Thursday, August 19, 2010

Vachana 1

Here is the first Vachna for your reading pleasure. Hope it makes sense. Feel free to add comments, so we can improve it. Hopefully, I will complete the next Vachana by next week and post it!!

Vachana in Kannada

ಕಳಬೇಡ, ಕೊಲಬೇಡ,
ಹುಸಿಯ ನುಡಿಯಲು ಬೇಡ,
ಮುನಿಯ ಬೇಡ,
ಅನ್ಯರಿಗೆ ಅಸಹ್ಯಪಡಬೇಡ.
ತನ್ನ ಬಣ್ಣಿಸಬೇಡ,
ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ!
ಇದೇ ಬಹಿರಂಗಶುದ್ಧಿ!
ಇದೆ ನಮ್ಮ ಕೂಡಲಸಂಗನನೊಲಿಸುವ ಪರಿ.

Transliteration:
kaLabEDa kolabEDa,
husiya nuDiyalu bEDa,
muniya bEDa,
anyarige asahyapaDabEDa.
tanna baNNisabEDa,
idira haLiyalu bEDa.
idE aMtaraMgaSuddhi!
idE bahiraMgaSuddhi!
ide namma kUDalasaMgananolisuva pari.

Click to hear it:
http://www.raaga.com/player4/?id=168659&mode=100&rand=0.5422748223199323

Translation:
Do not Steal, Do not kill
Do not speak a Lie
Do not be Angry with any one
Do not feel Disgust for others (Do not scorn any one)
Do not indulge in Self praise (Do not glorify yourself)
Do not Humiliate any one (Do not blame anyone)
This is your Inward Purity
This is your outward Purity
This is the way to win the Lord Kudala Sangama!


Commentary:
This is probably the most popular of Basavanna's Vachanas. The seven don’ts highlighted in first six lines are often referred to as 'Seven Commandments' of Veerashivism. These commandments guide us towards achieving a scrupulously austere life. The Vachana stresses the rightness of the Body (Kaaya), the Speech (Vaacha) and the Self (Mind - Manas). The first two commandments of the Vachana referring to theft and murder, represent the acts of the body. The next two, lying and anger are acts of speech. Disgust, Self Praise and Humiliating are acts of the mind. One can easily argue that the mind actually triggers the speech and the body when the any of the acts above are performed by us. As such, cultivating our mind is of prime importance. Cultivating the body and the speech are first steps in cultivating the mind. The Vachana gives a small list of Don'ts. If we are habitual doers of any of these seven acts and ponder over the consequences, it is easy to realize how much it contributes to the misery of ourselves and those around us.

The inward purity refers to the cleansing of what is 'within' namely the Self (the mind). The outward purity refers to cleansing that which is external - the body and the surrounding environment. Total purity thus constitutes purification of the internal and the external. It is said that we are just sparks of the supreme power (the Lord) and our eventual goal is to be one with Him. The Vachana stipulates that total purity is the only way to reach the Lord.

Very often religious tenets turn into dry rites and rituals, though they were intended to purify us from within and without, thereby rendering us to receive the divine grace. As time passes by, the true spirit of the Faith is forgotten and rites and rituals become predominant. Perhaps the health of the body that harbors the spirit and the health of the spirit that enlivens the body have little to do with these rites and rituals. Shiva Sharanas have emphasized the consecration of the individual's body as the temple of all gifts conferred by the creator, while protesting against the routine practice of rites and rituals. Thus, the purity of the body and the purity of the self are of phenomenal importance, to learn, experience, achieve and realize anything and everything.

Seemingly very simple, this vachana addresses the complexity of the mind. There is violence in us. Most often we are not even aware of it. Even when we become aware of it, we would not know how to deal with it. How does one end it? What does it takes to end it? We will have to go to the root cause of it. At the root we may find intolerance, disgust, hatred jealousy or ego. Why are we intolerable……? No matter how sophisticated we are, these are part of all of us. Are these the results of our conditioning? When we watch them carefully we may notice how subtly they are woven in to our day today behavior. They are so disguised in our behavior, we may think others don’t notice them. To be aware of all this, we need to be completely attentive to our self all the time. Such awareness seems almost impossible since we slip in to inattentiveness very quickly and a lot of energy is needed to get back to be attentive. Thus, practicing the simple tenets of this vachana is a way to self realization.

Kannada Commentary

ಇದು ಬಸವಣ್ಣನವರ ಅತ್ಯಂತ ಜನಪ್ರಿಯವಾದ ವಚನ. ಯಾವುದೇ ಕಠಿಣ ಪದವಿಲ್ಲದೆ ಸುಲಭವಾಗಿ ಅರ್ಥವಾಗುವ  ವಚನ ಎಂದು ತೋರುತ್ತದೆ. ಆದರೆ ಇದರ ಅರ್ಥ ಬಹಳ ಗಹನವಾದದ್ದು. ದೇವರನ್ನು ಅರಿಯಲು ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯ ಅವಶ್ಯಕತೆ ಮತ್ತು ಅದನ್ನು ಸಾಧಿಸುಅವ ಸುಲಭೋಪಾಯವನ್ನು ಅವರು ಇಲ್ಲಿ ಹೇಳುತ್ತಿದ್ದಾರೆ.
 
ಹೃದಯದಲ್ಲಿ ಕಳ್ಳತನ, ಸುಳ್ಳುತನ, ಕೋಪ, ದ್ವೇಷ, ಅಹಂಕಾರ, ದುರಹಂಕಾರಗಳು ಮನೆ ಮಾಡಿದಾಗ ಅಂತರಂಗ ಹೇಗೆ ಶುದ್ಧವಿರಲು ಸಾಧ್ಯ? ಅಂತರಂಗ ಶುದ್ಧವಾಗದೆ ಬಹಿರಂಗ ಶುದ್ಧವಿದ್ದರೆ ಏನು ಫಲ? ಅದು ಶರಣರೇ ಹೇಳುವಂತೆ ಚಿನ್ನದ ಮಡಕೆಯಲ್ಲಿ ಮದ್ಯವನ್ನಿಟ್ಟಂತೆ. ಆದ್ದರಿಂದ ಅಂತರಂಗ ಶುದ್ಧಿ ಬಹು ಮುಖ್ಯವಾದದ್ದು.
ಕೋಪಗೊಳ್ಳುವುದು, ಅಹಂಕಾರ ತೋರುವುದು, ಸುಳ್ಳು ಹೇಳುವುದು, ತನ್ನನ್ನು ತಾನು ಹೊಗಳಿಕೊಳ್ಳುವುದು, ಇನ್ನೊಬ್ಬರನ್ನು ಕೀಳಾಗಿ ಮಾತಾಡಿಸುವುದು ಇವು ಎಲ್ಲರಲ್ಲಿಯೂ ಇರುವಂತಹ ಗುಣಗಳು. ಇವುಗಳು ನಮ್ಮಲ್ಲಿ ಇಲ್ಲ ಎಂದುಕೊಂಡರೂ,ಇವು ಯಾವಾಗಲೂ ತೋರಿ ಬರದೆ ಇದ್ದರೂ, ನಮ್ಮನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮಲ್ಲಿ ಗುಣಗಳು ಕಂಡು ಬರುತ್ತವೆ, ಇವುಗಳನ್ನು ಕಳೆದುಕೊಳ್ಳಬೇಕಾದದ್ದು ಬಹು ಮುಖ್ಯ. ಆದ್ದರಿಂದ ಬಸವಣ್ಣನವರುಈ ವಚನ  ಹೇಳುತ್ತಿರುವುದು ನ್ಯಾಯವೆಂದು ತೋರುತ್ತದೆ.
ಆದರೆ, ಕಳಬೇಡ ಕೊಲಬೇಡ ಎಂದು ಅವರು ಹೇಳುತ್ತಿರುವುದು ಯಾರನ್ನು ಕುರಿತು? ಎಂಬ ಪ್ರಶ್ನೆ ಹುಟ್ಟುತ್ತದೆ. ನಾವೇನು ಕದಿಯುತ್ತೇವೆಯೆ? ಕೊಲೆಗೈಯುತ್ತೇವೆಯೆ?  ಅಂತಹ ಕೆಟ್ಟ ಕೆಲಸಗಳನ್ನು ಮಾಡುತ್ತೇವೆಯೆ? ಎಲ್ಲಿಯೋ ಕೆಲವರು ಹಾಗೆ ಮಾಡಬಹುದು. ಸ್ಥೂಲವಾಗಿ ನೋಡಿದಾಗ ನಾವು ಹಾಗೆ ಮಾಡುವುದಿಲ್ಲವೆನ್ನಿಸಬಹುದು. ಆಗ ನಾವು, ಕಳ್ಳತನ ವೆಂದರೆ ಇತರರ ವಸ್ತುಗಳನ್ನು ಕದಿಯುವುದು ಮಾತ್ರ ಕಳ್ಳತನವೆ?, ಇತರರನ್ನು ದೈಹಿಕವಾಗಿ ಕೊಲ್ಲುವುದು ಮಾತ್ರ ಕೊಲೆಗಡುಕುತನವೆ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ.
ನಾವು ಇತರರಿಂದ ವಿಷಯಗಳನ್ನು ಬಚ್ಚಿಡುವುದೂ ಕಳ್ಳತನವೇ ಅಲ್ಲವೆ? ತನ್ನ ಯಾವುದೋ ಒಂದು ಕೆಟ್ಟ ಸ್ವಭಾವವನ್ನು ಬಚ್ಚಿಟ್ಟು ಸಭ್ಯನಾಗಿ ವರ್ತಿಸುವುದೂ ಕಳ್ಳತನವೇ ಅಲ್ಲವೆ? ಅಥವಾ, ಮಾನಸಿಕವಾಗಿ ಇತರರನ್ನು ಹಿಂಸೆಮಾಡುವುದು ಕೂಡ ಕೊಲೆಗಡುಕುತನವಲ್ಲವೇ?  ಇವುಗಳ ಉತ್ತರ ಹೌದು ಎಂದಾಗುತ್ತದೆ. ಹಾಗಾದರೆ ನಿಜವಾಗಿಯೂ ಹೀಗೆಲ್ಲ ಮಾಡದೆ ಇರಲು ಸಾಧ್ಯವೆ? ಏಕೆಂದರೆ ಮೇಲೆ ಬಸವಣ್ಣನವರು ಹೇಳಿರುವ  ಎಲ್ಲ ಗುಣಗಳು ನಮ್ಮಲ್ಲಿ ಎಷ್ಟು ಹಾಸು ಹೊಕ್ಕಾಗಿ ಬೇರು ಬಿಟ್ಟಿವೆ ಎಂದರೆ ಅವುಗಳನ್ನು ಕಿತ್ತೊಗೆಯುವುದು ಅಸಾಧ್ಯವಾಗಿ ತೋರುತ್ತದೆ.
ಎಲ್ಲಗುಣಗಳಿಗೆ ಮೂಲ ಅಹಂಕಾರ. ಅಹಂಕಾರವೆಂದರೆ ನಾನು ಎನ್ನುವ ಭಾವ. ಅದು ನಾನು ಇತರರಿಂದ ಬೇರೆ  ಎನ್ನುವ ಭಾವ.  ನಾನು ಎಲ್ಲರಿಗಿಂತ ಬೇರೆ ಎನ್ನುವ ಭಾವವೇ ಮೇಲೆ ಬಸವಣ್ಣನವರು ಹೇಳುವ ಗುಣಗಳಿಗೆ ಮೂಲ ಕಾರಣ. ಬೇರೆಯವರಿಂದ ಕದಿಯುವ, ಬೇರೆಯವರನ್ನು ಹಿಂಸಿಸುವ, ಅವರಿಗೆ ಸುಳ್ಳು ಹೇಳುವ ಮತ್ತು ಎಲ್ಲಗುಣಗಳಿಗೆ ಮೂಲ ನಾನು
 ನಾನು ಇತರರಿಂದ ಬೇರೆ ಅಲ್ಲ, ಎಂಬ ಭಾವ ಪೂರ್ತಿಯಾಗಿ ಅಳವಟ್ಟಾಗ ಗುಣಗಳಿಗೆ ಅವಕಾಶವೇ ಇರುವುದಿಲ್ಲ.ಏಕೆಂದರೆ ಎಲ್ಲವೂ ನಾನೇ ಆಗಿರುವಾಗ ಯಾರಿಗೆ ಸುಳ್ಳು ಹೇಳುವುದು? ಯಾರನ್ನು ಕೊಲ್ಲುವುದು? ಅಂದರೆ ಅದು ಅಂತರಂಗ ಶುದ್ದವಾದುದರ ಕುರುಹು. ಅಂದರೆ ಅಲ್ಲಿ ದೇವರಲ್ಲದೆ ಬೇರೆ ಯಾವುದಕ್ಕೂ ಸ್ಥಳವಿಲ್ಲ, ’ನಾನು  ನೀನು  ಯವುದೂ ಇಲ್ಲ ಎಂದಾಯಿತು. ಅಂದರೆ ಮೂಲತಃ ವಚನದ ಅರ್ಥ ನಾನು, ನನ್ನ ಎಂಬ ಭಾವವನ್ನು ಬಿಟ್ಟುಕೊಡಬೇಕೆಂಬುವುದೇ ಆಗಿದೆ.
 
 

2 comments:

  1. This is the basic principle of our dharma. And I sincerely thank all the persons involved in this project of Vachanas and translating them which is tough. And I would like if you guys post more and more vachanas weekly so that everyone who visits this blog will understand the meaning of living a true Sharana's Life...

    ReplyDelete
  2. Great one buddy. Thanks. I was looking for transalation and you have done great job.
    Again Thanks.

    ReplyDelete