Friday, March 28, 2014

Vachana 187: gaMdhavanoLakoMDa kusumava – The Form and Formless


VACHANA IN KANNADA

ಗಂಧವನೊಳಕೊಂಡ ಕುಸುಮವ ಕೊಯ್ಯಬಹುದಲ್ಲದೆ
ಗಂಧವನೊಳಕೊಂಡ ವಾಯುವ ಕೊಯ್ಯಬಹುದೆ?
ಆತ್ಮವನೊಳಕೊಂಡ ಘಟವನರಿಯಬಹುದಲ್ಲದೆ
ಘಟವನೊಳಕೊಂಡಿದ್ದಾತ್ಮನನರಿಯಬಹುದೆ?
ವಸ್ತು ಅಂಗವಾದಲ್ಲಿ ಅರಿಯಬಹುದಲ್ಲದೆ
ಅಂಗ ವಸ್ತುವಾದಲ್ಲಿ ಹಿಂಗಿ ಅರಿವ ಠಾವಿನ್ನಾವುದು?
ಕುಸುಮಕ್ಕೆ ಕಡೆ ನಡು ಮೊದಲಲ್ಲದೆ, ಗಂಧಕ್ಕೆ ಕಡೆ ನಡು ಮೊದಲುಂಟೆ?
ಅರಿವುದಕ್ಕೆ, ಅರುಹಿಸಿಕೊಂಬುದಕ್ಕೆ ಕುರುಹನರಿತಲ್ಲಿಯೆ
ಸದಾಶಿವಮೂರ್ತಿಲಿಂಗವೆಂಬ ರೂಪು ನಿಂದಿತ್ತು

TRANSLITERATION

gaMdhavanoLakoMDa kusumava koyyabahudallade
gaMdhavanoLakoMDa vaayuva koyyabahude?
aatmavanoLakoMDa ghatavanariyabahudallde
ghaTavanoLakoMDiddaatmananariyabahude?
vastu amgavaadalli ariyabahudallade
aMga vastuvaadalli hiMgi ariva Thaavinnaavudu?
kusumakke kaDe naDu modalallade gaMdhakke kaDe naDu modaluMTe?
arivudakke aruhisikoMbuvudakke kuruhanarivalliye
sadaashivamUrthyliMgaveMba rUpu niMdittu

CLICK HERE FOR A RECITATION


TRANSLATION (WORDS)

gaMdhavanoLakoMDa (with fragrance)  kusumava (flower)  koyyabahudallade (can be plucked)
gaMdhavanoLakoMDa (with fragrance) vaayuva (wind) koyyabahude? (is it possible to pluck?)
aatmavanoLakoMDa (a body with the soul)  ghatavanariyabahudallde (can be understood)
ghaTavanoLakoMDiddaatmananariyabahude?(can the soul which has absorbed the body be understood?)
vastu amgavaadalli  (if the  God becomes the body)ariyabahudallade (can be understood)
aMga vastuvaadalli(if the body becomes the God)  hiMgi ariva Thaavinnaavudu? (how can one understand?)
kusumakke (for the flower) kaDe naDu modalallade (there is end, middle and the beginning)  gaMdhakke kaDe naDu modaluMTe?(does the fragrance have  end , middle, and the beginning?)
arivudakke (to know)  aruhisikoMbuvudakke (to be known by) kuruhanarivalliye  (in understanding the icon)
sadaashivamUrthyliMgaveMba rUpu niMdittu (form stays)

VACHANA IN ENGLISH

The flower full of fragrance can be plucked,
Can the wind full of fragrance be plucked?
The body with the soul within it can be understood,
Can the soul that has absorbed the body be understood?
The God becoming the body can be understood,
How can one understand the body becoming the God?
There is end, middle and the beginning for the flower,
Does the fragrance has end, middle and the beginning?
To know and to be known by, only when the awareness of the icon sets in,
the form of SadaashivaMurthy Linga stays!

COMMENTARY

In this Vachana, Sharana Arivina Marithande distinguishes between the form and formless through the examples of flower and fragrance, to drive home that the awareness of formless God comes from the real awareness of the concept behind the icon.
The flower has a form. We can touch it and we can pluck it.  The fragrance in the flower can only be experienced either when we smell it or when the wind carries it. The wind is formless. We cannot see it, but we can feel it and we can smell the fragrance in it. The experience of the fragrance reminds us of the flower. The body has a form. We realize that body encloses the soul. We can see and feel the body, but not the soul. The God has given us the body. He resides in the body. In a way, this phenomenon of the God becoming the body can be understood. But, how about the body becoming the God? The flower with its form has a beginning, middle and an end. It comes into being, survives and dies. But, the fragrance lingers on without a beginning, middle or an end. The only way to know the formless, the Supreme and the Divine is to develop the awareness to see through the icon (the form) to realize Him. The Vachana is implying that the body is impermanent while the soul is permanent; the form must dissolve into formless – the body must merge into soul; that is when the body becomes the God!

Let us develop the Awareness to perceive the Formless!

KANNADA COMMENTARY

ಅರ್ಥ:
ಗಂಧವನೊಳಕೊಂಡ (ಪರಿಮಳದಿಂದ ಕೂಡಿದ)  ಕುಸುಮವ (ಹೂವನ್ನು) ಕೊಯ್ಯಬಹುದಲ್ಲದೆ
ಗಂಧವನೊಳಕೊಂಡ ವಾಯುವ ಕೊಯ್ಯಬಹುದೆ?
ಆತ್ಮವನೊಳಕೊಂಡ (ಆತ್ಮದಿಂದ ಕೂಡಿದ)  ಘಟವನರಿಯಬಹುದಲ್ಲದೆ (ಶರೀರವನ್ನು ಅರಿಯಬಹುದು ಆದರೆ)
ಘಟವನೊಳಕೊಂಡಿದ್ದಾತ್ಮನನರಿಯಬಹುದೆ? (ಶರೀರದೊಳಗೆ ಅಡಗಿದ ಆತ್ಮವನ್ನು ಅರಿಯಬಹುದೆ?)
ವಸ್ತು (ದೇವರು) ಅಂಗವಾದಲ್ಲಿ (ದೇಹರೂಪ ಧರಿಸಿದಾಗ) ಅರಿಯಬಹುದಲ್ಲದೆ
ಅಂಗ ವಸ್ತುವಾದಲ್ಲಿ ಹಿಂಗಿ (ಅಂಗವು ವಸ್ತುವಿನಲ್ಲಿ, ದೇವರಲ್ಲಿ ಒಂದಾದಾಗ) ಅರಿವ ಠಾವಿನ್ನಾವುದು (ತಿಳಿಯಲು ಅವಕಾಶವುಂಟೆ)?
ಕುಸುಮಕ್ಕೆ ಕಡೆ ನಡು ಮೊದಲಲ್ಲದೆ, ಗಂಧಕ್ಕೆ ಕಡೆ ನಡು ಮೊದಲುಂಟೆ?
ಅರಿವುದಕ್ಕೆ,(ತಿಳಿಯುವುದಕ್ಕೆ)  ಅರುಹಿಸಿಕೊಂಬುದಕ್ಕೆ (ತಿಳಿಸಿಕೊಳ್ಳುವುದಕ್ಕೆ) ಕುರುಹನರಿತಲ್ಲಿಯೆ (ಕುರುಹನ್ನು ತಿಳಿದಾಗ ಮಾತ್ರ)
ಸದಾಶಿವಮೂರ್ತಿಲಿಂಗವೆಂಬ ರೂಪು ನಿಂದಿತ್ತು (ಆ ಪರವಸ್ತು ಮನದಲ್ಲಿ ನಿಂತು ಬಿಡುತ್ತದೆ)


ತಾತ್ಪರ್ಯ:
ಇದು ಅರಿವಿನ ಮಾರಿ ತಂದೆಯವರ ವಚನ. ಇಲ್ಲಿ ಅವರು ಕುಸುಮ ಮತ್ತು ಗಂಧದ ಉದಾಹರಣೆಯನ್ನು ಕೊಟ್ಟು ಅರಿವು  ಮತ್ತು ಕುರುಹಿನ  ವಿಷಯವನ್ನು ಹೇಳುತ್ತಿದ್ದಾರೆ.
ಕುಸುಮಗಳಲ್ಲಿ ಗಂಧವಿರುತ್ತದೆ. ಪರಿಮಳವಿರುವ ಪುಷ್ಪಗಳನ್ನು ಅನಾಯಾಸವಾಗಿ ನಾವು ಕೊಯ್ಯಬಹುದು. ಆಗ ನಮಗೆ ಪುಷ್ಪವೂ ಸಿಗುತ್ತದೆ ಮತ್ತು ಗಂಧವೂ ಸಿಗುತ್ತದೆ. ಪುಷ್ಪ ಮೂರ್ತ ರೂಪ. ಮತ್ತು ಗಂಧ ಅಮೂರ್ತವಾದದ್ದು.  ವಾಯುವು ಪುಷ್ಪಗಳ ಗಂಧವನ್ನು ಹೊತ್ತು ತರುತ್ತದೆ. ಆದರೆ ಆ ವಾಯುವನ್ನು ಕೊಯ್ಯಬಹುದೆ? ಇಲ್ಲಿ ಎರಡೂ ಅಮೂರ್ತವಾದವುಗಳು. ಎರಡನ್ನೂ ನಾವು ಅನುಭವಿಸಬಹುದೇ ಹೊರತು ಕೈಯಲ್ಲಿ ಹಿಡಿಯಲಾಗುವುದಿಲ್ಲ. ಅದೇ ರೀತಿ ಆತ್ಮವನ್ನು ಹೊಂದಿದ ದೇಹವನ್ನು ನಾವು ಅರಿಯಬಹುದು. ಆದರೆ ದೇಹವನ್ನು ತನ್ನ ಒಳಗಾಗಿಸಿಕೊಂಡ ಆತ್ಮವನ್ನು ನಾವು ಅರಿಯಬಹುದೆ? ದೇಹ ಮೂರ್ತ ರೂಪದ್ದು. ಆತ್ಮ ಅಮೂರ್ತವಾದದ್ದು. ಮೂರ್ತವಾದ ದೇಹದಲ್ಲಿರುವ ಆತ್ಮನನ್ನು ನಾವು ಹೇಗಾದರೂ ಮಾಡಿ ಅರಿಯುವ ದಾರಿ ಇರುತ್ತದೆ.
ಆದರೆ ಅಮೂರ್ತವಾದ ಆತ್ಮದಲ್ಲಿ ದೇಹ ಅಡಗಿಕೊಂಡಾಗ ಅದನ್ನು ಅರಿಯುವುದು ಕಷ್ಟಕರ ಎನ್ನುತ್ತಾರೆ ಅರಿವಿನ ಮಾರಿತಂದೆಯವರು. ಏಕೆಂದರೆ ಅಮೂರ್ತದಲ್ಲಿ ಮೂರ್ತವು ಸೇರಿಕೊಂಡಾಗ ಅದು ಕೂಡ ಅಮೂರ್ತವಾಗುತ್ತದೆ.

ಆ ಪರವಸ್ತು ಅಂಗವಾದಾಗ ಅದನ್ನು ಅರಿಯುವುದು ಸಾಧ್ಯ. ಆದರೆ ಅಂಗವು ಆ ಪರವಸ್ತುವಾದಾಗ ಅದನ್ನು ಅರಿಯುವ ಪರಿಯಾವುದು? ಏಕೆಂದರೆ ಅಂಗ ವಸ್ತುವಿನಲ್ಲಿ ಹಿಂಗಿ ಹೋಗಿರುತ್ತದೆ. ಅದು ಅಮೂರ್ತವಾಗುತ್ತದೆ. ಅದನ್ನು ತಿಳಿಯುವುದು ಅಸಾಧ್ಯ. ಏಕೆಂದರೆ ಕುಸುಮವನ್ನು ನಾವು ’ಇದು ಅದರ ಮೊದಲ ಭಾಗ, ಇದು ನಡುವಿನ ಭಾಗ , ಇದು ಕೊನೆಯ ಭಾಗ’ ವೆಂದು ಗುರುತಿಸಬಹುದು. ಅದು ಮೂರ್ತರೂಪ. ಆದರೆ ಗಂಧವನ್ನು ಆ ರೀತಿಯಾಗಿ ವಿಭಾಗಿಸಲು ಸಾಧ್ಯವೆ? ಅಮೂರ್ತವಾದುದರಲ್ಲಿ ಅದರ ಭಾಗಗಳನ್ನು ಗುರುತಿಸಲು ಸಾಧ್ಯವೆ? ಇಲ್ಲವಾದುದರಿಂದ ಅರಿವನ್ನು ಕೂಡ ಅರಿವುದು ಅಥವಾ ಅರುಹಿಸಿಕೊಳ್ಳುವುದು ಎಂದು ವಿಭಾಗಿಸಲು ಸಾಧ್ಯವಿಲ್ಲ. ಕುರುಹನ್ನು ಅರಿತಮೇಲೆಯೇ ಅದರ ರೂಪು ಮನದಲ್ಲಿ ನಿಲ್ಲುತ್ತದೆ. ಅಲ್ಲಿಯವರೆಗೆ ಅದರ ಬಗ್ಗೆ ಏನೂ ಹೇಳಲಾಗುವುದಿಲ್ಲ.  ಏಕೆಂದರೆ ಅರಿವು ಅಮೂರ್ತವಾದದ್ದು. ಅದನ್ನು ಹೂವನ್ನು ಮೊದಲು, ನಡು, ಕಡೆ ಎಂದು ಭಾಗ ಮಾಡುವಂತೆ ಅರಿವನ್ನು,   ಅರಿವುದು, ಅರುಹಿಸಿಕೊಳ್ಳುವುದು, ಇದು ಕುರುಹು ಎಂದು ಎಂದು ವಿಭಾಗಿಸಲು ಸಾಧ್ಯವಿಲ್ಲ. ಅರಿವು ಅಖಂಡವಾದದ್ದು ಮತ್ತು ಅಮೂರ್ತವಾದದ್ದು. ಕುರುಹಿನ ಅರಿವಾದಾಗ ಅವು ಬೇರೆಬೇರೆ ಯಾಗುವುದಿಲ್ಲ. ಅಲ್ಲಿ ಯಾವುದು ಮೊದಲು ಯಾವುದು ಕಡೆ ಎಂದು ಹೇಳಲು ಬರುವುದಿಲ್ಲ. ಏಕೆಂದರೆ ಅರಿವಿನಲ್ಲಿಯೇ ಕುರುಹು ಅಡಗಿಹೋಗುತ್ತದೆ. ಅದನ್ನು ಪ್ರತ್ಯೇಕಗೊಳಿಸಲು ಬರುವುದಿಲ್ಲ. ಅದು ಗಂಧವನ್ನು ಒಳಗೊಂಡ ವಾಯುವಿನಂತೆ. ಅದನ್ನು ಅರಿಯಬಹುದು, ಅನುಭವಿಸಬಹುದು. ಅದರಂತೆಯೆ ಅರಿತಾಗ ಅದರ ರೂಪ ಮನದಲ್ಲಿ ನಿಂತಿಬಿಡುತ್ತದೆ, ಎನ್ನುತ್ತಾರೆ ಅರಿವಿನ ಮಾರಿತಂದೆಯವರು.

No comments:

Post a Comment