Saturday, May 17, 2014

Vachana 194: Kanna Mucchi Kannadiya Thoruvante – Showing the Mirror to the one with closed eyes.


VACHANA IN KANNADA

ಕಣ್ಣಮುಚ್ಚಿ ಕನ್ನಡಿಯ ತೋರುವಂತೆ
ಇರುಳು ಹಗಲಿನ ನಿದ್ರೆ ಸಾಲದೆ?
ಬೆರಳನೆಣಿಸಿ ಪರಮಾರ್ಥವ ಹಡೆವೆಡೆ
ಚೋದ್ಯವಲ್ಲವೆ ? ಹೇಳಾ.
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ,
ಕೂಡಲಸಂಗಮದೇವಾ?

TRANSLITERATION

kaNNa mucci kannaDiya tOruvaMte
iruLu hagalina nidre saalade?
beraLaneNisi paramaarthava haDeveDe
cOdyavallave hELaa.
mUga mucci muktiya bayasuva
naacikeyilladavara  naaanEneMbe,
kUDalasaMgamadEvaa

CLICK HERE FOR A RECITATION


TRANSLATION (WORDS)

kaNNa (eyes)  mucci (closing)  kannaDiya (the mirror)  tOruvaMte (like showing)
iruLu  (of night) hagalina (of day) nidre(sleep)  saalade (is it not enough)?
beraLaneNisi (counting the fingers)  paramaarthava (theology, the other) haDeveDe (to know)
cOdyavallave hELaa (is it not astonishing) .
mUga (nostril)  mucci (by closing)  muktiya (salvation) bayasuva (wanting)
naacikeyilladavara(shameless people)  naaanEneMbe (what can I say),
kUDalasaMgamadEvaa (kUdalasangamadeva)

VACHANA IN ENGLISH

Like showing the mirror after closing eyes,
is it not enough to sleep through night and day?
Is it not astonishing if they could gain the highest good
by counting fingers; pray tell?
O Lord Kíðala Saþgama,
What can I say of those shameless people
who hanker for salvation by closing their nose?

COMMENTARY

Basavanna wonders about the techniques people adopt to invite the Divine into their lives, in this Vachana. There are those who close their eyes, chant His name (or a mantra) counting on their fingers. There are those who close and open their nostrils to regulate their breath in the everlasting pursuit of the Divine. Basavanna calls them shameless people and says that mere closing eyes, chanting, counting on fingers, and controlling the breath are not enough to gain the higher good. All these ways are just like sleeping night and day and letting the world go by. It is like showing the mirror to the one with closed eyes. It does not matter to him whether it is day or night. All he perceives is the darkness. What is needed to gain the highest good is to be part of this world created by Him, paying attention to His creations, developing an appreciation for the power behind all creation, and acknowledging His presence everywhere and in everything.  Escaping from here by closing the eyes, counting fingers and controlling breath are not the ways. Mechanically performing these acts is like sleeping through the night and day. We must be in this world, yet become aware of the extreme influences of the material world and how to escape from these influences. These infuences are the ones we need to give up, not just closing the eyes, meditating and endless chanting.

We are composed of the body, mind and intellect. Body is His abode. As such, it is a must to keep the body fit through appropriate exercising and activity. There is no need to punish the body with extremes. Breath controls the body. Concentrating on the breath is considered a way of controlling the mind or at least not getting influenced by the wavering mind. The intellect must kindle the awareness of what is that we need to give up. The awareness in  turn should shed the light on what is an appropriate way to gain the highest good (Mukti, Salvation)!      


Let us Awake and become Aware! 



KANNADA COMMENTARY

ಕಣ್ಣಮುಚ್ಚಿ ಕನ್ನಡಿಯ ತೋರುವಂತೆ (ಕಣ್ಣುಗಳನ್ನು ಮುಚ್ಚಿ ಕನ್ನಡಿಯನ್ನು ತೋರಿಸಿದಂತೆ)
ಇರುಳು ಹಗಲಿನ ನಿದ್ರೆ ಸಾಲದೆ? (ರಾತ್ರಿ ಮತ್ತು ಹಗಲಿನಲ್ಲಿ ಮಾಡುವ ನಿದ್ರೆ ಸಾಲುವುದಿಲ್ಲವೆ?)
ಬೆರಳನೆಣಿಸಿ ಪರಮಾರ್ಥವ ಹಡೆವೆಡೆ (ಬೆರಳುಗಳನ್ನು ಎಣಿಸಿ ಪರಮಾರ್ಥವನ್ನು ಪಡೆಯುವೆ ಎನ್ನುವುದು)
ಚೋದ್ಯವಲ್ಲವೆ (ಸೋಜಿಗ ಅಲ್ಲವೆ)? ಹೇಳಾ .
ಮೂಗ ಮುಚ್ಚಿ ಮುಕ್ತಿಯ ಬಯಸುವ  (ಮೂಗನ್ನು ಮುಚ್ಚಿಕೊಂಡು ಉಸಿರನ್ನು ಬಿಗಿಹಿಡಿದು ಮುಕ್ತಿಯನ್ನು ಆಶಿಸುವ)
ನಾಚಿಕೆಯಿಲ್ಲದವರ ನಾನೇನೆಂಬೆ, (ನಾಚಿಕೆಯಿಲ್ಲದವರನ್ನು ನಾನೇನೆಂದು ಕರೆಯಲಿ)
ಕೂಡಲಸಂಗಮದೇವಾ?

ಕಣ್ಣನ್ನು ಮುಚ್ಚಿಕೊಂಡು ಕುಳಿತು, ಬೆರಳನ್ನೆಣಿಸಿ ಜಪ ಮಾಡುತ್ತ ಇಲ್ಲವೆ ಮೂಗನ್ನು ಮುಚ್ಚಿಕೊಂಡು ಉಸಿರಾಟವನ್ನು ವಶಮಾಡುತ್ತ,  ಮುಕ್ತಿಯನ್ನು ಪಡೆಯುತ್ತೇನೆ ಎನ್ನುವುದು  ಎಂತಹ ಮೂರ್ಖತನವೆಂದೆನಿಸಿ ಅಂತಹವರನ್ನು ನಾಚಿಕೆಯಿಲ್ಲದವರು ಎಂದು  ಹೇಳುತ್ತಾರೆ ಬಸವಣ್ಣನವರು.

ಕಣ್ಣನ್ನು ಮುಚ್ಚಿ ಕನ್ನಡಿಯನ್ನು ತೋರಿದರೆ ಏನು ಪ್ರಯೋಜನ. ಕಣ್ಣಿಗೆ ಕತ್ತಲೆಯಲ್ಲದೆ ಏನೂ ಕಾಣದು. ಅದು ನಿದ್ರೆ ಮಾಡಿದಂತೆ. ಹಗಲು ಇರುಳೂ ನಿದ್ರೆಯಲ್ಲಿಯೇ ಕಳೆಯುತ್ತದೆ ನಮ್ಮ ಜೀವನ, ಎಂದರೆ ಅಜ್ಞಾನದಲ್ಲಿಯೇ ಕಳೆಯುತ್ತದೆ ಎಂದರ್ಥ. ಬೆರಳನ್ನೆಣಿಸಿ ಜಪ ಮಾಡುವುದು, ಉಸಿರಾಟವನ್ನು ನಿಯಂತ್ರಿಸುವುದು ಕೂಡ  ಅಜ್ಞಾನವೇ ಎಂಬುದು ತಾತ್ಪರ್ಯ.  ಬೆರಳನೆಣಿಸು ಮತ್ತು ಉಸಿರಾಟ ನಿಯಂತ್ರಿಸು ನಿನಗೆ ಪರಮಾರ್ಥ ಮತ್ತು ಮುಕ್ತಿ  ಸಿಗುವುದು ಎಂಬುದು ಕಣ್ಣು ಕಟ್ಟಿ ಕನ್ನಡಿಯನ್ನು ತೋರಿಸಿದಂತೆ.
ಅದು ಹೇಗೆ ಎಂದು ನೋಡೋಣ.
ಕಣ್ಣಿಗೆ ಕಾಣುವ ಈ ಜಗತ್ತು, ಈ ಜೀವ ಇತ್ಯಾದಿಗಳನ್ನು ನೋಡಿ ಈ ಎಲ್ಲದರ ಹಿಂದೆ ಅಡಗಿರುವ ಸತ್ಯವೇನೆಂದು ತಿಳಿಯುವುದು,  ಈ ಎಲ್ಲದರ ಪರಮ ಅರ್ಥ ತಿಳಿಯುವುದು ಪರಮಾರ್ಥ. ಬೆರಳನ್ನು ಎಣಿಸುತ್ತ ಒಂದೆಡೆ ಕುಳಿತು ಅದನ್ನು ಸಾಧಿಸುತ್ತೇನೆ ಎನ್ನುವುದು  ಆಶ್ಚರ್ಯ ಹುಟ್ಟಿಸುತ್ತದೆ. ಏಕೆಂದರೆ ಪರಮಾರ್ಥವು ಚಿಂತನ, ಮಂಥನ, ಗಮನಿಸುವಿಕೆಯಿಂದಲ್ಲದೆ ದೊರೆಯುವ ವಿಷಯವಲ್ಲ. ಮತ್ತು ಈ ಎಲ್ಲವೂ ಈ ಜಗತ್ತಿನಲ್ಲಿದ್ದುಕೊಂಡು ನಡೆಯಬೇಕಾದವುಗಳು. ಅವುಗಳಿಂದ ದೂರವಾಗಿ  ಯಾಂತ್ರಿಕವಾಗಿ ಬೆರಳನ್ನು ಎಣಿಸುತ್ತ ಕುಳಿತರೆ ಅದು ಕಣ್ಣು ಕಟ್ಟಿ ಕನ್ನಡಿ ನೋಡಿದಂತೆ ಆಗುತ್ತದೆ. 

ಯೋಗಾಭ್ಯಾಸದಿಂದ ಉಸಿರಾಟವನ್ನು ನಿಯಂತ್ರಿಸಿ  ಮುಕ್ತಿಯನ್ನು ಪಡೆಯುತ್ತೇನೆ ಎಂಬುದು ಸಹ ಹಾಸ್ಯಾಸ್ಪದ. ಏಕೆಂದರೆ  ಮುಕ್ತಿಯನ್ನು ಪಡೆಯಬೇಕು ಎಂಬುದು ತಿಳಿದಿದೆಯೇ ಹೊರತು ಯಾವುದರಿಂದ ಮುಕ್ತಿ? ಎಂಬುದೇ ತಿಳಿಯದು.
ಮುಕ್ತಿ ಬೇಕಾದದ್ದು ಈ ಜಗತ್ತಿನ ದುಃಖದಿಂದ, ಕಷ್ಟ ಕೋಟಲೆಗಳಿಂದ, ನಾವು ಜೋತುಬಿದ್ದ ನಂಬಿಕೆಗಳಿಂದ, ನಮ್ಮ ಆಸೆ ಆಮಿಷಗಳಿಂದ,  ನಮಗೇ ತಿಳಿಯದೆ ನಾವುಗಳು ಒದ್ದಾಡುತ್ತಿರುವ ಇನ್ನೂ ಅನೇಕ ಜಂಜಾಟಗಳಿಂದ. ಈ ಒದ್ದಾಟ  ನಮ್ಮ ಗಮನಕ್ಕೆ ಬಂದರೆ ಆಗ ಅದರ ಕಾರಣವೇನು ಎಂದು ಯೋಚಿಸಬಹುದು. ಒಟ್ಟಿನಲ್ಲಿ  ಯೋಚನೆ, ಚಿಂತನೆ, ನಿಷ್ಪಕ್ಷಪಾತ ದೃಷ್ಟಯಿಂದ ಗಮನಿಸುವಿಕೆ  ಇಲ್ಲಿ ಮಹತ್ವವುಳ್ಳವುಗಳು. ಅದನ್ನು ಬಿಟ್ಟು ಬೆರಳು ಎಣಿಸುವುದು, ಮೂಗು ಮುಚ್ಚಿಕೊಳ್ಳುವುದು ಇತ್ಯಾದಿಗಳು ಯಾವ ಕೆಲಸಕ್ಕೆ?  ಅವುಗಳಿಂದ  ನಮ್ಮ ದುಃಖಗಳು ದೂರವಾಗಲು ಸಾಧ್ಯವೆ?  ಮುಕ್ತಿ ಯಾವುದರಿಂದ ಮತ್ತು  ಹೇಗೆ ಎಂಬುದನ್ನು ತಿಳಿಯದೆ  ಯಾಂತ್ರಿಕವಾದ ಅಭ್ಯಾಸಗಳಲ್ಲಿ ತೊಡಗಿಕೊಳ್ಳುವುದು ಎಂತಹ ಮೂರ್ಖತನ? ಅಂತಹವರನ್ನು ಬಸವಣ್ಣನವರು ನಾಚಿಕೆಯಿಲ್ಲದವರು ಎನ್ನುತ್ತಾರೆ.


Friday, May 9, 2014

Vachana 193: Bidireleya melidade – Chewing the bamboo Leaves!


VACHANA IN KANNADA

ಬಿದಿರೆಲೆಯ ಮೆಲಿದಡೆ ಮೆಲಿದಂತಲ್ಲದೆ, ರಸವ ಹಡೆಯಲು ಬಾರದು
ಮಳಲ ಹೊಸೆದಡೆ ಹೊಸೆದಂತಲ್ಲದೆ, ಸರವಿಯ ಹಡೆಯಲು ಬಾರದು
ನೀರ ಕಡೆದಡೆ ಕಡೆದಂತಲ್ಲದೆ, ಬೆಣ್ಣೆಯ ಹಡೆಯಲು ಬಾರದು
ನಮ್ಮ ಕೂಡಲ ಸಂಗಮದೇವನಲ್ಲದೆ, ಅನ್ಯದೈವಕ್ಕೆರಗಿದಡೆ
ಹೊಳ್ಳ ಕುಟ್ಟಿ ಕೈ ಹೊಟ್ಟೆಯಾದಂತೆ ಆಯಿತ್ತಯ್ಯಾ

TRANSLITERATION

bidireleya melidaDe  melidaMtallade, rasava haDeyalu baaradu
maLala hosedaDe hosedaMtallde, saraviya haDeyalu baaradu
nIra kaDedaDe kaDedaMallade , beNNeya haDeyalu baaradu
namma kUDala saMgamadEvallade, anyadaivakkeragidaDe
hoLLa kuTTi  kai hoTTeyaadaMte aayittayyaa

CLICK HERE FOR A RECITATION


TRANSLATION (WORDS)

bidireleya  (bamboo leaves)  melidaDe (if chewed)  melidaMtallade (feeling of chewing will be there but)
rasava (juice)  haDeyalu baaradu  (will not give out)
maLala (sand)  hosedaDe ( if twisted)  hosedaMtallde (will give the feeling of twisting but)
saraviya (rope) haDeyalu baaradu (will not give out)
nIra (water) kaDedaDe (if churned)  kaDedaMallade (will give the feeling of churning but)
beNNeya (butter) haDeyalu baaradu (will not give out)
namma kUDala saMgamadEvallade (other than our kUDalasangamadeva)
anyadaivakkeragidaDe (if one worships)
hoLLa  ( chaff) kuTTi  ( by hitting) kai  (the hand) hoTTeyaadaMte aayittayyaa ( like swollen, sir! )

VACHANA IN ENGLISH

If bamboo leaves are chewed, feeling of chewing will be there, but juice does not come out!
If sand is spun, feeling of spinning will be there, but the rope does not come out!
If water is churned, feeling of churning will be there, but the butter does not come out!
Bowing to any other God than our Lord Kudala Sangama,
is as if, by pounding chaff and getting the hand swollen, Sir!

COMMENTARY  

Basavanna is advocating bowing to just one God in this Vachana through several interesting similes. Bamboo leaves are known to be just fibrous. Chewing them although provides the feeling of chewing, does not yield any juice with nutritional value. We need to spin several threads together to make a rope. Spinning sand between our hands does not yield a rope. Butter is generated by churning the butter milk; churning water does not yield butter. We need to concentrate and use appropriate material to get the results we want. Basavanna says that bowing to any other God other than Lord Kudala Sangama is like pounding the chaff to get the hand swollen – it has no tangible value!  

Here it is very important to understand who are Lord Kudala Sangama and the 'other' God.

Sharanas did not believe in idol worship, let alone multiple forms of it.  They provided the icon of Ishtalinga to represent the concept of the Divine principle. They urged us to see past the physical icon and become aware of the principle it represents. Basavanna is referring to this divine principle as his God Kudala Sangama. The name 'Kudala Sangama' is the signature of Basavanna’s Vachanas. Other Sharanas have used similar signatures (Guheshvara, Swtantra Siddalingeshvara, Chenna Mallikarjuna etc.). All of them pointed to that single divine principle they urged us to become aware of. The message of this Vachana then is to get away from worshipping multiple forms and shapes and sizes and develop the awareness of that divine principle!  

Let us get single minded and focus on the Divine Principle!

KANNADA COMMENTARY

ಅರ್ಥ:
ಬಿದಿರೆಲೆಯ ಮೆಲಿದಡೆ ಮೆಲಿದಂತಲ್ಲದೆ (ಬಿದಿರಿನ ಎಲೆಯನ್ನು ಬಾಯಲ್ಲಿಟ್ಟು ಅಗಿದರೆ ಅಗಿದಂತೆ ಆಗುತ್ತದೆ ಆದರೆ)
ರಸವ ಹಡೆಯಲು ಬಾರದು (ಅದು ರಸವನ್ನು ಕೊಡಲಾರದು)
ಮಳಲ ಹೊಸೆದಡೆ ಹೊಸೆದಂತಲ್ಲದೆ (ಮರಳನ್ನು ಕೈಯಲ್ಲಿ ಹೊಸೆದರೆ ಹೊಸೆದಂತೆ ಆಗುತ್ತದೆ ಆದರೆ)
ಸರವಿಯ (ಹಗ್ಗವನ್ನು)  ಹಡೆಯಲು ಬಾರದು ( ಕೊಡಲಾರದು)
ನೀರ ಕಡೆದಡೆ ಕಡೆದಂತಲ್ಲದೆ (ನೀರನ್ನು ಕಡೆಗೋಲಿನಿಂದ ಕಡೆದರೆ ಅಡೆದಂತೆ ಆಗುತ್ತದೆ ಆದರೆ)
ಬೆಣ್ಣೆಯ ಹಡೆಯಲು ಬಾರದು (ಅದು ಬೆಣ್ಣೆಯನ್ನು ಕೊಡಲಾರದು)
ನಮ್ಮ ಕೂಡಲ ಸಂಗಮದೇವನಲ್ಲದೆ (ಕೂಡಲ ಸಂಗಮನನ್ನು ಬಿಟ್ಟು)
ಅನ್ಯದೈವಕ್ಕೆರಗಿದಡೆ (ಬೇರೆ ದೇವರಿಗೆ ಶರಣು ಹೋದರೆ)
ಹೊಳ್ಳ  (ಟೊಳ್ಳು) ಕುಟ್ಟಿ  ಕೈ ಹೊಟ್ಟೆಯಾದಂತೆ ( ಕುಟ್ಟಿ ಕೈ ಬಾತುಕೊಂಡಂತೆ) ಆಯಿತ್ತಯ್ಯಾ

ತಾತ್ಪರ್ಯ:

ಇಲ್ಲಿ ಬಸವಣ್ಣನವರು ಅನೇಕ ದೇವರನ್ನು ಪೂಜಿಸುವವರನ್ನು ಕುರಿತು ಅಂತಹ ಪೂಜೆ ಎಷ್ಟು  ನಿರರ್ಥಕ ಎಂಬುದನ್ನು ಉದಾಹರಣೆಸಹಿತ ಹೇಳುತ್ತಿದ್ದಾರೆ.
ಬಿದಿರಿನ ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಮೆಲಿದರೆ ಆ ಎಲೆಗಳನ್ನು ಮೆಲಿದಂತೆ ಆಗುತ್ತದೆಯೆ ಹೊರತು ಆ ಎಲೆಗಳಿಂದ ರಸ ಹೊರಡಲಾರದು, ಹೊಟ್ಟೆ ತುಂಬಲಾರದು.  ಅದು ಕೇವಲ ನಾರುಮಯ. ಆದ್ದರಿಂದ ಬಿದಿರ ಎಲೆಗಳನ್ನು ಅಗಿಯುವ ಶ್ರಮದ ಕೆಲಸ ವ್ಯರ್ಥವಾಗುತ್ತದೆ. ಅದರಿಂದ ಯಾವ ಪ್ರಯೋಜನವೂ ಇಲ್ಲ. 
ಮರಳಿನಿಂದ ಹಗ್ಗ ಮಾಡುತ್ತೇನೆ ಎಂದು ಅದನ್ನು ಹೊಸೆಯುತ್ತ ಕುಳಿತರೆ  ಹಗ್ಗ ಸಿಗುತ್ತದೆಯೆ? ಕೈಯಿಂದ ಹೊಸೆದಂತೆ ಆಗುತ್ತದೆಯೆ ಹೊರತು ಆ ಮರಳು ಹಗ್ಗವನ್ನು ಕೊಡಲಾರದು. ಹೊಸೆದ ಶ್ರಮ ವ್ಯರ್ಥವಾಗುತ್ತದೆ. ಉದ್ದೇಶ ಪೂರೈಸದು.
ಅದೇ ರೀತಿ ನೀರನ್ನು ಕಡೆಗೋಲಿನಿಂದ ಮೊಸರು ಕಡೆದಂತೆ ಕಡೆದರೆ ಆ ನೀರು ಬೆಣ್ಣೆಯನ್ನು ಕೊಡಬಲ್ಲುದೆ? ಇಲ್ಲವಾದ್ದರಿಂದ ಈ ಎಲ್ಲ ಕೆಲಸಗಳ ಶ್ರಮ ವ್ಯರ್ಥವಾಗುತ್ತದೆ. ಅದೇ ರೀತಿ ಕೂಡಲಸಂಗಮನಲ್ಲದೆ ಬೇರೆ ದೇವರ ಪೂಜಿಸಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲವೆಂದು ಹೇಳುತ್ತಾರೆ ಬಸವಣ್ಣನವರು.

ಇಲ್ಲಿ ಕೂಡಲಸಂಗಮ ಎಂದರೆ ಯಾರು? ಅನ್ಯದೇವರು ಎಂದರೆ ಯಾರು? ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಕೂಡಲಸಂಗಮ ಎಂಬುದು ಬಸವಣ್ಣನವರ, ಇಷ್ಟದೇವ ಮತ್ತು ಅವರ ವಚನಗಳ ಅಂಕಿತ. ಇದೇ ರೀತಿಯಾಗಿ ಎಲ್ಲ ಶರಣರು ತಮ್ಮ ತಮ್ಮ ಇಷ್ಟದೇವನನ್ನು ಪೂಜಿಸುತ್ತಿದ್ದರು ಮತ್ತು ಅದನ್ನೇ ತಮ್ಮ ಅಂಕಿತವಾಗಿಟ್ಟುಕೊಂಡರು.  ಉದಾಹರಣೆಗೆ- ಗುಹೇಶ್ವರ, ಸ್ವತಂತ್ರ ಸಿದ್ದಲಿಂಗೇಶ್ವರ, ಚೆನ್ನ ಮಲ್ಲಿಕಾರ್ಜುನ, ನಿರ್ಲಜ್ಜೇಶ್ವರ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ಇತ್ಯಾದಿ. ಹಾಗೆಂದರೆ  ಅವರೆಲ್ಲರೂ ಒಬ್ಬೊಬ್ಬ ದೇವರನ್ನು ಪೂಜಿಸುತ್ತಿದ್ದರೆ? ಇಲ್ಲ. ಅವರೆಲ್ಲರೂ ಪೂಜಿಸುತ್ತಿದ್ದುದು ಆ ಪರತತ್ವವನ್ನು ಮಾತ್ರ. ಆ ಪರತತ್ವವನ್ನು ಅವರು ತಮ ತಮಗೆ ಇಷ್ಟವಾದ ಹೆಸರಿನಿಂದ ಕರೆದರು. ಆ ಪರತತ್ವವನ್ನು ಪೂಜಿಸುವುದು ಎಂದರೆ ಅರಿಯುವುದು ಮುಖ್ಯ. ಯಾರೇ ಆಗಲಿ ಇದನ್ನು ಅರಿಯುವುದನ್ನು ಬಿಟ್ಟು ಬೇರೆ ದೇವರನ್ನು ಪೂಜಿಸುವುದು ವ್ಯರ್ಥ ಎಂದು ಹೇಳುತ್ತಾರೆ ಬಸವಣ್ಣನವರು.  ಅದನ್ನು ಬಿಟ್ಟು, ಅರಗು ತಿಂದು ಕರಗುವ  ದೇವರನ್ನು, ಕಲ್ಲಿನಲ್ಲಿ ಕಟೆದ ಮೂರ್ತಿಯನ್ನು, ಚಿನ್ನ್ನ ಬೆಳ್ಳಿಯನ್ನು ಎರಕ ಹೊಯ್ದು ಮಾಡಿದ, ಕಾಲಕಳೆದಂತೆ ಬಣ್ಣ, ಆಕಾರಗೆಟ್ಟು ಹಾಳಾಗುವ, ಅಥವಾ ಕ್ಷಣಹೊತ್ತು ಮನಸ್ಸನ್ನು ರಂಜಿಸಿ ತಿಪ್ಪೆಸೇರುವ ದೇವರುಗಳನ್ನು ಅಥವಾ ಸತ್ತು ಹುಟ್ಟುವ ವ್ಯಕ್ತಿಗಳನ್ನು ಪೂಜಿಸುವುದು, ರಸವನ್ನು ಪಡೆಯಲು ಬಿದಿರಿನ ಎಲೆಗಳನ್ನು ಮೆಲಿದಂತೆ, ಹಗ್ಗ ಪಡೆಯಲು ಮರಳನ್ನು ಹೊಸೆದಂತೆ ಅಥವಾ, ಬೆಣ್ಣೆಯನ್ನು ಪಡೆಯಲು ನೀರನ್ನು ಕಡೆದಂತೆ ವ್ಯಥವೆಂದು ಹೇಳುತ್ತಾರೆ.  ಇವುಗಳ ಬಗ್ಗೆ  “ಭಕ್ತಿ ಭಕ್ತಿ” ಎಂದು ಜನರ ಹೇಳುವ ಅದು ನಿಜವಾದ ಭಕ್ತಿಯಲ್ಲ. ಜನರು ಅವುಗಳ ಬಗ್ಗೆ ನಿರ್ಮಿಸುವ ಕಥೆಗಳಿಂದ ಹುಟ್ಟುವ ಮೌಡ್ಯ ಮತ್ತ ಭಯ. ಈ ಮೌಢ್ಯ ಮತ್ತು ಭಯ ಜನರು ಅವುಗಳನ್ನು  ನಾನಾರೂಪದಲ್ಲಿ ಪೂಜಿಸುವಂತೆ ಮಾಡುತ್ತವೆ. ಕಾಲಾಂತರದಲ್ಲಿ ಸ್ವತಃ ಹಾಳಾಗುವ ಈ ದೇವರುಗಳು ಮನುಷ್ಯನಿಗೆ ತಾವೇನು ಕೊಡಬಲ್ಲವು? ಇಂತಹ ದೇವರುಗಳನ್ನು ಪೂಜಿಸುವುದು ಎಂದರೆ ಟೊಳ್ಳನ್ನು ಕೈಯಿಂದ ಕುಟ್ಟಿದಂತೆ. ಟೊಳ್ಳನ್ನು ಕುಟ್ಟಿದರೆ ಕೈ ನೋವಾಗಿ  ಅದಕ್ಕೆ ಬಾವು ಬರುತ್ತದೆ ಅಷ್ಟೆ. ಪರತತ್ವವನ್ನು ಬಿಟ್ಟು ಉಳಿದ ದೇವರುಗಳೆಲ್ಲ ಯಾವ ದೇವತ್ವವೂ ಇಲ್ಲದ ಟೊಳ್ಳು ವಸ್ತುಗಳು. ಅಂತಹವುಗಳನ್ನು ಪೂಜಿಸದರೆ ಕೇವಲ ಪೂಜಿಸಿದ ಆಯಾಸವೇ ಅದರ ಫಲ. ಆದ್ದರಿಂದ ಶಾಶ್ವತವಾದದ್ದನ್ನು, ನಿತ್ಯ ಸತ್ಯವಾದದ್ದನ್ನು, ಪೂಜಿಸಬೇಕು ಎನ್ನುತ್ತಾರೆ ಬಸವಣ್ಣನವರು.
 


Friday, May 2, 2014

Vachana 192: Giriya Shikaradamele Kulithukondu – Sitting on top of the Mountain!


VACHANA IN KANNADA

ಗಿರಿಯ ಶಿಖರದ ಮೇಲೆ ಕುಳಿತುಕೊಂಡು, ಜಡೆಯನ್ನೇರಿಸಿಕೊಂಡು
ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ?
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗದೊಡನೆ
ಸವೆದ ಪಾಷಾಣ!
ನಮ್ಮ ಕೂಡಲಸಂಗನ ಶರಣರ ಪ್ರಸಾದಜೀವಿಗಳಲ್ಲದವರು
ಏಸು ಕಾಲವಿರ್ದಡೇನು? ಅದರಂತು ಕಾಣಿರಣ್ಣಾ.

TRANSLITERATION

giriya shikharada mEle kuLitukoMDu, jaDeyannErisikoMDu
huttEri hAvu suttidaDEnayyA?
kRutyuga, trEtAyuga, dvAparayuga, kaliyugadoDane
saveda paShANa!
namma kUDalsaMgana sharaNara prasAdajIvigaLalladavaru
Esu kaalavirdaDEnu? adaraMtu kANiraNNA.

CLICK HERE FOR A RECITATION


TRANSLATION (WORDS)

giriya shikharada mEle( on top of the hill, mountain) kuLitukoMDu(sitting), jaDeyannErisikoMDu (tying hair on the head)
huttEri (ant hill grown)  hAvu (snake)  suttidaDEnayyA (what if snake is wound around sir)?
kRutyuga, trEtAyuga, dvAparayuga, kaliyugadoDane (four names of YUGAs, eras)
saveda paShANa (is like a stone eroded with time, YUGAs,) !
namma kUDalsaMgana sharaNara (our Kudalsangama’s devotees’) prasAdajIvigaLalladavaru (those who do not accept  everything as blessing)
Esu kaalavirdaDEnu (what if they live any amount of time)? adaraMtu kANiraNNA (they surely will succumb to death).

VACHANA IN ENGLISH

What if one is sitting on top of the mountain, with the hair tied into a braid on top of the head,
the ant hill grown around and a snake wound around, Sir!
Like a stone eroded over all the four Eras (kRuta, trEta, dvApara and kali)!
Those who do not accept everything as blessing from our kUdalasangama’s devotees,
no matter how long they live, they surely will succumb to death!

COMMENTARY

Our great books have innumerable stories of individuals in pursuit of the Divine subjecting themselves to lot of hardship. They give up their worldly activities and sit on top of mountains or secluded places. They remain so still that the ant hill grows around their bodies and eventually a serpent occupies the ant hill and surrounds their body. The story normally ends with the Divine appearing eventually and offering the Boone the seeker wanted. Basavanna might have come across individuals subjecting themselves to such hardship. He says that subjecting the body to such hardship does not take one close to the Divine. One has to be in the world created by Him for us. One has to gain the awareness of what the world is about and realize that it is a blessing from Him. One has to realize that everything one does is His work and it is for Him. When such awareness strikes, one has seen the Divine. In the absence of such awareness, one is like a stone exposed to the weather for ages, yet remains a stone.

Once again, this Vachana drives home the concept of being completely here (in this world), being unselfishly active (Kaayaka) and realizing Him in every aspect of life and appreciating everything one has as His blessing. That is the only way to reach the Divine!

Let us heighten our awareness to make Him reside within us!
   
KANNADA COMMENTARY

ಅರ್ಥ:

ಗಿರಿಯ ಶಿಖರದ ಮೇಲೆ ಕುಳಿತುಕೊಂಡು,(ಗಿರಿ ಶಿಖರದ ಮೇಲೆ ತಪಸ್ಸಿಗೆ ಕುಳಿತುಕೊಂಡು) ಜಡೆಯನ್ನೇರಿಸಿಕೊಂಡು (ಜಡೆಯನ್ನು ಬೆಳೆಸಿ ತಲೆಯ ಮೇಲೆ ಕಟ್ಟಿಕೊಂಡು)
ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ? (ಸುತ್ತ ಹುತ್ತು ಬೆಳೆದು ಹಾವು ಸುತ್ತಿಕೊಂಡಿದ್ದರೇನು?)
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗದೊಡನೆ
ಸವೆದ ಪಾಷಾಣ! (ಅದು ಅನೇಕ ಯುಗಗಳಿಂದ ಸವೆದು ಹೋದ ಕಲ್ಲಿನ ಸಮಾನ)
ನಮ್ಮ ಕೂಡಲಸಂಗನ ಶರಣರ ಪ್ರಸಾದಜೀವಿಗಳಲ್ಲದವರು (ಶರಣರನ್ನು ಅರಿತು ಅವರ ಪ್ರಸಾದದಿಂದ ಬದುಕದವರು)
ಏಸು ಕಾಲವಿರ್ದಡೇನು? (ಎಷ್ಟು ಕಾಲ ಜೀವಿಸಿದ್ದರೇನು?)  ಅದರಂತು ಕಾಣಿರಣ್ಣಾ.(ಅವರು ಸಾವಿಗೆ ಈಡಾಗುತ್ತಾರೆ)

ತಾತ್ಪರ್ಯ:

ಇಲ್ಲಿ ಬಸವಣ್ಣನವರು ಶರಣನ್ನರಿಯವುದು ಮುಖ್ಯ, ಮತ್ತು ಹಾಗೆ ಮಾಡಲು ಗಿರಿ ಶಿಖರಗಳ ಮೇಲೆ ಕುಳಿತು ತಪಸ್ಸು ಮಾಡುವ ಅವಶ್ಯಕತೆಯಿಲ್ಲವೆಂದು ಹೇಳುತ್ತಾರೆ.

ಬಸವಣ್ಣನವರ ಸಮಯದಲ್ಲಿ  ಅನೇಕರು ಗುಹೆಗಳಲ್ಲಿ, ಬೆಟ್ಟ ಶಿಖರಗಳಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದಿರಬೇಕು.  ಅಂತಹವರ ಸುತ್ತ ಹುತ್ತ ಬೆಳೆದು ಹಾವುಗಳು  ಇರುವ ಕತೆಯನ್ನು ಹುಟ್ಟಿಸಿ ಜನರು ಅಚ್ಚರಿಪಡುತ್ತಿದ್ದಿರಬೇಕು. ಜನರು ಅವರನ್ನು ಹಾಡಿ ಹೊಗಳುವುದು. ಅವರನ್ನು ಪೂಜಿಸುವುದು, ಅವರನ್ನು ಅನುಕರಿಸುವುದು ಮಾಡುತ್ತಿದ್ದಿರಬೇಕು. ಜನರ ಇಂತಹ ಮೌಢ್ಯವನ್ನು ಕಂಡು ಬಸವಣ್ಣನವರು ನೊಂದಿರಬೇಕು. ಅಂತಹವರನ್ನು ಕುರಿತು ಅವರು ಹೇಳುತಾರೆ-


ಬೆಟ್ಟ ಗುಡ್ಡಗಳಲ್ಲಿ ಕುಳಿತು ತಪಸ್ಸುಗೈಯುತ್ತ ಅವರ ಮೇಲೆ ಹುತ್ತ ಬೆಳೆದರೇನು? ಹಾವು ಸುತ್ತಿಕೊಂಡಿದ್ದರೇನು? ಆತನೇನು ಮಹಾನನೆ? ಅದನ್ನು ಮಾಡುವುದಕ್ಕೆ ಮಹಾ ವ್ಯಕ್ತಿ ಬೇಕಾಗಿಲ್ಲ. ಯುಗ ಯುಗಗಳೇ ಕಳೆದು ಹೋದರೂ ಅಂತಹ ವ್ಯಕ್ತಿ ಕೂಡಲಸಂಗಮನನ್ನು ಕಾಣಲಾರ. ಏಕೆಂದರೆ ಕೂಡಲಸಂಗಮನನ್ನು ಕಾಣಲು ದೇಹವನ್ನು ದಂಡಿಸುವ ಅವಶ್ಯಕತೆಯಿಲ್ಲ. ಒಬ್ಬನೇ ದೂರದಲ್ಲೆಲ್ಲೋ ಹೋಗಿ ಕುಳಿತಿರುವ ಅಗತ್ಯವಿಲ್ಲ. ದಿನಗಟ್ಟಲೆ ಒಂದೆಡೆಯಲ್ಲ್ಲಿ ಕುಳಿತು ಮೈಮೇಲೆ ಹುತ್ತ ಬೆಳೆಸಿಕೊಳ್ಳುವ ಅಗತ್ಯವಿಲ್ಲ, ಹಾವುಗಳಿಂದ ಸುತ್ತುವರಿಯುವ ಅಗತ್ಯವಿಲ್ಲ. ಸಮಯ ಕಳೆದಂತೆ ಆತನ ಮೈ ಮೇಲೆ ದೊಡ್ಡ ಹುತ್ತ ಬೆಳೆಯಬಹುದು, ಜಡೆಯೂ ಬೆಳೆಯಬಹುದು. ಅಂತಹ ವ್ಯಕ್ತಿ ನಾಲ್ಕೂ ಯುಗಗಳಲ್ಲಿ ಬಿಸಿಲು ಮಳೆ ಗಾಳಿಗೆ ಒಡ್ಡಿಹೋಗಿ ಸವೆದ ಕಲ್ಲಿನ ಸಮಾನವೇ ಹೊರತು ಹೆಚ್ಚಿನವನೇನೂ ಅಲ್ಲ. ಆತನು ತಪ್ಪಸ್ಸಿಗೆ ಕುಳಿತುಕೊಳ್ಳುವ ಮುಂಚೆ ಇದ್ದ ಅಜ್ಞಾನದ ಕತ್ತಲೆಯಲ್ಲಿಯೇ ಸದಾ ಇರುತ್ತಾನೆ ಮತ್ತು ಆ ಕತ್ತಲೆಯಲ್ಲಿಯೇ ಸಾಯುತ್ತಾನೆ. ತಪಸ್ಸು, ಜಗತ್ತಿನಿಂದ ಪ್ರತ್ಯೇಕಪಡಿಸಿಕೊಳ್ಳುವಿಕೆ, ಹುತ್ತ, ಹಾವು ಯಾವುವೂ ಆತನಿಗೆ ಬೆಳಕನ್ನು ಕೊಡಲಾರವು. ಈ ಪ್ರಪಂಚದಲ್ಲಿಯೇ ಇದ್ದು ಇದನ್ನು ತಿಳಿದುಕೊಂಡು, ಇದರೊಂದಿಗೆ ವ್ಯವಹರಿಸಿ, ಇದರ ಹಿಂದೆ ಇರುವ ಅರಿವನ್ನು ಕಂಡುಕೊಳ್ಳುವುದು ಮುಖ್ಯ. ಆ ಅರಿವನ್ನು ಪಡೆದುಕೊಂಡಾಗ ಇಲ್ಲಿರುವ ಪ್ರತಿಯೊಂದೂ ಕೂಡಲಸಂಗಮ ಶರಣರ ಪ್ರಸಾದವೆಂದು ತಿಳಿದು ಬರುತ್ತದೆ. ಅಂತಹ ಅರಿವಿನಿಂದ ವ್ಯಕ್ತಿ ಈ ಪ್ರಪಂಚವನ್ನು ಬಿಟ್ಟು ದೂರ ಓಡಿ ಹೋಗುವುದಿಲ್ಲ. ಇಲ್ಲಿಯೇ ಇದ್ದುಕೊಂಡು ಶರಣತ್ವವನ್ನು ಹೊಂದುತ್ತಾನೆ. ಆತನ ಅರಿವಿನ ಬೆಳಕು ಇತರರಿಗೂ ಬೆಳಕಾಗುತ್ತದೆ. ಅಂತಹ ವ್ಯಕ್ತಿಗೆ ಸಾವಿಲ್ಲ. ಅಂತಲ್ಲದವರು ಸಾವಿಗೆ ಬಲಿಯಾಗುತ್ತಾರೆ, ಎನ್ನುತ್ತಾರೆ ಬಸವಣ್ಣನವರು. 

Friday, April 25, 2014

Vachana 191: Abhyasavenna Vartisitayya – I am a Creature of my Habits!

VACHANA IN KANNADA

ಅಭ್ಯಾಸವೆನ್ನ ವರ್ತಿಸಿತ್ತಯ್ಯಾ,
ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ
ಆನು ನಿಮ್ಮ ಮನಂಬೊಗುವನ್ನಕ್ಕ
ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ ಕೂಡಲಸಂಗಮದೇವಾ.   

TRANSLITERATION

abhyaasavenna vartisittayyaa
bhakti saadhyavaagadu, naanEvenayyaa
aanu nimma manaMboguvannakka
nIvenna manaMboguvannakka
kaayaguNaMgaLa kaLedavarige sharaNeMbe kUDalasaMgamadEvaa.


CLICK HERE FOR A RECITATION

http://youtu.be/VpJ8d7-67K8

 
TRANSLATION (WORDS)

abhyaasavenna (habit makes me)  vartisittayyaa (act, Oh sir!)
bhakti (devotion) saadhyavaagadu( is not possible), naanEvenayyaa (I am helpless)
aanu (I) nimma (your)  manaMboguvannakka (until enter your mind)
nIvenna (you, my) manaMboguvannakka (enter my mind)
kaayaguNaMgaLa (worldly interests) kaLedavarige (those who have shed there) sharaNeMbe (I bow to) kUDalasaMgamadEvaa(Kudalasangamadeva)


VACHANA IN ENGLISH

 
Habit makes me act, oh Sir!
Devotion has become impossible, I am helpless, Oh Sir!
Until I enter your mind,
and You enter my mind,
I bow to those who have shed their worldly traits,
Oh, Lord Kudala Sangama!


COMMENTARY
 
In this Vachana, Basavanna is revealing his deep introspection saying that the devotion has not set in him because of his inbuilt habits. He says that he has become helpless and cannot escape from the clutch of his habits. Further, he sees the only way is to surrender to those who have shed their worldly traits until the Lord enters his mind and his mind sets in the Lord!
Indeed, habits make the man. Habits are the result of what we have been exposed repetitiously. They come from exposure to culture, people and practices. They become our integral parts and getting out of the habit is not easy even if one tries. It is easy and less stressful to follow the dictum of our habits. All our actions are dictated by these habits. We routinely respect or despise others because of our habits. Our environment provides us a view of God and believing in that view and corresponding rituals become our habit. We seldom think twice about our action dictated by our habits. But, when we start a deep inspection our habitual actions, we find new and real meaning behind what we are surrounded with. Basavanna is longing for such insight to get deep into devotion. He is surrendering to those who have already gained such insights and have shed the worldly traits (habits) as a way of reaching that state.
While the Vachana is advocating a deep introspection of our habits to become a true devotee, such introspection is a must for us to see the world in a new light and gain the perspective of what we are!

Let us shed our habits and gain the new sight!

KANNADA COMMENTARY
 
ಅರ್ಥ:
 
ಅಭ್ಯಾಸವೆನ್ನ ವರ್ತಿಸಿತ್ತಯ್ಯಾ( ನಾನು ಅಭ್ಯಾಸಬಲದಿಂದ ವರ್ತಿಸುತ್ತಿದ್ದೇನೆ)
ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ (ನನಗೆ ಭಕ್ತಿ ಸಾಧ್ಯವಾಗುತ್ತಿಲ್ಲ, ಏನು ಮಾಡಲಿ)
ಆನು ನಿಮ್ಮ ಮನಂಬೊಗುವನ್ನಕ್ಕ ( ನಾನು ನಿಮ್ಮ ಅಂತರಂಗವನ್ನು ಸೇರಿಹೋಗುವವರೆಗೆ)
ನೀವೆನ್ನ ಮನಂಬೊಗುವನ್ನಕ್ಕ (ನೀವು ನನ್ನ ಅಂತರಗವನ್ನು ಸೇರಿಹೋಗುವವರೆಗೆ)
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ ಕೂಡಲಸಂಗಮದೇವಾ (ತನುಗುಣಗಳನ್ನು ಕಳೆದವರಿಗೆ ಶರಣೆನ್ನುವೆನು)

ತಾತ್ಪರ್ಯ:
 
ಇಲ್ಲಿ ಬಸವಣ್ಣನವರು ತನಗೆ ಭಕ್ತಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ತಮ್ಮನ್ನು ತಾವು ಆಳವಾಗಿ ಗಮನಿಸಿ ಹೇಳುತ್ತಿದ್ದಾರೆ.
ಅಭ್ಯಾಸವು ನಾನು ಭಕ್ತಿ ಮಾಡದಂತೆ ತಡೆಯುತ್ತಿದೆ ಎನ್ನುತ್ತಾರೆ. ಅಭ್ಯಾಸ ಎಂದರೆ ರೂಢಿಯಿಂದ ಬಂದದ್ದು ಅಥವಾ ಪುನರಾವರ್ತಿಸುವುದು. ನಮ್ಮೆಲ್ಲರ ನಡತೆಗಳು ಅಭ್ಯಾಸದಿಂದಲೇ ಬಂದವುಗಳು. ಅಭ್ಯಾಸಗಳು ಬಹಳ ಆಳವಾಗಿ ಬೇರೂರಿರುವಂತಹವು. ಹುಟ್ಟಿನಿಂದಲೇ ಮೈಗೂಡಿದಂತಹವು. ಸಂಸ್ಕೃತಿಯಿಂದ, ಪರಂಪರೆಯಿಂದ  ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವಂತಹವು. ಅವುಗಳನ್ನು ಕಳೆದುಕೊಳ್ಳುವುದು  ಸುಲಭವಲ್ಲ. ಅಭ್ಯಾಸವು ವ್ಯಕ್ತಿಯನ್ನು, ವಿಷಯವನ್ನು ಅಥವಾ ಯಾವುದನ್ನೇ ಆಗಲಿ ಹೊಸದಾಗಿ ಕಂಡುಕೊಳ್ಳುವುದರಿಂದ ತಡೆಯುತ್ತದೆ. ನಾವು ನಮ್ಮ ನಡತೆಯನ್ನು  ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ತಿಳಿಯುತ್ತದೆ, ನಮ್ಮ ಎಲ್ಲ ಕ್ರಿಯೆಗಳು ಅಭ್ಯಾಸದ ಪರಿಣಾಮವಾಗಿವೆ ಎಂದು. ಅಭ್ಯಾಸ ಬಲದಿಂದಲೇ ನಾವು ಬೇರೊಬ್ಬ ವ್ಯಕ್ತಿಯ ಬಗ್ಗೆ ಗೌರವ ಅಥವಾ ಅನಾದರ ತಾಳುತ್ತೇವೆ.  ಉದಾಹರಣೆಗೆ- ದೇವರ ಬಗ್ಗೆ ನಾವು ತಾಳುವ  ಭಾವನೆಗಳು ಇನ್ನಾರದೋ ಭಾವನೆಗಳನ್ನು ಅಥವಾ ಪರಂಪರಾಗತವಾಗಿ ಯೋಚಿಸುವ ರೀತಿಗಳನ್ನು ಅವಲಂಬಿಸಿರುತ್ತವೆ. ನಾವು ಸ್ವತಃ ಹೊಸದಾಗಿ ದೇವರ ಬಗ್ಗೆ ಎಂದೂ ಯೋಚಿಸುವುದಿಲ್ಲ. ಯಾರನ್ನೋ ನಂಬುವುದು, ಇನ್ನೊಬ್ಬರನ್ನು ಅವಲಂಬಿಸಿ ನಿರ್ಣಯ ಕೈಗೊಳ್ಳುವುದು ಇವೆಲ್ಲ ಅಭ್ಯಾಸದ ಬಲದಿಂದಲೇ ನಡೆಯುತ್ತವೆ. ಏಕೆಂದರೆ ಅದು ಬಹು ಸುಲಭದ ದಾರಿ. ನನ್ನ ಬುದ್ಧಿ ಶಕ್ತಿ  ಕೆಲಸಮಾಡಬೇಕಾಗಿಲ್ಲ.
 
ಬಸವಣ್ಣನವರು, ತಾನೂ ಅಭ್ಯಾಸಕ್ಕೆ ಬಲಿಯಾಗಿದ್ದೇನೆ, ಆದ್ದರಿಂದ ತನಗೆ ಭಕ್ತಿ ಕೈಗೂಡುತ್ತಿಲ್ಲ ಎನ್ನುತಿದ್ದಾರೆ. ಭಕ್ತಿ ಮೂಢನಂಬಿಕೆಯಲ್ಲ. ಅದು  ಪರಂಪರೆಯಲ್ಲ. ಅದು ಸಂಸ್ಕೃತಿಯಲ್ಲ, ಅದು ಅಭ್ಯಾಸವಲ್ಲ.  ಅಭ್ಯಾಸದ ನಡತೆ, ನಿಂತ ನೀರಾದ ಪರಂಪರೆಯಿಂದ, ಸಂಸ್ಕೃತಿಯಿಂದ, ಅರಿವೇ ಇಲ್ಲದ ಜಡ್ಡುಗಟ್ಟಿದ ನಡತೆ. ಅರಿವು ಇಲ್ಲದ ಅಭ್ಯಾಸದ ನಡತೆ ಮೂಢನಂಬಿಕೆಯಾಗುತ್ತದೆ.  ತಾನು ಎಲ್ಲವೂ ಅಭ್ಯಾಸದಿಂದಲೇ ಮಾಡುತ್ತಿದ್ದೇನೆ.  ಭಕ್ತಿ ಮತ್ತು ಇತರ ವಿಷಯಗಳನ್ನು ನೂತನವಾಗಿ ಕಾಣುವ ಶಕ್ತಿ ಎನ್ನಲಿಲ್ಲ, ಏನು ಮಾಡಲಿ ಎಂದು ಹಳಹಳಿಸುತ್ತಿದ್ದಾರೆ ಬಸವಣ್ಣನವರು.
ಎಲ್ಲಿಯವರೆಗೆ  ನನ್ನ ಮನಸ್ಸಿನಲ್ಲಿ ಲಿಂಗವು ಪೂರ್ತಿಯಾಗಿ ಸೇರಿಹೊಗುವುದಿಲ್ಲವೋ ಅಥವಾ ನನ್ನ ಮನಸ್ಸು ಪೂರ್ತಿಯಾಗಿ ಲಿಂಗದಲ್ಲಿ ಸೇರಿಹೋಗುವುದಿಲ್ಲವೋ ಅಲ್ಲಿಯವರೆಗೆ ನಾನು ತನುಗುಣಗಳನ್ನು ಮೀರಿದ ನಿಮ್ಮ ಶರಣರಿಗೆ ಶರಣೆನ್ನುತ್ತೇನೆ. ಎಂದರೆ ಎಲ್ಲಿಯವರೆಗೆ ನಾನು ನನ್ನ ಅಭ್ಯಾಸಗಳಿಂದ ಬಿಡುಗಡೆ ಪಡೆಯುವುದಿಲ್ಲವೋ ಅಲ್ಲಿಯವರೆಗೆ ತಮ್ಮ ಅಭ್ಯಾಸಗಳಿಂದ ಬಿಡುಗಡೆ ಪಡೆದ, ಎಲ್ಲ ತನುಗುಣಗಳಿಂದ ಮುಕ್ತರಾದ ಶರಣರಿಗೆ ಶರಣೆನ್ನುವೆನು ಎನ್ನುತ್ತಾರೆ ಬಸವಣ್ಣನವರು.





Friday, April 18, 2014

Vachana 190: Manakke Naachada Vachana – Mind and the Speech

VACHANA IN KANNADA
 
ಮನಕ್ಕೆ ನಾಚದ ವಚನ  ವಚನಕ್ಕೆ ನಾಚದ ಮನ
ಕುಂದು- ಹೆಚ್ಚು ನುಡಿವೆ
ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ
ಕೂಡಲಸಂಗಮ ಶರಣರ ಎನ್ನಾಳ್ದರೆಂಬೆ

TRANSLITERATION

 
manakke naacada vacana  vacanakke naacada mana
kuMdu- heccu nuDive
oMdu maatina gellakke hiDidu hOruve
kUDala saMgama sharanara ennaaLdareMbe

CLICK HERE FOR A RECITATION
 

TRANSLATION (WORDS)

manakke (to/of the mind) naacada (not ashamed)  vacana (the word)  vacanakke (to/of the word) naacada (not ashamed) mana (the mind)
kuMdu (snag,flaw)- heccu nuDive (I talk too much)
oMdu maatina (one statement) gellakke (to win over) hiDidu hOruve (hold on and fight)
kUDala saMgama sharanara (devotees of Kudalasanagama) ennaaLdareMbe (I say, are my masters)

VACHANA IN ENGLISH

The word not ashamed (shy of) of the mind, the mind not ashamed of the word.
I speak with flaw and in excess.
To win over one statement I hold on and fight.
I say, Kudalasangama’s devotees are my masters!

COMMENTARY

This Vachana reflects the intense inspection on part of Basavanna of the duality of the internal and the external. The characteristic of the mind (internal) is to jump from thought to thought. It keeps this hopping going on and we hardly notice what the mind is up to. It becomes our second nature to let the mind wander without paying any attention to it, especially when we start speaking (external). Only when we start observing our mind and speech, we notice that most often what we speak is not what is on our mind. For instance, we start thinking that we should be extremely courteous to the gentleman approaching us. But, as he approaches us we simply do not offer him the courtesy we deemed he deserves, rather we start speaking to him in ordinary tones. Our mind keeps telling us not to eat the sweets offered to us since they have ill effect on our health. But, we start saying how tasty the sweets are and indulge in consuming them. Basavanna comments on this duality saying that the mind is not paying attention to the speech and the speech is ignoring the mind. He feels that he does not really weigh his words before they are spoken and hence they are flawed. He feels that the spoken words are unnecessarily excessive since speaking has become a routine habit. Further, we make a statement and will even be prepared to fight to justify what we said is right. Basavanna says ‘I say that I am the servant of devotees of the Lord, just to show off rather than being a true devotee’.

This Vachana again illustrates how keen the Sharanas were in maintaining the internal and external purity – the purity in thoughts and the purity in deeds!

Let us speak what we think!

KANNADA COMMENTARY
 
ಅರ್ಥ:
 
ಮನಕ್ಕೆ ನಾಚದ ವಚನ (ಮಾತು) ವಚನಕ್ಕೆ ನಾಚದ ಮನ
ಕುಂದು (ನೂನ್ಯತೆ,ಕೊರತೆ)- ಹೆಚ್ಚು ನುಡಿವೆ
ಒಂದು ಮಾತಿನ ಗೆಲ್ಲಕ್ಕೆ (ಗೆಲ್ಲುವುದಕ್ಕೆ) ಹಿಡಿದು ಹೋರುವೆ (ಚರ್ಚಿಸುವೆ, ವಾದಿಸುವೆ)
ಕೂಡಲಸಂಗಮ ಶರಣರ ಎನ್ನಾಳ್ದರೆಂಬೆ(ಶರಣರು ನನ್ನ ಒಡೆಯರು ಎನ್ನುವೆ)

ತಾತ್ಪರ್ಯ:
 
ತಮ್ಮ ಮನ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಇದು ಬಸವಣ್ಣನವರ ಇನ್ನೊಂದು ವಚನ.
ತಮ್ಮ ಮನವನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುತ್ತಿದ್ದಾರೆ. ಮನಸ್ಸು ಏನೇನೋ ಮಾಡುತ್ತದೆ, ಏನೇನೋ ಯೋಚಿಸುತ್ತದೆ. ಸುಮ್ಮನಿರುವ ಸ್ವಭಾವ ಅದರದಲ್ಲ. ಸದಾ  ಏನಾದರೂ ಯೋಚಿಸುವ ಅಭ್ಯಾಸ ಅದಕ್ಕೆ. ಈ ಅಭ್ಯಾಸ ಎಷ್ಟು ಆಳವಾದದ್ದು ಎಂದರೆ ಅನೇಕ ಸಲ ವ್ಯಕ್ತಿ ಅದನ್ನು ಗುರುತಿಸುವುದೂ ಇಲ್ಲ. ಗುರುತಿಸಿದಾಗ ಅದು ಯೋಚಿಸುವುದೇ ಬೇರೆ, ಮತ್ತು ತಾನು ಮಾತಾಡುವುದೇ ಬೇರೆ ಎಂದು ತಿಳಿದುಬರುತ್ತದೆ. ಮಾತಿಗೂ ಮತ್ತು ಅದರ ಯೋಚನೆಗೂ ಏನೇನೂ ಸಂಬಂಧವಿಲ್ಲ ಎಂಬುದು ಅರಿವಿಗೆ ಬರುತ್ತದೆ. ಮನಸ್ಸು ಮತ್ತು ವಚನದ ಈ ಅಸಂಬಂದ್ಧತೆ ವ್ಯಕ್ತಿತ್ವದಲ್ಲಿಯ ಒಂದು ಕೊರತೆ.
ಉದಾಹರಣೆಗೆ ಮನಸ್ಸು ಹೇಳುತ್ತದೆ: ಆ ಗೌರವಾನ್ವಿತ ವ್ಯಕ್ತಿಯೊಂದಿಗೆ ಪ್ರೀತಿಯಿಂದ ಮಾತಾಡು. ಆತನು ಹೇಳುವುದನ್ನು ಕೇಳು ನಿನಗೆ ಒಳ್ಳೆಯದಾಗುತ್ತದೆ, ಎಂದು. ಆದರೆ ಆತ ಬಂದಾಗ  ನಮ್ಮ ನುಡಿಗಳು ಸೌಜನ್ಯಯುಕ್ತವಾಗಿರುವುದಿಲ್ಲ. ಮಾತುಗಳಲ್ಲಿ ’ನನಗೆ ನೀನು ಬುದ್ಧಿ ಹೇಳುವುದು ಬೇಕಾಗಿಲ್ಲ, ನನಗೆಲ್ಲ ಗೊತ್ತಿದೆ’  ಎಂಬ ಧೋರಣೆ ಇರುತ್ತದೆ.
ಅದನ್ನು ತಿನ್ನ ಬಾರದು. ಅದು ಸಕ್ಕರಯಿಂದ  ಮಾಡಿರುವುದು. ಆರೋಗ್ಯಕ್ಕೆ ಒಳ್ಳೆಯದಲ್ಲ, ಎಂದು ನುಡಿಯುತ್ತೇವೆ.
ಅದೋ ಆ ಸಿಹಿ ತಿಂಡಿ ತುಂಬಾ ರುಚಿಯಾಗಿದ್ದಂತೆ ಕಾಣುತ್ತದೆ, ತಿಂದು ಬಿಡು, ಆರೋಗ್ಯ ಕೆಟ್ಟಾಗ ನೋಡಿಕೊಳ್ಳೋಣ, ಎಂದು ಮನಸ್ಸು ಹೇಳುತ್ತದೆ.
 
ಮನಸ್ಸು ಬೇಡವಾದದ್ದೆನ್ನೆಲ್ಲ ಯೋಚಿಸುತ್ತದೆ. ಆದರೆ, ಬಾಯಿಯಿಂದ ತನ್ನಲ್ಲಿ ಯಾವ ಕೆಟ್ಟ ಗುಣಗಳೂ ಇಲ್ಲವೆಂಬಂತೆ ಮಧುರವಾದ ನುಡಿಗಳು ಹೊರಹೊಮ್ಮುತ್ತವೆ.  ನಮ್ಮ ಮಾತುಗಳನ್ನು ಕೇಳಿದವರು ನಮ್ಮ ಕೆಟ್ಟ ಮನವನ್ನು, ಅದು ಯೋಚಿಸುತ್ತಿರುವ ಕೀಳು ವಿಚಾರಗಳನ್ನು ಊಹಿಸಲೂ ಆರರು. ಅವರು ನಮ್ಮನ್ನು ನಮ್ಮ ಮಾತುಗಳಿಂದ ಒಳ್ಳೆಯವರೆಂದೇ ನಂಬುತ್ತಾರೆ. ಅಂತಹ ಕೆಟ್ಟ ಮನಸ್ಸಿಗೆ  ನುಡಿಯು ನಾಚದು. ಅಯ್ಯೋ ನನ್ನ ಮನಸ್ಸು ಯೋಚಿಸುತ್ತಿರುವುದೇ ಬೇರೆ, ನಾನು ಅದಕ್ಕೆ ತದ್ವಿರುದ್ಧವಾಗಿ ನುಡಿಯುತ್ತಿದ್ದೇನೆ ಎಂದು ಅದು  ನಾಚುವುದಿಲ್ಲ. ಅದೇ ರೀತಿಯಾಗಿ ನುಡಿಗಳಿಗೆ ಮನಸ್ಸು ತಾನು ನಾಚದು. ನುಡಿಗಳಲ್ಲಿ ನಾವು ಹೇಳುವುದೊಂದು ಮನಸ್ಸು ತಾನು ಯೋಚಿಸುವುದು ಇನ್ನೊಂದು. ಮಾತುಗಳು ಕೆಟ್ಟಮಾತಾಡಬೇಡ ಎಂಬ  ಉಪದೇಶ  ಕೊಡುತ್ತವೆ. ಆದರೆ ಮನಸ್ಸು  ಕೆಟ್ಟದ್ದನ್ನೇ ಯೋಚಿಸುತ್ತದೆ. ವಚನಕ್ಕೆ ಮನಸ್ಸು ನಾಚದು. ಅಯ್ಯೋ ನಾನು ಹೇಳಿದಂತೆ ನಡೆಯುತ್ತಲಿಲ್ಲ, ಎಂದು ಮರುಗದು. ತಾನು ಹೇಳುವುದೇ ಬೇರೆ ಮತ್ತು ಮನಸ್ಸಿನಲ್ಲಿ ಯೋಚಿಸುತ್ತಿರುವುದೇ ಬೇರೆ. ಈ ಅಸಂಬದ್ಧತೆ ವ್ಯಕ್ತಿತ್ವದ ಒಂದು ಕೊರತೆ. ಇದರಿಂದ ನಾನು  ಬೇಕಾದುದಕ್ಕಿಂತ ಹೆಚ್ಚು ಮಾತಾಡುತ್ತೇನೆ ಎನ್ನುತ್ತಾರೆ ಬಸವಣ್ಣನವರು. ಮಾತಿನ ಚಟಕ್ಕೆ ಬಿದ್ದು ನಾನು ಅರಿವೇ ಇರದ ಯಾವುದೋ ಒಂದು ಮಾತಿಗಾಗಿ, ನನ್ನ ಮಾತೇ ಸರಿಯೆಂದು ಚರ್ಚೆಯಲ್ಲಿ ಗೆಲ್ಲುವುದಕ್ಕಾಗಿ ವಾದಕ್ಕಿಳಿಯುತ್ತೇನೆ, ಇಷ್ಟೇ ಅಲ್ಲದೆ, ಕೂಡಲಸಂಗಮನ ಶರಣರು ನನ್ನ ಒಡೆಯರು, ಎಂದು ಹೇಳಿಕೊಳ್ಳುತ್ತೇನೆ, ಎನ್ನುತ್ತಾರೆ. ಆ ಒಡೆಯರಂತೆ  ನಡೆಯುವುದಿಲ್ಲ ನಾನು. ಅಂತಹ ಮಹಾ ವ್ಯಕ್ತಿಗಳ ಗುಣಗಳು ನನ್ನಲ್ಲಿ ಎಳ್ಳೆನಿತೂ ಇಲ್ಲ ಎಂದು ತಮ್ಮ ನಡತೆಯ ಬಗ್ಗೆ ಯೋಚಿಸುತ್ತಿದ್ದಾರೆ.