Friday, April 20, 2012

Vachana 86: Lokadalliha Nuuraaru Gurugalu – True Teacher


ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ ನಾನು ಬೇಸರಗೊಂಡೆನಯ್ಯಾ
ವಿತ್ತಾಪಹಾರಿ ಗುರುಗಳು ನೂರಾರು
ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು,
ಮಂತ್ರತಂತ್ರದಿಂದುಭಯ ಲೋಕದಲ್ಲಿ ಸುಖದುಃಖವೀವ ಗುರುಗಳು ನೂರಾರು
ಸತ್ಕರ್ಮೋಪದೇಶವನರುಹಿ ಸ್ವರ್ಗಮರ್ತ್ಯದಲ್ಲಿ ಸುಖವೀವ ಗುರುಗಳು ನೂರಾರು;
ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು ನೂರಾರು.
ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ ಆತ್ಮಾನುರಾಗತ್ವವನೀವ ಗುರುಗಳು ನೂರಾರು;
ಶಿವಜೀವರ ಏಕತ್ವವನರುಹಿ ನಿರ್ಮಲಜ್ಞಾನವೀವ ಗುರುಗಳು ಪ್ರಮಥರು.
ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು
ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.


TRANSLITERATION
lOkadalliha nURaaru gurugaLa nODi nODi naanu bEsaragoMDenayya
vittaapahaari gurugaLu nUraaru
shaastraartha hELuva gurugaLu nUraaru,
maMtrataMtradiMdubhaya lOkadalli sukhaduHkhavIva gurugaLu nUraaru
satkaramOpadEshavanaruhi Svarga martydalli sukhavIva gurugaLu nUraaru
vicaaramukhadiMda ShaTsaadhaneyanruhuva gurugaLu nURaaru
viShayaMgaLella mithyaMgaLeMdaruhi aatmaanuraagatvavanIva gurugaLu nUraaru
shivajIvara Ekatvanaruhi nirmalaj~jaanavIva gurugaLu pramatharu.
saMshayaaLigaLanella j~jaanagniyiMda dahisi muktiya haMgeMbuda aruhina baMdhadallirisida guru
cennabasavaNNanallade mattOrvana kaaNe nODaa, kapilasiddhamallikaarjunaa.


CLICK HERE TO READ-ALONG:
http://youtu.be/T7jjCCSDUkk


TRANSLATION (WORDS)


lOkadalliha (present in this world) nURaaru (handreds of) gurugaLa ( teachers, gurus) nODi nODi (seeing again and again) naanu ( I) bEsaragoMDenayya ( am tired sir)
vittaapahaari (wealth stealing, taking away the wealth) gurugaLu (gurus) nUraaru (are hundreds)
shaastraartha ( explaination to rituals) hELuva (giving) gurugaLu (the gurus) nUraaru,(are hundreds)
maMtrataMtradiMda ( sacred verse and technique) ubhaya (both) lOkadalli (in the world)
sukha(happiness) duHkhav (suffering) Iva(giving) gurugaLu (the teachers) nUraaru (are hundreds)
satkaramOpadEshavanu (preaching good deeds) aruhi (informing, talking about)
Svarga (heaven) martydalli (in the mortal world) sukhavIva (giving pleasure) gurugaLu ( teachers ) nUraaru (hundreds of)
vicaaramukhadiMda (giving importance to thinking) ShaTsaadhaneyanruhuva(teaching six achievements) gurugaLu (teachers) nURaaru (are hundreds)
viShayaMgaLella ( all the objects of desire) mithyaMgaLeMdu (are false) aruhi (saying)
aatmaanuraagatvavanIva (making one self centered) gurugaLu nUraaru (teachers are hundreds)
shiva(god, shiva) jIvara (the living being) Ekatvanaruhi (making one know the unity of)
nirmalaj~jaanavIva (giving pure knowledge) gurugaLu (teachers) pramatharu (are pramathas, the early Sharanas)
saMshayaaLigaLanella (chain of doubts) j~jaanagniyiMda ( with the fire of pure knowledge) dahisi (burning)
muktiya ( of freedom) haMgeMbuda (obligation, debt) aruhina ( the awareness) baMdhadallirisida ( has kept it tied by) guru (the guru who)
cennabasavaNNanallade (ChennabasavaNNa) mattOrvana ( other than) kaaNe nODaa,(I don’t see sir!)
kapilasiddhamallikaarjunaa.(Kapilasiddhamallikaarjuna)


TRANSLATION
After seeing the hundreds of Gurus of this world over and over again, I am tired Sir!
There are hundreds of Gurus snatching your wealth.
There are hundreds of Gurus explaining the meaning of rituals.
There are hundreds of Gurus that offer pleasure and sorrow in this and the world beyond, through sacred verses and techniques.
There are hundreds of Gurus that preach good conduct that gives pleasure here and in heaven.
There are hundreds of Gurus that preach that intense thinking is the way to achieve the sixfold wealth.
There are hundreds of Gurus that say that all objects of desire are false and make one self-centered.
Pramathas (accomplished Sharanas) are the gurus that show the unity of Shiva (Linga, God) and Jeeva (Anga, individual) and provide the pure self-knowledge.
Having burnt the chain of doubts with the fire of knowledge, the only Guru who tied up the debt of freedom with ropes of awareness is Chennabasavanna and no one else, you see! Kapilasidda Mallikarjuna!


COMMENTARY


This Vachana is from Sharana Siddarameswara. Siddarameswara resident of Sholapur area is said to have become an ardent devotee of Shiva very early in his life. He devotes a major part of his life to worshipping Shiva in the form of temple-resident (Static, Sthavara) Linga. He also believed that serving community is an important part of devotee’s life and said to have constructed wells, shelters and lakes. Allama Prabhu in his effort to drive home to Siddarameswara that devotion and community projects are not the end in themselves, and the Self-knowledge and awareness of the unity of the Lord and the devotee (i.e. Linga-Anga Saamarasya) are the most important, brings him in contact with Sharanas at the city of Kalyana. Siddarameswara participates in Anubhava Mantapa (platform of experience) of Sharanas and becomes a disciple of Chennabasavanna (nephew of Basavanna). In this Vachana, Siddarameswara enumerates the variety of teachers (Gurus) found in the world and emphasizes that the true teacher is the one who enhances the intense desire and awareness to achieve self-realization.
It is apparent that even in the eleventh century (the time of Sharana movement) Gurus of various types and inclinations were present. Some were more interested in snatching the wealth of their disciples. Some gurus preached the ritualistic way of life. Some offered techniques to enhance pleasure and avoid sorrow in this and the next worlds. Some preached that the good conduct here is the only way to achieve heaven. Some advocated thinking and questioning as the mechanism for achieving the sixfold wealth: sama (Control of mind – ManoNigraha), dama (control of external senses, Baahyandriya Nigraha) , uparati (Withdrawing from objects, Vairaagya), titiksa (endurance of pain/pleasure, heat/cold, etc.), sradda(faith, belief) and samaadhana (single-pointedness of mind). Some teach that all objects of desire are false and one should get self-centered. Siddarameswara concludes that the Sharanas who have accomplished Linga-Anga Saamarasya (Unity with Him) are the only true Gurus who can remove the chain of doubts from disciple’s mind and impart pure knowledge of the self. They are the only Gurus who can show the true freedom through true awareness. In particular, Siddarameswara offers his utmost respect saying that his Guru Chennabasavanna is the only true guru that he has come across and no one else.


Let us become aware and gain pure self-knowledge through those who have achieved it!


KANNADA COMMENTARY


ಇದು ಸಿದ್ಧರಾಮೇಶ್ವರರ ವಚನ. ಇಲ್ಲಿ ಅವರು ಅನೇಕ ಬಗೆಯ ಗುರುಗಳ ವಿಷಯ ಹೇಳುತ್ತ ನಿಜವಾದ ಗುರು ಯಾರು ಎಂಬುದನ್ನು ಹೇಳುತ್ತಿದ್ದಾರೆ. ಈ ವಚನವನ್ನು ನೋಡಿದರೆ ಎಂಟು ನೂರು ವರ್ಷಗಳ ಹಿಂದೆಯೂ ಇಂದಿನ ಪರಿಸ್ಥಿತಿಯೇ ಇತ್ತು ಎಂಬುದು ಕಂಡುಬರುತ್ತದೆ. ಸಿದ್ಧರಾಮರು, ಲೋಕದಲ್ಲಿ ನೂರಾರು ಗುರುಗಳನ್ನು ನೋಡಿ ಬೇಸರಗೊಂಡೆನೆಂದು ಹೇಳುತ್ತಾರೆ. ಏಕೆಂದರೆ ಅವರೆಲ್ಲ ನಿಜವಾದ ಜ್ಞಾನವನ್ನು ತೋರದೆ ಅರ್ಥವಿಲ್ಲದ ಯಾವುದೋ ಒಂದನ್ನು ಜ್ಞಾನವೆಂದು ತೋರುತ್ತಾರೆ. ಅಷ್ಟೇ ಅಲ್ಲದೆ ಮೋಸಮಾಡುವ ಗುರುಗಳೂ ಇದ್ದಾರೆ. ಮೋಸ ಮಾಡಿ ಶಿಷ್ಯರಿಂದ ಹಣವನ್ನು ದೋಚುತ್ತಾರೆ. ಅವರ ಮಾತಿನ ಮೋಡಿಗೆ ಒಳಗಾಗಿ ಶಿಷ್ಯರು ಗುರುಗಳು ಕೇಳಿದ್ದನ್ನು ಕೊಡುತ್ತಾರೆ. ಇನ್ನು ಕೆಲವರು, ಶಾಸ್ತ್ರಗಳ ಅರ್ಥವನ್ನು ಹೇಳಿ ಶಿಷ್ಯರನ್ನು ಅದೇ ಜ್ಞಾನವೆನ್ನುವ ಭ್ರಮೆಯಲ್ಲಿಡುತ್ತಾರೆ. ಇನ್ನು ಅನೇಕ ಗುರುಗಳು ಮಂತ್ರ ತಂತ್ರಗಳನ್ನು ತಿಳಿಸುತ್ತ, ಅವುಗಳಿಗೆ ಇಲ್ಲದ ಮಹತ್ವವನ್ನು ಕೊಡುತ್ತ ಅವುಗಳಿಂದುಂಟಾಗುವ ಸುಖ ದುಃಖದಲ್ಲಿ ಶಿಷ್ಯರನ್ನು ಮುಳುಗಿಸುತ್ತಾರೆ, ಇನ್ನೂ ಹೆಚ್ಚಿನ ಅಜ್ಞಾನಕ್ಕೀಡುಮಾಡುತ್ತಾರೆ. ಇನ್ನೂ ನೂರಾರು ಗುರುಗಳು ಯಾವುದು ಒಳ್ಳೆಯ ಕರ್ಮ ಯಾವುದು ಕೆಟ್ಟ ಕರ್ಮ ಎಂಬುದನ್ನು ವಿವರಿಸುತ್ತ, ಒಳ್ಳೆಯ ಕರ್ಮ ಮಾಡಿದರೆ ಸ್ವರ್ಗವು ದೊರೆಯುತ್ತದೆ, ಕೆಟ್ಟ ಕರ್ಮ ಮಾಡಿದರೆ ಮರ್ತ್ಯದಲ್ಲಿಯೇ ಇರಬೇಕಾಗುತ್ತದೆ ಎಂದು ನಂಬಿಸಿ ಶಿಷ್ಯರನ್ನು ಸತ್ಯದಿಂದ ದೂರವಿರಿಸುತ್ತಾರೆ. ಇನ್ನು ಬಹು ಸಂಖ್ಯೆಯ ಗುರುಗಳು ವಿಚಾರಕ್ಕೆ ಪ್ರಾಮುಖ್ಯತೆ ಕೊಟ್ಟು ಷಟ್ಸಾಧನೆಗಳನ್ನು ತಿಳಿಸುತ್ತಾರೆ. ಶಮೆ, (ಆತ್ಮ ಸಂಯಮ), ದಮೆ(ಇಂದ್ರಿಯ ನಿಗ್ರಹ), ತಿತಿಕ್ಷೆ (ಸಹನೆ ,ತಾಳ್ಮೆ), ಉಪರತಿ (ವೈರಾಗ್ಯ), ಶ್ರದ್ಧೆ ಮತ್ತು ಸಮಾಧಾನ ಇವು ಷಟ್ಸಂಪತ್ತುಗಳು. ಇವುಗಳನ್ನು ಸಾಧಿಸುವುದು ಷಟ್ಸಾಧನೆ. ಇವೆಲ್ಲವುಗಳನ್ನು ಕೇವಲ ವಿಚಾರಗಳಿಂದ ಸಾಧಿಸುವುದು ಸಾಧ್ಯವಿಲ್ಲ. ವೈಚಾರಿಕತೆಯಿಂದ ಅವುಗಳನ್ನು ಬೌದ್ಧಿಕವಾಗಿ ತಿಳಿದುಕೊಳ್ಳಬಹುದೇ ಹೊರತು ಅವುಗಳನ್ನು ಹೊಂದುವುದು ಸಾಧ್ಯವಿಲ್ಲ. ಆದರೆ ಗುರುಗಳು, ಶಿಷ್ಯರನ್ನು, ಅವುಗಳನ್ನು ವಿಚಾರದಿಂದ ಸಾಧಿಸಬಹುದು ಎಂಬ ಭ್ರಮೆಯಲ್ಲಿಡುತ್ತಾರೆ. ಇಂದ್ರಿಯ ವಿಷಯಗಳೆಲ್ಲವೂ ಮಿಥ್ಯೆ ಎಂದು ತಿಳಿಸುತ್ತಾರೆ. ಅದು ಕೂಡ ಇನ್ನೊಂದು ರೀತಿಯ ಭ್ರಮೆ. ಇಂದ್ರಿಯ ಸುಖ ಬೇಕು ಎನ್ನುವವನಿಗೂ ಮತ್ತು ಇಂದ್ರಿಯ ಸುಖ ಬೇಡವೆನ್ನುವವನಿಗೂ ಲಿಂಗಾಂಗ ಸಾಮರಸ್ಯವಿಲ್ಲ ಎನ್ನುತ್ತಾರೆ ಶರಣರು. ಇಂದ್ರಿಯಗಳು ಮಿಥ್ಯೆ ಎಂದು ಪರಿಗ್ರಹಿಸಿ ಅವುಗಳನ್ನು ಕೃತಕವಾಗಿ ನಿಗ್ರಹದಲ್ಲಿಡುವುದು ಸಾಧ್ಯವೂ ಇಲ್ಲ ಮತ್ತು ಸಾಧುವೂ ಅಲ್ಲ. ಆದರೆ ಶಿಷ್ಯರಿಂದ ಇಂತಹದನ್ನು ಮಾಡಿಸುವರು ನೂರಾರು ಗುರುಗಳು. ಅವುಗಳನ್ನು ನಿಗ್ರಹದಲ್ಲಿಟ್ಟಿದ್ದೇನೆ ಎನ್ನುವ ಭ್ರಮೆಯಲ್ಲಿ ಶಿಷ್ಯ ಆ ಸಾಧನೆಯ ಅಹಮ್ಮಿನಲ್ಲಿರುತ್ತಾನೆ. ಆತನು ತನ್ನ ಬಗ್ಗೆಯೇ ಅನುರಾಗದಲ್ಲಿ ಮೈ ಮರೆಯುತ್ತಾನೆ, ಎನ್ನುತ್ತಾರೆ ಸಿದ್ಧರಾಮೇಶ್ವರರು. ಇಂತಹ ಶಿಷ್ಯರನ್ನು ತಯಾರಿಸುವ ಗುರುಗಳು ನೂರಾರು ಸಿಗುತ್ತಾರೆ ಎನ್ನುತಾರೆ. ಆದರೆ ಶಿವ ಮತ್ತು ಜೀವ ಇವರ ಏಕತೆಯನ್ನು ತಿಳಿಸಿ, ಯಾವ ಭ್ರಮೆಗೂ ಒಳಗಾಗದೆ, ಯಾವ ಪ್ರಭಾವಕ್ಕೂ ಒಳಗಾಗದೆ ಇರುವ ನಿರ್ಮಲವಾದ ಜ್ಞಾನವನ್ನು ಉಂಟುಮಾಡುವವರು ಕೇವಲ ಪ್ರಮಥರು, ಎಂದರೆ ಸಾಮರಸ್ಯ ಪಡೆದ ಶರಣರು ಮಾತ್ರ ಎನ್ನುತ್ತಾರೆ ಸಿದ್ಧರಾಮರು. ಸಂಶಯದ ಶೃಂಖಲೆಗಳನ್ನೆಲ್ಲ ಜ್ಞಾನದ ಅಗ್ನಿಯಿಂದ ಸುಟ್ಟು, ಮುಕ್ತಿಯ ಹಂಗನ್ನು ಅರಿವಿನ ಬಂಧದಲ್ಲಿರಿಸುವಂತೆ ಮಾಡಿದ ತನ್ನ ಗುರು. ಅರಿವು ಉಂಟಾದಾಗ ಮುಕ್ತಿಯ ಹಂಗು ಅಥವಾ ಅದರ ಅವಶ್ಯಕತೆಯಿರುವುದಿಲ್ಲ. ಆದ್ದರಿಂದ ಅದು ಅರಿವಿನ ಬಂಧದಲ್ಲಿದೆ ಎನ್ನುತ್ತಾರೆ. ಆ ಗುರು ಕೇವಲ ಚೆನ್ನಬಸವಣ್ಣನಲ್ಲದೆ ಬೇರಾರೂ ಅಲ್ಲ ಎಂದು ತಮ್ಮ ಗುರುವನ್ನು ನೆನೆಯುತ್ತಾರೆ.


ಸ್ಥಾವರ ಲಿಂಗಾರಾಧನೆಯಲ್ಲಿ ಮತ್ತು ಲೋಕೋದ್ಧಾರದ ಕನಸಿನಲ್ಲಿ ದಿನಗಳನ್ನು ಕಳೆಯುತ್ತಿದ್ದ ಸಿದ್ಧರಾಮನಿಗೆ ಅಲ್ಲಮರು ಪ್ರಮಥರ ಶಿವಯೋಗದ ರಹಸ್ಯವನ್ನು ತೋರಿಸಲು ಕಲ್ಯಾಣಕ್ಕೆ ಕರೆತರುತ್ತಾರೆ. ಅಲ್ಲಿ ಚೆನ್ನಬಸವಣ್ಣನವರಿಂದ ಅವರಿಗೆ ದೀಕ್ಷೆಯಾಗುತ್ತದೆ. ಅವರ ಭ್ರಮೆಗಳು ಕಳಚಿಹೋಗುತ್ತವೆ. ಅವರು ತಮ್ಮ ಸಾಧನೆಯ ಸಮಯದಲ್ಲಿ ನಾನಾ ತರಹದ ಗುರುಗಳನ್ನು ಕಂಡಿರಬಹುದು. ಆದರೆ ಚೆನ್ನಬಸವಣ್ಣನವರನ್ನು ಮತ್ತು ಇತರ ಶರಣರನ್ನು ಕಂಡ ಮೇಲೆ ಅವರಿಗೆ ನಿಜವಾದ ಗುರು ಯಾರೆಂಬುದು ತಿಳಿದದ್ದಕ್ಕೆ ಈ ವಚನವೇ ಸಾಕ್ಷಿ.

No comments:

Post a Comment