Friday, February 21, 2014

Vachana 182: Kaidu Moneeruvudakke Modale – Before the Weapon Pierces

VACHANA IN KANNADA:
 
ಕೈದು ಮೊನೆಯೇರುವುದಕ್ಕೆ ಮೊದಲೇ ಕಟ್ಟಬಲ್ಲಡೆ
ಕೈದೇನ ಮಾಡುವುದು?
ಹಾವು ಬಾಯಿ ಬಿಡುವುದಕ್ಕೆ ಮೊದಲೇ ಹಿಡಿದ ಮತ್ತೆ
ವಿಷವೇನ ಮಾಡುವುದು?
ಮನ ವಿಕಾರಿಸುವುದಕ್ಕೆ ಮೊದಲೇ  ಮಹದಲ್ಲಿ ನಿಂದ ಮತ್ತೆ
ಇಂದ್ರಿಯಗಳೇನ ಮಾಡಲಾಪವು ಜಾಂಬೇಶ್ವರಾ?

Transliteration:
 
kaidu moneEruvudakke modalE kaTTaballaDe
kaidEna maaDuvudu?
haavu baayi biDuvudakke modalE hiDida  matte
viShavEna maaDuvudu?
mana vikaarisuvudakke modalE mahadalli niMda matte
iMdriyagaLena  maaDalaapavu jaaMbEShvaraa?


Click here for a Recitation:

http://youtu.be/M7uGqyUjDy0

TRANSLATION(WORDS):

kaidu (a weapon) moneEruvudakke (piercing) modalE (before)  kaTTaballaDe (if tied/ stopped)
kaidEna (what can a weapon) maaDuvudu? (do)
haavu (a serpent) baayi  (mouth) biDuvudakke (opening)  modalE  (before) hiDida ( if caught)) matte(then)
viShavEna (what can the poison)  maaDuvudu?(do)
mana(mind)  vikaarisuvudakke (distort) modalE (before) mahadalli (in the truth)  niMda (if established) matte(then)
iMdriyagaLena (what the senses)  maaDalaapavu (can do)  jaaMbEShvaraa?( Janbeshvara)

VACHANA IN ENGLISH

What can a weapon do if it is tied before piercing?
What can the poison do if the serpent’s mouth is tied before it opens it?
What can the senses do if the mind is set in the Divine before it gets distorted, JaambeShvara?

 
Commentary
 
In this Vachana, Raayasada Manchanna provides a way for escaping the distortions of the mind through two simple similes.  A weapon can only pierce, hurt or kill if it is not stopped before it inflicts the damage. If it is tied up before it pierces, the damage is avoided. Along the same lines, the poison from a serpent is disastrous only if the serpent is allowed to bite. If the serpent’s mouth is tied up before it bites, the poison has no effect. The mind is known to wander. It keeps seeking worldly pleasures and gets distorted. The way to escape from the effect of senses that bring this distortion is to engage the mind in the Divine. Once the mind is established in this higher cause, the truth and the bliss, it quits seeking the mundane. The senses then have no effect on the mind. It is interesting that Manchanna uses the word ‘tie’ for the weapon and the poison, while he uses ‘establish’ for the mind. He is not asking us to tie up the mind. He is suggesting us to establish it in the higher purpose, in the truth!

Let us make an all-out effort to establish our mind in Him!
 
Kannada Commentary
 
ಅರ್ಥ:
 
ಕೈದು (ಶಸ್ತ್ರ, ಆಯುಧ) ಮೊನೆಯೇರುವುದಕ್ಕೆ (ಚುಚ್ಚುವುದಕ್ಕೆ) ಮೊದಲೇ ಕಟ್ಟಬಲ್ಲಡೆ (ಮುಂಚಿತವಾಗಿ ಕಟ್ಟಬಹುದಾದರೆ)
ಕೈದೇನ (ಆಯುಧ ಏನು) ಮಾಡುವುದು? (ಮಾಡಲು ಸಾಧ್ಯ)
ಹಾವು ಬಾಯಿ ಬಿಡುವುದಕ್ಕೆ( ಹಾವು ಕಚ್ಚುವುದಕ್ಕೆ ಬಾಯಿ ತೆಗೆಯುವುದಕ್ಕೆಮೊದಲೇ ಹಿಡಿದ ಮತ್ತೆ (ಅದನ್ನು ಹಿಡಿದ ಮೇಲೆ)
ವಿಷವೇನ ಮಾಡುವುದು? (ಅದರ ವಿಷವೇನು ಮಾಡಬಲ್ಲುದು)
ಮನ ವಿಕಾರಿಸುವುದಕ್ಕೆ  (ಮನಸ್ಸು ನಾನಾ ವಿಕಾರಗಳಿಗೆ ಒಳಗಾಗುವ) ಮೊದಲೇ  ಮಹದಲ್ಲಿ ನಿಂದ ಮತ್ತೆ  (ಮೊದಲು ಪರವಸ್ತುವಿನಲ್ಲಿ ನಿಲ್ಲಿಸಿದರೆ)
ಇಂದ್ರಿಯಗಳೇನ ಮಾಡಲಾಪವು (ಇಂದ್ರಿಯಗಳು ಏನು ಮಾಡಬಲ್ಲವು?) ಜಾಂಬೇಶ್ವರಾ?
 
ತಾತ್ಪರ್ಯ:

ಮನವನ್ನು ಅತ್ತಿತ್ತ ಹರಿಯದಂತೆ ಏನು ಮಾಡಬಹುದು? ಎನ್ನುವುದಕ್ಕೆ ರಾಯಸದ ಮಂಚಣ್ಣನವರು ವಚನದಲ್ಲಿ ಒಳ್ಳೆಯ ಉಪಾಯ ಉದಾಹರಣೆ ಸಹಿತ ಕೊಡುತ್ತಿದ್ದಾರೆ.

ಶಸ್ತ್ರಗಳು ಬಹಳ ಅಪಾಯಕಾರಿಶಸ್ತ್ರಗಳ ಆಘಾತ ಬಹು ವೇದನಾಮಯ. ಅನೇಕಸಲ ಅದು ಪ್ರಾಣಕ್ಕೂ ಸಂಚಕಾರ ತರುತ್ತದೆ. ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಮಂಚಣ್ಣನವರು ಹೇಳುತ್ತಾರೆ. ಶಸ್ತ್ರ ಮೊನೆಏರುವುದಕ್ಕೆ ಮೊದಲೇ, ಅಂದರೆ ಅದು ಆಘಾತ ಮಾಡುವುದಕ್ಕೆ ಮುಂಚೆಯೆ ಅದನ್ನು ಕಟ್ಟಿದರೆ ಅದು  ಏನು ಮಾಡಲು ಸಾಧ್ಯ? ಚುಚ್ಚುವವರೆಗೆ ಸುಮ್ಮನಿದ್ದರೆ ತಾನೇ ಅದರಿಂದ ಆಘಾತವಾಗುವುದು. ಅದನ್ನು ಅಲ್ಲಿಯವರೆಗೆ ಹೋಗಲು ಬಿಡದೆ, ಅದಕ್ಕೆ ಮುಂಚಿತವಾಗಿ ಅದನ್ನು ಕಟ್ಟಿಹಾಕಿದರೆ ಅದು ಏನೂ ಮಾಡಲಾಗುವುದಿಲ್ಲ.
ಹಾವು ಕೂಡ ಅಪಾಯಕಾರಿ ಜೀವಿ. ಅದು ಕಚ್ಚಿದರೆ ವಿಷವೇರಿ ವ್ಯಕ್ತಿ ಸಾವಿಗೆ ಒಳಗಾಗುತ್ತಾನೆ. ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಹಾವು ಬಾಯಿ ತೆರೆದು ತನ್ನ ವಿಷದ ಹಲ್ಲಿನಿಂದ ಕಚ್ಚುವುದಕ್ಕೆ ಮೊದಲೇ ಅದರ ಬಾಯಿಯನ್ನು ಹಿಡಿದು ಬಿಟ್ಟರೆ ಅದು ಕಚ್ಚುವುದಾದರು ಹೇಗೆ? ಆಗ ಅದರ ಬಾಯಿಯಲ್ಲಿರುವ ವಿಷದ ಪರಿಣಾಮ ವ್ಯಕ್ತಿಯ ಮೇಲೆ ಆಗುವುದುಂಟೆ? ಇಲ್ಲ.

ಎಲ್ಲ ಅಪಾಯಕಾರಿ ಸಂಗತಿಗಳಿಗೆ ಒಳ್ಳೆಯ ಉಪಾಯವಿದೆ. ಅವುಗಳು ಅಪಾಯ ಮಾಡುವುದಕ್ಕೆ ಮೊದಲೆ ಅವುಗಳನ್ನು ಕಟ್ಟಿ ಹಾಕುವುದೇ ಉಪಾಯ. ಅದೇ ರೀತಿಯಾಗಿ  ಮನಸ್ಸು ತನಗೆ ಬೇಕಾದ ಕಡೆಗೆ ಹರಿಯುತ್ತದೆ. ಅದನ್ನು ನಿಲ್ಲಿಸುವುದು ಹೇಗೆ? ಅದು ಇನ್ನಿತರ ಕಡೆಗೆ ಹರಿದು ಹೋಗುವ ಮುಂಚೆಯೇ ಅದನ್ನುಮಹತ್ತಿನಲ್ಲಿನಿಲ್ಲಿಸಬೇಕು.
ಮಹತ್ತಾದುದರ ಪರಿಚಯ ಅದಕ್ಕೆ ಇಲ್ಲದುದರಿಂದ ಅದು ಇತರ ವಿಷಯಗಳಿಗೆ ಹರಿಯುತ್ತದೆ. ಹಾಗೆ ಅದು ನಶ್ವರವಾದ ಸುಖಗಳಿಗೆ ಹರಿಯುವ ಮೊದಲೇ ಅದನ್ನು ಮಹತ್ತಾದ ಪರವಸ್ತುವಿನಲ್ಲಿ ನಿಲ್ಲುವಂತೆ ಮಾಡಬೇಕು. ಆಗ ಅದಕ್ಕೆ ಇತರ ಸುಖಗಳು ಯಕಃಶ್ಚಿತ್ ಎನಿಸುತ್ತವೆ. ಮಹತ್ತಿನ ಎದುರು ಅವು ಬೆಲೆಯಿಲ್ಲದಾಗುತ್ತವೆ. ಆಗ ಮನಸ್ಸು ಬೇರೆ ಕಡೆಗೆ ಹೋಗುವುದನ್ನು ನಿಲ್ಲಿಸುತ್ತದೆ ಎನ್ನುತ್ತಾರೆ ರಾಯಸದ ಮಂಚಣ್ನನವರು.
ಇಲ್ಲಿ ಒಂದು ವಿಷಯ ಗಮನಿಸಬೇಕು. ಆಯುಧವನ್ನು ಕಟ್ಟಿಹಾಕು, ಹಾವಿನ ಬಾಯಿ ಹಿಡಿದುಬಿಡು ಎನ್ನುವ ಅವರು ಮನಸ್ಸನ್ನು ಕಟ್ಟಿಹಾಕು ಎನ್ನುತ್ತಲಿಲ್ಲ. ಅದನ್ನು ಸಾಮಾನ್ಯ ವಿಷಯಗಳಲ್ಲಿ ರುಚಿಯನ್ನು ಕಾಣದಂತೆ ಹಿರಿದಾದ ವಿಷಯದಲ್ಲಿ ಅಂದರೆ ಮಹತ್ತಿನಲ್ಲಿ ನಿಲ್ಲಿಸು ಎನ್ನುತ್ತಾರೆ. ಇದು ಶರಣರ ದಾರಿ.


Friday, February 14, 2014

Vachana 181: Kolondaralli Halau Kulada Govugala Nilisuvante – The Stick


VACHANA IN KANNADA

ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ
ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು,  
ಇಂದ್ರಿಯಂಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ
ವಸ್ತುವಿನ ಅಂಗದಲ್ಲಿಯೆ ತನ್ನಂಗ ತಲ್ಲೀಯವಾಗಿಪ್ಪುದೆ ಮಹಾ ನಿಜದನೆಲೆ.
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೆ ಬಟ್ಟೆ

TRANSLITERATION

kOloMdaralli  halavu kulada  gOvugaLa  calisade nilisuvaMte
Ekacittanaagi sarva vikaaraMgaLa kaTTuvadedu
iMdriyaMgaLa icCeyalli trividhava  hiDidiruvara saMdiyalli nusuLade
vastuvina aMgadalliye tannaMga tallIyavaagippude mahaa nijada nele
gOpinaatha vishVEshvaraliMgavanarivudakke ide baTTe

CLICK HERE FOR A RECITATION

TRANSLATION (WORDS)
kOloMdaralli (with one stick)   halavu kulada (of several kinds) gOvugaLa (the cows)  calisade (without moving)  nilisuvaMte (like stopping)
Ekacittanaagi (one minded) sarva (all) vikaaraMgaLa (distortions of the mind)  kaTTuvadedu (bound, tied up)
iMdriyaMgaLa (of senses)  icCeyalli (in/ with desires)  trividhava (mind body wealth) hiDidiruvara (are in the grip of) saMdiyalli (in between a crowd)  nusuLade (not going)
vastuvina (of the truth)  aMgadalliye  (the body) tannaMga (own body) tallIyavaagippude (becomimg one with)  mahaa nijada nele (is the abode of the truth)
gOpinaatha vishVEshvaraliMgavanarivudakke (to know Gopinatha Vishveshvaralinga) ide (This alone is) baTTe(the way)

VACHANA IN ENGLISH

Like stopping several kinds of cows from moving, with one stick!
Becoming single minded and tying up all distortions of the mind,
Not mingling with the crowd that is in the grip of the desires of the trio (mind, body, wealth),
Merging own body with the body of the Divine (Truth), is reaching the abode of the Truth!
This alone is the way to know Gopinatha Vishveshvaralinga!

COMMENTARY

In this Vachana Turugahi Ramanna identifies the abode of the Divine (the Truth) and how to reach there.
A cowherd can control a herd of cows of different kinds with just one stick. Ramanna equates the distortions of the mind to the herd of cows and says that the only way to reach the Truth is to tie these distortions up by become single minded seeker of the Truth. The distortions of the mind are due to the desires and the sense organs generating and feeding these desires. Obviously, one cannot completely concur them, neither one should completely surrender to them. The senses should be used appropriately for their intended function, but one should not indulge in them. Man is a social animal. He tends to follow the trends in the society. It is tempting to become one like the neighbor in terms of the materialistic aspects brought up by body, mind and wealth. Ramanna urges us not to join the crowd. He says that the only way to realize God (Self, Divine, Truth) is to merge with Him with the utmost single mindedness we can muster. This alone is the way to reach Him! This alone should be the goal of life!  

Let us stick our mind to Divine and merge with Him!

KANNADA COMMENTARY
ಅರ್ಥ:
ಕೋಲೊಂದರಲ್ಲಿ (ಒಂದು ಕೋಲಿನಿಂದ)  ಹಲವು ಕುಲದ (ಬೇರೆ ಬೇರೆ ಜಾತಿಯ, ಕುಲದ)  ಗೋವುಗಳ ಚಲಿಸದೆ (ಹಸುಗಳನ್ನು ಅಲ್ಲಾಡದೆ, ಸುಮ್ಮನೆ) ನಿಲಿಸುವಂತೆ
ಏಕಚಿತ್ತನಾಗಿ (ಒಂದೇ ಮನಸ್ಸಿನವನಾಗಿ) ಸರ್ವವಿಕಾರಂಗಳ (ಎಲ್ಲ ಮನೋ ವಿಕಾರಗಳು)  ಕಟ್ಟುವಡೆದು (ಕಟ್ಟಿಹಾಕಿ),  
ಇಂದ್ರಿಯಂಗಳ ಇಚ್ಛೆಯಲ್ಲಿ  (ಇಂದ್ರಿಯಗಳ ಇಚ್ಛೆಗೆ ಅನುಗುಣವಾಗಿ) ತ್ರಿವಿಧವ (ತನು, ಮನ, ಧನ) ಹಿಡಿದಿರುವರ (ಹಿಡಿತಕ್ಕೆ ಒಳಗಾಗಿರುವರ, ತನು ಮನ, ಧನಗಳು ಇಂದ್ರಿಯಗಳ ಇಚ್ಛೆಗಳಿಂದ ಹಿಡಿದಿಟ್ಟಲ್ಪಟ್ಟಿವೆ)   ಸಂದಿಯಲ್ಲಿ (ನಡುವೆ) ನುಸುಳದೆ (ಸೇರಿಕೊಳ್ಳದೆ)
ವಸ್ತುವಿನ (ಆ ಪರವಸ್ತು, ಸತ್ಯದ ನೆಲೆ)  ಅಂಗದಲ್ಲಿಯೆ ತನ್ನಂಗ ತಲ್ಲೀಯವಾಗಿಪ್ಪುದೆ (ಅದರಲ್ಲಿ ಒಂದಾಗಿರುವುದೇ) ಮಹಾ ನಿಜದನೆಲೆ(ತನ್ನ ನಿಜವಾದ ಪರಮ ನೆಲೆ)
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ (ಲಿಂಗವನ್ನು ಅರಿಯುವುದಕ್ಕೆ) ಇದೆ ಬಟ್ಟೆ (ಇದೇ ದಾರಿ)

ತಾತ್ಪರ್ಯ:
ಈ ವಚನದಲ್ಲಿ ರಾಮಣ್ಣನವರು ನಿಜದ ನೆಲೆ ಯಾವುದು ಮತ್ತು ಅದಕ್ಕೆ ದಾರಿಯಾವುದು ಎನ್ನುವುದನ್ನು ತಮ್ಮ ವೃತ್ತಿಗೆ ಸಂಬಂಧಪಟ್ಟಂತೆ ಹೇಳುತ್ತಾರೆ.
ಗೋವಳಿಗನು ಒಂದೇ ಕೋಲಿನಿಂದ ಅನೇಕ ಜಾತಿಯ ಗೋವುಗಳನ್ನು ಎಲ್ಲಿಯೂ ಓಡಿಹೋಗದಂತೆ ನಿಲ್ಲಿಸುತ್ತಾನೆ. ಅದೇ ರೀತಿಯಾಗಿ ಒಮ್ಮನಸ್ಸಿನಿಂದ ಮನಸ್ಸಿನ ವಿಕಾರಗಳನ್ನು ಕಟ್ಟಿ ಹಾಕಬೇಕು ಎನ್ನುತ್ತಾರೆ ರಾಮಣ್ಣನವರು. ಇಲ್ಲಿ ಕಟ್ಟಹಾಕಬೇಕು ಎಂದರೆ ಅವಗಳ ಮಿತಿಯಲ್ಲಿ ಅವಿರುವಂತೆ ಮಾಡುವುದು ಎಂದರ್ಥ. ಅವುಗಳು ತಮ್ಮ ಮಿತಿಯನ್ನು ಮೀರಿ ಸುಖವನ್ನು ಅರಸುತ್ತ  ಎಲ್ಲಂದರಲ್ಲಿ ಅಲೆದಾಡುವುದಲ್ಲ. ಗೋಪಾಲಕನು ಒಂದು ಕೋಲಿನ ಸಹಾಯದಿಂದ ಗೋವುಗಳ ಇಡೀ ಗುಂಪನ್ನು ತನ್ನ ವಶದಲ್ಲಿಟ್ಟುಕೊಳ್ಳುವಂತೆ ಏಕಾಗ್ರಚಿತ್ತದಿಂದ ತನ್ನೆಲ್ಲ ವಿಕಾರಗಳನ್ನು ತನ್ನ ವಶದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ.


ಮನಸ್ಸು ಬಹು ಬೇಗ ಇತರರನ್ನು ನೋಡಿ ಅವರನ್ನು ಅನುಕರಿಸುತ್ತದೆ. ಇತರರು ಇಂದ್ರಿಯಗಳ ಇಚ್ಛೆಗಳಿಗೆ ಬಲಿಯಾಗಿ ತಮ್ಮ ತನು, ಮನ, ಧನವನ್ನು ಅದಕ್ಕೆ ಅರ್ಪಿಸಿರುತ್ತಾರೆ. ತ್ರಿವಿಧಗಳನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸುವುದನ್ನು ಮರೆತು ಇಚ್ಛೆಗಳ ಪೂರ್ತಿಗಾಗಿ ಮೀಸಲಾಗಿಡುತ್ತಾರೆ. ಅಂತಹವರ ಸಂದಿಯಲ್ಲಿ ನುಸುಳಬಾರದು ಎನ್ನುತ್ತಾರೆ ರಾಮಣ್ಣನವರು. ಅಂತಹವರ ಸಂದಿಯಲ್ಲಿ ನುಸುಳುವದು ಎಂದರೆ ತನಗೆ ತಾನೇ ಕೇಡು ಬಗೆದಂತೆ. ಸಂದಿಯಲ್ಲಿ ನುಸುಳು ಎನ್ನುವ ಪದ ಇಲ್ಲಿ ಬಹಳ ಅರ್ಥಪೂರ್ಣ. ಇಚ್ಛೆಗಳಿಗೆ ದಾಸರಾಗಿರುವವರು ಬಹಳ ಜನರಿದ್ದಾರೆ. ಅವರ ದೊಡ್ಡ ಜನಸಂದಣಿಯೇ ಇದೆ. ಆ ಸಂದಿಯಲ್ಲಿ, ಆ ಗೊಂದಲದಲ್ಲಿ ನೀನೂ ನುಸುಳಿಕೊಂಡು ಹೋಗದಿರು ಎಂದು ಹೇಳುತ್ತಿದ್ದಾರೆ. ಹಾಗೆ ಮಾಡದೆ ಆತ್ಮ ಹೇಳುತ್ತಿರುವುದನ್ನು ಏಕಾಗ್ರಚತ್ತನಾಗಿ ಪಾಲಿಸಬೇಕು. ಆ ಪರವಸ್ತುವಿನಲ್ಲಿ ಲೀನವಾಗಬೇಕು. ಇದೇ ಆ ನಿಜದ ನೆಲೆ. ಇದೇ ಆ ಅಖಂಡ ಸತ್ಯದ ನೆಲೆ. ಆ ನೆಲೆಗೆ ಹೋಗಲು ಇದೇ ಏಕೈಕ ದಾರಿ ಎನ್ನುತ್ತಾರೆ.

Friday, February 7, 2014

Vachana 180: Erida Vaaji Oho Endu Karedoridalli - When the Rider says ‘Oho’



VACHANA IN KANNADA

ಏರಿದ ವಾಜಿ ಓಹೋ ಎಂದು ಕರೆದೋರಿದಲ್ಲಿ
ನಿಂದಿತ್ತು ವಾಹನ ವಾಹಕನ  ಹೃದಯವನರಿತು,
ವಸ್ತುವ ಮುಟ್ಟಿ ಆಡುವ ಚಿತ್ತ ನಿಜ ವಸ್ತುವಿನ ಗೊತ್ತನರಿಯದೆ
ತನ್ನ ಇಚ್ಛೆಯಲ್ಲ್ಲಿ ಹರಿದಾಡುತ್ತಿದೆ  ನೋಡಾ!
ಇದಕ್ಕೆ ಒಂದು ಕಟ್ಟಣೆಯ ಗೊತ್ತ ಲಕ್ಷಿಸಿ ಕಟ್ಟುವಡೆವಂತೆ  ಮಾಡು
ಗೋಪಿನಾಥ ವಿಶ್ವೇಶ್ವರಲಿಂಗ               (ತುರುಗಾಹಿ ರಾಮಣ್ಣ)

TRANSLITERATION

Erida vaaji OhO eMdu karedOridalli
niMdittu  vaahana vahakana hRudayavanaritu
vastuva muTTi aaDuva citta nijavastuvina gottanariyade
tanna icCeyalli haridaaDuttide nODaa!
idakke oMdu kaTTaNeya gotta lakShisi kaTTuvaDevaMte maaDu
gOpinaatha vishvEshvaraliMga

CLICK HERE FOR A RECITATION


TRANSLATION (WORDS)

Erida vaaji (the horse with a rider)  OhO eMdu karedOridalli (hearing the  rider’s words)
niMdittu (stopped)  vaahana (vehicle)  vahakana (rider’s)
hRudayavanaritu (knowing his mind)
vastuva(attractions , wealth etc.)  muTTi (experienced) aaDuva (playing, indulging)  citta (mind)  nijavastuvina (the truth)  gottanariyade (not knowing)
tanna( own) icCeyalli (interest)  haridaaDuttide (roaming)  nODaa! (you see)
idakke (to this)  oMdu kaTTaNeya (a house, restriction) gotta (a fixed place)  lakShisi (observing)
kaTTuvaDevaMte maaDu (see that it is tied to it)
gOpinaatha vishvEshvaraliMga (Gopinatha Vishveshvaralinga)

VACHANA IN ENGLISH

On hearing the rider’s words, the horse
Stopped the vehicle, knowing the mind of the rider!
The mind indulged in materialistic desires,
Not knowing the truth,
Roaming around with its own interests! You see.
Please restrict this to a boundary and tie it to the fixed post,
Gopinatha Visvesvaralinga!


COMMENTARY

In this Vachana, Turugahi Ramanna is requesting Lord Gopinatha Visvesvaralinga (signature of Turugahi Ramanna) to help him contain the desires and discipline his mind to make it concentrate on the Divine.

It is easy to stop the cart drawn by a horse – all it takes is the rider calling ‘Oho’. The horse hears it and understands the rider’s intention and stops. But the mind, supposedly more sophisticated than a horse does not hear or pay attention to any word from its owner. It continues to be indulged in materialistic desires. The desires never end. The mind jumps from desire to desire like a monkey. There is no desire to home in on that permanent bliss, the divine. Ramanna is requesting the Lord to help him tie up the mind within a boundary to a permanent post, i.e. give him the strength to discipline the mind and point it towards realizing the Self. Indeed, we can stop a powerful horse from running just by few spoken words. We cannot control our mind. We often hear that voice from within urging us to stop being materialistic and move towards the Divine. We simply ignore it and continue to be indulged in the impermanent pleasures of this world. We need God’s help to contain our mind and see Him!


Oh Divine, help me realize You!

KANNADA COMMENTARY
 
ಅರ್ಥ:

ಏರಿದ ವಾಜಿ (ಸವಾರಿ ಮಾಡಿದ ಕುದುರೆ)  ಓಹೋ ಎಂದು ಕರೆದೋರಿದಲ್ಲಿ (ಓಹೋ ಎಂದು ಕರೆದಾಗ)
ನಿಂದಿತ್ತು (ನಿಂತು ಬಿಟ್ಟಿತು) ವಾಹನ ವಾಹಕನ  ಹೃದಯವನರಿತು (ಒಡೆಯನ, ಸವಾರನ ಮನಸ್ಸನ್ನು ತಿಳಿದು)
ವಸ್ತುವ (ಇಂದ್ರಿಯ ಗೋಚರವಾದ ಪದಾರ್ಥ, ದ್ರವ್ಯ. ಧನ)  ಮುಟ್ಟಿ ಆಡುವ ಚಿತ್ತ (ಅನುಭವಿಸಿ ಆಡುವ ಮನಸ್ಸು)  ನಿಜ ವಸ್ತುವಿನ (ಪರಮಾತ್ಮನ) ಗೊತ್ತನರಿಯದೆ (ಗುರಿ, ತನ್ನ ನಿಶ್ಚಿತ ಸ್ಥಳವನ್ನು ತಿಳಿಯದೆ)
ತನ್ನ ಇಚ್ಛೆಯಲ್ಲಿ ಹರಿದಾಡುತ್ತಿದೆ (ತನ್ನ ಇಷ್ಟದಂತೆ ಅಲೆಯುತ್ತಿದೆ) ನೋಡಾ!
ಇದಕ್ಕೆ ಒಂದು ಕಟ್ಟಣೆಯ (ಮನೆ, ಬಂಧ)  ಗೊತ್ತ  (ನೆಲೆ) ಲಕ್ಷಿಸಿ (ಪರಿಗಣಿಸಿ,ಗಮನಕ್ಕೆ ಬರುವಂತೆ)
ಕಟ್ಟುವಡೆವಂತೆ (ಕಟ್ಟುವಂತೆ,) ಮಾಡು
ಗೋಪಿನಾಥ ವಿಶ್ವೇಶ್ವರಲಿಂಗ


ತಾತ್ಪರ್ಯ:


ಇದು ತುರುಗಾಹಿ ರಾಮಣ್ಣನವರ ವಚನ. ಇಲ್ಲಿ ಅವರು ಕುದುರೆಯು ಒಡೆಯನ ಮಾತು ಕೇಳುವಂತೆ ತನ್ನ ಮನಸ್ಸು ತನ್ನ ಮಾತು ಕೇಳುತ್ತಿಲ್ಲ. ಆದ್ದರಿಂದ ಮನಸ್ಸಿಗೆ ಒಂದು ನೆಲೆಯನ್ನು ಗೊತ್ತು ಮಾಡಿ ಆ ನೆಲೆಗೆ ಅದು ಕಟ್ಟಿರುವಂತೆ ಮಾಡು ಎಂದು ದೇವರನ್ನು ಕೇಳುತ್ತಿದ್ದಾರೆ.

ಕುದುರೆಯ ಸವಾರ ತನ್ನ ಕುದುರೆಗೆ ಓಹೋ! ಎಂದು ಕರೆದರೆ ಸಾಕು ಅದು ತನ್ನ ಸವಾರನ ಹೃದಯವನ್ನರಿತು ನಿಂತು ಬಿಡುತ್ತದೆ. ಮೂಕ ಪ್ರಾಣಿಯಾದರೂ ತನ್ನ ಸವಾರನ ಮನಸ್ಸನ್ನು ಅರಿತುಕೊಂಡು ಆತನ ಇಚ್ಛೆಯಂತೆನಡೆಯುತ್ತದೆ. ಆದರೆ ನನ್ನ ಚಿತ್ತ ನನ್ನ ಮಾತು ಕೇಳುತ್ತಿಲ್ಲ. ಧನ, ಸಂಪತ್ತು ಮತ್ತು ಇತರ ಭೋಗವಸ್ತುಗಳೊಂದಿಗೆ ಆಟವಾಡುತ್ತಿದೆ.  ಇಚ್ಛೆಗಳ  ಆಳಾಗಿ ಅಲೆದಾಡುತ್ತಿದೆ. ತಾನು ಹೇಳಿದಂತೆ ಕೇಳುತ್ತಿಲ್ಲ. ಅದಕ್ಕೆ ಒಂದು ನೆಲೆಯನ್ನು ತೋರಿಸಿ ಆ ನೆಲೆಗೆ ಕಟ್ಟಿರುವಂತೆ ಮಾಡು, ಎಂದು ಆ ದೇವರನ್ನು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಇದು ಎಲ್ಲ ಸಾಮಾನ್ಯರ ಅನುಭವ. ನಾವು ಬೇಡವೆಂದದ್ದನೆಲ್ಲ ಮನಸು ಇನ್ನೂ ಇನ್ನೂ ಬಯಸುತ್ತದೆ. ಕುದುರೆ ಹಸುರನ್ನು ಕಂಡು ತಿನ್ನಲು ಧಾವಿಸುವಂತೆ ಮನಸ್ಸು ವಿಷಯಗಳ ಕಡೆಗೆ ಹರಿಯುತ್ತದೆ. ಒಂದು ಆಸೆಗೆ ಸಿಕ್ಕು ಅಲ್ಲಿಗೇ ಅದು ನಿಲ್ಲುವುದಿಲ್ಲ. ಇನ್ನೂ ಇನ್ನೂ ಆಸೆಗಳನ್ನು ತೀರಿಸಿಕೊಳ್ಳುವುದರಲ್ಲಿಯೇ ಮುಳುಗಿ ಹೋಗುತ್ತದೆ. ತನ್ನ ನಿಜವಾದ ನೆಲೆ ಯಾವುದು? ತಾನು ಎಲ್ಲಿಗೆ ಹೋಗಬೇಕು? ಎಂಬ ವಿಷಯಗಳ ಬಗ್ಗೆ ಅದು  ಚಿಂತಿಸುವುದಿಲ್ಲ. ಆತ್ಮ ಅದಕ್ಕೆ ತಿಳಿಹೇಳಿದರೂ  ಅದು  ಅದರ ಮಾತು ಕೇಳುವುದಿಲ್ಲ. ಮಾತು ಕೇಳದೆ ಇರುವದಕ್ಕೆ ಅದು ನಾನಾ ಕಾರಣಗಳನ್ನು ಕೊಡುತ್ತದೆ, ನಾನಾ ನೆಪಗಳನ್ನೊಡ್ಡುತ್ತದೆ. ತನ್ನ ಮನಸ್ಸನ್ನು ತನ್ನ ನಿಗ್ರಹದಲ್ಲಿರಿಸಿಕೊಳ್ಳುವುದು ಅಸಾಧ್ಯವೆನ್ನುವಷ್ಟು ಕಷ್ಟವಾದಾಗ, ತಾನು ಮಾಡಿದ ಉಪಾಯಗಳಲ್ಲ ಸೋತು ಹೋದಾಗ ಆ ದೇವರನ್ನೇ ಮೊರೆಹೋಗುತ್ತಾರೆ ತುರುಗಾಹಿ ರಾಮಣ್ಣನವರು.
ಆ ಮನಸ್ಸಿಗೆ ಒಂದು ನೆಲೆಯನ್ನು (ಆ ಪರವಸ್ತುವಿನ ನೆಲೆ) ತೋರಿಸಿ ಅದನ್ನೇ ಗಮನದಲ್ಲಿರಿಸಿಕೊಂಡು ಮನಸ್ಸು ಆ ನೆಲೆಗೆ ಬಂಧಿತವಾಗಿರುವಂತೆ ಮಾಡಿರಿ ಎಂದು ಕೇಳಿಕೊಳ್ಳುತ್ತಿದ್ದಾರೆ.