Saturday, November 23, 2013

Vachana 169: Angushtadalli Sarpadashtavaagalu – When He touches us


VACHANA IN KANNADA
ಅಂಗುಷ್ಟದಲ್ಲಿ ಸರ್ಪದಷ್ಟವಾಗಲು
ಸರ್ವಾಂಗವೆಲ್ಲವೂ ವಿಷಮಯವಾಗಿಪ್ಪುದು ನೋಡ
ಶರಣನೆಂಬಂಗದ ಮೇಲೆ ಲಿಂಗದಷ್ಟವಾಗಲು
ಶರಣನ ಸರ್ವಾಂಗವೆಲ್ಲವು ಲಿಂಗವಪ್ಪುದು ತಪ್ಪದು ನೋಡ
ಲಿಂಗವನಪ್ಪಿ ಲಿಂಗಸಂಗಿಯಾದ  ಅಭಂಗ ಶರಣಂಗೆ
ಅನಂಗಸಂಗವುಂಟೆ? ಮರುಳೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

TRANSLITERATION

aMguShTadlli sarpadaShTavaagalu
sarvaaMgavellavU viShamayavaagippudu nODa
sharaNaneMbaMgada mEle liMgadaShTavaagalu
aa  sharaNana saravaaMgavellavu liMgavappudu tappadu nODa
liMgavanappi  liMgasaMgiyaada abhaMga  sharaNaMge
anaMgasaMgavuMTe? maruLe ,
mahaaliMgaguru shiva siddhEshvara prabhuve.

CLICK HERE FOR A RECITATION
http://youtu.be/JnX8B-wvCec

TRANSLATION (WORDS)
aMguShTadlli (the big toe)  sarpadaShTavaagalu (when a snake bites)
sarvaaMgavellavU ( the  whole body)  viShamayavaagippudu (the poison spreads to )  nODa (you see)
sharaNaneMbaMgada (Sharana’s/ devotee’s body) mEle (on)   liMgadaShTavaagalu (if the Linga/ the God stings, touches)
aa (that) sharaNan (Sharana’s/devotee’s)  saravaaMgavellavu (the whole body)  liMgavappudu (becoming Linga/the God) tappadu nODa (will not be avoided, you see)
liMgavanappi (embracing Linga/ God) liMgasaMgiyaada  (being with God) abhaMga (not fragmented/ whole) sharaNaMge (to the Sharana/devotee)
anaMgasaMgavuMTe? (can the desire come to him/bother him?)  maruLe ( Oh, you fool),
mahaaliMgaguru shiva siddhEshvara prabhuve (Mahalingaguru Shivasiddheshvara Prabhuve)

VACHANA IN ENGLISH
When the snake bites the big toe,
the poison spreads to the whole body, you see!
When the Linga (the Divine) touches the body of the devotee,
that devotee’s whole body becoming Linga will not be avoided, you see!
To the true (unfragmented) devotee embracing Linga and being with the Divine,
how can the other desires bother him, Oh, fool?
Mahalingaguru Shivasiddheshvara Prabhuve! 

COMMENTARY
In this Vachana, Thontada Siddalinga Swamigalu is expressing how a true devotee who is completely one with the Divine is not bothered by any desire from this mundane world. He uses the simile of the poison spreading to the whole body of the one whose big toe is bitten by a snake. Being touched by the Divine, a devotee fills his whole body and mind with the divine and nothing else. He is completely taken by the divine and he is constantly in company of the divine. For such a complete, unfragmented and whole devotee the desires and vagaries of the mundane world are of no consequence. The devotee feels the divinity in himself. He has realized the Self.

The Vachana refers to Linga. As we have discussed earlier, Linga represents the icon of the Self provided by the Guru to the devotee, along with the knowledge of what it represents and how the devotee should strive to go beyond the icon and realize the self it represents. The Self thus realized is the Divine we are referring to above. When we stand in front of a mirror, what we see in the mirror is ourselves. We do not pay any attention to the mirror. The mirror just helped us to see ourselves. Along the same lines, the Linga is an icon. We should use it as a mirror to realize the Self.

The message of the Vachana then is that one should realize the Divine within. Once such realization occurs, the ups and downs of the world around are of no consequence. That is the pure bliss and equanimity we should strive for. 

Let us invite and embrace the divine within us!        

KANNADA COMMENTARY

ಅರ್ಥ:

ಅಂಗುಷ್ಟದಲ್ಲಿ (ಕಾಲಿನ ಹೆಬ್ಬೆರಳಿಗೆ) ಸರ್ಪದಷ್ಟವಾಗಲು (ಹಾವು ಕಚ್ಚಲು)
ಸರ್ವಾಂಗವೆಲ್ಲವೂ (ಇಡೀ ಶರೀರವೆಲ್ಲ) ವಿಷಮಯವಾಗಿಪ್ಪುದು ನೋಡ (ವಿಷಮಯವಾಗುವುದು ನೋಡಿರಿ)
ಶರಣನೆಂಬಂಗದ ಮೇಲೆ (ಶರಣನ ಮೈಯಮೇಲೆ)  ಲಿಂಗದಷ್ಟವಾಗಲು (ಲಿಂಗವು ಕಚ್ಚಲು/ ಧರಿಸಿದಾಗ)
ಶರಣನ ಸರ್ವಾಂಗವೆಲ್ಲವು  (ಶರಣನ ದೇಹವೆಲ್ಲವೂ) ಲಿಂಗವಪ್ಪುದು ತಪ್ಪದು ನೋಡ (ಲಿಂಗವಾಗುವುದನ್ನು ಯಾರೂ ತಪ್ಪಿಸಲಾರರು ನೋಡಿರಿ)
ಲಿಂಗವನಪ್ಪಿ (ಲಿಂಗವನ್ನು ಆಲಿಂಗಿಸಿ, ಸ್ವೀಕರಿಸಿ) ಲಿಂಗಸಂಗಿಯಾದ (ಸದಾ ಲಿಂಗದ ಸಂಗದಲ್ಲಿರುವವನು)  ಅಭಂಗ (ಅಖಂಡ, ಪರಿಪೂರ್ಣ) ಶರಣಂಗೆ (ಶರಣನಿಗೆ)
 ಅನಂಗಸಂಗವುಂಟೆ? ಮರುಳೆ (ಕಾಮನ ಸಂಗವಾಗಲು ಸಾಧ್ಯವೆ? ಮರುಳೆ),
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ. 


ವಚನದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮಿಗಳು, ಲಿಂಗ ಸಂಗಿಯಾದವನಿಗೆ ಕಾಮ ಬಾಧಿಸವುದಿಲ್ಲ ಎಂಬುದನ್ನು ಹೇಳುತ್ತಿದ್ದಾರೆ.
ಕಾಲಿನ ಹೆಬ್ಬೆರಳಿಗೆ ಹಾವು ಕಚ್ಚಿದಾಗ ಇಡಿ ಶರೀರವೆಲ್ಲ ವಿಷಮಯವಾಗುತ್ತದೆ.  ಹಾವು ಕಚ್ಚಿದುದು ಕಾಲಿಗೆ ಮಾತ್ರ. ಆದರೆ ಅದರ ವಿಷದ ಪ್ರಭಾವ ಪೂರ್ತಿ ದೇಹವನ್ನು ಆವರಿಸುತ್ತದೆ. ಅದೇ ರೀತಿಯಾಗಿ ಶರಣನ ಅಂಗದ ಮೇಲೆ ಲಿಂಗದ ದಂಶವಾದಾಗ ಅಂದರೆ ಶರಣನ ಅಂಗದ ಮೇಲೆ ಗುರು ಕೊಟ್ಟ ಲಿಂಗ ಧರಿಸಿದಾಗ, ಶರಣನ ಸರ್ವ ಅಂಗಗಳು ಲಿಂಗವೇ ಆಗುತ್ತವೆ ಎನ್ನುತ್ತಾರೆ. ಗುರುವು ಲಿಂಗದ ಅರ್ಥವನ್ನು ವಿವರಿಸಿ, ಕುರುಹಿನ ರಹಸ್ಯವನ್ನು ಅರುಹಿ ಭಕ್ತನಿಗೆ ಲಿಂಗವನ್ನು ಕೊಟ್ಟಾಗ, ಆತ ಅದನ್ನು ಅರ್ಥಮಾಡಿಕೊಂಡು ಧರಿಸಿದಾಗ ಆತನ ಎಲ್ಲ ಅಂಗಗಳೂ ಲಿಂಗವಾಗುತ್ತವೆ. ಹಾಗೆ ಅಗುವುದನ್ನು ಯಾರೂ ತಪ್ಪಿಸಲಾರರು ಎನ್ನುತ್ತಾರೆ ಸಿದ್ಧಲಿಂಗರು. ಹೇಗೆ ಹಾವು ಕಚ್ಚಿದಾಗ ವಿಷ ಇಡೀ ಶರೀರವೆಲ್ಲ ವ್ಯಾಪಿಸುತ್ತದೆಯೋ ಹಾಗೆಯೇ ಲಿಂಗದ ಪ್ರಭಾವದಿಂದ ಇಡೀ ದೇಹವು ಲಿಂಗವಾಗುತ್ತದೆ. ಎಂದರೆ ಆತನ ಎಲ್ಲ ನಡೆ ನುಡಿಗಳು ಲಿಂಗಮಯವಾಗುತ್ತವೆ. ಆತ ಲಿಂಗವನ್ನಲ್ಲದೆ ಬೇರೇನನ್ನೂ ಕಾಣುವುದಿಲ್ಲ. ಹಾಗಾಗುವುದನ್ನು ಯಾರೂ ತಪ್ಪಿಸಲಾರರು ಎಂದು ಹೇಳುವಲ್ಲಿ ಸಿದ್ಧಲಿಂಗರ ಅಖಂಡ ಆತ್ಮವಿಶ್ವಾಸ ತೋರಿ ಬರುತ್ತದೆ. ಏಕೆಂದರೆ ಲಿಂಗದ ಪ್ರಭಾವವೇ ಹಾಗಿದೆ. ಒಂದುಸಲ ಅದನ್ನು ಅನುಭವಿಸಿದವನ ಮನಸ್ಸು ಬೇರೆಡೆಗೆಹೋಗಲು ಸಾಧ್ಯವಿಲ್ಲ. ಶರೀರದ ಯಾವುದೋ ಒಂದು ಭಾಗಕ್ಕೆ ಅದು ಮುಟ್ಟಿದರೂ ಸಾಕು, ಮನದ ಯಾವುದೋ ಒಂದು ಮೂಲೆಗೆ ಅದು ಸೋಂಕಿದರೂ ಸಾಕು ಅದು ಎಲ್ಲವನ್ನೂ ಆವರಿಸಿಕೊಳ್ಳುತ್ತದೆ  ಅದನ್ನು ಯಾರೂ ತಪ್ಪಿಸಿಲು ಸಾಧ್ಯವಿಲ್ಲ. ಎಲ್ಲವೂ ಲಿಂಗವಾದಾಗ ಅನುಭಾವಕ್ಕೆ ಬರುವ ಭಾವ ಅಖಂಡವಾದದ್ದು. ಅಂತಹ ಅಖಂಡ ಭಾವವನ್ನು ಹೊಂದಿದವನ ಹತ್ತಿರ ಕಾಮ ಅಥವಾ ಇತರ ಕಾಮನೆಗಳು ಸುಳಿಯಬಲ್ಲುವೆ? ಖಂಡಿತ ಸಾಧ್ಯವಿಲ್ಲ ಎಂಬುದು ಇದರ ತಾತ್ಪರ್ಯ.
ಸರ್ವಾಂಗವೆಲ್ಲ ಲಿಂಗವಪ್ಪುದುಎಂದರೆ ಏನು ಅರ್ಥ?  ಕಣ್ಣಿಗೆ ಕಾಣುವ ಜಗತ್ತಿನ ಹಿಂದಿರುವ ಸತ್ಯ. ಸತ್ಯ ನಮ್ಮ ಒಳಗೂ ಇದೆ. ಲಿಂಗವೆಂಬ ಕನ್ನಡಿಯಲ್ಲಿ ಅದನ್ನು ನೋಡಿಕೊಳ್ಳುವುದು. ತಿಪ್ಪೆರುದ್ರಸ್ವಾಮಿಯವರು ಹೇಳುವಂತೆ, ಕನ್ನಡಿಯನ್ನು ನೋಡಿದಾಗ ನಾವು ಕನ್ನಡಿಯನ್ನು ಗಮನಿಸುವುದಿಲ್ಲ ನಾವು ನಮ್ಮನ್ನೇ ಗಮನಿಸುತ್ತೇವೆ. ಅದೇ ರೀತಿಯಾಗಿ ಲಿಂಗವೆಂಬ ಕನ್ನಡಿಯನ್ನು ಹಿಡಿದುಕೊಂಡು ನಾವು ನಮ್ಮ ಒಳಗನ್ನು ಗಮನಿಸಬೇಕು. ಆಗ ನಮಗೆ ಜಗತ್ತಿನ ಹಿಂದೆ ಇರುವ ಪರವಸ್ತು ಕಾಣುತ್ತದೆ. ಅದು ಕಂಡಾಗ ಇನ್ನು ಬೇರೇನೂ ಬೇಕಾಗುವುದಿಲ್ಲ. ಅದು ಎಲ್ಲೆಡೆಯೂ ನಿಚ್ಚಳವಾಗಿ ಕಾಣುತ್ತದೆ. ಅಂತಹ ಸ್ಥಿತಿಯಲ್ಲಿ ಬೇರೆ ಆಸೆಗಳು ಮನದಲ್ಲಿ ಹುಟ್ಟುವುದಿಲ್ಲ್ಲ ಎನ್ನುತ್ತಾರೆ ಸಿದ್ಧಲಿಂಗಸ್ವಾಮಿಗಳು.

  

1 comment:

  1. Sir can u pls write interpretation of Guru Basavanna's vachana ಅಯ್ಯಾ ನೀನು ನಿರಾಕಾರವಾಗಿದ್ದಲ್ಲಿ . If I am not wrong this vachana speaks about genesis of universe, life. I really want to know its meaning, especially in your viewpoint and perspective. Hope u fulfill my wish

    ReplyDelete