Sunday, September 19, 2010

VACHANA 5: Kaageyondagula Kandare

VACHANA

ಕಾಗೆಯಂದಗುಳ ಕಂಡರೆ

ಕರೆಯದೇ ತನ್ನ ಬಳಗವನ್ನು ?

ಕೋಳಿಯೊಂದು ಕುಟುಕ ಕಂಡರೆ

ಕೂಗಿ ಕರೆಯದೇ ತನ್ನ ಕುಲವೆಲ್ಲವನ್ನು ?

ಶಿವಭಕ್ತನಾಗಿ ಭಕ್ತಿ-ಪಕ್ಷವಿಲ್ಲದಿದ್ದರೆ

ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವ.

TRANSLITERATION

kAgeyaMdaguLa kaMDare


kareyadE tanna baLagavannu ?

kOLiyoMdu kuTuka kaMDare

kUgi kareyadE tanna kulavellavannu ?

SivaBaktanAgi Bakti-pakShavilladiddare

kAge kOLiyiMda karakaShTa kUDalasaMgamadEva.


CLICK HERE TO HEAR IT:


http://www.youtube.com/watch?v=CWq--CkonHc

TRANSLATION

When a crow sees a crumb,

does it not call its flock to share?

When a hen finds a morsel,

does it not call its brood to share?

If one is a devotee of Shiva, but has not cultivated a family of Lord's devotees,

one is worse than a hen or a crow,

Oh! Lord Kudala Sangama!

COMMENTARY

In this Vachana, Basavanna emphasizes that it is not enough if one is focused on one's individual success; such success should be shared to multiply it and contribute to a harmonious, glorious society. The harmony and interdependence among individuals is the basis for a great society. In fact, in all species of animal kingdom we see harmony and interdependence. The crow and the hen used as examples represent the animal kingdom, which share even simple findings of crumbs and morsels.
In all religions, the reformers who appeared to instruct mankind about the highest aspirations of life indicated that the greatest enemy of spiritual achievement (self realization) is selfishness. Acting and living merely for one’s own sake has resulted in human beings to behave ruthlessly with fellow human beings. In animals, although selfishness is a natural function due to the instincts of feeding and reproduction, it never crosses the limit to become a psychic perversion. In human beings, the over-identification with the body and other belongings makes one believe that one exists only for oneself (ego). The ego in general prompts the thoughts and actions of individuals. It keeps on building stronger boundaries around itself and weakens the soul. Further, the ego prevents the soul from communicating harmoniously with another soul.

Basavanna advocated two aspects as musts for daily living: 'Kayaka' and 'Dasoha'. Kayaka is our work (duty). It must be done with utmost sincerity. Sincere work creates heaven here (Kayakave Kailasa – Work is heaven). Dasoha is service to community. This is the selfless act expected of us, and sharing of our success with the fellow beings.

We normally think in terms of Career, Family and Community. Success in career is a must for our well being. As such, we try to put all our efforts to achieve it. Family is our immediate community with which we generally share our success. For most of us, the development stops there. It should not be the case. We must strive to share our success with the community at large, at least after the career and family needs are satisfied.


ಈ ವಚನದಲ್ಲಿ ಬಸವಣ್ಣನವರು, ಸಾಮಾನ್ಯ ಹಕ್ಕಿಗಳಾದ ಕಾಗೆ ಮತ್ತು ಕೋಳಿಗಳ ಉದಾಹರಣೆಯೊಂದಿಗೆ ಶಿವಾನುಭವದಲ್ಲಿ ಮುಂದುವರೆಯುವ ಬಗೆಯನ್ನು ಹೇಳುತ್ತಾರೆ. ಕಾಗೆಯು  ಆಹಾರದ ಒಂದು ಅಗುಳನ್ನು ಕಂಡರೂ “ಕಾ ಕಾ” ಎಂದು ಕೂಗಿ  ಅದನ್ನು ಹಂಚಿಕೊಳ್ಳಲು ತನ್ನ ಬಳಗವನ್ನೆಲ್ಲ ಕರೆಯುವುದು.  ಹಾಗೆಯೇ ಕೋಳಿಯೂ ಕೂಡ  ಒಂದು ಕುಟುಕನ್ನು ಕಂಡರೆ ಸಾಕು ತನ್ನವರನ್ನೆಲ್ಲ ಕೂಗಿ ಕರೆಯುವುದು. ಈ ಹಂಚಿ ತಿನ್ನುವ ಗುಣವು ಅವುಗಳ ರಕ್ತದಲ್ಲಿಯೇ ಇರುವಂತೆ ತೋರುತ್ತದೆ. ಈ ಗುಣವು ಭಕ್ತಿಯ (ತನ್ನನ್ನು ತಾನು ಅರಿಯುವ) ಹಾದಿಯಲ್ಲಿ ಸಾಗುತ್ತಿರುವ ಯಾರಿಗೇ ಆದರು  ಬಲು ಮುಖ್ಯ ಎನ್ನುತ್ತಾರೆ ಬಸವಣ್ಣನವರು. ಈ ದಾರಿಯಲ್ಲಿ ಉಂಟಾಗುವ  ಗೊಂದಲಗಳನ್ನು, ಸಮಸ್ಯೆಗಳನ್ನು, ಭಕ್ತಿ ಪಕ್ಷದವರೊಂದಿಗೆ ಎಂದರೆ ಸಮಾನ ಮನದವರಲ್ಲಿ ( ಏಕೆಂದರೆ ಇತರರು ಆತನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗಿರುತ್ತಾರೆ.) ಹಂಚಿಕೊಳ್ಳುವುದರಿಂದ, ಪರಿಹಾರಉಂಟಾಗಿ  ಲಾಭವಾಗುತ್ತದೆ. ಇಲ್ಲದಿದ್ದಲ್ಲಿ  ಈ ದಾರಿಯ ಪಥಿಕನು ಗೊಂದಲಗಳ, ಸಮಸ್ಯೆಗಳ ಸುಳಿಯಲ್ಲಿಯೇ ಮುಳುಗುವ ಸಂಭವ ಇರುತ್ತದೆ. ಆತನು ಮುಂದುವರೆಯುವುದು ಕಷ್ಟಕರವಾಗುತ್ತದೆ. ಇದಕ್ಕೆ ಇರುವ ಪರಿಹಾರವೆಂದರೆ ಇದೇ ದಾರಿಯಲ್ಲಿ ಹೋಗುತ್ತಿರುವ ಇತರರೊಂದಿಗೆ ತನ್ನದನ್ನು ಹಂಚಿಕೊಳ್ಳುವುದು. ಈ ಹಂಚಿಕೊಳ್ಳುವಿಕೆಯು ಇಬ್ಬರಿಗೂ ಲಾಭದಾಯಕವೇ. ಆಹಾರದಿಂದ ದೇಹವು ಪುಷ್ಟಿಗೊಳ್ಳುವಂತೆ ಈ ಹಂಚಿಕೊಳ್ಳುವಿಕೆಯು ಭಕ್ತನ ಭಕ್ತಿಯನ್ನು  ಪುಷ್ಟಿಗೊಳಿಸುತ್ತದೆ. ಈ ರೀತಿಯ ಹಂಚಿಕೊಳ್ಳುವಿಕೆಯಿಲ್ಲದಿದ್ದಲ್ಲಿ ತನ್ನತಾನರಿಯುವ ಹಾದಿಯಲ್ಲಿ ಸಾಗುತ್ತಿರುವವನಿಗೆ ಕಡು ಕಷ್ಟವಾಗುತ್ತದೆ. ಏಕೆಂದರೆ ಆತನು ಈಗಾಗಲೆ ಅದರ ಮಹತ್ವವನ್ನಿರಿತವನಾಗಿರುತ್ತಾನೆ. ಅದರಲ್ಲಿಯೇ ಸಾಗುವ ಆಂತರಿಕ ಹಂಬಲವಿರುತ್ತದೆ. ಆದರೆ ಅದಕ್ಕೆ  ಅಪಾರ ಶಕ್ತಿ ಬೇಕು. ಉದಾಹರಣೆಗೆ: ಸರಳತನದ ಜೀವನ. ಭಕ್ತನಾದವನು ಸರಳತನದ ಜೀವನವನ್ನು ನಡೆಸುತ್ತ ಸ್ವಾಧ್ಯಯನದಲ್ಲಿ ನಿರತನಾಗಬೇಕು. ಇದಕ್ಕೆ ಪ್ರಬಲವಾದ ಆತ್ಮಶಕ್ತಿ ಬೇಕು.   ಇದು ಸಮಾನ ಮನೋಧರ್ಮದವರೊಂದಿಗಿನ ಒಡನಾಟ. ಅವರೊಂದಿಗೆ ಚಿಂತನ ಮಥನದಿಂದ ಪ್ರಾಪ್ತವಾಗುತ್ತದೆ. ಇದಕ್ಕೆ ವಿರುದ್ಧವಾದ ವಾತಾವರಣದಲ್ಲಿ  ಆತನ ಜೀವನ ಅರಳುವುದೇ ಇಲ್ಲ.ಹೆಜ್ಜೆ ಹೆಜ್ಜೆಗೂ ಅಡ್ಡಿಯುಂಟಾಗುತ್ತದೆ. ಅದಕ್ಕಾಗಿಯೇ ಸಜ್ಜನರ ಸಂಗಕ್ಕೆ ಮಹತ್ವ ಕೊಡುತ್ತಾರೆ ಬಸವಣ್ಣನವರು. ಸಜ್ಜನರೆಂದರೆ ಕೇವಲ ಸಮಾಜದ ದೃಷ್ಟಿಯಲ್ಲಿ ಒಳ್ಳೆಯ ನಡತೆಯುಳ್ಳವರಲ್ಲ. ಆತ್ಮೋನ್ನತಿಯ ದಾರಿಯಲ್ಲಿ ಸಾಗುವವರೇ ಸಜ್ಜನರು. ಇಂತಹವರ ಒಡನಾಟದಿಂದಲೇ ನಿಜವಾದ ಲಾಭ. ಇದರಿಂದ ವಂಚಿತನಾದವನು ಅಪಾರ ಹಾನಿಯನ್ನನುಭವಿಸುತ್ತಾನೆ. ಆತನು ತನಗೆ  ಇದಿರಾಗುವ ಅನೇಕ ಗೊಂದಲ ಮತ್ತು ಸಮಸ್ಯೆಗಳನ್ನು   ಪರಿಹರಿಸಿಕೊಳ್ಳುವ ಮಾರ್ಗ ತಿಳಿಯದೆ ತೊಳಲುತ್ತಾನೆ. ತಾನು ಆರಿಸಿಕೊಂಡ ದಾರಿಯೇ ಸರಿಯಾದದ್ದು ಎಂಬ ಆಳವಾದ ಅರಿವಿರುವುದರಿಂದ  ಆತನು ಅದನ್ನು ತೊರೆಯಲಾರ, ಅದಕ್ಕಾಗಿಯೇ ಬಸವಣ್ಣನವರು ಇನ್ನೊಂದು ಕಡೆ “ಭಕ್ತಿಯೆಂಬುದ ಮಾಡಬಾರದು, ಕರಗಸದಂತೆ ಹೋಗುತ್ತ ಕೊಯ್ವುದು ಬರುತ್ತ ಕೊಯ್ವುದು” ಎಂದು ಹೇಳುತ್ತಾರೆ.  ಆತನ ಸ್ಥಿತಿ ಆಹಾರಕ್ಕಾಗಿ ಪರದಾಡುವ  ಕಾಗೆ ಮತ್ತು ಕೋಳಿಗಳಿಗಿಂತಲೂ ಹೀನವಾಗುತ್ತದೆ.   ಈ ಹಂಚಿಕೊಳ್ಳುವ  ಗುಣ ಕೇವಲ ವೈಯಕ್ತಿಕ ಲಾಭವನ್ನುಂಟು ಮಾಡದೆ ಆತನು ಆತ್ಮಜ್ಞಾನವನ್ನು ಪಡೆಯುವಂತೆ ಮಾಡಿ ಇಡೀ ವಿಶ್ವಕ್ಕೇ ಅಪಾರವಾದ ಕೊಡುಗೆಯಾಗುತ್ತದೆ.  ಸಾಮಾನ್ಯವಾದ ಉದಾಹರಣೆಯೊಂದಿಗೆ ಇಂತಹ ಉದಾತ್ತವಾದ ವಿಚಾರವನ್ನು ಸ್ಪಷ್ಟಗೊಳಿಸುವ ವಿಶೇಷತೆ ಬಸವಣ್ಣನವರದು.







1 comment:

  1. In today's life if we see a beggar staring at what we eat, we hide the food and eat or we throw that food down thinking that the beggar had seen this. But instead if we share a small piece of that food with that beggar it is enough...

    ReplyDelete