Friday, February 17, 2012

Vachana 77: Ajnaanavemba Thottilolage – Reaching Self

ಅಜ್ಞಾನವೆಂಬ ತೊಟ್ಟಿಲೊಳಗೆ
ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರವೆಂಬ ನೇಣಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿ ಎಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂದಲ್ಲದೆ
ಗುಹೇಶ್ವರ ಲಿಂಗ ಕಾಣಬಾರದು

TRANSLITERATION

Aj~jaanaveMba toTTiloLage
J~jaanaveMba shishuva malagisi
Sakala vEdashaastraveMba nENakaTTi
hiDidu tUgi jOguLavaaDuttiddaaLe bhraaMtieMba taayi
toTTilu muridu nENu haridu jOguLa niMdallade
guhEshvara liMga kaaNabaaradu


CLICK HERE TO READ-ALONG:
http://www.youtube.com/watch?v=pZL4UthsvbY

TRANSLATION (WORDS)

Aj~jaanaveMba ( of ignorance ) toTTiloLage (in the cradle )
J~jaanaveMba ( of awareness) shishuva (infant) malagisi (putting to sleep)
Sakala ( entire) vEdashaastraveMba (of, vEda and shaastras) nENa ( rope) kaTTi (tied)
hiDidu (holding) tUgi (swinging) jOguLavaaDuttiddaaLe (singing a lullaby) bhraaMtieMba (of illusion) taayi (mother)
toTTilu (cradle) muridu ( broken) nENu (rope) haridu (ripped, torn) jOguLa (lullaby) niMdallade (unless ended)
guhEshvara liMga (Guheshvara Linga)kaaNabaaradu (cannot be seen)


TRANSLATION

In the cradle of ignorance,
Putting the infant of awareness to sleep,
Hanging the cradle with ropes of the entire Vedas and Sacraments,
The mother  illusion is holding the ropes, swinging the cradle and singing lullabies.
Unless the cradle is broken, rope is torn and lullaby ended,
Guheswara Linga cannot be seen!


COMMENTARY

This beautiful Vachana from Allama Prabhu depicts the state of affairs of our daily lives with a simple simile. The mother (named illusion) is putting the infant (of Awareness) to sleep in the cradle of ignorance. She has tied the cradle with the ropes of sacred texts and rituals, swinging the cradle and singing lullabies. Allama Prabhu says that the Lord cannot be realized (seen) unless the cradle is broken, ropes are torn and lullaby is ended.

There is a cradle with an infant in it. The cradle is hanging from the roof with ropes tied to it. The mother is holding those ropes to swing the cradle and she is singing lullabies to put the infant to sleep. The major intention on the part of the mother here is to make sure that the infant goes to sleep and does not wake up. Our soul is the infant. He is pure and awareness is his inherent attribute. This soul gets hidden (sleeps) in the cradle of ignorance (our bodies, our concepts of life and death, etc.). Mere reading of Vedas and following rituals routinely adds another layer to the ignorance covering the true nature of the soul further. We become victims of illusion (me, mine, I did it, etc.) which is the mother here utilizing the ropes and lullaby to keep the soul in the covered state. Allama Prabhu urges us to remove the three sheaths (ignorance, routine dependence on sacred texts and rituals and illusion) to realize the ‘self’ (reach or see the Lord).
Awareness is our inherent nature. It needs to be awakened. Instead we cover it with ignorance. We depend on the reasoning and rituals handed to us from previous generations. These will have lost their meanings and pertinence due to time and changing environments. When they are accepted without questioning, we end up covering the true awareness within us. All the material comforts sing the lullaby to keep the infant of awareness at sleep. The infant has begun to believe that the sleep is the pleasure of life. The mother of illusion is simply adding to the cover of ignorance. We need to escape from this cover of ignorance. We need to remove our attachment to the materialistic comforts as the way to be. We need to awaken the awareness from its hidden state to let us realize the Lord within us.


Let us uncover and shine our Awareness!


KANNADA COMMENTARY

ಇದು ಅಲ್ಲಮಪ್ರಭುಗಳ ಬಹು ಸುಂದರವಾದ ವಚನ. ಈ ಜಗತ್ತಿನಲ್ಲಿ ನಡೆಯುತ್ತಿರುವುದರ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಜ್ಞಾನವೆಂಬ ಮಗುವನ್ನು ಅಜ್ಞಾನವೆಂಬ ತೊಟ್ಟಿಲಲ್ಲಿ ಮಲಗಿಸಿಲಾಗಿದೆ. ಆ ತೊಟ್ಟಿಲನ್ನು ವೇದಶಾಸ್ತ್ರಗಳೆಂಬ ಹಗ್ಗದಿಂದ ಕಟ್ಟಲಾಗಿದೆ. ಅದನ್ನು ಭ್ರಾಂತಿ ಎಂಬ ತಾಯಿ ಜೋಗುಳವನ್ನು ಹಾಡುತ್ತ ನಿದ್ರೆಗೆ ತಳ್ಳುತ್ತಿದ್ದಾಳೆ. ಆ ಜ್ಞಾನವೆಂಬ ಶಿಶು ಎಚ್ಚರಗೊಳ್ಳಬೇಕಾದರೆ ತೊಟ್ಟಿಲು ಮುರಿಯಬೇಕು, ನೇಣು ಹರಿಯಬೇಕು. ಹಾಗಾಗದಿದ್ದಲ್ಲಿ ಗುಹೇಶ್ವರ ಲಿಂಗವು ಕಾಣುವುದಿಲ್ಲ ಎಂದು ಹೇಳುತ್ತಾರೆ ಅಲ್ಲಮ ಪ್ರಭುಗಳು.

ಜ್ಞಾನವು ಸುಪ್ತವಾಗಿರುತ್ತದೆ. ಅದನ್ನು ಎಚ್ಚರಗೊಳಿಸಬೇಕು. ಆದರೆ ಅದಕ್ಕೆ ಬದಲಾಗಿ ಅದನ್ನು ಇನ್ನೂ ಹೆಚ್ಚಿನ ಅಜ್ಞಾನಕ್ಕೆ ತಳ್ಳಲಾಗುತ್ತದೆ. ಆ ಶಿಶುವಿನ ಸುತ್ತ ಇರುವುದೆಲ್ಲ ಅಜ್ಞಾನವೇ. ಎಲ್ಲವೂ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಯಾಂತ್ರಿಕವಾಗಿ ಹರಿದು ಬಂದ ಒಂದು ರೀತಿಯ ಮಾಹಿತಿ ಅಷ್ಟೆ. ಅಥವಾ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಿದುಬಂದ ಆಚಾರವಿಚಾರಗಳು. ಈ ರೀತಿಯಾಗಿ ಹರಿದುಬಂದ ಮಾಹಿತಿ ಮತ್ತು ಆಚಾರ ವಿಚಾರಗಳನ್ನು ಪ್ರಶ್ನಿಸದೆ ಸ್ವೀಕರಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಆ ಯಾವುದರಲ್ಲಿಯೂ ಹೊಸತನವಿಲ್ಲ. ಅವುಗಳಲ್ಲಿಯ ಸತ್ವ ಎಂದೋ ಮಾಯವಾಗಿದೆ. ಸುಖದ ಪರಿಕಲ್ಪನೆ ಕೂಡ ಇನ್ನೊಬ್ಬರಿಂದ ಬಂದದ್ದು. ನಿಜವಾದ ಸುಖದ ಅರ್ಥವೇ ತಿಳಿಯದೆ ಯಾವ್ಯಾವುದನ್ನೋ ಸುಖವೆಂದು ಭಾವಿಸಿ ಅದನ್ನು ಅರಸುವ ಧಾವಂತ. ಆದರೆ ಅದರ ಅರಿವೇ ಇಲ್ಲದೆ ಶಿಶು ಅಜ್ಞಾನದ ತೊಟ್ಟಿಲಲ್ಲಿ ನಿಶ್ಚಿಂತೆಯಿಂದ ಮಲಗಿದೆ. ಆ ನಿದ್ರೆಯನ್ನೇ ಸುಖವೆಂದುಕೊಂಡಿದೆ. ಅಷ್ಟೇ ಅಲ್ಲ ವೇದ ಶಾಸ್ತ್ರಗಳಿಗೆ ಜೋತುಬೀಳುವ ಗುಣವೇ ನೇಣಾಗಿ ಆ ಅಜ್ಞಾನದ ತೊಟ್ಟಿಲಿನ ಬಂಧನವನ್ನು ಇನ್ನೂ ಗಟ್ಟಿಯಾಗಿಸಿದೆ.
ಈ ಅಜ್ಞಾನಕ್ಕೆ ಭ್ರಾಂತಿಯೇ ಕಾರಣ. ನಾನಾ ಪ್ರಾಪಂಚಿಕ ಸುಖಗಳು ಜೋಗುಳ ಹಾಡುತ್ತಿವೆ. ಪ್ರಾಪಂಚಿಕ ಸುಖಗಳು ಅಜ್ಞಾನದ ನಿದ್ರೆಗೆ ತಳ್ಳುತ್ತವೆ. ವೇದ ಶಾಸ್ತ್ರಗಳ ಜ್ಞಾನವು ನಮಗೆ ಮುಕ್ತಿಯನ್ನು ಕೊಡುತ್ತದೆ ಎಂದು ನಂಬಿ ಅದಕ್ಕೆ ಜೋತುಕೊಳ್ಳುವುದು ಕೂಡ ಅಜ್ಞಾನವೇ. ಈ ಅಜ್ಞಾನವು ಹೋಗಿ ನಿದ್ರೆಯಿಂದ ಎಚ್ಚರಗೊಳ್ಳಬೇಕಾದರೆ ಅಜ್ಞಾನದ ತೊಟ್ಟಿಲು ಮುರಿಯಬೇಕು, ನಾವು ಜೋತುಕೊಂಡಿರುವ ನೇಣು ಹರಿಯಬೇಕು, ಅಂದರೆ ವೇದ ಶಾಸ್ತ್ರಗಳಿಗೆ ಜೋತುಬೀಳುವ ಗುಣವನ್ನು ತ್ಯಜಿಸ ಬೇಕು. ವೇದ ಶಾಸ್ತ್ರಗಳೆಂದರೆ ಕೇವಲ ಆ ಪುರಾತನ ಪವಿತ್ರ ಗ್ರಂಥಗಳೆಂದಲ್ಲ. ಆ ರೀತಿಯ ಎಲ್ಲವೂಗಳು, ಅಂದರೆ ಯಾರೋ ಗುರು ಎಂದು ಹೇಳಿಕೊಳ್ಳುವವನ ಮಾತುಗಳಿರಬಹುದು, ತಾನು ತೋರಿಸುವ ದಾರಿಯೇ ಪರಮ ಶ್ರೇಷ್ಠವೆಂದು ಹೇಳುವ ಮತ ಪ್ರಚಾರಕನ ಮಾತುಗಳಿರಬಹುದು, ನಾವು ಮಹಾ ಜ್ಞಾನವೆಂದುಕೊಂಡು ಗಳಿಸಿದ ನಾನಾ ರೀತಿಯ ಆಧುನಿಕ ಪದವಿಗಳಿರಬಹುದು. ಅಥವಾ ಅಂತಹ ಇನ್ನಾವುವೋ ದಾರಿಗಳಿರಬಹುದು, ಅವೆಲ್ಲ ಯಾವ ಉಪಯೋಗಕ್ಕೂ ಬರುವುದಿಲ್ಲ. ಈ ಎಲ್ಲವು ಗಳಿಂದ ಯಾವ ಸುಖವೂ ಇಲ್ಲ. ಇವುಗಳು ಭ್ರಾಂತಿಯಲ್ಲಿ ಕೆಡಹುವಂತಹವು. ಇವುಗಳಿಗೆ ಜೋತುಬೀಳುವುದು ಸಲ್ಲ. ಸಕಲ ಭ್ರಾಂತಿಗಳು ನಿರಸನಗೊಳ್ಳಬೇಕು ಆಗಮಾತ್ರ ಶಿಶು (ಜ್ಞಾನ) ಎಚ್ಚರಗೊಳ್ಳುತ್ತದೆ. ಅರಿವು ಉಂಟಾಗುತ್ತದೆ, ಗುಹೇಶ್ವರ ಲಿಂಗವು ಕಾಣುತ್ತದೆ.









No comments:

Post a Comment