Friday, February 25, 2011

Vachana 28: Maramara Mathanadindagni Hutti – Lead me to the enlightened, Oh! Lord!


ಮರಮರ ಮಥನದಿಂದಗ್ನಿ ಹುಟ್ಟಿ,
ಆ ಮರನೆಲ್ಲವ ಸುಡದಿಪ್ಪುದೆ ?
ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ
ಎನ್ನ ತನುಗುಣವೆಲ್ಲವ ಸುಡದಿಪ್ಪುದೆ ?
ಇದು ಕಾರಣ,
ಮಹಾನುಭಾವರ ತೋರಿಸು
ಕೂಡಲಸಂಗಮದೇವ.

TRANSLITERATION

maramara mathanadiMdagni huTTi,
A maranellava suDadippude ?
mahAnuBAvara saMgadiMda j~jAnAgni huTTi
enna tanuguNavellava suDadippude ?
idu kAraNa,
mahAnuBAvara tOrisu
kUDalasaMgamadEva.


CLICK TO HEAR IT

http://www.youtube.com/watch?v=rHJDAar-5z0


TRANSLATION

mara (tree) mara(tree) mathanadiMda (from the friction) agni(fire) huTTi (produced),
A(those) maranellava(trees) suDadippude(will it not burn) ?
mahAnuBAvara (learned, mystical,enlightened) saMgadiMda(company of) j~jAna (knowledge) Agni(fire) huTTi (produced)
enna(my) tanu(bodily) guNavellava(tendencies) suDadippude(will it not burn) ?
idu (this) kAraNa(reason),
mahAnuBAvara tOrisu (show me)
kUDalasaMgamadEva.(Lord Kudalsangamadeva)


Will the fire produced by the friction of two trees not destroy both the trees?
Will the fire of knowledge produced by the interaction with learned (enlightened) people not destroy my ignorance and bodily tendencies?
And hence, Oh! Lord, please lead me to the company of enlightened!

COMMENTARY

In our previous postings we have addressed the importance of enlightened individuals (Guru and Jangama) in our quest to achieve spiritual growth and enlightenment! Guru (the teacher) initiates us in the path of spiritual growth. Company of Jangamas (learned and enlightened mystics) makes our journey smooth and achievable. In this vachana, Basavanna stresses the importance of such influences and begs the Lord to lead him to such enlightened souls.
The two important words in this vachana are ‘tanuguna’ and ‘mahanubaava’. Tanuguna, roughly translated as bodily tendency is that aspect of us guided and tinged by our five sense organs. This is the process of us solely concentrating on satisfying our desires, acquiring wealth for our own sake, always in the mode of impressing the world with our perceived greatness, and in general being completely self centered. Mahanubaava is an enlightened soul. He works hard and conducts all his activities with utmost sincerity and honesty. He earns wealth for the sake of society rather than for himself. He is embodied in his body but not consumed by it. He walks, but he is stationary in his thoughts of the almighty. He is on the Earth, but is beyond the influences surrounding him. He is above it all, but is willing to share his wisdom by descending down to the ones needing it. He is the wandering mystic, Jangama! He appears, when are ready for the influence of such soul. Basavanna shows his humility and readiness by requesting the Lord to lead him to such an individual.


It is probably appropriate now to mention that guru, jangama and istalinga are three of the eight aids known as Astaavarana - Asta (eight) aavarana (covering or surroundings) – that help the seeker in his spiritual journey. The others are vibhuti (sacred ash), paadodaka (sacred water), prasaada (sacred food), rudraakshi (sacred beads) and mantra (sacred chant). Vibhuti is the sacred ash applied by the devotee on the forehead, arms and neck to indicate his adherence to the spiritual path. It symbolizes the light of inner peace shining through the devotee. The literal meaning of paadodaka is the water obtained by washing guru’s feet. The actual importance is to portray bliss (pada) and knowledge (udaka). It is the bliss brought about by the Guru through the knowledge of Shiva, the universal soul. Prasaada symbolizes the devotee’s realization that all food and other material are offerings to the Lord. Rudraakshi literally means the eye of Shiva. Rudraakshi seeds are worn by devotees symbolizing the opening of our third (intuitional) eye to look within in order to realize the Lord within us. Repeated chanting of Mantra (any sacred chant) helps the mind to concentrate and meditate.


Ideally, an aid is not necessary to realize the supreme reality. It helps the seeker in the initial stages of the spiritual journey. As he progresses in the spiritual journey, the seeker internalizes the meaning and significance of the aids. Sharanas emphasized that these aids should not become the end in themselves.

Let us pray the Lord to give us strength and support of enlightened ones in our spiritual journey!



KANNADA COMMENTARY

ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಅನುಭಾವಿಗಳ, ಜಂಗಮರ, ಸಜ್ಜನರ, ಶರಣರ ಸಂಗಕ್ಕಾಗಿ ಪರಿ ಪರಿಯಾಗಿ ಬೇಡುವುದನ್ನು ಕಾಣುತ್ತೇವೆ. ಅಂತಹವರ ಸಂಗದಿಂದ ಆಗುವ ಲಾಭವನ್ನು ಅವರು ಆಳವಾಗಿ ಮನಗಂಡಿದ್ದು ಅದನ್ನು ಇತರರಿಗೆ ವಿಶದಪಡಿಸುತ್ತದೆ ಈ ವಚನ.
ಮರವನ್ನು ಮರದಿಂದ ಮಥಿಸಿದಾಗ ಅಲ್ಲಿ ಅಗ್ನಿ ಹುಟ್ಟುತ್ತದೆ, ಮತ್ತು ಅದೇ ಅಗ್ನಿಯು ಆ ಎರಡೂ ಮರಗಳನ್ನು ಸುಟ್ಟುಹಾಕುತ್ತದೆ. ಆ ಎರಡೂ ಮರಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತವೆ. ಅದೇ ರೀತಿಯಾಗಿ ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ ತನ್ನ ತನುಗುಣಗಳನ್ನು ಸುಡುವುದಿಲ್ಲವೆ? ಎಂದು ಕೇಳುತ್ತಾರೆ. ಅದು ಸಹಜವಾಗಿ ಆಗಿಯೇ ಆಗುತ್ತದೆ ಎನ್ನುತ್ತಾರೆ. ಆದ್ದರಿಂದ ತನಗೆ ಅಂತಹ ಮಹಾನುಭಾವರನ್ನು ತೋರಿಸು ಎಂದು ಕೂಡಲ ಸಂಗಮನನ್ನು ಕೇಳಿಕೊಳ್ಳುತ್ತಾರೆ.
ಇಲ್ಲಿ ತನುಗುಣಗಳು ಎಂದರೆ ಯಾವುವು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವೆನಿಸುತ್ತದೆ.
ತನ್ನ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳುವುದರಲ್ಲಿ, ತನ್ನ ಇಚ್ಛೆಗಳನ್ನು ಪೂರೈಸಿಕೊಳ್ಳುವುದರಲ್ಲಿ ಮಾತ್ರ ಮುಳುಗಿರುವುದು, ಕೀರ್ತಿಕಾಮಿಯಾಗಿರುವುದು, ತನ್ನ ಸ್ವಾರ್ಥವನ್ನು ಸಾಧಿಸುವುದು, ಕೇವಲ ಹಣಗಳಿಸುವುದು, ಸುಖದ ಸುಪ್ಪತ್ತಿಗೆಗಾಗಿ ಹೆಣಗಾಡುವುದು, ಸುಖದ ಸಾಧನಗಳನ್ನು ಕೂಡಿಹಾಕುವುದು, ಮಾಯಾ ಮೋಹಗಳಲ್ಲಿ ಸಿಲುಕುವುದು, ಮಾತಿನಿಂದ ಜನರನ್ನು ಮೋಡಿಗೊಳಿಸುವುದು, ಲೋಕವನ್ನು ಮೆಚ್ಚಿಸುವುದೇ ಗುರಿಯಾಗಿಟ್ಟುಕೊಳ್ಳುವುದು, ಕೇವಲ ತನ್ನ ಹಿತವನ್ನೇ ಸಾಧಿಸುವುದು, ಒಟ್ಟಿನಲ್ಲಿ ಪಂಚೇಂದ್ರಿಯಗಳು ಎಳೆದುಕೊಂಡು ಹೋದತ್ತ ಯಾವ ವಿವೇಚನೆಯೂ ಇಲ್ಲದೆ ಹೋಗುವುದನ್ನು ಅಥವಾ ಶಿವಯೋಗಕ್ಕೆ ಅಡ್ಡಿಯಾಗುವ ಗುಣಗಳನ್ನು ತನುಗುಣಗಳೆನ್ನಬಹುದು.
ಮಹಾನುಭಾವರು ಎಂದರೆ ಯಾರು?

“ಆಧ್ಯಾತ್ಮಿಕವಾಗಿ ಶರಣ, ಸಿದ್ಧಿಯ ಶಿಖರದಲ್ಲಿ ನಿಂತವನು. ಶ್ರದ್ಧೆ, ನಿಷ್ಠೆ, ಅವಧಾನ, ಅನುಭವ, ಭಕ್ತಿಗಳನ್ನು ದಾಟಿ ಆನಂದ ಭಕ್ತಿಯಲ್ಲಿ ಲೀಲಾರೂಪಿಯಾದವನು; ದೇಹವನ್ನು ಧರಿಸಿದ್ದರೂ ಆತ ನಿರ್ದೇಹಿ, ನಡೆಯುತ್ತಿದ್ದರೂ ಆತ ನಿರ್ಗಮನಿ, ನುಡಿಯುತ್ತಿದ್ದರೂ ಆತ ನಿಶ್ಶಬ್ದಿ, ವ್ಯಕ್ತಿಯಾಗಿದ್ದರೂ ಜಗತ್ತನ್ನೆಲ್ಲಾ ವ್ಯಾಪಿಸಿದ್ದಾನೆ, ಆದರೂ ಜಗತ್ತಿಗೆ ಅತೀತನಾಗಿದ್ದಾನೆ. ಜಂಗಮವೆಂಬುದು ಅತ್ಯಂತ ವ್ಯಾಪಕವಾದ ಅರ್ಥದಲ್ಲಿ ಈ ನಿಲವಿಗೇರಿದ ಶಿವಯೋಗಿಯನ್ನು ಕುರಿತು ಹೇಳಿದ ಮಾತೇ ಆಗಿದೆ. ಈ ನಿಲವಿಗೆ ಏರಿದ್ದರೂ ಆ ಶಿಖರದಲ್ಲಿಯೇ ಆತ ನಿಂತುಬಿಡುವುದಿಲ್ಲ, ತನ್ನ ಅನುಭಾವದ ಬೆಳಕನ್ನು ಸುತ್ತಲಿನ ಸಮಾಜದ ಮೇಲೂ ಬೀರುವ ಕಾರ್ಯದಲ್ಲಿ ನಿರತನಾಗಿರುತ್ತಾನೆ. ಮೇಲೇರಿ ಕಂಡುದನ್ನು ಇಳಿದು ಕಟ್ಟುವ ಕ್ರಿಯಾಶೀಲನಾಗುತ್ತಾನೆ........... ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯನಾಗಿ ಈಗಲೂ ಆತ ದುಡಿಯುತ್ತಾನೆ, ಆದರೆ ಆ ದುಡಿಮೆ ತನಗಾಗಿಯಲ್ಲ; ಜಗತ್ತಿಗಾಗಿ, ಜನತೆಯ ಒಳಿತಿಗಾಗಿ, ಲೋಕಸಂಗ್ರಹಕ್ಕಾಗಿ, ಜ್ಞಾನ ಮತ್ತು ಕ್ರಿಯೆ ಇವುಗಳ ಪರಸ್ಪರ ಸಂಬಂಧದ ರಹಸ್ಯವನ್ನು ಶರಣ ಮನಗಂಡು ಅದನ್ನು ನಿತ್ಯ ಜೀವನದಲ್ಲಿ ಅನಷ್ಠಾನಕ್ಕೆ ತಂದು ಸಮಾಜಿಕ ಜೀವನವನ್ನು ಹಸನುಗೊಳಿಸುವ ಭವರೋಗ ವೈದ್ಯನಾಗುತ್ತಾನೆ.............ಹೀಗೆ...ಜೀವನ್ಮುಕ್ತ ಸ್ಥಿತಿಯಲ್ಲಿ ನಿಂತು ಲೋಕ ಕಲ್ಯಾಣಕ್ಕಾಗಿ ಕೈಯನ್ನು ಕೆಳಗೆ ಚಾಚಿ ಜನತೆಯನ್ನು ಮೇಲೆತ್ತಿಕೊಳ್ಳುವವ ಮಹಾನುಭಾವಿ” ( ಬಸವ ವಚನ ದೀಪಿಕೆ- ಡಾ. ಎಚ್. ತಿಪ್ಪೇರುದ್ರಸ್ವಾಮಿ).


ಇಂತಹವರ ಒಡನಾಟದಿಂದ ತನ್ನಲ್ಲಿ ಜ್ಞಾನಾಗ್ನಿ ಹುಟ್ಟಿ ತನ್ನ ತನುಗುಣಗಳನ್ನೆಲ್ಲ ನಾಶಗೊಳಿಸುತ್ತದೆ ಎನ್ನುತ್ತಾರೆ ಬಸವಣ್ಣನವರು.



Friday, February 18, 2011

Vachana 27: Maraviddu Phalavenu -- Purpose of Life

ಮರವಿದ್ದು ಫಲವೇನು ನೆರಳಿಲ್ಲದನ್ನಕ್ಕ?
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?
ಹಸುವಿದ್ದು ಫಲವೇನು ಹಯನಲ್ಲದನ್ನಕ್ಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ
ನಾನಿದ್ದು ಫಲವೇನು ನಿಮ್ಮ ಜ್ನಾನವಿಲ್ಲದನ್ನಕ್ಕ,
ಚೆನ್ನ ಮಲ್ಲಿಕಾರ್ಜುನ?


TRANSLITERATION


maraviddu PalavEnu neraLilladannakka?
dhanaviddu PalavEnu dayavilladannakka?
hasuviddu PalavEnu hayanalladannakka?
rUpiddu PalavEnu guNavilladannakka?
agaliddu PalavEnu bAnavilladannakka?
nAniddu PalavEnu nimma jnAnavilladannakka,
cenna mallikArjuna?

CLICK TO HEAR IT

http://www.youtube.com/watch?v=fgfa4gE6IEs

TRANSLATION

maravu (tree) iddu(being) Palavu (good, fruit) Enu(what) neraLu (shade) illadannakka(not providing)?dhanavu (wealth) iddu PalavEnu dayavu (compassion)illadannakka?
hasuvu (cow) iddu PalavEnu hayana(milk) alladannakka?
rUpu (beauty) iddu PalavEnu guNavu (conduct) illadannakka?
agalu (plate) iddu PalavEnu bAnavu (rice, food) illadannakka?
nAnu (I ) iddu PalavEnu nimma(your)  jnAnavu (knowledge) illadannakka,
cenna mallikArjuna? (Lord cenna mallikArjuna)


What good is a tree that does not provide the shade?
What good is the wealth that does not generate compassion to others?
What good is a cow that does not provide milk?
What good is beauty without good conduct?
What goog is a plate if there is no food to fill it with?
What good is my life without the knowledge of you,
Oh Lord! Chenna Mallikarjuna?

COMMENTARY

This seemingly simple vachana from Akka Mahadevi essentially addresses the purpose of life. All the beings (humans, animals, plants, etc.) on the Earth have a purpose for their existence. Trees are here to provide shade to passers-by. Some bear fruits, some have medical utility. It is very common to see a platform under a large peepul tree (known for its rich foliage) in almost all towns in India. This is where people gather routinely. It is also common to see a Neem tree next to it (for its medicinal values). Akka says that the tree is not serving its purpose if it did not provide the shade (or the fruit, medicine, etc.). Along the same lines, the purpose of wealth is to make one comfortable. In addition, the wealth should enable an individual to make the lives of his fellow beings comfortable. Lack of such compassion and willingness to share does not serve well for the purpose of wealth. Compared to all the other animals, the milk of the cow is considered a very close match to that of humans. Cows offer milk not only to their calves, but to humans who need it. A cow with no milk is thus not serving its purpose to be. Everyone would like to be beautiful or handsome. Beauty is well regarded in society. But, the beauty must be accompanied by good conduct for an individual to be truly complete. What good are plates, if they are not full of food to offer us and others around us?

As far humans, when we realize the Lord’s presence within and around us, we begin to lead a meaningful life. We will affect those around us through our good conduct and compassion. Without such God realization we would be like a tree without shade, cow without milk, wealth without compassion and beauty without good conduct.

As such, in the last line of the vachana, Akka subjects herself to a loftier examination by asking “what good am I, if I have not acquired the knowledge of your presence in me Oh! Lord?” implying that the purpose of life for humans is gaining the knowledge of the Lord within them. Indeed, Akka considered her sole goal in life was to merge with the Lord Chenna Mallikarjuna. We have addressed this as the concept of “Linganga Saamarasya” in previous postings. Shiva Sharanas also called it “shoonya Sampaadane” meaning acquisition of null, i.e. merging with the Lord. Merging with the Lord is the achievement of Godliness. Paths towards the Godliness are treating work as heaven, sharing wealth with fellow beings, respect and compassion for all, and conquering the six passions of mind (arishadvarga) or enemies of desire, kama (lust), krodha (anger), lobha (greed), moha (delusion), mada (pride) and matsarya (jealousy), the negative characteristics which prevent man from realizing the atman (Reality that is his True Being).


Let us concentrate on the purpose of life – realizing the Atman, the Lord within!


KANNADA COMMENTARY


ದಾರಿ ಹೋಕರಿಗೆ, ಪಶು ಪ್ರಾಣಿಗಳಿಗೆ ನೆರಳನ್ನೂ ಕೊಡದಿದ್ದಲ್ಲಿ ಮರವಿದ್ದು ಫಲವೇನು? ವ್ಯಕ್ತಿಯ ಹತ್ತಿರ ಅಪಾರ ಧನವಿದ್ದೂ ದಯವಿಲ್ಲದಿದ್ದಲ್ಲಿ ಏನು ಪ್ರಯೋಜನ. ಹಯನವಿಲ್ಲದ ಹಸುವಿನಿಂದ ಏನು ಉಪಯೋಗ? ವ್ಯಕ್ತಿಯು ರೂಪವಂತನಾಗಿದ್ದು ಗುಣವಂತನಾಗಿಲ್ಲದ್ದಿದ್ದರೆ ಆ ರೂಪದಿಂದ ಏನು ಪ್ರಯೋಜನ? ತಟ್ಟೆ ಇದ್ದೂ ಅದರಲ್ಲಿ ಬಡಿಸಲು ಅನ್ನವಿಲ್ಲದಿದ್ದರೆ ಏನು ಫಲ? ಅದೇ ರೀತಿಯಾಗಿ ನನ್ನಲ್ಲಿ ಚೆನ್ನ ಮಲ್ಲಿಕಾರ್ಜುನನ ಜ್ಞಾನವಿಲ್ಲದಿದ್ದರೆ ನಾನಿದ್ದು ಫಲವೇನು ಎಂದು ಕೇಳುತ್ತಾಳೆ ಅಕ್ಕ ಮಹಾದೇವಿ.

ಈ ರೀತಿಯಾಗಿ ಅನೇಕ ಉದಾಹರಣೆಗಳನ್ನು ಕೊಟ್ಟು ಅಕ್ಕ, ಆಯಾ ಜೀವಿಗಳ ವಿಷೇಶತೆಯನ್ನು ಮತ್ತು ತಟ್ಟೆಯ ಸರಿಯಾದ ಉಪಯೋಗ ಯಾವಾಗ ಸಾಧ್ಯವಾಗುತ್ತದೆ ಎಂಬುದನ್ನು ಕುರಿತು ಹೇಳುತ್ತಾಳೆ. ಪ್ರಕೃತಿಯಲ್ಲಿ ಪ್ರತಿಯೊಂದು ವಸ್ತು ಅಥವಾ ಜೀವಿಗೂ ಅದರದೇ ಆದ ಒಂದು ವಿಶೇಷ ಗುಣ ಇರುತ್ತದೆ. ಆ ವಿಶೇಷ ಗುಣದಿಂದಾಗಿ ಅದು ಎಲ್ಲರಿಗೂ ಬೇಕಾಗಿ ಸಾರ್ಥಕ್ಯವನ್ನು ಪಡೆಯುತ್ತದೆ. ಉದಾಹರಣೆಗೆ: ಮರ. ಅನೇಕ ಮರಗಳು ಒಂದು ವೇಳೆ ಫಲ ಕೊಡದಿದ್ದರೂ ಕನಿಷ್ಠ ಪಕ್ಷ ನೆರಳು ಕೊಡುತ್ತವೆ. ಹೀಗೆ ಅವು ಲೋಕದ ದೃಷ್ಟಿಯಲ್ಲಿ ಸಾರ್ಥಕತೆಯನ್ನು ಪಡೆಯುತ್ತವೆ. (ಈ ವಚನದಲ್ಲಿ ಹೇಳಿದ ಜೀವಿಗಳನ್ನು, ಕೇವಲ ಲೋಕದ ದೃಷ್ಟಿಯಿಂದ ಮಾತ್ರ ನೋಡಲಾಗಿದೆ. ಅನೇಕ ಜೀವಿಗಳು ಲೋಕದ ದೃಷ್ಟಿಯಿಂದ ಉಪಕಾರಿಗಳಲ್ಲದಿದ್ದರೂ ಪ್ರಕೃತಿಯ ಜೀವಜಾಲದಲ್ಲಿ (web of life) ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿಯೇ ಇರುತ್ತವೆ. ಹಾಗಾಗಿ ಅವು ಮಾನವರಿಗೆ ಪ್ರತ್ಯಕ್ಷವಾಗಿ ಉಪಕಾರ ಮಾಡದಿದ್ದರೂ ಅವುಗಳ ಉಪಕಾರವನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಆ ವಿಷಯ ಇಲ್ಲಿ ಅಪ್ರಸ್ತುತ.) ನೆರಳೂ ಕೊಡದಿದ್ದರೆ ಲೋಕದ ದೃಷ್ಟಿಯಲ್ಲಿ ಮರಗಳಿಗೆ ಬೆಲೆ ಇರುವುದಿಲ್ಲ ಎನ್ನುತ್ತಾಳೆ ಅಕ್ಕ.

ವ್ಯಕ್ತಿಯ ಜೀವನ ಆತನ ದಯೆಯ ಗುಣದಿಂದ ಅರ್ಥಪೂರ್ಣವಾಗುತ್ತದೆ. ಅಪಾರ ಹಣವಿದ್ದೂ ಕಷ್ಟದಲ್ಲಿದ್ದವರ ಪರ ಕರುಣೆಯಿಲ್ಲದವನ, ಅತ್ಯಾವಶ್ಯಕತೆಯಿದ್ದವರಿಗೆ ಕೈಯೆತ್ತಿ ಕೊಡುವ ಗುಣವಿಲ್ಲದಿದ್ದವನ ಜೀವನಕ್ಕೆ ಯಾವ ಅರ್ಥವಿರುತ್ತದೆ? ಹಣವಿರುವುದೇ ಉಪಯೋಗಕ್ಕಾಗಿ. ಒಬ್ಬ ವ್ಯಕ್ತಿ, ತನ್ನಲ್ಲಿ ಇದ್ದುದೆಲ್ಲವನ್ನೂ ಸ್ವಂತಕ್ಕೆ ಮಾತ್ರ ಉಪಯೋಗಿಸಿದರೆ ಏನಾಗುತ್ತದೆ? ಆತನಲ್ಲಿ ಆಸೆಗಳು ಕೊನೆಯಿಲ್ಲದೆ ಚಿಗುರತ್ತಲೆ ಇರುತ್ತವೆ. ಆತನು ಸಂಪೂರ್ಣವಾಗಿ ಆಸೆಗಳ ದಾಸನಾಗುತ್ತಾನೆ. ಹಣವಿಲ್ಲದೆ ಕಷ್ಟಪಡುತ್ತಿರುವವರಿಗೆ ಅವನು ಅಸಹ್ಯನಾಗುತ್ತಾನೆ, ಅವರ ಮನದಲ್ಲಿ ಅವನ ಪರ ಹೊಟ್ಟೆಕಿಚ್ಚು ಹುಟ್ಟುವಂತಾಗುತ್ತದೆ. ಇಂತಹವನಿಂದ ಸಮಾಜಕ್ಕೆ ಏನು ಪ್ರಯೋಜನ? ಲೋಕದ ದೃಷ್ಟಿಯಲ್ಲಿ ಅವನಿಗೆ ಯಾವ ಬೆಲೆಯೂ ಇರುವುದಿಲ್ಲ, ಎನ್ನುತ್ತಾಳೆ ಅಕ್ಕ.

ಲೋಕದ ದೃಷ್ಟಿಯಲ್ಲಿ ಹಸುವಿನ ಸಾರ್ಥಕತೆ ಹಾಲು ಕೊಡುವುದರಲ್ಲಿದೆ. ಅದು ತನ್ನ ಕರುವಿಗೆ ಮಾತ್ರವಲ್ಲದೆ ಇತರರಿಗೂ ಹಾಲು ಕೊಟ್ಟು ಧನ್ಯವೆನಿಸಿಕೊಳ್ಳುತ್ತದೆ. ಹಸುವನ್ನು ಎತ್ತಿನಂತೆ ಉಳುವುದಕ್ಕೆ ಉಪಯೋಗಿಸುವುದಿಲ್ಲ. ಆದ್ದರಿಂದ ಲೋಕದ ದೃಷ್ಟಿಯಲ್ಲಿ, ಹಸು ಹಾಲು ಕೊಡದೆ ಇದ್ದಲ್ಲಿ ಅದರಿಂದ ಯಾವ ಪ್ರಯೋಜನವೂ ಇಲ್ಲ.

ವ್ಯಕ್ತಿಯು ರೂಪವಂತನಾಗಿದ್ದರೆ ಸಾಲದು, ಆತನಲ್ಲಿ ಒಳ್ಳೆಯ ಗುಣಗಳಿರಬೇಕಾದದ್ದು ಮುಖ್ಯ. ರೂಪ ಇತರರನ್ನು ಆಕರ್ಷಿಸುತ್ತದೆ ನಿಜ. ಆದರೆ ಅದು ತಾತ್ಕಾಲಿಕ. ಅದು ಶಾಶ್ವತವೂ ಅಲ್ಲ ಮತ್ತು ಆಳವಾದದ್ದೂ ಅಲ್ಲ. ಆದ್ದರಿಂದ ಬಲು ಬೇಗ ಅದು ಮಾಸಿ ಹೋಗುತ್ತದೆ ಮತ್ತು ಅದರ ಟೊಳ್ಳುತನ ತಿಳಿದು ಬರುತ್ತದೆ. ಅದರಿಂದ ಬೇರೇನೂ ಪ್ರಯೋಜನವಿಲ್ಲ. ಒಳ್ಳೆಯ ಗುಣಗಳಿಗೆ ನಿಜವಾದ ಆಕರ್ಷಣೆಯಿರುತ್ತದೆ. ಒಳ್ಳೆಯ ಗುಣಗಳು ಮಂಗಳವನ್ನುಂಟು ಮಾಡುವುದರಿಂದ ಅವುಗಳ ಆಕರ್ಷಣೆ ಕುಂದುವುದಿಲ್ಲ. ಆದ್ದರಿಂದ ಕೇವಲ ರೂಪದಿಂದ ಯಾವ ಫಲವೂ ಇಲ್ಲ. ಒಳ್ಳೆಯ ಗುಣಗಳಿಂದಲೇ ರೂಪಕ್ಕೆ ಸಾರ್ಥಕತೆಯುಂಟಾಗುತ್ತದೆ, ಅಲ್ಲದಿದ್ದಲ್ಲಿ ರೂಪಕ್ಕೆ ಯಾವ ಬೆಲೆಯೂ ಇಲ್ಲ.

ಊಟದ ತಟ್ಟೆ ಇದ್ದು ಅದರಲ್ಲಿ ನೀಡಲು ಅನ್ನವೇ ಇಲ್ಲದಿದ್ದಲ್ಲಿ ಆ ತಟ್ಟೆಯಿದ್ದು ಫಲವೇನು. ಅನ್ನವನ್ನು ಬಡಿಸಿಕೊಂಡು ಊಟಮಾಡಿದರೇನೇ ಆ ತಟ್ಟೆಗೆ ಸಾರ್ಥಕತೆ ಬರುತ್ತದೆ. ಇಲ್ಲದಿದ್ದರೆ ಆ ತಟ್ಟೆ ಒಂದು ಪ್ರದರ್ಶನದ ವಸ್ತುವಾಗುತ್ತದೆ ಅಷ್ಟೆ.

ಈ ಎಲ್ಲ ಉದಾಹರಣೆಗಳನ್ನು ಕೊಟ್ಟು ಅಕ್ಕ ಕೊನೆಗೆ ತನ್ನನ್ನೇ ಒರೆಗೆ ಹಚ್ಚಿ ನೋಡುತ್ತ ನನ್ನಲ್ಲಿ ಚೆನ್ನಮಲ್ಲಿಕಾರ್ಜುನನ ಜ್ಞಾನ ವಿಲ್ಲದಿದ್ದರೆ ನಾನಿದ್ದು ಏನು ಪ್ರಯೋಜನ? ಎನ್ನುತ್ತಾಳೆ. ಮರ, ಧನಿಕ, ಹಸು, ರೂಪವಂತ ಮತ್ತು ತಟ್ಟೆಯನ್ನು ಲೋಕದ ದೃಷ್ಟಿಯಿಂದ ನೋಡಿದ ಅಕ್ಕ ತನ್ನನ್ನು ಮಾತ್ರ ಲೋಕದ ದೃಷ್ಟಿಯನ್ನು ಮೀರಿ ನೋಡಿಕೊಳ್ಳುತ್ತಾಳೆ. ಲೋಕದ ದೃಷ್ಟಿಯಲ್ಲಿ, ವ್ಯಕ್ತಿಯು, ಸಾಮಾನ್ಯವಾದ ಒಳ್ಳೆಯ ಗುಣಗಳನ್ನು ಹೊಂದಿ, ಸಮಾಜಕ್ಕಾಗಿ ನಾಲ್ಕು ಒಳ್ಳೆಯ ಕೆಲಸ ಮಾಡಿದರೆ ಸಾಕು. ಅದಕ್ಕಿಂತ ಹೆಚ್ಚಿನದೇನನ್ನು ಸಮಾಜ ಕೇಳುವುದಿಲ್ಲ್ಲ. ಆದರೆ ಅಕ್ಕ, ತನಗಾಗಿ ಅದಕ್ಕಿಂತ ಹೆಚ್ಚಿನ ಮಟ್ಟವನ್ನು, ವ್ಯಕ್ತಿಯ ವಿಕಾಸದ ತುತ್ತ ತುದಿಯನ್ನು ನಿಗದಿಪಡಿಸಿಕೊಳ್ಳುತ್ತಾಳೆ. (she sets highest level for herself) ಲೋಕದ ಮನುಜರೆಲ್ಲರಿಗೂ ಆ ಪರಶಿವನ ಜ್ಞಾನದಿಂದಲೇ ಸಾರ್ಥಕ್ಯ ಪ್ರಾಪ್ತವಾಗುತ್ತದೆಯೇ ವಿನಃ ಬೇರೆ ಯಾವುದರಿಂದಲೂ ಸಾಧ್ಯವಿಲ್ಲವೆಂದು ಹೇಳುತ್ತಾಳೆ.

ಇಲ್ಲಿ ಅತನನ್ನು ಅರಿಯುವುದು ಎಂದರೇನು ಎಂಬುದನ್ನು ನಾವು ನಮ್ಮ ನಮ್ಮ ಮಿತಿಯಲ್ಲಾದರೂ ಸರಿಯೆ, ಅರ್ಥಮಾಡಿಕೊಳ್ಳದಿದ್ದರೆ ನಮ್ಮ ಜನ್ಮವೂ ನಿರರ್ಥಕ.

ಆತನನ್ನು ಅರಿಯುವುದು ಎಂದರೆ ತನನ್ನು ತಾನು ಅರಿಯುವುದು. ತನ್ನನ್ನು ಅರಿಯುವುದು ಎಂದರೆ: ತಾನು ಹೇಗೆ ನಡೆದುಕೊಳ್ಳುತ್ತೇನೆ? ಮತ್ತು ಏಕೆ? ಆ ನಡತೆ ಇತರರನ್ನು ಮೆಚ್ಚಿಸಲು ಮಾತ್ರವೇ? ತನ್ನ ನಡತೆ ಎಲ್ಲರೊಂದಿಗೂ ಒಂದೇ ರೀತಿಯಾಗಿರುವುದಿಲ್ಲ. ಏಕೆ? ತನ್ನಲ್ಲಿ ಕೋಪ, ಭಯ, ಅಹಂಕಾರ, ಹೊಟ್ಟೆಕಿಚ್ಚು ಮುಂತಾದ ಭಾವಗಳು ಹುಟ್ಟುತ್ತವೆ. ಅವುಗಳಿಂದ ತಾನು ನರಳುತ್ತೇನೆ. ಅವುಗಳಿಂದ ಬಿಡುಗಡೆ ಹೇಗೆ? ತಾನು ಸಮಾಜ ಮೆಚ್ಚುವಂತೆ ನಡೆದುಕೋಡರೆ ಸಾಕೆ? ಅಥವಾ ಅದಕ್ಕಿಂತ ಹೆಚ್ಚಿನ ಅರ್ಥ ಈ ಜೀವನಕ್ಕಿದೆಯೆ? ಇದ್ದರೆ ಅದು ಏನು? ಎಂಬಂತಹುದನ್ನು ಕಂಡುಕೊಳ್ಳುವುದು ಮೊದಲನೆಯ ಹಂತ.

ಬಸವಣ್ಣನವರು ಒಂದು ಕಡೆ ಹೇಳುತ್ತಾರೆ, “ಪಶುವಾನು ಪಶುಪತಿ ನೀನು” ಎಂದು. ಈ ಮಾತು ನಮ್ಮಂತಹ ಸಾಮಾನ್ಯರಿಗಿಂತ ಇನ್ನಾರಿಗೆ ಹೆಚ್ಚು ಅನ್ವಯವಾಗುತ್ತದೆ? ಇಂದ್ರಿಯಗಳಿಗೆ ದಾಸರಾಗಿ ಪಶುಗಳಂತೆ ವರ್ತಿಸುತ್ತೇವೆ. ಒಳಿತು ಕೆಡಕುಗಳ ಬಗ್ಗೆ ಯೋಚಿಸದೆ ಇಂದ್ರಿಯಗಳು ಎಳೆದುಕೊಂಡು ಹೋದತ್ತ ವಿವೇಚನಾರಹಿತರಾಗಿ ಓಡುತ್ತೇವೆ. ನಾವು ಅವುಗಳ ದಾಸ್ಯದಿಂದ ಬಿಡುಗಡೆ ಪಡೆದು ಒಡೆಯರಾಗುವುದು ಯಾವಾಗ? ಮತ್ತು ಹೇಗೆ? ನಮ್ಮಲ್ಲಿ ಎಷ್ಟೋ ಜನರಿಗೆ ಇಂದ್ರಿಯಗಳ ದಾಸರಾಗಿದ್ದೇವೆ ಎನ್ನುವುದರ ಅರಿವೂ ಇರುವುದಿಲ್ಲ. ನಾವು ದಾಸರಾಗಿದ್ದೇವೆಯೆ? ಮತ್ತು ಏಕೆ? ಅವುಗಳಿಂದ ಬಿಡಿಸಿಕೊಳ್ಳುವ ಬಗೆ ಹೇಗೆ? ಅವುಗಳನ್ನು ಪೂರ್ತಿಯಾಗಿ ತುಳಿದು ಹಾಕಬೇಕೆ? ತುಳಿದು ಬಿಟ್ಟರೆ ಅವು ಮತ್ತೆ ತಲೆ ಎತ್ತುವುದಿಲ್ಲವೆ? ಅವುಗಳನ್ನು ವಶದಲ್ಲಿಟ್ಟುಕೊಳ್ಳಬೇಕೆ? ಹೇಗೆ? ಈ ಎಲ್ಲವನ್ನು ಸ್ವತಃ ಗಮನಿಸಿ ತಿಳಿದುಕೊಳ್ಳುವುದು, ತನನ್ನು ತಾ ಅರಿಯುವುದರ ಮೊದಲ ಹಂತ. ಕೇವಲ ಇಂದ್ರಿಯಗಳಲ್ಲದೆ ಮನಸ್ಸು, ಬುದ್ಧಿ, ಅಹಂಕಾರ ಇತ್ಯಾದಿಗಳನ್ನೂ, ಕಾಮ, ಕ್ರೋಧ, ಮದ, ಲೋಭ, ಮೋಹ , ಮತ್ಸರಗಳನ್ನೂ ಅರಿಯಬೇಕು. ಅರಿಯುತ್ತ ಹೋದಂತೆ ತನ್ನ ಸ್ವರೂಪ ಅನಾವರಣಗೊಳ್ಳುತ್ತದೆ. ತನ್ನ ತಾ ಅರಿಯುವುದೇ ಆ ದೇವನನ್ನು ಅರಿಯುವುದು ಎಂದು ಶರಣರು ಹೇಳುತ್ತಾರೆ.

Saturday, February 12, 2011

Vachana 26 : Kalla Naagara Kandare - Rituals and Human Nature


ಕಲ್ಲನಾಗರ ಕಂಡರೆ ಹಾಲನೆರೆ ಎಂಬರು
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ!
ನಮ್ಮ ಕೂಡಲ ಸಂಗನ ಶರಣರಕಂಡು ಉದಾಸೀನವ ಮಾಡಿದಡೆ
ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯಾ.

 TRANSLITERATION

kallanAgara kaMDare hAlanere eMbaru
diTada nAgara kaMDare kolleMbarayyA!
uMba jaMgama baMdare naDe eMbaru;
uNNada liMgakke bOnava hiDiyeMbarayyA!
namma kUDala saMgana SaraNarakaMDu udAsInava mADidaDe
kallu tAgida miTTeyaMtapparayyA.

CLICK TO HEAR IT

http://www.youtube.com/watch?v=MsJKS0svGU8

TRANSLATION

kalla naagara (stone figure of cobra) kaMDare (if seen) haalanere (pour milk) eMbaru(they say)
diTda (live , true)naagara (cobra) kaMdare (if seen) koll (kill)eMbarayyaa!( they say, Sir!)
uMba (who eats) jaMgama (mystic) baMdare (if appeared)naDe ( go away) embaru ( they say)
uNNada(incapable of eating) liMgakke(to the god’s form) bOnava(food ,rice) hiDi (offer)
eMbarayya!( they say, Sir!)
namma kooDalasaMgana (our kooDala saMgamaa’s) sharaNara (mystic devotee) kaMdu (seeing) udaasIna maaDidaDe (if treated indifferently)
kallu(stone) taagida( hit by) miTTeyaMte(like a chunk of mud, clod)apparayyaa! (they become, Sir!)


On seeing a stone figure of cobra, they say ‘pour milk’!
On seeing a real cobra, they say ‘kill it’!
If a mystic who can eat arrives at the door, they say ‘go away’!
And serve food to the Linga (God’s icon) that cannot eat!
If you treat the devotees of the Lord (Kudala Sangama) indifferently, you will be like a clod hit by a stone!


COMMENTARY
At the first reading this vachana appears to be a commentary on ritualistic way of life. It is actually a profound observation of the duality of human nature. We worship stone carvings of cobra with ultimate reverence since we are told that such worship brings riches and enhances fertility in women. At the same time, we do not think twice before killing a cobra or any other snake the moment we see it. All the lessons on compassion towards other beings including wild animals are forgotten in an instant. In fact, there are temples where during the annual festival of Naaga Panchami, live snakes (with their mouth stitched) are used as objects of worship. People pour milk on them and smear them with turmeric and other decorations. Eventually, these snakes die either of hunger or of infection due to the stitches on their mouth.
We go through elaborate methods of worshipping God and offer Him food (Naivedya), which He cannot eat. But, when a hungry individual appears at our door steps, our first reaction is to ask him to go away. Basavanna questions this duality. Even Basavanna was not free from this duality. The story goes that Allama Prabhu (another sharana, mystic) arrives at Basavanna’s home when he was in the midst of his daily worship. Basavanna ignores Allama Prabhu and continues with his rituals. Allama Prabhu becomes furious at this act of Basavanna. Chenna Basavanna (nephew of Basavanna) notices this and intervenes to convince Allama Prabhu that Basavanna did not ignore him intentionally. Allama Prabhu forgives Basavanna. But, this incidence leaves Basavanna with strong mark of inadequacy.
Basavanna says that if one ignores the devotees of the Lord and treats them indifferently, they will be crushed just as a clod hitting a stone – the clod loses its bonding and becomes a powder while the stone remains intact. This is a powerful message in terms of how we interact with others. Whether a squash falls on a knife or the knife falls on a squash, the squash is the one that gets cut. The message is that we need to respect the strength (physical, philosophical or spiritual) of our fellow beings and interact with them appropriately. Otherwise, we will be the losers.
Imagine that you happened to meet Dalai Lama and simply ignored him. In all likelihood, he will smile at you and move on. This incidence does not affect him any way. But, it eventually pricks you when you realize how ignorant you happened to be and lost an opportunity to be in the presence of a great soul!

Let us not be immersed in our ritualistic routines; let us open our minds to the great opportunities that come along our way!

KANNADA COMMENTARY

ಮೂಢನಂಬಿಕೆ ಮತ್ತು ಅರ್ಥವಿಲ್ಲದ ಪೂಜೆ ಹೇಗೆ ವ್ಯಕ್ತಿಯ ನಾಶಕ್ಕೆ ಕಾರಣವಾಗುತ್ತವೆ ಎಂಬುದನ್ನುಈ ವಚನದಲ್ಲಿ ಉದಾಹರಣೆಸಹಿತವಾಗಿ ಹೇಳಿದ್ದಾರೆ.

ಅರಳಿ ಮರದ ಕೆಳಗೆ, ನಾಗರಕಟ್ಟೆಯಲ್ಲಿ ಇರುವ ಕಲ್ಲಿನ ನಾಗರಹಾವಿಗೆ ಜನರು ಧಾರಾಳವಾಗಿ ಹಾಲನೆರೆಯುವುದನ್ನು ಎಲ್ಲೆಲ್ಲೂ ಕಾಣಬಹುದು. ಆದರೆ ನಿಜವಾದ ಹಾವು ಎಲ್ಲಿಯಾದರೂ ಕಂಡುಬಂದರೆ ಕೂಡಲೆ ಅದನ್ನು “ಕೊಲ್ಲು” ಎಂದು ಹೇಳುತ್ತ ಕೊಂದೇಬಿಡುವರು. ನಾಗರಕಟ್ಟೆಯಲ್ಲಿ ಹಾಲೆರೆಯುವಾಗ ಇದ್ದ ಭಕ್ತಿ ದಿಟದ ನಾಗರ ಕಂಡ ಕ್ಷಣ ಮಾಯವಾಗಿ ಹಿಂಸಾ ಭಾವ ತಲೆ ಎತ್ತುತ್ತದೆ. ಇಲ್ಲಿ ಒಂದೇ ವ್ಯಕ್ತಿಯ ಈ ಕ್ರಿಯೆಗಳಿಗೆ ಅರ್ಥಾರ್ಥ ಸಂಬಂಧವಿರುವುದಿಲ್ಲ. ಇಂತಹ ನಡತೆಗೆ ಯಾವ ಬೆಲೆ ಇದ್ದೀತು? “ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ” ಎಂಬುದನ್ನು ಒಣ ಮಾತಿನಲ್ಲಿ ಹೇಳಿ ಕ್ರಿಯೆಯಲ್ಲಿ ಮರೆತರೆ ಹೇಗೆ?
ಇದೇ ರೀತಿ ತಮ್ಮನ್ನು ಭಕ್ತರೆಂದು ತೋರಿಸಿಕೊಳ್ಳುವವರು ಲಿಂಗ ಪೂಜೆಯಲ್ಲಿ ನಿರತರಾಗಿರುತ್ತಾರೆ. ಪೂಜೆಯ ಭಾಗವಾಗಿ ಅನ್ನವನ್ನು, ಎಂದೂ ಉಣ್ಣದ ಲಿಂಗಕ್ಕೆ ಅಪಾರವಾದ ಭಕ್ತಿಯಿಂದ ಎಡೆ ಮಾಡುತ್ತಾರೆ. ಆದರೆ ಬಡವರು ಬಂದು ಒಂದು ತುತ್ತು ಕೂಳು ಕೇಳಿದರೆ ಅವರನ್ನು ನಿಷ್ಠುರವಾಗಿ ಬೈದು ಕಳಿಸುತ್ತಾರೆ. ಉಣ್ಣುವ ಜಂಗಮನು ಹಸಿದು ಮನೆ ಬಾಗಿಲಿಗೆ ಬಂದರೆ ಆತನನ್ನು “ನಡೆ” ಎಂದು ಹಿಂದಕ್ಕೆ ಕಳಿಸಿಬಿಡುತ್ತಾರೆ. ಹಸಿದವರಿಗೆ ಅನ್ನ ನೀಡದಿರುವುದು ಧರ್ಮವೆ? ಇಂತಹ ದಯೆಯಿಲ್ಲದ ನಡತೆಯಿಂದ ಏನು ಪ್ರಯೋಜನ? ಉಣ್ಣದ ಲಿಂಗಕ್ಕೆ ನೈವೇದ್ಯ ಮಾಡುವುದರಿಂದ ಏನು ಸಾಧಿಸಿದಂತಾಗುತ್ತದೆ? ಇದು ಎಂತಹ ನಡತೆ? ನೈವೇದ್ಯವೆಂದರೆ ಸಾಂಕೇತಿಕವಾಗಿ ತನ್ನ ತನು ಮನ ಧನವನ್ನು ಲಿಂಗಕ್ಕೆ ಅರ್ಪಿಸುವುದು. ಮನೆಗೆ ಬಂದ ಹಸಿದವರನ್ನು, ಅವರೂ ಕೂಡ ದೇವರ ಸ್ವರೂಪವೆ ಎಂದು ತಿಳೀಯದೆ ಅವರನ್ನು ತಣಿಸದಿದ್ದರೆ ಆ ಪೂಜೆಗೆ ಏನು ಅರ್ಥ? ಜಂಗಮರೂಪವೇ ಲಿಂಗ ವೆಂದು ತಿಳಿಯದವನ ಭಕ್ತಿ ಏತರ ಭಕ್ತಿ? ಎಂದು ಕೇಳುತ್ತಾರೆ ಬಸವಣ್ಣನವರು. ಜಂಗಮ ಎಂದರೆ ಯಾರು? ಎಂಬುದನ್ನು ಇನ್ನೊಮ್ಮೆ ನೆನಪಿಸಿಕೊಳ್ಳೋಣ: “ತನ್ನ ಅನುಭಾವದ ಬೆಳಕನ್ನು ಸುತ್ತಲಿನ ಸಮಾಜದ ಮೇಲೂ ಬೀರುವ ಕಾರ್ಯದಲ್ಲಿ ನಿರತನಾಗಿರುತ್ತಾನೆ. ಮೇಲೇರಿ ಕಂಡುದನ್ನು ಇಳಿದು ಕಟ್ಟುವ ಕ್ರಿಯಾಶೀಲನಾಗುತ್ತಾನೆ........... ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯನಾಗಿ ಈಗಲೂ ಆತ ದುಡಿಯುತ್ತಾನೆ, ಆದರೆ ಆ ದುಡಿಮೆ ತನಗಾಗಿಯಲ್ಲ; ಜಗತ್ತಿಗಾಗಿ, ಜನತೆಯ ಒಳಿತಿಗಾಗಿ, ಲೋಕಸಂಗ್ರಹಕ್ಕಾಗಿ, ಜ್ಞಾನ ಮತ್ತು ಕ್ರಿಯೆ ಇವುಗಳ ಪರಸ್ಪರ ಸಂಬಂಧದ ರಹಸ್ಯವನ್ನು ಶರಣ ಮನಗಂಡು ಅದನ್ನು ನಿತ್ಯ ಜೀವನದಲ್ಲಿ ಅನಷ್ಠಾನಕ್ಕೆ ತಂದು ಸಮಾಜಿಕ ಜೀವನವನ್ನು ಹಸನುಗೊಳಿಸುವ ಭವರೋಗ ವೈದ್ಯನಾಗುತ್ತಾನೆ........ .”
ಇಂತಹ ಜಂಗಮನನ್ನು ಗುರುತಿಸದೆ ಇರುವುದು ಮಹಾತಪ್ಪು. ಆದರೆ ಇದು ಎಲ್ಲರೂ ಮಾಡುವಂತಹ ತಪ್ಪು. ಸ್ವತಃ ಬಸವಣ್ಣನವರು ಈ ತಪ್ಪು ಮಾಡಿರುವುದನ್ನು ನಾವು ಕಾಣುತ್ತೇವೆ; ಅವರು ಲಿಂಗ ಪೂಜೆಯಲ್ಲಿ ನಿರತರಾದಾಗ ಅಲ್ಲಮಪ್ರಭುಗಳು ಅವರ ಮನೆ ಬಾಗಿಲಿಗೆ ಬರುತ್ತಾರೆ. ಆದರೆ ಅವರನ್ನು ಮರೆತು ಬಸವಣ್ಣನವರು ಪೂಜೆಯಲ್ಲಿಯೇ ನಿರತರಾದಾಗ ಪ್ರಭುಗಳು ಕೋಪದಿಂದ ಹೊರಡಲುದ್ಯುಕ್ತರಾಗುತ್ತಾರೆ. ಅದೇ ಸಮಯದಲ್ಲಿ ಚೆನ್ನಬಸವಣ್ಣನವರ ಸಮಯ ಪ್ರಜ್ಞೆಯಿಂದ ಎಲ್ಲವೂ ಸರಿ ಹೊಗುತ್ತದೆ. ಅಲ್ಲಮರು ಕರುಣೆಗೊಂಡು ಅವರನ್ನು ಕ್ಷಮಿಸಿದ್ದರಿಂದ ಬಸವಣ್ಣನವರಿಗೆ ಜೀವದಾನವಾದೂಂತಾಗುತ್ತದೆ. ಬಸವಣ್ಣನವರು ಪಶ್ಚಾತಾಪದಲ್ಲಿ ಬೆಂದುಹೋಗುತ್ತಾರೆ. ಆ ಪ್ರಸಂಗ ಅವರನ್ನು ಇನ್ನೂ ಎಚ್ಚರದಿಂದಿರುವಂತೆ ಮಾಡುತ್ತದೆ.
ಶರಣರನ್ನು ಕಂಡು ಉದಾಸೀನ ಮಾಡಿದರೆ ನಷ್ಟವಾಗುವುದು ಭಕ್ತರಿಗೆ ಹೊರತು ಶರಣರಿಗಲ್ಲ. ಶರಣರು ಲೌಕಿಕವಾದ ಯಾವ ಪ್ರಭಾವಕ್ಕೂ ಒಳಗಾಗುವುದಿಲ್ಲ. ಭಕ್ತರಾಗಲಿ ಯಾರೇ ಆಗಲಿ ಅವರನ್ನು ಕುರಿತು ಉದಾಸೀನ ಮಾಡಿದರೆ ಅವರಿಗೆ ಏನೂ ಆಗುವುದಿಲ್ಲ. ಅವರು ಕಲ್ಲಿನಂತೆ ದೃಢವಾದವರು. ಆದರೆ ಇತರರು ಮಣ್ಣಿನ ಹೆಂಟೆಯಂತೆ ಗಟ್ಟಿತನವಿಲ್ಲದವರು.ಮಣ್ಣಿನ ಹೆಂಟೆ ಗಟ್ಟಿಯಾದ ಕಲ್ಲಿಗೆ ತಾಕಿದರೆ ಒಡೆದು ಚೂರಾಗುತ್ತದೆ. ಅದು ತನ್ನ ಇದ್ದ ಬದ್ದ ಗಟ್ಟಿತನವನ್ನೂ ಕಳೆದುಕೊಳ್ಳುತ್ತದೆ. ಕಲ್ಲಿಗೆ ಎನೂ ಆಗುವುದಿಲ್ಲ. ಅದೇ ರೀತಿಯಾಗಿ ಪರಿಪೂರ್ಣರಾದ, ಆದ್ದರಿಂದ ಭದ್ರ ವ್ಯಕ್ತಿತ್ವ ಉಳ್ಳ ಶರಣರಿಗೆ ಯಾರಿಂದಲೂ ಯಾವ ರೀತಿಯ ಊನವೂ ಆಗುವುದಿಲ್ಲ, ಅವರು ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ಆದರೆ ಅವರನ್ನು ಉದಾಸೀನ ಮಾಡಿದ ತೋರಿಕೆಯ ಭಕ್ತರು ಚೂರಾಗಿ ಹೋಗುತ್ತಾರೆ. ಶರಣರ ದೃಢತೆಯ ಮುಂದೆ ಕಪಟ ಭಕ್ತರು ತಮ್ಮ ಬೆಲೆಯನ್ನು ಕಳೆದು ಕೊಳ್ಳುತ್ತಾರೆ. ಹೀಗಾಗಿ ಹಾನಿ ಅವರಿಗೆ ಹೊರತು ಶರಣಿಗರಲ್ಲ.
ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಒಂದು ಪ್ರಸಂಗವನ್ನು ಊಹಿಸಬಹುದು: ಒಂದು ವೇಳೆ ಭೌದ್ಧ ಧರ್ಮ ಗುರುಗಳಾದ ಶ್ರೀ ದಲಾಯಿ ಲಾಮಾ ಅವರು ಅನಿರೀಕ್ಷಿತವಾಗಿ ನಮ್ಮನ್ನು ಕಂಡು ಮಾತನಾಡಿಸಿದರು ಎಂದುಕೊಳ್ಳೋಣ. ಆದರೆ ಆಗ ನಾವು ಅವರನ್ನು ಉದಾಸೀನತೆಯಿಂದ ಕಡೆಗಣಿಸುತ್ತೇವೆ ಎಂದಿಟ್ಟುಕೊಳ್ಳಿ. ಆಗ ಅವರಿಗೆ ಏನಾಗುತ್ತದೆ? ಏನೂ ಆಗುವುದಿಲ್ಲ. ಅವರು ಮುಕ್ತ ನಗೆ ನಕ್ಕು ಮುಂದೆ ಸಾಗುತ್ತಾರೆ. ಆದರೆ ಅವರ ಆ ಮುಕ್ತ ನಗೆಯಿಂದ ನಮ್ಮ ಟೊಳ್ಳುತನದ ಅರಿವು ನಮಗಾಗುತ್ತದೆ. ಆ ಟೊಳ್ಳುತನ ನಮ್ಮನ್ನು ಸದಾ ಚುಚ್ಚುತ್ತಿರುತ್ತದೆ. ನಾವು ಕಲ್ಲು ತಾಗಿದ ಮಿಟ್ಟೆಯಂತಾಗುತ್ತೇವೆ.




Friday, February 4, 2011

Vachana 25 Madakeya Maduvade - With Teachers and devotees

TRANSLITERATION
ಮಡಕೆಯ ಮಾಡುವಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೇ ಮೊದಲು,
ಶಿವಪಥವನರಿವಡೆ ಗುರುಪಥವೇ  ಮೊದಲು
ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು

maDakeya mADuvaDe maNNE modalu,
toDigeya mADuvaDe honnE modalu,
SivapathavanarivaDe gurupathavE  modalu
kUDalasaMgamadEvanarivaDe SaraNara saMgavE modalu

CLICK TO HEAR IT


TRANSLATION

maDakeya  (pot) maaDuvaDe (to make)  maNNE (clay)  modalu ( is principal )
toDigeya (ornaments)  maaDuvaDE( to make) honne(gold)  modalu ( is principal)
shivapathavan( god’s path) arivaDe(to know)  gurupathavE (teacher’s guidance) modalu(is principal)
kooDalasaMgamadEvana(Lord) arivaDe(to know) sharaNara(his devotees’) saMgavE (company is) modalu (principal)

In making a clay pot, the clay comes first.
In making an ornament, the gold comes first.
In knowing Lord Shiva’s path, the Guru’s guidance comes first.
In knowing the Lord Kudala Sangama Deva, the fellowship of His devotees comes first.  

COMMENTARY

Basavanna emphasizes the importance of the teacher (Guru) and the devotees of the Lord in our path towards Godliness.  Clay and gold are the main ingredients in making clay pots and ornaments respectively.  It could be plastic or other metals in today’s context. Getting the basic ingredients of appropriate consistency is the first step in making a pot or ornament or any other object. A teacher’s (Guru’s) guidance is necessary to know the path of the Lord. The fellowship of His devotees is essential for knowing the Lord. 

Attaining the path of the Lord (godliness) is not easy. It requires a rigorous determination and training. The role of the Guru is to constantly encourage one to be God minded, and bring one back to the mode of the seeker when one strays from that path, with utmost kindness and persistence. Once such a mind set is brought about, the seeker moves towards knowing the Lord. Knowing the Lord is an activity that is beyond the realm of our sense organs. It requires the awakening of our inner eyes. Such awakening can only be brought about by the fellowship of the devotees who are already in that awakened state. 

Guru is the one who removes the ignorance by shining the light of knowledge:  Gu (darkness) Ru (remover). Guru has traditionally been given a prominent status equivalent to that of Gods (Guru Brahma, Guru Vishnu, Gurudevo Maheswaraha! Guru Saakshaat parabrahma, Tasmai Sri Guruve Namah!) .  The saying goes “guruvina gulaamanaguvatanaka doreyadanna mukti”  meaning one will not attain salvation until surrendering to Guru. One would question the need for a Guru in these days where we can ‘Google’ to get all we need to move forward in day to day lives. Googling just provides the data we need; we will have to transform it into information and eventually appropriate knowledge. This is where Guru’s role becomes important.  Attaining God mindedness is beyond the activities of our mundane lives. It requires a true guidance from a knowledgeable teacher. It is said that the Guru appears when the student is ready to receive the knowledge!

 Who is a devotee? He is the one who has attained Godliness and is beyond the realm of feelings brought about by our sense organs. He has opened his inner eye to the Lord within. He is referred to as ‘Jangama’ – a dynamic one! He moves around, but solidly grounded in the thoughts of the Lord. He speaks, but silent within. He is merged with the Lord but does not stray away from sharing his knowledge with the world. He works hard, but not for his own sake; he shares what all he has with the rest. His only intention is to pull his fellow beings to the state of pure consciousness he is in. No wonder the fellowship of such devotees is essential for us to reach the Lord.

Let us seek the guidance from the teachers and the fellowship of the devotees to help us open our eyes to the Lord within!

KANNADA COMMENTARY

ಶರಣರ ಸಂಗದ ಮಹತ್ವವನ್ನು ಸಾರುವ ಇನ್ನೊಂದು ವಚನ.
ಮಡಕೆಯನ್ನು ಮಾಡಲು ಮೂಲತಃ ಮಣ್ಣು ಬೇಕು. ಮಡಕೆ ಯಾವ ಆಕಾರದ್ದೇ ಆಗಲಿ, ಯಾವ ಗಾತ್ರದ್ದೇ ಆಗಲಿ, ಯಾವ ಬಣ್ಣದ್ದೇ ಆಗಲಿ ಅದನ್ನು ಮಾಡಲು ಮಣ್ಣೇ ಆಧಾರ. (ಇಂದಿನ ದಿನ ನಾವು ಪ್ಲಾಸ್ಟಿಕ್ಕಿನಂತಹ ಇತರ ಮಡಕೆಗಳನ್ನೂ ಕಾಣುತ್ತೇವೆ. ಈ ಸಂದರ್ಭದಲ್ಲಿ  ಮೂಲ ವಸ್ತು ಪ್ಲಾಸ್ಟಿಕ್ಕಾಗುತ್ತದೆ. ಆದರೆ ಬಸವಣ್ಣನವರ ಕಾಲದಲ್ಲಿ ಅವುಗಳನ್ನು ಕೇವಲ ಮಣ್ಣಿನಿಂದಲೇ ಮಾಡುತ್ತಿದ್ದರು. ಆಗ ಅವಕ್ಕೆ ಕೇವಲ ಮಣ್ಣೇ ಮೂಲ ವಸ್ತುವಾಗಿತ್ತು.) ಅದೇ ರೀತಿಯಾಗಿ ಯಾವುದೇ ತರದ ಒಡವೆಗಳನ್ನು ಮಾಡಲು  ಬಂಗಾರವೇ ಮೂಲವಸ್ತು. ( ಇಂದಿನ ಸಂದರ್ಭದಲ್ಲಿ ಅದು ಇನ್ನಾವುದೋ ಲೋಹ ವಾಗಬಹುದು) ಹಾಗೆಯೇ ಶಿವಪಥವನ್ನು ಅರಿತುಕೊಳ್ಳಲು ಗುರುಪಥ ಮತ್ತು ಕೂಡಲ ಸಂಗಮದೇವನನ್ನು ಅರಿಯಲು ಶರಣರ ಸಂಗವೇ ಮುಖ್ಯವಾದದ್ದು ಎನ್ನುತ್ತಾರೆ ಬಸವಣ್ಣನವರು.
ನಾನಾತರದ ಮಡಕೆಗಳನ್ನು ನೋಡಿದಾಗ ಅವುಗಳ ಮೂಲ ವಸ್ತು ಮಣ್ಣು ಎಂದು ಗುರುತಿಸುವುದು ಕಷ್ಟವಾಗಬಹುದು. ಆದರೆ ಅದು ಮಣ್ಣೇ ಎಂಬುದು ಸತ್ಯ. ಅದೇ ತರಹ ಆಭರಣಗಳ ಮೂಲವಸ್ತುವೂ ಚಿನ್ನವೇ ಆಗಿರುವಂತೆ ಶಿವಪಥವನ್ನು ತುಳಿಯುವವರಿಗೆ ಗುರುವಿನ ಮಾರ್ಗವೇ ಮುಖ್ಯವಾದದ್ದು. ಗುರುವಿನ ಮಾರ್ಗದರ್ಶನವಿಲ್ಲದೆ ಶಿವಪಥವನ್ನು ಕೈಗೊಳ್ಳುವುದು ಕಷ್ಟಕರವಾಗುತ್ತದೆ. ಏಕೆಂದರೆ ಶಿವಪಥವು ಸುಲಭವಾದದ್ದಲ್ಲ. ಅದಕ್ಕೆ ಕಠಿಣವಾದ ಸಾಧನೆಯ ಅವಶ್ಯಕತೆ ಇದೆ. ಈ ಸಾಧನೆಯ ದಾರಿಗೆ ಹಚ್ಚುವವನು ಗುರುವೆ. ಕರುಣೆಯಿಂದ  ಶಿಷ್ಯನಿಗೆ ಸದಾ ಅದನ್ನು ನೆನೆಪಿಸಿಕೊಟ್ಟು ಅದರಲ್ಲಿ ಆಸಕ್ತಿಯುಂಟುಮಾಡಿ ಮುಂದುವರಿಯುವಂತೆ ಮಾಡುವವನು ಗುರು. ಆಗ ಮಾತ್ರ ವ್ಯಕ್ತಿಯು ಕೂಡಲಸಂಗಮನನ್ನು ಅರಿಯಲು ಸಿದ್ಧನಾಗುತ್ತಾನೆ. ಆ ಮುಂದೆ ಕೇವಲ ಸಾಧನೆಯು  ಆತನನ್ನು ಕೂಡಲ ಸಂಗಮನ ಹತ್ತಿರ ಒಯ್ಯುವುದಿಲ್ಲ. ಏಕೆಂದರೆ ಮುಂದಿನದೆಲ್ಲ  ಸಂಪೂರ್ಣವಾಗಿ ಅಮೂರ್ತವಾದ,  ಮಾತಿಗೆ ನಿಲುಕದ, ಇಂದ್ರಿಯಗಳಿಗೆ ದಕ್ಕದ, ಕೇವಲ ಅನುಭಾವಕ್ಕೆ ಸಿಕ್ಕುವ ವಿಷಯ.  ಅದನ್ನು ಕಾಣಲು ಒಳಗಣ್ಣು ತೆಗೆಯಬೇಕು.  ಒಳಗಣ್ಣು ತೆರೆಯದಿದ್ದರೆ ಕೂಡಲ ಸಂಗಮನು  ಅದೃಶ್ಯನಾಗಿಯೇ ಉಳಿಯುತ್ತಾನೆ. ಈ ಒಳಗಣ್ಣು ತೆರೆಸುವವರೇ ಶರಣರು. ಆದ್ದರಿಂದ ಆತನನ್ನು ಅರಿಯಲು ಅವರೇ ಮೂಲ.

ಶರಣರು ಎಂದರೆ ಯಾರು? (ಇದನ್ನು ತಿಳಿಯಲು ಬಯಸುಅವರಿಗಾಗಿ)
ಆಧ್ಯಾತ್ಮಿಕವಾಗಿ ಶರಣ,  ಸಿದ್ಧಿಯ ಶಿಖರದಲ್ಲಿ ನಿಂತವನು. ಶ್ರದ್ಧೆ, ನಿಷ್ಠೆ, ಅವಧಾನ, ಅನುಭವ, ಭಕ್ತಿಗಳನ್ನು ದಾಟಿ ಆನಂದ ಭಕ್ತಿಯಲ್ಲಿ ಲೀಲಾರೂಪಿಯಾದವನು; ದೇಹವನ್ನು ಧರಿಸಿದ್ದರೂ ಆತ ನಿರ್ದೇಹಿ, ನಡೆಯುತ್ತಿದ್ದರೂ ಆತ ನಿರ್ಗಮನಿ, ನುಡಿಯುತ್ತಿದ್ದರೂ ಆತ ನಿಶ್ಶಬ್ದಿ, ವ್ಯಕ್ತಿಯಾಗಿದ್ದರೂ ಜಗತ್ತನ್ನೆಲ್ಲಾ ವ್ಯಾಪಿಸಿದ್ದಾನೆ, ಆದರೂ ಜಗತ್ತಿಗೆ ಅತೀತನಾಗಿದ್ದಾನೆ. ಜಂಗಮವೆಂಬುದು ಅತ್ಯಂತ ವ್ಯಾಪಕವಾದ ಅರ್ಥದಲ್ಲಿ ಈ ನಿಲವಿಗೇರಿದ ಶಿವಯೋಗಿಯನ್ನು ಕುರಿತು ಹೇಳಿದ  ಮಾತೇ ಆಗಿದೆ  ಈ ನಿಲವಿಗೆ ಏರಿದ್ದರೂ ಆ ಶಿಖರದಲ್ಲಿಯೇ ಆತ ನಿಂತುಬಿಡುವುದಿಲ್ಲ, ತನ್ನ ಅನುಭಾವದ ಬೆಳಕನ್ನು  ಸುತ್ತಲಿನ ಸಮಾಜದ ಮೇಲೂ  ಬೀರುವ ಕಾರ್ಯದಲ್ಲಿ ನಿರತನಾಗಿರುತ್ತಾನೆ.  ಮೇಲೇರಿ ಕಂಡುದನ್ನು ಇಳಿದು  ಕಟ್ಟುವ ಕ್ರಿಯಾಶೀಲನಾಗುತ್ತಾನೆ........... ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯನಾಗಿ ಈಗಲೂ ಆತ ದುಡಿಯುತ್ತಾನೆ, ಆದರೆ ಆ ದುಡಿಮೆ ತನಗಾಗಿಯಲ್ಲ;  ಜಗತ್ತಿಗಾಗಿ,  ಜನತೆಯ ಒಳಿತಿಗಾಗಿ, ಲೋಕಸಂಗ್ರಹಕ್ಕಾಗಿ, ಜ್ಞಾನ ಮತ್ತು ಕ್ರಿಯೆ ಇವುಗಳ ಪರಸ್ಪರ ಸಂಬಂಧದ  ರಹಸ್ಯವನ್ನು  ಶರಣ ಮನಗಂಡು ಅದನ್ನು ನಿತ್ಯ ಜೀವನದಲ್ಲಿ ಅನಷ್ಠಾನಕ್ಕೆ ತಂದು ಸಮಾಜಿಕ ಜೀವನವನ್ನು  ಹಸನುಗೊಳಿಸುವ ಭವರೋಗ ವೈದ್ಯನಾಗುತ್ತಾನೆ.............ಹೀಗೆ...ಜೀವನ್ಮುಕ್ತ ಸ್ಥಿತಿಯಲ್ಲಿ ನಿಂತು ಲೋಕ ಕಲ್ಯಾಣಕ್ಕಾಗಿ ಕೈಯನ್ನು ಕೆಳಗೆ ಚಾಚಿ ಜನತೆಯನ್ನು ಮೇಲೆತ್ತಿಕೊಳ್ಳುವ ಮಹಾನುಭಾವಿ” ( ಬಸವ ವಚನ ದೀಪಿಕೆ- ಡಾ. ಎಚ್. ತಿಪ್ಪೇರುದ್ರಸ್ವಾಮಿ).