ್ಳುತ್ತಿದ್ದಾರೆಯೇ? ಹಣವಂತರು ದೇವಾಲಯಗಳನ್ನು ಕಟ್ಟುವುದು ನಾವು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಬಸವಣ್ಣನವರ ಕಾಲದಲ್ಲಿ ಅದು ಹಾಗಿರಲಿಲ್ಲವೆಂದು ಹೇಳಲಾಗುವುದಿಲ್ಲ. ದೇವಾಲಯಗಳಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವಿರುತ್ತದೆ, ಆದರೆ ವ್ಯಕ್ತಿಯ ಆಂತರಿಕ ಔನ್ನತ್ಯ ಕೇವಲ ದೇವ್ಸ್ಥಾನಗಳನ್ನು ಕಟ್ಟಿಸುವುದರಿಂದ ಸಾಧ್ಯವಿಲ್ಲ ಎಂಬುದು ಬಸವಣ್ಣನವರು ಕಂಡುಕೊಂಡಿದ್ದರು. ಜನರು ಆ ಬಾಹ್ಯ ಆಡಂಬರದಲ್ಲಿ ಮುಳುಗಿದವರನ್ನು ಕಂಡು ಅವರು ಮರುಕಗೊಂಡಿರಬೇಕು. ಆದರೆ ಆ ಅಭ್ಯಾಸ ಜನರಲ್ಲಿ ಆಳವಾಗಿ ಬೇರೂರಿರುವುದನ್ನು ಕಿತ್ತೊಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ಅಂತಹ ಆಡಂಬರ ಮತ್ತು ಮೌಢ್ಯದಿಂದ ಲಾಭವಿಲ್ಲ ಎಂಬುದನ್ನು “ಅರಗು ತಿಂದು ಕರಗುವ ದೈವ” “ಸಗಣಿಯ ಬೆನಕನ ಮಾಡಿ” “ಮಡಕೆ ದೈವ ಮೊರ ದೈವ” ಮುಂತಾದ ವಚನಗಳಲ್ಲಿ ಬಗೆಬಗೆಯಾಗಿ ತಿಳಿಸಿ ಖಂಡಿಸಿದ್ದಾರೆ. ತನ್ನನ್ನು ತಾನು ಅರಿಯುವ ಹೊಸದರಲ್ಲಿ ಇತರರ ತಪ್ಪುಗಳನ್ನು ತೋರಿಸಿಕೊಡುವ ಮತ್ತು ಅವನ್ನು ತಿದ್ದುವ ಉತ್ಸಾಹವಿರುತ್ತದೆ. ಸ್ವ-ರೂಪವನ್ನು ಅರಿಯುವುದರಲ್ಲಿ ತೊಡಗಿದ ವ್ಯಕ್ತಿಯು ಆ ದಾರಿಯಲ್ಲಿ ಮುಂದುವರೆದಾಗ ಆತನಿಗೆ ಇತರರ ತಪ್ಪನ್ನು ತೋರಿಸುವ ಅಥವಾ ತಿದ್ದುವ ಸ್ವಭಾವ ಇಲ್ಲವಾಗುತ್ತದೆ. ತನ್ನ ಆಂತರಿಕ ಔನ್ನತ್ಯ ಮಾತ್ರ ಮುಖ್ಯವಾಗುತ್ತದೆ. ಆ ದಿಸೆಯಲ್ಲಿ ತನಗಾದ ಅನುಭವವು ಉದ್ಗಾರದ ರೂಪದಲ್ಲಿ ತಾನಾಗಿಯೇ ವ್ಯಕ್ತಗೊಳ್ಳುತ್ತದೆ. ಅದನ್ನೇ ನಾವು ಇಲ್ಲಿ ಕಾಣುತ್ತೇವೆ. ಇಲ್ಲಿ ಬಸವಣ್ಣನವರು ಯರನ್ನೂ ದೂರುವುದಿಲ್ಲ. ಕೇವಲ ತನ್ನ ಮನಸ್ಥಿತಿಯನ್ನು ಮಾತ್ರ ಹೇಳುತ್ತಿದ್ದಾರೆ. ಉಳ್ಳವರು- ಎಂದರೆ ತನ್ನಲ್ಲಿ ಹಣವಿದೆ ಎಂದು ತಿಳಿದುಕೊಂಡವರು ದೇವಾಲಯವನ್ನು ಕಟ್ಟುವರು. ಆದರೆ ನಾನೇನು ಮಾಡಲಿ ಅಂದು ಕೇಳಿಕೊಳ್ಳುತ್ತಾರೆ. ನಾನು ಬಡವನು ಎಂದು ಹೇಳುತ್ತಾರೆ ಬಸವಣ್ಣನವರು. ಎಂದರೆ ಅವರಲ್ಲಿ ಹಣವಿಲ್ಲವೆಂದು ನಾವು ತಿಳಿಯಬೇಕಾಗಿಲ್ಲ. ಅವರಿಗೆ ಈಗಾಗಲೆ ತನ್ನಲ್ಲಿರುವುದೆಲ್ಲ ಕೂಡಲಸಂಗನದೇವನದ್ದು. ತನ್ನಲ್ಲಿ ತನ್ನದೆಂಬ ಯಾವ ವಸ್ತುವೂ ಇಲ್ಲವೆಂಬ ಅರಿವಾಗಿದೆ. ಆದ್ದರಿಂದಲೇ ತಾನು ಬಡವನಯ್ಯ ಎಂದು ಹೇಳುತ್ತಾರೆ. ಮನಸ್ಸು ಹೆಚ್ಚು ಅಂತರ್ಮುಖವಾಗಿದೆ. ಆದ್ದರಿಂದಲೇ ತನ್ನ ದೇಹ ದೇವಾಲಯವಾದ ಬಗೆಯನ್ನು ಕೇವಲ ಮೂರು ಹೋಲಿಕೆಗಳೊಂದಿಗೆ ಮುಗಿಸುತ್ತಾರೆ-ಕಾಲು ಕಂಭ, ದೇಹ ದೇಗುಲ, ಶಿರ ಹೊನ್ನ ಕಲಶ. ಗರ್ಭ ಗೃಹ, ದೇವರು ಇತ್ಯಾದಿಗಳ ಬಗ್ಗೆ ಏನೂ ಹೇಳುವುದಿಲ್ಲ. ದೇಹವೇ ದೇಗುಲವಾಗಿದೆ- ಅಂದರೆ ಪಾವಿತ್ರ್ಯವನ್ನು ಹೊಂದಿದೆ. ಪರತತ್ತ್ವದ ಅರಿವಾಗುತ್ತಿದೆ. ಮನಸ್ಸು ಮೌನವಾಗುತ್ತಿದೆ. ಇತರ ಅರೆಕೊರೆಗಳನ್ನು ತಿಳಿಸುವ ಗೋಜಿಗೆ ಅವರು ಹೋಗುವುದಿಲ್ಲ. “ಅರಗು ತಿಂದು ಕರಗುವ ದೈವ” “ಸಗಣಿಯ ಬೆನಕನ ಮಾಡಿ” “ಮಡಕೆ ದೈವ ಮೊರ ದೈವ” ಮುಂತಾದ ವಚನಗಳಲ್ಲಿ ಹೇಳಿದಂತೆ ಜನರ ಮೌಢ್ಯ, ಬಾಹ್ಯ ಪೂಜೆಯ ಪರಿಣಾಮ, ಲಾಭ ಹಾನಿಗಳಬಗ್ಗೆ ಏನೂ ಹೇಳುವುದಿಲ್ಲ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಮಾತ್ರ ಹೇಳುತ್ತಾರೆ. ಅದನ್ನು ಅರ್ಥಮಾಡಿಕೊಳ್ಳುವುದು ಭಕ್ತನಿಗೆ ಬಿಟ್ಟದ್ದು. ಆತ್ಮದ ಸ್ವರೂಪದ ಅರಿವಾಗುತ್ತ ಹೋದಂತೆ ಅವರ ಮನಸ್ಸು ಮೌನವಾದ ಹಾಗೆ ನಮ್ಮದೂ ಆದಾಗ ಮಾತ್ರ ಅದರ ಪೂರ್ಣವಾದ ಅರಿವು ನಮಗಾಗುತ್ತದೆ ಎಂಬ ಧ್ವನಿ ಈ ವಚನದಲ್ಲಿದೆ ಎಂಬುದು ನನ್ನ ಅನಿಸಿಕೆ.

ದೇಹವೇ ದೇಗುಲವೆಂಬ ಅದ್ಭುತವಾದ ನುಡಿಯಿಂದ ಈ ದೇಹವನ್ನು ದೇವರ ಇರುವಿಕೆಗಾಗಿ ಅಣಿಗೊಳಿಸಿದ್ದೇನೆ, ಎಂದು ಹೇಳುವುದರಲ್ಲಿ, ನೀವೂ ಕೂಡ ದೇವಾಲಯ ಕಟ್ಟುವುದಕ್ಕಿಂತ ನಿಮ್ಮ ದೇಹವನ್ನೇ ದೇವರಿಗಾಗಿ ಅಣಿಗೊಳಿಸಿ, ನಿಮ್ಮ ನಡೆ ನುಡಿಯಿಂದ ಅದನ್ನು ಪವಿತ್ರಗೊಳಿಸಿ, ಎಂಬ ಧ್ವನಿಯಿದೆ. ಇದೇ ಭಾವವನ್ನು “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂದು ಮಂತ್ರ ರೂಪದಲ್ಲಿ ಹೇಳುತ್ತಾರೆ. ಈ ಒಂದು ಮಾತಿನಲ್ಲಿ ತಮ್ಮ ಅರಿವಿಗೆ ಬಂದ ಸತ್ಯವನ್ನು ಯಾರಿಗೂ ನೋವಾಗದಂತೆ, ಕೇವಲ ಸತ್ಯದ ಉದ್ಗಾರದಂತೆ ವ್ಯಕ್ತಪಡಿಸುತ್ತಾರೆ. ಅದರಲ್ಲಿರುವ ಸತ್ಯವು ಅದಕ್ಕೆ ಮಂತ್ರದ ರೂಪ ಕೊಟ್ಟಿದೆ. ಮಾನವ ನಿರ್ಮಿತವಾದ ಯಾವುದೇ ಆದರೂ ಒಂದಿಲ್ಲ ಒಂದು ದಿನ ಅಳಿಯಲೇ ಬೇಕು. ಏಕೆಂದರೆ ಅದು ಮಾನವ ಮನದಲ್ಲಿ ಮೂಡಿದ ವಿಚಾರದಿಂದ ಹುಟ್ಟಿದಂತಹದ್ದು, ಮತ್ತು ಮನಸ್ಸು ಸ್ವತಂತ್ರವಲ್ಲ. ಅದು ಅನೇಕ ವಿಷಯಗಳ- ಸಮಾಜ, ಸಂಸ್ಕೃತಿ, ತನ್ನ ಅನುಭವ ಇತ್ಯಾದಿಗಳ ಪ್ರಭಾವಕ್ಕೆ ಒಳಗಾಗಿರುತ್ತದೆ. ಸಮಾಜ, ಸಂಸ್ಕೃತಿ ಮತ್ತು ಅನುಭವಗಳು ದೇಶಕಾಲಗಳ ಮಿತಿಗೆ ಒಳಪಟ್ಟಿರುತ್ತವೆ. ಹೀಗಾಗಿ ಅವು ಅತ್ಯಂತ ಸೀಮಿತವಾಗಿರುತ್ತವೆ, ಮತ್ತು ಪರತತ್ತ್ವವು ಅಸೀಮಿತವಾದದ್ದು, ಯಾವ ಪ್ರಭಾವಕ್ಕೂ ಒಳಗಾಗುವಂತಹದಲ್ಲ. ಅದು ಅನಾದಿ ಮತ್ತು ಅನಂತವಾದದ್ದು. ಅದು ಅಳಿವು ಮತ್ತು ಉಳಿವನ್ನು ಮೀರಿರುವಂತಹದ್ದು. ಅದನ್ನು ಹೊಂದುವುದಕ್ಕಾಗಿಯೇ ನಾನು ನನ್ನ ದೇಹವನ್ನೇ ದೇಗುಲವನ್ನಾಗಿ ಮಾಡಿದ್ದೇನೆ, ಎಂದು ಹೇಳುತ್ತಿದ್ದಾರೆ. ಈ ಎಲ್ಲ ಭಾವಗಳು ಈ ವಚನದಲ್ಲಿ ಅಡಕವಾಗಿವೆ ಎಂಬುದು ನನ್ನ ಭಾವನೆ.

1 comment:

  1. Most of them may not be knowing that we, Veerashaiva Lingayath's are prohibited to worship the idols in temple as said by many sharanas in their vachanas. We treat jangamas as charalinga...

    ReplyDelete