Friday, February 24, 2012

Vachana 78: Gaganada Megangalella – Pure Mind

ಗಗನದ ಮೇಘಂಗಳೆಲ್ಲ ಸುರಿದವು ಭೂಮಿಯಮೇಲೆ
ಭೂಮಿ ದಣಿಯುಂಡು ಸಸಿಗಳೆಲ್ಲಾ ಬೆಳೆದವು
ಬಹು ವಿಕಾರದಿಂದ ಬೆಳೆದ ಸಸಿಯ
ವಿಕಾರದಿಂದ ಗ್ರಹಿಸುವ ಕಾಮವಿಕಾರಿಗಳು
ಲಿಂಗವನೆತ್ತಬಲ್ಲರು ಗುಹೇಶ್ವರಾ?
TRANSLITERATION
Gaganada mEghaMgaLella suridavu bhoomiyamele
Bhoomi daNiyuMDu sasigaLella beLedavu
Bahu vikaaradiMda beLeda sasiya
vikaaradiMda grahisuva kaamavikaarigaLu
liMgavanettaballaru guhEshvaraa?
CLICK HERE TO READ-ALONG:
TRANSLATION (WORDS)
Gaganada (of sky)  mEghaMgaLella( all the clouds)  suridavu (poured) bhoomiyamele (on the earth)Bhoomi (earth) daNiyuMDu (took in, received to its heart’s content, drank enough and was satisfied) sasigaLella (and all the plants) beLedavu (were grown)
Bahu  (many,a lot of)  vikaaradiMda ( of transformation ) beLeda (grown  after ) sasiya( of plant which is) vikaaradiMda (from that modification) grahisuva (comprehend those) kaamavikaarigaLu (people who are changed because of their desire, conditioned people)
liMgavanettaballaru (how will they know the linga ) guhEshvaraa? (Guheshvara)
TRANSLATION
All the clouds in the sky poured on the Earth.
The Earth drank to heart’s content and the plants grew.
These plants that grew after multiple transformations,
were observed by individuals transformed by their desires.
How can such transformed individuals know the Lord? Oh! Guhesvara!

COMMENTARY
Allama Prabhu paints a nice picture of how the common man understands and views the world around him in this Vachana. Clouds are formed in the sky. They pour on the Earth. The Earth absorbs the water and enables the seeds to sprout and grow into plants.  We observe the plants and enjoy their fruits and flowers. All these are the natural cycle of events. We never pay attention to the events leading to the plants. Allama Prabhu is trying to draw our attention to the truth behind the natural cycle that led to plants. He further says that these plants are being observed (viewed, comprehended) by individuals who themselves are transformed by their desires. Our view of the plant depends on our frame of mind and our interest in that plant’s utility for us. We tag it to be tall, short, beautiful, medicinal, weed, grass, etc. We not only fail to grasp the transformations (water, Earth, seed, plant) behind the plant, but also tinge the plant with our jaundiced eyes and transformed views. Allam Prabhu questions as to how such transformed individuals, jaundiced by their desires can see the Lord, an untransformed one!
Katopanishad says:
agniryathaikO  BuvanaM praviShTO
rUpaM rUpaM pratirUpO baBUva|
EkastathA sarva BUtAMtarAtmA
rUpaM rUpaM pratirUpO bahiSca
As the fire takes the shape of what it burns, the Self takes the shape of everything it enters, but remains unchanged. This concept is further clarified as,
EkO vaSI sarvaBUtAMtarAtmA
EkaM rUpaM bahudhA yaH karOti|
tamAtmasthaM yEnupaSyaMti dhIrA-
stEShAM suKaM SASvataM nEtarEShAm 
Truly,  there is no diversity here. Those who perceive diversity due to the defects of the inner organs experience birth and death, as they have to conform to what they believe in. What one intensely believes in, that one experiences, because every belief pertains to an aspect of reality. But, because individual beliefs are partial, the experiences corresponding to these too are partial. This is the reason, why desirers or perceivers of quality and multiplicity do not have absolute experience, but are caught in the meshes of the effects of their own desires.
Thus, as Allama Prabhu says, we can see the Lord only when we are free from all the transformations (jaundices) of our mind!

Let us learn to see the truth and keep an uncluttered mind!

KANNADA COMMENTARY
ಇಲ್ಲಿ ಸಾಮಾನ್ಯ ವ್ಯಕ್ತಿಯು ಈ ಜಗತ್ತನ್ನು ಅರಿತುಕೊಳ್ಳುವ ಬಗೆಯನ್ನು, ಪ್ರಕೃತಿಯಲ್ಲಿ ನಡೆಯುವ ಕ್ರಿಯೆಯ ಚಿತ್ರಣದ ಮೂಲಕ ತಿಳಿಸುತ್ತಿರುವರು ಅಲ್ಲಮಪ್ರಭುಗಳು. ಆಗಸದಲ್ಲಿ ಮೋಡಗಳು ಉಂಟಾಗುತ್ತವೆ, ಆ ಮೋಡಗಳು ಭೂಮಿಯ ಮೇಲೆ ಸುರಿಯುತ್ತವೆ. ಭೂಮಿ ಮನ ದಣಿಯೆ ನೀರನ್ನು ಹೀರಿಕೊಳ್ಳುತ್ತದೆ, ಅದರ ಫಲವಾಗಿ ಅನೇಕ ಸಸಿಗಳು ಬೆಳೆಯುತ್ತವೆ. ಇದು ಪ್ರಕೃತಿಯಲ್ಲಿ ನಡೆಯುವ ಸಹಜವಾದ ಕ್ರಿಯೆ. ಈ ಕ್ರಿಯೆಯನ್ನು ಮೇಲ್ನೋಟದಿಂದ ನೋಡಿ ನಾವು ಅದನ್ನು ನಮ್ಮ ಸೀಮಿತವಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತೇವೆ. ಇದೆಲ್ಲವೂ ಸಹಜವೇ. ಆದರೆ ಈ ಕ್ರಿಯೆಯ ಹಿಂದೆ ಇರುವ ಸತ್ಯದ ಕಡೆಗೆ ನಮ್ಮ ಗಮನ ಹೋಗುವುದಿಲ್ಲ. ಈ ವಚನದಲ್ಲಿ  ಅದರ ಕಡೆಗೆ ನಮ್ಮ ಗಮನವನ್ನು ಸೆಳೆಯುವ ಪ್ರಯತ್ನ ನಡೆದಿದೆ. ಅಲ್ಲಮರು ಹೇಳುತ್ತಾರೆ, ಈ ಸಸಿಗಳು ಬಹು ವಿಕಾರದಿಂದ ಬೆಳೆದಿರುವವು ಎಂದು. ಅಂದರೆ ಅನೇಕ ಮಾರ್ಪಾಟುಗಳ ನಂತರ ಸಸಿಗಳು ರೂಪತಾಳುತ್ತವೆ. ಒಂದೇ ಶಕ್ತಿ ನಾನಾ ರೂಪ ತಾಳುತ್ತದೆ. ಆವಿಯಾಗಿ ಮೋಡವಾಗುತ್ತದೆ. ಅದೇ ಮೋಡ ನೀರಾಗಿ ಸುರಿಯುತ್ತದೆ. ಆ ನೀರನ್ನೇ ಭೂಮಿ ಕುಡಿಯುತ್ತದೆ,  ನಾನಾ ಸಸಿಗಳ ರೂಪದಲ್ಲಿ ತೋರ್ಪಡಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಇರುವ “ಆ ಒಂದೇ” ಈ ಪ್ರಕೃತಿಯ ಇಡೀ ಕ್ರಿಯೆಯಲ್ಲಿ ಪ್ರತಿ ಹಂತದಲ್ಲಿಯೂ ವಿಕಾರಹೊಂದಿ ಭಿನ್ನ ಭಿನ್ನ ರೂಪ ತಾಳುತ್ತದೆ. ನಾವು ಹೊರಗೆ ಕಾಣುವ ಆ ಸೀಮಿತವಾದ ಆಕಾರವನ್ನಷ್ಟೇ ನಿಜವೆಂದು ನಂಬುತ್ತೇವೆ. ಸಸಿಯನ್ನು ನೋಡುವಾಗ ನಮಗೆ ಅದು ಮೋಡದ, ಮಳೆಯ, ಭೂಮಿಯ ರೂಪಕೂಡ ಎಂಬುದು ಗಮನಕ್ಕೆ ಬರುವುದಿಲ್ಲ. ಅಥವಾ ಈ ಎಲ್ಲದರ ಮೂಲ ರೂಪದಕಡೆಗೆ ಕೂಡ ಗಮನವಿರುವುದಿಲ್ಲ. ನಾವು ನೋಡುವುದು ಕೇವಲ ಸಸಿಯನ್ನು ಮಾತ್ರ. ಇದು ನಮ್ಮ ಗ್ರಹಿಕೆ. ನಾವು ಅದನ್ನು ಗ್ರಹಿಸುವುದು ಹೇಗೆ? ಅದನ್ನು ಗ್ರಹಿಸುವ ನಾವು ಕೂಡ ವಿಕಾರಿಗಳು, ಎಂದರೆ, ನಮ್ಮ ದೃಷ್ಟಿಯು ಶುದ್ಧವಾದುದಲ್ಲ. ಅದು ಅನೇಕ ಪ್ರಭಾವಗಳಿಗೆ ಒಳಗಾಗಿದೆ. ಕಾಮ ಅಥವಾ ಬಯಕೆಯಿಂದ ಕೂಡಿ ಅದು ಇನ್ನೂ ವಿಕಾರಗೊಂಡಿದೆ. ಆದ್ದರಿಂದಲೇ ಸಸಿಯನ್ನು ನಾವು, ಚೆನ್ನಾಗಿದೆ, ಚೆನ್ನಾಗಿಲ್ಲ, ಉಪಯೋಗಕ್ಕೆ ಬರುತ್ತದೆ, ಉಪಯೊಗಕ್ಕೆ ಬರುವುದಿಲ್ಲ, ಗಿಡ್ಡವಾಗಿದೆ, ಉದ್ದವಾಗಿದೆ, ಹಸುರಾಗಿದೆ, ಅಥವಾ ಇಲ್ಲ, ಅದರಲ್ಲಿ ಔಷಧಿಯಗುಣವಿದೆ ಎಂಬಂತಹ ಹೋಲಿಕೆಯ ದೃಷ್ಟಿಯಿಂದ ಅದನ್ನು ನೋಡುತ್ತೇವೆ.ಈ ಹೋಲಿಕೆಗಳು ನಮ್ಮ ಅನುಭವಗಳನ್ನು ಅವಲಂಬಿಸಿರುತ್ತವೆ, ಈ ರೀತಿಯಾಗಿ ನೋಡುವ ನಮ್ಮ ದೃಷ್ಟಿ ಅನೇಕ ಪ್ರಭಾವಗಳಿಂದ ವಿಕಾರಗೊಂಡಿರುತ್ತದೆ.  ಇಂತಹ ವಿಕಾರಗೊಂಡ ದೃಷ್ಟಿಯಿಂದ, ವಿಕಾರಗಳಿಂದ ಉಂಟಾದದ್ದನ್ನು ನೋಡಿ ಅದನ್ನೇ ಸತ್ಯವೆಂದು ಗ್ರಹಿಸುತ್ತೇವೆ. ಅಂದರೆ ನಾವು ಗ್ರಹಿಸುವ ಎಲ್ಲವೂ ವಿಕಾರಮಯವೇ. ಇಂತಹವರು ಯಾವ ವಿಕಾರಕ್ಕೂ ಒಳಗಾಗದ ಗುಹೆಶ್ವರಲಿಂಗವನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಅಲ್ಲಮರು.                    
ಇದನ್ನು ಕಠೋಪನಿಷತ್ತಿನಲ್ಲಿ ಈ ರೀತಿಯಲ್ಲಿ ಹೇಳಲಾಗಿದೆ.
ಅಗ್ನಿರ್ಯಥೈಕೋ  ಭುವನಂ ಪ್ರವಿಷ್ಟೋ
ರೂಪಂ ರೂಪಂ ಪ್ರತಿರೂಪೋ ಬಭೂವ|
ಏಕಸ್ತಥಾ ಸರ್ವ ಭೂತಾಂತರಾತ್ಮಾ
ರೂಪಂ ರೂಪಂ ಪ್ರತಿರೂಪೋ ಬಹಿಶ್ಚ
ಅಗ್ನಿಯು ಹೇಗೆ ಈ ಲೋಕವನ್ನು ಪ್ರವೇಶಿಸಿ ತಾನು ಸುಡತಕ್ಕ ವಸ್ತುಗಳಿಗನುಗುಣವಾಗಿ ಬಹು ವಿಧವಾಗಿರುತ್ತದೆಯೋ ಹಾಗೆಯೇ ಪಂಚಭೂತಗಳಲ್ಲಿರುವ ಒಬ್ಬನೇ ಆತ್ಮನು ಎಲ್ಲ ರೂಪಗಳಿಗೂ ಮೂಲವಾಗಿರುವನು, ಮತ್ತು ಹೊರಗೂ ಇರುವನು. ಇದನ್ನೇ ಇನ್ನೂ ಸ್ಪಷ್ಟಪಡಿಸುತ್ತಾ-
ಏಕೋ ವಶೀ ಸರ್ವಭೂತಾಂತರಾತ್ಮಾ
ಏಕಂ ರೂಪಂ ಬಹುಧಾ ಯಃ ಕರೋತಿ|
ತಮಾತ್ಮಸ್ಥಂ ಯೇನುಪಶ್ಯಂತಿ ಧೀರಾ-
ಸ್ತೇಷಾಂ ಸುಖಂ ಶಾಶ್ವತಂ ನೇತರೇಷಾಮ್  ಎಂದು ಹೇಳುತ್ತದೆ ಕಠೋಪನಿಷತ್ತು.
ಆತ್ಮನು ಅದ್ವಿತೀಯನು, ಆತನು ಸರ್ವ ಪ್ರಾಣಿಗಳ ಅಂತರಾತ್ಮನು, ಜಗತ್ತೆಲ್ಲವೂ ಆತನ ವಶದಲ್ಲಿರುತ್ತದೆ. ಆತನು ಏಕನಾದರೂ  ನಾಮ ರೂಪಗಳೆಂಬ ಉಪಾಧಿಗಳಿಂದ ಬಹುವಿಧವಾಗಿರುತ್ತಾನೆ. ಆತನ ಮೂಲರೂಪವನ್ನು ಯಾವ ವಿವೇಕಿಗಳು ನೋಡುತ್ತಾರೆಯೋ ಅವರಿಗೆ ಶಾಶ್ವತವಾದ ಸುಖವು ದೊರೆಯುತ್ತದೆಯೇ ಹೊರತು ಇತರರಿಗಲ್ಲ.
ಎಂದರೆ ಅಲ್ಲಮರು ಹೇಳುವಂತೆ ನಮ್ಮ ಮನಸ್ಸಿನ ಎಲ್ಲ ವಿಕಾರಗಳನ್ನು ಕಳೆದುಕೊಂಡಾಗ ಮಾತ್ರ ಆ ಗುಹೇಶ್ವರನ ಅರಿವು ಉಂಟಾಗಲು ಸಾಧ್ಯ.

Friday, February 17, 2012

Vachana 77: Ajnaanavemba Thottilolage – Reaching Self

ಅಜ್ಞಾನವೆಂಬ ತೊಟ್ಟಿಲೊಳಗೆ
ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರವೆಂಬ ನೇಣಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿ ಎಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂದಲ್ಲದೆ
ಗುಹೇಶ್ವರ ಲಿಂಗ ಕಾಣಬಾರದು

TRANSLITERATION

Aj~jaanaveMba toTTiloLage
J~jaanaveMba shishuva malagisi
Sakala vEdashaastraveMba nENakaTTi
hiDidu tUgi jOguLavaaDuttiddaaLe bhraaMtieMba taayi
toTTilu muridu nENu haridu jOguLa niMdallade
guhEshvara liMga kaaNabaaradu


CLICK HERE TO READ-ALONG:
http://www.youtube.com/watch?v=pZL4UthsvbY

TRANSLATION (WORDS)

Aj~jaanaveMba ( of ignorance ) toTTiloLage (in the cradle )
J~jaanaveMba ( of awareness) shishuva (infant) malagisi (putting to sleep)
Sakala ( entire) vEdashaastraveMba (of, vEda and shaastras) nENa ( rope) kaTTi (tied)
hiDidu (holding) tUgi (swinging) jOguLavaaDuttiddaaLe (singing a lullaby) bhraaMtieMba (of illusion) taayi (mother)
toTTilu (cradle) muridu ( broken) nENu (rope) haridu (ripped, torn) jOguLa (lullaby) niMdallade (unless ended)
guhEshvara liMga (Guheshvara Linga)kaaNabaaradu (cannot be seen)


TRANSLATION

In the cradle of ignorance,
Putting the infant of awareness to sleep,
Hanging the cradle with ropes of the entire Vedas and Sacraments,
The mother  illusion is holding the ropes, swinging the cradle and singing lullabies.
Unless the cradle is broken, rope is torn and lullaby ended,
Guheswara Linga cannot be seen!


COMMENTARY

This beautiful Vachana from Allama Prabhu depicts the state of affairs of our daily lives with a simple simile. The mother (named illusion) is putting the infant (of Awareness) to sleep in the cradle of ignorance. She has tied the cradle with the ropes of sacred texts and rituals, swinging the cradle and singing lullabies. Allama Prabhu says that the Lord cannot be realized (seen) unless the cradle is broken, ropes are torn and lullaby is ended.

There is a cradle with an infant in it. The cradle is hanging from the roof with ropes tied to it. The mother is holding those ropes to swing the cradle and she is singing lullabies to put the infant to sleep. The major intention on the part of the mother here is to make sure that the infant goes to sleep and does not wake up. Our soul is the infant. He is pure and awareness is his inherent attribute. This soul gets hidden (sleeps) in the cradle of ignorance (our bodies, our concepts of life and death, etc.). Mere reading of Vedas and following rituals routinely adds another layer to the ignorance covering the true nature of the soul further. We become victims of illusion (me, mine, I did it, etc.) which is the mother here utilizing the ropes and lullaby to keep the soul in the covered state. Allama Prabhu urges us to remove the three sheaths (ignorance, routine dependence on sacred texts and rituals and illusion) to realize the ‘self’ (reach or see the Lord).
Awareness is our inherent nature. It needs to be awakened. Instead we cover it with ignorance. We depend on the reasoning and rituals handed to us from previous generations. These will have lost their meanings and pertinence due to time and changing environments. When they are accepted without questioning, we end up covering the true awareness within us. All the material comforts sing the lullaby to keep the infant of awareness at sleep. The infant has begun to believe that the sleep is the pleasure of life. The mother of illusion is simply adding to the cover of ignorance. We need to escape from this cover of ignorance. We need to remove our attachment to the materialistic comforts as the way to be. We need to awaken the awareness from its hidden state to let us realize the Lord within us.


Let us uncover and shine our Awareness!


KANNADA COMMENTARY

ಇದು ಅಲ್ಲಮಪ್ರಭುಗಳ ಬಹು ಸುಂದರವಾದ ವಚನ. ಈ ಜಗತ್ತಿನಲ್ಲಿ ನಡೆಯುತ್ತಿರುವುದರ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಜ್ಞಾನವೆಂಬ ಮಗುವನ್ನು ಅಜ್ಞಾನವೆಂಬ ತೊಟ್ಟಿಲಲ್ಲಿ ಮಲಗಿಸಿಲಾಗಿದೆ. ಆ ತೊಟ್ಟಿಲನ್ನು ವೇದಶಾಸ್ತ್ರಗಳೆಂಬ ಹಗ್ಗದಿಂದ ಕಟ್ಟಲಾಗಿದೆ. ಅದನ್ನು ಭ್ರಾಂತಿ ಎಂಬ ತಾಯಿ ಜೋಗುಳವನ್ನು ಹಾಡುತ್ತ ನಿದ್ರೆಗೆ ತಳ್ಳುತ್ತಿದ್ದಾಳೆ. ಆ ಜ್ಞಾನವೆಂಬ ಶಿಶು ಎಚ್ಚರಗೊಳ್ಳಬೇಕಾದರೆ ತೊಟ್ಟಿಲು ಮುರಿಯಬೇಕು, ನೇಣು ಹರಿಯಬೇಕು. ಹಾಗಾಗದಿದ್ದಲ್ಲಿ ಗುಹೇಶ್ವರ ಲಿಂಗವು ಕಾಣುವುದಿಲ್ಲ ಎಂದು ಹೇಳುತ್ತಾರೆ ಅಲ್ಲಮ ಪ್ರಭುಗಳು.

ಜ್ಞಾನವು ಸುಪ್ತವಾಗಿರುತ್ತದೆ. ಅದನ್ನು ಎಚ್ಚರಗೊಳಿಸಬೇಕು. ಆದರೆ ಅದಕ್ಕೆ ಬದಲಾಗಿ ಅದನ್ನು ಇನ್ನೂ ಹೆಚ್ಚಿನ ಅಜ್ಞಾನಕ್ಕೆ ತಳ್ಳಲಾಗುತ್ತದೆ. ಆ ಶಿಶುವಿನ ಸುತ್ತ ಇರುವುದೆಲ್ಲ ಅಜ್ಞಾನವೇ. ಎಲ್ಲವೂ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಯಾಂತ್ರಿಕವಾಗಿ ಹರಿದು ಬಂದ ಒಂದು ರೀತಿಯ ಮಾಹಿತಿ ಅಷ್ಟೆ. ಅಥವಾ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಿದುಬಂದ ಆಚಾರವಿಚಾರಗಳು. ಈ ರೀತಿಯಾಗಿ ಹರಿದುಬಂದ ಮಾಹಿತಿ ಮತ್ತು ಆಚಾರ ವಿಚಾರಗಳನ್ನು ಪ್ರಶ್ನಿಸದೆ ಸ್ವೀಕರಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಆ ಯಾವುದರಲ್ಲಿಯೂ ಹೊಸತನವಿಲ್ಲ. ಅವುಗಳಲ್ಲಿಯ ಸತ್ವ ಎಂದೋ ಮಾಯವಾಗಿದೆ. ಸುಖದ ಪರಿಕಲ್ಪನೆ ಕೂಡ ಇನ್ನೊಬ್ಬರಿಂದ ಬಂದದ್ದು. ನಿಜವಾದ ಸುಖದ ಅರ್ಥವೇ ತಿಳಿಯದೆ ಯಾವ್ಯಾವುದನ್ನೋ ಸುಖವೆಂದು ಭಾವಿಸಿ ಅದನ್ನು ಅರಸುವ ಧಾವಂತ. ಆದರೆ ಅದರ ಅರಿವೇ ಇಲ್ಲದೆ ಶಿಶು ಅಜ್ಞಾನದ ತೊಟ್ಟಿಲಲ್ಲಿ ನಿಶ್ಚಿಂತೆಯಿಂದ ಮಲಗಿದೆ. ಆ ನಿದ್ರೆಯನ್ನೇ ಸುಖವೆಂದುಕೊಂಡಿದೆ. ಅಷ್ಟೇ ಅಲ್ಲ ವೇದ ಶಾಸ್ತ್ರಗಳಿಗೆ ಜೋತುಬೀಳುವ ಗುಣವೇ ನೇಣಾಗಿ ಆ ಅಜ್ಞಾನದ ತೊಟ್ಟಿಲಿನ ಬಂಧನವನ್ನು ಇನ್ನೂ ಗಟ್ಟಿಯಾಗಿಸಿದೆ.
ಈ ಅಜ್ಞಾನಕ್ಕೆ ಭ್ರಾಂತಿಯೇ ಕಾರಣ. ನಾನಾ ಪ್ರಾಪಂಚಿಕ ಸುಖಗಳು ಜೋಗುಳ ಹಾಡುತ್ತಿವೆ. ಪ್ರಾಪಂಚಿಕ ಸುಖಗಳು ಅಜ್ಞಾನದ ನಿದ್ರೆಗೆ ತಳ್ಳುತ್ತವೆ. ವೇದ ಶಾಸ್ತ್ರಗಳ ಜ್ಞಾನವು ನಮಗೆ ಮುಕ್ತಿಯನ್ನು ಕೊಡುತ್ತದೆ ಎಂದು ನಂಬಿ ಅದಕ್ಕೆ ಜೋತುಕೊಳ್ಳುವುದು ಕೂಡ ಅಜ್ಞಾನವೇ. ಈ ಅಜ್ಞಾನವು ಹೋಗಿ ನಿದ್ರೆಯಿಂದ ಎಚ್ಚರಗೊಳ್ಳಬೇಕಾದರೆ ಅಜ್ಞಾನದ ತೊಟ್ಟಿಲು ಮುರಿಯಬೇಕು, ನಾವು ಜೋತುಕೊಂಡಿರುವ ನೇಣು ಹರಿಯಬೇಕು, ಅಂದರೆ ವೇದ ಶಾಸ್ತ್ರಗಳಿಗೆ ಜೋತುಬೀಳುವ ಗುಣವನ್ನು ತ್ಯಜಿಸ ಬೇಕು. ವೇದ ಶಾಸ್ತ್ರಗಳೆಂದರೆ ಕೇವಲ ಆ ಪುರಾತನ ಪವಿತ್ರ ಗ್ರಂಥಗಳೆಂದಲ್ಲ. ಆ ರೀತಿಯ ಎಲ್ಲವೂಗಳು, ಅಂದರೆ ಯಾರೋ ಗುರು ಎಂದು ಹೇಳಿಕೊಳ್ಳುವವನ ಮಾತುಗಳಿರಬಹುದು, ತಾನು ತೋರಿಸುವ ದಾರಿಯೇ ಪರಮ ಶ್ರೇಷ್ಠವೆಂದು ಹೇಳುವ ಮತ ಪ್ರಚಾರಕನ ಮಾತುಗಳಿರಬಹುದು, ನಾವು ಮಹಾ ಜ್ಞಾನವೆಂದುಕೊಂಡು ಗಳಿಸಿದ ನಾನಾ ರೀತಿಯ ಆಧುನಿಕ ಪದವಿಗಳಿರಬಹುದು. ಅಥವಾ ಅಂತಹ ಇನ್ನಾವುವೋ ದಾರಿಗಳಿರಬಹುದು, ಅವೆಲ್ಲ ಯಾವ ಉಪಯೋಗಕ್ಕೂ ಬರುವುದಿಲ್ಲ. ಈ ಎಲ್ಲವು ಗಳಿಂದ ಯಾವ ಸುಖವೂ ಇಲ್ಲ. ಇವುಗಳು ಭ್ರಾಂತಿಯಲ್ಲಿ ಕೆಡಹುವಂತಹವು. ಇವುಗಳಿಗೆ ಜೋತುಬೀಳುವುದು ಸಲ್ಲ. ಸಕಲ ಭ್ರಾಂತಿಗಳು ನಿರಸನಗೊಳ್ಳಬೇಕು ಆಗಮಾತ್ರ ಶಿಶು (ಜ್ಞಾನ) ಎಚ್ಚರಗೊಳ್ಳುತ್ತದೆ. ಅರಿವು ಉಂಟಾಗುತ್ತದೆ, ಗುಹೇಶ್ವರ ಲಿಂಗವು ಕಾಣುತ್ತದೆ.









Friday, February 10, 2012

Vachana 76:Anantha Veda Shaatra Aagama - Awareness


ಅನಂತ ವೇದ ಶಾಸ್ತ್ರ ಆಗಮ ಪುರಾಣ ತರ್ಕ ತಂತ್ರಂಗಳನ್ನು
ಆತ್ಮನು ಮಾಡಿದನಲ್ಲದೆ ಆತ್ಮನನ್ನವು ಮಾಡಿದುದಿಲ್ಲ
ಎನ್ನಂತರಂಗದ ಅರಿವಿನ ಮೂರ್ತಿಯಾಗಿ
ಎನ್ನ ಉರಿಲಿಂಗದೇವರು ಸಂಕಲ್ಪಿಸಿ ಆಗೆಂದರಾದವು

TRANSLITERATION

anaMta vEda shaastra aagama puraaNa tarka taMtragaLannu
aatmanu maaDidanallade aatmanannavu maaDidudilla
ennaMtaraMgada arivina mUrtiyaagi
enna uriliMgadEvaru saMkalpisi aageMdaraadavu

CLICK HERE TO READ-ALONG:

TRANSLATION (Words)

anaMta (endless) vEda  (veda) shaastra (proceduress) aagama (sacrament) puraaNa(mythology) tarka (logic) taMtragaLannu (the ways of religious rituals)
aatmanu (the soul)maaDidanu (made)allade  (not ) aatmanannu (the soul) avu (they) maaDidudilla (have not done)
enna (my) aMtaraMgada (inward)  arivina (awareness)  mUrtiyaagi ( personified, materialized)
enna(my)  uriliMgadEvaru (urilinagadeva) saMkalpisi  (when  willed) aageMdare (asked to be done) aadavu( came into existence )

TRANSLATION

All the Vedas, sacraments, mythologies, logic and religious rituals
were created by the soul (self), but not the other way (i.e. they did not create the soul)!
When my inner awareness materialized into my Lord Urilingeswara who (in turn) willed them to be, they came into existence!

COMMENTARY


The previous two postings advocated that mind control and intense desire to know as the prerequisites for self-realization. Both suggested not being too involved in the superficiality of reading and blind following of sacred texts. In this Vachana  Sharana Urilingadeva continues that thought process and says that his inner awareness reached such an intense level that it materialized itself as the Lord, who in turn created all the sacred texts as aids for the realization of the Self.  He says that the inner (self) awareness is more important than all the sacred texts such as Vedas, Sacraments, Mythologies, etc. and the soul created the sacred texts rather than sacred text creating the soul. 

Urilingadeva agrees with the belief that the Vedas were created by God, not Man. In this context it is interesting to examine the concepts of God and Man. We have said that the individual soul (Jeevaatma) is a spark of the supreme soul (Paramaatma, God). As such, each individual has a Godly attribute in him/her. When this attribute is camouflaged by ignorance and non-awareness of the self, the Man gets involved in and influenced by  material aspects. When he removes the camouflage through self-awareness, intense desire to probe self and mind control, his Godly nature wins and he contributes to and consumes Vedas and other sacred texts appropriately.

We should never interpret this and the previous postings as advocating staying away from sacred texts. We should question them, analyze and understand the subtle suggestions in them towards achieving self-realization. Sarvagna (Knower of Everything) a 16th century poet/philosopher said that we should acquire knowledge from those who know, from respected texts and from the company of knowledgeable individuals. 

Let us bring out the godlyness in us!

KANNADA COMMENTARY


ಇದು ಉರಿಲಿಂಗದೇವರ ವಚನ. ಅವರು ಮಠಾಧೀಶರಾಗಿದ್ದು ಬಸವಣ್ಣನವರ ಸಮಕಾಲೀನರಾಗಿದ್ದರು. ಅವರು ಮಹಾ ಭಕ್ತರಾಗಿದ್ದರೂ ಮಹಾ ಕ್ರಾಂತಿಕಾರರೂ ಆಗಿದ್ದರು. ಇವರ ಶಿಷ್ಯರೇ ಉರಿಲಿಂಗಿ ಪೆದ್ದಿ. ವೇದ  ಶಾಸ್ತ್ರ, ಪುರಾಣ, ಆಗಮಗಳಿಗಿಂತ  ಸ್ವ  ಅರಿವು ಏಕೆ ಮುಖ್ಯವಾದದ್ದು ಎನ್ನುವುದನ್ನು ಯಾವ ಆಡಂಬರವೂ ಇಲ್ಲದೆ ಬಹಳ ಸರಳವಾಗಿ ತಿಳಿಸಿದ್ದಾರೆ.  

ವೇದಗಳು ಅಪೌರುಷೇಯ ಎನ್ನುತ್ತಾರೆ.  ಏನು ಹಾಗೆಂದರೆ? ಎಂದರೆ ಮಾನವನು ಮಾಡಿದುದಲ್ಲ. ಹಾಗಾದರೆ ಯಾರು ಮಾಡಿದುದು?  ದೇವರು ಮಾಡಿದವುಗಳು ಎನ್ನುತ್ತಾರೆ. ಅದನ್ನು  ಅರ್ಥಮಾಡಿಕೊಳ್ಳುವುದು  ಹೇಗೆ? ಇದನ್ನು ಅರ್ಥಮಾಡಿಕೊಳ್ಳಲು ಮಾನವನೆಂದರೆ ಯಾರು, ದೇವರು ಎಂದರೆ ಯಾರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.  “ಮರೆತರೆ ಮಾನವ ಅರಿತರೆ ದೇವ”. ಯಾರನ್ನು ಮರವೆ ಆವರಿಸಿಕೊಂಡಿರುತ್ತದೆಯೋ, ಈ ಮರವೆಯ ಕಾರಣದಿಂದ ಮಾಯೆಯಲ್ಲಿ ಮುಳುಗಿರುತ್ತಾನೆಯೋ ಆತನೇ ಮಾನವ. ಯಾರು ಅರಿವುಳ್ಳವನಾಗಿರುತ್ತನೆಯೋ ಆತನೇ ಜಾಗೃತನಾಗಿ ದೇವನಾಗುತ್ತಾನೆ. ಆತನು ಯಾವುದೇ ರೀತಿಯ ಪ್ರಭಾವಗಳಿಗೆ ಒಳಗಾಗುವುದಿಲ್ಲ. ಆತನು ಎಲ್ಲ ರೀತಿಯ ತನುಗುಣಗಳಿಂದ ಮುಕ್ತನಾಗಿರುತ್ತಾನೆ.  ಭೂತ,  ವರ್ತಮಾನ, ಭವಿಷ್ಯ ಎಂಬ ತ್ರಿಕಾಲಗಳಿಗೆ ಒಳಗಾಗುವುದಿಲ್ಲ, ಸತ್ವ ರಜೋ ತಮೋಗುಣಗಳನ್ನು ಮೀರಿರುತ್ತಾನೆ,  ಎಲ್ಲ ವಿರೋಧಗಳನ್ನು ಮೀರಿರುತ್ತಾನೆ, ಎಲ್ಲ ಕಂದಕಗಳನ್ನು ಮುಚ್ಚಿ ಬಯಲ ದೇಹಿಯಾಗಿರುತ್ತಾನೆ.  ಮಾನವನ ಯಾವ ಗುಣಗಳೂ ಆತನಿಗೆ ಅಂಟಿರುವುದಿಲ್ಲ. ಆತನು ಎಚ್ಚರವೇ ತಾನಾಗಿರುತ್ತಾನೆ.  ಈ ರೀತಿಯ ಅರಿವೇ ಮೂರ್ತಿಯಾಗಿ ನುಡಿದಾಗ ಅದು ಅಪೌರುಷೇಯವಾಗುತ್ತದೆ. ಆ ಅರಿವನ್ನುಂಟು ಮಾಡಿದುದು ಆತ್ಮ. ಆತ್ಮನ ಸಂಕಲ್ಪದಿಂದಲೇ ಆ ವೇದಗಳು ಮೂಡಿಬಂದಿವೆ. ಆದ್ದರಿಂದ ಆತ್ಮನೇ ವೇದಗಳನ್ನು ಸೃಷ್ಟಿಸಿದ್ದಾನಲ್ಲದೆ ವೇದವು ಆತ್ಮನನ್ನು ಸೃಷ್ಟಿಸಿಲ್ಲ ಎನ್ನುತ್ತಾರೆ ಉರಿಲಿಂಗಿದೇವರು. ಈ ಕಾರಣದಿಂದ  ವೇದಾಗಮಗಳು ಆತ್ಮಕ್ಕಿಂತ ದೊಡ್ಡವಲ್ಲ ಎಂದು ಹೇಳುತ್ತಾರೆ. “ಅರಿವು”  ಎಲ್ಲಕ್ಕಿಂತ ಮುಖ್ಯವಾದದ್ದು. ಆದ್ದರಿಂದ ವೇದ ಶಾಸ್ತ್ರ ಆಗಮ ಪುರಾಣಗಳ ಹಿಂದೆ ಧಾವಿಸುವುದನ್ನು ಬಿಟ್ಟು ಅರಿವು ಪಡೆಯುವುದರಕಡೆ ಗಮನವಿರಲಿ ಎಂಬ ಧ್ವನಿ ಈ ವಚನದ್ದು.

Friday, February 3, 2012

Vachana 75: Veda Shastra Puranangalella - Learn the ways of the mind

ವೇದ ಶಾಸ್ತ್ರ ಪುರಾಣಂಗಳೆಲ್ಲ ಕೊಟ್ಟಣವ ಕುಟ್ಟುತ್ತ
ನುಚ್ಚು ತೌಡು ಕಾಣಿ ಭೋ, ಇವ ಕುಟ್ಟಲೇಕೆ?
ಅತ್ತಲಿತ್ತ ಹರಿವ ಮನದ ಶಿರವನರಿದಡೆ
ಬಚ್ಚ ಬರಿಯ ಬಯಲು ಚೆನ್ನ ಮಲ್ಲಿಕಾರ್ಜುನ

TRANSLITERATION

vEda shaastra puraaNaMgaLella koTTaNava kuTTutta
nuccu touDu kaaNibhO, iva kuTTalEke?
Attlitta hariva manada shiravanaridaDe
Bacca bariya bayalu cennamallikaarjuna.

CLICK HERE TO READ-ALONG:
http://www.youtube.com/watch?v=7kJGapnCamo&feature=youtu.be

TRANSLATION (WORDS)

vEda( veda) shaastra(rituals) puraaNaMgaLella (mythology ,all are like) koTTaNava ( in the mortar)kuTTutta (pounding)
nuccu (coarse powder) touDu (husk) kaaNibhO,(you see) iva (all these) kuTTalEke?(why pound)
Attalitta (here and there) hariva ( wavering) manada ( the mind) shiravanu (the head) aridaDe (if understood )
Bacca (plain) bariya( only) bayalu (open space – null, ultimate) cennamallikaarjuna.(Cenna Mallikaarjuna)


TRANSLATION

By pounding sacred texts (Vedas), rituals and mythology in the mortar,
All you get is coarse flour and husk, why pound them?
Understanding the ways of the wavering mind,
Is the plain path to the ultimate (space, Self, Bayalu), Lord ChennaMallikarjuna!

COMMENTARY

Akka Mahadevi is expressing the gist of her experience in the path of self-realization in this Vachana. She probably might have immersed herself in the study of sacred texts, rituals and mythological stories and was disappointed with the results. She might have realized that the only way to realize self is to understand the ways of the wavering mind and bring control to it. To separate rice from the paddy, we pound the paddy in a mortar. The product of this activity is a combination of rice, coarse (broken) rice and the powdered husk. We then separate the rice from the rest hoping that we get most of the rice intact. Akka says that when Vedas, rituals and mythology are pounded in the mortar, the product is only coarse rice and the husk, with no useable rice, implying that the resulting product is not what is desired. She questions as to why we need to go through this pounding? She concludes that the prime way to self-realization (finding self) is to control the wavering mind. Once we gain such control and develop an intense desire to look inside, we will be successful in reaching the Self!

Is Akka advocating discarding Vedas and rituals and Mythology? Certainly not! These texts describe the concept of ‘self’ in various ways. They attach various attributes and point to multiple ways of realizing it. But, just studying them or blindly following the rituals prescribed in these texts will not get us to the ultimate. When studying these texts, if our mind keeps wavering, we will not be able to see the directions provided in them. If we can control the mind and develop a feverish desire to realize the ‘Truth’ or the ‘Self ‘we will be on the right path. Propelled by that inherent desire, we should then strive to reach the self by ourselves. No one else can take us there; others can only point to it!


Katopanishad says that:
nAyamAtmA pravachanEna laByo
na mEdhayA na bahunA shrutEna!
yamEvaisha vruNatE tEna labya-
stasvysha atmA vivruNatE tanUm swAm!
The Atma (soul, self) cannot be reached by listening to lectures, intellectual discussions and such. It can only be reached by an intense prayer to reach the Atma by the Atma! This is the essential concept Akka depicts in this Vachana.


The horse can only be led to the water, it has to drink the water by itself!

KANNADA COMMENTARY

ಇದು ಅಕ್ಕಮಹಾದೇವಿಯ ವಚನ. ಇಲ್ಲಿ ಆಕೆ ತನ್ನ ಅನುಭವದ ಸಾರವನ್ನು ಹೇಳುತ್ತಿದ್ದಾಳೆ. ಬಹುಶಃ ಆಕೆ ಕೂಡ ಮೊದ ಮೊದಲು ಸತ್ಯವನ್ನು ಕಂಡುಕೊಳ್ಳಲು ವೇದ ಶಾಸ್ತ್ರ ಪುರಾಣಗಳನ್ನು ಅವಲಂಬಿಸಿರಬೇಕು. ಅಲ್ಲಿ ನಿರಾಶೆಯಾದಾಗ ತನ್ನದೇ ದಾರಿ ಕಂಡುಕೊಂಡಿರಬೇಕು. ಅದಕ್ಕಾಗಿಯೇ, ವೇದ ಶಾಸ್ತ್ರಗಳೆಲ್ಲ ನುಚ್ಚು ತೌಡು ಎಂದು ಹೇಳುತ್ತಾಳೆ. ಅಕ್ಕಿಯನ್ನು ಪಡೆಯಬೇಕಾದರೆ ಭತ್ತವನ್ನು ಕೊಟ್ಟಣದಲ್ಲಿ ಕುಟ್ಟಬೇಕು. ಅದರಲ್ಲಿ ನುಚ್ಚು ತೌಡು ಕೂಡ ಇರುತ್ತದೆ. ಅದೆಲ್ಲವನ್ನೂ ಬೇರ್ಪಡಿಸಿ ಅಕ್ಕಿಯನ್ನು ಪಡೆಯಬೇಕು. ಆದರೆ ಇಲ್ಲಿ ಅಕ್ಕಿಯ ಮಾತೇ ಇಲ್ಲ. ವೇದ ಶಾಸ್ತ್ರ ಪುರಾಣಗಳೆಲ್ಲವೂ ಕುಟ್ಟಿ ಕೇವಲ ನುಚ್ಚು ತೌಡು ಪಡೆದಂತಾಗುತ್ತದೆ ಎನ್ನುತ್ತಾಳೆ. ಹಾಗಾದರೆ ವೇದಗಳಲ್ಲಿ ಹೇಳಿದ್ದೆಲ್ಲವೂ ಸುಳ್ಳೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಇದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹು ಮುಖ್ಯ. ಪ್ರತಿಯೊಬ್ಬನಿಗೂ ತಾನಾಗಿಯೇ ಸತ್ಯದ ದರ್ಶನವಾಗಬೇಕೇ ಹೊರತು ಬೇರೆಯವರು ಅದನ್ನು ಮಾಡಿಸಲಿಕ್ಕಾಗುವುದಿಲ್ಲ. ಬೇರೆಯವರು ಅದನ್ನು ವರ್ಣಿಸಬಹುದು, ಅದು ಎಲ್ಲಿದೆ ಎಂಬುದನ್ನು ತೋರಿಸಿ ಹೇಳಬಹುದು, ಆದರೆ ಅದನ್ನು ವ್ಯಕ್ತಿಯ ಅನುಭವಕ್ಕೆ ತರಲಾರರು. ಆ ಅನುಭವ ವ್ಯಕ್ತಿಗೆ ಆಗಬೇಕಾದರೆ ಆತನ ಮನಸ್ಸು ಅದಕ್ಕೆ ಸಿದ್ಧವಾಗಿರಬೇಕು. ಅದನ್ನು ಯಾರೂ ಬೇರೆಯವರಾಗಲಿ, ಅಥವಾ ಯಾವುದೇ ವೇದ ಶಾಸ್ತ್ರ ಪುರಾಣವೇ ಆಗಲಿ ಮಾಡಲಾಗುವುದಿಲ್ಲ. ವೇದ ಶಾಸ್ತ್ರ ಪುರಾಣಗಳು, ಆ ಸತ್ಯವನ್ನು ವರ್ಣಿಸುತ್ತವೆ, ಆ ಸತ್ಯವನ್ನು ಹೊಂದುವ ನಾನಾ ಉಪಾಯಗಳನ್ನು ತೋರುತ್ತವೆ.ಅಲ್ಲಿಗೆ ಹೋಗಿ ಮುಟ್ಟಲು ದಾರಿಯನ್ನು ತೋರಿಸುತ್ತವೆ, ಆದರೆ ದಾರಿಯನ್ನು ನಾವೇ ತುಳಿಯಬೇಕಲ್ಲವೆ? ಆ ಉಪಾಯಗಳನ್ನು ನಾವೇ ಅಳವಡಿಸಿಕೊಳ್ಳಬೇಕಲ್ಲವೆ? ಆ ವರ್ಣನೆಯ ಅರ್ಥವನ್ನು ನಾವೇ ಸರಿಯಾಗಿ ಗ್ರಹಿಸ ಬೇಕಲ್ಲವೆ? ಈ ರೀತಿಯಾಗಿ ಮಾಡುವಾಗ ಮನಸ್ಸು ಅಡ್ಡಿ ಉಂಟುಮಾಡುತ್ತದೆ. ಆ ಮನಸ್ಸಿನ ಚಲನೆಯನ್ನು ಅರಿಯಬೇಕು ಆಗಮಾತ್ರ ಸತ್ಯದ ದರ್ಶನ ಸಾಧ್ಯವಾಗುತ್ತದೆ. ಈ ಅರ್ಥದಲ್ಲಿ ವೇದ ಶಾಸ್ತ್ರ ಪುರಾಣಗಳು ಕೇವಲ ನುಚ್ಚು ತೌಡು ಎಂದು ಹೇಳುತ್ತಿರುವಳು. ಆ ಅನುಭವವನ್ನು ಸ್ವತಃ ಪಡೆಯಬೇಕಾದರೆ ಮನಸ್ಸಿನ ಶಿರವನ್ನರಿಯಬೇಕು. ಮನಸ್ಸಿನ ಮೂಲವನ್ನು ತಿಳಿದುಕೊಳ್ಳಬೇಕು. ಅದು ಹೇಗೆ ಕೆಲಸ ಮಾಡುತ್ತದೆ, ಹೇಗೆ ನಡೆದುಕೊಳ್ಳುತ್ತದೆ, ಏಕೆ ಹಾಗೆ ನಡೆದುಕೊಳ್ಳುತ್ತದೆ, ಎಂಬುದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಅರ್ಥ ಮಾಡಿಕೊಂಡಾಗ ಬೇರೆಯದೇ ಏನೋ ಹೊಳೆಯುತ್ತದೆ. ಆ ಹೊಳಹು ತಾನಾಗಿಯೇ ಆಗಬೇಕೇ ಹೊರತು ವೇದ ಶಾಸ್ತ್ರ ಪುರಾಣಗಳಿಂದ ಸಾಧ್ಯವಿಲ್ಲ ಎನ್ನುತ್ತಾಳೆ ಅಕ್ಕ.
ಕಠೋಪನಿಷತ್ತು ಕೂಡ ನಾಯಮಾತ್ಮಾ ಪ್ರವಚನೇನ ಲಭ್ಯೋ
ನ ಮೇಧಯಾ ನ ಬಹುನಾ ಶ್ರುತೇನ
ಯಮೇವೈಷ ವೃಣುತೇ ತೇನ ಲಭ್ಯ
ಸ್ತಸ್ಯೈಷ ಅತ್ಮಾ ವಿವೃಣತೇ ತನೂಂ ಸ್ವಾಮ್


ಎಂದು ಹೇಳುತ್ತದೆ. ಎಂದರೆ, ಈ ಆತ್ಮನು ಪ್ರವಚನಗಳನ್ನು ಕೇಳುವುದರಿಂದಾಗಲಿ, ಮೇಧಾಶಕ್ತಿಯಿಂದಾಗಲಿ, ಬಹಳ ಶ್ರವಣದಿಂದಾಗಲಿ ಲಭ್ಯನಲ್ಲ. ತನ್ನ ಆತ್ಮನನ್ನೇ ಬೇಡುವ ಆತ್ಮನಿಂದ ಆತ್ಮನು ದೊರೆಯುವನು, ಯಥಾರ್ಥ ಸ್ವರೂಪವನ್ನು ತೋರುವನು ಎಂದರ್ಥ. ಇದನ್ನೇ ಅಕ್ಕಮಹಾದೇವಿಯೂ ಹೇಳುತ್ತಿರುವಳು. ಆತ್ಮನನ್ನೇ ಪಡೆಯಬೇಕೆಂಬ ಹಂಬಲ ಇರಬೇಕು ಅದು ಮುಖ್ಯವೇ ಹೊರತು ಶಾಸ್ತ್ರ ಪುರಾಣಗಳಲ್ಲ
.