VACHANA IN KANNADA
ಮೇರುವ
ಸಾರಿದ ಕಾಗೆ ಹೊಂಬಣ್ಣ ವಾಗದಿದ್ದಡೆ
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ?
ದೇವಾ
ನಿಮ್ಮ ಪೂಜಿಸಿ ಧಾವತಿಗೊಂಬಡೆಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ?
ಆ ಧಾವತಿಯಿಂದ ಮುನ್ನಿನ ವಿಧಿ(ಯೇ) ಸಾಲದೆ?
ಗುಹೇಶ್ವರಾ ನಿಮ್ಮ ಪೂಜಿಸಿ ಸಾವಡೆ
ನಿಮ್ಮಿಂದ ಹೊರಗಣ ಜವನೇ ಸಾಲದೆ?
TRANSLITERATION
mEruva
saarida kaage hoMbaNNavaagadiddaDE
A
mEruviniMdattaNa hulumoraDiye saalade?dEvaa nimma poojisi dhaavatigoMbaDe
aa dhaavatiyiMda munnina vidhiyE saalade?
guhEshvaraa nimmapoojisi saavaDe
nimmiMda horagaNa javanE saalade?
CLICK HERE
FOR A RECITATION
http://youtu.be/3FrExH1Kd3A
mEruva (Meru is
the name of a golden mountain)
saarida (scaled) kaage (crow) hoMbaNNavaagadiddaDE
(if does not become golden)
A
mEruviniMdattaNa (from that golden
mountain) hulumoraDiye saalade? (isn’t a
prairie good enough)dEvaa (God) nimma poojisi (after worshipping you) dhaavatigoMbaDe (if one gets exhausted)
aa dhaavatiyiMda (than that exhaustion) munnina (earlier) vidhiyE (state) saalade? ( isn’t good enough?)
guhEshvaraa (Guheshvara) nimmapoojisi (by worshiping you) saavaDe (if one dies)
nimmiMda (than you) horagaNa (outside) javanE (mortal life) saalade? (isn’t good enough?)
If the crow does not become golden after scaling Meru (the
golden mountain),
Isn’t the prairie next to the golden mountain good enough?
Oh God! If after worshipping you one gets exhausted,
The state earlier isn’t good enough than that exhaustion?
Guhesvara! If one dies even after worshipping you,
Isn’t the mortal life outside than you, good enough?
Isn’t the prairie next to the golden mountain good enough?
Oh God! If after worshipping you one gets exhausted,
The state earlier isn’t good enough than that exhaustion?
Guhesvara! If one dies even after worshipping you,
Isn’t the mortal life outside than you, good enough?
COMMENTARY
We make elaborate efforts to achieve great things. We spend
money, time and other resources to reach the top. Allama Prabhu questions “ if
after all those efforts and spending of resources, if one does not achieve what
was to be achieved, is it not better to be where one was?”
Meru is a hypothetical golden mountain. It requires great
effort to scale it. Only the strongest and firm willed can scale it. The one
who scales it turns golden, as the legend has it. The crow is naturally dark.
It makes every effort to reach the top of the golden mountain; yet, it does not
become golden. If that is the case, is it not better for it to stay in the
prairie where it was?
If the result of worshipping God is just exhaustion, what
good is it? Is it not better to be in the state one was rather than spending
all the efforts to worship?
If one dies, even after worshipping Guhesvara, is it not
better to stay in the mortal world where one was before?Allama Prabhu is not advocating giving up and not trying to scale to the top. He is advocating internalizing what one sets out to do and be one hundred percent in it. Only then, it is worthwhile to embark on the journey to the top.
Ritualistic moves of worshipping God does not take one to God. They only result in exhaustion.
"If one dies even after worshipping Guhesvara" means that one should conquer death by worshipping Guhesvara, the God. But, one cannot escape from physical death. Worshipping thus implies understanding one's self and staying above the spiral of birth and death. This requires an understanding of how one has become the slave of senses, how to get out of their influences and achieve equanimity. Once this achieved, the ups and downs of mortal world do not matter. That is the freedom from death. Worshipping Guhesvara (God) is being an ardent devotee and a serious traveler making the spiritual journey to reach Him and to realize the Self. Only when self-realization sets in, one achieves the state of supreme bliss, the non-death! A self-realized individual does not face the mortal death. He is above the life and death, and up and down spirals. That should be the goal for scaling the golden mountain – to become golden within!
Let us devote ourselves to reach that golden mountain top
within us!
KANNADA COMMENTARY
ಅರ್ಥ:
ಮೇರುವ ಸಾರಿದ (ಮೇರು ಎಂಬ ಚಿನ್ನದ ಬೆಟ್ಟಕ್ಕೆ ಹೋದ) ಕಾಗೆ ಹೊಂಬಣ್ಣ ವಾಗದಿದ್ದಡೆ (ಕಾಗೆ ಚಿನ್ನದ ಬಣ್ಣವನ್ನು ಪಡೆಯದಿದ್ದರೆ)
ಆ ಮೇರುವಿಂದತ್ತಣ (ಆ
ಚಿನ್ನದ ಬೆಟ್ಟಕ್ಕಿಂತ ) ಹುಲುಮೊರಡಿಯೆ ಸಾಲದೆ? (ಹುಲ್ಲಿಗಾವಲೇ ಸಾಕು ಅಲ್ಲವೆ?)ದೇವಾ ನಿಮ್ಮ ಪೂಜಿಸಿ ಧಾವತಿಗೊಂಬಡೆ (ದೇವರನ್ನು ಪೂಜಿಸಿ ಶ್ರಮ, ದಣಿವು ಆಗುವ ಹಾಗಿದ್ದರೆ)
ಆ ಧಾವತಿಯಿಂದ ಮುನ್ನಿನ ವಿಧಿ(ಯೇ) ಸಾಲದೆ? (ಆ ಶ್ರಮಕ್ಕಿಂತ ಮುಂಚೆ ಇದ್ದ ಹಾಗಿರುವುದೇ ಸಾಕಲ್ಲವೆ?)
ಗುಹೇಶ್ವರಾ ನಿಮ್ಮ ಪೂಜಿಸಿ ಸಾವಡೆ (ಗುಹೇಶ್ವರನನ್ನು ಪೂಜಿಸಿಯೂ ಸಾವಿಗೆ ತುತ್ತಾಗುವ ಹಾಗಿದ್ದರೆ)
ನಿಮ್ಮಿಂದ ಹೊರಗಣ ಜವನೇ ಸಾಲದೆ? (ಗುಹೇಶ್ವರನಿಗಿಂತ ಹೊರಗಣ ಮರ್ತ್ಯಜೀವನ ಸಾಕಲ್ಲವೆ?)
ಮೇರು ಪರ್ವತವು ಚಿನ್ನದ್ದು. ಅಲ್ಲಿಗೆ ಹೋದವರು ಚಿನ್ನದಂತಾಗದಿದ್ದರೆ ಅಲ್ಲಿಗೆ ಹೋಗಿ ಏನು ಪ್ರಯೋಜನವೆನ್ನುತ್ತಾರೆ. ಕಾಗೆಯ ಬಣ್ಣ ಕಪ್ಪು. ಕಪ್ಪು ಬಣ್ಣದ ಕಾಗೆ ಮೇರು ಪರ್ವತಕ್ಕೆ ಹೋಗಿಯೂ ಕಪ್ಪಾಗಿಯೇ ಉಳಿಯುವಂತಿದ್ದರೆ ಅಲ್ಲಿಗೆ ಹೋಗಿ ಏನು ಪ್ರಯೋಜನ? ಮೇರು ಪರ್ವತ ಚಿನ್ನದ್ದು ಎನ್ನುವುದೇ ಒಂದು ವಿಶೇಷತೆಯೆ? ಅಲ್ಲಿಗೆ ಹೋದವರಿಗೆ ಅದರ ಗುಣ ಬರದಿದ್ದರೆ ಅಲ್ಲಿಗೆ ಹೋಗುವುದು ವ್ಯರ್ಥ. ಕಾಗೆ ಅಷ್ಟು ಕಷ್ಟಪಟ್ಟು ಎತ್ತರದಲ್ಲಿರುವ ಮೇರು ಪರ್ವತಕ್ಕೆ ಹೋಗುವ ಬದಲು ಹುಲ್ಲುಮೊರಡಿಯಲ್ಲಿ ಆಡುವುದೇ ಸರಿ. ಹಾಗೆ ಮಾಡುವುದರಿಂದ ಅದು ಏನನ್ನೂ ಕಳೆದುಕೊಳ್ಳುವುದಿಲ್ಲ ಮತ್ತು ಏನನ್ನೂ ಪಡೆದುಕೊಳ್ಳುವುದಿಲ್ಲ.
ಎಲ್ಲರೂ ದೇವರನ್ನು ಪೂಜಿಸುವುದು
ಮನಃ ಶಾಂತಿಗಾಗಿ. ಆದರೆ ದೇವರನ್ನೂ ಪೂಜಿಸಿ ದಣಿವಾಗುವ ಹಾಗಿದ್ದರೆ ಆ ಪೂಜೆಯಿಂದ
ಏನು ಪ್ರಯೋಜನ? ಪೂಜಿಸಿ ದಣಿವಿನಿಂದ ಕಷ್ಟಪಡುವುದಕ್ಕಿಂತ ಮುನ್ನಿನ ಹಾಗೇ ಇರುವುದು ಲೇಸಲ್ಲವೆ?
ಎಂದು ಕೇಳುತ್ತಾರೆ ಅಲ್ಲಮರು.
ಕೊನೆಗೆ ಅಲ್ಲಮರು, “ಗುಹೇಶ್ವರನನ್ನು ಪೂಜಿಸಿದ ಮೇಲೆಯೂ ಸಾವಿಗೆ ತುತ್ತಾಗುವ
ಹಾಗಿದ್ದರೆ ಅವನನ್ನು ಪೂಜಿಸಿವುದರಿಂದ ವಿಶೇಷ
ಲಾಭವೇನು? ಆತನ ಬದಲು ಹೊರಗಿನ ಮರ್ತ್ಯಜೀವನ ಸಾಕಲ್ಲವೆ?”
ಎನ್ನುತ್ತಾರೆ.
ಗುಹೇಶ್ವರನನ್ನು ಪೂಜಿಸಿದರೆ ಸಾವಿಗೆ ತುತ್ತಾಗುವ ಅವಕಾಶವಿರುವುದಿಲ್ಲ. ಅದು
ಹೇಗೆ? ಗುಹೇಶ್ವರನನ್ನು ಪೂಜಿಸುವುದು ಎಂದರೆ ತನ್ನನ್ನೇ ತಾನು ಅರಿಯುವುದು. ಅಂದರೆ ತನ್ನ ಮನಸ್ಸು
ಹೇಗೆ ವರ್ತಿಸುತ್ತದೆ? ತಾನು ಹೇಗೆ ಅಹಂಕಾರಕ್ಕೆ ತುತ್ತಾಗಿದ್ದೇನೆ? ತಾನು ಹೇಗೆ ಇಂದ್ರಿಯಗಳಿಗೆ
ತುತ್ತಾಗಿದ್ದೇನೆ ಎನ್ನುವುದನ್ನು ಅರಿಯುವುದು ಮತ್ತು ಆ ಎಲ್ಲದರಿಂದ ಬಿಡುಗಡೆ ಪಡೆಯುವುದು. ಅದೇ ಬಿಡುಗಡೆ. ಅದೇ ಸಾವಿಗೆ ತುತ್ತಾಗದಿರುವುದು. ಗುಹೇಶ್ವರನ ನಿಜವಾದ ಪೂಜೆ ವ್ಯಕ್ತಿಗೆ ಸಾವಿನಿಂದ ಬಿಡುಗಡೆ ಕೊಡುತ್ತದೆ. ಹಾಗಾಗದಿದ್ದಾಗ ಅಂದರೆ
ಸಾವಿನಿಂದ ಬಿಡುಗಡೆ ಇಲ್ಲದಿದ್ದರೆ
ಗುಹೇಶ್ವರನನ್ನು ಪೂಜಿಸಿ ಫಲವೇನು? ಅದರ ಬದಲು
ಸಾಮಾನ್ಯ ಜನರನ್ನೇ ಪೂಜಿಸಬಹುದು.
ಮೇರು ಪರ್ವತವು ತನ್ನ ಚಿನ್ನದ ಮೈಗೆ
ಹೆಸರುವಾಸಿಯಾದದ್ದು. ಆದರೆ ಅಲ್ಲಿಗೆ ಹೋಗುವ ಮಾತ್ರದಿಂದ ಅದರ ಗುಣ ಯಾರಿಗೂ ಬರಿವುದಿಲ್ಲ. ಅದೇ ರೀತಿ
ಯಾಂತ್ರಿಕವಾಗಿ ಗುಹೇಶ್ವರನನ್ನು ಪೂಜಿಸಿದರೆ ಯಾವ ಪ್ರಯೋಜನವೂ ಇಲ್ಲ. ಆತನನ್ನು ಮನಸಾ ಪೂಜಿಸಿದರೆ
ಸಾವಿಗೆ ತುತ್ತಾಗುವುದನ್ನು ತಡೆಯಬಹುದು. ಹಾಗಾಗದಿದ್ದರೆ, ಅಂದರೆ ಯಾಂತ್ರಿಕವಾಗಿ ಪೂಜಿಸುವ
ಹಾಗಿದ್ದರೆ ಅದಕ್ಕೆ ಗುಹೇಶ್ವರನೇ ಏಕೆ ಬೇಕು? ಯಾರನ್ನೂ ಅಂದರೆ ಸಾಮಾನ್ಯರನ್ನೂ ಪೂಜಿಸಬಹುದು
ಎನ್ನುತ್ತಾರೆ ಅಲ್ಲಮರು.
ಜನರು, ಸಾಮಾನ್ಯವಾಗಿ
ಒಳ್ಳೆಯತನಕ್ಕೆ ಹೆಸರುವಾಸಿಯಾದವನ ಹಿಂದೆ ಹೋಗುತ್ತಾರೆ. ಆದರೆ ಅದರಿಂದ ಯಾವ ಲಾಭವೂ
ಇಲ್ಲ. ಅವರ ಹತ್ತಿರವಿರುವುದರಿಂದ ನಮಗೆ ಅವರ ಗುಣ ಬರುವುದಿಲ್ಲ. ನಮ್ಮ ಒಳಗು ಬದಲಾಗಬೇಕು, ಎಂಬುದನ್ನು ಸೂಚಿಸುತ್ತದೆ ಈ ವಚನ.
Hi! Since you are providing the transliteration text, I assume you somehow covering the English text to unicode. I've used Google transliteration to get unicode and have used Sagar/LaTeX to get transliteration to Kannada in pdf. However, I haven't found a tool that can do both. Are you aware of such a tool? What tool(s) do you use?
ReplyDeleteI'm exploring English to Kannada transliteration options. Here's one of the things I've experimented with
ReplyDeletehttp://prashanthchengi.livejournal.com/57038.html