Friday, March 11, 2011

Vachana 30: Neera kandalli Muluguvarayya – On Blind Beliefs

ನೀರ ಕಂಡಲ್ಲಿ ಮುಳುಗುವರಯ್ಯ!
ಮರನ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವನೊಣಗುವ ಮರನ
ಮೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ

TRANSLITERATION
nIra kaMDalli muLuguvarayya!
marana kaMDalli suttuvarayya!
battuva jalavanoNaguva marana
meccidavaru nimmanetta ballaru
kUDalasaMgamadEva


CLICK TO HEAR IT
http://www.youtube.com/watch?v=PRmOCboawDk


TRANSLATION
nIra(water) kaMDalli(wherever seen) muLuguvaru (they dip) ayya(Sir!)!
marana(tree) kaMDalli suttuvaru (they circle)ayya!
Battuva(drying) jalavanu (water)oNaguva(withering) marana
Meccida (seek, admire)avaru(those) nimmanu (you) etta(how) ballaru(know)
kUDalasaMgamadEva(Lord of meeting rivers)


Wherever they see water, they dip in it, O Sir!
Wherever they see a tree, they circle it, O Sir!
How can they know you, they who seek water that dries up and the tree that withers away ,
Oh! Lord, Kudala Sangama deva!


COMMENTARY
It is very common to see people taking dip in the body of water next to temples and other places of worship, believing that such a dip relieves them of all their ills and sins and takes them closer to God. People travel miles and miles to take a dip in holy rivers, no matter how unfit the waters are for such dips. People routinely circle a tree when they see an idol under it. We associate a God with each type of tree and believe that circling the tree is equivalent to the worship that takes us close to God. Basavanna is saddened by such blind beliefs and says “how can one realize the indestructible, omniscient, omnipotent God, when one is shallow enough to believe that the impermanent trees and water represent Him?”


Basavanna is urging us to get past the blind beliefs and strive to seek the Lord within through intense devotion and absolute persistence. This requires one to open the intuitional (third) eye, go beyond the influences of one’s sense organs, and develop the habit of an intense scrutiny of every activity one performs to see if it takes one towards Godliness. Faith and beliefs are absolutely necessary; but the faith and belief without the knowledge to stay on the right path, will not yield success in one's spiritual journey.


Let us strive to reach above our blind beliefs and become true seekers of the absolute soul!


KANNADA COMMENTARY
ಸಾಮಾನ್ಯ ಜನರ, ನೀರನ್ನು ಕಂಡು ಮುಳುಗುವ ಮತ್ತು ಮರವನ್ನು ಕಂಡು ಸುತ್ತುವ ಅಜ್ಞಾನದ ರೀತಿಯನ್ನು ಕಂಡು ಮರುಗುತ್ತಾರೆ ಬಸವಣ್ಣನವರು. ಈ ಅಜ್ಞಾನದ ನಡತೆ ಕೇವಲ ಆ ಕಾಲಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಈಗಲೂ ನಾವು ಇದನ್ನು ಕಾಣುತ್ತೇವೆ. ನೀರಕಂಡಲ್ಲಿ ಅದನ್ನು ಒಂದು ಪವಿತ್ರ ತೀರ್ಥ ಕ್ಷೇತ್ರವೆಂದು ಮುಳುಗುಹಾಕುವವರಿಗೆ ಯಾವ ಕೊರತೆಯೂ ಇಲ್ಲ. ನಾನಾ ನೀರಿನ ಕುಂಡಗಳಲ್ಲಿ, ಅಲಕನಂದಾ, ಭಾಗೀರಥಿ, ಗಂಗಾ ಮುಂತಾದ ನದಿಗಳಲ್ಲಿ ಮೀಯಲು ಅಸಂಖ್ಯ ಜನರು ಸಾವಿರಾರು ಮೈಲುಗಳ ಪ್ರಯಾಣ ಮಾಡುತ್ತಾರೆ. ಅದರಿಂದೇನು ಲಾಭ. ಅದರಿಂದ ದೇವರು ಸಿಗುವನೆ?


ಮರವನ್ನು ನೋಡಿದರೆ ಸಾಕು ಅದರಲ್ಲಿ ದೇವನಿರುವನು ಅಥವಾ ಇಂತಿಂತಹ ಮರದಲ್ಲಿ ಇಂತಿತಹ ದೇವರು ಇರುವನೆಂದುಕೊಂಡು ಆತನನ್ನು ಪ್ರಸನ್ನಗೊಳಿಸಲು ಮರಕ್ಕೆ ಪ್ರದಕ್ಷಿಣೆ ಬರುವವರಿಗು ಸಹ ಏನೂ ಕೊರತೆಯಿಲ್ಲ. ಇಷ್ಟು ಸುಲಭವಾಗಿ ದೇವರು ಕೈಗೂಡುವನೆ? ಅವಿನಾಶಿಯಾದ ಆ ದೇವರು ಬಿಸಿಲಿಗೆ ಬತ್ತಿಹೋಗುವ ಜಲದಲ್ಲಿ, ಮರದಲ್ಲಿ ಇರಲು ಸಾಧ್ಯವೆ? ಎಂದು ಕೇಳುತ್ತಾರೆ ಬಸವಣ್ಣನವರು.


ಈ ರೀತಿಯಾಗಿ ಪ್ರಕೃತಿಯಲ್ಲಿ ಬದಲಾವಣೆಯಾದಾಗ ನಾಶವಾಗಿ ಹೋಗುವ ವಸ್ತುಗಳಲ್ಲಿ ದೇವರಿರುವನು ಎಂದು ನಂಬಿ ಕೇವಲ ಅವುಗಳ ಪೂಜೆಗಳಿಗೇ ಸೀಮಿತರಾಗಿ ಉಳಿಯುವ ಜನರನ್ನು ಕುರಿತು ಈ ವಚನವನ್ನು ಹೇಳಿದ್ದಾರೆ.


ಬಿರು ಬಿಸಿಲಿಗೆ ಬತ್ತುವ ಜಲವನ್ನು ಹಾಗೂ ಒಣಗುವ ಮರವನ್ನು ದೇವರೆಂದು ನಂಬುವುದು ಮೂಢಭಕ್ತಿ. ಹಾಗೆ ಮಾಡುವವರನ್ನು ವಿವೇಚನೆಯನ್ನೇ ಕಳೆದುಕೊಂಡವರು ಎನ್ನಬಹುದು. ಭಕ್ತನಲ್ಲಿ ಶ್ರದ್ಧೆಇರಬೇಕಾದದ್ದು ಅತ್ಯಾವಶ್ಯಕ. ಆದರೆ ಅದು ವಿವೇಚನಾರಹಿತವಾದ ಮೂಢಭಕ್ತಿಯಾಗಬಾರದು. ಹೀಗೆ ಮೂಢ ಭಕ್ತಿಯಲ್ಲಿ ಮುಳುಗಿದವರು ನಿಜವಾದ ದೇವರನ್ನು ಹೇಗೆ ಕಂಡಾರು? ನಿಜವಾದ ದೇವರು ಸ್ಥೂಲ ರೂಪದಲ್ಲಿ ಕಾಣುವುದಿಲ್ಲ. ಆತನು ಇಂದ್ರಿಯಗಳಿಗೆ ನಿಲುಕುವವನಲ್ಲ. ಕೇವಲ ಅನುಭಾವಕ್ಕೆ ಸಿಗುವವನು. ಆತನು ಸೀಮಾತೀತನು, ಆತನು ಅವಿನಾಶಿ. ಅಂತಹವನ್ನು ಸ್ಥೂಲವಾದ ಮತ್ತು ನಾಶಹೊಂದುವ ಕೆಲವು ವಸ್ತುಗಳಲ್ಲಿ ಇದ್ದಾನೆ ಎಂದು ಭಾವಿಸಿ ಪೂಜಿಸುವುದು ಮೂರ್ಖತೆಯ ಪರಮಾವಧಿ ಎನ್ನುತ್ತಾರೆ ಬಸವಣ್ಣನವರು. ಇಂತಹ ಮೂರ್ಖತೆಯಲ್ಲಿ ಮುಳುಗಿದವರನ್ನು ಅದರಿಂದ ಮೇಲೆತ್ತ್ತುವುದು ಬಹಳ ಕಷ್ಟ. ಏಕೆಂದರೆ ನಿಜವಾದ ದೇವರನ್ನು ಕಾಣಲು ವ್ಯಕ್ತಿಯ ಮನದಲ್ಲಿ ವಿಚಾರಗಳ ಮಂಥನ ನಡೆಯುತ್ತಿರಬೇಕು. ತಾನು ಮಾಡುವ ಕ್ರಿಯೆಗಳನ್ನು ಒರೆಗೆಹಚ್ಚಿ ನೋಡುವ ಛಲವಿರಬೇಕು. ಟೊಳ್ಳಾದುದನ್ನು ಬಿಟ್ಟುಬಿಡಬೇಕು. ತನ್ನ ಕ್ರಿಯೆಯನ್ನು ಒರೆಗೆ ಹಚ್ಚಿ ನೋಡದ, ಸತ್ಯವನ್ನು ಅನ್ವೇಷಿಸುವ ಛಲವಿರದ, ಟೊಳ್ಳಾದುದನ್ನು ಬಿಟ್ಟುಬಿಡಬೇಕೆಂಬ ಧೈರ್ಯವಿಲ್ಲದ ವ್ಯಕ್ತಿಗಳು ಮಾತ್ರ ಅರ್ಥವಿಲ್ಲದ, ನಾಶವಾಗುವ ವಸ್ತುಗಳನ್ನು ಪೂಜಿಸುವುದರಲ್ಲಿಯೇ ಇದ್ದುಬಿಡುತ್ತಾರೆ. ಅಲ್ಲಿಂದ ಮುಂದುವರಿಯುವ ಇಚ್ಛೆಯಾಗಲಿ ಸಾಹಸವಾಗಲಿ ಅವರಲ್ಲಿ ಕಾಣುವುದಿಲ್ಲ. ಇಂತಹವರು ನಿಜವಾದ ದೇವರನ್ನು ಕಾಣುವುದು ಹೇಗೆ ಸಾಧ್ಯವೆನ್ನುತ್ತಾರೆ. ತನುಗುಣಗಳಿಂದ ಮುಕ್ತಿ ಪಡೆಯಲು ಬೇಕಾದ ಸಿದ್ಧತೆಯು ಕೇವಲ ವಿವೇಚನಾರಹಿತವಾದ ಪೂಜೆಯಿಂದ ಸಾಧ್ಯವಿಲ್ಲ. ಇಂತಹ ಅರ್ಥರಹಿತ ಅಭ್ಯಾಸದಲ್ಲಿ ತೊಡಗಿದವರು ನಿಜವಾದ ದೇವರ ಇರವನ್ನು ಎಂದೆಂದೂ ತಿಳಿಯಲಾರರು ಎಂಬುದು ಈ ವಚನದ ಧ್ವನಿ.










No comments:

Post a Comment