ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು?
ಹಸಿವು ಹೋಹುದೆ?
ಅಂಗದ ಮೇಲೆ ಲಿಂಗ ಸ್ವಾಯತವಾಡೇನು ?
ಭಕ್ತನಾಗಬಲ್ಲನೆ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ, ಆಕಲ್ಲು ಲಿಂಗವೆ?
ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ?
ಇಂತಪ್ಪವರ ಕಂಡಡೆ ನಾಚುವೆನಯ್ಯ ಗುಹೇಶ್ವರ
TRANSLITERATION
hoTTeya mEle kaTTOgarada moTTeya kaTTidODEnu?
hasivu hOhude?
aMgada mEle liMga svaayatavaadaDEnu?
bhaktanaagaballane?
iTTa kallu meLeya mEle sikkidaDe aa kaLLu liMgave?
aa meLe bhaktane? iTTaata guruve?
iMtappavara kaMDaDe naacuvenayya guhEshvara
CLICK TO HEAR IT
http://www.youtube.com/watch?v=WRlhNthvi3Q
TRANSLATION
hoTTeya(stomach) mEle(on) kaTTOgarada(delicious eats) moTTeya(bundle) kaTTidODEnu(if tied)?
hasivu (hunger) hOhude (quench)?
aMgada(body) mEle(on) liMga(linga) svaayatavaadaDEnu(if worn) ?
bhaktanu (devotee) aagaballane(can one become)?
iTTa (throw) kallu(stone) meLeya(Bamboo bush) mEle(on) sikkidaDe(if stuck) aa(that) kaLLu(stone) liMgave(can be a linga)?
aa meLe bhaktane(is it a devotee)? iTTaata(who threw) guruve(is he a guru)?
iMtappavara(such individual) kaMDaDe(when I see) naacuvenu (ashamed?, not fond of)ayya(O Sir) guhEshvara(the Lord of Caves)
Would a bundle of delicious eats tied on the stomach quench the hunger?
Would one become a devotee just by wearing linga on his body?
Can a stone thrown at a bamboo bush and stuck on it be treated as a linga?
Is the bamboo bush a devotee? One who threw the stone a guru?
I am ashamed of such individuals, Oh! Lord!
COMMENTARY
We have addressed the roles of Guru, Jangama and Linga in the life of a spiritual seeker in previous postings. In this vachana Allama Prabhu emphasizes that just the act of wearing a linga on the body and going through the ritualistic worship does not make one a true devotee, just as the bundle of food tied on the stomach would not quench one’s hunger, it has to be eaten. Bamboo bushes grow to be very thick. A stone thrown at them would get stuck on the bush. Allama Prabhu questions "can we say that the bush is a devotee wearing the stone as linga? Can we call the stone thrower a guru? "
While wearing linga could be a good start at the spiritual journey, reaching the goal of such a journey is only possible when one understands the meaning behind such icons. While faith is a prime requisite of a true devotee, it should not stop him from questioning and understanding the true nature of the Lord. Such questioning should bring him the realization of the Lord within. This inner maturity in turn should make the devotee into a universal being.
Icons and rituals have been introduced from time immemorial. The sharanas of the twelfth century while observed the practice of such rituals, emphasized the knowledgeful seeking of the Lord within.
Let us move past the rituals and icons and become true seekers of the Lord!
KANNADA COMMENTARY
ದೇವರನ್ನು ಒಲಿಸಿಕೊಳ್ಳಲು ಲಿಂಗದಲ್ಲಿ ಭಕ್ತಿ ಇರಬೇಕು ಎಂದು ಹೇಳುತ್ತಾರೆ. ಆದರೆ ಲಿಂಗವನ್ನು ದೇಹದಮೇಲೆ ಧರಿಸಿಬಿಟ್ಟರೆ ಆಯಿತು ಅದೇ ಭಕ್ತಿ ಎಂದು ತಿಳಿಯುವುದು ಮೂರ್ಖತನವೆಂದು ಈ ವಚನದಲ್ಲಿ ಬಹಳ ಚೆನ್ನಾಗಿ ಹೇಳುತ್ತಾರೆ ಅಲ್ಲಮಪ್ರಭುಗಳು.
ಹೊಟ್ಟೆಯ ಮೇಲೆ ರುಚಿರುಚಿಯಾದ ಓಗರಗಳನ್ನು ಗಂಟು ಮಾಡಿ ಕಟ್ಟಿಕೊಂಡರೆ ಹಸಿವು ಹಿಂಗುವುದೆ? ಅವುಗಳನ್ನು ತಿಂದಲ್ಲದೆ ಹೊಟ್ಟೆ ತುಂಬದು. ಅದೇ ರೀತಿಯಾಗಿ ದೇಹದ ಮೇಲೆ ಲಿಂಗವನ್ನು ಕಟ್ಟಿಕೊಂಡ ಮಾತ್ರಕ್ಕೆ ಹಾಗೆ ಕಟ್ಟಿಕೊಂಡವನು ಭಕ್ತನಾಗಬಲ್ಲನೆ? ಹಸಿದವನು ನಾನಾ ತರದ ತಿಂಡಿಗಳನ್ನು ಹೊಟ್ಟೆಯ ಮೇಲೆ ಕಟ್ಟಿಕೊಳ್ಳುವದರಿಂದ ಅವನಿಗೆ ಹೇಗೆ ಯಾವ ಪ್ರಯೋಜನವೂ ಆಗದೋ ಹಾಗೆಯೇ ಕೇವಲ ಶರೀರದ ಮೇಲೆ ಲಿಂಗವನ್ನು ಕಟ್ಟುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಆ ತಿಂಡಿಗಳನ್ನು ಸ್ವತಃ ಮೆದ್ದಾಗ ಮಾತ್ರ ಅದರ ರಸ, ಸತ್ವ ದೇಹಗತವಾಗಿ ಪುಷ್ಟಿಕೊಡುತ್ತದೆ. ಅದೇ ರೀತಿಯಾಗಿ ಲಿಂಗದ ಹಿಂದೆ ಅಡಗಿದ ರಹಸ್ಯವನ್ನು ತಿಳಿದುಕೊಂಡಾಗ ಮಾತ್ರ ಭಕ್ತಿಯು ಪುಷ್ಟಿಯುತವಾಗುತ್ತದೆ. ಇಲ್ಲದಿದ್ದರೆ ದೇಹದ ಮೇಲೆ ಧರಿಸಿದ ಲಿಂಗವು ಮೆಳೆಯ ಮೇಲೆ ಸಿಕ್ಕ ಕಲ್ಲಿನಂತೆ ಒಂದು ಕಾಕತಾಳೀಯ ವಿಷಯವಷ್ಟೆ. ಮೆಳೆಯ ಮೇಲೆ ಯಾರೋ ಎಸೆದ ಒಂದು ಕಲ್ಲು ಸಿಕ್ಕಡೆ ಅದನ್ನು ಲಿಂಗವೆನ್ನಬಹುದೆ? ಆ ಮೆಳೆಯನ್ನು ಭಕ್ತನೆನ್ನಬಹುದೆ? ಅದನ್ನು ಅಲ್ಲಿ ಎಸೆದವನನ್ನು ಗುರುವೆನ್ನಬಹುದೆ? ಎಂದು ಕೇಳುತ್ತಾರೆ ಅಲ್ಲಮ ಪ್ರಭುಗಳು. ಈ ರೀತಿಯಾಗಿ ಕೇವಲ ಉಪಚಾರಕ್ಕಾಗಿ ಲಿಂಗ ಧರಿಸುವವರನ್ನು ಕಂಡರೆ ತನಗೆ ನಾಚಿಕೆಯಾಗುತ್ತದೆ ಎನ್ನುತ್ತಾರೆ ಅವರು.
ಭಕ್ತ, ಲಿಂಗ ಮತ್ತು ಗುರುವಿಗೆ ಒಂದು ವಿಶೇಷವಾದ ಅರ್ಥವ್ಯಾಪ್ತಿ ಇದೆ. ಅದನ್ನು ಅರಿತಾಗ ಮಾತ್ರ ಅವುಗಳಿಂದ ಪ್ರಯೋಜನವಾಗುತ್ತದೆ. ಭಕ್ತಿ ಎಂದರೆ ಶ್ರದ್ಧೆ ಎಂದು ಹೇಳಬಹುದು. “ಇಲ್ಲಿ ಶ್ರದ್ಧೆ ಎಂದರೆ ವಿಚಾರವಿಲ್ಲದೆ ಎಲ್ಲವನ್ನೂ ನಂಬುವ ಕುರುಡು ನಂಬಿಕೆಯಲ್ಲ. ಆ ದೇವನ ಸ್ವರೂಪವೇ ತಾನು, ಆಂತರಿಕ ಪರಿವರ್ತನೆಯಿಂದ ತಾನು ಆ ಸಹಜ ಸ್ಥಿತಿಯನ್ನು ಪಡೆಯಬೇಕು ಎಂಬ ಅರಿವಿನ ಎಚ್ಚರವೇ ಇಲ್ಲಿ ಶ್ರದ್ಧೆಯಾಗುತ್ತದೆ....... ಇದಕ್ಕೆ ಸಹಾಯವಾಗುವಂತೆ ಬಹಿರಂಗದ ಕ್ರಿಯಾಶೀಲ ಜೀವನವನ್ನು ಅಳವಡಿಸಿಕೊಳ್ಳುವುದು” (ಬಸವೇಶ್ವರ ವಚನದೀಪಿಕೆ - ಡಾ. ಎಚ್. ತಿಪ್ಪೇರುದ್ರಸ್ವಾಮಿ) ಭಕ್ತನ ಲಕ್ಷಣ. “ಶಿವಜ್ಞಾನವೇ ಶಿವಭಕ್ತಿಗೆ ಆಧಾರ, ಅದೇ ಆಹಾರ. ಶರಣರು ಹೇಳುವ ಭಕ್ತಿ, ಜ್ಞಾನ ತೈಲದಿಂದ ಭರಿತವಾದ ಭಕ್ತಿ. ಈ ರಸ ತೈಲವಿಲ್ಲದ ಭಕ್ತಿ ಮೂಢ ಭಕ್ತಿ, ಅಂಧ ಭಕ್ತಿ, ಕುರುಡು ಭಕ್ತಿ. ತಾನಾರು, ತಾನು ಮುಟ್ಟಬೇಕಾದ ಚರಮ ವಿಶ್ರಾಮ ಸ್ಥಾನವಾವುದು? ಎಂಬುದರ ಅರಿವಿಲ್ಲದ ತಾಮಸ ಭಕ್ತಿ ಎಳ್ಳಿಲ್ಲದ ಗಾಣವನಾಡಿದಂತೆ. ಅರಿದು ಮಾಡುವ ಭಕ್ತಿಯೆ ನಿಜಭಕ್ತಿ”
(“ಶೂನ್ಯ ಸಂಪಾದನೆಯ ಪರಾಮರ್ಶೆ” - ಸಂ. ಶಿ. ಭೂಸನೂರಮಠ )ಈ ಗುಣಗಳುಳ್ಳವನನ್ನು ಭಕ್ತನೆನ್ನಬಹುದೇ ಹೊರತು ಕೇವಲ ಉಪಚಾರಕ್ಕಾಗಿ ಶಿವಲಾಂಛನಗಳನ್ನು ಧರಿಸಿದವನನ್ನಲ್ಲ್ಲ.-
\ಲಿಂಗವಂತೂ ಆ ದೇವನ ಸ್ವರೂಪವೇ ಆಗಿದೆ. ( ಈ ಹಿಂದೆಯೇ ಇದನ್ನು ಹೇಳಿದಂತೆ) ಕಂತೆ ಕೂಡಿಸಿದ ಶಿವಲಿಂಗವು “ಬಾಹ್ಯ ಆಕಾರದಲ್ಲಿ ಗೋಳಕವಾಗಿ ಅದುವೆ ಬ್ರಹ್ಮಾಂಡದ ಇಲ್ಲವೆ ಆಕಾಶದ ಪ್ರತೀಕವಾಗಿದೆ. ಆದರೆ ಅದರ ಒಳಗಿನ ಆಕಾರವು ಮಾತ್ರ ಪೂಜೆಗೆ ಕುಳಿತ ಭಕ್ತನ ಆಕಾರದಲ್ಲಿದೆ. .... ಸಾಧಕನು ತನ್ನ ದೇಹದಲ್ಲಿಯೇ ದೇವನಿರುವನು ಎಂದು ಕಾಣುವನು. ತಾನು ತನ್ನ ಸ್ವರೂಪವನ್ನೇ ಪೂಜಿಸುತ್ತಿಹೆನೆಂಬ ರಹಸ್ಯವು ಈ ಇಷ್ಟಲಿಂಗಕ್ಕೆ ಇರುವ ಆಕಾರದಲ್ಲಿ ಹುದುಗಿದೆ. ..... ಬಾಹ್ಯ ಆಕಾರವು ಬ್ರಹ್ಮಾಂಡದ ರೂಪದಲ್ಲಿ, ಅಂತರಾಕಾರವು ಪಿಂಡಾಂಡದ ರೂಪದಲ್ಲಿದ್ದು, ಪಿಂಡ ಬ್ರಹ್ಮಾಂಡಗಳ ಐಕ್ಯವನ್ನು ಸಾಧಿಸುತ್ತಿದೆ ಈ ಲಿಂಗ. ಇಷ್ಟಲಿಂಗದ ಪೂಜೆ ಮತ್ತು ಅನುಸಂಧಾನಗಳಿಂದ ...... ಪ್ರಕಾಶದ ಸಾಕ್ಷಾತ್ಕಾರ ಉಂಟಾಗುವುದು.” ಎಂದು ಹೇಳುತ್ತಾರೆ ಶ್ರೀ ಶಿವಕುಮಾರ ಸ್ವಾಮಿಗಳು (ನವ ಕಲ್ಯಾಣಮಠ, ಧಾರವಾಡ)
ಇನ್ನು ಗುರು ಎಂದರೆ ಯಾರು?
“ವಿಷಯಸಂಸಾರದಲ್ಲಿ ಹೊಲಬುಗೆಟ್ಟು ಅಯ್ಯೋ ಎಂದು ಹುಯ್ಯಲಿಡುತ್ತ ಬಂದ ಸಂಸಾರದ ಕೂಸನ್ನೆತ್ತಿ ’ಬಳಲಿದೆಯಾ ಮಗು’ ಎಂದು ಕಾರುಣ್ಯದಿಂದ ಮಾರ್ಗಕ್ಕೆ ಹಚ್ಚುವಾತ............. ಮಾನವ ಕುಲದ ಹೃದಯ ಗಂಭೀರದಲ್ಲಿ ಅನಾದಿಕಾಲದಿಂದ ಹರಿಯುತ್ತ ಬಂದಿರುವ ದಿವ್ಯಾಪೇಕ್ಷೆಯನ್ನು ಪೂರೈಸಬಲ್ಲ ಸದ್ಗುರು ಈತ” (“ಶೂನ್ಯ ಸಂಪಾದನೆಯ ಪರಾಮರ್ಶೆ” - ಸಂ. ಶಿ. ಭೂಸನೂರಮಠ ).
ಒಟ್ಟಿನಲ್ಲಿ ದಿನನಿತ್ಯದ ಬದುಕಿನ ತೊಳಲಾಟದಿಂದ ಬೇಸತ್ತ ಶಿಷ್ಯನನ್ನು ಅವುಗಳಿಂದ ಬಿಡಿಸಿ ಶಿವಮಾರ್ಗವನ್ನು ತೋರಿಸುವವನೇ ಗುರು.
ಈ ರೀತಿಯಾಗಿ ಮೇಲೆ ಹೇಳಿದ ಭಕ್ತನ ಲಕ್ಷಣಗಳಿಲ್ಲದವನು ಲಿಂಗದ ಅರ್ಥವನ್ನು ಅರಿಯದೆ ಮಾಡುವ ಪೂಜೆಗೆ ಯಾವ ಅರ್ಥವೂ ಇಲ್ಲ, ಹಾಗೂ ಸಂಸಾರದಿಂದ ಮುಕ್ತಿಯನ್ನು ಕರುಣಿಸದಾತ ಗುರುವಲ್ಲ. ಇಂತಹವರು ಹೆಸರಿಗೆ ಲಿಂಗಧರಿಸಿರುವದನ್ನು ಕಂಡು ತನಗೆ ನಾಚಿಕೆಯಾಗುತ್ತದೆ ಎನ್ನುತ್ತಾರೆ ಅಲ್ಲಮ ಪ್ರಭುಗಳು.
Excellent Prof. Shiva.
ReplyDeleteI enjoyed it and look forward to see more such posts.
-Kiran Hawaldar