Wednesday, August 25, 2010

Vachana 2 - Nudidare Muttina Hara

ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!
ನುಡಿಯೊಳಗಾಗಿ ನಡೆಯದಿದ್ದರೆಕೂಡಲಸಂಗಮದೇವನೆಂತೊಲಿವನಯ್ಯ ?

Transliteration:
nuDidare muttina hAradaMtirabEku!
nuDidare mANikyada dIptiyaMtirabEku!
nuDidare sPaTikada SalAkeyaMtirabEku!
nuDidare liMga mecci ahudenabEku ?
nuDiyoLagAgi naDeyadiddare
kUDalasaMgamadEvaneMtolivanayya ?

Click to hear it:
http://www.youtube.com/watch?v=nGdKEFGkaY0

Translation:
If you should speak, your words should be like pearls strung on a thread!
If you should speak, your words should be like the luster shed by a ruby!
If you should speak, your words should be like a crystal's flash that cleaves the blue!
If you should speak, the Lord must say "yes, yes, that is true"!
But, if your deeds do not reflect your words, how can Lord Kudala Sangama accept you?

Commentary:
Shiva Sharanas chose to express their deep feelings and profound thoughts in ordinary spoken Kannada language (instead of scholarly Sanskrit vocabulary) to facilitate understanding by common people. As such, they had to pay special attention to the clarity and simplicity while keeping Vachanas to the point. In this Vachana, in addition to stressing the importance of righteous speech, Basvanna adds the dimension of right action to go with the right speech.
The purpose of the speech is to convey well formed thoughts in a subtle way so the listener is made comfortable in receiving the thoughts conveyed by the speaker. Spoken words either make us or break us. Spoken words cannot be taken back, just as a broken pearl cannot be glued back! The powers and proper use of the speech have helped mankind achieve great things while their misuse has destroyed man and his environment.
The first line of the Vachana states that we should speak with such intensity and clarity that our words must be as beautiful and attractive as well strung pearls. Pearl is a precious gem that produces a subdued yet gentle brilliance resembling a circle of light (aura) around it. While each pearl's brilliance is gentle and subdued, when they are strung into a necklace, the combined effect is breathtaking. Each word of our speech should be meaningful and subtle, while the assembly of these words should result in a high intensity and clarity to make an impact on the listener.
The second line states that the speech should be as illuminative as the bright luster shed by a ruby. Unlike a pearl, the luster of a ruby spreads far beyond its periphery. Thus, our speech should be such that its impact is extended beyond the immediate.
The third line states that the speech should be as sharp and to the point as possible. It should be like the effulgence flashing from a crystal, piercing through whatever it encounters. That is, its influence should be inestimable and invaluable. It should be well thought off and should have the transparent clarity of a crystal i.e. it must be crystal clear.
The fourth line provides the ultimate characteristic of the speech. It must be so well formed and reflect our total sincerity and intensity of thought, that even if the God hears it, He should nod his head in approval. Since each individual soul is considered a spark from the super soul (the ‘God’), the God nodding his head in approval may actually imply the approval from those around us.
The last line stresses that the total sincerity of our speech must be associated with fitting conduct. Our speech must match our deeds and vice versa. If either our words betray our deeds or deeds betray our words, Lord Kudala Sangama will not approve of it!
While the first four lines appear to characterize ‘speech’, they each seem to be connected to the last line addressing the right ‘conduct’. While the pearls are our words, the conduct is the string tying them together. When our conduct and speech match, and both are transparent to our fellow beings, we can bring about a tremendous effect on everyone around us. Our speech and conduct should be such that they are appreciated by everyone around us, and should not hurt anyone. This is possible only when we have deep love for our fellow beings. Such love is though inherent to humans, it seem to be lost due to the influence of our surroundings and events. Kindling such love back and cultivating a transparent speech-conduct pattern must be our goal.

ಈ ವಚನದ ಪ್ರತಿಯೊಂದು ಸಾಲಿಗೂ ಮತ್ತು ಕೊನೆಯ ಸಾಲಿಗೂ ಸಂಬಂಧವಿದೆ ಎನಿಸುತ್ತದೆ. ಇಲ್ಲದಿದ್ದರೆ ಮೊದಲ ಸಾಲಿನ ಅರ್ಥ- “ನಾವು ಮಾತಾಡಿದ್ದೆಲ್ಲವು ಮುತ್ತಿನಂತೆ ಸುಂದರವಾಗಿರಬೇಕು, ಮತ್ತು ನಮ್ಮ ಮಾತುಗಳು ಒಂದಕ್ಕೊಂದು ಸಂಬಂಧವಿರದ ಬಿಡಿ ಮುತ್ತುಗಳಂತಿರದೆ ಒಂದು ವಿಷಯಕ್ಕೆ ಸಂಬಂಧಿತವಾಗಿ ಮುತ್ತಿನಹಾರದಂತಿರಬೇಕು” ಎಂದಾಗುತ್ತದೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸುಂದರ ಮಾತುಗಳನ್ನಾಡಿದರೆ ಅಲ್ಲಿ ಯಾವ ಸೌಂದರ್ಯವಿದ್ದೀತು?  ಯಾರೋ ಹೇಳಿದ  ಒಳ್ಳೆಯ ಮಾತುಗಳನ್ನು ಬಾಯಿಪಾಠಮಾಡಿ ಹೇಳಿದರೆ ಅದು ಸುಂದರವಾಗದು. ನಮ್ಮ ನುಡಿಯನ್ನು ನಮ್ಮ ನಡೆಯಲ್ಲಿ ಪೋಣಿಸಿದರೆ ಮಾತ್ರ ಅದು ಸುಂದರವಾಗಬಲ್ಲುದು. ನಮ್ಮ ನುಡಿಯನ್ನು ನಡೆಯಲ್ಲಿ ಪೋಣಿಸಿದಂತಹ ಆಚರಣೆ ಗಟ್ಟಿ ಗೊಂಡಾಗ ಸುತ್ತಲಿದ್ದವರ ಮೇಲೆ ಅದರ ಪ್ರಭಾವ (ಕಾಂತಿ, ದೀಪ್ತಿ ಬೀರುತ್ತದೆ) ಉಂಟಾಗುತ್ತದೆ. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಎಂದರೆ ನಮ್ಮ ನುಡಿ ಮತ್ತು ಆಚರಣೆ ಒಂದುಗೂಡಿ ಗಟ್ಟಿಗೊಂಡು ಇತರರ ಮೇಲೆ ಪರಿಣಾಮವನ್ನುಂಟು ಮಾಡಬೇಕು. ಇಂತಹ ಆಚರಣೆ ಇನ್ನೂ ಗಟ್ಟಿಗೊಂಡು ಸ್ಫಟಿಕದ ಶಲಾಕೆಯಂತಾಗಬೇಕು. ಅಂದರೆ ನಮ್ಮ ನುಡಿ ಮತ್ತು ನಡೆ ನೇರ, ಪಾರದರ್ಶಕ ಮತ್ತು ಸ್ಪಷ್ಟವಾಗಿರಬೇಕು. ಅವುಗಳಲ್ಲಿ ಯಾವುದೇ ರೀತಿಯ ಕಾಪಟ್ಯವಿರಬಾರದು. ಅಂದರೆ ವ್ಯಕ್ತಿಯ ಒಳ ಹೊರಗುಗಳು ಒಂದಾಗಬೇಕು. ಇದಾದ ನಂತರ ಬಸವಣ್ಣನವರು “ನುಡಿದರೆ ಲಿಂಗವು ಮೆಚ್ಚಿ ಅಹುದಹುದೆನ್ನಬೇಕು” ಎಂದು ಹೇಳುತ್ತಾರೆ. ಇದು ಅತ್ಯಂತ ಮಹತ್ವಪೂರ್ಣವಾದ ಮಾತು. ಲಿಂಗವೆಂದರೆ ಏನೆಂದು ಅರ್ಥಮಾಡಿಕೊಂಡು ಹೇಳುವುದು ನನ್ನಳವಲ್ಲ, ಆದರೆ ಅದರ ಅರ್ಥ ನನಗೆ ತಿಳಿದಂತೆ ನಾನು ವಿವರಿಸುತ್ತೇನೆ. ಲಿಂಗವೆಂದರೆ ದೇವರೆಂದು ಹೇಳುತ್ತೇವೆ. ಆದರೆ ಕಾಣದ ದೇವರನನ್ನನು ಮೆಚ್ಚಿಸುವುದು ಹೇಗೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಎಲ್ಲದರಲ್ಲಿಯೂ ದೇವರನ್ನು ಕಾಣಬೇಕು ಎಂದು ಹೇಳುತ್ತಾರೆ. ಆತನು ಅಣುರೇಣುತೃಣಕಾಷ್ಠಗಳಲ್ಲಿಯೂ ಇದ್ದಾನೆ ಎನ್ನುತ್ತಾರೆ ಅನುಭಾವಿಗಳು.( ತನ್ನ ತಾ ಅರಿಯುವ ಮಾರ್ಗದಲ್ಲಿ ಹೋಗುವವನು ಈ ಮಾತಿನಲ್ಲಿ ಶ್ರದ್ಧೆಯನ್ನಿಡಬೇಕು. ಅದನ್ನು ಅರಿಯುವ ಸತತ ಪ್ರಯತ್ನ ಮಾಡಬೇಕು.) ಎಂದರೆ ಅಣುರೇಣುತೃಣಕಾಷ್ಠಗಳನ್ನು ಮೆಚ್ಚಿಸಬೇಕೆಂದಾಯಿತು ಅಲ್ಲವೇ? ಹಾಗಾದರೆ ಈ ಜಗತ್ತಿನಲ್ಲಿರುವ ಸಕಲ ಜಡ ಚೇತನಗಳು ಒಪ್ಪುವಂತಹ ನಡೆ ನುಡಿ ನಮ್ಮದಾಗಿರಬೇಕಲ್ಲವೇ?  ಅಂದರೆ ಯಾವ ದೇಶದವರಿಗೇ ಆಗಲಿ, ಯಾವ ಜನಂಗದವರಿಗೇ ಆಗಲಿ, ಯಾವ ಲಿಂಗದವರಿಗೇ ಆಗಲಿ, ಯಾವ ಜನಾಂಗದವರಿಗೇ ಆಗಲಿ, ಯಾವ ಜಾತಿಯವರಿಗೇ ಆಗಲಿ, ಯಾವ ಜಡವಸ್ತುವಿಗೇ ಆಗಲಿ ಹಾನಿಯಾಗದಂತೆ ನಮ್ಮ ನಡೆ ನುಡಿಯಿರಬೇಕು. ಇದು ವಿಶ್ವದ ಜಡ ಚೇತನಗಳ ಬಗ್ಗೆ ಆಳವಾದ ಪ್ರೀತಿಯಿದ್ದಾಗ ಮಾತ್ರ ಸಾಧ್ಯವಾಗುತ್ತದೆ. ಆದರೆ ಈ ಆಳವಾದ ಪ್ರೀತಿ ಹುಟ್ಟುವುದು ಹೇಗೆ? ನನಗನ್ನಿಸುವ ಮಟ್ಟಿಗೆ ಈ ಪ್ರೀತಿ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಅನೇಕಸಲ ನಮಗರಿವಿಲ್ಲದೆ ಅದು ನಮ್ಮ ಸುತ್ತಲಿನವರ ಮೇಲೆ ಹೊನಲಾಗಿ ಹರಿಯುತ್ತದೆ. ಅದಕ್ಕೆ ಯಾವ ಕಾರಣವೂ ಬೇಕಿಲ್ಲ. ಹಾಗಾದಾಗ ನಾವು ಆನಂದದಲ್ಲಿ ಮುಳುಗುತ್ತೇವೆ. ಅಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಇಂತಹ ಅನುಭವ ಎಲ್ಲರ ಜೀವನದಲ್ಲಿ ಕ್ಷಣದಮಟ್ಟಿಗಾದರೂ ಆಗುತ್ತದೆ. ಆದರೆ ಅದು ಬಹು ಬೇಗ ಅಂದರೆ ನಾವು ಅದನ್ನು ಗುರುತಿಸುವ ಮೊದಲೇ ಮಾಯವಾಗುತ್ತದೆ. ಏಕೆಂದರೆ ನಾವು ಈ ಜಗತ್ತಿನೆ ಆಗು ಹೋಗುಗಳಲ್ಲಿ ಪೂರ್ತಿಯಾಗಿ ಮುಳುಗಿ ಹೋಗುತ್ತೇವೆ, ಅವುಗಳಿಂದ ಪ್ರಭಾವಿತರಾಗುತ್ತೇವೆ. ನಮ್ಮ ನಡತೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಇದು ಗೊತ್ತಾಗುತ್ತದೆ. ಈ ಕಾಣ್ಕೆ, ಎಚ್ಚರಿಕೆಯುಳ್ಳವನ ನಡೆ ನುಡಿಯನ್ನು ಮಾತ್ರ ಲಿಂಗ ಮೆಚ್ಚಲು ಸಾಧ್ಯ. ಈ ವಚನದಲ್ಲಿ ನುಡಿ ಮತ್ತು ನಡತೆ ಎಂಬ ಎರಡು ಪದಗಳನ್ನು ಬಳಸಿದರೂ ಸಹ ಅವೆರಡೂ ಒಂದೇ ಆಗಬೇಕೆಂಬುದು ಬಸವಣ್ನನವರ ಆಶಯ. ಇವೆರಡು ಒಂದಾಗದಿದ್ದರೆ ಕೂಡಲ ಸಂಗಮ ಒಲಿಯುವುದಿಲ್ಲ ವೆಂದು ಅವರು ಹೇಳುತ್ತಾರೆ. ನಮ್ಮ ನಡೆ ನುಡಿ ಒಂದಾಗಬೇಕಾದರೆ ನಾವು ನಮ್ಮ ನಡೆ ನುಡಿಯನ್ನು ನಿರಂತರವಾಗಿ ಗಮನಿಸಬೇಕಾಗುತ್ತದೆ. ಅಂದರೆ ಈ ವಚನವೂ ಕೂಡ ಹಿಂದಿನ ವಚನದಂತೆಯೇ  ಸ್ವ-ರೂಪದ ಅರಿವಿನೆಡೆಗೆ ಒಯ್ಯುತ್ತದೆ.

2 comments:

  1. very good work by editors who are publishing this.. this really helps in bringing Modesty to present social life

    ReplyDelete
  2. very nice vachana...thnx to the uploader...

    ReplyDelete