Thursday, September 2, 2010

Vachana 3 Dayavillada Dharmavadavudayya

ದಯವಿಲ್ಲದ ಧರ್ಮವದೇವುದಯ್ಯ,
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ.
ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ.

Transliteration:
dayavillada dharmavadEvudayya,
dayavE bEku sarvaprANigaLellaralli!
dayavE dharmada mUlavayya.
kUDalasaMgayyanaMtalladolla kaMDayya.

Click to hear (Two versions; sorry about the commercial on the second link):
http://www.esnips.com/doc/e95f5be0-17be-4b15-8ad5-01aabf32c8ad/Dayavillada-Dhar
http://www.raaga.com/player4/?id=173102&mode=100&rand=0.9261419331383855

Translation:
How can there be a religion that does not advocate compassion (kindness, non-violence)?
Compassion should be bestowed on all living beings!
Compassion is verily the basis of all genuine religions!
Without Compassion to all,
One cannot win your heart, Oh! Lord, Kudala Sangama!

Commentary:
 Basavanna questions: how can any system that does not preach compassion be called a religion? Compassion is a must, not just towards human beings but it should extend to all living beings including animals. Compassion must be the root of all genuine religious faiths. If an individual lacks compassion, God will remain unconcerned with him.
Basavanna insisted on virtues like compassion, kindness, and non-violence as part of Veerashiva philosophy and practice. He uses two important words in this vachana: Daya and Dharma. ‘Daya’ translates to: compassion, kindness and non-violence. The word 'Dharma' has a broader meaning of 'fundamental principles that uphold the Earth, society or a group of individuals'. Since a religion binds us together in terms of fundamental principles, 'Dharma' is translated as 'religion' in this vachana's context. Religion not only links man to God, but also links man to man through the virtues attributed to God.
God has created this world out of sheer compassion and love. The Cosmic Soul is the source of a multitude of souls and is inexhaustible. No soul exists for its own sake. Its very existence depends on relating intimately to other souls, be they human, animal or vegetal. As such, selfishness has no room in our lives. Kindness, compassion, non-violence and equality should be the guiding principles of individuals and the society.
It is interesting to note that all major religions have made compassion and non-violence their guiding principles. Mahapurana, the leading guide of Jainism states “Ahimsa Paramo Dharmaha, Ahimsa Lakshanam Dharmam” meaning Ahimsa (non-violence) is the highest Dharma, and Ahimsa is indicative of Dharma. When Buddha left his palace and realized that a great part of human condition was subjected to suffering, he did not turn away from the suffering of others for the sake of his own salvation. He made compassion the founding principle of Buddhism.
Let us discard selfishness. Let us cultivate compassion towards fellow beings! It is a must!

ಈ ವಚನದಲ್ಲಿ ಎರಡು ಮುಖ್ಯವಾದ ಪದಗಳ ಪ್ರಯೋಗವಾಗಿದೆ. ದಯ ಮತ್ತು ಧರ್ಮ. ಇವುಗಳ ಅರ್ಥವನ್ನು ತಿಳಿದುಕೊಂಡರೆ ಈ ವಚನ ಅರ್ಥವಾಗುತ್ತದೆ. ದಯವೆಂದರೆ ಕರುಣೆ, ಮರುಕ, ಕನಿಕರ ಎಂಬ ಪದಗಳು ಸಿಗುತ್ತವೆ. ಇವುಗಳನ್ನು ಗಮನಿಸಿದಾಗ ನಮಗೆ ಕಂಡುಬರುವುದೇನೆಂದರೆ ದುಃಖವನ್ನು ಕಂಡಾಗ ಪ್ರತಿಸ್ಪಂದಿಯಾಗಿ ಬರುವ ಭಾವವೇ ದಯೆ, ಕರುಣೆ, ಮರುಕ, ಕನಿಕರ. ಆದ್ದರಿಂದ ದಯವನ್ನು ಅರ್ಥಮಾಡಿಕೊಳ್ಳಲು ಮೊದಲು ನಾವು ದುಃಖವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ದುಃಖವನ್ನು ಅರ್ಥಮಾಡಿಕೊಳ್ಳಲು ನಾವು ಸಂಬಂಧಹೊಂದಿರುವುದು ಬಹು ಮುಖ್ಯ. ಜಗತ್ತಿನೊಂದಿಗೆ (ಮತ್ತು ತನ್ನೊಂದಿಗೆ ತಾನು) ಸಂಬಂಧ ಹೊಂದಿದಾಗ ಮಾತ್ರ ಅಲ್ಲಿಯ ದುಃಖದ ಅನುಭವವಾಗುತ್ತದೆ. ಸಂವೇದನಶೀಲವಾದ ಮನಸ್ಸು ಇದಕ್ಕೆ ಬಹು ಮುಖ್ಯ. ಹಾಗಾಗಿ ದಯವನ್ನು ಅರ್ಥಮಾಡಿಕೊಳ್ಳಲು ನಾವು ಸಂವೇದನಶೀಲರಾಗಿರಬೇಕು.


ಇನ್ನು ಧರ್ಮವೆಂದರೇನು ಎನ್ನುವುದನ್ನು ನೋಡೋಣ. ಸಾಮಾನ್ಯವಾಗಿ ನಾವು ಧರ್ಮವೆಂದರೆ ಮತ, ರೆಲಿಜನ್ ಅನ್ನುವ ಅರ್ಥವನ್ನು ಕಾಣುತ್ತೇವೆ. ಆದರೆ ಈ ಪದಕ್ಕೆ ಇನ್ನೂ ಆಳವಾದ ಮತ್ತು ವ್ಯಾಪ್ತವಾದ ಅರ್ಥವಿದೆ ಎನ್ನಿಸುತ್ತದೆ. ಮನುಷ್ಯನು ಯೋಚಿಸುವ ಬುದ್ಧಿ ಶಕ್ತಿಯನ್ನು ಹೊಂದಿರುವುದರಿಂದ ಆತನ ಜವಾಬ್ದಾರಿ ಹೆಚ್ಚಿನದಾಗಿರುತ್ತದೆ. ವಿಶ್ವದ ಆಗುಹೋಗುಗಳಿಗೆ ಸಂವೇದನಶೀಲನಾಗುವುದು ಆತನ ಧರ್ಮ. ಆತನು ಕೇವಲ ಒಂದು ಸಮುದಾಯದವರು. ಜನಾಂಗದವರು, ದೇಶದವರು ನಿರ್ಮಿಸಿದ, ದೇಶ ಮತ್ತು ಕಾಲಗಳಿಗೆ ಸೀಮಿತವಾದ ಯಾವುದೋ ಒಂದು ಮತದ ನಿಯಮಗಳಿಗೆ ಬದ್ಧನಾಗಿರುವುದು ಧರ್ಮವೆನಿಸುವುದಿಲ್ಲ. ಆತನು ಸಂವೇದನಶೀಲನಾಗಿ ವಿಶ್ವದೊಂದಿಗೆ ಸಂಬಂಧಹೊಂದಿದವನಾಗಿರುವುದು ನಿಜವಾದ ಧರ್ಮ. ಈ ಜವಾಬ್ದಾರಿ, ಜಗತ್ತಿನೊಂದಿಗಿನ ಆತನ ಸಂಬಂಧ, ಆತನ ಸಂವೇದನಾಶೀಲತೆ, ಆತನನ್ನು ದುಃಖವನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತವೆ. ದುಃಖದ ಅರಿವು ಆತನ ಮನದಲ್ಲಿ ದಯೆ ಹುಟ್ಟುವಂತೆ ಮಾಡುತ್ತದೆ. ಮತ್ತು ಈ ದಯೆಯ ಶಕ್ತಿ ಅಗಾಧವಾಗಿರುತ್ತದೆ. ಈ ರೀತಿ ದುಃಖದ ಅರಿವಿನಿಂದ ದಯಾವಂತನಾದ ಬುದ್ಧನಿಗೆ ಅಂಗುಲಿಮಾಲನಂತಹ ಭಯಂಕರ ಕೊಲೆಗಡುಕ ಕಟುಕನ ಎದುರಿಗೆ ನಿರ್ಭೀಕನಾಗಿ ನಡೆದು ಹೋಗುವ ಮತ್ತು ಆತನನ್ನು ಕ್ಷಣಮಾತ್ರದಲ್ಲಿ ಪರಿವರ್ತಿಸುವ ಶಕ್ತಿಯುಂಟಾಯಿತು. ರಾಜ್ಯ, ಸಂಪತ್ತುಗಳನ್ನು ತೊರೆದು ಆತನ ಶಿಷ್ಯತ್ವವನ್ನು ಹೊಂದಿದರು ಅಸಂಖ್ಯರು. ಎರಡು ಸಾವಿರ ವರ್ಷಗಳು ಕಳೆದು ಹೋದರೂ ಆತನು ಪ್ರತಿಪಾದಿಸಿದ ದಯೆಯ ಪ್ರಭಾವ ಇನ್ನೂ ಉಳಿದಿದೆ.



ಇದನ್ನೇ ನಾವು ಶರಣರ ಜೀವನದಲ್ಲಿ ನೋಡುತ್ತೇವೆ. ಬಸವಣ್ಣನವರ ದಯೆಯ, ಸಮಾಜದೊಂದಿಗಿನ ಅವರ ಸಂಬಂಧದ, ಇತರರಿಗಾಗಿ ತುಡಿಯುವ ಅವರ ಹೃದಯದ ಅರಿವು ಮೋಳಿಗೆ ಮಾರಯ್ಯನವರನ್ನು ತಮ್ಮ ರಾಜ್ಯವನ್ನೇ ತೊರೆದು ಕಲ್ಯಾಣಕ್ಕೆ ಬರುವಂತೆ ಮಾಡಿತು. ಸಾಮಾನ್ಯವಾದ ಕಾಯಕವನ್ನು ಕೈಗೊಂಡು ದಾಸೋಹದಲ್ಲಿ ತೊಡಗುವಂತೆ ಮಾಡಿತು. ಇಂತಹ ಅನೇಕ ಉದಾಹರಣೆಗಳು ದೊರೆಯುತ್ತವೆ. ಆದರೂ ನಾವು ದಯೆಯನ್ನು ಇನ್ನೂ ಆಳವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ. ದಯೆ ಎಂದರೆ ದುಃಖದಲ್ಲಿ ಮುಳುಗಿದವರಿಗೆ ಸಹಾಯ ಮಾಡುವುದು ಅಂದರೆ, ಒಬ್ಬ ಮನೆಯಿಲ್ಲದ ಬಡವನಿಗೆ ಮನೆ ಕಟ್ಟಿ ಕೊಡುವುದು, ಹೊಟ್ಟೆಗಿಲ್ಲದವನಿಗೆ ಊಟಹಾಕುವುದು, ಬಂಧುವಿನ ಸಾವಿನಿಂದ ಅಳುವವನಿಗೆ ಸಾಂತ್ವನ ಹೇಳುವುದು ಇತ್ಯಾದಿಗಳು ದಯೆತೋರುವ ವಿಧಾನಗಳು. ಆದರೆ ಇವುಗಳು ಯಾರ ದುಃಖವನ್ನು ನಿಜವಾಗಿಯೂ ದೂರಮಾಡುವುದಿಲ್ಲ. ಇವುಗಳೆಲ್ಲವೂ ಮೇಲ್ಮೈಯ ಮತ್ತು ತಾತ್ಕಾಲಿಕವಾದ ಉಪಾಯಗಳು ಮಾತ್ರ. ದುಃಖವನ್ನು ಸಂಪತ್ತಿನಿಂದ, ಕ್ಷಣಿಕವಾದ ಕನಿಕರದಿಂದ ಹೋಗಲಾಡಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಬಹು ಆಳವಾದದ್ದು. ಮೇಲ್ನೋಟಕ್ಕೆ ಬಡತನವೇ ದುಃಖಕ್ಕೆ ಕಾರಣವೆಂದು ತೋರಿಬಂದರೂ ಆಳವಾಗಿ ಯೋಚಿಸಿದಾಗ ಅಜ್ಞಾನವೇ ಅದಕ್ಕೆ ಕಾರಣವೆಂಬುದು ತಿಳಿಯುತ್ತದೆ. ದುಃಖದ ನಿಜವಾದ ನಿವಾರಣೆಗೆ ಸತ್ಯದ ಅರಿವು ಬಹು ಮುಖ್ಯ. ಈ ಅರಿವನ್ನು ಪಡೆಯುವುದು ಮತ್ತು ಇತರರು ಪಡೆಯುವಂತೆ ಮಾಡುವುದೇ ನಿಜವಾದ ದಯೆ. ಅದೇ ನಿಜವಾದ ಧರ್ಮ. ಆದ್ದರಿಂದಲೇ ಕೆರೆಗಳನ್ನು ಕಟ್ಟಿಸುವುದರಲ್ಲಿ ಮುಳುಗಿದ ಸಿದ್ಧರಾಮನನ್ನು ಅಲ್ಲಮಪ್ರಭುದೇವರು ಇದಕ್ಕಿಂತ ದೊಡ್ದ ಕೆಲಸ ನಿನಗಾಗಿ ಕಾದಿದೆ ಎಂದು ಹೇಳಿ ಬಸವಣ್ಣನವರ ಹತ್ತಿರ ಕರೆತರುತ್ತಾರೆ. ಬಸವಣ್ಣನವರು ಈ ಸತ್ಯದ ಅರಿವು ಎಲ್ಲರೂ ಪಡೆಯುವದರಲ್ಲಿ ಸಹಾಯವಾಗುವಂತೆ ಅನುಭವ ಮಂಟಪವನ್ನು ಕಟ್ಟುತ್ತಾರೆ. ಅಜ್ಞಾನದಲ್ಲಿ ಮುಳುಗಿ ದುಃಖದಲ್ಲಿ ತೊಳಲುವವರನ್ನು ಆತ್ಮೋನ್ನತಿಯಡೆಗೆ ಕರೆದೊಯ್ಯುವುದೇ ನಿಜವಾದ ದಯೆಯ ಲಕ್ಷಣ. ಅದೇ ನಿಜವಾದ ಧರ್ಮ. ಇಂತಹ ದಯೆಯಿಲ್ಲದವನ ಕೂಡಲ ಸಂಗಮನು ಒಲಿಯುವುದಿಲ್ಲ ಎಂದು ಹೇಳುತ್ತಾರೆ. ಬಸವಣ್ಣವರು ಅದನ್ನು ಕೃತಿಯಲ್ಲಿ ಮಾಡಿ ತೋರಿಸಿ ಅದನ್ನೇ ವಚನದಲ್ಲಿ ವ್ಯಕ್ತಗೊಳಿಸಿದ್ದಾರೆ.
ಮೇಲ್ನೋಟದ ದಯೆಯಿಂದ ಕೇವಲ ಸ್ಥಾವರದ (ದೈಹಿಕ ಸ್ಥಿತಿಯ) ತಾತ್ಕಾಲಿಕ ಉದ್ಧಾರವಾಗುತ್ತದೆ ಮತ್ತು ಅಂತಹ ದಯೆ ತೋರಿದವನ ಅಹಂಕಾರ ವಿಜೃಂಭಿಸುತ್ತದೆ. ಆದರೆ ಆತ್ಮೋನ್ನತಿಯಡೆಗೆ ಕರೆದೊಯ್ಯುವ ನಿಜವಾದ ದಯೆಯಿಂದ ಇಬ್ಬರಲ್ಲಿಯೂ ಜಂಗಮ ತತ್ತ್ವ ಅಳವಡುತ್ತದೆ ಮತ್ತು ವಿನೀತ ಭಾವನೆ ಮೂಡುತ್ತದೆ.

2 comments:

  1. Very nice! Thanks for posting these. Reminds me of my school days and my Kannada teacher who used to explain these very same vachanas so beautifully. I find these so relevant to my life today than ever before.

    ReplyDelete
  2. This vachana is for everyone. We see kids on road sides throwing stones at some dogs or pigs, we see people beating cows in vegetables market and then offering pooja (worship) to the cow during gouri pooja! Compassion must be shown not only for human beings but also for plants, animals and insects.

    ReplyDelete