Friday, March 25, 2011

VACHANA 32: Maneyolage Maneyodeyaniddano illavo – Is the Master in?

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ತನುವಿನಲಿ ಹುಸಿ ತುಂಬಿ ಮನದಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ !


TRANSLITERATION
maneyoLage maneyoDeyaniddAnO illavO?
hostilalli hullu huTTi maneyoLage raja tuMbi
maneyoLage maneyoDeyaniddAnO illavO?
tanuvinali husi tuMbi manadali viShaya tuMbi
maneyoLage maneyoDeyanilla kUDalasaMgamadEva !

CLICK TO HEAR IT:
http://www.youtube.com/watch?v=JLM3Ok5pay4


TRANSLATION
maneya (house) oLage(inside) maneya (house’s) oDeyanu(master) iddAnO(is he) illavO(isn’t he)?
Hostilalli(on the threshold) hullu(grass) huTTi(grown) maneyoLage(in the house) raja(dirt) tuMbi(filled)
maneyoLage maneyoDeyaniddAnO illavO?
Tanuvinali (in the body) husi(lies) tuMbi(filled) manadali(in the mind) viShaya(lust) tuMbi
maneyoLage(in the house) maneyoDeyanu (master of the house) illa (is not) kUDalasaMgamadEva !


The master of the house, is he in, or isn’t he?
Grass on the threshold, house full of dirt,
The master of the house, is he in, or isn’t he?
When the falsehood (lie) infects the body and the lust infects the mind (heart),
no, the master of the house is not in, Lord kUDalasaMgamadEva !


COMMENTARY
Basavanna provides a very lyrical picture of the relation between man and God in this vachana. He first talks about a physical house built out of brick and mortar. With the yard of the house unkempt, grass growing on the threshold and the house full of dust and dirt, it is obvious that the master of the house is not living in it. Such a house does not welcome any visitor, let alone someone residing in it. Our body corresponds to the house and the God is the master of this house. For the master to reside in this house, it should be clean and well kept. A body infected with lies and deceit, and a mind full of sensuous thoughts and lust is not fit for the God to reside. Basavanna emphasizes that the God is not in such a body.
The first posting (Vachana 1) of this blog addressed the seven commandments to achieve the inner and outer sanctities. This vachana further emphasizes them. Being free from lies, deceit, sensuous thoughts lead to inner sanctity. One of the aspects of the outer sanctity is the maintenance of the body to be fit for the God; the other aspects are equality of all and realizing the God within all fellow beings.
It is interesting to note how the concept and visualization of the God has evolved over time. For example, we started visualizing Shiva in our own form. We provided him with a wife and children. We added a snake around his neck to hold the poison reaching his peaceful, serene stomach. We made him dance to vibrate and set the creation in motion. As early as the second or third century, this concept started changing when we realized that the omnipotent, omnipresent, and omniscient Shiva is really beyond our visualization and we created the formless Linga as his icon, set on the platform representing Shakti, his omnipotence nature. This Linga form began to be worshipped as Sthavara Linga in temples. It is known that followers of Shiva wore such Linga icons on their foreheads and arms, to facilitate worshipping wherever they are, without the need for a formal temple. In the twelfth century, Shiva Sharanas took the concept of Shiva further to the Istalinga, as an icon representing the supreme soul encompassing the individual souls resided on the palm (gross body) of the devotee. Through this icon, as the devotee progresses in his spiritual path, he seeks the Pranalinga (in the subtle body) and eventually Atmalinga (in the causal body). This is so called linga-anga saamarasya, or being one with the Lord.


Let us strive to make this body a temple fit for the residence of the sparks of that supreme soul.

KANNADA COMMENTARY
ಇಲ್ಲಿ ಬಸವಣ್ಣನವರು ಮೊದಲು ಕಲ್ಲು ಮಣ್ಣಿನ ಮನೆಯ ವಿಷಯ ಮಾತನಾಡುತ್ತಾರೆ, ಆನಂತರ ಈ ದೇಹವನ್ನೇ ಒಂದು ಮನೆ ಎಂಬಂತೆ ನುಡಿಯುತ್ತಾರೆ.
ಮನೆಯ ಹೊಸ್ತಿಲಲ್ಲಿ ಹುಲ್ಲು ಹುಟ್ಟಿದೆ, ಮನೆಯೊಳಗೆ ರಜ ತುಂಬಿದೆ. ಇದನ್ನು ನೋಡಿದರೆ, ಮನೆಯಲ್ಲಿ ಮನೆಯ ಒಡೆಯನಿರುವ ಲಕ್ಷಣ ಕಾಣುವುದಿಲ್ಲ.
ಅದೇ ರೀತಿಯಾಗಿ ಈ ತನುವಿನಲಿ ಹುಸಿ ತುಂಬಿಕೊಂಡಿದೆ ಮತ್ತು ಮನದಲ್ಲಿ ವಿಷಯ ತುಂಬಿಕೊಂಡಿದೆ. ಅಲ್ಲಿ ಮನೆಯೊಡೆಯ ಇಲ್ಲ ಎನ್ನುತ್ತಾರೆ.


ಮನೆಯ ಪರಿಸ್ಥಿತಿ ನೋಡಿದರೆ ಮನೆಯೊಳಗೆ ಮನೆಯೊಡೆಯನಿದ್ದಂತಿಲ್ಲ. ಆತನು ಇದ್ದರೂ ಇಲ್ಲದಂತಿದ್ದಾನೆ. ತನ್ನ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ. ಆತನಿಗೆ ಮನೆಯ ಓರಣದ ಕಡೆಗೆ ಗಮನವಿಲ್ಲ. ಆದ್ದರಿಂದ ಅತನ ಇರವು ಸಂದೇಹಾಸ್ಪದವಾಗಿದೆ. ಆ ಸಂದೇಹವನ್ನು ವ್ಯಕ್ತಗೊಳಿಸುವುದರ ಮೂಲಕ ನಮ್ಮ ಗಮನವನ್ನು ಮನೆಯ ಓರಣದ ಕಡೆಗೆ ಸೆಳೆಯುತ್ತಿದ್ದಾರೆ. ಕಲ್ಲು ಮಣ್ಣಿನ ಮನೆಯಲ್ಲಿರುವ ಒಡೆಯನಿಗೆ ಆತನ ಮನೆಯಲ್ಲಿ ತುಂಬಿದ ಕಸವನ್ನು ತೋರಿಸಬಹುದು, ಅದರ ಬಗ್ಗೆ ಆತನ ಗಮನವನ್ನು ಸೆಳೆಯಬಹುದು. ಅಥವಾ ಬೇರೆ ಯಾರಾದರೂ ಬಂದು ಅದನ್ನು ಒಪ್ಪಗೊಳಿಸಬಹುದು. ಆದರೆ ತನುವಿನ ಒಡೆಯನಲ್ಲಿ, ಅದರಲ್ಲಿ ತುಂಬಿರುವ ಸುಳ್ಳು, ಮೋಸ ವಂಚನೆ, ವಿಷಯವಾಸನೆಗಳ ಬಗ್ಗೆ ಹೇಗೆ ಅರಿವು ಹುಟ್ಟಿಸುವುದು? ಮನೆಯ ಹೊಸ್ತಿಲಲ್ಲಿ ಹುಲ್ಲು ಹುಟ್ಟಿದಾಗ ಅದು ಇತರರನ್ನು ಒಳಗೆ ಬರುವುದರಿಂದ ಹೇಗೆ ತಡೆಯುತ್ತದೆಯೋ ಅದೇ ರೀತಿಯಾಗಿ ಈ ತನುವೆಂಬ ಮನೆಯೊಳಗಿನ ಕಸಗಳು, ಮಲಗಳು ಆ ಭಗವಂತನನ್ನು ದೂರವೇ ತಡೆಯುತ್ತವೆ. ಕನಿಷ್ಠಪಕ್ಷ ಮನೆಯನ್ನು ಹಸನಾಗಿ ಇಟ್ಟುಕೊಂಡರೆ ಇತರರಿಗೆ ಅದರ ಬಗ್ಗೆ ಗೌರವ, ಪ್ರೀತಿ ಹುಟ್ಟಿ ಆ ಮನೆ, ಅವರನ್ನು ಅನಾಯಾಸವಾಗಿಯೇ ಬರಮಾಡಿಕೊಳ್ಳುತ್ತದೆ, ಆತ್ಮೀಯವಾಗಿ ಕರೆಯುತ್ತಿರುವಂತೆ ತೋರುತ್ತದೆ. ಇಲ್ಲದಿದ್ದರೆ ಆ ಮನೆಯ ಹತ್ತಿರ ಸುಳಿಯುವುದನ್ನೂ ತಪ್ಪಿಸುತ್ತದೆ. ಇದೇ ಮಾತು ಈ ತನುವಿಗೂ ಅನ್ವಯಿಸುತ್ತದೆ. ಈ ದೇಹದಲ್ಲಿ, ದೇಹದ ಮನದಲ್ಲಿ ಅನೇಕ ರೀತಿಯ ಕಸ ತುಂಬಿಕೊಳ್ಳುತ್ತದೆ. ಈ ದೇಹವನ್ನು ಹೊರಗಡೆಯಿಂದ ನೋಡಿದರೆ ಚೆನ್ನಾಗಿಯೇ ತೋರುತ್ತದೆ. ಅದು ತನ್ನ ಚಲನವಲನದಲ್ಲಿ, ನಡತೆಯಲ್ಲಿ, ಹುಸಿಯಾದ ವಿನಯ, ಪ್ರೀತಿ, ಅಹಿಂಸೆ, ದಯೆಯನ್ನು ತೋರ್ಪಡಿಸುತ್ತದೆ. ಆದರೆ ಅದರಲ್ಲಿ ಧೂರ್ತತೆ, ದ್ವೇಷ, ಹಿಂಸೆ, ಕಾಠಿಣ್ಯ ಮುಂತಾದವುಗಳು ಇರುತ್ತವೆ, ಮನದಲ್ಲಿ ವಿಷಯವಾಸನೆಗಳು ತಾಂಡವವಾಡುತ್ತಿರುತ್ತವೆ. ಅವುಗಳ ಅರಿವೇ ಅದರ ಒಡೆಯ. ಆ ಒಡೆಯ ಅದನ್ನು ಸದಾ ಶುದ್ಧಗೊಳಿಸುತ್ತಿರಬೇಕು. ಈ ರೀತಿಯ ಅಂತರಂಗದ ಶುದ್ಧಿಯಾದಲ್ಲಿ ಒಡೆಯನ ಇರವು ಖಚಿತಗೊಳ್ಳುತ್ತದೆ. ಅಲ್ಲಿ ಕೂಡಲ ಸಂಗಮನ ವಾಸವಾಗುತ್ತದೆ. ಇಲ್ಲದಿದ್ದಲ್ಲಿ ಅಲ್ಲಿ ಒಡೆಯನಿದ್ದೂ ಇಲ್ಲದಂತೆ.


ಭೌತಿಕವಾದ ಮನೆಯ ಮುಂದೆ ಹುಲ್ಲು ಹುಟ್ಟಿ, ಒಳಗೆ ಕಸ ತುಂಬಿದ್ದಾಗ ಆ ಮನೆಯಲ್ಲಿ ಒಡೆಯ ಇದ್ದಾನೊ ಇಲ್ಲವೊ ಎಂದು ಸಂದೇಹ ವ್ಯಕ್ತಪಡಿಸುವ ಬಸವಣ್ಣನವರು ತನುವಿನಲ್ಲಿ ಹುಸಿ ಮತ್ತು ಮನದಲ್ಲಿ ವಿಷಯತುಂಬಿದ್ದಲ್ಲಿ ಒಡೆಯ ಇಲ್ಲವೆಂದು ಖಚಿತವಾಗಿ ನುಡಿಯುತ್ತಾರೆ. ಅಂತಹ ವ್ಯಕ್ತಿ ಜೀವಚ್ಛವ ಅಷ್ಟೆ.










Friday, March 18, 2011

Vachana 31: Hotteyamele kattogarada motteya kattidarenu – True Devotion



ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು?
ಹಸಿವು ಹೋಹುದೆ?
ಅಂಗದ ಮೇಲೆ ಲಿಂಗ ಸ್ವಾಯತವಾಡೇನು ?
ಭಕ್ತನಾಗಬಲ್ಲನೆ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ, ಆಕಲ್ಲು ಲಿಂಗವೆ?
ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ?
ಇಂತಪ್ಪವರ ಕಂಡಡೆ ನಾಚುವೆನಯ್ಯ ಗುಹೇಶ್ವರ


TRANSLITERATION

hoTTeya mEle kaTTOgarada moTTeya kaTTidODEnu?
hasivu hOhude?
aMgada mEle liMga svaayatavaadaDEnu?
bhaktanaagaballane?
iTTa kallu meLeya mEle sikkidaDe aa kaLLu liMgave?
aa meLe bhaktane? iTTaata guruve?
iMtappavara kaMDaDe naacuvenayya guhEshvara


CLICK TO HEAR IT

http://www.youtube.com/watch?v=WRlhNthvi3Q


TRANSLATION

hoTTeya(stomach) mEle(on) kaTTOgarada(delicious eats) moTTeya(bundle) kaTTidODEnu(if tied)?
hasivu (hunger) hOhude (quench)?
aMgada(body) mEle(on) liMga(linga) svaayatavaadaDEnu(if worn) ?
bhaktanu (devotee) aagaballane(can one become)?
iTTa (throw) kallu(stone) meLeya(Bamboo bush) mEle(on) sikkidaDe(if stuck) aa(that) kaLLu(stone) liMgave(can be a linga)?
aa meLe bhaktane(is it a devotee)? iTTaata(who threw) guruve(is he a guru)?
iMtappavara(such individual) kaMDaDe(when I see) naacuvenu (ashamed?, not fond of)ayya(O Sir) guhEshvara(the Lord of Caves)


Would a bundle of delicious eats tied on the stomach quench the hunger?
Would one become a devotee just by wearing linga on his body?
Can a stone thrown at a bamboo bush and stuck on it be treated as a linga?
Is the bamboo bush a devotee? One who threw the stone a guru?
I am ashamed of such individuals, Oh! Lord!


COMMENTARY


We have addressed the roles of Guru, Jangama and Linga in the life of a spiritual seeker in previous postings. In this vachana Allama Prabhu emphasizes that just the act of wearing a linga on the body and going through the ritualistic worship does not make one a true devotee, just as the bundle of food tied on the stomach would not quench one’s hunger, it has to be eaten. Bamboo bushes grow to be very thick. A stone thrown at them would get stuck on the bush. Allama Prabhu questions "can we say that the bush is a devotee wearing the stone as linga? Can we call the stone thrower a guru? "

While wearing linga could be a good start at the spiritual journey, reaching the goal of such a journey is only possible when one understands the meaning behind such icons. While faith is a prime requisite of a true devotee, it should not stop him from questioning and understanding the true nature of the Lord. Such questioning should bring him the realization of the Lord within. This inner maturity in turn should make the devotee into a universal being.


Icons and rituals have been introduced from time immemorial. The sharanas of the twelfth century while observed the practice of such rituals, emphasized the knowledgeful seeking of the Lord within.

Let us move past the rituals and icons and become true seekers of the Lord!
  
KANNADA COMMENTARY

ದೇವರನ್ನು ಒಲಿಸಿಕೊಳ್ಳಲು ಲಿಂಗದಲ್ಲಿ ಭಕ್ತಿ ಇರಬೇಕು ಎಂದು ಹೇಳುತ್ತಾರೆ. ಆದರೆ ಲಿಂಗವನ್ನು ದೇಹದಮೇಲೆ ಧರಿಸಿಬಿಟ್ಟರೆ ಆಯಿತು ಅದೇ ಭಕ್ತಿ ಎಂದು ತಿಳಿಯುವುದು ಮೂರ್ಖತನವೆಂದು ಈ ವಚನದಲ್ಲಿ ಬಹಳ ಚೆನ್ನಾಗಿ ಹೇಳುತ್ತಾರೆ ಅಲ್ಲಮಪ್ರಭುಗಳು.

ಹೊಟ್ಟೆಯ ಮೇಲೆ ರುಚಿರುಚಿಯಾದ ಓಗರಗಳನ್ನು ಗಂಟು ಮಾಡಿ ಕಟ್ಟಿಕೊಂಡರೆ ಹಸಿವು ಹಿಂಗುವುದೆ? ಅವುಗಳನ್ನು ತಿಂದಲ್ಲದೆ ಹೊಟ್ಟೆ ತುಂಬದು. ಅದೇ ರೀತಿಯಾಗಿ ದೇಹದ ಮೇಲೆ ಲಿಂಗವನ್ನು ಕಟ್ಟಿಕೊಂಡ ಮಾತ್ರಕ್ಕೆ ಹಾಗೆ ಕಟ್ಟಿಕೊಂಡವನು ಭಕ್ತನಾಗಬಲ್ಲನೆ? ಹಸಿದವನು ನಾನಾ ತರದ ತಿಂಡಿಗಳನ್ನು ಹೊಟ್ಟೆಯ ಮೇಲೆ ಕಟ್ಟಿಕೊಳ್ಳುವದರಿಂದ ಅವನಿಗೆ ಹೇಗೆ ಯಾವ ಪ್ರಯೋಜನವೂ ಆಗದೋ ಹಾಗೆಯೇ ಕೇವಲ ಶರೀರದ ಮೇಲೆ ಲಿಂಗವನ್ನು ಕಟ್ಟುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಆ ತಿಂಡಿಗಳನ್ನು ಸ್ವತಃ ಮೆದ್ದಾಗ ಮಾತ್ರ ಅದರ ರಸ, ಸತ್ವ ದೇಹಗತವಾಗಿ ಪುಷ್ಟಿಕೊಡುತ್ತದೆ. ಅದೇ ರೀತಿಯಾಗಿ ಲಿಂಗದ ಹಿಂದೆ ಅಡಗಿದ ರಹಸ್ಯವನ್ನು ತಿಳಿದುಕೊಂಡಾಗ ಮಾತ್ರ ಭಕ್ತಿಯು ಪುಷ್ಟಿಯುತವಾಗುತ್ತದೆ. ಇಲ್ಲದಿದ್ದರೆ ದೇಹದ ಮೇಲೆ ಧರಿಸಿದ ಲಿಂಗವು ಮೆಳೆಯ ಮೇಲೆ ಸಿಕ್ಕ ಕಲ್ಲಿನಂತೆ ಒಂದು ಕಾಕತಾಳೀಯ ವಿಷಯವಷ್ಟೆ. ಮೆಳೆಯ ಮೇಲೆ ಯಾರೋ ಎಸೆದ ಒಂದು ಕಲ್ಲು ಸಿಕ್ಕಡೆ ಅದನ್ನು ಲಿಂಗವೆನ್ನಬಹುದೆ? ಆ ಮೆಳೆಯನ್ನು ಭಕ್ತನೆನ್ನಬಹುದೆ? ಅದನ್ನು ಅಲ್ಲಿ ಎಸೆದವನನ್ನು ಗುರುವೆನ್ನಬಹುದೆ? ಎಂದು ಕೇಳುತ್ತಾರೆ ಅಲ್ಲಮ ಪ್ರಭುಗಳು. ಈ ರೀತಿಯಾಗಿ ಕೇವಲ ಉಪಚಾರಕ್ಕಾಗಿ ಲಿಂಗ ಧರಿಸುವವರನ್ನು ಕಂಡರೆ ತನಗೆ ನಾಚಿಕೆಯಾಗುತ್ತದೆ ಎನ್ನುತ್ತಾರೆ ಅವರು.

ಭಕ್ತ, ಲಿಂಗ ಮತ್ತು ಗುರುವಿಗೆ ಒಂದು ವಿಶೇಷವಾದ ಅರ್ಥವ್ಯಾಪ್ತಿ ಇದೆ. ಅದನ್ನು ಅರಿತಾಗ ಮಾತ್ರ ಅವುಗಳಿಂದ ಪ್ರಯೋಜನವಾಗುತ್ತದೆ. ಭಕ್ತಿ ಎಂದರೆ ಶ್ರದ್ಧೆ ಎಂದು ಹೇಳಬಹುದು. “ಇಲ್ಲಿ ಶ್ರದ್ಧೆ ಎಂದರೆ ವಿಚಾರವಿಲ್ಲದೆ ಎಲ್ಲವನ್ನೂ ನಂಬುವ ಕುರುಡು ನಂಬಿಕೆಯಲ್ಲ. ಆ ದೇವನ ಸ್ವರೂಪವೇ ತಾನು, ಆಂತರಿಕ ಪರಿವರ್ತನೆಯಿಂದ ತಾನು ಆ ಸಹಜ ಸ್ಥಿತಿಯನ್ನು ಪಡೆಯಬೇಕು ಎಂಬ ಅರಿವಿನ ಎಚ್ಚರವೇ ಇಲ್ಲಿ ಶ್ರದ್ಧೆಯಾಗುತ್ತದೆ....... ಇದಕ್ಕೆ ಸಹಾಯವಾಗುವಂತೆ ಬಹಿರಂಗದ ಕ್ರಿಯಾಶೀಲ ಜೀವನವನ್ನು ಅಳವಡಿಸಿಕೊಳ್ಳುವುದು” (ಬಸವೇಶ್ವರ ವಚನದೀಪಿಕೆ - ಡಾ. ಎಚ್. ತಿಪ್ಪೇರುದ್ರಸ್ವಾಮಿ) ಭಕ್ತನ ಲಕ್ಷಣ. “ಶಿವಜ್ಞಾನವೇ ಶಿವಭಕ್ತಿಗೆ ಆಧಾರ, ಅದೇ ಆಹಾರ. ಶರಣರು ಹೇಳುವ ಭಕ್ತಿ, ಜ್ಞಾನ ತೈಲದಿಂದ ಭರಿತವಾದ ಭಕ್ತಿ. ಈ ರಸ ತೈಲವಿಲ್ಲದ ಭಕ್ತಿ ಮೂಢ ಭಕ್ತಿ, ಅಂಧ ಭಕ್ತಿ, ಕುರುಡು ಭಕ್ತಿ. ತಾನಾರು, ತಾನು ಮುಟ್ಟಬೇಕಾದ ಚರಮ ವಿಶ್ರಾಮ ಸ್ಥಾನವಾವುದು? ಎಂಬುದರ ಅರಿವಿಲ್ಲದ ತಾಮಸ ಭಕ್ತಿ ಎಳ್ಳಿಲ್ಲದ ಗಾಣವನಾಡಿದಂತೆ. ಅರಿದು ಮಾಡುವ ಭಕ್ತಿಯೆ ನಿಜಭಕ್ತಿ”

(“ಶೂನ್ಯ ಸಂಪಾದನೆಯ ಪರಾಮರ್ಶೆ” - ಸಂ. ಶಿ. ಭೂಸನೂರಮಠ )ಈ ಗುಣಗಳುಳ್ಳವನನ್ನು ಭಕ್ತನೆನ್ನಬಹುದೇ ಹೊರತು ಕೇವಲ ಉಪಚಾರಕ್ಕಾಗಿ ಶಿವಲಾಂಛನಗಳನ್ನು ಧರಿಸಿದವನನ್ನಲ್ಲ್ಲ.-
\ಲಿಂಗವಂತೂ ಆ ದೇವನ ಸ್ವರೂಪವೇ ಆಗಿದೆ. ( ಈ ಹಿಂದೆಯೇ ಇದನ್ನು ಹೇಳಿದಂತೆ) ಕಂತೆ ಕೂಡಿಸಿದ ಶಿವಲಿಂಗವು “ಬಾಹ್ಯ ಆಕಾರದಲ್ಲಿ ಗೋಳಕವಾಗಿ ಅದುವೆ ಬ್ರಹ್ಮಾಂಡದ ಇಲ್ಲವೆ ಆಕಾಶದ ಪ್ರತೀಕವಾಗಿದೆ. ಆದರೆ ಅದರ ಒಳಗಿನ ಆಕಾರವು ಮಾತ್ರ ಪೂಜೆಗೆ ಕುಳಿತ ಭಕ್ತನ ಆಕಾರದಲ್ಲಿದೆ. .... ಸಾಧಕನು ತನ್ನ ದೇಹದಲ್ಲಿಯೇ ದೇವನಿರುವನು ಎಂದು ಕಾಣುವನು. ತಾನು ತನ್ನ ಸ್ವರೂಪವನ್ನೇ ಪೂಜಿಸುತ್ತಿಹೆನೆಂಬ ರಹಸ್ಯವು ಈ ಇಷ್ಟಲಿಂಗಕ್ಕೆ ಇರುವ ಆಕಾರದಲ್ಲಿ ಹುದುಗಿದೆ. ..... ಬಾಹ್ಯ ಆಕಾರವು ಬ್ರಹ್ಮಾಂಡದ ರೂಪದಲ್ಲಿ, ಅಂತರಾಕಾರವು ಪಿಂಡಾಂಡದ ರೂಪದಲ್ಲಿದ್ದು, ಪಿಂಡ ಬ್ರಹ್ಮಾಂಡಗಳ ಐಕ್ಯವನ್ನು ಸಾಧಿಸುತ್ತಿದೆ ಈ ಲಿಂಗ. ಇಷ್ಟಲಿಂಗದ ಪೂಜೆ ಮತ್ತು ಅನುಸಂಧಾನಗಳಿಂದ ...... ಪ್ರಕಾಶದ ಸಾಕ್ಷಾತ್ಕಾರ ಉಂಟಾಗುವುದು.” ಎಂದು ಹೇಳುತ್ತಾರೆ ಶ್ರೀ ಶಿವಕುಮಾರ ಸ್ವಾಮಿಗಳು (ನವ ಕಲ್ಯಾಣಮಠ, ಧಾರವಾಡ)

ಇನ್ನು ಗುರು ಎಂದರೆ ಯಾರು?

“ವಿಷಯಸಂಸಾರದಲ್ಲಿ ಹೊಲಬುಗೆಟ್ಟು ಅಯ್ಯೋ ಎಂದು ಹುಯ್ಯಲಿಡುತ್ತ ಬಂದ ಸಂಸಾರದ ಕೂಸನ್ನೆತ್ತಿ ’ಬಳಲಿದೆಯಾ ಮಗು’ ಎಂದು ಕಾರುಣ್ಯದಿಂದ ಮಾರ್ಗಕ್ಕೆ ಹಚ್ಚುವಾತ............. ಮಾನವ ಕುಲದ ಹೃದಯ ಗಂಭೀರದಲ್ಲಿ ಅನಾದಿಕಾಲದಿಂದ ಹರಿಯುತ್ತ ಬಂದಿರುವ ದಿವ್ಯಾಪೇಕ್ಷೆಯನ್ನು ಪೂರೈಸಬಲ್ಲ ಸದ್ಗುರು ಈತ” (“ಶೂನ್ಯ ಸಂಪಾದನೆಯ ಪರಾಮರ್ಶೆ” - ಸಂ. ಶಿ. ಭೂಸನೂರಮಠ ).

ಒಟ್ಟಿನಲ್ಲಿ ದಿನನಿತ್ಯದ ಬದುಕಿನ ತೊಳಲಾಟದಿಂದ ಬೇಸತ್ತ ಶಿಷ್ಯನನ್ನು ಅವುಗಳಿಂದ ಬಿಡಿಸಿ ಶಿವಮಾರ್ಗವನ್ನು ತೋರಿಸುವವನೇ ಗುರು.

ಈ ರೀತಿಯಾಗಿ ಮೇಲೆ ಹೇಳಿದ ಭಕ್ತನ ಲಕ್ಷಣಗಳಿಲ್ಲದವನು ಲಿಂಗದ ಅರ್ಥವನ್ನು ಅರಿಯದೆ ಮಾಡುವ ಪೂಜೆಗೆ ಯಾವ ಅರ್ಥವೂ ಇಲ್ಲ, ಹಾಗೂ ಸಂಸಾರದಿಂದ ಮುಕ್ತಿಯನ್ನು ಕರುಣಿಸದಾತ ಗುರುವಲ್ಲ. ಇಂತಹವರು ಹೆಸರಿಗೆ ಲಿಂಗಧರಿಸಿರುವದನ್ನು ಕಂಡು ತನಗೆ ನಾಚಿಕೆಯಾಗುತ್ತದೆ ಎನ್ನುತ್ತಾರೆ ಅಲ್ಲಮ ಪ್ರಭುಗಳು.








Friday, March 11, 2011

Vachana 30: Neera kandalli Muluguvarayya – On Blind Beliefs

ನೀರ ಕಂಡಲ್ಲಿ ಮುಳುಗುವರಯ್ಯ!
ಮರನ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವನೊಣಗುವ ಮರನ
ಮೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ

TRANSLITERATION
nIra kaMDalli muLuguvarayya!
marana kaMDalli suttuvarayya!
battuva jalavanoNaguva marana
meccidavaru nimmanetta ballaru
kUDalasaMgamadEva


CLICK TO HEAR IT
http://www.youtube.com/watch?v=PRmOCboawDk


TRANSLATION
nIra(water) kaMDalli(wherever seen) muLuguvaru (they dip) ayya(Sir!)!
marana(tree) kaMDalli suttuvaru (they circle)ayya!
Battuva(drying) jalavanu (water)oNaguva(withering) marana
Meccida (seek, admire)avaru(those) nimmanu (you) etta(how) ballaru(know)
kUDalasaMgamadEva(Lord of meeting rivers)


Wherever they see water, they dip in it, O Sir!
Wherever they see a tree, they circle it, O Sir!
How can they know you, they who seek water that dries up and the tree that withers away ,
Oh! Lord, Kudala Sangama deva!


COMMENTARY
It is very common to see people taking dip in the body of water next to temples and other places of worship, believing that such a dip relieves them of all their ills and sins and takes them closer to God. People travel miles and miles to take a dip in holy rivers, no matter how unfit the waters are for such dips. People routinely circle a tree when they see an idol under it. We associate a God with each type of tree and believe that circling the tree is equivalent to the worship that takes us close to God. Basavanna is saddened by such blind beliefs and says “how can one realize the indestructible, omniscient, omnipotent God, when one is shallow enough to believe that the impermanent trees and water represent Him?”


Basavanna is urging us to get past the blind beliefs and strive to seek the Lord within through intense devotion and absolute persistence. This requires one to open the intuitional (third) eye, go beyond the influences of one’s sense organs, and develop the habit of an intense scrutiny of every activity one performs to see if it takes one towards Godliness. Faith and beliefs are absolutely necessary; but the faith and belief without the knowledge to stay on the right path, will not yield success in one's spiritual journey.


Let us strive to reach above our blind beliefs and become true seekers of the absolute soul!


KANNADA COMMENTARY
ಸಾಮಾನ್ಯ ಜನರ, ನೀರನ್ನು ಕಂಡು ಮುಳುಗುವ ಮತ್ತು ಮರವನ್ನು ಕಂಡು ಸುತ್ತುವ ಅಜ್ಞಾನದ ರೀತಿಯನ್ನು ಕಂಡು ಮರುಗುತ್ತಾರೆ ಬಸವಣ್ಣನವರು. ಈ ಅಜ್ಞಾನದ ನಡತೆ ಕೇವಲ ಆ ಕಾಲಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಈಗಲೂ ನಾವು ಇದನ್ನು ಕಾಣುತ್ತೇವೆ. ನೀರಕಂಡಲ್ಲಿ ಅದನ್ನು ಒಂದು ಪವಿತ್ರ ತೀರ್ಥ ಕ್ಷೇತ್ರವೆಂದು ಮುಳುಗುಹಾಕುವವರಿಗೆ ಯಾವ ಕೊರತೆಯೂ ಇಲ್ಲ. ನಾನಾ ನೀರಿನ ಕುಂಡಗಳಲ್ಲಿ, ಅಲಕನಂದಾ, ಭಾಗೀರಥಿ, ಗಂಗಾ ಮುಂತಾದ ನದಿಗಳಲ್ಲಿ ಮೀಯಲು ಅಸಂಖ್ಯ ಜನರು ಸಾವಿರಾರು ಮೈಲುಗಳ ಪ್ರಯಾಣ ಮಾಡುತ್ತಾರೆ. ಅದರಿಂದೇನು ಲಾಭ. ಅದರಿಂದ ದೇವರು ಸಿಗುವನೆ?


ಮರವನ್ನು ನೋಡಿದರೆ ಸಾಕು ಅದರಲ್ಲಿ ದೇವನಿರುವನು ಅಥವಾ ಇಂತಿಂತಹ ಮರದಲ್ಲಿ ಇಂತಿತಹ ದೇವರು ಇರುವನೆಂದುಕೊಂಡು ಆತನನ್ನು ಪ್ರಸನ್ನಗೊಳಿಸಲು ಮರಕ್ಕೆ ಪ್ರದಕ್ಷಿಣೆ ಬರುವವರಿಗು ಸಹ ಏನೂ ಕೊರತೆಯಿಲ್ಲ. ಇಷ್ಟು ಸುಲಭವಾಗಿ ದೇವರು ಕೈಗೂಡುವನೆ? ಅವಿನಾಶಿಯಾದ ಆ ದೇವರು ಬಿಸಿಲಿಗೆ ಬತ್ತಿಹೋಗುವ ಜಲದಲ್ಲಿ, ಮರದಲ್ಲಿ ಇರಲು ಸಾಧ್ಯವೆ? ಎಂದು ಕೇಳುತ್ತಾರೆ ಬಸವಣ್ಣನವರು.


ಈ ರೀತಿಯಾಗಿ ಪ್ರಕೃತಿಯಲ್ಲಿ ಬದಲಾವಣೆಯಾದಾಗ ನಾಶವಾಗಿ ಹೋಗುವ ವಸ್ತುಗಳಲ್ಲಿ ದೇವರಿರುವನು ಎಂದು ನಂಬಿ ಕೇವಲ ಅವುಗಳ ಪೂಜೆಗಳಿಗೇ ಸೀಮಿತರಾಗಿ ಉಳಿಯುವ ಜನರನ್ನು ಕುರಿತು ಈ ವಚನವನ್ನು ಹೇಳಿದ್ದಾರೆ.


ಬಿರು ಬಿಸಿಲಿಗೆ ಬತ್ತುವ ಜಲವನ್ನು ಹಾಗೂ ಒಣಗುವ ಮರವನ್ನು ದೇವರೆಂದು ನಂಬುವುದು ಮೂಢಭಕ್ತಿ. ಹಾಗೆ ಮಾಡುವವರನ್ನು ವಿವೇಚನೆಯನ್ನೇ ಕಳೆದುಕೊಂಡವರು ಎನ್ನಬಹುದು. ಭಕ್ತನಲ್ಲಿ ಶ್ರದ್ಧೆಇರಬೇಕಾದದ್ದು ಅತ್ಯಾವಶ್ಯಕ. ಆದರೆ ಅದು ವಿವೇಚನಾರಹಿತವಾದ ಮೂಢಭಕ್ತಿಯಾಗಬಾರದು. ಹೀಗೆ ಮೂಢ ಭಕ್ತಿಯಲ್ಲಿ ಮುಳುಗಿದವರು ನಿಜವಾದ ದೇವರನ್ನು ಹೇಗೆ ಕಂಡಾರು? ನಿಜವಾದ ದೇವರು ಸ್ಥೂಲ ರೂಪದಲ್ಲಿ ಕಾಣುವುದಿಲ್ಲ. ಆತನು ಇಂದ್ರಿಯಗಳಿಗೆ ನಿಲುಕುವವನಲ್ಲ. ಕೇವಲ ಅನುಭಾವಕ್ಕೆ ಸಿಗುವವನು. ಆತನು ಸೀಮಾತೀತನು, ಆತನು ಅವಿನಾಶಿ. ಅಂತಹವನ್ನು ಸ್ಥೂಲವಾದ ಮತ್ತು ನಾಶಹೊಂದುವ ಕೆಲವು ವಸ್ತುಗಳಲ್ಲಿ ಇದ್ದಾನೆ ಎಂದು ಭಾವಿಸಿ ಪೂಜಿಸುವುದು ಮೂರ್ಖತೆಯ ಪರಮಾವಧಿ ಎನ್ನುತ್ತಾರೆ ಬಸವಣ್ಣನವರು. ಇಂತಹ ಮೂರ್ಖತೆಯಲ್ಲಿ ಮುಳುಗಿದವರನ್ನು ಅದರಿಂದ ಮೇಲೆತ್ತ್ತುವುದು ಬಹಳ ಕಷ್ಟ. ಏಕೆಂದರೆ ನಿಜವಾದ ದೇವರನ್ನು ಕಾಣಲು ವ್ಯಕ್ತಿಯ ಮನದಲ್ಲಿ ವಿಚಾರಗಳ ಮಂಥನ ನಡೆಯುತ್ತಿರಬೇಕು. ತಾನು ಮಾಡುವ ಕ್ರಿಯೆಗಳನ್ನು ಒರೆಗೆಹಚ್ಚಿ ನೋಡುವ ಛಲವಿರಬೇಕು. ಟೊಳ್ಳಾದುದನ್ನು ಬಿಟ್ಟುಬಿಡಬೇಕು. ತನ್ನ ಕ್ರಿಯೆಯನ್ನು ಒರೆಗೆ ಹಚ್ಚಿ ನೋಡದ, ಸತ್ಯವನ್ನು ಅನ್ವೇಷಿಸುವ ಛಲವಿರದ, ಟೊಳ್ಳಾದುದನ್ನು ಬಿಟ್ಟುಬಿಡಬೇಕೆಂಬ ಧೈರ್ಯವಿಲ್ಲದ ವ್ಯಕ್ತಿಗಳು ಮಾತ್ರ ಅರ್ಥವಿಲ್ಲದ, ನಾಶವಾಗುವ ವಸ್ತುಗಳನ್ನು ಪೂಜಿಸುವುದರಲ್ಲಿಯೇ ಇದ್ದುಬಿಡುತ್ತಾರೆ. ಅಲ್ಲಿಂದ ಮುಂದುವರಿಯುವ ಇಚ್ಛೆಯಾಗಲಿ ಸಾಹಸವಾಗಲಿ ಅವರಲ್ಲಿ ಕಾಣುವುದಿಲ್ಲ. ಇಂತಹವರು ನಿಜವಾದ ದೇವರನ್ನು ಕಾಣುವುದು ಹೇಗೆ ಸಾಧ್ಯವೆನ್ನುತ್ತಾರೆ. ತನುಗುಣಗಳಿಂದ ಮುಕ್ತಿ ಪಡೆಯಲು ಬೇಕಾದ ಸಿದ್ಧತೆಯು ಕೇವಲ ವಿವೇಚನಾರಹಿತವಾದ ಪೂಜೆಯಿಂದ ಸಾಧ್ಯವಿಲ್ಲ. ಇಂತಹ ಅರ್ಥರಹಿತ ಅಭ್ಯಾಸದಲ್ಲಿ ತೊಡಗಿದವರು ನಿಜವಾದ ದೇವರ ಇರವನ್ನು ಎಂದೆಂದೂ ತಿಳಿಯಲಾರರು ಎಂಬುದು ಈ ವಚನದ ಧ್ವನಿ.










Friday, March 4, 2011

Vachana 29: Kumbala Kaayige Kabbuna Katta Kottade – Prerequisites for a Devotee

ಕುಂಬಳಕಾಯಿಗೆ ಕಬ್ಬುನದ ಕಟ್ಟ ಕೊಟ್ಟಡೆ
ಕೊಳೆವುದಲ್ಲದೆ ಬಲುಹಾಗಬಲ್ಲುದೆ
ಅಳಿಮನದಂಗೆ ಶಿವ ದೀಕ್ಷೆಯ ಕೊಟ್ಟಡೆ
ಭಕ್ತಿಯಂತಹುದು? ಮುನ್ನಿನಂತೆ!
ಕೂಡಲ ಸಂಗಯ್ಯಾ,
ಮನಹೀನನ ಮೀಸಲ ಕಾಯ್ದಿರಿಸಿದಂತೆ!


TRANSLITERATION


kuMbaLakAyige kabbunada kaTTa koTTaDe
koLevudallade baluhAgaballude
aLimanadaMge Siva dIkSheya koTTaDe
BaktiyaMtahudu? munninaMte!
kUDala saMgayyA,
manahInana mIsala kAydirisidaMte!


CLICK TO HEAR IT

http://www.youtube.com/watch?v=Ll3xxrkzdMw


TRANSLATION

kuMbaLakAyige(over a pumpkin) kabbunada(iron) kaTTa(frame) koTTaDe(placed)
koLevudu (rot) allade(would it not) baluha (strong)Agaballude(can it become)
aLimanadaMge(to weak minded) Siva dIkSheya(Devotional way) koTTaDe(induct)
BaktiyaMtahudu?(cannot become a devotee) munninaMte!(as before)
kUDala saMgayyA,(Oh! Lord of the meeting rivers!)
manahInana(weak minded) mIsala(offering reserved for the Lord)
kAydirisidaMte!(appointed to guard)


An iron frame placed around a pumpkin will not stop it from rotting, let alone keeping it strong and fit!
Inducting a weak minded into the devotional way, will not make him a true devotee; he will continue to be what he was!
Oh! Lord!
It is like appointing a weak minded to guard the offering reserved for the Lord (mIsala naivedya)!


COMMENTARY

It is said that the teacher appears when the student is ready for receiving the knowledge. It simply means that the student has met all the prerequisites for furthering the knowledge he is seeking. Along the same lines, it is important for the teacher to evaluate and make sure that the student is ready and has met all the prerequisites, and he is not just pretending to be interested. Even when one offers a gift or donates something, it is important to make sure that the receiver is capable of utilizing the gift appropriately. This is known as “satpaatra Daana” or gifting to only those that are fit to receive it.

In this vachana, Basavanna emphasizes that unless one is strong minded enough to adopt the devotional way, he or she should not be inducted into one. It is like placing an iron frame around a pumpkin to make it strong. The fickle minded individual will go back to his former ways!

A weak minded individual cannot be in charge of guarding the sacred food (mIsala naivedya, the food that should not be tasted by any one before offering) to be offered to the Lord. He would not know the value of what he is guarding, and will not be able to control his temptation. One cannot become a true devotee by following a ritualistic worship of the Lord. An intense interest in gaining His knowledge and persistence to realize the Lord within are a must for a spiritual seeker.

Let us strive to be worthy students of devotional ways!


KANNADA COMMENTARY

ಇಲ್ಲಿ ದುರ್ಬಲ ಮನದವನಿಗೆ ಶಿವದೀಕ್ಷೆ ಕೊಟ್ಟರೆ ಏನೂ ಪ್ರಯೋಜನವಿಲ್ಲವೆಂದು ಉದಾಹರಣೆಯ ಮೂಲಕ ಹೇಳುತ್ತಾರೆ.


ಕುಂಬಳಕಾಯಿ ಗಟ್ಟಿಯಾಗಲಿ ಎಂದು ಅದಕ್ಕೆ ಕಬ್ಬಿಣದ ಕಟ್ಟು ಹಾಕಿದರೂ ಆದು ಕೊಳೆತು ಹೋಗುವುದಲ್ಲದೆ ಗಟ್ಟಿಯಾಗಲು ಸಾಧ್ಯವೆ? ಅಳಿಮನದವನಿಗೆ ಶಿವದೀಕ್ಷೆಯನ್ನು ಕೊಟ್ಟರೆ ಅವನಲ್ಲಿ ಭಕ್ತಿ ಹೇಗೆಉಂಟಾಗುತ್ತದೆ? ಅವನು ಮುನ್ನಿನಂತೆಯೇ ಇರುವನು. ಏಕೆಂದರೆ ಭಕ್ತಿಯೆಂಬುದು ಸುಲಭವಾಗಿ ಬರುವಂತಹುದಲ್ಲ. ಭಕ್ತಿ ಎಂದರೆ ಕೇವಲ ಯಾಂತ್ರಿಕವಾದ ಪೂಜೆಯಲ್ಲ್ಲ. ನಿಜವಾದ ಭಕ್ತಿಮಾಡಬೇಕಾದವನಿಗೆ ದೃಢವಾದ ಮನಸ್ಸು ಬೇಕಾಗುತ್ತದೆ. ಮನಸ್ಸು ತನುಗುಣಗಳಲ್ಲಿ ಮುಳುಗದಂತೆ ಎಚ್ಚರವಹಿಸಬೇಕಾಗುತ್ತದೆ, ಋಜುಮಾರ್ಗದಲ್ಲಿಯೆ ನಡೆಯುತ್ತೇನೆ ಎಂಬ ಛಲಬೇಕಾಗುತ್ತದೆ, ಶಿವನಲ್ಲಿ ಶ್ರದ್ಧೆ,ನಿಷ್ಠೆ ಬೇಕಾಗುತ್ತದೆ, ಇಂದ್ರಿಯಗಳನ್ನು ತನ್ನ್ನ ವಶದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ಎಲ್ಲವನ್ನೂ ಸಾಧಿಸಬೇಕಾದರೆ ಎಂತಹ ದೃಢಮನಸ್ಸು ಬೇಕು ಎಂಬುದನ್ನು ಊಹಿಸಬಹುದು. ಕುಂಬಳಕಾಯಿಗೆ ಕಬ್ಬಿಣದ ಕಟ್ಟು ಹಾಕಿದರೂ ಅದು ಕೊಳೆತು ಹೋಗುವುದಂತೂ ಸತ್ಯ. ಅದೇ ರೀತಿಯಾಗಿ ದುರ್ಬಲ ಮನಸ್ಸಿನವರಿಗೆ ದೀಕ್ಷೆಯನ್ನು ಕೊಟ್ಟರೂ ಸಹ ನಿಷ್ಠೆಯನ್ನು ಸಾಧಿಸುವದು ಸಾಧ್ಯವಿಲ್ಲ ಎನ್ನುತ್ತಾರೆ ಬಸವಣ್ಣನವರು. ಅವರಿಗೆ ಶಿವ ದೀಕ್ಷೆ ಕೊಡುವುದು ಎಂದರೆ ದುರ್ಬಲ ಮನಸ್ಸಿನ ವ್ಯಕ್ತಿಯನ್ನು ದೇವರಿಗಾಗಿ ತೆಗೆದಿಟ್ಟ ಮೀಸಲ ನೈವೇದ್ಯವನ್ನು ಕಾಯಲು ಇರಿಸಿದಂತೆ. ಆತನಿಗೆ ಅದರ ಪಾವಿತ್ರ್ಯವನ್ನು ಕಾಪಾಡುವ ಸಾಮರ್ಥ್ಯವಿರುತ್ತದೆಯೆ? ಏಕೆಂದರೆ ಆತನಿಗೆ ಅದರ ಪಾವಿತ್ರ್ಯದ ಮೇಲೆ ನಿಷ್ಠೆಯಿಲ್ಲ. ಅಲ್ಲದೆ ಮನಸ್ಸು ಬೇರೆ ದುರ್ಬಲವಾದದ್ದು. ಆತನಿಗೆ ಮೊದಲು ನಿಷ್ಠೆ ಹುಟ್ಟುವಂತೆ ಮಾಡಬೇಕು. ಆತನು ಅದನ್ನು ಕಾಪಾಡಿಕೊಳ್ಳುವಂತೆ ಮಾಡಬೇಕು. ಆತನ ಮನಸ್ಸು ಮೊದಲು ಗಟ್ಟಿಯಾಗಬೇಕು. ಅತನಲ್ಲಿ ನಾನು ಇಂತಿಂತಹದನ್ನು ಸಾಧಿಸುತ್ತೇನೆ ಎಂಬ ಛಲಹುಟ್ಟಬೇಕು. ಅಂತಹವನಿಗೆ ದೀಕ್ಷೆ ಕೊಡಬಹುದೆ ಹೊರತು ಅಳಿಮನದವನಿಗೆ ಅಲ್ಲ, ಎನ್ನುತ್ತಾರೆ ಬಸವಣ್ಣನವರು.