Friday, October 25, 2013

Vachana 165: Honna Bitte, Henna Bitte, Manna Bitte – Renounced Wealth, Women and Land


VACHANA IN KANNADA

ಹೊನ್ನ ಬಿಟ್ಟೆ, ಮಣ್ಣ ಬಿಟ್ಟೆ, ಹೆಣ್ಣ ಬಿಟ್ಟೆ ಎಂದು ಜಗದ ಕಣ್ಣ ಕಟ್ಟಿ
ಮೆರೆವ ಕಣ್ಣ ಬೇನೆಯ ಅಣ್ಣಗಳು ನೀವು ಕೇಳಿ ಭೋ!
ಮಾತಿನಲ್ಲಿ ಬಿಟ್ಟಿರೋ? ಮನದಲ್ಲಿ ಬಿಟ್ಟಿರೋ?
ಈ ನೀತಿಯ ಹೇಳಿರಿ ಎನಗೊಮ್ಮೆ, ತನು ಮನದ ಮದ್ಯದಲ್ಲಿ  ಇವರ ನೆನೆಹು ಕೆಟ್ಟು
ಲಿಂಗದ ನೆನೆಹಿನ ಆಯತವೇ ಸ್ವಾಯತವಾಗಿ ಇರಬಲ್ಲರೆ ಇವ ಬಿಟ್ಟರೆಂದೆಂಬೆನಯ್ಯ,
ಮಾತಿನಲ್ಲಿ ಬಿಟ್ಟು ಮನದಲ್ಲಿ ಉಳ್ಳರೆ,  ಭವದಲ್ಲಿ ತಂದು ಇವ ಕಚ್ಚಿಸಿದಲ್ಲದೆ ಮಾಣವು ಕಾಣಿರಯ್ಯ
ಹಿಡಿದು ಸಂಸಾರಿಗಳಲ್ಲ,  ಬಿಟ್ಟು ನಿಸ್ಸಂಸಾರಿಗಳಲ್ಲ, ಎರಡೂ ಅಲ್ಲದ  ಎಟುವರನು ಏನೆಂಬೆನಯ್ಯ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ

TRANSLITERATION

honna biTTe, henna biTTe, manna biTTe eMdu jagada  kaNNa kaTTi
mereva kaNNa bEneya  aNNagaLu nIvu kELi bhO!
maatinalli biTTirO? manadalli biTTirO?
I nItiya hELiri enagomme, tanu manada madhyadalli ivara nenehu keTTu
liMgada nenehina aayatavE svaayatavaagi iraballare iva bittavereMdeMbenayya,
maatinalli biTTu, manadalli uLLare bhavadalli taMdu iva  kaccisidallade maaNavu kaaNirayya.
hiDidu saMsaarigaLalla, biTTu nissaMsaarigaLallla.  eraDU allada eTuvaranu EneMbenayya
mahaaliMgagauru shivasiddhEshvara prabhuve.

CLICK HERE FOR A RECITATION

TRANSLATION (WORDS)
honna biTTe, ( I have renounced the attachment to gold)  henna biTTe, (I have renounced the attachment to woman) manna biTTe (I have renounced the attachment to land) eMdu  (saying) jagada (of the world)  kaNNa kaTTi  (blinding people from truth)
mereva (showing off)  aNNagaLu  (oh! brothers) nIvu kELi bhO! (you please listen)
maatinalli biTTirO?  (have  you renounced in words?) manadalli biTTirO? (have you renounced in minds?)
I nItiya (this moral) hELiri (tell)  enagomme (me once) , tanu  (body)  manada  (mind)  madhyadalli (inside)  ivara nenehu keTTu (memory of these desires, ceased)
liMgada (God’s icon)  nenehina (memory) aayatavE (icon)  svaayatavaagi ( filled the heart)  iraballare (if lives on)  iva bittavereMdeMbenayya,(then I will say/ convinced  that they are truly renounced)
maatinalli biTTu (renounced in words) , manadalli uLLare  (thinking about them in mind) bhavadalli (in this  material world) taMdu  (bring you back) iva  (these desires)  kaccisidallade maaNavu (they surely will sting you) kaaNirayya  (you see).
hiDidu saMsaarigaLalla (neither have you embraced the world) , biTTu nissaMsaarigaLallla  (nor have you renounced it).  eraDU allada eTuvaranu EneMbenayya (what do I call  these senseless people)
mahaaliMgagauru shivasiddhEshvara prabhuve. (Mahalingaguru Shivasiddheshvaraprabhuve)

VACHANA IN ENGLISH

Oh! Brothers, if you are saying that “I renounced gold, I renounced Women, I renounced land”, blinding people of this world from the truth and showing off, please listen!
Have you renounced in speech? Have you renounced in mind? Please tell me!
If the memory of these desires has completely ceased in mind and body, and the memory of God’s icon completely fills the heart and lives on, then I am convinced that you are truly renounced!
Just renouncing in speech and thinking about them in mind, brings you back into this material world and these desires will surely sting you, you see Sir!
Neither you have embraced the world, nor you have renounced it! What do I call such senseless people,  Oh! Mahalingaguru Shivasiddheshvaraprabhu?

  
COMMENTARY
In this Vachana, Thontada Soddalinga Swamigalu comments on the state of people who have not completely realized the Divine, but pretend to have by claiming that they have renounced all the worldly desires and belongings. Gold (indicative of wealth), women (the other sex – men for women, women for men) and land (indicative of all other possessions) cover all worldly aspects that we strive for, collect and make ourselves feel accomplished. Relinquishing the desires for these is considered appropriate step in the spiritual path of reaching Him. But, just claiming that these desires have been renounced, yet longing for them internally, is just showing off to the world and indeed blinding the people around. True renunciation is when even the smallest trace of these desires vanishes from the mind and body, and the soul is completely set on the image of the Divine within. Anything short of that will simply bring one back into this mundane world and all these desires attack back with their multiplied vigor. Such individuals are neither here in the mundane world, nor there with the Divine.
The Vachana stresses the importance of external and internal purity and maturity in thoughts, speech and action. Just  showing off externally through the speech is not enough, the mind and body should completely be pure and cultured from within, to be truly being with the Divine. Purity of the soul and BEING with the Divine is our natural state. This state has been altered by the worldly desires i.e. by our DOING. It is time to regain our natural state of permanent bliss.

Let us BE and not just DO!

 KANNADA COMMENTARY      
ಅರ್ಥ:
ಹೊನ್ನ ಬಿಟ್ಟೆ,  (ಹೊನ್ನಿನ ಆಸೆಯನ್ನು ಬಿಟ್ಟಿಬಿಟ್ಟಿದ್ದೇನೆ)  ಮಣ್ಣ ಬಿಟ್ಟೆ, (ಮಣ್ಣಿನ ಆಸೆಯನ್ನು ಬಿಟ್ಟಿದ್ದೇನೆ)  ಹೆಣ್ಣ ಬಿಟ್ಟೆ  (ಹೆಣ್ಣಿನ ಆಸೆಯನ್ನು ಬಿಟ್ಟಿದ್ದೇನೆ) ಎಂದು ಜಗದ ಕಣ್ಣ ಕಟ್ಟಿ (ಎಂದು ಹೇಳುತ್ತ ಜಗತ್ತಿಗೆ ಮೋಸ ಮಾಡಿ)
ಮೆರೆವ ಕಣ್ಣ ಬೇನೆಯ ಅಣ್ಣಗಳು ನೀವು ಕೇಳಿ ಭೋ! (ಜಂಬದಿಂದ ತಿರುಗಾಡುವ ಅಣ್ಣಗಳೇ ನೀವು ಕೇಳಿರಿ)
ಮಾತಿನಲ್ಲಿ ಬಿಟ್ಟಿರೋ, ಮನದಲ್ಲಿ ಬಿಟ್ಟಿರೋ? (ಇವುಗಳನ್ನೆಲ್ಲ ನೀವು ಕೇವಲ ಮಾತುಗಳಲ್ಲಿ ಬಿಟ್ಟಿರುವಿರೊ? ಅಥವಾ ಮನದಲ್ಲಿಯೂ ನೆನೆಯದೆ ಬಿಟ್ಟಿರುವಿರೋ?)
ಈ ನೀತಿಯ ಹೇಳಿರಿ ಎನಗೊಮ್ಮೆ, (ನಿಮ್ಮ ನೀತಿಯಾವುದು ನನಗೆ ಒಮ್ಮೆ ಹೇಳಿರಿ)  ತನು ಮನದ ಮದ್ಯದಲ್ಲಿ  ಇವರ ನೆನೆಹು ಕೆಟ್ಟು (ದೇಹದಲ್ಲಿ ಮತ್ತು ಮನಸ್ಸಿನಲ್ಲಿ ಇವುಗಳ ನೆನೆಹು ನಿಂತುಹೋಗಿ)
ಲಿಂಗದ ನೆನೆಹಿನ ಆಯತವೇ ಸ್ವಾಯತವಾಗಿ ಇರಬಲ್ಲರೆ ಇವ ಬಿಟ್ಟರೆಂದೆಂಬೆನಯ್ಯ, (ಲಿಂಗದ ನೆನಹು ಪೂರ್ತಿಯಾಗಿ ನಿಮ್ಮಲ್ಲಿ ನೆಲೆಗೊಂಡಿದ್ದರೆ, ಇಷ್ಟ ಲಿಂಗವು ಪ್ರಾಣಲಿಂಗವಾಗಿ ಬಿಟ್ಟರೆ  ನೀವು ಎಲ್ಲವನ್ನು ಬಿಟ್ಟಿರುವಿರಿ ಎಂದು ನಾನು ನಂಬುವೆ)
ಮಾತಿನಲ್ಲಿ ಬಿಟ್ಟು ಮನದಲ್ಲಿ ಉಳ್ಳರೆ,( ಕೇವಲ ಮಾತುಗಳಲ್ಲಿ ಇವನ್ನು ಬಿಟ್ಟು, ಮನದಲ್ಲಿ ಅವುಗಳ ನೆನೆಹು ಇನ್ನೂ ಇದ್ದ ಪಕ್ಷದಲ್ಲಿ)  ಭವದಲ್ಲಿ ತಂದು ಇವ ಕಚ್ಚಿಸಿದಲ್ಲದೆ ಮಾಣವು ಕಾಣಿರಯ್ಯ (ಈ ಭವದಲ್ಲಿ ಇರುವವರೆಗೂ ಅವು ಬಂದು ನಿಮ್ಮನ್ನು ಕಚ್ಚದೆ ಬಿಡವು)
ಹಿಡಿದು ಸಂಸಾರಿಗಳಲ್ಲ,  (ಇತ್ತ ಎಲ್ಲವನ್ನೂ ಹಿಡಿದು ಸಂಸಾರಿಗಳು ಆಗಲಿಲ್ಲ)  ಬಿಟ್ಟು ನಿಸ್ಸಂಸಾರಿಗಳಲ್ಲ, (ಎಲ್ಲವನ್ನೂ ಬಿಟ್ಟು ಸಂಸಾರವನ್ನು ತೊರೆದವರೂ ಅಲ್ಲ)  ಎರಡೂ ಅಲ್ಲದ  ಎಟುವರನು ಏನೆಂಬೆನಯ್ಯ? (ಒಂದನ್ನೂ ಸಾಧಿಸದ  ಮೂಢನನ್ನು ಎನೆಂದು ಕರೆಯಲಿ)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ
ತಾತ್ಪರ್ಯ:
ಅನೇಕರು  ತಾವು ಸಂಸಾರವನ್ನು ಬಿಟ್ಟಿದ್ದೇವೆ ಅಥವಾ ಹೊನ್ನು, ಹೆಣ್ಣು ಮತ್ತು ಮಣ್ಣಿನ ಮೋಹ ತಮಗೆ ಇಲ್ಲವೆಂದು ಹೇಳುತ್ತ ಮೆರೆಯುತ್ತಾರೆ. ಅಂತಹವರನ್ನು  ಕುರಿತು ತೋಂಟದ ಸಿದ್ಧಲಿಂಗರು ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ.
ಹೊನ್ನು, ಹೆಣ್ಣು, ಮಣ್ಣುಗಳನ್ನು ಬಿಟ್ಟಿದ್ದೇವೆ ಎಂದು ಹೇಳುವ ನೀವು ಅವುಗಳನ್ನು ಬರಿ ಬಾಯಿ ಮಾತಿನಲ್ಲಿ ಬಿಟ್ಟಿರುವಿರೋ ಇಲ್ಲವೆ ಅವುಗಳನ್ನು ಮನಸಾ ಕಾಯಾ ಬಿಟ್ಟಿರುವಿರೋ? ನೀವು ಇವುಗಳಲ್ಲಿ ಯಾವ ನೀತಿಯನ್ನು ಆರಿಸಿಕೊಂಡಿದ್ದೀರಿ? ತನು ಮನದಲ್ಲಿ  ಅವನ್ನು ತ್ಯಜಿಸಿದ್ದರೆ, ನಿಮ್ಮ ಮನದಲ್ಲಿ ಅದು ನೆಲೆಯನ್ನು ಕಳೆದುಕೊಂಡು ಆ ಸ್ಥಳದಲ್ಲಿ ಲಿಂಗವು ತಾನೇ ತಾನಾಗಿದ್ದರೆ ಆಗ ನಿಮ್ಮ ಮಾತು ನಂಬ ಬಹುದು. ಆದರೆ ಹೊನ್ನು, ಹೆಣ್ಣು, ಮಣ್ಣುಗಳನ್ನು ಮಾತಿನಲ್ಲಿ ಬಿಟ್ಟು ಮನದಲ್ಲಿ ಇನ್ನೂ ನೆನೆಯುತ್ತಲೇ ಇದ್ದರೆ  ನಿಮ್ಮ ಕಪಟ ಒಂದಿಲ್ಲ ಒಂದು ದಿನ ಹೊರಬರುವುದು. ಆ ಹೊನ್ನು, ಹೆಣ್ಣು, ಮಣ್ಣುಗಳ ಗುಪ್ತ ಆಸೆ ನಿಮ್ಮನ್ನು ಕಚ್ಚದೆ ಬಿಡದು. ಅಂದರೆ ನೀವು ಅವುಗಳ ಆಕ್ರಮಣಕ್ಕೆ ಒಳಗಾಗುವಿರಿ. ಆಗ ನೀವು ಅವುಗಳ ಆಸೆಯನ್ನು ಬಿಡದೆ ಸಂಸಾರಿಗಳೂ ಆಗುವುದಿಲ್ಲ, ಅವುಗಳನ್ನು ತೊರೆದು ಭವದಿಂದ‘ ದೂರ ಸರಿದವರೂ ಆಗುವುದಿಲ್ಲ. ಈ ಎರಡೂ ಅಲ್ಲದ ನಮ್ಮಂತಹ ಮೂಢರನ್ನು ಏನೆಂದು ಕರೆಯಬಹುದು? ಎಂದು  ಕೇಳುತ್ತಾರೆ.
ಒಟ್ಟಿನಲ್ಲಿ ಬಾಯಿಮಾತಿನಲ್ಲಿ ಅವುಗಳನ್ನು ಬಿಟ್ಟೆ ಎಂದು ಹೇಳುವುದು ಬಹು ಸುಲಭ. ಆದರೆ ಮನಸಾ ಕಾಯಾ ಅವನ್ನು ಬಿಡುವುದು  ಮಾತಿನಲ್ಲಿ ಹೇಳುವುದರಷ್ಟು ಸರಳವಲ್ಲ. ಬದುಕಿನಲ್ಲಿ ತೋರಿಕೆಯ ನಡತೆಗೂ ಮನದಾಳದಲ್ಲಿ ನಡೆಯುವುದಕ್ಕೂ ಬಹು ಅಂತರವಿರುತ್ತದೆ. ಶರಣರ ಬದುಕು ಒಳಗೂ ಹೊರಗೂ ಒಂದೇ ರೀತಿಯಾಗಿರಬೇಕು. ಮೇಲೊಂದು ಒಳಗೊಂದು ರೀತಿಯಾಗಿ ಬದುಕುವವನು ಶರಣನಾಗಲಾರ. ಮೇಲೆ ಮಾತ್ರ ಶರಣರ ಲಾಂಛನ ಧರಿಸಿ ತಾನು ಹೊನ್ನು, ಹೆಣ್ಣು, ಮಣ್ಣು ಬಿಟ್ಟಿದ್ದ್ದೇನೆ ಎಂದು ಮಾತಿನಲ್ಲಿ ಹೇಳುವವನು ಕಪಟಿಯಾಗುತ್ತಾನೆ. 
ಮನ ಮತ್ತು ತನುವಿನಲ್ಲಿ ಈ ಆಸೆಗಳನ್ನು ಬಿಟ್ಟು ಅಥವಾ ಆ ಆಸೆಗಳಿಗೆ ಸ್ಥಾನವೇ ಇಲ್ಲವಾಗಿ ಆ ಸ್ಥಾನವನ್ನು ಲಿಂಗವೇ ಆವರಿಸಿಕೊಂಡಾಗ ಆತ ಶರಣನಾಗುತ್ತಾನೆ. ಹಾಗಾಗಿದ್ದರೆ ಆತನನ್ನು ಸಿದ್ಧಲಿಂಗರು ಭಕ್ತನೆಂದು ಒಪ್ಪಿಕೊಳ್ಳುತ್ತಾರೆ. ಹಾಗಲ್ಲದವರು ಇತ್ತ ಸಂಸಾರಿಗಳೂ ಅಲ್ಲ ಅತ್ತ ಸಂಸಾರವನ್ನು ತೊರೆದವರೂ ಅಲ್ಲದ ಬುದ್ಧಿಗೇಡಿಗಳು ಎಂದು ಹೇಳುತ್ತಾರೆ.




Friday, October 18, 2013

Vachana 164: Aruhina Jyoti Eddittu – The Awareness Emanated!


 
VACHANA IN KANNADA

ಅರುಹಿನ ಜ್ಯೋತಿ ಎದ್ದಿತ್ತು, ಶರೀರವನ್ನೆಲ್ಲ ತುಂಬಿತ್ತು,
ಮರವೆಯ ತಮ ಹರಿಯಿತ್ತು, ಕರಣಂಗಳ ತುಂಡಿಸಿತ್ತು,
ವಿಷಯಂಗಳ ಶಿರವನು ಹರಿಯಿತ್ತು,ದಶೇಂದ್ರಿಯಗಳ ದಾಳಿಯ ನಿಲಿಸಿತ್ತು,
ಪಂಚಮಹಾಭೂತಗಳ ಪ್ರಪಂಚವ ಪರಿಹರಿಸಿತ್ತು,
ಬ್ರಹ್ಮವೇ ತಾನೆಂಬ ಕುರುಹವ ಮೈಗಾಣಿಸಿತ್ತು, 
ತಾನೆಂಬ ಕುರುಹನಳಿದ ಅವಿರಳ ಸಹಜನು ಭಕ್ತನು ನೋಡಾ ಮಹಾಲಿಂಗಗುರು ಶಿವ ಸಿದ್ಧೇಶ್ವರಪ್ರಭುವೆ.

TRANSLITERATION
aruhina jyOti eddittu, sharIravannella tuMbittu,
maraveya tama hariyittu, karaNaMgaLa  tuMDisittu,
viShayaMgaLa shiravanu hariyittu, dashEMdriyagaLa daaLiya nilisittu,
paMcamahaabhUtagaLa  prapaMcava pariharisittu
brahmavE taaneMba kuruhava maigaaNisittu,
taaneMba kuruhanaLida  aviraLa sahajanu bhaktanu nODaa mahaaliMga guru shiva siddhEshvaraprabhuve.
CLICK HERE FOR A RECITATION

TRANSLATION (WORDS)
aruhina  (of awareness) jyOti  (the light)  eddittu  (emanated) , sharIravannella ( the whole body) tuMbittu (filled),
maraveya (of  ignorance)   tama (darkness)  hariyittu ( got torn,  disappeared), karaNaMgaLa  (the causative factors)  tuMDisittu  ( cut into pieces),
viShayaMgaLa (of worldly pleasure) shiravanu (the head) hariyittu ( torn, disappeared), dashEMdriyagaLa  (all the ten sense organs)  daaLiya ( the attack of) nilisittu (stopped),
paMcamahaabhUtagaLa  (of five gross elements’) prapaMcava (the world)  pariharisittu  (solved)
brahmavE (Brahma himself)  taaneMba (I am) kuruhava  (symbol) maigaaNisittu (was made to understand),
taaneMba ( I ness) kuruhanaLida  (completely disappeared) aviraLa (rare)  sahajanu (individual)  bhaktanu nODaa (devotee you see) mahaaliMga guru shiva siddhEshvaraprabhuve. (Mahalingaguru Shiva siddheshvaraprabhuve)

VACHANA IN ENGLISH
The light of awareness emanated, filled the whole body,
The darkness of ignorance disappeared, the causative factors cut into pieces,
The head of the worldly pleasures torn,
The attack of the ten sense organs stopped,
The world of five gross elements resolved,
The fact that ‘Brahma is myself’  driven home,
The I-ness completely disappeared.
Such rare individual is the true devotee, you see Mahalingaguru Shiva Siddheshvaraprabhu.

COMMENTARY
In this Vachana, Thontada Siddalinga Swamigalu describes what happens when the awareness strikes   to make the individual into a true devotee (self-realized).
The awareness emanated and drenched the whole person, meaning that the awareness is complete and permanent. This removed the darkness of ignorance. Due to this awareness the causative factors of the creation are of no consequence. We have described the two prime causative factors of creation (purusha, the creator and the male form and prakriti, the illusion and the female form) in our earlier posts. The other causative factors are the five sense organs (gyanendriyas - eyes to see, ears to listen, nose to smell, tongue to taste, skin to feel), the five organs of action (karmendriyas - mouth to speak, hands to work, feet to walk, anus to excrete waste and sexual organs to reproduce) and the mind (manas). The first two together are the ten organs termed dashendriya.  When individual’s awareness sets in, the influence of all these organs is of no consequence. He/she will have utilized them appropriately and not over indulged in any. The pleasures and the sorrow of the mundane world do not sway him/her.   The fact that the individual and the creator are one and the same becomes obvious. The individual and the creator are one consciousness (Brahman). Then how does this conscious energy put on the appearance of material solidity.  In order to bridge the gulf between consciousness and apparently durable matter, ancient Indian sages postulated (or “divined”) that all physical things are constituted of five subtle elements  called Pancha-Mahabhutas – earth, fire, water, air, ether.  These are not the elements known in the conventional sense (e.g. “water” does not imply the water, and “earth” does not mean soil) but are actually subtle conditions which together create the perception of forms which can be sensed by the human mind.  The actual names of these five elements are Akasha (ether), Vayu (aeriality), Agni(fire), Apas(liquidity) and Prithvi(compaction). A true devotee realizes the constitution of this consciousness and completely gives up the ‘I-ness’. When one reaches that stage, he/she is the true self-realized, and a true devotee.

The Vachana is urging us to develop the keen awareness needed to realize that we belong to that single consciousness, be neither sense- starved  nor sense-obsessed, remove the duality of you and I, learn to be not swayed by the ups and downs of the world we must be part of and let our ego go away!
Let us be the consciousness!

 KANNADA COMMENTARY
ಅರ್ಥ:
ಅರುಹಿನ ಜ್ಯೋತಿ ಎದ್ದಿತ್ತು, (ಅರಿವಿನ ಬೆಳಕು  ಹುಟ್ಟಿತು) ಶರೀರವನ್ನೆಲ್ಲ ತುಂಬಿತ್ತು, (ದೇಹದಲ್ಲೆಲ್ಲ ತುಂಬಿಕೊಂಡಿತು)
ಮರವೆಯ ತಮ ಹರಿಯಿತ್ತು,( ಮರೆವು ಎಂಬ ಕತ್ತಲೆ ದೂರವಾಯಿತು)  ಕರಣಂಗಳ ತುಂಡಿಸಿತ್ತು,(ಜ್ಞಾನೇಂದ್ರಿಯಗಳನ್ನು ತುಂಡು ಮಾಡಿತ್ತು)
ವಿಷಯಂಗಳ ಶಿರವನು ಹರಿಯಿತ್ತು, (ಬಯಕೆಯ ವಸ್ತುಗಳನ್ನೇ ಹರಿಯಿತು) ದಶೇಂದ್ರಿಯಗಳ ದಾಳಿಯ ನಿಲಿಸಿತ್ತು, (ಹತ್ತು ಇಂದ್ರಿಯಗಳ ಆಕ್ರಮಣವನ್ನು ನಿಲಿಸಿತ್ತು)
ಪಂಚಮಹಾಭೂತಗಳ ಪ್ರಪಂಚವ ಪರಿಹರಿಸಿತ್ತು, (ಪಂಚಮಹಾಭೂತಗಳಿಂದ  ಉಂಟಾದ ಈ ಪ್ರಪಂಚದ  ಅರಿವಾಯಿತು)
ಬ್ರಹ್ಮವೇ ತಾನೆಂಬ ಕುರುಹವ ಮೈಗಾಣಿಸಿತ್ತು,  (ತಾನು ಆ ಬ್ರಹ್ಮನ ಕುರುಹು ಎಂಬುದು ತಿಳಿಯಿತು)
ತಾನೆಂಬ ಕುರುಹನಳಿದ ಅವಿರಳ ಸಹಜನು (ತಾನು ಎಂಬ ಭಾವ ಅಳಿದು ಸಹಜವಾಗಿರುವವನು)  ಭಕ್ತನು ನೋಡಾ (ನಿಜವಾದ ಭಕ್ತನು) ಮಹಾಲಿಂಗಗುರು ಶಿವ ಸಿದ್ಧೇಶ್ವರಪ್ರಭುವೆ.

ತಾತ್ಪರ್ಯ:
ಅರಿವು ಹುಟ್ಟಿದಾಗ ಏನೇನಾಯಿತು ಎಂಬುದರ ವಿವಿರಣೆ ಕೊಡುತ್ತಾರೆ ತೋಂಟದ ಸಿದ್ಧಲಿಂಗ ಸ್ವಾಮಿಗಳು.
ಅರಿವಿನ ಜ್ಯೋತಿ ಹುಟ್ಟಿ ಮೈಯೆಲ್ಲ ಪಸರಿಸಿದಾಗ  ಮರೆವು ಎಂಬ ಕತ್ತಲೆ ಇಲ್ಲವಾಯಿತು. ಆ ಬೆಳಕಿನ ಪ್ರಭಾವದಿಂದ ಮರೆವು ಎಂಬುದು ಹೇಳ ಹೆಸರಿಲ್ಲದೆ ಹೋಯಿತು. ಸಾಮಾನ್ಯವಾಗಿ ಅರಿವು ಮಿಂಚಿನಂತೆ ಹೊಳೆದು ಮಾಯವಾಗುತ್ತದೆ ಮತ್ತು ಮರೆವು ಮತ್ತೆ ಆವರಿಸಿಕೊಂಡು ಬಿಡುತ್ತದೆ, ಆದರೆ ಇಲ್ಲಿ ಅರಿವಿನ ಜ್ಯೋತಿ ಮೈಮನದಲ್ಲಿ ಚೆನಾಗಿ ತುಂಬಿಕೊಂಡದ್ದರಿಂದ ಮರೆವಿಗೆ ಅಲ್ಲಿ ಸ್ಥಾನವೇ ಇಲ್ಲವಾಯಿತು. ಜ್ಞಾನೇಂದ್ರಿಯಗಳು ಮರೆವಿಗೊಳಗಾಗಿ  ಕಾರ್ಯಮಾಡುವ ಶಕ್ತಿ ಕಳೆದುಕೊಂಡು ಬಿಟ್ಟವು.
ಜ್ಞಾನೇಂದ್ರಿಯಗಳು ಎಂದರೆ ಶಬ್ದ, ಸ್ಪರ್ಶ, ರಸ, ರೂಪ, ಗಂಧಗಳ ಜ್ಞಾನವನ್ನುಂಟುಮಾಡುವ ಇಂದ್ರಿಯಗಳು. ಈ ಇಂದ್ರಿಯಗಳು ಕೆಲಸಮಾಡುವುದೇ ತಾವು ಹಿಂದೆ ಗಳಿಸಿದ ಅನುಭವದ ನೆನಪಿನ ಆಧಾರದ ಮೇಲೆ. ತಾನು ಅನುಭವಿಸುವಪ್ರತಿಯೊಂದನ್ನು ತನ್ನ ಹಿಂದಿನ ಅನುಭವಕ್ಕೆ ಹೋಲಿಸಿ ಅದು ಚೆನ್ನ, ಕೆಟ್ಟ ಎಂಬಂತಹ ಹಣೆಪಟ್ಟಿ ಕಟ್ಟುವ  ಆತುರ ಅವಕ್ಕೆ. ಆ ಅನುಭವದ ನೆನಪನ್ನು ಅರಿವು ತುಂಡರಿಸಿಬಿಟ್ಟಿತು. ಅಂದರೆ ಈಗ ಪ್ರತಿ ಅನುಭವವೂ ಹೊಚ್ಚಹೊಸದಾಗಿ,   ಕೆಟ್ಟ, ಚೆನ್ನ ಎಂಬಂತಹ ಭಾವ ತೋರುವುದಿಲ್ಲ.
ಇನ್ನೂಮುಂದೆ ಹೋಗಿ,  ಆ ಅರಿವು, ಅನುಭವ ಉಂಟುಮಾಡುವ ವಸ್ತುಗಳ ಶಿರವನ್ನೇ ಹರಿದು ಬಿಟ್ಟಿತು.ಅಂದರೆ ವಸ್ತುಗಳು ನಮಗೆ  ಸುಖ ಕೊಡುವುದಿಲ್ಲ. ನಾವು ನಮ್ಮ ಅನುಭವ ಮತ್ತು ನೆನಪಿನ ಆಧಾರದ ಮೇಲೆ ವಸ್ತುಗಳಿಂದ ಸುಖ ಅಥವಾ ದುಃಖ ಪಡೆಯುತ್ತೇವೆ. ಅರಿವಿನ ಉದಯದಿಂದ ವಿಷಯ ವಸ್ತುಗಳೇ ಇಲ್ಲದಂತಾಯಿತು. ಇಂದ್ರಿಯಗಳು ಮನಸ್ಸನ್ನು ಆಕ್ರಮಿಸುವುದು ನಿಂತು ಹೋಯಿತು.
ಪಂಚಮಹಾಭೂತಗಳಿಂದ ಉಂಟಾದ ಈ ಪ್ರಪಂಚದ ನಿಜವಾದ ರೂಪ ತಿಳಿಯಿತು. ತಾನು ಬ್ರಹ್ಮನ ಕುರುಹು ಎಂಬುದು ಮನವರಿಕೆಯಾಯಿತು. ಭಕ್ತನಲ್ಲಿ ತಾನು ಬ್ರಹ್ಮನ ಕುರುಹು ಎಂಬ ಭಾವ ಸಂದಿಲ್ಲದೆ ತುಂಬಿಕೊಂಡಿತು.ತಾನು ಬೇರೆ ಎಂಬ ಭಾವ ಇಲ್ಲವಾಯಿತು. ಎಲ್ಲವೂ ಬ್ರಹ್ಮಮಯವಾಯಿತು. ಪ್ರಪಂಚ, ವಿಷಯ ವಸ್ತುಗಳು ಮತ್ತು ಇಂದ್ರಿಯಗಳು ಹೊರಿಸಿದ ಎಲ್ಲ ಭಾವಗಳು ಕೊನೆಗೊಂಡು ತಾನು ಸಹಜವಾಗಿ ಇದ್ದಾನೆ ಭಕ್ತನು.

Friday, October 11, 2013

Vachana 163: Aj~jaanaveMba kattale – The darkness called ignorance


VACHANA IN KANNADA

ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ
ಅಂಧಕಾರದ ಗುಹೆಯೊಳಗಿದ್ದವರಂತೆ ಇದ್ದರಯ್ಯ ಜೀವರೆಲ್ಲ
ಹೊಲಬುದಪ್ಪಿ ತಿಳಿವಿಲ್ಲದೆ ಕಳವಳಗೊಳ್ಳುತ್ತಿದ್ದರಯ್ಯ ಅಡವಿಯ ಹೊಕ್ಕ ಶಿಶುವಿನಂತೆ
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ ನಿಮ್ಮ ಕರುಣವಾಗದನ್ನಕ್ಕ ಬಳಲುತ್ತಿದ್ದರಯ್ಯ  ಹೊಲಬನರಿಯದೆ.

TRANSLITERATION

aj~jaanaveMba kattale aavarisittaya  jagavellava
aMdhakaarada guheyoLagiddavaraMte iddarayya jIvarella
holabugdappi tiLivillade kaLavaLagoLLutiddarayya aDaviya hokka shishuvinamte
nijaguru svataMtra siddhaliMgaEshvaraa nimma karuNavaagadannakka baLaluttiddarayya holabaariyade.

CLICK HERE FOR A RECITATION


TRANSLATION (WORDS)

aj~jaanaveMba  kattale  (the darkness called ignorance) aavarisittaya (has covered)  jagavellava (the entire world)
aMdhakaarada guheyoLagiddavaraMte (as though living in  the cave of darkness ) iddarayya (are living) jIvarella  (all beings)
holabugdappi  (lost the way) tiLivillade (not knowing)  kaLavaLagoLLutiddarayya (are worried)  aDaviya (forest) hokka  (entered) shishuvinamte (like a baby)
nijaguru svataMtra siddhaliMgaEshvaraa  (Nijaguru Svatatantra  Siddhalingeshvara) nimma (your) karuNavaagadannakka   (until  your blessing)  baLaluttiddarayya (are getting exausted)  holabaariyade (not knowing the way  out)

VACHANA IN ENGLISH

The darkness called ignorance has covered the entire world, Sir!
All beings are there as though living in the cave of darkness, Sir!
Have lost the way, not knowing and are worried, like a child entering a forest!
Nijaguru Svatantra Siddalingesvara, they are exhausted not knowing the way out, until your blessing comes through!

COMMENTARY

This Vachana from Thontada Siddalinga Sharanaru depicts the state of ignorance one lives in until the awareness and blessings of the Divine   set in.
The darkness called ignorance has covered the entire world. People are living in this cave of darkness. Caves are typically dark. But, the cave referred to here is the cave of darkness, meaning that the ignorance has completely taken the individual over. The individual has lost the way, is worried just like a child entering a dense forest. This state of ignorance, tiredness and exhaustion continues unless His blessing comes through and the awareness sets in.
The mundane world has given us all the comforts we sought. We are immersed in this world believing that this is the ultimate. We enjoy our successes. We forget that the failure shadows success, and the happiness and sorrow are the two faces of the coin. We enjoy successes. We go down to dumps when failure hits. The key to take success and failure with equal stride is a keen understanding and awareness of what is most important in life. His blessing comes through when we start questioning our state of living and develop the awareness of what is permanent and what is not, and strive towards the bliss that is within us, i.e.  the realization of the Self.

Let us move past the mundane, to the divine!

KANNADA COMMENTARY

ಅರ್ಥ:


ಅಜ್ಞಾನವೆಂಬ  ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ  (ಅಜ್ಞಾನವೆಂಬ ಕತ್ತಲೆ ಈ ಜಗವನ್ನು ಪೂರ್ತಿಯಾಗಿ ಆವರಿಸಿದೆ)
ಅಂಧಕಾರದ (ಕತ್ತಲೆಯ)  ಗುಹೆಯೊಳಗಿದ್ದವರಂತೆ ಇದ್ದರಯ್ಯ ಜೀವರೆಲ್ಲ (ಜೀವರು ಗುಹೆಯಲ್ಲಿದ್ದಾರೆ)
ಹೊಲಬುದಪ್ಪಿ (ದಾರಿ ತಪ್ಪಿ)  ತಿಳಿವಿಲ್ಲದೆ (ತಿಳಿವಳಿಕೆ ಇಲ್ಲದೆ) ಕಳವಳಗೊಳ್ಳುತ್ತಿದ್ದರಯ್ಯ (ಚಿಂತಿಸುತ್ತಿದ್ದಾರೆ)  ಅಡವಿಯ ಹೊಕ್ಕ ಶಿಶುವಿನಂತೆ  (ಅಡವಿಯೊಅಳ್ಗೆ ಹೋಗಿ  ಸಿಕ್ಕಿಕೊಂಡ  ಮಗಿವಿನಂತೆ)
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ ನಿಮ್ಮ ಕರುಣವಾಗದನ್ನಕ್ಕ (ನಿಮ್ಮ ಕರುಣೆಯಿಲ್ಲದೆ)  ಬಳಲುತ್ತಿದ್ದರಯ್ಯ (ಆಯಾಸಗೊಳ್ಳುತ್ತಿದ್ದಾರೆ)  ಹೊಲಬನರಿಯದೆ (ದಾರಿಯನ್ನು ತಿಳಿಯದೆ).

ತಾತ್ಪರ್ಯ:


ಇದು ತೋಂಟದ ಸಿದ್ಧಲಿಂಗರ ವಚನ. ಇಲ್ಲಿ ಈ ಸಂಸಾರದಲ್ಲಿ ನರಳುವವರು ಹೇಗೆ ಮತ್ತು ಏಕೆ ಕೋಟಲೆಗೊಳಗಾಗಿದ್ದಾರೆ ಎಂಬುದನ್ನು ಹೇಳುತ್ತಿದ್ದಾರೆ. 

ಈ ಜಗದ ಜನರಿಗೆ ಅಜ್ಞಾನವೆಂಬ ಕತ್ತಲೆ ಆವರಿಸಿದೆ. ಆ ಅಜ್ಞಾನ ಕತ್ತಲೆಯ  ಗುಹೆಯಲ್ಲಿರುವ ಕತ್ತಲೆಯಂತೆ ಗಾಢವಾಗಿದೆ ಎಂದು ಹೇಳುತ್ತಾರೆ. ಗುಹೆಯಲ್ಲಿ ಮೊದಲೇ ಕತ್ತಲೆ ಇರುತ್ತದೆ. ಅದು ಸಾಮಾನ್ಯ ಗುಹೆಯಲ್ಲ, ಕತ್ತಲೆಯ ಗುಹೆಯಾಗಿರುವಾಗ ಅಲ್ಲಿ ಎಂತಹ ಗಾಢವಾದ ಕತ್ತಲೆಯಿರಬಹುದು? ಕೇವಲ ಕತ್ತಲೆಯೇ ತುಂಬಿರುವ ಗುಹೆಯಲ್ಲಿ ಜೀವರು  ದಾರಿ ತಪ್ಪಿ ಎತ್ತ ಹೋಗುವುದು ಎಂಬ ತಿಳಿವಳಿಕೆಯಿಲ್ಲದೆ ಚಿಂತೆಗೆ ಒಳಗಾಗಿದ್ದಾರೆ.  ಅವರ ಸ್ಥಿತಿ  ಶಿಶುವು ಹೇಗೋ ಅಡವಿಯನ್ನು ಹೊಕ್ಕು ದಾರಿ ತಿಳಿಯದೆ ಏನೂ ಮಾಡಲರಿಯದೆ ಚಿಂತಿಸುತ್ತಿರುವಂತಿದೆ ಎನ್ನುತ್ತಾರೆ. ದೇವರ ಕರುಣೆ ಈ ಜೀವರಿಗೆ ಉಂಟಾಗುವವರೆಗೂ ಅವರು ಇದೇ ಸ್ಥಿತಿಯಲ್ಲಿರುತ್ತಾರೆ ಎನ್ನುತ್ತಾರೆ. 

ಜೀವರು ತಮ್ಮದೇ ಆದ ಬೇಕು ಬೇಡಗಳ ಪಾಶಗಳಲ್ಲಿ ಸಿಕ್ಕು ತೊಳಲಾಡುತ್ತಿದ್ದಾರೆ. ತಾನೇ ನಿರ್ಮಿಸಿಕೊಂಡ ಆಶೆಗಳ ಅಡವಿಯಲ್ಲಿ, ಕತ್ತಲೆಯ ಗುಹೆಯಲ್ಲಿ ಸಿಕ್ಕು  ಒದ್ದಾಡುತ್ತಿದ್ದಾರೆ. ಆ ಗುಹೆಯಲ್ಲಿ ಕತ್ತಲೆ ತುಂಬಿರುವ ಕಾರಣ ಹೊರಬರಲು ದಾರಿ ಕಾಣುತ್ತಿಲ್ಲ. ಆ ಕತ್ತಲೆ ಅಜ್ಞಾನದ ಕತ್ತಲೆ. ಆ ಕತ್ತಲೆ ದೇವರ ಕರುಣೆಯಿಲ್ಲದೆ ದೂರಾಗಲಾರದು. ದೇವರ ಕರುಣೆಯಾಗುವವರೆಗೂ ಜೀವನು ಹಾಗೇ ಇರುತ್ತಾನೆ.  
ದೇವರ ಕರುಣೆಯಾಗುವವರೆಗೂ ಅಂದರೆ ಏನು ಅರ್ಥ?  
ಜೀವನು ಯಾವಾಗ , ತಾನು,  ಎಲ್ಲಿ, ಏಕೆ ಮತ್ತು ಹೇಗೆ ಸಿಕ್ಕಿಕೊಂಡುದ್ದೇನೆ ಎಂಬುದನ್ನು ಅರಿತಾಗ ಆ ಕರುಣೆಯುಂಟಾಗುವ ಸಾಧ್ಯತೆಯಿರುತ್ತದೆ. ಅದೇ ದೇವರ ಕರುಣೆ ಅಥವಾ ಬೆಳಕು. ಆ ಜ್ಞಾನದ ಬೆಳಕಿನಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ. ಅಲ್ಲಿಯವರೆಗು ಕಾಯಬೇಕು. 



Friday, October 4, 2013

Vachana 162: Meruva Saarida Kaage - The crow that climbed the Golden mountain


VACHANA IN KANNADA

ಮೇರುವ ಸಾರಿದ ಕಾಗೆ ಹೊಂಬಣ್ಣ ವಾಗದಿದ್ದಡೆ
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ?
ದೇವಾ ನಿಮ್ಮ ಪೂಜಿಸಿ ಧಾವತಿಗೊಂಬಡೆ
ಆ ಧಾವತಿಯಿಂದ ಮುನ್ನಿನ ವಿಧಿ(ಯೇ) ಸಾಲದೆ?
ಗುಹೇಶ್ವರಾ ನಿಮ್ಮ ಪೂಜಿಸಿ ಸಾವಡೆ
ನಿಮ್ಮಿಂದ ಹೊರಗಣ ಜವನೇ ಸಾಲದೆ?

TRANSLITERATION

mEruva saarida kaage hoMbaNNavaagadiddaDE
A mEruviniMdattaNa hulumoraDiye saalade?
dEvaa nimma poojisi dhaavatigoMbaDe
aa dhaavatiyiMda munnina vidhiyE saalade?
guhEshvaraa nimmapoojisi saavaDe
nimmiMda horagaNa javanE saalade?

CLICK HERE FOR A RECITATION
 
http://youtu.be/3FrExH1Kd3A

 TRANSLATION (WORDS)

mEruva  (Meru is  the name of a  golden mountain) saarida (scaled)  kaage (crow) hoMbaNNavaagadiddaDE (if does not become golden)
A mEruviniMdattaNa  (from that golden mountain)  hulumoraDiye saalade? (isn’t a prairie good  enough)
dEvaa (God)  nimma poojisi  (after worshipping you) dhaavatigoMbaDe  (if one gets exhausted)
aa dhaavatiyiMda (than that exhaustion)  munnina (earlier)  vidhiyE (state) saalade? ( isn’t good enough?)
guhEshvaraa  (Guheshvara)  nimmapoojisi  (by worshiping you)  saavaDe (if one  dies)
nimmiMda  (than you)  horagaNa (outside)  javanE  (mortal life)    saalade? (isn’t good enough?)

 VACHANA IN ENGLISH

If the crow does not become golden after scaling Meru (the golden mountain),
Isn’t the prairie next to the golden mountain good enough?
Oh God! If after worshipping you one gets exhausted,
The state earlier isn’t good enough than that exhaustion?
Guhesvara! If one dies even after worshipping you,
Isn’t the mortal life outside than you, good enough?

 COMMENTARY

We make elaborate efforts to achieve great things. We spend money, time and other resources to reach the top. Allama Prabhu questions “ if after all those efforts and spending of resources, if one does not achieve what was to be achieved, is it not better to be where one was?”
Meru is a hypothetical golden mountain. It requires great effort to scale it. Only the strongest and firm willed can scale it. The one who scales it turns golden, as the legend has it. The crow is naturally dark. It makes every effort to reach the top of the golden mountain; yet, it does not become golden. If that is the case, is it not better for it to stay in the prairie where it was?

If the result of worshipping God is just exhaustion, what good is it? Is it not better to be in the state one was rather than spending all the efforts to worship?
If one dies, even after worshipping Guhesvara, is it not better to stay in the mortal world where one was before?

Allama Prabhu is not advocating giving up and not trying to scale to the top. He is advocating internalizing what one sets out to do and be one hundred percent in it. Only then, it is worthwhile to embark on the journey to the top.
Ritualistic moves of worshipping God does not take one to God. They only result in exhaustion.

"If one dies even after worshipping Guhesvara" means that one should conquer death by worshipping Guhesvara, the God. But, one cannot escape from physical death. Worshipping thus implies understanding one's self and staying above the spiral of birth and death. This requires an understanding of how one has become the slave of senses, how to get out of their influences and achieve equanimity. Once this achieved, the ups and downs of mortal world do not matter. That is the freedom from death. Worshipping Guhesvara (God) is being an ardent devotee and a serious traveler making the spiritual journey to reach Him and to realize the Self. Only when self-realization sets in, one achieves the state of supreme bliss, the non-death! A self-realized individual does not face the mortal death. He is above the life and death, and up and down spirals.   That should be the goal for scaling the golden mountain – to become golden within!

Let us devote ourselves to reach that golden mountain top within us!
 KANNADA COMMENTARY
ಅರ್ಥ:
ಮೇರುವ ಸಾರಿದ (ಮೇರು ಎಂಬ ಚಿನ್ನದ ಬೆಟ್ಟಕ್ಕೆ ಹೋದ)  ಕಾಗೆ ಹೊಂಬಣ್ಣ ವಾಗದಿದ್ದಡೆ  (ಕಾಗೆ ಚಿನ್ನದ ಬಣ್ಣವನ್ನು ಪಡೆಯದಿದ್ದರೆ)
ಆ ಮೇರುವಿಂದತ್ತಣ  (ಆ ಚಿನ್ನದ  ಬೆಟ್ಟಕ್ಕಿಂತ )  ಹುಲುಮೊರಡಿಯೆ ಸಾಲದೆ? (ಹುಲ್ಲಿಗಾವಲೇ ಸಾಕು ಅಲ್ಲವೆ?)
ದೇವಾ ನಿಮ್ಮ ಪೂಜಿಸಿ ಧಾವತಿಗೊಂಬಡೆ (ದೇವರನ್ನು ಪೂಜಿಸಿ ಶ್ರಮ, ದಣಿವು ಆಗುವ ಹಾಗಿದ್ದರೆ)
ಆ ಧಾವತಿಯಿಂದ ಮುನ್ನಿನ ವಿಧಿ(ಯೇ) ಸಾಲದೆ? (ಆ ಶ್ರಮಕ್ಕಿಂತ ಮುಂಚೆ ಇದ್ದ ಹಾಗಿರುವುದೇ ಸಾಕಲ್ಲವೆ?)
ಗುಹೇಶ್ವರಾ ನಿಮ್ಮ ಪೂಜಿಸಿ ಸಾವಡೆ (ಗುಹೇಶ್ವರನನ್ನು ಪೂಜಿಸಿಯೂ  ಸಾವಿಗೆ ತುತ್ತಾಗುವ  ಹಾಗಿದ್ದರೆ)
ನಿಮ್ಮಿಂದ ಹೊರಗಣ ಜವನೇ ಸಾಲದೆ?  (ಗುಹೇಶ್ವರನಿಗಿಂತ ಹೊರಗಣ ಮರ್ತ್ಯಜೀವನ ಸಾಕಲ್ಲವೆ?)

 ತಾತ್ಪರ್ಯ:
ಇಲ್ಲಿ ಅಲ್ಲಮರು  ವಿಶೇಷವಾದದ್ದನ್ನು ಮಾಡಿದಾಗ ವಿಶೇಷ  ಫಲ ಸಿಗದಿದ್ದರೆ ಅದನ್ನು ಏಕೆ ಮಾಡಬೇಕು? ಎಂದು ಕೇಳುತ್ತಾರೆ.
ಮೇರು ಪರ್ವತವು ಚಿನ್ನದ್ದು. ಅಲ್ಲಿಗೆ ಹೋದವರು ಚಿನ್ನದಂತಾಗದಿದ್ದರೆ ಅಲ್ಲಿಗೆ ಹೋಗಿ ಏನು ಪ್ರಯೋಜನವೆನ್ನುತ್ತಾರೆ. ಕಾಗೆಯ ಬಣ್ಣ  ಕಪ್ಪು. ಕಪ್ಪು ಬಣ್ಣದ ಕಾಗೆ ಮೇರು ಪರ್ವತಕ್ಕೆ ಹೋಗಿಯೂ ಕಪ್ಪಾಗಿಯೇ ಉಳಿಯುವಂತಿದ್ದರೆ  ಅಲ್ಲಿಗೆ ಹೋಗಿ ಏನು ಪ್ರಯೋಜನ? ಮೇರು ಪರ್ವತ ಚಿನ್ನದ್ದು ಎನ್ನುವುದೇ ಒಂದು ವಿಶೇಷತೆಯೆ? ಅಲ್ಲಿಗೆ ಹೋದವರಿಗೆ ಅದರ ಗುಣ ಬರದಿದ್ದರೆ ಅಲ್ಲಿಗೆ ಹೋಗುವುದು ವ್ಯರ್ಥ. ಕಾಗೆ  ಅಷ್ಟು ಕಷ್ಟಪಟ್ಟು ಎತ್ತರದಲ್ಲಿರುವ ಮೇರು ಪರ್ವತಕ್ಕೆ ಹೋಗುವ ಬದಲು ಹುಲ್ಲುಮೊರಡಿಯಲ್ಲಿ ಆಡುವುದೇ ಸರಿ. ಹಾಗೆ ಮಾಡುವುದರಿಂದ ಅದು ಏನನ್ನೂ ಕಳೆದುಕೊಳ್ಳುವುದಿಲ್ಲ  ಮತ್ತು ಏನನ್ನೂ ಪಡೆದುಕೊಳ್ಳುವುದಿಲ್ಲ.

ಎಲ್ಲರೂ ದೇವರನ್ನು ಪೂಜಿಸುವುದು  ಮನಃ ಶಾಂತಿಗಾಗಿ. ಆದರೆ ದೇವರನ್ನೂ ಪೂಜಿಸಿ ದಣಿವಾಗುವ ಹಾಗಿದ್ದರೆ  ಆ ಪೂಜೆಯಿಂದ  ಏನು ಪ್ರಯೋಜನ? ಪೂಜಿಸಿ ದಣಿವಿನಿಂದ ಕಷ್ಟಪಡುವುದಕ್ಕಿಂತ ಮುನ್ನಿನ ಹಾಗೇ ಇರುವುದು ಲೇಸಲ್ಲವೆ? ಎಂದು ಕೇಳುತ್ತಾರೆ ಅಲ್ಲಮರು.
ಕೊನೆಗೆ ಅಲ್ಲಮರು, “ಗುಹೇಶ್ವರನನ್ನು ಪೂಜಿಸಿದ ಮೇಲೆಯೂ ಸಾವಿಗೆ ತುತ್ತಾಗುವ ಹಾಗಿದ್ದರೆ  ಅವನನ್ನು ಪೂಜಿಸಿವುದರಿಂದ ವಿಶೇಷ ಲಾಭವೇನು? ಆತನ ಬದಲು ಹೊರಗಿನ  ಮರ್ತ್ಯಜೀವನ ಸಾಕಲ್ಲವೆ?” ಎನ್ನುತ್ತಾರೆ.

ಗುಹೇಶ್ವರನನ್ನು ಪೂಜಿಸಿದರೆ ಸಾವಿಗೆ ತುತ್ತಾಗುವ ಅವಕಾಶವಿರುವುದಿಲ್ಲ. ಅದು ಹೇಗೆ? ಗುಹೇಶ್ವರನನ್ನು ಪೂಜಿಸುವುದು ಎಂದರೆ ತನ್ನನ್ನೇ ತಾನು ಅರಿಯುವುದು. ಅಂದರೆ ತನ್ನ ಮನಸ್ಸು ಹೇಗೆ ವರ್ತಿಸುತ್ತದೆ? ತಾನು ಹೇಗೆ ಅಹಂಕಾರಕ್ಕೆ ತುತ್ತಾಗಿದ್ದೇನೆ? ತಾನು ಹೇಗೆ ಇಂದ್ರಿಯಗಳಿಗೆ ತುತ್ತಾಗಿದ್ದೇನೆ ಎನ್ನುವುದನ್ನು ಅರಿಯುವುದು ಮತ್ತು ಆ ಎಲ್ಲದರಿಂದ ಬಿಡುಗಡೆ ಪಡೆಯುವುದು.  ಅದೇ ಬಿಡುಗಡೆ. ಅದೇ ಸಾವಿಗೆ ತುತ್ತಾಗದಿರುವುದು.  ಗುಹೇಶ್ವರನ ನಿಜವಾದ ಪೂಜೆ ವ್ಯಕ್ತಿಗೆ ಸಾವಿನಿಂದ  ಬಿಡುಗಡೆ ಕೊಡುತ್ತದೆ. ಹಾಗಾಗದಿದ್ದಾಗ ಅಂದರೆ ಸಾವಿನಿಂದ  ಬಿಡುಗಡೆ ಇಲ್ಲದಿದ್ದರೆ ಗುಹೇಶ್ವರನನ್ನು  ಪೂಜಿಸಿ ಫಲವೇನು? ಅದರ ಬದಲು ಸಾಮಾನ್ಯ ಜನರನ್ನೇ ಪೂಜಿಸಬಹುದು.

ಮೇರು ಪರ್ವತವು  ತನ್ನ ಚಿನ್ನದ ಮೈಗೆ ಹೆಸರುವಾಸಿಯಾದದ್ದು. ಆದರೆ ಅಲ್ಲಿಗೆ ಹೋಗುವ ಮಾತ್ರದಿಂದ  ಅದರ ಗುಣ ಯಾರಿಗೂ ಬರಿವುದಿಲ್ಲ. ಅದೇ ರೀತಿ ಯಾಂತ್ರಿಕವಾಗಿ ಗುಹೇಶ್ವರನನ್ನು ಪೂಜಿಸಿದರೆ ಯಾವ ಪ್ರಯೋಜನವೂ ಇಲ್ಲ. ಆತನನ್ನು ಮನಸಾ ಪೂಜಿಸಿದರೆ ಸಾವಿಗೆ ತುತ್ತಾಗುವುದನ್ನು ತಡೆಯಬಹುದು. ಹಾಗಾಗದಿದ್ದರೆ, ಅಂದರೆ ಯಾಂತ್ರಿಕವಾಗಿ ಪೂಜಿಸುವ ಹಾಗಿದ್ದರೆ ಅದಕ್ಕೆ ಗುಹೇಶ್ವರನೇ ಏಕೆ ಬೇಕು? ಯಾರನ್ನೂ ಅಂದರೆ ಸಾಮಾನ್ಯರನ್ನೂ ಪೂಜಿಸಬಹುದು ಎನ್ನುತ್ತಾರೆ ಅಲ್ಲಮರು.

ಜನರು, ಸಾಮಾನ್ಯವಾಗಿ  ಒಳ್ಳೆಯತನಕ್ಕೆ ಹೆಸರುವಾಸಿಯಾದವನ ಹಿಂದೆ ಹೋಗುತ್ತಾರೆ. ಆದರೆ ಅದರಿಂದ ಯಾವ ಲಾಭವೂ ಇಲ್ಲ. ಅವರ ಹತ್ತಿರವಿರುವುದರಿಂದ  ನಮಗೆ  ಅವರ ಗುಣ ಬರುವುದಿಲ್ಲ. ನಮ್ಮ ಒಳಗು ಬದಲಾಗಬೇಕು,  ಎಂಬುದನ್ನು ಸೂಚಿಸುತ್ತದೆ ಈ ವಚನ.