ಕಂಗಳೇಕೆ ನೋಡಬೇಡವೆಂದಡೆ ಮಾಣವು?
ಶ್ರೋತೃಂಗಳೇಕೆ ಆಲಿಸಬೇಡವೆಂದಡೆ ಮಾಣವು?
ಜಿಹ್ವೆಯೇಕೆ ರುಚಿಸಬೇಡವೆಂದಡೆ ಮಾಣವು?
ನಾಸಿಕವೇಕೆ ವಾಸಿಸಬೇಡವೆಂದಡೆ ಮಾಣವು?
ತ್ವಕ್ಕೇಕೆ ಸೋಂಕಿಸಬೇಡವೆಂದಡೆ ಮಾಣವು?
ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು
ಗುಹೇಶ್ವರಲಿಂಗಕ್ಕೆ ಒಲಿದ ಕಾರಣ
ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು
TRANSLITERATION
kaMgaLEke nODabEdaveMdaDe maaNavu?
shrOtRuMgaLEke aalisabEdaveMdaDe maaNavu?
jihveyEke rucisabEdaveMdaDe maaNavu?
naasikavEke vaasisabEdaveMdaDe maaNavu?
tvakkEke sOMkisabEdaveMdaDe maaNavu?
I bhEdavanaridu nuDiyalu samadhaatuvaayittu
guhEshvaraliMgakke olida kaaraNa
abhimaana lajje bEsattu hOyittu
CLICK HERE TO READ-ALONG:
http://www.youtube.com/watch?v=wEi1fpHD_Yg&feature=youtu.be
TRANSLATION (WORDS)
kaMgaLEke (why do the eyes) nODabEdaveMdaDe( if asked not to see) maaNavu? (don’t let go/ quit)
shrOtRuMgaLEke (why do the ears) aalisabEdaveMdaDe(if asked not to listen/ hear) maaNavu?( don’t let go/ quit)
jihveyEke(why do the tongue) bEdaveMdaDe (if asked not to taste) maaNavu?( don’t let go/ quit)
naasikavEke( why do the nose) vaasisabEdaveMdaDe(if asked not to smell) maaNavu? (don’t let go/ quit)
tvakkEke(why do the skin) sOMkisabEdaveMdaDe (if asked not to touch) maaNavu?( don’t let go/ quit)
I(this) bhEdavanaridu(by knowing this secret) nuDiyalu(if said, revealed) sama(equal, one with)dhaatuvaayittu (the original, the god)
guhEshvaraliMgakke(for Guheshvara) olida (surrender, love) kaaraNa(for the reason of)
abhimaana(pride) lajje (shame,shyness) bEsattu(bored, tired) hOyittu(disappeared)
TRANSLATION
Why do the eyes, when asked not to see, don’t quit seeing?
Why do the ears, when asked not to hear, don’t quit hearing?
Why does the tongue, when asked not to taste, doesn’t quit tasting?
Why does the nose, when asked not to smell, doesn’t quit smelling?
Why does the skin, when asked not to touch, doesn’t quit touching?
On knowing the secret and revealing, they merge in Him!
On surrendering to Guhesvara Linga, pride and shyness get tired and dissappear!
COMMENTARY
The key phrase in this Vachana by Allama Prabhu is ‘sama (equal, one with)dhaatuvaayittu (the original, the god)’ meaning merging or one with Him. This is linga-anga saamarasya! What is holding us from achieving this state is our dependence on the five sense organs. We do not know how to be free from them. We can command these organs not to see, not to hear, not to taste, not to smell, and not to touch. But, they do not heed. Their very nature is always to sense the external. They are not designed to perceive the internal. Since we lack this knowledge, we get immersed in materialistic endeavors. When we experience good, we get intoxicated with joy and our ego goes further up. When we experience bad, our sorrow takes us down to depths. We can never have the strength to escape from the influence of the five sense organs. It is interesting that Allama Prabhu chooses to ask five questions one for each organ, instead of asking one common question for all. His repeated questioning must have come from his deep inspection of how to escape from the influence of these organs, or his intent to stress how important it is for us to look deep into the nature of these organs.
How does one gain the knowledge of becoming free from the influence of these organs? It has to come from a knowledgeable Guru who has conquered them. Once knowing this secret, the disciple follows it and overcomes the influence of sense organs and merges with God. Having merged with God and surrendered to Him, his ego, shyness and other negative attributes vanish. The lesson then is not attempting to control the sense organs, but to become free from their influence. The teacher can transfer the required knowledge, but the disciple is the one who has to follow it.
Let us not be swayed by the sensory pleasures and displeasures!
KANNADA COMMENTARY
“ಸಮಧಾತು” ಪದದ ಅರ್ಥವನ್ನು ನೋಡೋಣ. ಸಮ=ಸಮಾನ, ಒಂದೇ ರೀತಿಯ, ಧಾತು=ಮೂಲ ವಸ್ತು, ದೇವರು. ಜೀವವು ಮೂಲವಸ್ತುವಾದ ಆ ದೇವರೊಂದಿಗೆ ಒಂದಾಗುವುದು ಎಂದರ್ಥ. ಈ ದಿಸೆಯಲ್ಲಿ ಅಡ್ಡಿಯುಂಟಾಗುವುದು ಇಂದ್ರಿಯಗಳು ವಿಷಯಗಳಲ್ಲಿ ತೊಡಗುವುದರಿಂದ. ಲಿಂಗದೊಂದಿಗೆ ಒಂದಾಗದೆ ಇರುವುದಕ್ಕೆ ನಾವುಗಳು ಇಂದ್ರಿಯಗಳಿಗೆ ವಶವಾಗಿರುವುದೇ ಕಾರಣ. ಮತ್ತು ಅವುಗಳಿಂದ ಬಿಡುಗಡೆ ಪಡೆಯುವ ರೀತಿ ನಮಗೆ ತಿಳಿದಿಲ್ಲ. ನಾವು ಅವುಗಳಿಗೆ “ನೀನು ನೋಡಬೇಡ, ಆಲಿಸಬೇಡ, ವಾಸನೆ ನೋಡಬೇಡ, ಸ್ಪರ್ಶಿಸಬೇಡ, ರುಚಿಸಬೇಡ “ ಎಂದೆಲ್ಲ ಹೇಳುತ್ತೇವೆ. ಆದರೆ ಇಂದ್ರಿಯಗಳು ಯಾವುದನ್ನೂ ಕೇಳುವುದಿಲ್ಲ. ಏಕೆಂದರೆ ಅವುಗಳ ರೀತಿಯೇ ಹೊರಗೆ ಹೋಗುವುದು. ಅಂದರೆ ಹೊರಗೆ ಇರುವುದಕ್ಕೇ ಮಹತ್ವ ಕೊಡುವುದು, ಒಳಗನ್ನು ನೋಡುವುದರ ಕಡೆಗೆ ಗಮನವಿರುವುದಿಲ್ಲ. ಆದರೆ ಇದು ನಮಗೆ ತಿಳಿಯುವುದಿಲ್ಲ. ಈ ಅಜ್ಞಾನದ ಕಾರಣದಿಂದಲೇ ಹೊರಗಣ ಬದುಕಿನಲ್ಲಿ ತನ್ನನ್ನು ತಾನು ಸಿಲುಕಿಸಿಕೊಂಡು ನಾನಾ ಕೋಟಲೆಗೊಳಗಾಗುತ್ತದೆ ಜೀವ. ಒಳ್ಳೆಯದನ್ನು ಅನುಭವಿಸಿದಾಗ ಸಂತೋಷ ತಲೆಗೇರಿ ಅಹಂಕಾರ ಉಂಟಾಗುತ್ತದೆ, ಕೆಟ್ಟದ್ದನ್ನು ಅನುಭವಿಸಿದಾಗ ದುಃಖದಿಂದ ಪಾತಾಳಕ್ಕಿಳಿಯುತ್ತದೆ ಜೀವ. ಆಗ ಅದು ಈ ತೊಳಲಿಕೆಯಿಂದ ದೂರವಿರಲು ಪ್ರತಿಯೊಂದು ಇಂದ್ರಿಯಕ್ಕೂ ಬುದ್ಧಿ ಹೇಳುವ ಪ್ರಯತ್ನ ಮಾಡುತ್ತದೆ. ಅಲ್ಲಮ ಪ್ರಭುಗಳು, ಏಕೆ ಇಂದ್ರಿಯಗಳು ಬೇಡವೆಂದರೂ ವಿಷಯಗಳಲ್ಲಿ ತೊಡಗುತ್ತವೆ ಎಂದು ಕೇಳುತ್ತಾರೆ. ಈ ವಚನದ ಧಾಟಿಯ ಕಡೆಗೆ ಗಮನಕೊಡುವುದು ಮುಖ್ಯ. ಅಲ್ಲಮರು, ಕಣ್ಣುಗಳೇಕೆ ನೋಡಬೇಡವೆಂದರೂ ನೋಡುವುದನ್ನು ಬಿಡುವುದಿಲ್ಲ? ಕಿವಿಗಳೇಕೆ ಕೇಳಬೇಡವೆಂದರೂ ಕೇಳುವುದನ್ನು ಬಿಡುವುದಿಲ್ಲ? ಮೂಗೇಕೆ ಆಘ್ರಾಣಿಣಸಬೇಡವೆಂದರೂ ಆಘ್ರಾಣಿಸುವುದನ್ನು ಬಿಡುವುದಿಲ್ಲ? ನಾಲಿಗೆ ಏಕೆ ರುಚಿಸಬೇಡ ಎಂದರೂ ರುಚಿಸುವುದನ್ನು ಬಿಡುವುದಿಲ್ಲ? ತ್ವಚೆಯು ಸ್ಪರ್ಶಿಸಬೇಡವೆಂದರೂ ಸ್ಪರ್ಶಿಸುವುದನ್ನು ಬಿಡುವುದಿಲ್ಲ?” ಎಂದು ಪ್ರತಿಯೊಂದು ಇಂದ್ರಿಯವನ್ನು ಕುರಿತು ಪ್ರಶ್ನೆ ಕೇಳುತ್ತಿದ್ದಾರೆ. ಎಲ್ಲ ಇಂದ್ರಿಯಗಳನ್ನು ಕುರಿತು ಒಂದೇ ಸಲ ಪ್ರಶ್ನೆ ಕೇಳಿದ್ದರಾಗುತ್ತಿತ್ತು. ಅವರು ಮತ್ತೆ ಮತ್ತೆ ಈ ಪ್ರಶ್ನೆ ಕೇಳುವುದರ ಅರ್ಥ, ಇಂದ್ರಿಯಗಳಿಂದ ಘಾಸಿಗೊಂಡಿರುವುದಾಗಿದೆ, ಇಂದ್ರಿಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಾಗಿದೆ. ಅವುಗಳ ಸ್ವಭಾವವನ್ನು ಅರಿತುಕೊಳ್ಳುವುದರ ಕಡೆಗೆ ಗಮನವೀಯುವುದರ ಸೂಚನೆಯಾಗಿದೆ. ಪದೇ ಪದೇ ಅದನ್ನು ಕೇಳುವುದು, ಅವುಗಳು ಜೀವನನ್ನು ಅಪಾರವಾಗಿ ಕಾಡುವುದನ್ನು ಬಿಂಬಿಸುತ್ತದೆ. ಇಂದ್ರಿಯಗಳು ಯಾವುದಕ್ಕೂ ಜಗ್ಗುವುದಿಲ್ಲ. ಅವು ತಮ್ಮ ಆಟ ಆಡುತ್ತಲೇ ಇರುತ್ತವೆ. ಅಂದರೆ ಹೊರಗಿನ ಅಂಶಗಳಲ್ಲಿ ತೊಡಗಿಕೊಂಡು ಘಾಸಿಗೊಳ್ಳುತ್ತವೆ, ದುಃಖಕ್ಕೆ ಈಡಾಗುತ್ತವೆ. ಇವುಗಳಿಂದ ಬಿಡುಗಡೆ ಹೇಗೆ? ಅಲ್ಲಮ ಪ್ರಭುಗಳು ಹೇಳುತ್ತಾರೆ “ ಇದರ ರಹಸ್ಯವನ್ನು ಅರಿತು ಹೇಳಿದಾಗ ಜೀವ ಲಿಂಗದೊಂದಿಗೆ ಒಂದಾಗುತ್ತದೆ” ಎಂದು. ಆದರೆ ಇಂದ್ರಿಯಗಳ ರಹಸ್ಯವನ್ನು ಹೇಳುವವರು ಯಾರು? ಅದನ್ನು ಹೇಳುವವನು ಗುರು. ಗುರುವು ಇಂದ್ರಿಯಗಳು ಹೇಗೆ ವರ್ತಿಸುತ್ತವೆ, ಅವುಗಳ ಸ್ವಭಾವ ಎಂತಹುದು, ಅವುಗಳಿಂದ ಬಿಡುಗಡೆ ಹೇಗೆ ಪಡೆಯಬಹುದು, ಎಂಬುದರ ರಹಸ್ಯವನ್ನು ಬಲ್ಲವನಾಗಿದ್ದು ತಿಳಿಸಿ ಹೇಳುತ್ತಾನೆ. ಆಗ ಸಾಧಕನು ಆ ದಾರಿಯಲ್ಲಿ ನಡೆಯುತ್ತಾನೆ ಮತ್ತು ಆತನಿಗೆ ಅರಿವುಂಟಾಗುತ್ತದೆ. ಆಗ ಗುಹೇಶ್ವರನ ಬಗ್ಗೆ ಒಲವು ಮೂಡುತ್ತದೆ. ಆ ಒಲವಿನ ಕಾರಣದಿಂದ ಮಾನಸಿಕ ದೌರ್ಬಲ್ಯಗಳಾದ ಅಭಿಮಾನ ಮತ್ತು ಲಜ್ಜೆಗಳು ಹೇಳ ಹೆಸರಿಲ್ಲದೆ ಅಡಗಿ ಹೋಗುತ್ತವೆ ಎನ್ನುತ್ತಾರೆ ಅಲ್ಲಮರು. ಒಟ್ಟಿನಲ್ಲಿ ಇಂದ್ರಿಯಗಳನ್ನು ತುಳಿಯುವುದು ಅಥವಾ ಅವುಗಳಿಗೆ ತಿಳಿ ಹೇಳುವುದು ಮುಂತಾದ ದಾರಿಗಳಿಂದ ಯಾವ ಪ್ರಯೋಜನವೂ ಇಲ್ಲ. ಅವುಗಳ ಪ್ರಭಾವದಿಂದ ಬಿಡುಗಡೆಗೆ ಬೇರೆ ದಾರಿಯನ್ನೇ ಕೈಗೊಳ್ಳಬೇಕು. ಆ ದಾರಿಯನ್ನು ಅರಿತವನೊಬ್ಬನು ತೋರಬಹುದು ಆದರೆ ದಾರಿ ತುಳಿಯಬೇಕಾದವನು ಜೀವನು.
ಕಂಗಳ ಮುಂದಣ ಬೆಳಗ ಕಾಣದೆ ಕಂಡಕಂಡವರ ಹಿಂದೆ ಹರಿದು,
ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ!
ತನ್ನಲ್ಲಿ ತಾ ಸುಯಿದಾನಿಯಾಗಿ ನೋಡಲರಿಯದೆ,
ಭಿನ್ನಗಣ್ಣಲಿ ನೋಡಿಹೆನೆಂದು ತಮ್ಮ ಮರೆದು
ಇನ್ನುಂಟೆಂದು ಅರಸುವ ಅಣ್ಣಗಳಿರಾ, ನೀವು ಕೇಳಿರೆ.
ಮನವು ಮಹದಲ್ಲಿ ನಿಂದುದೆ ಲಿಂಗ;
ಕರಣಂಗಳರತುದೆ ಕಂಗಳ ಮುಂದಣ ಬೆಳಗು,
ಇದನರಿಯದೆ, ಮುಂದೆ ಘನವುಂಟೆಂದು ತೊಳಲಿ ಬಳಲಿ, ಅರಸಿಹೆನೆಂದು
ಅರೆಮರುಳಾಗಿ ಹೋದರಯ್ಯಾ ನಿಮ್ಮ ನೆಲೆಯನರಿಯದೆ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ
TRANSLITERATION
kaMgala muMdaNa beLaga kaaNade kaMDakaMDavara hiMde haridu
innu bEre kaMDeneMba bhaMgitara nODaa!
Tannalli taa suyidaaniyaagi nODalariyade
bhinnagaNNali nODiheneMdu tamma maredu
innuMTeMdu arasuva aNNagaLiraa, nIvu kELire.
Manavu mahadalli niMdude liMga;
karaNaMgaratude kaMgaLa muMdaNa beLagu.
Idanariyade muMde ghanavuMTeMdu toLali baLali arasiheneMdu
aremaruLaagi hodarayyaa nimma neleyanariyade
appaNNapriya cennabasavaNNa
CLICK HERE TO READ-ALONG:
http://www.youtube.com/watch?v=Rust-qMad2c&feature=youtu.be
TRANSLATION (WORDS)
kaMgala( of eyes) muMdaNa (in front,) beLaga (light) kaaNade( without seeing) kaMDakaMDavara (every Tom, Dick and Harry, all kinds of people) hiMde (behind) haridu (going)
innu ( now) bEre (other, different) kaMDeneMba (I saw) bhaMgitara(disappointed people) nODaa!(you see)
Tannalli (in oneself) taa (one) suyidaaniyaagi (being awake) nODalariyade (not knowing to see)
bhinnagaNNali (through different eye, other than being awake) nODiheneMdu (say that I have seen) tamma( themselves) maredu(forget)
innuMTeMdu (thinking that there is more) arasuva (seeking) aNNagaLiraa,(Oh! Brothers) nIvu kELire.(you listen)
Manavu (mind) mahadalli (in the profound) niMdude(If established) liMga;(that is linga)
karaNaMgaratude( that which is understood by the senses) kaMgaLa (the eyes) muMdaNa (before) beLagu.(is light)
Idanariyade (without understanding this) muMde (somewhere far off) ghanavuMTeMdu( is profound) toLali (being suffered) baLali (being exausted) arasiheneMdu (saying that I have found)
aremaruLaagi ( Half mad) hodarayyaa (are gone) nimma (your) neleyanariyade (not knowing dwelling, abode)
appaNNapriya cennabasavaNNa (Appannapriya chennabasavanna)
TRANSLATION
Pray see, these disappointed people running behind everyone else to find the light, without seeing the light right before their eyes!
Pray listen, Oh brothers! Without knowing how to awaken the within to see the divine, you are seeking the eyes of someone else to see the divine!
Establishing the mind in the profound is finding Him!
That which is understood by the senses is the light before the eyes!
Not realizing this, looking for the divine all over, they have suffered, exhausted and have become half-witted, while not finding Your Abode, Oh AppaNNapriya CennabasavaNNa!
COMMENTARY
This Vachana is from Sharane Lingamma, wife of Sharana Hadapada Appanna. She uses the signature AppaNNapriya (Appanna’s beloved) CennabasavaNNa! She is lamenting on how we simply do not recognize the divine right before our eyes, but look for all the wrong places with all the wrong aids to see Him. To see the Light (the profound, the divine) all that is needed is awakening the within or developing a keen awareness. It has to come from within. It cannot be transferred by one to other. Lingamma says that establishing the mind in the Profound is the right light to be seen. We do not recognize this simple fact. We are always distracted by our senses and hence we are told that we need to control them. Lingamma on the other hand says that what we perceive from our senses leads to the divine light! We have all we need. It is just a matter of utilizing what our senses offer (i.e. understanding the senses) to see the divine. She is asking us to open our keen, observative eye and set the mind on the divine, rather than going around finding all sorts of devices, rituals and individuals to follow. While she calls us half-witted, tired and exhausted because of these unnecessary means, her compassion pours out when she uses ‘Oh! Elder brothers!’ to alert us!
Let us open our inner eyes to understand the senses and see the Light!
KANNADA COMMENTARY
ಇದು ಹಡಪದ ಅಪ್ಪಣ್ಣನವರ ಪತ್ನಿಯಾದ ಲಿಂಗಮ್ಮನ ವಚನ. ಇಲ್ಲಿ ಆಕೆ ಸಾಮಾನ್ಯರ ಅರೆಮರುಳುತನವನ್ನು ಚೆನ್ನಾಗಿ ತಿಳಿಸುತ್ತಿದ್ದಾಳೆ. ಆ ಮಹಾಬೆಳಗು ಕಣ್ಣಮುಂದೆಯೇ ಇದೆ. ಆದರೆ ಅದನ್ನು ನೋಡುವುದರಲ್ಲಿ ಜನರಿಗೆ ಆಸಕ್ತಿ ಇಲ್ಲ. ಕಂಡಕಂಡವರು ಹೇಳುತ್ತಿರುವುದರ ಹಿಂದೆ ಹೋಗುವುದರಲ್ಲಿ ಅವರಿಗೆ ಆಸಕ್ತಿ ಇದೆ. ಅವರ ಹಿಂದೆ ಹೋಗಿ ಏನೋ ಬೇರೆ ಕಾಣುತ್ತೇನೆ ಎಂದು ನಿರಾಶೆಗೊಳ್ಳುತ್ತಾರೆ. ತನ್ನನ್ನು ತಾನು ಶಾಂತಿಯಿಂದ, ಎಚ್ಚರಿಕೆಯ ಕಣ್ಣಿನಿಂದ ನೋಡಲು ಅರಿಯದೆ ಬೇರೆ ಕಣ್ಣಿನಿಂದ ನೋಡುತ್ತೇನೆ ಎಂದು ತನ್ನನ್ನೇ ಮರೆತು ಬೇರೆ ಏನನ್ನೋ ಹುಡುಕುವವರನ್ನು ಪ್ರೀತಿಂದ ಅಣ್ಣಗಳಿರಾ ಎಂದು ಸಂಬೊಧಿಸುತ್ತ ಕಳಕಳಿಯಿಂದ ನೀವು ನೋಡಿರಿ, ಕೇಳಿರಿ ಎಂದು ಹೇಳುತ್ತಿದ್ದಾಳೆ. ಬೆಳಗನ್ನು ಕಾಣಲು ಸಾಧ್ಯವಾಗುವುದು ಕೇವಲ ಎಚ್ಚರವೆಂಬ ಕಣ್ಣಿನಿಂದ. ಅದನ್ನು ಬಿಟ್ಟು ಅಂದರೆ ಎಚ್ಚರವಾಗಿರಲು ಸೋಮಾರಿತನದಿಂದ ಬೇರೆ ಕಣ್ಣಲಿ ನೋಡುತ್ತೇನೆ ಎಂಬುದು ಹುಚ್ಚುತನ. ಅಂತಹವರಿಗೆ ಯಾವುದು ಬೆಳಗು, ಯಾವುದು ಲಿಂಗ ಎಂಬುದನ್ನು ಅತ್ಯಂತ ಸರಳವಾಗಿ ತಿಳಿಸುತ್ತಿದ್ದಾಳೆ. ಮನಸ್ಸು ಆ ಮಹತ್ತಿನಲ್ಲಿ ನೆಲೆಗೊಳ್ಳುವುದೇ ಲಿಂಗವೆನ್ನುತ್ತಾಳೆ. ಎಲ್ಲರಿಗೂ ಆ ಮಹತ್ತಿನ ಅನುಭವ ಯಾವಾಗಲಾದರೊಮ್ಮೆಯಾದರೂ ಆಗಿಯೇ ಆಗುತ್ತದೆ. ಆದರೆ ಎಲ್ಲರೂ ಅದನ್ನು ಗುರುತಿಸುವುದಿಲ್ಲ. ತಮ್ಮ ತಮ್ಮ ಲೋಕದಲ್ಲಿ, ಇಂದ್ರಿಯಗಳ ಎಳೆದಾಟದಲ್ಲಿ ಸಿಲುಕಿಕೊಂಡಿರುವುದರಿಂದ ಅದು ಗಮನಕ್ಕೆ ಬರುವುದಿಲ್ಲ. ಅಪ್ಪಿ ತಪ್ಪಿ ಅದು ಅನುಭವಕ್ಕೆ ಬಂದರೂ ಮನಸ್ಸನ್ನು ಅದರಲ್ಲಿ ನಿಲ್ಲಿಸುವುದು ಕಷ್ಟ ಸಾಧ್ಯ. ಆದರೆ ಮನಸ್ಸನ್ನು ಅದರಲ್ಲಿ ನಿಲ್ಲಿಸುವುದೇ ಲಿಂಗವೆನ್ನುತ್ತಾಳೆ ಹಡಪದ ಲಿಂಗಮ್ಮ. ಅಷ್ಟೇ ಅಲ್ಲ ಮುಂದೆ, ಎಚ್ಚರವಾಗಿದ್ದು ಇಂದ್ರಿಯಗಳನ್ನು ಗಮನಿಸಿ ಅರಿತುಕೊಳ್ಳುವುದೇ ಬೆಳಗು ಎನ್ನುತ್ತಾಳೆ. ಇಲ್ಲಿ ಗಮನಿಸಬೇಕಾದದ್ದೇನೆಂದರೆ ಇಂದ್ರಿಯಗಳನ್ನು ತುಳಿಯಬೇಕು ಅಥವಾ ನಿಗ್ರಹಿಸಬೇಕೆಂದು ಅವಳು ಹೇಳುತ್ತಿಲ್ಲ. ಅವುಗಳನ್ನು ಅರಿತುಕೊಳ್ಳಬೇಕೆಂದು ಹೇಳುತ್ತಿರುವುದು ವಿಶೇಷ. ಏಕೆಂದರೆ ಇಂದ್ರಿಯಗಳನ್ನು ನಿಗ್ರಹಿಸುವುದಾಗಲಿ ಅಥವಾ ತುಳಿದಿಡುವುದಾಗಲಿ ಎರಡೂ ಅಪಾಯಕಾರಿ. ಏಕೆಂದರೆ ನಿಗ್ರಹ, ತುಳಿತ ಸ್ವಲ್ಪ ಸಡಿಲವಾದರೂ ಸಾಕು ಇಂದ್ರಿಯಗಳು ಇಮ್ಮಡಿ ಶಕ್ತಿಯಿಂದ ತಲೆ ಎತ್ತಿ ದಾರಿತಪ್ಪಿಸುತ್ತವೆ. ಇದರ ಪೂರ್ಣವಾದ ಅರಿವಿದ್ದುದರಿಂದಲೇ ಲಿಂಗಮ್ಮ ಇಂದ್ರಿಯಗಳ ಅರಿವು ದೂರ ಹೋಗಬೇಕಾಗಿಲ್ಲ. ಎಚ್ಚರವಾಗಿರುವ ಕಣ್ಣುಗಳ ಮುಂದೆಯೇ ಅದು ಇರುತ್ತದೆ. ಅವುಗಳ ಅರಿವೇ ಕಣ್ಣ ಮುಂದಿರುವ ಬೆಳಗು ಅಥವಾ ಜ್ಞಾನ ಎನ್ನುತ್ತಾಳೆ. ಆ ಬೆಳಗನ್ನು ಕಾಣಲು ಎಲ್ಲಿಯೂ ಹೋಗಬೇಕಾಗಿಲ್ಲ, ಇತರ ಜ್ಞಾನಿಗಳನ್ನು ಹಿಂಬಾಲಿಸಬೇಕಾಗಿಲ್ಲ. ಇದನ್ನು ಅರಿಯದೆ ಎಲ್ಲೋ ದೂರದಲ್ಲಿ ಘನವಾದದ್ದೇನೋ ಇದೆ ಎಂದು ಭಾವಿಸಿ ಅದನ್ನು ಪಡೆಯಲು ತೊಳಲುವುದು, ಬಳಲುವುದು ಜನರ ರೀತಿಯಾಗಿದೆ. ಇಲ್ಲಿ ಆಕೆ ಬಳಸಿದ ತೊಳಲುವುದು, ಬಳಲುವುದು ಎಂಬ ಪದಗಳನ್ನು ಗಮನಿಸ ಬೇಕು. ತನ್ನಲ್ಲಿ ಇರುವುದನ್ನು ಕಡೆಗಣಿಸಿ, ಇಲ್ಲದ್ದನ್ನು ಬೇರೆ ಎಲ್ಲಿಯೋ ಹುಡುಕಿದರೆ ತೊಳಲಿಕೆ ಬಳಲಿಕೆಯಲ್ಲದೆ ಏನೂ ದೊರಕದು. ಇಂತಹ ಕೆಲಸ ಮಾಡುವವರು ದೇವರ ನೆಲೆಯನ್ನರಿಯದೆ ಅರೆಮರುಳಾಗಿ ಹೋಗುತ್ತಾರೆ. ಅವರು ಆ ಮರುಳುತನದಿಂದ ಹೊರಬರುವುದು ಸಾಧ್ಯವೇ ಇಲ್ಲವೆನ್ನುವ ಧ್ವನಿ ವಚನದಲ್ಲಿದೆ.
ನಂಬರು ನೆಚ್ಚರು ಬರಿದೆ ಕರೆವರು ನಂಬಲರಿಯರೀ ಲೋಕದ ಮನುಜರು
ನಂಬಿ ಕರೆದಡೆ ಓ ಎನ್ನನೆ ಶಿವನು?
ನಂಬದೆ ನೆಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ
TRANSLITERATION
naMbaru neccaru baride karevaru
naMbalariyarI jagada manujaru
naMbi karedaDe O ennane shivanu?
namBade neccade baride karevara
koMba meTTi kUgeMda kUDalasaMgamadEva
CLICK HERE TO READ-ALONG:
http://www.youtube.com/watch?v=A3Oror0h0OI&feature=youtu.be
TRANSLATION (WORDS)
naMbaru (they don’t believe) neccaru (they don’t trust) baride (simply, just) karevaru( they call, plea)
naMbalariyaru ( don’t know to believe) I (this) jagada (world’s) manujaru (people)
naMbi (with belief) karedaDe (if one calls) O ennane (will he not respond?) shivanu (Shiva)?
namBade (without believing) neccade (without trusting) baride (simply) karevara ( of people who call)
koMba (horn- symbol of ego) meTTi (stamp, trample) kUgeMda ( announce, let others know it) kUDalasaMgamadEva (Kudalsamgamadeva)
TRANSLATION
They neither believe nor trust, but just call Him.
These people of the world, who don’t know how to believe!
If they call with belief and faith, would He not respond?
To those who call Him without belief or trust,
"Blow the horn and shout” says Kudala Sangama Deva.
COMMENTARY
In this popular Vachana, Basavanna identifies trust and belief as required prerequisites for true devotion. He says that people simply call on God when needed without true belief and trust (faith) and assume that He will respond with the requested favors. The Vachana advocates that people in this category must be shouted at with the highest vigor to cultivate belief and trust first.
We become devotees the moment a hardship arises and request God to favor us with all His powers. We go through ritualistic worship and chanting without even understanding the meaning behind them. We tend to show off that we are true devotees. All these are activities in vain, without the required faith and belief. Requisite for the development of faith and belief is the true knowledge and awareness of God.
Consider the mundane activity of using a car as our transportation. It is essential that we understand the essential features, capabilities and requirements for using it. We should know how to fill its tank with the fuel, occasionally wash it and clean it, get the maintenance done, so on. Further, we cannot expect the car to let us fly in it or transport us over the ocean. Once we understand its capabilities and develop faith in its fitness to be a safe transport, we can be sure that it serves the purpose well.
God cannot be seen or touched. He can only be experienced. Understanding Him requires a subtle and calm mind and a keen awareness. We need to gain such understanding and call Him with true faith and belief, for Him to respond. This process of learning the true nature of everything around us, not tinging them with our biases, realizing the true and natural relationships between entities seem to be the optimum living!
Let us become true believers and devotees!
KANNADA COMMENTARY
ಬಸವಣ್ಣವರು ಈ ವಚನದಲ್ಲಿ ತಮ್ಮನ್ನು ತಾವು ಭಕ್ತರೆಂದುಕೊಳ್ಳುವವರು ನಡೆದುಕೊಳ್ಳುವ ರೀತಿಯನ್ನು ಹೇಳುತ್ತಿರುವರು. ತಮ್ಮನ್ನು ತಾವು ಭಕ್ತರೆಂದು ಹೇಳಿಕೊಳ್ಳುವ ಸಾಮಾನ್ಯರು ದೇವರನ್ನು ನಿಜವಾಗಿ ನಂಬುವುದಿಲ್ಲ, ನಂಬಿದ್ದೇವೆ ಎಂದುಕೊಳ್ಳುತ್ತಾರೆ ಅಷ್ಟೆ. ಈ ಲೊಕದ ಜನರು ಶಿವನನ್ನು ನಂಬುವುದು ಏನೆಂದು ಅರಿಯರು. ಆದರೆ ಕಷ್ಟ ಬಂದಾಗ ಮಾತ್ರ ಕಷ್ಟದಿಂದ ಮುಕ್ತಿ ಪಡೆಯಲು ಆತನನ್ನು ಕರೆಯುವರು. ಅಂತಹವರ ಕರೆಗೆ ಶಿವನು ಓಗೊಡುವನೆ? ಇಂತಹವರನ್ನು “ನಂಬರು ನೆಚ್ಚರು ಬರಿದೆ ಕರೆವರು”ಎನ್ನುತ್ತಿದ್ದಾರೆ. ನಿಜವಾಗಿಯೂ ನಂಬಿ ಕರೆದರೆ ಶಿವನು ಖಂಡಿತವಾಗಿಯೂ ಕರೆಗೆ ಓಗೊಡುವನು ಎನ್ನುತ್ತಾರೆ.
ನಿಜವಾಗಿಯೂ ನಂಬುವುದು ಎಂದರೆ ಏನು?
ನಾವು ಯಾವುದನ್ನು ನಂಬುತ್ತೇವೆಯೋ ಅದರ ಬಗ್ಗೆ ನಮಗೆ ಸರಿಯಾದ ಜ್ಞಾನವಿರಬೇಕು. ಇಲ್ಲಿ ಒಂದು ಸಾಮಾನ್ಯವಾದ ಉದಾಹರಣೆಯನ್ನು ನೋಡ ಬಹುದು. ನಾವು ಸಂಚಾರಕ್ಕಾಗಿ ಕಾರನ್ನು ನಂಬುತ್ತೇವೆ ಎಂದಿಟ್ಟುಕೊಳ್ಳೋಣ. ಬರಿದೆ ಅದನ್ನು ನಂಬುವುದರಿಂದ ನಮ್ಮ ಸಂಚಾರದ ಎಲ್ಲ ಸಮಸ್ಯೆಗಳು ಬಗೆ ಹರಿಯುವುದಿಲ್ಲ. ಕಾರಿನ ಸಾಮರ್ಥ್ಯ, ಶಕ್ತಿ ಮತ್ತು ಅದರ ಅವಶ್ಯಕತೆಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಅದನ್ನು ಆಗಾಗ ಕಾಳಜಿ ವಹಿಸಿ ಸ್ವಚ್ಛಗೊಳಿಸಬೇಕಾಗುತ್ತದೆ. ಅದರ ಭಾಗಗಳು ಸರಿಯಾಗಿ ಕೆಲಸ ಮಾಡುವ ಸ್ಥಿತಿಯಲ್ಲಿವೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. ಅವು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ಇಂಧನವನ್ನು ತುಂಬಿಸಬೇಕಾಗುತ್ತದೆ. ಇಷ್ಟೆಲ್ಲ ಮಾಡಿದಾಗ ಮಾತ್ರ ಅದನ್ನು ಒಂದು ಸೀಮಿತವಾದ ಮಟ್ಟಕ್ಕೆ ನಂಬಬಹುದು. ಇದಾವುದನ್ನೂ ಮಾಡದೆ, ಕಾರಿನ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲದೆ, ಕಾರು ತನ್ನನ್ನು ನೀರಿನ ಮೇಲೆಯೂ ಕರೆದುಕೊಂಡು ಹೋಗಬೇಕು, ಆಕಾಶಮಾರ್ಗದಲ್ಲಿಯೂ ಕರೆದುಕೊಂಡುಹೋಗಬೇಕು, ತನ್ನ ಸಂಚಾರದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಸೆಪಟ್ಟರೆ ಆ ಆಸೆ ಪೂರ್ತಿಯಾಗುತ್ತದೆಯೇ? ಖಂಡಿತವಾಗಿಯೂ ಇಲ್ಲ.
ಈ ಎಲ್ಲದರ ಅರ್ಥವೇನಾಯಿತು?
ಅಂದರೆ ಕಾರನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳುವುದು, ಅದರ ಬಗ್ಗೆ ಪೂರ್ಣವಾದ ಅರಿವು ಪಡೆಯುವುದು ಎಂದಲ್ಲವೆ. ಆ ಅರಿವು ವೈಜ್ಞಾನಿಕವಾದದ್ದು. ಅಂದರೆ ಅದರ ಬಗ್ಗೆ ನಮ್ಮ ತಿಳಿವಳಿಕೆಗೆ ಒಂದು ಗಟ್ಟಿಯಾದ ಆಧಾರವಿರುತ್ತದೆ. ಅದು ಕೇವಲ ಕುರುಡು ನಂಬಿಕೆಯಲ್ಲ. ಅಲ್ಲವೆ?
ಇದೇ ರೀತಿಯಾಗಿ ದೇವರ ಬಗ್ಗೆಯೂ ನಮ್ಮ ಅರಿವು ಗಟ್ಟಿಯಾಗಿರಬೇಕಾಗುತ್ತದೆ. ಅದು ಅರ್ಥವಿಲ್ಲದ ಯಾವುದೋ ಕುರುಡು ನಂಬಿಕೆಯಾಗಿರಬಾರದು. ದೇವರ ಬಗ್ಗೆ ಗಟ್ಟಿಯಾದ ಅರಿವನ್ನು ಹೊಂದಲು ಮನಸ್ಸು ಅತ್ಯಂತ ಸೂಕ್ಷ್ಮವಾಗಬೇಕಾಗುತ್ತದೆ, ಏಕೆಂದರೆ ದೇವರು ಕಣ್ಣಿಗೆ ಕಾಣುವ ಅಥವಾ ಕೈಯಿಂದ ಮುಟ್ಟಬಹುದಾದಂತಹ ವಸ್ತುವಲ್ಲ. ಅವನು ಕೇವಲ ಅನುಭಾವಕ್ಕೆ ಬರುವವನು. ಪ್ರಕೃತಿಯಲ್ಲಿಯ ಪ್ರತಿಯೊಂದರ ಸಂಬಂಧವನ್ನು ಆಳವಾಗಿ ಅವಲೋಕಿಸಿ ಅರ್ಥಮಾಡಿಕೊಳ್ಳಬೇಕಾಗುತ್ತದೆ, ಪ್ರಕೃತಿಯಲ್ಲಿ “ಇರುವುದನ್ನು” ಇರುವಂತೆಯೆ, ಅದಕ್ಕೆ ಯಾವುದೇ ಬಣ್ಣವು ಅಂಟಿಸದೆ ಅದರ ನಿಜವಾದ ರೂಪದಲ್ಲಿ ಕಂಡುಕೊಳ್ಳಬೇಕಾಗುತ್ತದೆ. ಆಗ ಮಾತ್ರ ಪ್ರಕೃತಿಯಲ್ಲಿ ಇಲ್ಲದೆ ಇರುವುದನ್ನು ಬೇಡುವುದರ ನಿರರ್ಥಕತೆ ಅರಿವಿಗೆ ಬರುತ್ತದೆ. “ಇರುವುದರ” ಬಗ್ಗೆ ಅಲ್ಲಿ ನಿಜವಾದ ನಂಬಿಕೆಯುಂಟಾಗುತ್ತದೆ. ಅಂತಹ ನಿಜವಾದ ನಂಬಿಕೆಗೆ ದೇವರು ಖಂಡಿತವಾಗಿಯೂ ಸ್ಪಂದಿಸುತ್ತಾನೆ ಎನ್ನುತ್ತಾರೆ ಬಸವಣ್ಣನವರು.
ಇದಾವುದನ್ನೂ ಮಾಡದೆ ಬರಿದೆ ದೇವರನ್ನು ನಂಬಿದ್ದೇನೆ ಎಂದುಕೊಂಡು ಆತನನ್ನು ಕರೆಯುವುದು, “ನಾನು ನಂಬಿದ್ದೇನೆ” ಎನ್ನುವ ಅಹಂಭಾವವಾಗುತ್ತದೆ. ಅಂತಹವರನ್ನು ಮೆಟ್ಟಿ ಕೂಗೆನ್ನುತ್ತಾರೆ, ಅವರ ಅಹಂಭಾವವನ್ನು ತುಳಿದು ಕೂಗಿ ಘೋಷಿಸು ಎನ್ನುತ್ತಾರೆ ಬಸವಣ್ಣನವರು.
ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ?
ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ?
TRANSLITERATION
ettaNa maamara ettaNa kOgile ettaNiMdetta saMbaaMdhavayyaa?
beTTada nellikaayi samudradoLagaNa uppu ettaNiMdetta saMbaMdhavayyaa?
guhEshvara liMgakkeyU enageyU ettaNiMdetta saMbaMdhavayyaa?
CLICK HERE TO READ-ALONG:
http://www.youtube.com/watch?v=6YTu7gqeucA&feature=youtu.be
TRANSLATION (WORDS)
ettaNa ( from where ) maamara(mango tree) ettaNa (from where) kOgile (Nightingale, koel bird) ettaNiMdetta (how are they) saMbaaMdhavayyaa?(connected, What is the relationship)
beTTada(of the hill) nellikaayi(goose berry) samudradoLagaNa( in the sea) uppu (salt) ettaNiMdetta(how are they ) saMbaMdhavayyaa?(connected? ,How are they related?)
guhEshvara liMgakkeyU( Guheshvara Linga and) enageyU ( me) ettaNiMdetta (how are they) saMbaMdhavayyaa?( connected? What is the relationship?)
TRANSLATION
The Mango tree and the Nightingale bird, how are they related?
The mountain Goose berry and the salt from the sea, how are they related?
Lord Guheshvara Linga and and me, how are we related?
COMMENTARY
In this very popular Vachana from Allama Prabhu, he wonders about the relation between two sets of disparate entities to drive home the catalyst needed to accomplish the merger (Saamarasya) of the individual (Jeevatma, Anga) with the Lord (Paramaatma, Linga). Through his wondering style, Allama Prabhu succeeds in raising the curiosity of the listener as to what the Vachana is about to address.
A Mango tree with its ever full foliage is hardly noticed by anyone during most of the year. As the Spring arrives, it starts putting out golden pink leaves, followed by fragrant flowers and delicious fruits. The Nightingale bird mute hitherto gets attracted by this transformed tree and starts making its melodies. The tree and the bird were totally unrelated until the arrival of Spring. The Spring season is the catalyst to bring the two together and cultivate the best in both.
The Goose berry grown on trees somewhere in the forest is very astringent in taste. It is certainly far away from the sea. But when a chemist separates salt from the sea, and the gooseberry is eaten with the salt, the combination of astringent and salt tastes very good. The chemist is the catalyst for this transformation.
Allama prabhu wonders as to what is the relation between the omnipotent, omniscient, omnipresent Lord (who is pure, beyond the influence of Maya or worldly lures, who is beyond time and causes and effects, so on) and an individual (who is immersed in Maya and materialistic pursuits, lives in past and future, consumed by ego, so on). The catalyst needed to forge the relation between the two entities here, is the awakening of the awareness in the individual of the Lord within. We have said that when the intense desire to seek the spiritual path sprouts in the individual, a teacher (Guru) appears to guide him towards the merger with the Lord (i.e. Linga-Anga Saamarsya, or reaching the Bayalu, realizing the Self, achieving the Null!).
The nature has disparate entities seemingly and usually unrelated at the first sight. When we develop the inclination to see the finer details and develop the awareness to fuse them, we see the world in its finest glory.
Let us seek the fineness in everything around us!
KANNADA COMMENTARY
“ಎತ್ತಣ ಮಾಮರ ಎತ್ತಣ ಕೋಗಿಲೆ” ಎಂಬ ಅಲ್ಲಮ ಪ್ರಭುಗಳ ಈ ವಚನ ಕಿವಿಗೆ ಎಷ್ಟು ಆಪ್ಯಾಮಾನವೋ ಮತ್ತು ಎಷ್ಟು ಪ್ರಸಿದ್ಧವೋ ಅಷ್ಟೇ ಅದರ ಭಾವ ಕೂಡ ಸುಂದರವಾಗಿದೆ. ಅನುಭಾವಿಗಳಾದ ಅಲ್ಲಮರೇ ಕೌತುಕಗೊಳ್ಳುವಂತೆ ಮಾಡಿದ ವಿಷಯವನ್ನು ಎಲ್ಲರಲ್ಲಿ ಇನ್ನೂ ಹೆಚ್ಚಿನ ಕೌತುಕ ಹುಟ್ಟುವಂತೆ ಹೇಳಿದ್ದಾರೆ ಈ ವಚನದಲ್ಲಿ.
ಇಲ್ಲಿ ಮಾಮರ ಮತ್ತು ಕೋಗಿಲೆಯ, ಬೆಟ್ಟದ ನೆಲ್ಲಿಕಾಯಿ ಮತ್ತು ಉಪ್ಪಿನ. ಪರಮಾತ್ಮ ಮತ್ತು ಜೀವಾತ್ಮನ ಸಂಬಂಧದ ಬಗ್ಗೆ ಹೇಳುತ್ತಿದ್ದಾರೆ. ಮಾಮರ ಮತ್ತು ಕೋಗಿಲೆಗಳು ಇಡೀ ವರ್ಷವೆಲ್ಲ ಯಾರ ಗಮನಕ್ಕೂ ಬಾರದೆ, ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಇರುತ್ತವೆ. ಆದರೆ ವಸಂತ ಋತು ಬಂತೆಂದರೆ ಸಾಕು ಮಾಮರ ಅಗಾಧ ಸೌಂದರ್ಯದ ಗಣಿಯಾಗುತ್ತದೆ. ತಾಮ್ರವರ್ಣದ ಚಿಗುರುಗಳು ಕೆಲ ಸಮಯದಲ್ಲಿಯೇ ಪಚ್ಚೆಬಣ್ಣ ತಾಳುತ್ತವೆ, ಇಡೀ ಮರವು ಹೊಸ ಕಾಂತಿಯಿಂದ ನಳನಳಿಸುತ್ತದೆ. ನವಿರಾದ ಸುಗಂಧ ಬೀರುವ ಹೂವಿನ ಗೊಂಚಲುಗಳು ಮರವೆಲ್ಲ ಆವರಿಸಿಬಿಡುತ್ತವೆ. ಎಲ್ಲಿಯೋ ಮೂಕವಾಗಿದ್ದ ಕೋಗಿಲೆ ಇದ್ದಕ್ಕಿದ್ದಂತೆ ಕಂಠಸಿರಿಯಿಂದ ಅವತರಿಸುತ್ತದೆ. ಮಾಮರಕ್ಕೆ ಬಂದು ಪಂಚಮ ಸ್ವರದಲ್ಲಿ ಉತ್ಕಟತೆಯನ್ನು ತೋರುತ್ತ ಮಧುರ ಗಾನದಲ್ಲಿ ತೊಡಗುತ್ತದೆ. ಇದು ಎಂತಹ ಸಂಬಂಧವೆಂದು ಅಲ್ಲಮರು ಅಚ್ಚರಿಗೊಳ್ಳುತ್ತಾರೆ. ಅದೇ ರೀತಿ ಬೆಟ್ಟದ ನೆಲ್ಲಿಕಾಯಿಯು ಎಲ್ಲೋ ದೂರದ ಕಾಡಿನಲ್ಲಿ ಬೆಳೆಯುತ್ತದೆ. ಉಪ್ಪು, ಸಮುದ್ರದ ನೀರಿನಲ್ಲಿ ಅಡಗಿರುತ್ತದೆ. ರಸಜ್ಞನೊಬ್ಬನು ಅ ಸಮುದ್ರದ ನೀರಿನಲ್ಲಿಯ ಉಪ್ಪನ್ನು ಬೇರ್ಪಡಿಸಿದಾಗ, ಅದನ್ನು ನೆಲ್ಲಿಯಕಾಯಿಯ ಜೊತೆಗೆ ತಿಂದಾಗ ಬೆಟ್ಟದ ನೆಲ್ಲಿಕಾಯಿಯ ಒಗರು ರುಚಿ ಉಪ್ಪಿನ ರುಚಿಯ ಜೊತೆ ಸೇರಿ. ತಿನ್ನಲು ಇನ್ನೂ ಹಿತವಾಗಿರುತ್ತದೆ. ಅದರ ಸ್ವಾದವನ್ನು ತಿಂದೇ ಅನುಭವಿಸಬೇಕು. ಇಂತಹ ಆಪ್ಯಾಯಮಾನವಾದ ರುಚಿಯನ್ನು ಕೊಡುವ ಈ ಎರಡರ ಸಂಬಂಧವೆಂತಹುದು? ಎಂದು ಅಚ್ಚರಿಪಡುತ್ತಾರೆ ಅಲ್ಲಮರು. ಪ್ರಕೃತಿಯಲ್ಲಿನ ಈ ಎರಡು ಉದಾಹರಣೆಗಳ ನಂತರ ಈಗ ಅಲ್ಲಮರು ಈಶ್ವರ ಮತ್ತು ಜೀವರ ಸಂಬಂಧದ ಬಗ್ಗೆ ಹೇಳುತ್ತಾರೆ. ಗುಹೆಶ್ವರ ಲಿಂಗಕ್ಕೂ ಮತ್ತು ತನಗೂ ಎಂಲ್ಲಿಂದೆಲ್ಲಿಯ ಸಂಬಂಧವೆನ್ನುತ್ತಾರೆ. ಎಲ್ಲ ಗುಣಗಳನ್ನು ಮೀರಿದವನು, ನಿಷ್ಕಳಂಕನು, ಶಬ್ದಾತೀತನು, ಮಾಯಾತೀತನು, ಸಂಸಾರದ ಆಗುಹೋಗುಗಳಿಗೆ ಸಿಲುಕದವನು, ಕಾಲಾತೀತನು ಆದ ಗುಹೇಶ್ವರನಿಗೂ ಮತ್ತು ಕಾಮಾದಿಗಳಲ್ಲಿ ಮುಳುಗಿ ನರಳುವ, ಸಂಸಾರ ಸಾಗರದಲ್ಲಿ ತೊಳಲುವ, ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಉಯ್ಯಾಲೆಯಾಡುವ, ಅಹಂಕಾರದಿಂದ ಮೆರೆದಾಡುವ ಈ ಜೀವನಿಗೂ ಎಲ್ಲಿಂದೆಲ್ಲಿಯ ಸಂಬಂಧವೆಂದು ಅಚ್ಚರಿ ಪಡುತ್ತಾರೆ ಅಲ್ಲಮರು. ಎಲ್ಲವನ್ನೂ ಮೀರಿ ಅನಂತ ಎತ್ತರದಲ್ಲಿರುವ ಆ ಗುಹೇಶ್ವರನಿಗೂ ಈ ಸಂಸಾರದ ಕೆಸರಿನಲ್ಲಿ ತೊಳಲುತ್ತಿರುವ ಜೀವನಿಗೂ ಸಂಬಂಧವೇ ಇಲ್ಲದಂತೆ ತೋರುತ್ತದೆ. ಆದರೆ ಸಮಯ ಕೂಡಿದಾಗ, ಗುರುವಿನ ಕರುಣೆಯಾದಾಗ, ಆ ಪರಮಾತ್ಮನ ಒಲವು ಜೀವನ ಮೇಲೆ ಹರಿದಾಗ ಈ ಎರಡೂ ಒಂದಾಗುತ್ತವೆ. ಪರಮಾತ್ಮ ಮತ್ತು ಜೀವಾತ್ಮನ ಈ ಸಂಬಂಧವು ಅತ್ಯಂತ ಆಶ್ಚರ್ಯಕರವಾದದ್ದು ಎಂಬುದನ್ನು ಕೇವಲ ಉದ್ಗಾರಗಳ ಮೂಲಕ ಈ ವಚನದಲ್ಲಿ ವ್ಯಕ್ತ ಪಡಿಸುತ್ತಿದ್ದಾರೆ. ಮಾಮರ ಮತ್ತು ಕೋಗಿಲೆಯ ಸಂಬಂಧದಲ್ಲಿ ವಸಂತ ಋತು ಅವುಗಳನ್ನು ಕೂಡಿಸುವ ನೆಪವಾಗುತ್ತದೆ. ಬೆಟ್ಟದ ನೆಲ್ಲಿಕಾಯಿ ಮತ್ತು ಉಪ್ಪಿನ ಸಂಬಂಧವನ್ನು ಹೊಸೆಯಲು ರಸಜ್ಞನು ನೆಪವಾಗುತ್ತಾನೆ, ಮತ್ತು ಈಶ್ವರ ಮತ್ತು ಜೀವನ ಸಂಬಂಧ ಹೊಸೆಯಲು ಗುರುವು ಕಾರಣನಾಗುತ್ತಾನೆ. ಈ ಪ್ರಕೃತಿಯಲ್ಲಿ ಎಲ್ಲವೂ ಎಲ್ಲೆಲ್ಲೋ ದೂರದೂರದಲ್ಲಿ ಇರಬಹುದು. ಆದರೆ ಎಲ್ಲವೂ ಒಂದಕ್ಕೊಂದು ಕಣ್ಣಿಗೆ ಕಾಣಲಾರದ, ಶಬ್ದಗಳಲ್ಲಿ ವ್ಯಕ್ತಪಡಿಸಲಾರದ ಸಂಬಂಧ ಹೊಂದಿರುತ್ತವೆ. ಸುಪ್ತವಾದ ಅಂತಹ ಸಂಬಂಧವನ್ನು ನಾವು ಕಂಡುಕೊಳ್ಳುವುದು ಅಥವಾ ಆ ಸಂಬಂಧಕ್ಕೆ ಸಂವೇದನಶೀಲರಾಗಿರುವುದು ಮುಖ್ಯವಾದದ್ದು, ಆ ಸಂವೇದನಾಶೀಲತೆಯು ನಮ್ಮನ್ನು ಪರಮಾತ್ಮನ ಜೊತೆಗೂಡಿಸತ್ತದೆ ಎಂಬ ಧ್ವನಿ ಈ ವಚನದ್ದು.
ಘನಗಂಭೀರ ಮಹಾವಾರುಧಿಯಲ್ಲಿ
ನೊರೆ ತೆರೆ ಬುದ್ಬುದ ಫೇನ ತರಂಗಗಳು ತೋರಿತ್ತಲ್ಲಾ ಎಂದಡೆ
ಅವು ಬೇರೆಯಾಗಬಲ್ಲವೆ?
ಪರ ಶಿವನೆಂಬ ಅಂಬುಧಿಯಲ್ಲಿ
ಸಕಲ ಬ್ರಹ್ಮಾಂಡಗಳಾದವಲ್ಲದೆ ಬೇರಾಗಬಲ್ಲವೆ?
ಇದ ಬೇರೆಂಬ ಅರೆಮರುಳರ ನಾನೇನೆಂಬೆ?
ವಿಶ್ವವ ತಿಳಿದು ನೋಡಲು ಚೀಮಲಿಂಗೆಯ ಚೆನ್ನರಾಮನೆಂಬ ಲಿಂಗವು ತಾನೆ!
TRANSLITERATION
Ghana gaMbhIra mahaavaarudhiyalli
Nore tere budbuda phEna taraMgagaLu tOrittallaa eMdaDe
avu bEreyaagaballave?
parashivaneMba aMbudhiyalli
sakala brahmaaMDagaLaadavallade bEraagaballave?
Ida bEreMba aremaruLara naanEneMbe?
Vishvava tiLidu nODalu cImaliMgeya cennaraamaneMba liMgavu taane!
CLICK HERE TO READ-ALONG:
http://www.youtube.com/watch?v=JK9r3HOkCMI&feature=youtu.be
TRANSLATION (WORDS)
Ghana (profound) gaMbhIra (sublime) mahaavaarudhiyalli ( in the enormous ocean) Nore (froth) tere (ripple) budbuda( bubble) phEna ( foam) taraMgagaLu (waves) tOrittallaa (seen) eMdaDe(if said) avu (they) bEre (separate, diferent) aagaballuve?( can they be?) parashivanu (the Supreme Lord) eMba( said) aMbudhiyalli (in the ocean) sakala( all, entire) brahmaaMDagaLu (cosmos) aaduvallade (have not taken birth?) bEraagaballave? (will they be different, separate?)
Ida (this) bEreMba( saying, considering different) aremaruLara( half-witted individuals) naanEneMbe?(what can I call?)
Vishvava(the Universe) tiLidu(understanding) nODalu (seen) cImaliMgeya cennaraamaneMba liMgavu (it is cimalingeya cennaraama Linga) taane (alone).
TRANSLATION
How can the froth, ripple, bubbles, foam and waves seen in the profound, sublime and enormous ocean, be separate from it (the ocean)?
How can the entire Cosmos having taken its birth in the ocean known as the Lord Supreme, be separate from Him?
What shall I call the half-witted individuals who call them separate?
To observe and understand the Universe in full, all one needs is cimalingeya cennaraama Linga!
COMMENTARY
In this Vachana, Sharana Chandimarasa is emphasizing that despite multiple forms, there is only one Supreme Lord. The froth, ripples, bubbles and waves all appear in the ocean as distinct entities. But, they all belong to the ocean, with their basic constituent of water. Along the same lines, the entire Cosmos has taken its birth from the Supreme Lord. The Cosmos consisting of Universe, the planets, the stars, etc. are infinite forms of Him and are not separate from Him. Chandimarasa calls those trying to separate the two as half-witted and proclaims that all one needs to understand the Universe, is just concentrating on the Lord. He uses the Cennaraama Linga of Cimalinge as his signature.
Allama Prabhu said that the basic truth (the Lord) is one, but takes infinite forms. Chandimarasa is supporting that notion. We have said that every being in the Universe (Jeevaatma) has a spark of the Supreme soul (Paramaatma). Thus the Lord exists in each of us and each of us exists in Him. Krishna in Bhagavad Gita said that “He is in all and all are in Him”.
Although the froth, ripples and waves are distinct forms, it is very easy to realize that their prime constituent is the water in the ocean. These forms do not have separate existence from water. All the entities around us (planets, plants, animals, etc.) are so different in their form, it is difficult for us to realize that the basic constituent of each is the Lord. Such realization requires a subtle awareness. Development of such awareness requires a calm and settled mind.
Let us realize, that one Lord in all we see !
KANNADA COMMENTARY
ಇದು ಶರಣ ಚಂದಿಮರಸರ ವಚನ. ಇಲ್ಲಿ ದೇವರ ರೂಪಗಳು ಬೇರೆಬೇರೆಯಾದರೂ ಆ ಪರಶಿವನು ಒಬ್ಬನೇ ಎಂಬುದನ್ನು ಅವರು ಉದಾಹರಣೆ ಸಹಿತ ತಿಳಿಸುತ್ತಿದ್ದಾರೆ. ಮಹಾಸಾಗರದಲ್ಲಿ ಕಂಡು ಬರುವ ಗುಳ್ಳೆ, ನೊರೆ, ತೆರೆಗಳನ್ನು ಸಾಗರವಲ್ಲದೆ ಬೇರೆ ಎನ್ನಬಹುದೆ? ಅವು ಸಾಗರದ ಮೇಲ್ಭಾಗದಲ್ಲ್ಲಿ ಮಾತ್ರ ಕಂಡು ಬರುತ್ತವೆ. ಅಂದಮಾತ್ರಕ್ಕೆ ಅವು ಸಾಗರದಿಂದ ಬೇರೆಯಾಗಬಲ್ಲುವೆ? ಇಲ್ಲ. ಅದೇ ರೀತಿಯಾಗಿ ಪರಶಿವನೆಂಬ ಸಾಗರದಲ್ಲಿ ಸಕಲ ಬ್ರಹ್ಮಾಂಡಗಳಿವೆ. ಇಡೀ ವಿಶ್ವ, ಸೂರ್ಯ ಚಂದ್ರ ಇತರ ಗ್ರಹಗಳು, ಆಕಾಶಗಂಗೆಗಳು, ಉಳಿದೆಲ್ಲವೂಗಳು ಆತನಲ್ಲಿಯೇ ಜನ್ಮತಾಳಿವೆ. ಅಂದಮೇಲೆ ಅವು ಆತನಿಂದ ಹೇಗೆ ಬೇರೆಯಾಗಬಲ್ಲವು? ಇದನ್ನು ಅರ್ಥಮಾಡಿಕೊಳ್ಳದೆ ಅವುಗಳನ್ನು ಬೇರೆ ಎನ್ನುವ ಅರೆಮರುಳರನ್ನು ಏನೆನ್ನಬೇಕು ಎಂದು ಕೇಳುತ್ತಾರೆ. ಹಿಂದೆ ಅಲ್ಲಮರು ಹೇಳಿದಂತೆ ಇರುವ ಆ ಒಂದು ತತ್ವವೇ ಬೇರೆ ಬೇರೆ ರೂಪದಲ್ಲಿ ಪ್ರಕಟವಾಗುತ್ತದೆ. ಅಂದಮಾತ್ರಕ್ಕೆ ಅದನ್ನು ಬೇರೆ ಬೇರೆ ಎನ್ನಲಾಗುವುದಿಲ್ಲ.
ನೀರಿನಲ್ಲಿ ಕಂಡು ಬರುವ ಅಲೆ,ಫೇನ, ಗುಳ್ಳೆಗಳು ಕೂಡ ನೀರೇ ಎಂದು ಅರ್ಥಮಾಡಿಕೊಳ್ಳುವುದು ಸುಲಭ. ಏಕೆಂದರೆ ಅವು ಇನ್ನೂ ನೀರಿನಲ್ಲಿಯೇ ಕಂಡುಬರುತ್ತವೆ.ಅವುಗಳಿಗೆ ನೀರಿನಿಂದ ದೂರವಾದ ಮೇಲೆ ಬೇರೆ ಅಸ್ತಿತ್ವವಿಲ್ಲ. ಆದರೆ ಪ್ರಕೃತಿಯಲ್ಲಿ ಇತರ ರೂಪಗಳು ಬಹು ಭಿನ್ನ ಭಿನ್ನವಾಗಿ ಕಂಡುಬರುತ್ತವೆ. ಅದು ಕೇವಲ ತೋರಿಕೆ. ಆದರೆ ಅವುಗಳ ರೂಪ ಸಂಪೂರ್ಣ ಭಿನ್ನವಾಗಿ ಕಾಣುತ್ತದೆ. ಆ ವಿಭಿನ್ನ ವಾದ ರೂಪಗಳ ಹಿಂದೆಯೂ ಕೂಡ ಅದೇ ತತ್ತ್ವ ಅಡಕವಾಗಿದೆ, ಆ ಎಲ್ಲವೂ ಕೂಡ ಒಂದೇ ಎಂದು ಕಂಡುಕೊಳ್ಳಲು ಸೂಕ್ಷ್ಮವಾದ ದೃಷ್ಟಿಯ ಅವಶ್ಯಕತೆ ಇದೆ. ಆ ಸೂಕ್ಷ್ಮ ದೃಷ್ಟಿ ಅಳವಡಬೇಕಾದರೆ ಮನಸ್ಸು ಶಾಂತವಾಗಬೇಕು. ಈ ರೀತಿಯಾಗಿ ಚೀಮಲಿಂಗೆಯ ಚೆನ್ನರಾಮನನ್ನು ಅರ್ಥಮಾಡಿಕೊಳ್ಳದ ಜನರು ಅರೆಮರುಳು ಎನ್ನುವರು ಚಂದಿಮರಸರು.