Saturday, February 12, 2011

Vachana 26 : Kalla Naagara Kandare - Rituals and Human Nature


ಕಲ್ಲನಾಗರ ಕಂಡರೆ ಹಾಲನೆರೆ ಎಂಬರು
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ!
ನಮ್ಮ ಕೂಡಲ ಸಂಗನ ಶರಣರಕಂಡು ಉದಾಸೀನವ ಮಾಡಿದಡೆ
ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯಾ.

 TRANSLITERATION

kallanAgara kaMDare hAlanere eMbaru
diTada nAgara kaMDare kolleMbarayyA!
uMba jaMgama baMdare naDe eMbaru;
uNNada liMgakke bOnava hiDiyeMbarayyA!
namma kUDala saMgana SaraNarakaMDu udAsInava mADidaDe
kallu tAgida miTTeyaMtapparayyA.

CLICK TO HEAR IT

http://www.youtube.com/watch?v=MsJKS0svGU8

TRANSLATION

kalla naagara (stone figure of cobra) kaMDare (if seen) haalanere (pour milk) eMbaru(they say)
diTda (live , true)naagara (cobra) kaMdare (if seen) koll (kill)eMbarayyaa!( they say, Sir!)
uMba (who eats) jaMgama (mystic) baMdare (if appeared)naDe ( go away) embaru ( they say)
uNNada(incapable of eating) liMgakke(to the god’s form) bOnava(food ,rice) hiDi (offer)
eMbarayya!( they say, Sir!)
namma kooDalasaMgana (our kooDala saMgamaa’s) sharaNara (mystic devotee) kaMdu (seeing) udaasIna maaDidaDe (if treated indifferently)
kallu(stone) taagida( hit by) miTTeyaMte(like a chunk of mud, clod)apparayyaa! (they become, Sir!)


On seeing a stone figure of cobra, they say ‘pour milk’!
On seeing a real cobra, they say ‘kill it’!
If a mystic who can eat arrives at the door, they say ‘go away’!
And serve food to the Linga (God’s icon) that cannot eat!
If you treat the devotees of the Lord (Kudala Sangama) indifferently, you will be like a clod hit by a stone!


COMMENTARY
At the first reading this vachana appears to be a commentary on ritualistic way of life. It is actually a profound observation of the duality of human nature. We worship stone carvings of cobra with ultimate reverence since we are told that such worship brings riches and enhances fertility in women. At the same time, we do not think twice before killing a cobra or any other snake the moment we see it. All the lessons on compassion towards other beings including wild animals are forgotten in an instant. In fact, there are temples where during the annual festival of Naaga Panchami, live snakes (with their mouth stitched) are used as objects of worship. People pour milk on them and smear them with turmeric and other decorations. Eventually, these snakes die either of hunger or of infection due to the stitches on their mouth.
We go through elaborate methods of worshipping God and offer Him food (Naivedya), which He cannot eat. But, when a hungry individual appears at our door steps, our first reaction is to ask him to go away. Basavanna questions this duality. Even Basavanna was not free from this duality. The story goes that Allama Prabhu (another sharana, mystic) arrives at Basavanna’s home when he was in the midst of his daily worship. Basavanna ignores Allama Prabhu and continues with his rituals. Allama Prabhu becomes furious at this act of Basavanna. Chenna Basavanna (nephew of Basavanna) notices this and intervenes to convince Allama Prabhu that Basavanna did not ignore him intentionally. Allama Prabhu forgives Basavanna. But, this incidence leaves Basavanna with strong mark of inadequacy.
Basavanna says that if one ignores the devotees of the Lord and treats them indifferently, they will be crushed just as a clod hitting a stone – the clod loses its bonding and becomes a powder while the stone remains intact. This is a powerful message in terms of how we interact with others. Whether a squash falls on a knife or the knife falls on a squash, the squash is the one that gets cut. The message is that we need to respect the strength (physical, philosophical or spiritual) of our fellow beings and interact with them appropriately. Otherwise, we will be the losers.
Imagine that you happened to meet Dalai Lama and simply ignored him. In all likelihood, he will smile at you and move on. This incidence does not affect him any way. But, it eventually pricks you when you realize how ignorant you happened to be and lost an opportunity to be in the presence of a great soul!

Let us not be immersed in our ritualistic routines; let us open our minds to the great opportunities that come along our way!

KANNADA COMMENTARY

ಮೂಢನಂಬಿಕೆ ಮತ್ತು ಅರ್ಥವಿಲ್ಲದ ಪೂಜೆ ಹೇಗೆ ವ್ಯಕ್ತಿಯ ನಾಶಕ್ಕೆ ಕಾರಣವಾಗುತ್ತವೆ ಎಂಬುದನ್ನುಈ ವಚನದಲ್ಲಿ ಉದಾಹರಣೆಸಹಿತವಾಗಿ ಹೇಳಿದ್ದಾರೆ.

ಅರಳಿ ಮರದ ಕೆಳಗೆ, ನಾಗರಕಟ್ಟೆಯಲ್ಲಿ ಇರುವ ಕಲ್ಲಿನ ನಾಗರಹಾವಿಗೆ ಜನರು ಧಾರಾಳವಾಗಿ ಹಾಲನೆರೆಯುವುದನ್ನು ಎಲ್ಲೆಲ್ಲೂ ಕಾಣಬಹುದು. ಆದರೆ ನಿಜವಾದ ಹಾವು ಎಲ್ಲಿಯಾದರೂ ಕಂಡುಬಂದರೆ ಕೂಡಲೆ ಅದನ್ನು “ಕೊಲ್ಲು” ಎಂದು ಹೇಳುತ್ತ ಕೊಂದೇಬಿಡುವರು. ನಾಗರಕಟ್ಟೆಯಲ್ಲಿ ಹಾಲೆರೆಯುವಾಗ ಇದ್ದ ಭಕ್ತಿ ದಿಟದ ನಾಗರ ಕಂಡ ಕ್ಷಣ ಮಾಯವಾಗಿ ಹಿಂಸಾ ಭಾವ ತಲೆ ಎತ್ತುತ್ತದೆ. ಇಲ್ಲಿ ಒಂದೇ ವ್ಯಕ್ತಿಯ ಈ ಕ್ರಿಯೆಗಳಿಗೆ ಅರ್ಥಾರ್ಥ ಸಂಬಂಧವಿರುವುದಿಲ್ಲ. ಇಂತಹ ನಡತೆಗೆ ಯಾವ ಬೆಲೆ ಇದ್ದೀತು? “ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ” ಎಂಬುದನ್ನು ಒಣ ಮಾತಿನಲ್ಲಿ ಹೇಳಿ ಕ್ರಿಯೆಯಲ್ಲಿ ಮರೆತರೆ ಹೇಗೆ?
ಇದೇ ರೀತಿ ತಮ್ಮನ್ನು ಭಕ್ತರೆಂದು ತೋರಿಸಿಕೊಳ್ಳುವವರು ಲಿಂಗ ಪೂಜೆಯಲ್ಲಿ ನಿರತರಾಗಿರುತ್ತಾರೆ. ಪೂಜೆಯ ಭಾಗವಾಗಿ ಅನ್ನವನ್ನು, ಎಂದೂ ಉಣ್ಣದ ಲಿಂಗಕ್ಕೆ ಅಪಾರವಾದ ಭಕ್ತಿಯಿಂದ ಎಡೆ ಮಾಡುತ್ತಾರೆ. ಆದರೆ ಬಡವರು ಬಂದು ಒಂದು ತುತ್ತು ಕೂಳು ಕೇಳಿದರೆ ಅವರನ್ನು ನಿಷ್ಠುರವಾಗಿ ಬೈದು ಕಳಿಸುತ್ತಾರೆ. ಉಣ್ಣುವ ಜಂಗಮನು ಹಸಿದು ಮನೆ ಬಾಗಿಲಿಗೆ ಬಂದರೆ ಆತನನ್ನು “ನಡೆ” ಎಂದು ಹಿಂದಕ್ಕೆ ಕಳಿಸಿಬಿಡುತ್ತಾರೆ. ಹಸಿದವರಿಗೆ ಅನ್ನ ನೀಡದಿರುವುದು ಧರ್ಮವೆ? ಇಂತಹ ದಯೆಯಿಲ್ಲದ ನಡತೆಯಿಂದ ಏನು ಪ್ರಯೋಜನ? ಉಣ್ಣದ ಲಿಂಗಕ್ಕೆ ನೈವೇದ್ಯ ಮಾಡುವುದರಿಂದ ಏನು ಸಾಧಿಸಿದಂತಾಗುತ್ತದೆ? ಇದು ಎಂತಹ ನಡತೆ? ನೈವೇದ್ಯವೆಂದರೆ ಸಾಂಕೇತಿಕವಾಗಿ ತನ್ನ ತನು ಮನ ಧನವನ್ನು ಲಿಂಗಕ್ಕೆ ಅರ್ಪಿಸುವುದು. ಮನೆಗೆ ಬಂದ ಹಸಿದವರನ್ನು, ಅವರೂ ಕೂಡ ದೇವರ ಸ್ವರೂಪವೆ ಎಂದು ತಿಳೀಯದೆ ಅವರನ್ನು ತಣಿಸದಿದ್ದರೆ ಆ ಪೂಜೆಗೆ ಏನು ಅರ್ಥ? ಜಂಗಮರೂಪವೇ ಲಿಂಗ ವೆಂದು ತಿಳಿಯದವನ ಭಕ್ತಿ ಏತರ ಭಕ್ತಿ? ಎಂದು ಕೇಳುತ್ತಾರೆ ಬಸವಣ್ಣನವರು. ಜಂಗಮ ಎಂದರೆ ಯಾರು? ಎಂಬುದನ್ನು ಇನ್ನೊಮ್ಮೆ ನೆನಪಿಸಿಕೊಳ್ಳೋಣ: “ತನ್ನ ಅನುಭಾವದ ಬೆಳಕನ್ನು ಸುತ್ತಲಿನ ಸಮಾಜದ ಮೇಲೂ ಬೀರುವ ಕಾರ್ಯದಲ್ಲಿ ನಿರತನಾಗಿರುತ್ತಾನೆ. ಮೇಲೇರಿ ಕಂಡುದನ್ನು ಇಳಿದು ಕಟ್ಟುವ ಕ್ರಿಯಾಶೀಲನಾಗುತ್ತಾನೆ........... ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯನಾಗಿ ಈಗಲೂ ಆತ ದುಡಿಯುತ್ತಾನೆ, ಆದರೆ ಆ ದುಡಿಮೆ ತನಗಾಗಿಯಲ್ಲ; ಜಗತ್ತಿಗಾಗಿ, ಜನತೆಯ ಒಳಿತಿಗಾಗಿ, ಲೋಕಸಂಗ್ರಹಕ್ಕಾಗಿ, ಜ್ಞಾನ ಮತ್ತು ಕ್ರಿಯೆ ಇವುಗಳ ಪರಸ್ಪರ ಸಂಬಂಧದ ರಹಸ್ಯವನ್ನು ಶರಣ ಮನಗಂಡು ಅದನ್ನು ನಿತ್ಯ ಜೀವನದಲ್ಲಿ ಅನಷ್ಠಾನಕ್ಕೆ ತಂದು ಸಮಾಜಿಕ ಜೀವನವನ್ನು ಹಸನುಗೊಳಿಸುವ ಭವರೋಗ ವೈದ್ಯನಾಗುತ್ತಾನೆ........ .”
ಇಂತಹ ಜಂಗಮನನ್ನು ಗುರುತಿಸದೆ ಇರುವುದು ಮಹಾತಪ್ಪು. ಆದರೆ ಇದು ಎಲ್ಲರೂ ಮಾಡುವಂತಹ ತಪ್ಪು. ಸ್ವತಃ ಬಸವಣ್ಣನವರು ಈ ತಪ್ಪು ಮಾಡಿರುವುದನ್ನು ನಾವು ಕಾಣುತ್ತೇವೆ; ಅವರು ಲಿಂಗ ಪೂಜೆಯಲ್ಲಿ ನಿರತರಾದಾಗ ಅಲ್ಲಮಪ್ರಭುಗಳು ಅವರ ಮನೆ ಬಾಗಿಲಿಗೆ ಬರುತ್ತಾರೆ. ಆದರೆ ಅವರನ್ನು ಮರೆತು ಬಸವಣ್ಣನವರು ಪೂಜೆಯಲ್ಲಿಯೇ ನಿರತರಾದಾಗ ಪ್ರಭುಗಳು ಕೋಪದಿಂದ ಹೊರಡಲುದ್ಯುಕ್ತರಾಗುತ್ತಾರೆ. ಅದೇ ಸಮಯದಲ್ಲಿ ಚೆನ್ನಬಸವಣ್ಣನವರ ಸಮಯ ಪ್ರಜ್ಞೆಯಿಂದ ಎಲ್ಲವೂ ಸರಿ ಹೊಗುತ್ತದೆ. ಅಲ್ಲಮರು ಕರುಣೆಗೊಂಡು ಅವರನ್ನು ಕ್ಷಮಿಸಿದ್ದರಿಂದ ಬಸವಣ್ಣನವರಿಗೆ ಜೀವದಾನವಾದೂಂತಾಗುತ್ತದೆ. ಬಸವಣ್ಣನವರು ಪಶ್ಚಾತಾಪದಲ್ಲಿ ಬೆಂದುಹೋಗುತ್ತಾರೆ. ಆ ಪ್ರಸಂಗ ಅವರನ್ನು ಇನ್ನೂ ಎಚ್ಚರದಿಂದಿರುವಂತೆ ಮಾಡುತ್ತದೆ.
ಶರಣರನ್ನು ಕಂಡು ಉದಾಸೀನ ಮಾಡಿದರೆ ನಷ್ಟವಾಗುವುದು ಭಕ್ತರಿಗೆ ಹೊರತು ಶರಣರಿಗಲ್ಲ. ಶರಣರು ಲೌಕಿಕವಾದ ಯಾವ ಪ್ರಭಾವಕ್ಕೂ ಒಳಗಾಗುವುದಿಲ್ಲ. ಭಕ್ತರಾಗಲಿ ಯಾರೇ ಆಗಲಿ ಅವರನ್ನು ಕುರಿತು ಉದಾಸೀನ ಮಾಡಿದರೆ ಅವರಿಗೆ ಏನೂ ಆಗುವುದಿಲ್ಲ. ಅವರು ಕಲ್ಲಿನಂತೆ ದೃಢವಾದವರು. ಆದರೆ ಇತರರು ಮಣ್ಣಿನ ಹೆಂಟೆಯಂತೆ ಗಟ್ಟಿತನವಿಲ್ಲದವರು.ಮಣ್ಣಿನ ಹೆಂಟೆ ಗಟ್ಟಿಯಾದ ಕಲ್ಲಿಗೆ ತಾಕಿದರೆ ಒಡೆದು ಚೂರಾಗುತ್ತದೆ. ಅದು ತನ್ನ ಇದ್ದ ಬದ್ದ ಗಟ್ಟಿತನವನ್ನೂ ಕಳೆದುಕೊಳ್ಳುತ್ತದೆ. ಕಲ್ಲಿಗೆ ಎನೂ ಆಗುವುದಿಲ್ಲ. ಅದೇ ರೀತಿಯಾಗಿ ಪರಿಪೂರ್ಣರಾದ, ಆದ್ದರಿಂದ ಭದ್ರ ವ್ಯಕ್ತಿತ್ವ ಉಳ್ಳ ಶರಣರಿಗೆ ಯಾರಿಂದಲೂ ಯಾವ ರೀತಿಯ ಊನವೂ ಆಗುವುದಿಲ್ಲ, ಅವರು ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ಆದರೆ ಅವರನ್ನು ಉದಾಸೀನ ಮಾಡಿದ ತೋರಿಕೆಯ ಭಕ್ತರು ಚೂರಾಗಿ ಹೋಗುತ್ತಾರೆ. ಶರಣರ ದೃಢತೆಯ ಮುಂದೆ ಕಪಟ ಭಕ್ತರು ತಮ್ಮ ಬೆಲೆಯನ್ನು ಕಳೆದು ಕೊಳ್ಳುತ್ತಾರೆ. ಹೀಗಾಗಿ ಹಾನಿ ಅವರಿಗೆ ಹೊರತು ಶರಣಿಗರಲ್ಲ.
ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಒಂದು ಪ್ರಸಂಗವನ್ನು ಊಹಿಸಬಹುದು: ಒಂದು ವೇಳೆ ಭೌದ್ಧ ಧರ್ಮ ಗುರುಗಳಾದ ಶ್ರೀ ದಲಾಯಿ ಲಾಮಾ ಅವರು ಅನಿರೀಕ್ಷಿತವಾಗಿ ನಮ್ಮನ್ನು ಕಂಡು ಮಾತನಾಡಿಸಿದರು ಎಂದುಕೊಳ್ಳೋಣ. ಆದರೆ ಆಗ ನಾವು ಅವರನ್ನು ಉದಾಸೀನತೆಯಿಂದ ಕಡೆಗಣಿಸುತ್ತೇವೆ ಎಂದಿಟ್ಟುಕೊಳ್ಳಿ. ಆಗ ಅವರಿಗೆ ಏನಾಗುತ್ತದೆ? ಏನೂ ಆಗುವುದಿಲ್ಲ. ಅವರು ಮುಕ್ತ ನಗೆ ನಕ್ಕು ಮುಂದೆ ಸಾಗುತ್ತಾರೆ. ಆದರೆ ಅವರ ಆ ಮುಕ್ತ ನಗೆಯಿಂದ ನಮ್ಮ ಟೊಳ್ಳುತನದ ಅರಿವು ನಮಗಾಗುತ್ತದೆ. ಆ ಟೊಳ್ಳುತನ ನಮ್ಮನ್ನು ಸದಾ ಚುಚ್ಚುತ್ತಿರುತ್ತದೆ. ನಾವು ಕಲ್ಲು ತಾಗಿದ ಮಿಟ್ಟೆಯಂತಾಗುತ್ತೇವೆ.




3 comments:

  1. dear leela garady,
    I am girish n r. I was going through arvindgupta toys website and i found that u have translated lot of children books to kannada and i found you are also part of CFL. So wanted to discuss certain things with you. It would be great if you can provide your mail id. my mailid is girishing.nr@gmail.com.

    ReplyDelete
  2. I have heard this vachana so many times; but this is the first times have understood the complete meaning. In the past, I understood the uselessness of ritualistic worship,while ignoring the real. I never got the later part regarding the missed opportunity of recognizing the importance of interaction with “jangamas” in our life. Thanks for the explanation.

    ReplyDelete
  3. Watch it on Youtube sung beautifully by two women.

    ReplyDelete