Friday, November 15, 2013

Vachana 168: Kaiyyalli Hanniddante - The Fruit in the Hand

VACHANA IN KANNADA
ಕೈಯಲ್ಲಿ ಹಣ್ಣಿದ್ದಂತೆ ಮರನೇರಿ ಕೊಂಬ ಬಾಗಿಸಿ ಕಾಯ ಕೊಯಿಯುವ ಅರೆಮರುಳನಂತೆ
ಅನಾದಿಮೂಲದೊಡೆಯ ತನ್ನ ಕರಸ್ಥಲ ಮನಸ್ಥಲದಲ್ಲಿಪ್ಪುದ ತಾನರಿಯದೆ
ಬೇರೆ ಲಿಂಗ ಉಂಟು  ಬೇರೆ ಕ್ಷೇತ್ರ ಉಂಟು  ಎಂದು ಹಲವು ಲಿಂಗಕ್ಕೆ ಹರಿದು, ಹಂಬಲಿಸುವ
ಈ ಸೂಳೆಗೆ ಹುಟ್ಟಿದವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲ,
ಮುಕ್ತಿಎಂಬುದು ಎಂದೆಂದಿಗೂ ಇಲ್ಲ ಕಾಣ ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ.

TRANSLITERATION

kaiyalli haNNiddaMte  maranEri koMba baagisi kaaya koyiyuva aremaruLanaMte
anaadimUladoDeya tanna karasthala manasthaladallippuda taanariyade
bEre liMga uMTu, bEre kShEtra uMTu eMdu halavu liMgakke haridu haMbalisuva
I sULege huTTidavarige guruvilla, liMgavilla, jamgamavilla, prasaadavilla
mukti eMbudu eMdeMdigU illa kaaNa mahaaliMhaguru shivasiddhEshvara prabhuve.


CLICK HERE FOR A RECITATION


TRANSLATION (WORDS)

kaiyalli (in the hand) haNNiddaMte ( as there is a fruit)  maranEri (climbing a tree)  koMba ( a branch) baagisi ( and bending)
kaaya (unripe fruit)  koyiyuva (picking)  aremaruLanaMte (like a foolish person)
anaadimUladoDeya ( master of the primordial)
tanna karasthala (one’s own hand)  manasthaladallippuda (being in the mind)  taanariyade (not knowing)
bEre (another)  liMga (Linga/God) uMTu ( there is) , bEre  (another) kShEtra ( place) uMTu (there is) eMdu (thinking)
halavu (many)  liMgakke (to lingas/Gods) haridu (going)  haMbalisuva (seeking people)
I  (this) sULege  (to prostitute)  huTTidavarige (to those who are  born)
guruvilla (there is no teacher) , liMgavilla (no god) , jamgamavilla (no devotee) , prasaadavilla (no food that is offered to the god, once offered to the God everything becomes sacred and one has to consume without wasting a single grain of that prasaada)
mukti (liberation) eMbudu (called)  eMdeMdigU illa (is not there forever) kaaNa (you see)
mahaaliMhaguru shivasiddhEshvara prabhuve.
(Mahalingaguru Shivasiddheshvara Prabhu)


VACHANA IN ENGLISH

Like a fool climbing the tree, bending the branch and picking the unripe fruit, while holding a ripe fruit in the hand,
Not knowing that the master of the primordial is on the palm and in the mind,
Thinking that there is another God and another holy place; longing for and seeking many Gods,
For these people born to a prostitute, there is no teacher, there is no God, there is no Jangama (wandering ascetic, devotee), there is no prasaada (sacred blessing),
The liberation is not there forever, you see!
Mahalingaguru Shivasiddheshvara Prabhu! 

COMMENTARY
In this Vachana, Thontada Siddalinga Yathigalu comments on how one wanders all around looking for something all over while what they are looking for is right on their palm and in their mind. We have said that Linga is an icon representing that master of primordial, the Universal soul and the soul within us, the Self. The Linga has been given to us by the Guru and the Guru has blessed us with his directions to journey towards realizing the self. He has taught us the importance of realizing what the icon stands for and how we should go beyond the ritualistic worship of the icon to realizing what it stands for. Yet, we go around looking for other Gods and other Holy places. The Vachana uses very strong words calling such wanderers as children of a prostitute, an individual who shares her body with many to make a living. The Vachana calls such a living is inferior living and hence such children have grown up to be inferior individuals. Such individuals who wander around from God to God are not able to understand kindness of the teacher, do not realize the importance of the linga, are not able to recognize the presence of Jangama, do not have the feeling that everything they have is His sacred blessing. There is no liberation ever for such individuals from the bindings of this mundane world. The message then is that Linga, the icon is all we need. We need to understand and internalize what it stands for and realize the God within us.

Let us be staunch worshippers of that single God.

ಅರ್ಥ:
ಕೈಯಲ್ಲಿ ಹಣ್ಣಿದ್ದಂತೆ  (ಆಗಲೆ ಕೈಯಲ್ಲಿ ಹಣ್ಣು ಇರುವಾಗ) ಮರನೇರಿ ಕೊಂಬ ಬಾಗಿಸಿ (ಮರವನ್ನು ಏರಿ ಕೊಂಬೆಯನ್ನು ಬಾಗಿಸಿ)
ಕಾಯ ಕೊಯಿಯುವ ಅರೆಮರುಳನಂತೆ (ಇನ್ನೂ ಕಾಯಿಗಳನ್ನು ಕೊಯ್ಯುವ ಹುಚ್ಚನಂತೆ)
ಅನಾದಿಮೂಲದೊಡೆಯ  (ಎಲ್ಲ ದೇವರ ದೇವ)
ತನ್ನ ಕರಸ್ಥಲ (ತನ್ನ ಕೈಯಲ್ಲಿ)  ಮನಸ್ಥಲದಲ್ಲಿಪ್ಪುದ (ತನ್ನ ಮನದಲ್ಲಿ ಇರುವುದನ್ನು) ತಾನರಿಯದೆ (ತಾನು ಅರಿಯದೆ)
ಬೇರೆ ಲಿಂಗ ಉಂಟು,  ಬೇರೆ ಕ್ಷೇತ್ರ ಉಂಟು  ಎಂದು (ಬೇರೆ ಬೇರೆ ಪುಣ್ಯ ಕ್ಷೇತ್ರಗಳಲ್ಲಿ ಬೇರೆ ಬೇರೆ ದೇವರುಗಳು ಇದ್ದಾರೆ ಎಂದು)
ಹಲವು ಲಿಂಗಕ್ಕೆ ಹರಿದು, ಹಂಬಲಿಸುವ (ಎಂದು ಅನೇಕ ದೇವರುಗಳಿಗೆ ಆಸೆಯಿಂದ ಹೋಗುವ)
ಈ ಸೂಳೆಗೆ ಹುಟ್ಟಿದವರಿಗೆ  (ಏಕ ನಿಷ್ಠೆಯಿಲ್ಲದವರಿಗೆ, ಕೀಳು ಮನಸ್ಸಿನವರಿಗೆ)
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲ, (ಗುರು, ಲಿಂಗ, ಜಂಗಮ, ಪ್ರಸಾದಗಳ ಮಹತ್ವ ತಿಳಿಯುವುದಿಲ್ಲ)
ಮುಕ್ತಿಎಂಬುದು ಎಂದೆಂದಿಗೂ ಇಲ್ಲ ಕಾಣ
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ.
 
ತಾತ್ಪರ್ಯ:
ಬೇರೆ ಬೇರೆ ದೇವರು/ ಲಿಂಗಗಳಿಗೆ ಮತ್ತು ಬೇರೆ ಬೇರೆ ಪುಣ್ಯಕ್ಷೇತ್ರಗಳಿಗೆ ಹೋಗುವವರನ್ನು ಕುರಿತು  ಅವರು ಅಜ್ಞಾನಿಗಳು ಎಂಬುದನ್ನು ದೃಷ್ಟಾಂತಸಹಿತ ಹೇಳುತ್ತಿದ್ದಾರೆ ತೋಂಟದ ಸಿದ್ಧಲಿಗ ಯತಿಗಳು.
ತಮ್ಮ ಕೈಯಲ್ಲಿ ಆಗಲೆ ಪಕ್ವವಾದ ಹಣ್ಣು ಇದೆ. ಅದನ್ನು ತಿನ್ನದೆ ಮರದಲ್ಲಿರುವ ಬೇರೆ ಕಾಯಿಗೆ ಆಸೆಪಟ್ಟು ಮರವನ್ನು ಏರಿ ಅದರ ಕೊಂಬೆಯನ್ನು ಬಾಗಿಸಿ ಕಾಯಿಯನ್ನು ಕೊಯ್ಯುವ ಶ್ರಮ ವಹಿಸುವವರು ಹುಚ್ಚರು ಎನ್ನುತ್ತಾರೆ ಅವರು. ತಮ್ಮ ಕೈಯಲ್ಲಿ ಇರುವ ಪಕ್ವವಾದ  ಹಣ್ಣನ್ನು ತಿಂದು ತೃಪ್ತರಾಗಬಹುದು. ಆದರೆ ಅಂತಹ ಸಾಮಾನ್ಯ ತಿಳಿವಳಿಕೆ ಅವರಿಗಿಲ್ಲ. ಜನರು ತಮ್ಮ ಹತ್ತಿರವಿರುವ ಹಣ್ಣನ್ನು ಮರೆತು ಅಥವಾ ಅದರ ಬೆಲೆಯನ್ನು ತಿಳಿಯದೆ  ಮರದಲ್ಲಿರುವ ಅಂದರೆ  ದೂರದಲ್ಲಿರುವ , ಆದ್ದರಿಂದ ಆಕರ್ಷಕವಾಗಿ ಕಾಣುವ ಕಾಯಿಯನ್ನು ಪಡೆಯುವ ಹಂಬಲದಿಂದ  ಕಷ್ಟಪಟ್ಟು ಮರವನ್ನು ಏರಿ, ಶ್ರಮಪಟ್ಟು  ಮರದ ಕೊಂಬೆಯನ್ನು ಬಾಗಿಸಿ ಕಾಯಿಯನ್ನು ಕೊಯ್ಯುವಂತಹ ಹುಚ್ಚುತನವನ್ನು ಮಾಡುತ್ತಾರೆ. 
ತಮ್ಮ ಕೈಯಲ್ಲಿಯೇ ಗುರು ಕರುಣಿಸಿದ  ಲಿಂಗವಿದೆ. ಅದು ಅನಾದಿಮೂಲದೊಡೆಯ. ಅದನ್ನು ಮೀರಿದದು ಯಾವುದೂ ಇಲ್ಲ.  ಕೊಟ್ಟ ಗುರುವಿನ ಬಗ್ಗೆ ಗೌರವ ತಳೆದು ಆತ ಕೊಟ್ಟದ್ದನ್ನು ಅರಿಯುವ  ನಿಷ್ಠೆಯಿಲ್ಲದೆ, ಬೇರೆ ಬೇರೆ ಸ್ಥಳಗಳಲ್ಲಿ ಇರುವ ಲಿಂಗಗಳನ್ನು, ಅಂದರೆ,  ಭಿನ್ನ ಭಿನ್ನ  ಸ್ಥಾವರ ಲಿಂಗಗಳನ್ನು ಸಂದರ್ಶಿಸುವ ಹುಚ್ಚು, ಭಿನ್ನ ಭಿನ್ನ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸುವ ಹುಚ್ಚಿಗೆ ಒಳಗಾಗುತ್ತಾರೆ ಜನರು. ಅರಿವಿನ ಕುರುಹು ಲಿಂಗವನ್ನು ಗುರು ಕರುಣಿಸಿದ್ದಾನೆ. ಅದನ್ನು ತಿಳಿದರೆ ಅದು ಸತ್ ಚಿತ್ ಆನಂದದ ಮೂಲ,  ಅದಕ್ಕಿಂತಲೂ ಹೆಚ್ಚಿನದೇನೂ ಇಲ್ಲ. ಎಲ್ಲದಕ್ಕೂ ಮೂಲವಾದ ಆ ಪರವಸ್ತು ತನ್ನ ಕರಸ್ಥಲದಲ್ಲಿಯೇ ಇರುವ ಅರಿವೇ ಇಲ್ಲದೆ  ಈ ರೀತಿ ವೃಥಾ ಶ್ರಮ ಪಡುವುದು  ಮಹಾ ಅಜ್ಞಾನ. ಅಂತಹವರನ್ನು ಸ್ವಾಮಿಗಳು ಬಹಳ ಕಟುವಾಗಿ ಟೀಕಿಸುತ್ತಾರೆ. ಅಂತಹವರನ್ನು ಹಣದಾಸೆಗಾಗಿ ಬೇರೆ ಬೇರೆಯವರಿಗೆ ತನುವನ್ನೊಪ್ಪಿಸುವ ಸೂಳೆಗೆ ಹುಟ್ಟಿದವರು ಎನ್ನುತ್ತಾರೆ. ಈ ಮೂಲಕ, ಅಂತಹವರ ಬುದ್ಧಿಯು ಕೀಳು ಎಂದು ಹೇಳುತ್ತಾರೆ.  ಅಂತಹವರಿಗೆ ಗುರುವಿನ ಕರುಣೆ ಅರ್ಥವಾಗುವುದಿಲ್ಲ, ಲಿಂಗವೆಂಬ ಕುರುಹಿನ ಅರಿವು ಉಂಟಾಗುವುದಿಲ್ಲ,  ಜಂಗಮನನ್ನು ಗುರುತಿಸುವ ತಿಳುವಳಿಕೆ ಇರುವುದಿಲ್ಲ, ತನಗೆ ದೊರಕಿದುದೆಲ್ಲವೂ ದೇವರ ಪ್ರಸಾದವೆಂಬ ಭಾವ ಹುಟ್ಟುವುದಿಲ್ಲ.  ಹೀಗಾಗಿ ಪ್ರಪಂಚದ ಕೋಟಲೆಗಳಿಂದ  ಮುಕ್ತಿಯಾಗುವುದಿಲ್ಲ ಎನ್ನುತ್ತಾರೆ.  ಅವರಿಗೆ ಏಕನಿಷ್ಠೆ  ಇರುವುದು ಸಾಧ್ಯವಿಲ್ಲ. ಎನ್ನುತ್ತಾರೆ. ಏಕ ನಿಷ್ಠೆ ಇಲ್ಲದವರು ಗುರು ಲಿಂಗ ಜಂಗಮ ಪ್ರಸಾದ, ಮುಕ್ತಿಯಾವುದನ್ನೂ ಸಾಧಿಸಲಾರರು. ತನ್ನಲ್ಲಿಯೇ ಇರುವುದರ ಕಡೆಗೆ ದೃಷ್ತಿ ಹಾಯಿಸದೆ ದೂರದಲ್ಲಿರುವುದರ ಆಕರ್ಷಣೆಗೆ ಒಳಗಾಗಿ ವೃಥಾ ಶ್ರಮ ಪಡುತ್ತಾರೆ ಎಂಬುದನ್ನು ಹೇಳುತ್ತಿದ್ದಾರೆ.

No comments:

Post a Comment