Friday, May 27, 2011

Vachana 41 - kAyakadalli nirutanAdoDe - The Lord is within the realm of blissful work

ಕಾಯಕದಲ್ಲಿ ನಿರುತನಾದೊಡೆ ಗುರುದರ್ಶನವಾದಡೂ ಮರೆಯಬೇಕು
 ಲಿಂಗ ಪೂಜೆಯಾದಡೂ ಮರೆಯಬೇಕು
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು

TRANSLITERATION

kAyakadalli nirutanAdoDe gurudarSanavAdaDU mareyabEku
liMga pUjeyAdaDU mareyabEku
jaMgama muMdiddaDU haMgu hariyabEku
kAyakavE kailAsavAdakAraNa
amarESvara liMgavAyittAdaDU kAyakadoLagu

CLICK HERE TO HEAR IT:
http://www.youtube.com/watch?v=8ASfCu4Uh38

TRANSLATION

kAyakadalli (in blissful work) nirutanAdoDe(if immersed) gurudarSanavAdaDU(even if Guru appears) mareyabEku(should forget, don’t acknowledge)
liMga (Linga) pUjeyAdaDU(if worshipping) mareyabEku(should forget, don’t acknowledge)
jaMgama muMdiddaDU (even if Jangama appears before you) haMgu(obligation) hariyabEku (don’t feel)
kAyakavE kailAsavAdakAraNa (since work is auspicious, bliss)
amarESvara liMgavAyittAdaDU (even Lord Amareshvara Linga ) kAyakadoLagu (comes within realm of blissful work)

When immersed in blissful work,
even if Guru appears, ignore him,
ignore worshipping Linga too,
don’t feel obligated to serve even if JaMgama appears before you.
Since work is bliss,
Even Lord Amareshvara Linga comes within the realm of blissful work!

 
COMMENTARY

Shiva Sharanas believed that “kAyakavE kailAsa”. “kAyaka” is work or duty, and “kailAsa” is the abode of Lord Shiva. The goal of all devotees is to reach the abode of Shiva, which is blissful and hence is equivalent to so called “heaven”. As such, the above phrase is translated as “work is heaven” meaning that through pure, unselfish work we can create the heaven here on Earth. The previous posting (Vachana 40) considered work as worshipping of Guru and Linga, and advocated the fruits of work be utilized in dAsOha (dAsa = servant; ha or hum = I) or serving Jangamas (wandering devotees who have dedicated their lives to lift fellow beings to Godliness) and the community. In this sense this phrase is also translated as “work is worship”. Nevertheless, the message is that we should perform our work with utmost devotion for the welfare of the Universe.
In this Vachana, Sharana Aydakki Marayya takes the importance of blissful work to the next level saying that Guru, Linga and Jangama should all be ignored when one is immersed in it. He says that even Lord Amareshvara Linga (Shiva) comes within the realm of blissful work. Amareshvara Linga is the signature of Aydakki Marayya, in all his Vachanas.

Shiva Sharanas cultivated a very high respect for labor. They believed in performing their trades with utmost devotion with the feeling that they are serving the Lord through their work. They did not stop at meeting the needs of the family with the fruits of their work. They minimized their needs to enable distribution of what they earned for the benefit of the fellow beings. The message then is that we should be the best in our careers, be indebted to the Lord for the opportunities provided to us and devote our work to Him. We should meet the minimized needs of the Family through our careers and share our wealth for the benefit of the community. That is how we can bring the heaven to Earth.
Let us follow Career – Family – Community progression through utmost devotion!

KANNADA COMMENTARY

ಇದು ಆಯ್ದಕ್ಕಿಮಾರಯ್ಯನವರ ವಚನ. ಅವರು ಕಾಯಕಕ್ಕೆ ಕೊಟ್ಟ ಮಹತ್ವ ಅದ್ಭುತವಾದದ್ದು. ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಆದರ್ಶಪ್ರಾಯವಾದದ್ದು. ಅವರು ಹೇಳುತ್ತಾರೆ: ಕಾಯಕದಲ್ಲಿ ಮಗ್ನರಾದಾಗ ಗುರುದರ್ಶನವನ್ನಾದರೂ ಮರೆಯಬೇಕು. ಲಿಂಗಪೂಜೆಯಾದರೂ ಮರೆಯಬೇಕು, ಜಂಗಮನು ಬಂದು ಮುಂದೆ ನಿಂತರೂ ಆತನ ಹಂಗಿಗೆ ಒಳಗಾಗದೆ ಕಾಯಕವನ್ನು ಮುಂದುವರೆಸಬೇಕು. ಏಕೆಂದರೆ ಕಾಯಕವೇ ಕೈಲಾಸ. ಆದ ಕಾರಣ ಮೇಲೆ ಹೇಳಿದ ಗುರು ಲಿಂಗ ಜಂಗಮ ಎಲ್ಲರೂ ಆ ಕಾಯಕದ ಪರಿಧಿಯ ಒಳಗೇ ಬರುತ್ತಾರೆ.

ಕಾಯಕವೇ ಕೈಲಾಸ ಎಂದು ಶರಣರು ಹೇಳಿದುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಒಳಿತು. ಸರಳವಾಗಿ ಹೇಳಬೇಕೆಂದರೆ ಕಾಯಕವೆಂದರೆ ಕೆಲಸ. ಅದು ಯಾವ ಕೆಲಸ ವಾದರೂ ಆಗಬಹುದು. ಕೆಲಸದಲ್ಲಿ ಮೇಲು ಕೀಳೆಂಬುದಿಲ್ಲ. ಶರಣರು ಚಪ್ಪಲಿ ಹೊಲಿಯುವ ಕೆಲಸದಿಂದ ಹಿಡಿದು ಮಂತ್ರಿಯ ಕೆಲಸದವರೆಗು ಎಲ್ಲ ರೀತಿಯ ಕೆಲಸಗಳನ್ನು ಅತ್ಯಂತ ಪವಿತ್ರ ಭಾವನೆಯಿಂದ ಮಾಡಿ ಕೆಲಸಕ್ಕೆ ಉದಾತ್ತತೆಯನ್ನು ತಂದುಕೊಟ್ಟಿದ್ದಾರೆ. ಕೆಲಸ ಉದಾತ್ತವಾದ ಕಾಯಕವಾಗುವುದು ಹೇಗೆ? ಕೇವಲ ತನ್ನ ಅಥವಾ ತನ್ನ ಹೆಂಡತಿ ಮಕ್ಕಳ ಹೊಟ್ಟೆಪಾಡಿಗಾಗಿ ಮಾಡುವ ಕೆಲಸ ಕಾಯಕವೆನಿಸದು. ಏಕೆಂದರೆ ಅದರಲ್ಲಿ ಸ್ವಾರ್ಥ ಭಾವನೆಯಿರುತ್ತದೆ. ತಾನು ಈ ವಿಶ್ವದ ಒಂದು ಅಂಶ, ವಿಶ್ವ ಬಿಟ್ಟು ತಾನು ಬೇರೆಯಲ್ಲ. ಆದ್ದರಿಂದ ತನ್ನ ದುಡಿತದ ಫಲ ವಿಶ್ವಕ್ಕಾಗಿಯೂ ವಿನಿಯೋಗವಾಗಬೇಕು ಎಂಬ ಉದಾತ್ತ ಭಾವನೆಯಿಂದ ದಾಸೋಹ ಮಾಡುವುದರ ಮೂಲಕ ಸಾಮಾನ್ಯವಾದ ಕೆಲಸವನ್ನು ಉದಾತ್ತವಾದ ಕಾಯಕದ ಎತ್ತರಕ್ಕೇರಿಸಿದರು ಶರಣರು. ಆದ್ದರಿಂದ ಯಾವದೇ ಕೆಲಸ, ಮೋಸ, ವಂಚನೆಯಿಲ್ಲದೆ, ನಿಸ್ವಾರ್ಥ ಭಾವನೆಯಿಂದ ಮಾಡಿ ಅದರ ಫಲವನ್ನು ಜಂಗಮರಿಗಾಗಿ ದಾಸೋಹದಲ್ಲಿ ವ್ಯಯಿಸುವ ವ್ಯಕ್ತಿಯ ಕೆಲಸವು ಕಾಯಕವೆನಿಸಿಕೊಳ್ಳುತ್ತದೆ.

ಇನ್ನು ಕೈಲಾಸವೆಂದರೇನು ಎಂಬುದನ್ನು ನೋಡೋಣ.

ಸಾಮಾನ್ಯವಾಗಿ ನಾವು, “ಕೈಲಾಸ” ವೆಂದರೆ ಸ್ವರ್ಗವೋ, ದೇವಲೋಕವೋ ಎಂದು ತಿಳಿಯುತ್ತೇವೆ. ಆದರೆ ಶರಣರು ಸಾಮಾನ್ಯವಾಗಿ ಪ್ರಚಲಿತವಾದಂತಹ ಅರ್ಥದಲ್ಲಿ ಸ್ವರ್ಗ ಅಥವಾ ದೇವಲೋಕದಲ್ಲಿ ನಂಬಿಕೆ ಇಟ್ಟವರಲ್ಲ. “ಕೈಲಾಸ”ವೆಂದರೆ ಶಿವನ ಧಾಮ. ಶಿವ ಎಂದರೆ ಇಲ್ಲಿ ತ್ರಿಶೂಲಧಾರಿ, ನಾಗಾಭರಣ, ಶಶಿಧರ, ಗಂಗಾಧರ ಇತ್ಯಾದಿ ಆಗಿ ಹಿಮಾಲಯದಲ್ಲಿ ಇರುವಂತಹವನಲ್ಲ. “ಶಿವ” ಎಂದರೆ ಮಂಗಳಕರವಾದದ್ದು, ಯಶಸ್ಸನ್ನು ತಂದು ಕೊಡುವಂತಹದು ಎಂದರ್ಥ. ಹೀಗಾಗಿ ಕಾಯಕವೇ ಕೈಲಾಸ ವೆಂದರೆ ಸ್ವಾರ್ಥ, ಮೋಸ, ವಂಚನೆಯಿಲ್ಲದೆ, ತನ್ನ ದುಡಿತದ ಫಲವು ಜಂಗಮರಿಗೆ ಸೇರಬೇಕು ಎನ್ನುವ ಪವಿತ್ರವಾದ ಭಾವನೆಯಿಂದ ಮಾಡುವ ಕೆಲಸವು ಮಂಗಳಕರವಾದದ್ದು ಎಂದರ್ಥ. ಹೀಗಾಗಿ ಪವಿತ್ರವಾದ, ಮಂಗಳಕರವಾದ ಕಾಯಕ ಮಾಡುವಾಗ ಯಾವ ಅಡ್ಡಿಯೂ ಉಂಟಾಗಬಾರದು. ಗುರು ಲಿಂಗ ಜಂಗಮರಿಂದ ಅದಕ್ಕೆ ಅಡ್ಡಿಯುಂಟಾಗುವ ಹಾಗಿದ್ದರೆ ಅವರನ್ನೂ ಕಡೆಗಣಿಸಬೇಕು ಎನ್ನುತ್ತಾರೆ ಆಯ್ದಕ್ಕಿ ಮಾರಯ್ಯನವರು.

ದಿನ ನಿತ್ಯದ ಬದುಕಿನಲ್ಲಿ ನಾವು ನೋಡುತ್ತೇವೆ: ಯವುದೋ ಕೆಲಸದಲ್ಲಿ ನಿರತರಾದಾಗ ಅತಿಥಿಗಳು ಬರುತ್ತಾರೆ, ಮಾತಿಗೆ ತೊಡಗುತ್ತಾರೆ. ಆಗ ಆ ಕೆಲಸದಲ್ಲಿದ್ದ ಏಕಾಗ್ರತೆಗೆ ಭಂಗ ಬರುತ್ತದೆ. ಕೆಲಸಕೆಟ್ಟುಹೋಗುತ್ತದೆ. ಮಾಡುತ್ತಿರುವ ಒಂದು ಕೆಲಸ ಕೆಟ್ಟು ಹೋದರೆ ಯಾರು ಯಾರಿಗೆ ಎಷ್ಟೆಷ್ಟು ನಶ್ಟವಾಗುತ್ತದೆ ಎನ್ನುವುದನ್ನು ಗಮನಿಸಿ ನೋಡಿದರೆ ಅದರಿಂದ ಆಗುವ ಹಾನಿಯನ್ನು ಮನಗಾಣ ಬಹುದು. ಉದಾಹರಣೆಗೆ ಒಂದೆರಡು ಕೆಲಸಗಳನ್ನು ನೋಡೋಣ: ಮನೆಯ ಕೈತೋಟದ ಕೆಲಸ ಅಥವಾ ಲೇಖನದ ಕೆಲಸದಲ್ಲಿ ತೊಡಗಿ ಕೊಂಡಾಗ ಮಹತ್ವದ ವ್ಯಕ್ತಿ ಬಂದರೆಂದು ಕೊಳ್ಳೋಣ. ಅವರನ್ನು ಉಪಚರಿಸಲು ನಾವು, ತೊಡಗಿಕೊಂಡ ಕೆಲಸವನ್ನು ಬಿಟ್ಟು ಹೋಗುತ್ತೇವೆ ಎಂತಿಟ್ಟುಕೊಳ್ಳೋಣ. ಆಗ ಕೈತೋಟದ ಕೆಲಸ ಮತ್ತು ಲೇಖನದ ಕೆಲಸಕ್ಕೆ ಏನಾಗುತ್ತದೆ? ತೋಟದ ಸಸಿಗಳಲ್ಲಿರುವ ಬಾಡಿದ ಎಲೆಗಳನ್ನು ತೆಗೆಯುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದು, ನೀರುಣಿಸಿವುದು ಇತ್ಯಾದಿ ಕೆಲಸದಲ್ಲಿ ಮನಸ್ಸು ತೊಡಗಿಕೊಂಡಿರುತ್ತದೆ. ಲೇಖನದ ಕೆಲಸದಲ್ಲಿದ್ದಾಗ, ಲೇಖಕನ ಮನಸ್ಸು, ಆಯ್ಕೆ ಮಾಡಿದ ವಿಷಯದಬಗ್ಗೆ ಯೋಚಿಸುವುದರಲ್ಲಿ, ಅದನ್ನು ಯಾವ ಯಾವ ಕ್ರಮದಲ್ಲಿ ಬರೆಯಬೇಕು, ಯಾವ ಶೈಲಿಯಲ್ಲಿ ಅಭಿವ್ಯಕ್ತಿಸಬೇಕು, ಯಾವ ರೀತಿಯ ಪದಗಳನ್ನು ಬಳಸಬೇಕೆಂಬ ನಾನಾ ವಿಷಯಗಳಲ್ಲಿ ಲೇಖಕನಿಗೆ ತಿಳಿಯದಂತೆಯೇ ತೊಡಗಿಕೊಂಡಿರುತ್ತದೆ. ಅತಿಥಿಗಳಿಗಾಗಿ ಅದನ್ನು ಅರ್ಧದಲ್ಲಿ ಬಿಟ್ಟು ಹೋದಾಗ ಈ ಎಲ್ಲ ಏಕಾಗ್ರತೆ ಗೆ ಭಂಗ ಬರುತ್ತದೆ. ಕೆಲ ಹೊತ್ತಿನ ನಂತರ ಮತ್ತೆ ಹಿಂದಿರುಗಿ ಬಂದು, ಬಿಟ್ಟ ಕೆಲಸವನ್ನು ಕೈಗೊಂಡಾಗ ಆ ಮೊದಲಿನ ಏಕಾಗ್ರತೆಗೆ ಭಂಗ ಬಂದು ಕೆಲಸದ ನಿರಂತರ ಪ್ರವಾಹಕ್ಕೆ ಧಕ್ಕೆ ಉಂಟಾಗುತ್ತದೆ. ಮನಸ್ಸು ಬೇರೆ ವಿಷಯದಲ್ಲಿ ವಿಹರಿಸತೊಡಗುತ್ತದೆ ಇಲ್ಲವೆ, ಕೆಲಸ ಸರಿಯಾಗಿ ಮಾಡಲಾಗಲಿಲ್ಲವೆಂದು ವ್ಯಗ್ರವಾಗುತ್ತದೆ, ಸಮಯ ನಷ್ಟವಾಗುತ್ತದೆ, ಕೆಲಸಕ್ಕೂ ಹಾನಿಯುಂಟಾಗುತ್ತದೆ, ಈ ಎಲ್ಲದರ ಪರಿಣಾಮ, ತೋಟದ ಕೆಲಸದ ಸಂಬಂಧದಲ್ಲಿ, ಕೆಲಸ ಮಾಡುವ ವ್ಯಕ್ತಿಯ ಮೇಲೂ, ಸಸಿಗಳ ಮೇಲೂ, ಪರಿಸರದ ಮೇಲೂ, ಲೇಖನದ ವಿಷಯದಲ್ಲಿ ಲೇಖನದ ಮೇಲೂ ಆ ಮುಖಾಂತರ ಓದುಗರ ಮೇಲೂ, ಆಯಾ ಕೆಲಸಕ್ಕೆ ಸಂಬಂಧಪಟ್ಟ ಪರಿಸರದ ಮೇಲೂ ಉಂಟಾಗುತ್ತದೆ. ಅಪರೋಕ್ಷವಾಗಿ ಇದರ ಪರಿಣಾಮ ಇಡೀ ಸಮಾಜದ ಮೇಲೆ ಆಗುತ್ತದೆ. ಆಂಶಿಕವಾಗಿಯಾದರೂ, ಬ್ರಹ್ಮಾಂಡದ ಮೇಲೂ ಅದರ ಪರಿಣಾಮವಾಗುತ್ತದೆ. ಅಂದರೆ ಬ್ರಹ್ಮಾಂಡ ಮತ್ತು ಲಿಂಗಾಂಗವೂ ಅದರ ಪರಿಣಾಮದ ವ್ಯಾಪ್ತಿಯಲ್ಲಿ ಬರುತ್ತವೆ ಎಂದಾಯಿತು. ಇದನ್ನುಳಿದು ಬೇರೆ ಇನ್ನಾವ ಗುರು ಲಿಂಗ ಜಂಗಮರು ಇರಲು ಸಾಧ್ಯ? ಅದಕ್ಕಾಗಿಯೇ ಆಯ್ದಕ್ಕಿ ಮಾರಯ್ಯನವರು, ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗೆ ಎಂದು ಹೇಳುತ್ತಾರೆ. ಲಿಂಗ ಮತ್ತು ಕಾಯಕ ಎರಡನ್ನೂ ಒಂದೇ ಅಥವಾ ಕಾಯಕದಲ್ಲಿಯೇ ಲಿಂಗವಿದೆ ಎಂದ ಅವರ ಕಾಣ್ಕೆಗೆ ಸರಿಸಾಟಿಯಿಲ್ಲ.

ಮೇಲೆ ಹೇಳಿರುವುದು ಒಂದು ಸಾಮಾನ್ಯವಾದ ಚಿಕ್ಕ ಉದಾಹರಣೆ. ಇದು ಎಲ್ಲ ಕೆಲಸಕ್ಕೂ ಅನ್ವಯವಾಗುತ್ತದೆ. ನಾವು ಗುರುತರವಾದ ಹೊಣೆಗಳನ್ನು ವಹಿಸಿಕೊಂಡಂತೆ ಅವುಗಳಿಗೆ ಭಂಗ ಉಂಟಾದಾಗ ಆಗುವ ಪರಿಣಾಮವೂ ಗುರುತರವಾಗಿರುತ್ತದೆ. ಇಂತಹ ಸೂಕ್ಷ್ಮಗಳನ್ನೆಲ್ಲ ಮನಗಂಡಿದ್ದರು ಶರಣರು. ಅದಕ್ಕೇ ಕಾಯಕದಲ್ಲಿ ನಿರತನಾದೊಡೆ ಗುರು,ಲಿಂಗ, ಜಂಗಮರ ಹಂಗು ತೊರೆಯಬೇಕು ಎಂದು ಹೇಳುತ್ತಾರೆ.

ಒಂದು ಸಣ್ಣ ಕೆಲಸದ ಪರಿಣಾಮ ಇಡೀ ವಿಶ್ವದ ಮೇಲೆ ಆಗುತ್ತದೆ ಎಂದರೆ ಅನೇಕರು ನಂಬದೆ ಇರಬಹುದು. ಆದರೆ ಇಂದಿನ ವಿಜ್ಞಾನವೂ ಕೂಡ ಅದನ್ನು ಹೇಳುತ್ತದೆ. ಹಿಮಾಲಯದ ಪರ್ವತ ಭಾಗದಲ್ಲಿ ಭೂಕಂಪವಾದರೆ ನಾರ್ವೆಯ ಶಾಂತ ಕೆರೆಯು ಪ್ರಕ್ಷುಬ್ಢಗೊಳ್ಳುತ್ತದೆ. ಈ ರೀತಿಯ ನಾನಾ ಉದಾಹರಣೆಗಳನ್ನು ಕೊಡಬಹುದು. ಅಂತರ್ಜಾಲ ಇತರ ಆಧುನಿಕ ತಂತ್ರಜ್ಞಾನದಿಂದ ಹಾಗೂ ಕೆಲವರು ಅದರದೇ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಅದನ್ನು ಗುರುತಿಸಲು ಸಾಧ್ಯವಾಗಿದೆ. ಸ್ಥೂಲ ಜಗತ್ತಿನಲ್ಲಿ ಒಂದು ಪ್ರಾಕೃತಿಕ ಘಟನೆಯ ಪರಿಣಾಮ ಸಾವಿರಾರು ಮೈಲಿ ದೂರದಲ್ಲಿ ಕಂಡು ಬರುವಂತಿದ್ದಾಗ, ಸೂಕ್ಷ್ಮಜಗತ್ತಿನಲ್ಲಿಯೂ ಕೂಡ ಅದು ನಡೆಯಲೇ ಬೇಕು. ಅದನ್ನು ಗುರುತಿಸಲು ನಮ್ಮ ದೃಷ್ಟಿಯೂ ಅಷ್ಟೇ ಸೂಕ್ಷ್ಮವಾಗಿರಬೇಕು. ಉಪನಿಷತ್ತಿನ ದೃಷ್ಟಾರರು, ಶರಣರು ಇದನ್ನು ತಮ್ಮ ಅನುಭಾವದಿಂದ ಕಂಡುಕೊಂಡಿದ್ದರು. ಅವರ ಸೂಕ್ಷ್ಮ ದೃಷ್ಟಿಯನ್ನು ಮೆಚ್ಚಲೇ ಬೇಕು. ಕಾಯಕವನ್ನು ಗುರು, ಲಿಂಗ, ಜಂಗಮರಿಗಿಂತ ಮೇಲಿನ ಸ್ಥಾನದಲ್ಲಿ ಇಟ್ಟ ಅವರ ಸಾಮಾಜಿಕ ಕಳಕಳಿಯನ್ನು, ಕಾಯಕದ ಬಗ್ಗೆ ಅವರಿಗಿದ್ದ ಪೂಜ್ಯ ಭಾವನೆಯನ್ನು ಪೂರ್ತಿಯಾಗಿ ಪದಗಳಲ್ಲಿ ವ್ಯಕ್ತಗೊಳಿಸಲು ಸಾಧ್ಯವೆ? ಅವರ ಅಂತರಂಗವನ್ನು ಹೊಕ್ಕು ಕಾಯಕದ ಮಹತ್ವ ವನ್ನು ಅರಿಯುವ ಸಾಮರ್ಥ್ಯ ( ಶಾಂತ ಮನಸ್ಸು) ಮತ್ತು ಆಸಕ್ತಿ ನಮಗಿದೆಯೆ

ಅದನ್ನು ಅರಿಯಲು ಆಯ್ದಕ್ಕಿ ಮಾರಯ್ಯ ಮತ್ತು ಅವರ ಪತ್ನಿ ಲಕ್ಕಮ್ಮನ ಬಗ್ಗೆ ತಿಳಿಯುವುದು ಒಳ್ಳೆಯದು. ಅದಕ್ಕೆ ಮುಂದಿನ ವಚನವನ್ನು ನೋಡೋಣ.





Friday, May 20, 2011

Vachana 40: Arambava Maduvenayya - The purpose of Work

ಆರಂಬವ ಮಾಡುವೆನಯ್ಯಾ ಗುರುಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ ಲಿಂಗಪೂಜೆಗೆಂದು
ನಾನು ಪರಸೇವೆಯ ಮಾಡುವೆನಯ್ಯಾ ಜಂಗಮ ದಾಸೋಹಕ್ಕೆಂದು
ನಾನಾವ ಕರ್ಮಂಗಳ ಮಾಡಿದರೆಯೂ ಆ ಕರ್ಮದ ಫಲಭೋಗ ನೀ ಕೊಡುವೆ ಎಂಬುದ ನಾನು ಬಲ್ಲೆನು
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದ ಕ್ರೀಯ ಮಾಡೆನು
ನಿಮ್ಮ ಸೊಮ್ಮಿಂಗೆ ಸಲಿಸುವೆನು, ನಿಮ್ಮಾಣೆ ಕೂಡಲಸಂಗಮದೇವಾ

TRANSLITERATION

AraMbava mADuvenayyA gurupUjegeMdu,
nAnu bevahArava mADuvenayyA liMgapUjegeMdu
nAnu parasEveya mADuvenayyA jaMgama dAsOhakkeMdu
nAnAva karmaMgaLa mADidareyU A karmada PalaBOga nI koDuve eMbuda nAnu ballenu
nI koTTa dravyava nimagallade mattoMda krIya mADenu
nimma sommiMge salisuvenu, nimmANe kUDalasaMgamadEvA

CLICK HERE TO HEAR IT:

http://www.youtube.com/watch?v=sqakDF-j7kU

TRANSLATION

AraMbava(till the land) mADuvenayyA(I do) gurupUjegeMdu(to worship my Guru),
nAnu(I) bevahArava(trade) mADuvenayyA(do) liMgapUjegeMdu(for the worship of Linga)
nAnu(I) parasEveya(serve others) mADuvenayyA( do) jaMgama dAsOhakkeMdu(sharing of wealth with Jangamas, i.e. wandering devotees)
nAnAva(whatever) karmaMgaLa(work) mADidareyU(I do) A(that) karmada PalaBOga(fruits of actions) nI(you) koDuve(will give ) eMbuda(that) nAnu(I) ballenu(know)
nI(You) koTTa(given by) dravyava(money, wealth) nimagallade(other than you) mattoMda(for anything else) krIya(use) mADenu (I will not)
nimma(your ) sommiMge(cause) salisuvenu(I will offer (employ)), nimmANe(I swear upon you) kUDalasaMgamadEvA (Lord of Meeting Rivers)

I till the land to worship my guru/teacher
I trade in order to worship my linga/god
My service to others is sharing of wealth with Jangamas
Whatever I do, I know that You will give me the fruits of my actions
I swear on you oh Lord of the meeting rivers!
I would never misuse the wealth granted by you and spend it on another,
I would employ it for your cause alone.

COMMENTARY

This vachana emphasizes the ‘Kaayakave Kailaasa’ (work is heaven) concept that the Sharanas believed in and practiced. Basavanna says that no matter what he does, it is for the Lord and what he receives as a result of his actions is the boon from the Lord. As such, he is surrounded by and thinking of the Lord always and hence the heaven is with him. Basavanna was neither a farmer nor a businessman. But he uses these two occupations of the day to represent the typical duties (work) of individuals in the society, and says that no matter what we do, it should be dedicated to the service of the society in general and the Lord in particular.

Basavanna dedicates the fruits of his action to Guru (the teacher), Linga (representative of the Lord within) and Jangama (wandering devotee of the Lord) as representatives of the Lord. Guru, the teacher is the one that relieves the frustrations of the mundane life and leads us in the spiritual path. His patience, kindness and love make our spiritual path smoother. As such, his aura would be around us no matter what we are doing. Thus the work is indeed the worship of Guru. Linga is the union of the Universal and the individual souls. It is the icon of the Lord within us. Once we realize it, the distinction between the ‘I’ and the ‘world’ vanishes. Then, every action is in the interest of the Universe. Jangama is the one who has all the qualities of the Guru, has realization of the Linga, and is committed to elevate living beings from the mundane to higher level. Performing our work and sharing the wealth with Jangamas is thus our contribution to enhance the Godliness of the fellow beings.

Finally, Basavanna exhibits his immense humility saying that he knows that the Lord will deliver him fruits for his work. Fruits that are delivered by the Lord, Basavanna dedicates them completely to the service of the Lord.

Let us work towards uniting ourselves with the world while sharing the fruits of our work with our fellow beings, as a service to the Lord.

KANNADA COMMENTARY

ಈ ವಚನದಲ್ಲಿ ಬಸವಣ್ಣನವರು ಕಾಯಕದ ಬಗ್ಗೆ ಹೇಳುತ್ತಿದ್ದಾರೆ. ಅವರು ಕಾಯಕವನ್ನು ಹೇಗೆ ಮಾಡುತ್ತಾರೆ ಎಂಬುದನ್ನು ವಿವರಿಸುತ್ತಿದ್ದಾರೆ. ಅವರು ಯಾವುದೇ ಕೆಲಸ ಮಾಡಿದರೂ ಅದು ಕೂಡಲಸಂಗಮನಿಗಾಗಿಯೇ ಎಂದು ಹೇಳುತ್ತಾರೆ. ಅವರು ಕೃಷಿಯ ಕೆಲಸಮಾಡಬಹುದು, ವ್ಯವಹಾರ, ವ್ಯಾಪಾರವನ್ನು ಮಾಡಬಹುದು ಅಥವಾ ಇತರರ ಸೇವೆಮಾಡಬಹುದು, ಅವೆಲ್ಲವು ಗುರು, ಲಿಂಗ ಜಂಗಮ ದಾಸೋಹಕ್ಕೆ. ಅವರು ಯಾವುದೇ ಕೆಲಸಮಾಡಿದರೂ ಅದರ ಫಲ ಕೂಡಲಸಂಗಮನು ಕೊಟ್ಟೇ ಕೊಡುತ್ತಾನೆ ಎಂಬುದು ಅವರಿಗೆ ತಿಳಿದಿದೆ. ಆ ಕೆಲಸಕ್ಕೆ ದೊರೆತ ಪ್ರತಿಫಲವನ್ನು ಆ ಸಂಗಮನಿಗಲ್ಲದೆ ಅಥವಾ ಆತನಿಗೆ ಸಂಬಂಧ ಪಟ್ಟ ಕೆಲಸಗಳಿಗಲ್ಲದೆ ಬೇರೆಯದಕ್ಕೆ ಸಲ್ಲಿಸೆನು ಎಂದು ಆಣೆಮಾಡಿ ಹೇಳುತ್ತಾರೆ.

ನಮಗೆ ತಿಳಿದಂತೆ ಬಸವಣ್ಣನವರು ಕೃಷಿಯ ಕೆಲಸ ಮಾಡಿದವರಲ್ಲ. ಆದರೂ ಅವರು ಇಲ್ಲಿ ”ಆರಂಬವ ಮಾಡುವೆನು” ಎಂದು ಹೇಳುತ್ತಿದ್ದಾರೆ. ಇಲ್ಲಿ ಅದನ್ನು ಉದಾಹರಣೆಯ ರೂಪದಲ್ಲಿ ಹೇಳುತ್ತಿದ್ದಾರೆ. ತಾವು ಯಾವುದೇ ಕೆಲಸ, ದುಡಿತ, ವ್ಯಾಪಾರ ಅಥವಾ ಇನ್ನಾರದೋ ಸೇವೆ ಮಾಡಿದರೂ ಅದು ಗುರು, ಲಿಂಗ, ಜಂಗಮಕ್ಕಾಗಿಯೇ ಮಾಡುತ್ತಾರಲ್ಲದೆ ಬೇರಾವುದಕ್ಕೂ ಅಲ್ಲ, ಎನ್ನುತ್ತಾರೆ.

ದಿನನಿತ್ಯದ ಬದುಕಿನ ತೊಳಲಾಟದಿಂದ ಬೇಸತ್ತ ಶಿಷ್ಯನನ್ನು ಅವುಗಳಿಂದ ಬಿಡಿಸಿ ಶಿವಮಾರ್ಗವನ್ನು ತೋರಿಸುವವನೇ ಗುರು.

ಇಂತಹ ಗುರುವನ್ನು ಮರೆತು ಕೇವಲ ತನ್ನ ಸ್ವಾರ್ಥಕ್ಕಾಗಿ ದುಡಿಯುವುದು ಸರಿಯೆ? ಪರಮ ಕಾರುಣ್ಯದ ಮೂರ್ತಿಯಾದ ಗುರುವಿಗಾಗಿ ದುಡಿಯುವುದು ಸಾರ್ಥಕವಾದದ್ದು. ಆ ಗುರುವಿನ ಬಗ್ಗೆ ಅಪಾರವಾದ ಗೌರವವಿರುದರಿಂದಲೇ ಬಸವಣ್ಣನವರು ತಾನು ದುಡಿಯುವುದು ಗುರುವಿಗಾಗಿ ಎಂದು ಹೇಳುತ್ತಾರೆ. ಸದಾ ಗುರುವಿನ ಉದಾರ ಗುಣವನ್ನು ನೆನೆಯುತ್ತಲೆ ಇರುವುದರಿಂದ ಅವರ ಕೆಲಸವೆಲ್ಲವೂ ಗುರುವಿನ ಪೂಜೆಯೇ ಎನಿಸುತ್ತದೆ.

ಲಿಂಗವೆಂದರೆ ಬ್ರಹ್ಮಾಂಡ ಮತ್ತು ಪಿಂಡಾಂಡಗಳ ಐಕ್ಯ. ಏನು ಹಾಗೆಂದರೆ? ಬ್ರಹ್ಮಾಂಡವೆಂದರೆ ವಿಶ್ವ. ಪಿಂಡಾಂಡವೆಂದರೆ ಜೀವ. ಬ್ರಹ್ಮಾಂಡದಲ್ಲಿ ಇರುವುದೆಲ್ಲವೂ ಪಿಂಡಾಂಡದಲ್ಲಿಯೂ ಇದೆ ಎಂದು ಹೇಳುತ್ತಾರೆ. ಆದರೆ ನಾವು ಅಜ್ಞಾನದಲ್ಲಿ ಮುಳುಗಿರುವುದರಿಂದ ಅದನ್ನು ಗುರುತಿಸದೆ ಜೀವ ಬೇರೆ, ವಿಶ್ವ ಬೇರೆ ಎಂದುಕೊಳ್ಳುತ್ತೇವೆ. ಜೀವ ಮತ್ತು ವಿಶ್ವದ ಐಕ್ಯ ರೂಪವೇ ಲಿಂಗ. ಈ ಅರಿವು ಮೂಡಿದಾಗ ನಮ್ಮಲ್ಲಿರುವ ಎಲ್ಲ ವೈರುದ್ಧ್ಯಗಳು ಇಲ್ಲವಾಗುತ್ತವೆ ಎನ್ನುತ್ತಾರೆ. ಅಂತಹ ಅರಿವಿನಲ್ಲಿರುವವನು ಮಾಡುವುದೆಲ್ಲವೂ ಆ ಲಿಂಗಕ್ಕಾಗಿಯೇ ಹೊರತು ಮತ್ತೊಂದಕ್ಕಲ್ಲ. ಸದಾ ಆ ಅರಿವು ಮತ್ತು ಆ ಅರಿವನ್ನು ಉಂಟುಮಾಡಿದ ಗುರುವನ್ನು ನೆನೆಯುತ್ತಿರುವುದರಿಂದ ತಾನು ಮಾಡಿದ ಕೆಲಸವೆಲ್ಲವು ಗುರು ಮತ್ತು ಲಿಂಗದ ಪೂಜೆಯೇ ಆಗುತ್ತದೆ, ಎಂದು ಹೇಳುತ್ತಾರೆ ಬಸವಣ್ಣನವರು.

ಗುರುವಿನ ಉದಾರತೆ , ಲಿಂಗದ ಅರಿವು, ಇಡೀ ಜೀವರಾಶಿಯ ಬಗ್ಗೆ ಕಾಳಜಿ ಮತ್ತು ಎಲ್ಲರನ್ನೂ ಮೇಲೆತ್ತುವುದರಲ್ಲಿ ತೊಡಗಿಸಿಕೊಂಡ ಕ್ರಿಯಾಶೀಲತೆಯ ಮೇಳವೇ ಜಂಗಮ. ಇಂತಹ ಜಂಗಮನನ್ನು ಮರೆಯಲು ಸಾಧ್ಯವೇ? ಇಲ್ಲವೇ ಇಲ್ಲ. ಬಸವಣ್ಣನವರು ಮಾಡುವ ಪ್ರತಿ ಕೆಲಸವೂ ಜಂಗಮನ ಗುಣದ ನೆನೆಹಿನಲ್ಲಿಯೇ ನಡೆಯುವುದರಿಂದ ಅದು ಜಂಗಮನ ಪೂಜೆಯೇ ಆಗುತ್ತದೆ.

Friday, May 13, 2011

Vachana 39: Anjidadaagadu Alukidadaagadu – Courage and Strength of Mind


ಅಂಜಿದಡಾಗದು, ಅಳುಕಿದಡಾಗದು, ವಜ್ರಪಂಜರದೊಳಗಿದ್ದಡಾಗದು,
ತಪ್ಪದುವೋ! ಲಲಾಟಲಿಖಿತ,
ಕಕ್ಕುಲತೆಗೆ ಬಂದಡಾಗದು ನೋಡಾ,
ಧೃತಿಗೆಟ್ಟಡೆ, ಮನ ಧಾತುಗೆಟ್ಟೆಡೆ, ಅಪ್ಪುದು ತಪ್ಪದು,
ಕೂಡಲಸಂಗಮದೇವಾ.

TRANSLITERATION

aMjidaDAgadu, aLukidaDAgadu, vajrapaMjaradoLagiddaDAgadu,
tappaduvO! lalATaliKita,
kakkulatege baMdaDAgadu nODA,
dhRutigeTTaDe, mana dhAtugeTTeDe, appudu tappadu,
kUDalasaMgamadEvA.


CLICK TO HEAR IT

http://www.youtube.com/watch?v=_-Y3ae7kXaY

TRANSLATION


aMjidaDAgadu(fearing will not do), aLukidaDAgadu(hesitating will not do),
vajrapaMjaradoLagiddaDAgadu(being in a diamond cage will not do),
tappadu(cannot be prevented) vO!( hey you! )lalATaliKita(written on the brow,fate, destiny),
kakkulatege baMdaDe(being anxious)Agadu(will not do) nODA(you see),
dhRutigeTTaDe(losing courage), mana(mind) dhAtugeTTeDe(losing strength), appudu(what is to be) tappadu(cannot but be),
kUDalasaMgamadEvA(Lord of meeting Rivers).

It will not do to fear and hesitate
It will not do to be in a diamond cage
Whatever is written on your brow cannot be prevented
It will not do if you grow anxious, you see!
When you lose courage and your mind becomes faint
What is to be cannot but be
O Lord kUDalasaMgamadEvA

COMMENTARY

This vachana stresses that courage and strength of mind are most important in our lives. At the first reading, the vachana seem to imply that no matter what we do, we cannot change our destiny. Some reflection on the vachana clarifies the message. It will not do to fear and hesitate or hiding in a diamond cage. If fear and hesitation take over us, we tend to subscribe to the ‘destiny’ theory and start feeling that ‘it is all written on my brow and I cannot prevent it”. We must face life courageously and with strong will. We must not be unnecessarily anxious; we must not let our mind grow faint. In the absence of such courage, strength of mind and strong will, we will let our life take the path of whatever it becomes and cannot change it.

How can we develop the courage and strength of mind? The answer lies in understanding the causes of fear, anxiety and weakness of mind. It is obvious that we always would like to be happy, and never be sorrowful. Our happiness depends on the wealth, fame and stature in society, etc. as we perceive them or as they are imposed by others on us. Thus we are dependent on our environment for our happiness. When the environment fails to impose what we expect, our happiness goes away, leading to the state of sorrow. Shiva Sharanas provided a recipe to be free from this dependence on the environment. They said that the key for such independence is understanding the ‘self’ or realizing that the sorrow and happiness are results of what is ‘in’ and should not be caused by what is ‘out’ of us. Thus, the key to development of the strength and strong mind necessary to face the life as it comes and make it the best we can is realizing the self within us.

Sharanas set an example of independence, courage and strong mindedness through their lives of self realization, pure and unselfish performance of duty, austerity, and sharing the knowledge and wealth for the good of the society. 

Let us be courageous and strong minded to develop our life to be what it should be!

KANNADA COMMENTARY

ಬದುಕಿನಲ್ಲಿ ಧೈರ್ಯ ಮತ್ತು ಮನೋಬಲ ಎಷ್ಟು ಮುಖ್ಯವಾದದ್ದು ಎಂಬುದನ್ನು ಈ ವಚನ ತೋರಿಸಿಕೊಡುತ್ತದೆ. ಅಂಜಿದರಾಗಲಿ, ಅಳುಕಿದರಾಗಲಿ ಅಥವಾ ವಜ್ರಪಂಜರದಲ್ಲಿದ್ದರಾಗಲಿ, ಆತಂಕಪಟ್ಟರಾಗಲಿ ಬದುಕಿನಲ್ಲಿ ಆಗಬೇಕಾದದ್ದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಧೈರ್ಯಗುಂದಿ ಮನೋಬಲ ಕಳೆದುಕೊಂಡರೆ ಆಗಬೇಕಾದದ್ದು ತಪ್ಪುವುದಿಲ್ಲ, ಎಂದು ಹೇಳುತ್ತಾರೆ ಬಸವಣ್ಣನವರು. ಮೇಲು ನೋಟಕ್ಕೆ ಇದು, “ಹಣೆಬರಹವಿದ್ದಂತೆ ನಡೆಯುತ್ತದೆ, ಅದನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ಹೇಳುವಂತೆ ತೋರುತ್ತದೆ. ಆದರೆ ವಾಸ್ತವದಲ್ಲಿ, ಧೈರ್ಯ ಮತ್ತು ಮನೋಬಲದಿಂದ ಆಗುವುದನ್ನು ತಪ್ಪಿಸಬಹುದು ಎಂದು ಹೇಳುತ್ತಿದ್ದಾರೆ.

ಧೈರ್ಯ, ಛಲ ಮತ್ತು ಮನೋಬಲದಿಂದ ಏನನ್ನಾದರೂ ಗೆಲ್ಲಬಹುದು. ಬದುಕಿನ ಆಗುಹೋಗುಗಳನ್ನು ತಮ್ಮಿಷ್ಟದಂತೆ ಮಾರ್ಪಡಿಸಿಕೊಳ್ಳಬಹುದು. ಮುಂದೆ ಆಗಬಹುದಾದ ಕೆಡುಕನ್ನು ತಪ್ಪಿಸಬಹುದು ಎಂದು ಹೇಳುತ್ತಾರೆ. ಧೈರ್ಯ ಮತ್ತು ಮನೋಬಲವನ್ನು ಸಾಧಿಸುವುದು ಹೇಗೆ? ವ್ಯಕ್ತಿಯಲ್ಲಿ “ಧೈರ್ಯ ಮತ್ತು ಮನೋಬಲ ಇರಬೇಕು ಇರಬೇಕು” ಎಂದು ಕೇವಲ ಹೇಳುತ್ತಿದ್ದರೆ ಬಂದುಬಿಡುತ್ತವೆಯೆ? ಅದು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ಹಾಗಾದರೆ ಈ ಗುಣಗಳನ್ನು ಪಡೆಯಲು ಏನು ಮಾಡಬೇಕು??? ಅವುಗಳನ್ನು ಪಡೆಯಲು, ಅಧೈರ್ಯ ಮತ್ತು ಅಳುಕುಗಳು ಏಕೆ ಉಂಟಾಗುತ್ತವೆ ಎಂಬದನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರು ಸುಖವನ್ನು ಬಯಸುವುದು ಸರ್ವೇ ಸಾಮಾನ್ಯ. ಆದರೆ ಸುಖ ಬಯಸುವುದು ಎಂದರೆ ದುಃಖವನ್ನು ನಿರಾಕರಿಸುವುದು ಎಂದಾಯಿತು. ಹಾಗೆಂದರೆ ದುಃಖಕ್ಕೆ ಹೆದರುವುದು ಎಂದರ್ಥ. ಆದರೆ ಈ ಸುಖ ದುಃಖಗಳು ನಮ್ಮ ಕೈಯಲ್ಲಿವೆಯೆ? ನಾವು ಸುಖಕ್ಕಾಗಿ ಇನ್ನೊಬ್ಬರನ್ನು ಅಥವಾ ಇನ್ನಾವುದನ್ನೋ ಅವಲಂಬಿಸಿರುತ್ತೇವೆ, ಅಲ್ಲವೆ? ಯಾವಾಗ ನಾವು ಅವಲಂಬಿತರಾಗಿರುತ್ತೇವೆಯೋ ಆಗ ನಮ್ಮಲ್ಲಿ ಭೀತಿ ಮನೆಮಾಡುತ್ತದೆ. ಏಕೆಂದರೆ ನಮಗೆ ಸದಾ ಆ ಇನ್ನೊಂದು ಅಥವಾ ಆ ಇನ್ನೊಬ್ಬ ಯಾವಾಗ ನಮ್ಮ ಸುಖವನ್ನು ಇಲ್ಲವಾಗಿಸುತ್ತದೆಯೋ, ಇಲ್ಲವಾಗಿಸುತ್ತಾನೆಯೋ, ಎಂಬ ಚಿಂತೆ ಕಾಡುತ್ತದೆ. ಆದ್ದರಿಂದ ನಮ್ಮ ಧೈರ್ಯ ಮತ್ತು ಮನೋಬಲ ಕುಂದುತ್ತದೆ. ಆ ಸುಖ ಕಳೆದು ಹೋಗದಂತೆ ಮನಸ್ಸು ತನ್ನ ಸುತ್ತಲೂ ಗಟ್ಟಿಯಾದ ಗೋಡೆ ನಿರ್ಮಿಸಿಕೊಳ್ಳುತ್ತದೆ. ಅದನ್ನೊಂದು ವಜ್ರಪಂಜರವೆಂದು ಭಾವಿಸಿ ತಾನು ಸುರಕ್ಷಿತವೆಂದುಕೊಳ್ಳುತ್ತದೆ. ಆದರೆ ಅದು ಸುರಕ್ಷಿತವಲ್ಲ. ಏಕೆಂದರೆ, ಬದುಕಿನಲ್ಲಿಯ ಪ್ರಸಂಗಗಳು ಮತ್ತು ನಾವು ನಮ್ಮ ಸುಖಕ್ಕಾಗಿ ಅವಲಂಬಿತವಾದ ವಿಷಯಗಳು, ಅವಲಂಬಿತವಾದವರು ನಮ್ಮಿಷ್ಟದಂತೆ ಇರುವುದಿಲ್ಲ. ಆಗ ನಮಗೆ ದುಃಖವಾಗುತ್ತದೆ. ನಾವು ಅದನ್ನು “ಲಲಾಟಲಿಖಿತ”ವೆಂದುಕೊಂಡು ಸುಮ್ಮನಿದ್ದುಬಿಡುತ್ತೇವೆ. ಹಾಗಾದರೆ ಏನು ಮಾಡುವುದು? ಸುಖವನ್ನು ಬಯಸುವುದೇ ತಪ್ಪೆ? ಮೊದಲು ಸುಖವೆಂದರೇನು ಎಂದು ಯೋಚಿಸಬೇಕು. ಅವಲಂಬನೆಯಿಂದ ದುಃಖವೆ ಹೊರತು ಸುಖವಿಲ್ಲ ಎಂಬುದು ತಿಳಿಯಿತು. ಅಂದರೆ ಅವಲಂಬನೆಯಿಲ್ಲದ ಸುಖವನು ಕಂಡುಕೊಳ್ಳಬೇಕು ಎಂದಾಯಿತು ಅಲ್ಲವೆ? ಅಂತಹ, ಎಲ್ಲ ಜಂಜಾಟಗಳಿಂದ ಮುಕ್ತವಾದ ದಾರಿಯನ್ನು ಶರಣರು ತೋರಿಸಿಕೊಟ್ಟಿದ್ದಾರೆ. ಶರಣರು ಛಲಗಾರರು, ಮಹಾಮನೋಬಲ ಉಳ್ಳವರು, ಏನೇ ಬಂದರೂ ವಿಚಲಿತರಾಗದೆ ತಾವು ಆರಿಸಿಕೊಂಡ ದಾರಿಯಿಂದ ವಿಮುಖರಾಗದವರು. ಅವರ ಸುಖ ಬೇರೆ ಯಾರಿಂದಲೋ ಅಥವಾ ಯಾವುದರಿಂದಲೋ ಉಂಟಾಗುವಂತಹುದಲ್ಲ. ಅದು ಅಂತರಂಗದಲ್ಲಿ ತಾನಾಗಿಯೇ ಸ್ಫುರಿಸುವಂತಹದು. ಇಂತಹವರಿಗೆ ಯಾವುದರ ಭಯ? ಏನೇ ಆದರೂ ಅವರು, ಸತ್ಯ ಶುದ್ಧ ಕಾಯಕ, ದಾಸೋಹ ಮತ್ತು ಶಿವಯೋಗವನ್ನು ಬಿಡದವರು. ಸತ್ಯ ಶುದ್ಧ ಕಾಯಕದಿಂದ ಗಳಿಸಿದ ಹಣದಿಂದ ಅತ್ಯಂತ ಸರಳವಾದ ಜೀವನ ನಡೆಸಿದವರು ಅವರು. ಇಲ್ಲದ ಸುಖದ ಸುಪ್ಪತ್ತ್ತಿಗೆಗೆ ಆಸೆಪಟ್ಟವರಲ್ಲ. ಮೃಷ್ಟಾನ್ನ ಭೋಜನವನ್ನು ಬಯಸಿದವರೂ ಅಲ್ಲ, ದಾಸೋಹದಲ್ಲಿ ಅದನ್ನು ಕೊಟ್ಟವರೂ ಅಲ್ಲ. ಅಂಬಲಿಯ ದಾಸೋಹವನ್ನೇ ಮಾಡಿ ಅಂಬಲಿಯನ್ನೇ ಉಂಡು ತೃಪ್ತರಾದವರು ಅವರು. ತಾವು ಮಾಡಿದ ಅಂಬಲಿಯ ರುಚಿಯನ್ನು ಸವಿಯಲು ಜಂಗಮರು ತಾವಾಗಿಯೆ ತಮ್ಮಲ್ಲಿಗೆ ಬರುವಂತೆ ಮಾಡಿದವರು ಅವರು. ಯಾವುದಕ್ಕೂ ಆಸೆ ಪಡದೆ ಮನಸ್ಸನ್ನು ಶಿವಯೋಗದಲ್ಲಿ ತೊಡಗಿಸಿಕೊಂಡವರು. ಇಂತಹವರಿಗೆ ಇನ್ನಾವುದರ ಹಂಗು? ಇನ್ನಾವುದರ ಭಯ, ಚಿಂತೆ? ಹಂಗು, ಭಯ. ಚಿಂತೆ ಇಲ್ಲದವರಿಗೆ ದುಃಖವೆಲ್ಲಿಯದು?

ಅವರು ಆರಿಸಿಕೊಂಡ ಈ ದಾರಿ ಇನ್ನೊಬ್ಬರಮೇಲೆ ಅವಲಂಬಿತವಾದುದ್ದಲ್ಲ. ನಿರಾವಲಂಬನೆಯಿಂದ ಅಪಾರವಾದ ಆತ್ಮ ವಿಶ್ವಾಸ, ಧೈರ್ಯ ಮತ್ತು ಮನೋಬಲ ಉಂಟಾಗುತ್ತದೆ. ಮತ್ತು ಇದು “ಅಪ್ಪುದನ್ನು ತಪ್ಪಿಸುತ್ತದೆ”. ಬಂದುದೆಲ್ಲವನ್ನು “ಲಲಾಟಲಿಖಿತ”ವೆಂದುಕೊಂಡು ಕೈಕಟ್ಟಿ ಕುಳಿತಿರುವುದಕ್ಕೆ ಅದು ಬಿಡುವುದಿಲ್ಲ.

ಇದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ಬುದ್ಧನು ಹೇಗೆ ಸಮಾಜ ಕಂಟಕನಾದ ಅಂಗುಲಿಮಾಲನ ಮನಸ್ಸನ್ನು ಪರಿವರ್ತಿಸಿದನು ಎಂಬುದನ್ನು ಸ್ಮರಿಸಿಕೊಳ್ಳಬಹುದು. ಬುದ್ಧ ತನ್ನ ವೈಯಕ್ತಿಕ “ಸುಖ” ವನ್ನು ತೃಣದಂತೆ ಕಡೆಗಣಿಸಿದವರನು. ಸಮಾಜದ ಬಗ್ಗೆ ಅಪಾರ ಅನುಕಂಪವನ್ನು ತಳೆದವನು. ಆತನ ಈ ಗುಣವೇ ಆತನಿಗೆ ಭಯಂಕರನಾದ ಅಂಗುಲಿಮಾಲನ ಎದುರು ಒಬ್ಬನೇ ನಿರ್ಭೀತನಾಗಿ ಹೋಗುವ ಅಸೀಮ ಧೈರ್ಯ ಮತ್ತು ಮನೋಬಲವನ್ನು ನೀಡಿತು.

ಅನೇಕ ರೀತಿಯ ಸೌಲಭ್ಯಗಳಿಗೆ, ಸುಖ ಸಂಪತ್ತುಗಳಿಗೆ ಚೆನ್ನಾಗಿ ಹೊಂದಿಕೊಂಡ ನಾವು ಶರಣರಂತಾಗಲಿ ಅಥವಾ ಬುದ್ಧನಂತಾಗಲಿ ಬಾಳುವುದು ಈಗ ಅಸಾಧ್ಯವೇ ಎಂದು ತೋರುತ್ತದೆ. ಆದರೆ ಕನಿಷ್ಠ ಪಕ್ಷ ನಮ್ಮ ಬದುಕಿನ ಪ್ರತಿ ಹಂತದಲ್ಲೂ ಇತಿಮಿತಿಯನ್ನು ಅಳವಡಿಸಿಕೊಳ್ಳಬಹುದಲ್ಲವೇ? ಇತಿಮಿತಿಯಿಂದ ಬಾಳುವವರ ಮನಸ್ಸು ಸದಾ ಜಾಗೃತವಾಗಿರಬೇಕಾಗುತ್ತದೆ. ಮತ್ತು ಈ ಎಚ್ಚರಿಕೆ, ವ್ಯಕ್ತಿಯಲ್ಲಿ ಆತ್ಮಸ್ಥೈರ್ಯವನ್ನುಂಟಮಾಡುತ್ತದೆ.

Friday, May 6, 2011

Vachana 38: Martya Lokavembudu - Creator’s Workshop


ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ
ಕೂಡಲಸಂಗಮದೇವ

TRANSLITERATION

martya lOkaveMbudu kartArana kammaTavayya
illi salluvaru alliyU salluvarayya
illi salladavaru alliyU sallarayya
kUDalasaMgamadEva


CLICK HERE TO HEAR IT:

http://www.youtube.com/watch?v=zWn9qceDKm0

TRANSLATION

martya lOkaveMbudu(mortal world is) kartArana(creator’s) kammaTavayya(workshop)
illi salluvaru(people fitting here) alliyU(there too) salluvarayya(will fit)
illi salladavaru(people not fitting here) alliyU sallarayya(will not fit there too)
kUDalasaMgamadEva(Lord of Meeting Rivers)


Mortal world is creator’s workshop
People fitting here, will fit there too
People who do not fit here will not fit there too
Lord kUDalasaMgamadEva.


COMMENTARY


In this simple Vachana, Basavanna emphasizes the importance of being the fittest citizen of this mortal world, which he names as the workshop of the Creator. We are all part of this workshop. It has been provided to us so we can create the Heaven on Earth. Basavanna uses two significant words here: here (meaning the mortal world) and there (meaning the world beyond). Recall that in Vachana 36 Basavanna emphasized that there are no separate worlds out there and we should create heaven on Earth through honesty and good conduct. Is he departing from this one world concept by mentioning ‘here’ and ‘there’ in this Vachana? Certainly not. It is often said that this mortal world is illusory, not real and a manifestation of ‘maya’ and hence one should concentrate on achieving the other world and not be too concerned with what happens ‘here’. This vachana addresses such artificial separation of the two worlds. Basavanna says that the best way to achieve the other world (there) is to be the fittest citizen of this world. Those who fit here will also fit there. The other world is subtle, cannot be described in words and distant from the human imagination. Once reached, that world destroys the lust, anger, greed and other negative traits from us. In fact, destruction of these negative traits is the path to the other world. In that sense, that world is really an extension of this world. It is up to us to reach that world, by being the fittest citizens of this world. There are no two separate worlds.  

Vachana 37 stressed the importance of enjoying and making the best out of what we have. That is, making lemonade when one is handed a lemon, rather than searching for the nectarine that one prefers or visualizes. In this Vachana, Basavanna merges the concepts from Vachanas 36 and 37 to stress that the Creator has provided us this world. We must conduct ourselves to be the fittest citizens of this world, since those who fit ‘here’ will also fit ‘there’. Fitting in this world corresponds to treating work (duty) as heaven (Kaayakave Kailasa), sharing with fellow beings (Dasoha), and striving towards Godliness (knowing the Lord within). In summary, this world provided to us by the Creator should not be ignored as illusory; we should strive to make it the best we can and that is the only path to the so called ‘other’ world.



Let us be the Fittest Citizens of this Creator’s Workshop!


KANNADA COMMENTARY


ಅನೇಕರು ಮರ್ತ್ಯ ಲೋಕವು ಅಸತ್ಯವಾದದ್ದು, ಭ್ರಮಾತ್ಮಕವಾದದ್ದು, ಅದೊಂದು ಮಾಯೆ. ಮಾಯೆಯಲ್ಲಿ ಮುಳುಗಿದವರಿಗೆ ಅದು ನಿಜವೆನಿಸುತ್ತದೆಯೇ ಹೊರತು ವಾಸ್ತವವಾದದ್ದಲ್ಲ, ಅದು ನಶ್ವರವಾದದ್ದು, ಆದ್ದರಿಂದ ಅದಕ್ಕೆ ಮಹತ್ವ ಕೊಡಬೇಕಾದದ್ದಿಲ್ಲ ಎಂದು ಯೋಚಿಸುತ್ತಾರೆ. ಹೀಗಾಗಿ ಅವರು ಪರಲೋಕದಲ್ಲಿ ಸ್ಥಾನವನ್ನು ಗಳಿಸುವ ಆಸೆಯಿಂದ ಈ ದಿನನಿತ್ಯದ ಬದುಕನ್ನು ನಿರ್ಲಕ್ಷಿಸುತ್ತಾರೆ. ಅಂತಹವರನ್ನು ಕುರಿತು ಬಸವಣ್ಣನವರು ಈ ವಚನವನ್ನು ಹೇಳಿದ್ದಾರೆ.
“ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ” ಎನ್ನುವ ಮೊದಲ ಸಾಲಿನಲ್ಲಿಯೇ, ಈ ಜಗತ್ತು ಕರ್ತಾರನ ಕಮ್ಮಟ, ಎಂದರೆ ಬ್ರಹ್ಮನೇ ಇದನ್ನು ಸೃಷ್ಟಿಸಿರುವುದು ಎಂದು ಹೇಳುವಲ್ಲಿ, ಅದು ಹೇಗೆ ಅಸತ್ಯವಾಗಲು ಸಾಧ್ಯವೆನ್ನುವ ಧ್ವನಿ ಕಂಡುಬರುತ್ತದೆ. ಈ ಜಗತ್ತು ಆತನ ಕಮ್ಮಟ. ಕಮ್ಮಟ ಅಂದರೆ ಟಂಕಸಾಲೆ ಅಥವಾ ಕಾರ್ಯಾಗಾರ. ಇಲ್ಲಿ ಆತನೇ ನಾಣ್ಯಗಳನ್ನು ಟಂಕಿಸುತ್ತಾನೆ ಅಥವಾ ಬೇಕಾದದ್ದನ್ನು ಸೃಷ್ಟಿಸುತ್ತಾನೆ. ಸ್ವತಃ ಬ್ರಹ್ಮನೇ ಸೃಷ್ಟಿಸಿರುವುದು ಅಸತ್ಯವಾಗಲು ಹೇಗೆ ಸಾಧ್ಯ. ಆತನ ಕೆಲಸಕ್ಕೆ ಬೆಲೆಯೇ ಇಲ್ಲವೇ? ಅದು ತಪ್ಪು. ಬ್ರಹ್ಮನನ್ನು ಪಡೆಯಬೇಕಾದರೆ ಆ ಬ್ರಹ್ಮ ಸೃಷ್ಟಿಸಿದುದನ್ನು ಗೌರವಿಸಲೇ ಬೇಕು. ಆತನ ಸೃಷ್ಟಿಯಲ್ಲಿ ನಾವು ಸಲ್ಲುವಂತಾದರೆ ಮಾತ್ರ ಅಲ್ಲಿಯು ಸಲ್ಲುತ್ತೇವೆ. “ಇಲ್ಲಿ” ಅಂದರೆ ಈ ಜಗತ್ತು. “ಅಲ್ಲಿ” ಎಂದರೆ ಪರಲೋಕ ಅಥವಾ ಆಧ್ಯಾತ್ಮಿಕ ಲೋಕ. ಅಂದರೆ ಬಸವಣ್ಣನವರು ಈ ಎರಡೂ ಲೋಕಗಳು ಬೇರೆ ಬೇರೆ ಎಂದು ಹೇಳುತ್ತಿರುವರೆ? ಖಂಡಿತವಾಗಿಯೂ ಅಲ್ಲ. ಎರಡೂ ಒಂದೇ. “ದೇವಲೋಕ ಮರ್ತ್ಯಲೋಕ ಬೇರಿಲ್ಲ ಕಾಣಿರಣ್ಣ” ಎಂದು ಹೇಳುತ್ತಾರೆ. “ಇಲ್ಲಿ ಅಲ್ಲಿ” ಎಂದು ಹೇಳಿರುವುದು ಅದನ್ನು ಇನ್ನೂ ಅರ್ಥ ಮಾಡಿಕೊಳ್ಳದೆ ಇರುವಂತಹ ಸಾಮಾನ್ಯರಿಗಾಗಿ. ಏಕೆಂದರೆ ಸಾಮಾನ್ಯರು ಅವುಗಳನ್ನು ಬೇರೆಬೇರೆ ಎಂದು ತಿಳಿಯುತ್ತಾರೆ. “ಇಲ್ಲಿ ಅಲ್ಲಿ” ಎಂಬುದದಕ್ಕೆ “ಇಹ ಪರ” ಎಂಬ ಪದಗಳನ್ನೂ ಬಳಕೆಯಲ್ಲಿವೆ. “ಇಹ” ಅಂದರೆ ಇಲ್ಲಿ ಇರುವುದು. “ಪರ” ಎಂದರೆ ದೂರವಾದದ್ದು, ಅನ್ಯ, ಉತ್ತಮವಾದದ್ದು, ಎಂಬ ಅರ್ಥಗಳು ಇವೆ. ಎರಡೂ ಒಂದೇ ಎನ್ನುವಾಗ ದೂರವಾದದ್ದು ಅನ್ಯ ಅಥವಾ ಉತ್ತಮವಾದದ್ದು ಎಂದೇಕೆ ಎನ್ನುವರು? ಎಂಬ ಪ್ರಶ್ನೆ ಹುಟ್ಟುತ್ತದೆ. ಏಕೆಂದರೆ ಅದು ಕೂಡಲೆ ಕಂಡುಬರುವಂತಹದಲ್ಲ, ಅದನ್ನು ಕಂಡುಕೊಳ್ಳಲು ನಿಶ್ಚಿತವಾದ ಒಂದು ದಾರಿಯಿಲ್ಲ, ಅದು ಇಲ್ಲಿ ಇರುವುದಕ್ಕಿಂತಲೂ ಭಿನ್ನವೆನಿಸುವಂತಹದ್ದು, ಸೂಕ್ಷ್ಮವಾದದ್ದು. ಅದನ್ನು ಅಕ್ಷರಶಃ ವರ್ಣಿಸಲು ಸಾಧ್ಯವಾಗದ್ದು. ಅದು ಸಾಮಾನ್ಯ ದೃಷ್ಟಿಗೆ ನಿಲುಕದ್ದು, ಅದನ್ನು ಯಾವುದೇ ರೀತಿಯಿಂದ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದ್ದು, ಅದನ್ನು ಕಂಡುಕೊಂಡ ಮೇಲೆ ದುಃಖ ದುಮ್ಮಾನಗಳು, ಭೇದ ಭಾವಗಳು, ರಾಗ ದ್ವೇಷಗಳು, ಮೇಲು ಕೀಳುಗಳು ಕಾಡುವುದಿಲ್ಲ, ಆದ್ದರಿಂದ ಅದಕ್ಕೆ “ಪರಲೋಕ” ಅಥವಾ “ದೇವಲೋಕ”ಎನ್ನುತ್ತಾರೆ. ಆದರೆ “ಇಹ” ವಿಲ್ಲದೆ ಆ ಪರವನ್ನು ಕಾಣಲು ಸಾಧ್ಯವಿಲ್ಲ. ಆದ್ದರಿಂದಲೇ ಮಾನವ ಜನ್ಮ ದೊಡ್ಡದು ಎನ್ನುವರು. ಆ “ಪರ”ವು ಇಹದ ಭಾಗವೇ ಆಗಿದೆ. ಆ ಕಾರಣ ಎರಡೂ ಒಂದೇ ಹೊರತು ಬೇರೆ ಅಲ್ಲ. ಆದರೆ ಅದನ್ನು ಕಂಡುಕೊಳ್ಳುವವರೆಗೆ ಅವು ಬೇರೆ ಬೇರೆ ಎಂದು ಎನಿಸುತ್ತವೆ. ಆ ರೀತಿಯಾಗಿ ಅವುಗಳನ್ನು ಬೇರೆ ಬೇರೆ ಎಂದು ಭಾವಿಸುವವರಿಗೆ ಬಸವಣ್ಣನವರು “ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುತ್ತಾರೆ” ಎಂದು ಹೇಳುತ್ತಾರೆ.


ಕರ್ತಾರನ ಈ ಕಾರ್ಯಾಗಾರದಲ್ಲಿ ಚಲಾವಣೆಯಲ್ಲಿ ಇಲ್ಲದ ನಾಣ್ಯ ಬೇರೆ ಕಡೆಯೂ ನಡೆಯುವುದಿಲ್ಲ. ಈ ಲೋಕದವರಿಗೆ ಒಪ್ಪಿಗೆಯಾಗುವಂತೆ ಬಾಳದವನಿಗೆ ಆ ಲೋಕದಲ್ಲಿಯೂ ಸ್ಥಾನವಿರುವುದಿಲ್ಲ. ಆದ್ದರಿಂದ ನಾವೆಲ್ಲರೂ, “ಪರ”ದಲ್ಲಿ ಸಲ್ಲಬೇಕಾದರೆ “ಇಹ”ದಲ್ಲಿ ಸಲ್ಲುವಂತೆ ಬಾಳಬೇಕು. “ಇಹ”ದಲ್ಲಿ ಸಲ್ಲದಂತೆ ಬಾಳುವೆಯನ್ನು ನಡೆಸಿ “ಪರ”ದಲ್ಲಿ ಸ್ಥಾನವನ್ನು ಪಡೆಯುತ್ತೇನೆ ಎಂದುಕೊಂಡರೆ ಅದು ಸಾಧ್ಯವಿಲ್ಲ. ಅಂದರೆ ಈ ಜಗತ್ತನ್ನು ಪೂರ್ತಿಯಾಗಿ ನಿರ್ಲಕ್ಷಿಸಿ, ಇಲ್ಲಿಯದೆಲ್ಲವನ್ನು ಕಡೆಗಣಿಸಿ ಕೇವಲ “ಪರ”ವನ್ನು ಸಾಧಿಸುವವರಿಗೆ ಕೊನೆಯಲ್ಲಿ ಇಹವೂ ಪರವೂ ಇಲ್ಲದಂತೆ ಆಗುತ್ತದೆ, ಎನ್ನುತ್ತಾರೆ ಬಸವಣ್ಣನವರು. ಶರಣರು ಇದನ್ನು ಮಾಡಿ ತೋರಿಸಿದರು: ಅವರು ಸತ್ಯ ಶುದ್ಧ ಕಾಯಕದಿಂದ ಬಾಳುತ್ತ ಸಮಾಜಕ್ಕೆ ಹೊರೆಯಾಗದಂತೆ ಬಾಳಿದರು. ದಾಸೋಹದಿಂದ ಸಮಾಜೋಪಯೋಗಿ ಕೆಲಸ ಮಾಡಿದರು. ಅನುಭಾವ ಗೋಷ್ಠಿ ಮತ್ತು ಚಿಂತನೆಯ ಮೂಲಕ ಆಧ್ಯಾತ್ಮವನ್ನು ಸಾಧಿಸಿದರು. ಹೀಗೆ ಅವರು ಇಹ ಪರವನ್ನು ಸಮನ್ವಯಗೊಳಿಸಿ ಇಡೀ ಮಾನವ ಕುಲಕ್ಕೆ ಬೆಳಕಾಗಿ ಬಾಳಿದರು. ಈ ಎಲ್ಲ ಭಾವವು ಈ ಸಣ್ಣ ವಚನದಲ್ಲಿ ಅಡಕವಾಗಿದೆ.