Friday, April 27, 2012

Vachana 87: Brahmananaagali Kshatriyanaagali - True Disciple

ಬ್ರಾಹ್ಮಣನಾಗಲಿ ಕ್ಷತ್ರಿಯನಾಗಲಿ ವೈಶ್ಯನಾಗಲಿ ಶೂದ್ರನಾಗಲಿ
ಆವ ಜಾತಿಯಲ್ಲಿ  ಹುಟ್ಟಿದಾತನಾದರೂ ಆಗಲಿ
ಗುರು ಕಾರುಣ್ಯ ಪಡೆದು ಅಂಗದ ಮೇಲೆ ಲಿಂಗವ ಧರಿಸಿದವನು
ಆಚಾರ ಸಂಪನ್ನ ಸತ್ಕ್ರಿಯನಾದ ಮಹಾತ್ಮನೇ
ಮೂರು ಲೋಕಕ್ಕೆ ಅಧಿಕಾರಿಯು ನೋಡಾ ಅಖಂಡೇಶ್ವರಾ.


TRANSLITERATION

braahmaNanaagali kShatriyanaagali vaishyanaagali shUdranaagali
aava jaatiyalli huTTidaatanaadarU aagali
guru kaaruNya paDedu aMgada mEle liMgava dharisidavanu
aacaara saMpanna satkriyanaada mahaamanE
mUru loKakke adhikaariyu nODaa akhaMDEshvaraa.


CLICK HERE TO READ-ALONG:
 http://youtu.be/dzgK-OHF68Y
TRANSLATION (WORDS)

braahmaNanaagali  (let him  be a Brahmin , born in the highest caste) kShatriyanaagali (let him be a warrior) vaishyanaagali ( let him be a trader) shUdranaagali (let him be a manual laborer)
aava( whichever) jaatiyalli ( caste) huTTidaatanaadarU aagali (let him be born )
guru (the Guru,the  teacher) kaaruNya (blessings) paDedu(received)  aMgada mEle ( on the body) liMgava (Linga, the icon of God) dharisidavanu (who wares)
aacaara(good behavior) saMpanna (the one with) satkriyanaada ( one with right actions) mahaatmanE ( great soul indeed)
mUru (three) loKakke (worlds) adhikaariyu (authority over) nODaa (you see) akhaMDEshvaraa. (Akhamdeshvara)

TRANSLATION

Whether one is a Brahmin, Kshatriya, Vysya or Sudra,
No matter which caste one is born in,
After earning the blessings of the Guru, the one who wares Linga on his body,
and the one with good conduct and right actions, is the great soul indeed!
He is the authority over the three worlds, you see, Akhamdeshvara!

COMMENTARY

In previous postings we have addressed the concept of Guru, the teacher. It is said that Guru appears when the disciple is ready, or the disciple finds the Guru when he is ready for receiving the knowledge. In this Vachana, Sharana Shanmuka Swamy addresses as to who would be qualified to be a disciple and the state the disciple would reach once blessed by the Guru. 

It is apparent that the four-caste system consisting of Brahmin (knowledge bearer, the highest caste), Kshatriya (warrior, protector), Vysya (Trader, Merchant) and Sudra (manual laborer, the lowest caste) was very prevalent and hence Sharana Shanmuka Swamy clarifies that it is immaterial as to which cast the disciple is born in.  As long as the disciple earns/receives the blessings of the guru, he becomes eligible for the divine knowledge.  As we have mentioned in previous postings, guru is not limited to be an individual, rather it is a concept.  Those who develop an intense desire to be enveloped by this concept, obtain the keenness of detecting the subtlety in all things around them. Such subtle nature enables them to see the truth beyond what appears at the surface of entities around them. That is the blessing of the guru.  As a symbol of acquiring the subtle divine principle, guru offers the disciple Linga, the icon of the divine principle. The disciple wears the Linga on his body. It is not sufficient to wear the Linga as a ritual, but the disciple has to grasp the true meaning behind it and conduct himself well in all aspects and perform right actions. He thus becomes the authority of all the three worlds (Heaven, Mortal and Hell), implying that he is capable of realizing the whole Universe, commonly believed to be consisting of the three worlds.  Shanmuka Swamy says that such a true disciple has reached the ultimate level of merger with the God, the so called Linga-Anga saamarasya.

In general, understanding the material of which any given object is made yields an understanding of everything else made of the same material.  For example, understanding properties of Gold, allows understanding of all jewelry made of Gold no matter what their shapes and sizes are. Similarly, all things in this world, although identified with different names and shapes, have the same life source.  The blessing of guru provides us the insight into this life source and allows us to talk authoritatively about all entities around us.  Such blessing and insight are not limited by the caste one is born in.


Let our conduct and actions become that of a blessed disciple!


KANNADA COMMENTARY


ಇಲ್ಲಿಯವರೆಗೆ ಗುರುವಿನ ಬಗ್ಗೆ ತಿಳಿದುಕೊಂಡೆವು. ಈಗ ಇಲ್ಲಿ ಶಿಷ್ಯನ ಬಗ್ಗೆ ಹೇಳುತ್ತಿದ್ದಾರೆ ಷಣ್ಮುಖಸ್ವಾಮಿಗಳು. ಶಿಷ್ಯನಾಗಲು ಯಾರು ಅರ್ಹರು ಮತ್ತು ಗುರುವಿನ ಕಾರುಣ್ಯದಿಂದ ಶಿಷ್ಯನು ಯಾವ ಸ್ಥಿತಿಗೇರುತ್ತಾನೆ ಎಂಬುದನ್ನು ಷಣ್ಮುಖಸ್ವಾಮಿಗಳು ಬಹಳ ಸೊಗಸಾಗಿ ಹೇಳಿದ್ದಾರೆ. 
ಶಿಷ್ಯನು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರ ಯಾವ ಜಾತಿಯವನೇ ಆಗಲಿ ಆತನಿಗೆ ಗುರು ಕಾರುಣ್ಯ ಉಂಟಾಗಿದ್ದರೆ ಸಾಕು ಅದೇ ಆತನಿಗೆ ಜ್ಞಾನಿಯಾಗುವ ಅರ್ಹತೆಯನ್ನು ಒದಗಿಸುತ್ತದೆ ಎನ್ನುತ್ತಾರೆ, ಆದರೆ ಗುರು ಕಾರುಣ್ಯವೆಂದರೇನು? ಅದು ಹೇಗೆ ಉಂಟಾಗುತ್ತದೆ?  ಸಾಮಾನ್ಯವಾಗಿ ನಾವು ಗುರುಕಾರುಣ್ಯವೆಂದರೆ  ಗುರು ವ್ಯಕ್ತಿಯ ರೂಪದಲ್ಲಿ ಬಂದು  ಶಿಷ್ಯನಿಗೆ ಉಪದೇಶಿಸುತ್ತಾನೆ ಎಂದುಕೊಳ್ಳುತ್ತೇವೆ. ಗುರುವು ಶಿಷ್ಯನನ್ನು ಹುಡುಕಿಕೊಂಡು ಬರುತ್ತಾನೆ, ಶಿಷ್ಯನು ಹಂಬಲಿಸಿದರೆ ಸಾಕು ಗುರು ತಾನೇ ಸ್ವತಃ ಹುಡುಕಿಕೊಂಡು ಬಂದು ಕರುಣಿಸುತ್ತಾನೆ ಎಂಬಂತಹ ಮಾತುಗಳನ್ನು ಎಲ್ಲರೂ ಕೇಳಿರುತ್ತಾರೆ. ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಹಿಂದೆಯೇ  ನಾವು ಗುರುವು ಕೇವಲ ವ್ಯಕ್ತಿಯಲ್ಲ, ಅಮೂರ್ತವಾದ ಬೆಳಕಾಗಿ ಬರುವ ತತ್ವ ಎಂಬುದನ್ನು ಕಂಡುಕೊಂಡಿದ್ದೇವೆ. ಯಾರಿಗೆ ಮನಸ್ಸಿನಲ್ಲಿ ಆ ತತ್ವವನ್ನು ಹೊಂದಬೇಕೆನ್ನುವ ಆಳವಾದ
ಹಂಬಲವಿರುತ್ತದೆಯೋ ಆತನಿಗೆ ದೈವಕೃಪೆಯಾಗುತ್ತದೆ. ಅಂದರೆ ಆತನ ಮನಸ್ಸು ಸೂಕ್ಷ್ಮವಾಗಿ ಎಲ್ಲವನ್ನೂ ಹೊಸ ದೃಷ್ಟಿಯಿಂದ ನೋಡಲುಪಕ್ರಮಿಸುತ್ತದೆ.  ಆತನಿಗೆ ಜಗತ್ತಿನ ಪ್ರತಿಯೊಂದರಲ್ಲಿ ಬೇರೆ ಯಾವುದೋ ತತ್ವದ ಆಟ ಕಾಣುತ್ತದೆ. ಮೇಲು ನೋಟಕ್ಕೆ ಕಾಣುವುಷ್ಟೇ ಪೂರ್ಣ ಸತ್ಯವಲ್ಲ ಅಲ್ಲ, ಅದನ್ನು ಮೀರಿದುದದೇನೋ ಕಾಣಿಸುತ್ತದೆ.  ಈ ಸೂಕ್ಶ್ಮ ದೃಷ್ಟಿಯ ಲಾಭವೇ ಒಂದು ರೀತಿಯಿಂದ ಗುರು ಕಾರುಣ್ಯವೆಂದು ಹೇಳಬಹುದು. ಈ ರೀತಿಯ ಗುರು ಕಾರುಣ್ಯ ಉಂಟಾದ ಯಾವ ಜಾತಿಯ ವ್ಯಕ್ತಿಯೇ ಆಗಲಿ ದೀಕ್ಷೆಗೆ ಅರ್ಹನಾಗುತ್ತಾನೆ ಎನ್ನುತ್ತಾರೆ ಷಣ್ಮುಖ ಸ್ವಾಮಿಗಳು. ಇದನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗೆ ಜಾತಿಯ ಪ್ರಶ್ನೆಯೇ ಹುಟ್ಟುವುದಿಲ್ಲ.  

ಗುರು ಕಾರುಣ್ಯ ಪಡೆದು ಅಂಗದ ಮೇಲೆ ಲಿಂಗವ ಧರಿಸಿದವನು
ಆಚಾರ ಸಂಪನ್ನ ಸತ್ಕ್ರಿಯನಾದ ಮಹಾತ್ಮನೇ
ಮೂರು ಲೋಕಕ್ಕೆ ಅಧಿಕಾರಿಯು ನೋಡಾ ಅಖಂಡೇಶ್ವರಾ ಎನ್ನುತ್ತಾರೆ. ಗುರುಕಾರುಣ್ಯವೇ ಎಲ್ಲವೂ ಅಲ್ಲ. ಆ ದಾರಿಯಲ್ಲಿ ಇನ್ನೂ ಮುಂದುವರಿಯ ಅವಶ್ಯಕತೆಯಿರುತ್ತದೆ. ಆ ದಾರಿ, ಆತನಿಗೆ ವ್ಯಕ್ತಿಯ ರೂಪದಲ್ಲಿ ಬರುವ ಗುರುವಿನಿಂದ ತಿಳಿಯುತ್ತದೆ. ಆ ಗುರು  ಶಿಷ್ಯನಿಗೆ ಆ ಪರತತ್ವದ ಕುರುಹಾದ ಲಿಂಗವನ್ನು ಅನುಗ್ರಹಿಸುತ್ತಾನೆ. ಆ ಗುರುವಿನ ಸಹಾಯದಿಂದ ಶಿಷ್ಯನು ಲಿಂಗವನ್ನು ಧರಿಸಿ ಆಚಾರ ಸಂಪನ್ನ ಮತ್ತು ಸತ್ಕ್ರಿಯವಂತನಾಗುತ್ತಾನೆ. “ಆಚಾರ” ವೆನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ವಿಭೂತಿ ಧರಿಸುವುದು, ಲಿಂಗ ಪೂಜೆ ಮಾಡುವುದು ಮಾತ್ರ ಆಚಾರವಲ್ಲ. “ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಡೆ  ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ?” ಎಂದು ಹೇಳಿ ಅದು ಆಚಾರವಲ್ಲ ಎಂದು ಅಲ್ಲಮರು ಮೊದಲೇ ಹೇಳಿದ್ದಾರೆ. ’ಅಂತರಂಗ ಬಹಿರಂಗ ಶುದ್ಧಿ” ಬಹು ಮುಖ್ಯವೆಂದು ಬಸವಣ್ಣನವರು ಹೇಳಿದ್ದಾರೆ. ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿ, ಕಂಡುಕೊಳ್ಳುವವ ಲಿಂಗಧಾರಣೆಯನ್ನು ಮತ್ತು ಇತರ ಅಚಾರ ಮತ್ತು ಸತ್ಕ್ರಿಯೆಗಳನ್ನು ಕೇವಲ ಶಾಸ್ತ್ರಕ್ಕಾಗಿ ಮಾಡುವವನಲ್ಲ. ಆತನು ಅದರ ಹಿಂದೆ ಇರುವ ಅರ್ಥವನ್ನು ಕಾಣುತ್ತಾನೆ. ಆದ್ದರಿಂದ ಅದು ಕೇವಲ ಬಾಹ್ಯ ಆಚಾರವಾಗುವುದಿಲ್ಲ.  ಅಂತಹ ವ್ಯಕ್ತಿ ಮೂರುಲೋಕಕ್ಕೂ ಅಧಿಕಾರಿಯಾಗುತ್ತಾನೆ ಎಂದು ಹೇಳುತ್ತಾರೆ. ಮೂರು ಲೋಕ ಎಂದರೆ “ಸ್ವರ್ಗ, ಮರ್ತ್ಯ ಮತ್ತು ಪಾತಾಳ ಅಥವಾ ನರಕ” ವೆಂದರ್ಥ. ಈ ಲೋಕಗಳಿಗೆ ಅಧಿಕಾರಿಯಾಗುವುದೆಂದರೇನು? 
ಮೂರು ಲೋಕವೆಂದರೆ ಇಲ್ಲಿ ಇಡೀ ವಿಶ್ವ ಎಂದರ್ಥ. ವಿಶ್ವಕ್ಕೆ ಅಧಿಕಾರಿ ಎಂದರೆ ಈ ವಿಶ್ವದ ಪ್ರತಿಯೊಂದರ ಬಗ್ಗೆ ಅಧಿಕಾರದಿಂದ ಮಾತನಾಡುವ ಸಾಮರ್ಥ್ಯ ಆತನಿಗೆ ಇರುತ್ತದೆ ಎಂದರ್ಥ.  ಈ ಸಾಮರ್ಥ್ಯ ಆತನಿಗೆ ಹೇಗೆ ಒದಗುತ್ತದೆ? ಇದನ್ನು ಅರುಹುವ ಒಂದು ಕತೆ ಉಪನಿಷತ್ತಿನಲ್ಲಿ ಬರುತ್ತದೆ.

ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ  ಒಂದು ಕತೆ: 
ಉದ್ದಾಲಕ ಮಹರ್ಷಿಯು ತನ್ನ ಮಗ ಶ್ವೇತಕೇತುವನ್ನು ವಿದ್ಯಾರ್ಜನೆಗಾಗಿ ಗುರುಕುಲಕ್ಕೆ ಕಳಿಸುತ್ತಾನೆ. ಗುರುಕುಲದಲ್ಲಿ ಅನೇಕ ವಿಷಯಗಳ ಅಧ್ಯಯನ ಮಾಡಿ ವಿದ್ಯಾಭೂಷಣನಾಗಿ ಶ್ವೇತಕೇತು ಹಿಂತಿರುಗುತ್ತಾನೆ. ಆತನಿಗೆ ಆಗಲೆ ತಾನು ಗಳಿಸಿದ ವಿದ್ಯೆಯ ಬಗ್ಗೆ ಸಾಕಷ್ಟು ಅಹಂಕಾರ ಉಂಟಾಗಿರುತ್ತದೆ. ಅದನ್ನು ಕಂಡು ಉದ್ದಾಲಕನು ಮಗನನ್ನು ಕುರಿತು “ ಶೇತಕೇತು! ಈಗಾಗಲೇ ನೀನು ಜಗತ್ತಿನಲ್ಲಿರುವ ಎಲ್ಲ ವಿದ್ಯೆಗಳನ್ನೂ ಕಲಿತಿರುವೆಯಲ್ಲವೆ?” ಎಂದು ಕೇಳುತ್ತಾನೆ. “ಹೌದು” ಎಂದುತ್ತರಿಸುತ್ತಾನೆ ಶ್ವೇತಕೇತು.
“ಆದರೆ,  ತಿಳಿಯದೆ ಇರುವುದನ್ನು ತಿಳಿಯುವ, ಗ್ರಹಿಸಲು ಬಾರದುದನ್ನು ಗ್ರಹಿಸುವ, ಕಿವಿಗೆ ಕೇಳಿಸದೆ ಇರುವಂತಹದನ್ನು ಕೇಳಿಸಿಕೊಳ್ಳುವ ವಿದ್ಯೆ ನಿನಗೆ ಲಭಿಸಿದೆಯೆ?” ಎಂದು ಕೇಳುತ್ತಾನೆ. ಈ ಪ್ರಶ್ನೆಯಿಂದ ಅಚ್ಚರಿಗೊಂಡು ಶ್ವೇತಕೇತುವು “ಅಂತಹ ವಿದ್ಯಯೊಂದಿದ್ದರೆ ಅದನ್ನು ನೀವು ನನಗೆ ದಯಪಾಲಿಸಿರಿ” ಎಂದು ಕೇಳಿಕೊಳ್ಳುತ್ತಾನೆ. ಆಗ ಉದ್ದಾಲಕನು ಕೆಲ ಪ್ರಯೋಗಗಳಿಂದ  ಮತ್ತು ಉದಾಹರಣೆಗಳಿಂದ ಆ ವಿದ್ಯೆಯು ಮಗನಿಗೆ ಅರ್ಥವಾಗುವಂತೆ ಮಾಡುತ್ತಾನೆ. ಶ್ವೇತಕೇತುವಿನ ಅಹಂಕಾರ ಕಳೆದುಹೋಗುತ್ತದೆ. ಅದರಲ್ಲಿಯ ಒಂದು ಉದಾಹರಣೆಯನ್ನು ಇಲ್ಲಿ ಉದ್ಧರಿಸಬಹುದು:

“ಮಣ್ಣಿನ ಗುಣಗಳನ್ನು ಅರಿತುಕೊಂಡಾಗ ಮಣ್ಣಿನಿಂದ ಮಾಡಿದ ಎಲ್ಲವುಗಳನ್ನು ತಿಳಿಯಬಹುದು. ಚಿನ್ನದ ಗುಣಗಳನ್ನು ಅರಿತಾಗ ಚಿನ್ನದಿಂದ ಮಾಡಿದ ಎಲ್ಲವುಗಳನ್ನು ಅರಿಯಬಹುದು. ಕೇವಲ ಅವುಗಳ ಆಕಾರ ಮತ್ತು ಹೆಸರುಗಳು ಬೇರೆಯಾಗಿರುತ್ತವೆ ಆದರೆ ಅವೆಲ್ಲವೂ ಮಣ್ಣಿನವೇ ಅಥವಾ ಚಿನ್ನದವೇ ಆಗಿರುತ್ತವೆ. ಅದೇ ರೀತಿ ಈ ಜಗತ್ತಿನಲ್ಲಿ ಕಂಡುಬರುವ  ಎಲ್ಲವುಗಳ ಹೆಸರುಗಳು ಮತ್ತು ಆಕಾರಗಳು ಬೇರೆಯಾಗಿವೆ. ಆದರೆ ಅವುಗಳಲ್ಲಿಯ ಚೈತನ್ಯ ಒಂದೇ ಆಗಿದೆ. Understanding the material of which any given object is made yields an understanding of everything else made of the same material.”  ಇದನ್ನು ತಿಳಿದುಕೊಂಡಾಗ ಆ ವಸ್ತುಗಳಬಗ್ಗೆ ಅಧಿಕಾರಯುತವಾಗಿ ಮಾತಾಡುವ ಸಾಮರ್ಥ್ಯ ತಾನೇ ತಾನಾಗಿ ಬರುತ್ತದೆ.”
ಅದೇ ರೀತಿಯಾಗಿ ಆಂತರಿಕವಾದ ಗುರುವಿನ ಕೃಪೆಯಿಂದ ಎಲ್ಲವುಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡುವ ಒಳದೃಷ್ಟಿಉಂಟಾಗುತ್ತದೆ, ಈ ಒಳದೃಷ್ಟಿ ಯಾವ ಒಂದು ಜಾತಿಯ ವ್ಯಕ್ತಿಯ ಸ್ವತ್ತಲ್ಲ, ಎನ್ನುತ್ತಾರೆ ಷಣ್ಮುಖಸ್ವಾಮಿಗಳು.

1 comment: