Friday, May 13, 2011

Vachana 39: Anjidadaagadu Alukidadaagadu – Courage and Strength of Mind


ಅಂಜಿದಡಾಗದು, ಅಳುಕಿದಡಾಗದು, ವಜ್ರಪಂಜರದೊಳಗಿದ್ದಡಾಗದು,
ತಪ್ಪದುವೋ! ಲಲಾಟಲಿಖಿತ,
ಕಕ್ಕುಲತೆಗೆ ಬಂದಡಾಗದು ನೋಡಾ,
ಧೃತಿಗೆಟ್ಟಡೆ, ಮನ ಧಾತುಗೆಟ್ಟೆಡೆ, ಅಪ್ಪುದು ತಪ್ಪದು,
ಕೂಡಲಸಂಗಮದೇವಾ.

TRANSLITERATION

aMjidaDAgadu, aLukidaDAgadu, vajrapaMjaradoLagiddaDAgadu,
tappaduvO! lalATaliKita,
kakkulatege baMdaDAgadu nODA,
dhRutigeTTaDe, mana dhAtugeTTeDe, appudu tappadu,
kUDalasaMgamadEvA.


CLICK TO HEAR IT

http://www.youtube.com/watch?v=_-Y3ae7kXaY

TRANSLATION


aMjidaDAgadu(fearing will not do), aLukidaDAgadu(hesitating will not do),
vajrapaMjaradoLagiddaDAgadu(being in a diamond cage will not do),
tappadu(cannot be prevented) vO!( hey you! )lalATaliKita(written on the brow,fate, destiny),
kakkulatege baMdaDe(being anxious)Agadu(will not do) nODA(you see),
dhRutigeTTaDe(losing courage), mana(mind) dhAtugeTTeDe(losing strength), appudu(what is to be) tappadu(cannot but be),
kUDalasaMgamadEvA(Lord of meeting Rivers).

It will not do to fear and hesitate
It will not do to be in a diamond cage
Whatever is written on your brow cannot be prevented
It will not do if you grow anxious, you see!
When you lose courage and your mind becomes faint
What is to be cannot but be
O Lord kUDalasaMgamadEvA

COMMENTARY

This vachana stresses that courage and strength of mind are most important in our lives. At the first reading, the vachana seem to imply that no matter what we do, we cannot change our destiny. Some reflection on the vachana clarifies the message. It will not do to fear and hesitate or hiding in a diamond cage. If fear and hesitation take over us, we tend to subscribe to the ‘destiny’ theory and start feeling that ‘it is all written on my brow and I cannot prevent it”. We must face life courageously and with strong will. We must not be unnecessarily anxious; we must not let our mind grow faint. In the absence of such courage, strength of mind and strong will, we will let our life take the path of whatever it becomes and cannot change it.

How can we develop the courage and strength of mind? The answer lies in understanding the causes of fear, anxiety and weakness of mind. It is obvious that we always would like to be happy, and never be sorrowful. Our happiness depends on the wealth, fame and stature in society, etc. as we perceive them or as they are imposed by others on us. Thus we are dependent on our environment for our happiness. When the environment fails to impose what we expect, our happiness goes away, leading to the state of sorrow. Shiva Sharanas provided a recipe to be free from this dependence on the environment. They said that the key for such independence is understanding the ‘self’ or realizing that the sorrow and happiness are results of what is ‘in’ and should not be caused by what is ‘out’ of us. Thus, the key to development of the strength and strong mind necessary to face the life as it comes and make it the best we can is realizing the self within us.

Sharanas set an example of independence, courage and strong mindedness through their lives of self realization, pure and unselfish performance of duty, austerity, and sharing the knowledge and wealth for the good of the society. 

Let us be courageous and strong minded to develop our life to be what it should be!

KANNADA COMMENTARY

ಬದುಕಿನಲ್ಲಿ ಧೈರ್ಯ ಮತ್ತು ಮನೋಬಲ ಎಷ್ಟು ಮುಖ್ಯವಾದದ್ದು ಎಂಬುದನ್ನು ಈ ವಚನ ತೋರಿಸಿಕೊಡುತ್ತದೆ. ಅಂಜಿದರಾಗಲಿ, ಅಳುಕಿದರಾಗಲಿ ಅಥವಾ ವಜ್ರಪಂಜರದಲ್ಲಿದ್ದರಾಗಲಿ, ಆತಂಕಪಟ್ಟರಾಗಲಿ ಬದುಕಿನಲ್ಲಿ ಆಗಬೇಕಾದದ್ದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಧೈರ್ಯಗುಂದಿ ಮನೋಬಲ ಕಳೆದುಕೊಂಡರೆ ಆಗಬೇಕಾದದ್ದು ತಪ್ಪುವುದಿಲ್ಲ, ಎಂದು ಹೇಳುತ್ತಾರೆ ಬಸವಣ್ಣನವರು. ಮೇಲು ನೋಟಕ್ಕೆ ಇದು, “ಹಣೆಬರಹವಿದ್ದಂತೆ ನಡೆಯುತ್ತದೆ, ಅದನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ಹೇಳುವಂತೆ ತೋರುತ್ತದೆ. ಆದರೆ ವಾಸ್ತವದಲ್ಲಿ, ಧೈರ್ಯ ಮತ್ತು ಮನೋಬಲದಿಂದ ಆಗುವುದನ್ನು ತಪ್ಪಿಸಬಹುದು ಎಂದು ಹೇಳುತ್ತಿದ್ದಾರೆ.

ಧೈರ್ಯ, ಛಲ ಮತ್ತು ಮನೋಬಲದಿಂದ ಏನನ್ನಾದರೂ ಗೆಲ್ಲಬಹುದು. ಬದುಕಿನ ಆಗುಹೋಗುಗಳನ್ನು ತಮ್ಮಿಷ್ಟದಂತೆ ಮಾರ್ಪಡಿಸಿಕೊಳ್ಳಬಹುದು. ಮುಂದೆ ಆಗಬಹುದಾದ ಕೆಡುಕನ್ನು ತಪ್ಪಿಸಬಹುದು ಎಂದು ಹೇಳುತ್ತಾರೆ. ಧೈರ್ಯ ಮತ್ತು ಮನೋಬಲವನ್ನು ಸಾಧಿಸುವುದು ಹೇಗೆ? ವ್ಯಕ್ತಿಯಲ್ಲಿ “ಧೈರ್ಯ ಮತ್ತು ಮನೋಬಲ ಇರಬೇಕು ಇರಬೇಕು” ಎಂದು ಕೇವಲ ಹೇಳುತ್ತಿದ್ದರೆ ಬಂದುಬಿಡುತ್ತವೆಯೆ? ಅದು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ಹಾಗಾದರೆ ಈ ಗುಣಗಳನ್ನು ಪಡೆಯಲು ಏನು ಮಾಡಬೇಕು??? ಅವುಗಳನ್ನು ಪಡೆಯಲು, ಅಧೈರ್ಯ ಮತ್ತು ಅಳುಕುಗಳು ಏಕೆ ಉಂಟಾಗುತ್ತವೆ ಎಂಬದನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರು ಸುಖವನ್ನು ಬಯಸುವುದು ಸರ್ವೇ ಸಾಮಾನ್ಯ. ಆದರೆ ಸುಖ ಬಯಸುವುದು ಎಂದರೆ ದುಃಖವನ್ನು ನಿರಾಕರಿಸುವುದು ಎಂದಾಯಿತು. ಹಾಗೆಂದರೆ ದುಃಖಕ್ಕೆ ಹೆದರುವುದು ಎಂದರ್ಥ. ಆದರೆ ಈ ಸುಖ ದುಃಖಗಳು ನಮ್ಮ ಕೈಯಲ್ಲಿವೆಯೆ? ನಾವು ಸುಖಕ್ಕಾಗಿ ಇನ್ನೊಬ್ಬರನ್ನು ಅಥವಾ ಇನ್ನಾವುದನ್ನೋ ಅವಲಂಬಿಸಿರುತ್ತೇವೆ, ಅಲ್ಲವೆ? ಯಾವಾಗ ನಾವು ಅವಲಂಬಿತರಾಗಿರುತ್ತೇವೆಯೋ ಆಗ ನಮ್ಮಲ್ಲಿ ಭೀತಿ ಮನೆಮಾಡುತ್ತದೆ. ಏಕೆಂದರೆ ನಮಗೆ ಸದಾ ಆ ಇನ್ನೊಂದು ಅಥವಾ ಆ ಇನ್ನೊಬ್ಬ ಯಾವಾಗ ನಮ್ಮ ಸುಖವನ್ನು ಇಲ್ಲವಾಗಿಸುತ್ತದೆಯೋ, ಇಲ್ಲವಾಗಿಸುತ್ತಾನೆಯೋ, ಎಂಬ ಚಿಂತೆ ಕಾಡುತ್ತದೆ. ಆದ್ದರಿಂದ ನಮ್ಮ ಧೈರ್ಯ ಮತ್ತು ಮನೋಬಲ ಕುಂದುತ್ತದೆ. ಆ ಸುಖ ಕಳೆದು ಹೋಗದಂತೆ ಮನಸ್ಸು ತನ್ನ ಸುತ್ತಲೂ ಗಟ್ಟಿಯಾದ ಗೋಡೆ ನಿರ್ಮಿಸಿಕೊಳ್ಳುತ್ತದೆ. ಅದನ್ನೊಂದು ವಜ್ರಪಂಜರವೆಂದು ಭಾವಿಸಿ ತಾನು ಸುರಕ್ಷಿತವೆಂದುಕೊಳ್ಳುತ್ತದೆ. ಆದರೆ ಅದು ಸುರಕ್ಷಿತವಲ್ಲ. ಏಕೆಂದರೆ, ಬದುಕಿನಲ್ಲಿಯ ಪ್ರಸಂಗಗಳು ಮತ್ತು ನಾವು ನಮ್ಮ ಸುಖಕ್ಕಾಗಿ ಅವಲಂಬಿತವಾದ ವಿಷಯಗಳು, ಅವಲಂಬಿತವಾದವರು ನಮ್ಮಿಷ್ಟದಂತೆ ಇರುವುದಿಲ್ಲ. ಆಗ ನಮಗೆ ದುಃಖವಾಗುತ್ತದೆ. ನಾವು ಅದನ್ನು “ಲಲಾಟಲಿಖಿತ”ವೆಂದುಕೊಂಡು ಸುಮ್ಮನಿದ್ದುಬಿಡುತ್ತೇವೆ. ಹಾಗಾದರೆ ಏನು ಮಾಡುವುದು? ಸುಖವನ್ನು ಬಯಸುವುದೇ ತಪ್ಪೆ? ಮೊದಲು ಸುಖವೆಂದರೇನು ಎಂದು ಯೋಚಿಸಬೇಕು. ಅವಲಂಬನೆಯಿಂದ ದುಃಖವೆ ಹೊರತು ಸುಖವಿಲ್ಲ ಎಂಬುದು ತಿಳಿಯಿತು. ಅಂದರೆ ಅವಲಂಬನೆಯಿಲ್ಲದ ಸುಖವನು ಕಂಡುಕೊಳ್ಳಬೇಕು ಎಂದಾಯಿತು ಅಲ್ಲವೆ? ಅಂತಹ, ಎಲ್ಲ ಜಂಜಾಟಗಳಿಂದ ಮುಕ್ತವಾದ ದಾರಿಯನ್ನು ಶರಣರು ತೋರಿಸಿಕೊಟ್ಟಿದ್ದಾರೆ. ಶರಣರು ಛಲಗಾರರು, ಮಹಾಮನೋಬಲ ಉಳ್ಳವರು, ಏನೇ ಬಂದರೂ ವಿಚಲಿತರಾಗದೆ ತಾವು ಆರಿಸಿಕೊಂಡ ದಾರಿಯಿಂದ ವಿಮುಖರಾಗದವರು. ಅವರ ಸುಖ ಬೇರೆ ಯಾರಿಂದಲೋ ಅಥವಾ ಯಾವುದರಿಂದಲೋ ಉಂಟಾಗುವಂತಹುದಲ್ಲ. ಅದು ಅಂತರಂಗದಲ್ಲಿ ತಾನಾಗಿಯೇ ಸ್ಫುರಿಸುವಂತಹದು. ಇಂತಹವರಿಗೆ ಯಾವುದರ ಭಯ? ಏನೇ ಆದರೂ ಅವರು, ಸತ್ಯ ಶುದ್ಧ ಕಾಯಕ, ದಾಸೋಹ ಮತ್ತು ಶಿವಯೋಗವನ್ನು ಬಿಡದವರು. ಸತ್ಯ ಶುದ್ಧ ಕಾಯಕದಿಂದ ಗಳಿಸಿದ ಹಣದಿಂದ ಅತ್ಯಂತ ಸರಳವಾದ ಜೀವನ ನಡೆಸಿದವರು ಅವರು. ಇಲ್ಲದ ಸುಖದ ಸುಪ್ಪತ್ತ್ತಿಗೆಗೆ ಆಸೆಪಟ್ಟವರಲ್ಲ. ಮೃಷ್ಟಾನ್ನ ಭೋಜನವನ್ನು ಬಯಸಿದವರೂ ಅಲ್ಲ, ದಾಸೋಹದಲ್ಲಿ ಅದನ್ನು ಕೊಟ್ಟವರೂ ಅಲ್ಲ. ಅಂಬಲಿಯ ದಾಸೋಹವನ್ನೇ ಮಾಡಿ ಅಂಬಲಿಯನ್ನೇ ಉಂಡು ತೃಪ್ತರಾದವರು ಅವರು. ತಾವು ಮಾಡಿದ ಅಂಬಲಿಯ ರುಚಿಯನ್ನು ಸವಿಯಲು ಜಂಗಮರು ತಾವಾಗಿಯೆ ತಮ್ಮಲ್ಲಿಗೆ ಬರುವಂತೆ ಮಾಡಿದವರು ಅವರು. ಯಾವುದಕ್ಕೂ ಆಸೆ ಪಡದೆ ಮನಸ್ಸನ್ನು ಶಿವಯೋಗದಲ್ಲಿ ತೊಡಗಿಸಿಕೊಂಡವರು. ಇಂತಹವರಿಗೆ ಇನ್ನಾವುದರ ಹಂಗು? ಇನ್ನಾವುದರ ಭಯ, ಚಿಂತೆ? ಹಂಗು, ಭಯ. ಚಿಂತೆ ಇಲ್ಲದವರಿಗೆ ದುಃಖವೆಲ್ಲಿಯದು?

ಅವರು ಆರಿಸಿಕೊಂಡ ಈ ದಾರಿ ಇನ್ನೊಬ್ಬರಮೇಲೆ ಅವಲಂಬಿತವಾದುದ್ದಲ್ಲ. ನಿರಾವಲಂಬನೆಯಿಂದ ಅಪಾರವಾದ ಆತ್ಮ ವಿಶ್ವಾಸ, ಧೈರ್ಯ ಮತ್ತು ಮನೋಬಲ ಉಂಟಾಗುತ್ತದೆ. ಮತ್ತು ಇದು “ಅಪ್ಪುದನ್ನು ತಪ್ಪಿಸುತ್ತದೆ”. ಬಂದುದೆಲ್ಲವನ್ನು “ಲಲಾಟಲಿಖಿತ”ವೆಂದುಕೊಂಡು ಕೈಕಟ್ಟಿ ಕುಳಿತಿರುವುದಕ್ಕೆ ಅದು ಬಿಡುವುದಿಲ್ಲ.

ಇದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ಬುದ್ಧನು ಹೇಗೆ ಸಮಾಜ ಕಂಟಕನಾದ ಅಂಗುಲಿಮಾಲನ ಮನಸ್ಸನ್ನು ಪರಿವರ್ತಿಸಿದನು ಎಂಬುದನ್ನು ಸ್ಮರಿಸಿಕೊಳ್ಳಬಹುದು. ಬುದ್ಧ ತನ್ನ ವೈಯಕ್ತಿಕ “ಸುಖ” ವನ್ನು ತೃಣದಂತೆ ಕಡೆಗಣಿಸಿದವರನು. ಸಮಾಜದ ಬಗ್ಗೆ ಅಪಾರ ಅನುಕಂಪವನ್ನು ತಳೆದವನು. ಆತನ ಈ ಗುಣವೇ ಆತನಿಗೆ ಭಯಂಕರನಾದ ಅಂಗುಲಿಮಾಲನ ಎದುರು ಒಬ್ಬನೇ ನಿರ್ಭೀತನಾಗಿ ಹೋಗುವ ಅಸೀಮ ಧೈರ್ಯ ಮತ್ತು ಮನೋಬಲವನ್ನು ನೀಡಿತು.

ಅನೇಕ ರೀತಿಯ ಸೌಲಭ್ಯಗಳಿಗೆ, ಸುಖ ಸಂಪತ್ತುಗಳಿಗೆ ಚೆನ್ನಾಗಿ ಹೊಂದಿಕೊಂಡ ನಾವು ಶರಣರಂತಾಗಲಿ ಅಥವಾ ಬುದ್ಧನಂತಾಗಲಿ ಬಾಳುವುದು ಈಗ ಅಸಾಧ್ಯವೇ ಎಂದು ತೋರುತ್ತದೆ. ಆದರೆ ಕನಿಷ್ಠ ಪಕ್ಷ ನಮ್ಮ ಬದುಕಿನ ಪ್ರತಿ ಹಂತದಲ್ಲೂ ಇತಿಮಿತಿಯನ್ನು ಅಳವಡಿಸಿಕೊಳ್ಳಬಹುದಲ್ಲವೇ? ಇತಿಮಿತಿಯಿಂದ ಬಾಳುವವರ ಮನಸ್ಸು ಸದಾ ಜಾಗೃತವಾಗಿರಬೇಕಾಗುತ್ತದೆ. ಮತ್ತು ಈ ಎಚ್ಚರಿಕೆ, ವ್ಯಕ್ತಿಯಲ್ಲಿ ಆತ್ಮಸ್ಥೈರ್ಯವನ್ನುಂಟಮಾಡುತ್ತದೆ.

1 comment:

  1. The following comments were submitted by Vivek Shandilya on 5/20/2011
    Dear Sir, The bolg post of vachana-39 was very inspiring. Each post always seems to speak to me personally, about exactly what I am going through that week, to help me. The main effect of the post would be the help I get for my own life. It takes many readings separated by many days to understand your explanation. This particular post of yours triggered the following thought in my mind, on the way of understanding it. I wanted to share it with you. "The Semitic thoughts have the primordial guilt, human guilt, existential guilt as some of the key ideas. The symbolic fallibility of Adam and subsequent ousting of Adam from the Garden of Eden recurs in many varied metaphors through out their writings, in each of the books, starting from The Book of John. The memetic inheritance which this Vachana refines and reinforces is the SAt-Chit-Ananda (True-Concious- Joy due to non-duality) as the one and only real form of each, rendering the burden/ question of being and becoming to be irrelevant. This leads to the consideration of fruits of actions not as the prime relevant motivation for action, as what happens, what is and what will be, what becomes of what is, are rendered to be of only descriptive transitive perceptional value, as the only definitive valuable being the unchanging sat-chit-AnandA. Not being defined as a sinner, but as upanishad's proclaim each as "ಶುನ್ವಂತು ವಿಶ್ವೇ ಅಮೃತಸ್ಯ ಪುತ್ರಃ", "addressing everyone as the children of immortality" does one gets to derive the inner courage to dispel the fear due to ignorance , to embark on the duty without fear and hesitation." Please keep up the good work to help and inspire us.
    Regards and Thanks,
    Vivek

    ReplyDelete