VACHANA IN
KANNADA
ತಾತ್ಪರ್ಯ:
ಹಸಿಯ
ಬಿಸಿಲನೆ ಕೊಯ್ದು ಪದಾರ್ಥವ ಮಾಡಿ
ಉಸಿರ
ಎಸರಲ್ಲಿ ಬಾಗುತ್ತಿಪ್ಪರಯ್ಯಾ,
ಇಕ್ಕಲಿಲ್ಲಾರಿಗೆಯೂ
ಎರೆಯಲಿಲ್ಲಾರಿಗೆಯೂ
ಭಿಕ್ಷಾವೃತ್ತಿಗಳು
ಬಂದು ಬೇಡುತ್ತಿಪ್ಪರಯ್ಯಾ
ನಿಮ್ಮ
ಒಕ್ಕುದ ಮಿಕ್ಕುದ ಉಡಿಯಲ್ಲಿ ಕಟ್ಟಿಕೊಂಡಿಪ್ಪರಯ್ಯಾ
ಗುಹೇಶ್ವರ
ನಿಮ್ಮ ಶರಣರು!
TRANSLITERATION
hasiya
bisilane koydu padaarthava maaDi
usira esaralli
baaguttipparayyaa
ikkalilllaarigeyU ereyalillaarigeyU
bhikShaavRuttigaLu
baMdu bEduttpparayyaa
nimma okkuda
mikkuda uDiyalli kaTTikoMDipparayyaa
guhEshvara
nimma sharaNaru!
CLICK HERE
FOR A RECITATION:
TRANSLATION
(WORDS)
hasiya (Raw)
bisilane (sunshine) (immature knowledge) koydu (cut) (taking
and disciplining it) padaarthava (fit material) maaDi (prepared) (making it ready for the God)
usira
(breath) esaralli (hot water) (stopping from hindrance) ) baaguttipparayyaa (are bowing, Sir)
ikkalilllaarigeyU(didn’t
give it to anybody) ereyalillaarigeyU
(didn’t let it flow anywhere)
bhikShaavRuttigaLu
(begging elements) (the senses) baMdu (having
come) bEduttpparayyaa (are begging, Sir)
nimma (to You)
okkuda (offered) mikkuda (remaining) (that which has been offered) uDiyalli (in
the lap) kaTTikoMDipparayyaa (have carefully kept, Sir)
guhEshvara (Oh! Guheshvara ) nimma (your) sharaNaru! (devotees)
VACHANA IN
ENGLISH
Having cut
the raw Sunshine and prepared the material fit for you,
They are boiling
it in the hot water called breath, and bowing Sir!
Did not give
it to anybody, did not let it flow anywhere,
The begging
elements having come are begging, Sir!
They have
tied the remainder of that which has been offered to you in their lap, Sir!
Oh!
Guhesvara, your devotees!
COMMENTARY
This is another very cryptic Vachana from
Allama Prabhu describing the ways of true devotees who ripen their raw minds
through their intense and unwavering journey through the spiritual path to reach
God. Once reached, they will never leave that abode!
The first
line of the Vachana refers to the immature mind (or knowledge) to raw Sunshine.
The devotee ripens that immature mind and gets it ready to be offered to God,
meaning that he controls the ever wandering mind and makes it suitable for
offering to God. The second line refers
to the devotee stopping all hindrances (boiling in hot water called breath) and
becoming completely God minded and devoting self to knowing and realizing God. The
devotee is now bowing to God with his utmost respect. This offering to God will
come back to him as the blessing or grace (prasaada).
The third
line says that the devotee would not share this prasaada with anyone who is not
God minded enough and this prasaada would not flow to any place that is not the
abode of God. Essentially, the sole focus of the devotee is God and his mind is not shared with any materialistic aspect.
The fourth
line refers to senses as begging elements that forever tempt the individual
into worldly ways. The devotee steers clear of these elements.
The fifth
line says that the devotee holds the prasaada tightly in his lap, meaning that
he cherishes the blessing from Him and holds it close to his heart forever.
The mind of the common man is raw or immature. He cannot distinguish
between the right and the wrong. He typically sways towards immediate
gratification rather than what provides him with the true and permanent bliss.
The ways of true devotees are different from this. They control and sanitize their
mind and fix it in God. Their mind stays with God and nothing else. Once they
offer their mind to God, it becomes his blessing (prasaada). They will not
share it with anyone else, meaning that the mind does not wander from this state
of unity with God. The sense organs cannot tempt them anymore. The devotee
stays in this blissful state forever.
Let us go
past the immediate gratification to the permanent bliss!
COMMENTARY
IN KANNADA
ಅರ್ಥ:
ಹಸಿಯ ಬಿಸಿಲನೆ
(ಅಪಕ್ವವಾದ ಜ್ಞಾನ) ಕೊಯ್ದು
(ತೆಗೆದುಕೊಂಡು,ಸಾಧನೆಗೆ ತೊಡಗಿಸಿ) ಪದಾರ್ಥವ
ಮಾಡಿ ( ಪಕ್ವಮಾಡಿ, ಯೋಗ್ಯವನ್ನಾಗಿ ಮಾಡಿ)
ಉಸಿರ
ಎಸರಲ್ಲಿ (ಉಸಿರೆಂಬ ಬಿಸಿ ನೀರಲ್ಲಿ, ಮನಸ್ಸನ್ನು ನಿರೋಧಿಸಿ) ಬಾಗುತ್ತಿಪ್ಪರಯ್ಯಾ, (ದೇವರಿಗೆ
ನಮಿಸುತ್ತಿರುವರು)
ಇಕ್ಕಲಿಲ್ಲಾರಿಗೆಯೂ
(ಆ ಮನಸ್ಸನ್ನು ಯಾರಿಗೂ ಕೊಡಲಿಲ್ಲ) ಎರೆಯಲಿಲ್ಲಾರಿಗೆಯೂ (ಬೇರೆಲ್ಲಿಗೂ ಹರಿಯಗೊಡಲಿಲ್ಲ)
ಭಿಕ್ಷಾವೃತ್ತಿಗಳು
(ವಿಷಯೇಂದ್ರಿಯಗಳು) ಬಂದು ಬೇಡುತ್ತಿಪ್ಪರಯ್ಯಾ(ಆ ಮನಸ್ಸನ್ನು ತಮ್ಗೆ ಒಡು ಎಂದು ಬೇಡುತ್ತಿವೆ)
ನಿಮ್ಮ
ಒಕ್ಕುದ ಮಿಕ್ಕುದ (ದೇವರಿಗೆ ಅರ್ಪಿತವಾಗಿರುವದನ್ನು) ಉಡಿಯಲ್ಲಿ ಕಟ್ಟಿಕೊಂಡಿಪ್ಪರಯ್ಯಾ(ತಮ್ಮ
ಉಡಿಯಲ್ಲಿ ಕಾಳಜಿಯಿಂದ ಕಟ್ಟಿಕೊಂಡಿದ್ದಾರೆ)
ಗುಹೇಶ್ವರ
ನಿಮ್ಮ ಶರಣರು!
ಈ ವಚನದಲ್ಲಿ ಅಲ್ಲಮ ಪ್ರಭುಗಳು ಅಪಕ್ವವಾದ ಮನಸ್ಸನ್ನು ಲಿಂಗ ಸಾಧನೆಯಲ್ಲಿ
ತೊಡಗಿಸಿ ಅದನ್ನು ಪರಿಪಕ್ವಗೊಳಿಸಬೇಕು, ಮತ್ತು ಹಾಗೆ ಮಾಡಿದ ಮೇಲೆ ಅದು ಶಿವನನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂಬುದನ್ನು
ಹೇಳುತ್ತಿದ್ದಾರೆ.
ಸಾಮಾನ್ಯ ವ್ಯಕ್ತಿಯ ಮನಸ್ಸು ಅಪಕ್ವವಾದದ್ದು. ಎಂದರೆ ಅತನಿಗೆ ಯಾವುದು ಸರಿ
ಯಾವುದು ತಪ್ಪು ಎಂಬ ಜ್ಞಾನವಿರುವುದಿಲ್ಲ.ಯಾವುದರಿಂದ ತನಗೆ ಶಾಶ್ವತ ಸುಖ ಸಿಗುತ್ತದೆ ಎಂಬುದನ್ನು
ಆತನು ಅರಿಯದು. ಆದ್ದರಿಂದ ವಿಷಯ ಸುಖದ ಸುಳಿಗೆ ಸಿಕ್ಕು ಘಾಸಿಗೊಳ್ಳುತ್ತಾನೆ. ಆದರೆ
ಶರಣರ ರೀತಿಯೇ ಬೇರೆ. ಅಂತಹ ಅಪಕ್ವ ಮನಸ್ಸಿನ ಅರಿವಾಗಿ ಅದನ್ನು ಹಿಡಿದು ಸಾಧನೆಯಲ್ಲಿ ತೊಡಗಿಸಿ,
ಅದನ್ನು ಪಕ್ವವಾಗಿಸುತ್ತಾರೆ ಶರಣರು. ಉಸಿರೆಂಬ ಬಿಸಿನೀರಿನಲ್ಲಿ ಬೇಯಿಸಿ, ಎಂದರೆ ಅಪಕ್ವ
ಮನಸ್ಸನ್ನು ಲಿಂಗದ ಧ್ಯಾನದ ತಪಸ್ಸಿನಲ್ಲಿ ತೊಡಗಿಸುತ್ತಾರೆ. ಶಿವನ ಧ್ಯಾನವಲ್ಲದೆ ಬೇರೆ ಕಡೆಗೆ ಮನಸ್ಸು
ಹೋಗದಂತೆ ಮಾಡುವುದು ಒಂದು ಮಹಾ ತಪಸ್ಸು. ಆ
ತಪಸ್ಸನ್ನು ಸಾಧಿಸಿ ಶರಣರು ಆ ದೇವರಿಗೆ ನಮಿಸುತ್ತಾರೆ. ಆ ಲಿಂಗದ ಮುಂದೆ ಬಾಗುತ್ತಾರೆ. ತಮ್ಮ
ಮನಸ್ಸನ್ನು ದೇವರಿಗೆ ಅರ್ಪಿಸಿದ ಮೇಲೆ ಅದು
ಪ್ರಸಾದವಾಗುತ್ತದೆ. ಅಂತಹ ಮನಸ್ಸನ್ನು ಅವರು ಬೇರೆ ಇನ್ನಾರಿಗೂ ಕೊಡುವುದಿಲ್ಲ. ಅಂದರೆ ಆ ಮನಸ್ಸನ್ನು
ಬೇರೆ ವಿಷಯಗಳಿಗೆ ಹರಿಯಗೊಡುವುದಿಲ್ಲ. ವಿಷಯೇಂದ್ರಿಯಗಳು ಅದನ್ನು ಬೇರೆ ಕಡೆಗೆ ಎಳೆಯಲು ನೋಡುತ್ತವೆ.
ಅವುಗಳು ಆ ಮನಸ್ಸನ್ನು ತಮಗೆ ಕೊಡು ಎಂದು ಭಿಕ್ಷೆ
ಕೇಳುತ್ತವೆ. ಆದರೆ ಅ ಮನಸ್ಸು ಆಗಲೆ ಶಿವನಿಗೆ
ಅರ್ಪಿತವಾಗಿರುವುದರಿಂದ ಶಿವನನ್ನು ಬಿಟ್ಟು ಅದು ಎಲ್ಲಿಗೂ ಹೋಗುವುದಿಲ್ಲ. ಅದನ್ನು ಶಿವನಿಗೆ
ಕೊಟ್ಟಮೇಲೆ ಅವರಲ್ಲಿ ಈಗ ಆ ಶಿವನ ಪ್ರಸಾದವೆಂಬ ಮನಸ್ಸು ಮಾತ್ರ ಉಳಿದಿದೆ. ಅದನ್ನು ಅವರು ಬಹು
ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಅದು ಮತ್ತೆ ಎಲ್ಲಿಯೂ ಜಾರಿಹೋಗದಂತೆ ಭದ್ರವಾಗಿಟ್ಟುಕೊಳ್ಳುತ್ತಾರೆ.ಅಂತಹ ಮನಸ್ಸನ್ನು ಅವರು
ಬಹಳ ಕಾಳಜಿಯಿಂದ ತಮ್ಮ ಉಡಿಯಲ್ಲಿ ಕಟ್ಟಿಕೊಂಡು ಕಾಯುತ್ತಾರೆ, ಎಂದು ಹೇಳುತ್ತಾರೆ ಅಲ್ಲಮರು.
ಅಪಕ್ವ ವ್ಯಕ್ತಿಯ ಮನಸ್ಸು ಕ್ಷಣಿಕವಾದ ಸುಖದ ಆಕರ್ಷಣೆಗೆ ಒಳಗಾಗುತ್ತದೆ. ಕ್ಷಣಿಕವಾದ ಆ ಸುಖದ ಕೊನೆಗೆ ಅಪಾರ ದುಃಖ ನೋವು ಇದ್ದರೂ
ಮತ್ತೆ ಮತ್ತೆ ಅದೇ ಸುಖದ ಹಿಂದೆ ಓಡುತ್ತಿರುತ್ತದೆ. ಆದರೆ ಶರಣರು ಅದನ್ನು ಗಮನಿಸುತ್ತಾರೆ. ಮನಸ್ಸು ಆ ಸುಖದ ಹಿಂದೆ ಹೋಗುವಾಗ ಅದಕ್ಕೆ ತಿಳಿಹೇಳಿ
ಅದನ್ನು ಶಿವನ ಕಡೆಗೆ ತಿರುಗಿಸುತ್ತಾರೆ. ಅದೇ ತಪಸ್ಸು. ಈ ರೀತಿ ಸದಾ ಎಚ್ಚರದಿಂದಿದ್ದು ಅದನ್ನು ಶಿವನ
ಕಡೆಗೆ ತಿರುಗಿಸಿದಾಗ ಮನಸ್ಸಿಗೆ ಭೌತಿಕ ಸುಖದ ನಶ್ವರತೆಯ ಸ್ಪಷ್ಟ ಅರಿವಾಗುತ್ತದೆ. ಹಾಗಾಗಿ ಅದು
ಮತ್ತೆಂದಿಗೂ ಆ ಕಡೆಗೆ ತಿರುಗುವುದಿಲ್ಲ.