Friday, July 1, 2011

Vachana 46: Ura sIrege asaga - Detachment


ಊರ ಸೀರೆಗೆ ಅಸಗ ಬಡಿವಡೆದಂತೆ
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು, ಎಂದು ಮರುಳಾದೆ
ನಿಮ್ಮನರಿಯದ ಕಾರಣ, ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವ.


TRANSLITERATION
Ura sIrege asaga baDivaDedaMte
honnennadu, heNNennadu, maNNennadu, eMdu maruLAde.
nimmanariyada kAraNa, kemmane keTTe kUDalasaMgamadEva.
CLICK HERE TO HEAR IT:

TRANSLATION

Ura(of the town) sIrege(for clothes) asaga(=agasa =washerman) baDivaDedu (exerts himself washing) aMte(like)
Honnennadu (Gold is mine), heNNennadu (woman is mine), maNNennadu(land is mine), eMdu(thinking) maruLAde (became a fool).
Nimmanariyada(not realizing you) kAraNa (because), kemmane(totally) keTTe(ruined) kUDalasaMgamadEva (Lord kUDalasaMgamadEva) .


Like the washerman exerting himself washing town’s clothes,
I became a fool thinking wealth is mine, woman is mine and land is mine.
Lord KudalaSangamaDeva! Not realizing You, I am totally ruined!
COMMENTARY

In this Vachana Basavanna comments on how we spend all our lives in trivial pursuits while ignoring the ultimate wealth (i.e. realizing the Lord).  He uses a washer man as an example. The washer man exhausts himself,  washing the clothes of others, feeling as though they are his own, not realizing that the clothes will belong to others as soon as he completes washing them. Further, he is so involved in his work that he does not have any time to think about cleaning his own clothes, let alone his mind. Along the same lines, we are so involved in accumulating gold (indicative of wealth), woman (or man, indicative of relationships) and land (indicative of house and other properties) that we do not spend any time in spiritually uplifting ourselves and realizing the God. Basavanna says that without realization of the Lord (self), one’s life is totally ruined.
Basavanna is not advocating inaction, neither he is advocating not putting 100% effort and sincerity into our work. He is recommending being detached to  material aspects of life, stay away from ‘mine’ frame of mind, and develop God mindedness.     
Indeed, if we examine our lives of today, we spend our childhood years in schools qualifying ourselves for higher education. We spend our youth and later years in solidifying our education and acquiring skills needed for a career. We then spend all our efforts in succeeding in the career, building and supporting a family and acquiring wealth for comfortable living now and later. As we move into older age, depending on life’s events, we may start feeling that all the wealth and people around us may not be adequate to give us the so called ‘peace of mind’. We then tend to get philosophical and try to get into seeking spiritual paths. But, it might be too late to succeed in that endeavor, since we will have not acquired adequate skills for that path. Basavanna suggests starting with the spiritual path at the earliest and pursue it throughout. Our ‘peace of mind’ depends on the spiritual success rather than the material success.
Let us place the highest priority on spirituality!

KANNADA COMMENTARY

ಈ ವಚನದಲ್ಲಿ ಬಸವಣ್ಣನವರು ಮನಸ್ಸು ಹೇಗೆ ಅಲ್ಪವಾದುದರಲ್ಲಿ , ಅರ್ಥವಿಲ್ಲದುದರಲ್ಲಿ ತೊಡಗಿಕೊಂಡು ಅರ್ಥಪೂರ್ಣವಾದುದನ್ನು ಮರೆಯುತ್ತದೆ ಎನ್ನುವುದನ್ನು ಹೇಳುತ್ತಾರೆ. ಊರವರ ಸೀರೆಯನ್ನು, ಊರವರ ಬಟ್ಟೆಗಳನ್ನು ತನ್ನವು ಎನ್ನುವಂತೆ ಅಗಸನು ಅವುಗಳ ಕೊಳೆಯನ್ನು ತೆಗೆಯುವುದರಸಲುವಾಗಿ ಕಷ್ಟಪಟ್ಟು ಅವುಗಳನ್ನು ಬಡಿಬಡಿದು ತೊಳೆಯುತ್ತಾನೆ. ಅದೇ ರೀತಿ ತಾನು ಹೊನ್ನು, ಮಣ್ಣು ಹೆಣ್ಣುಗಳನ್ನು ತನ್ನವೆಂದುಕೊಂಡು ಮೂರ್ಖನಾದೆ , ಕೂಡಲಸಂಗಮದೇವನನ್ನು ಅರಿಯದ ಕಾರಣ ಪೂರ್ತಿಯಾಗಿ ಕೆಟ್ಟುಹೋದೆ ಎನ್ನುತ್ತಾರೆ.
ಅಗಸನ  ಕೆಲಸವೇ ಊರಜನರ ಬಟ್ಟೆಗಳನ್ನು ತೊಳೆಯುವುದು. ಆ ಕೆಲಸವನ್ನು ವಹಿಸಿಕೊಂಡು ಅವನು ಜನರ ಬಟ್ಟೆಯ ಕೊಳೆಯನ್ನು ತೆಗೆಯುವುದಕ್ಕಾಗಿ ಕಷ್ಟಪಟ್ಟು ಆ ಬಟ್ಟೆಗಳನ್ನು ಬಡಿಬಡಿದು ಒಗೆಯುತ್ತಾನೆ. ಅವನ ಮನಸ್ಸು ಅವುಗಳ ಕೊಳೆತೆಗೆಯುವುದರಲ್ಲಿಯೇ ತೊಡಗಿರುತ್ತದೆ. ಆ ಬಟ್ಟೆಗಳು ತನ್ನವೇ ಎಂಬುವಂತೆ ಅವುಗಳ ಬಗ್ಗೆ ಚಿಂತಿಸುತ್ತಾನೆ, ತನ್ನ ಎಲ್ಲ ಸಮಯ ಮತ್ತು ಶಕ್ತಿಯನ್ನು ಅವುಗಳ ಚಿಂತೆಯಲ್ಲಿ ಕಳೆಯುತ್ತಾನೆ. ವಾಸ್ತವಾಗಿ ತನ್ನದಲ್ಲದುದರ ಬಗ್ಗೆ ಯೋಚಿಸುವುದರಲ್ಲಿಯೇ ಆತನ ಬದುಕು ಕಳೆದು ಹೋಗುತ್ತದೆ. ಬೇರೆಯವರ ಬಟ್ಟೆಯ ಮೈಲಿಗೆ ತೊಳೆಯುವುದರಲ್ಲಿ ಮಗ್ನನಾದ ಅವನಿಗೆ ತನ್ನ ಮನದಲ್ಲಿಯೂ ಮೈಲಿಗೆ ಇರಬಹುದು, ಅದನ್ನು ತೊಳೆಯುವುದು ಮುಖ್ಯ ಅನ್ನುವ ಕಡೆ ಗಮನವೇ ಹೋಗುವುದಿಲ್ಲ. ಇದು ಅಗಸನ ಕತೆಯಾಯಿತು. ಬಸವಣ್ಣನವರು ಹೇಳುತ್ತಾರೆ, ತನ್ನ ಜೀವನವೂ ಸಹ ಅದೇ ರೀತಿಯಾಗುತ್ತಿದೆ. ಏಕೆಂದರೆ ತಾನೂ ಸಹ, ಹೆಣ್ಣು, ಹೊನ್ನು ಮತ್ತು ಮಣ್ಣು ತನ್ನವೇ ಎಂದು ಅವುಗಳಿಗಾಗಿಯೆ ತನ್ನ ಸಮಯ ಮತ್ತು ಶಕ್ತಿಯನ್ನು ವ್ಯಯಿಸುತ್ತಿದ್ದೇನೆ ಎನ್ನುತ್ತಿದ್ದಾರೆ. ಇಲ್ಲಿ ಅವರು ಆ ಆರೋಪವನ್ನು ತಮ್ಮ  ಮೇಲೆ ಹೊರಿಸಿಕೊಳ್ಳುತ್ತಿದ್ದಾರೆ. ಆದರೆ ಅದನ್ನು ಸಾಮಾನ್ಯರು ಮಾಡುತ್ತಿರುವುದರ ಕಡೆಗೆ ಗಮನ ಹರಿಯುವಂತೆ ಮಾಡುತ್ತಿದ್ದಾರೆ. ಎಲ್ಲರೂ ಮಾಡುವುದು ಅದನ್ನೇ. ಜನರು ತಮ್ಮ ಇಡೀ ಜೀವನವನ್ನು ಹೆಣ್ಣು ಅಥವಾ ಗಂಡಿನ ಸುಖಕ್ಕಾಗಿ, ಹೊನ್ನು ಕೂಡಿಡುವುದಕ್ಕಾಗಿ ಅಥವಾ  ಭೂಮಿಯನ್ನು ಕೊಂಡು ಕಾಯ್ದಿರಿಸುವುದಕ್ಕಾಗಿ ಮೀಸಲಿರಿಸುತ್ತಾರೆ. ಹಾಗೆ ಮಾಡುವಾಗ ಅದೆಲ್ಲವೂ ತನ್ನದೇ ಎನ್ನುವ ಬಲವಾಗಿ ನೆಚ್ಚಿರುತ್ತಾನೆ.    ತನಗೆ ಕಷ್ಟಬಂದಾಗ ಅದು ತನ್ನ ಸಹಾಯಕ್ಕೆ ಬರುತ್ತದೆ ಎನ್ನುವ ನಂಬಿಕೆಯಿರುತ್ತದೆ. ಆದರೆ ತನಗೆ ಒಂಟಿತನ ಕಾಡುವಾಗ, ತನ್ನ ಮನಸ್ಸಿಗೆ ಶಾಂತಿಯಿಲ್ಲದಾಗ, ಅಥವಾ ಇನ್ನಾವುದೋ ಚಿಂತೆ ಕಾಡುವಾಗ ಈ ಯಾವುವೂ ಕೆಲಸಕ್ಕೆ ಬಾರವು ಎಂಬುದು ಆಗ ಮನಸ್ಸಿಗೆ ಹೊಳೆಯುವುದಿಲ್ಲ. ತನ್ನ ಆಂತರಿಕ ಕಷ್ಟದಲ್ಲಿ ಅವು ಕೆಲಸಕ್ಕೆ ಬಾರದಿದ್ದಾಗ ತಾನು ಮೂರ್ಖನಾದೆ ಎನ್ನಿಸುತ್ತದೆ. ಆದರೆ ಆಗ ಹೊತ್ತು ಮೀರಿ ಹೋಗಿರುತ್ತದೆ. ಏಕೆಂದರೆ ನಿಜವಾದ ಸುಖವಿರುವುದು ತನ್ನ ತಾ ಅರಿತಾಗ ಅಥವಾ ಕೂಡಲಸಂಗಮನನ್ನು ಅರಿತಾಗ. ಆ ಅರಿವು ಎಲ್ಲ ಆಂತರಿಕ ತೊಳಲಾಟವನ್ನು ಕೊನೆಗೊಳಿಸುತ್ತದೆ. ಅದಕ್ಕಾಗಿ ಮನಸ್ಸನ್ನು ಆತನನ್ನು ಅರಿಯುವುದರಲ್ಲಿ ಮೊದಲಿನಿಂದಲೂ ತೊಡಗಿಸಿಕೊಳ್ಳುವುದು  ಸರಿ. ಆದರೆ ಮಾನವನ ಮನಸ್ಸು ಬೇಡದೆ ಇರುವದರಲ್ಲಿ ಅಥವಾ ತನ್ನದಲ್ಲದುದರಲ್ಲಿ ತೊಡಗಿಸಿಕೊಂಡು ನರಳಾಡುತ್ತದೆ. ಅದನ್ನೇ ಇಲ್ಲಿ ಬಸವಣ್ಣನವರು ಉದಾಹರಣೆಯ ಮೂಲಕ ತಿಳಿಸುತ್ತಿದ್ದಾರೆ. 
ನಾವು ಇಂದಿನ ನಮ್ಮ ಜೀವನ ಶೈಲಿಯನ್ನು ನೋಡಿಕೊಂಡಾಗ ಇದು ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ. ಚಿಕ್ಕಂದಿನಲ್ಲಿ ಶಾಲೆಯ ಓದು, ತಾರುಣ್ಯದಲ್ಲಿ ಹೆಚ್ಚಿನ ಓದು,ಮದುವೆ, ಒಳ್ಳೆಯ ಕೆಲಸ, ಆಸ್ತಿ ಮತ್ತು ಕೀರ್ತಿಯ ಮಹತ್ವಾಕಾಂಕ್ಷೆಗಳು ಮುಖ್ಯವಾಗುತ್ತವೆ. ಅವುಗಳು ಮನಸ್ಸನ್ನು ಪೂರ್ತಿಯಾಗಿ ಆವರಿಸಿಕೊಳ್ಳುತ್ತವೆ. ಬದುಕಿನ ವಾಸ್ತವತೆಯ ಕಡೆಗೆ ಗಮನ ಹರಿಯುವುದೇ ಇಲ್ಲ. ಅದರ ಬಗ್ಗೆ ಯೋಚಸುವ ಅವಕಾಶವಾಗಲಿ ಅಥವಾ ಇಚ್ಛೆಯಾಗಲಿ ಇರುವುದಿಲ್ಲ. ಮುದುಕರಾದಾಗ  ಆಯಾಸ, ಶಾರೀರಿಕ ತೊಂದರೆಗಳು ಮತ್ತು ಒಂಟಿತನ ಕಾಡಲು ಆರಂಭಿಸುತ್ತವೆ. ಆಗ ಮನಸ್ಸು ಅಧ್ಯಾತ್ಮದಲ್ಲಿ ಸುಖ ಕಾಣ ಬಯಸುತ್ತದೆ. ಅಂತಹ ಸಮಯದಲ್ಲಿ ಅನೇಕಾನೇಕ ಗುರುಗಳನ್ನು, ಧಾರ್ಮಿಕ  ಗ್ರಂಥಗಳನ್ನು ಆಶ್ರಯಿಸುತ್ತದೆ. ಆದರೆ  ಅಲ್ಲಿ, ಅಧ್ಯಾತ್ಮಕ್ಕೆ ಬೇಕಾದ ತೀವ್ರ ಹಂಬಲಕ್ಕಿಂತ  ಕಾತರತೆಯೇ ಹೆಚ್ಚಾಗಿರುತ್ತದೆ. ಇದರಿಂದ ಅರಿವಿಗಿಂತ ಗೊಂದಲವೇ  ಉಂಟಾಗಿ  ತನಗೆ ಕಂಡುಬಂದಷ್ಟೇ ಸತ್ಯವೆನ್ನುವ ಭ್ರಮೆಯಲ್ಲಿ ತೊಳಲುತ್ತದೆ. ಒಟ್ಟಿನಲ್ಲಿ ಇಡೀ ಬದುಕೆಲ್ಲ  ಕೆಲಸಕ್ಕೆ ಬಾರದ ಒಂದಲ್ಲ ಒಂದು ರೀತಿಯ ತೊಳಲಾಟದಲ್ಲಿಯೇ ಕಳೆದು ಹೋಗುತ್ತದೆ.  ಆದ್ದರಿಂದ ಅದನ್ನು ಮೊದಲೇ ಅರಿಯುವುದು ಮುಖ್ಯವಾಗುತ್ತದೆ. ಬದುಕಿನಲ್ಲಿ ಯಾವುದನ್ನು ನೆಚ್ಚ ಬೇಕು ಮತ್ತು ಯಾವುದನ್ನು ನೆಚ್ಚಬಾರದು ಎನ್ನುವುದರ ಗಮನವಿಡುವುದು ಅಗತ್ಯ.

Friday, June 24, 2011

VACHANA 45: Enage Maneyilla – Everything I have is Yours

ಎನಗೆ ಮನೆಯಿಲ್ಲ, ಎನಗೆ ಧನವಿಲ್ಲ
ಮಾಡುವುದೇನು? ನೀಡುವುದೇನು?
ಎನ್ನ ಧನ ಸಕಲ ಸಂಪದ ಸೌಖ್ಯವುಳ್ಳ
ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು
ಎನ್ನೊಡಲ ಹೊರೆವೆನಾಗಿ ಅಮರೇಶ್ವರ ಲಿಂಗಕ್ಕೆ
ನೀಡುವ ಬಯಕೆ ಎನಗಿಲ್ಲ

TRANSLITERATION

enage maneyilla, enage dhanavilla
mADuvudEnu? nIDuvudEnu?
enna dhana sakala saMpada sauKyavuLLa
nimma SaraNara tappalakkiyanAydu taMdu
ennoDala horevenAgi amarESvara liMgakke
nIDuva bayake enagilla

CLICK TO HEAR IT:

http://www.youtube.com/watch?v=NhBeMwoDsVg

TRANSLATION

enage maneyilla(I don’t have a house), enage dhanavilla(I don’t have wealth)
mADuvudEnu(what can I do)? nIDuvudEnu(what can I give)?
Enna(my) dhana(wealth) sakala(all) saMpada(wealth) sauKyavuLLa(having contentment)
Nimma(your) SaraNara(devotees’) tappalakkiyanu(rice fallen on the ground)Aydu(collect) taMdu(brought)
ennoDala(my stomach) horevenAgi(because I fill) amarESvara liMgakke (to amareshvara linga)
nIDuva(giving) bayake(desire) enagilla(I don’t have)

I don’t have a house, I don’t have wealth,
What can I do? What can I give?
My wealth is the rice that I collect from the grounds of your devotees’ who have all the wealth and contentment, to fill my stomach!
I don’t have a desire to give to Lord Amaresvara Linga!

COMMENTARY

In this Vachana Aaydakki Marayya opens up the innermost feelings of a daasohi (i.e. one involved in daasoha). He says “I have neither a house nor any wealth. As such, what I can do or give? I just collect the rice fallen at the grounds of Your devotees blessed with wealth and contentment and fill my stomach. As such, I do not feel that ‘I give’ to the Lord”. Maarayya is expressing his utmost humility by saying that he has nothing of his own, everything he has comes from the devotees of the Lord and whatever he gives belongs to the Lord.

 In true daasoha, there is no ‘giver’ and no ‘taker’ since the giver will have developed the attitude that he does not have anything to give and whatever he gives belongs to the Lord. Similarly, the taker will have developed the feeling that whatever he takes is for the work of the Lord. As such the ‘I-ness” is completely absent. The work (kaayaka) performed without a selfish motive is daasoha (serving the Lord). Kaayaka and Daasoha are two faces of the same coin. They must go hand in hand. Professor T. R. Mahadevaiah expresses that daasoha is a much broader concept than feeding the poor (Anna daasoha, Anna = rice, indicative of food). It is providing a means of living by those with to those without (Dhana Daasoha, Dhana=wealth); spreading knowledge by those with to those without(Jnaana Daasoha, Jnaana = knowledge); the strong supporting the weak; the confident enlightening the souls of those who have lost confidence; encouraging the inactive to become active in kaayaka thus the serving the society and the Lord; and in general seeing the Lord within us and all around us and treating our purpose in life as the service of the Lord.

Shiva Sharanas thus promoted the dignity of labor and encouraged performing one’s duties with utmost sincerity and unselfishness, no matter what one’s profession is. There is no room for being inactive. They advocated removing the ‘I-ness’ and developing the mental framework of seeing the Lord within and in everything around us and dedicating ourselves to the service of the Lord through the service to the community.
Let us acquire the bliss through Kaayaka and Daasoha!

KANNADA COMMENTARY

 ಆಯ್ದಕ್ಕಿ ಮಾರಯ್ಯನವರ ಈ ವಚನ ದಾಸೋಹಿಯ ಆತ್ಮವನ್ನೇ ತೆರೆದಿಡುತ್ತದೆ. “ ನನಗೆ ಮನೆಯಿಲ್ಲ, ನನಗೆ ಧನವಿಲ್ಲ. ಈ ಎರಡೂ ಇಲ್ಲದವನಾದ ನಾನು ಏನು ಮಾಡುವೆನು? ಏನನ್ನು ಕೊಡುವೆನು? ಎನ್ನ ಧನ, ಸಕಲ ಸಂಪತ್ತುಳ್ಳ ನಿಮ್ಮ ಶರಣರ (ಶರಣರ ಕಲ್ಯಾಣಗುಣವೇ ಅವರ ಸಂಪತ್ತು ಮತ್ತು ಸೌಖ್ಯ) ಮನೆಯಂಗಳದಲ್ಲಿ ಕೆಳಗೆ ಬಿದ್ದ ಅಕ್ಕಿ ಆಯುವ ಪುಣ್ಯ. ಅದನ್ನು ಆಯ್ದು ತಂದು ನನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವೆನು. (ಆ ಅಕ್ಕಿಯೂ ಸಹ ನಿಮ್ಮ ಶರಣರಿಗೆ ಸೇರಿದ್ದು) ಹೀಗಾಗಿ ಲಿಂಗಕ್ಕೆ “ನಾನು” ನೀಡುತ್ತೇನೆ ಎಂಬ ಭಾವ ನನಗಿಲ್ಲ” ಎನ್ನುತ್ತಾರೆ ಆಯ್ದಕ್ಕಿ ಮಾರಯ್ಯನವರು. ಇದು ವಿನಯದ ಪರಾಕಾಷ್ಠೆ.

ದಾಸೋಹದಲ್ಲಿ ನೀಡುವವರು ಮತ್ತು ನೀಡಿಸಿಕೊಳ್ಳುವವರು ಯಾರೂ ಇರುವುದಿಲ್ಲ. ಏಕೆಂದರೆ ನೀಡುವವರಿಗೆ, ಏನೂ ತನ್ನದಲ್ಲ, ಎಲ್ಲವೂ ಆ ಶಿವನಿಗೆ ಸೇರಿದ್ದು, ತಾನು ಏನೂ ಮಾಡುತ್ತಿಲ್ಲ, ಆ ಶಿವನೇ ತನ್ನಿಂದ ಎಲ್ಲವನ್ನೂ ಮಾಡಿಸುತ್ತಿದ್ದಾನೆ ಎನ್ನುವ ಭಾವ ಇರುತ್ತದೆ. ಹಾಗೂ ಮಾಡಿಸಿಕೊಳ್ಳುವ ಜಂಗಮನಿಗಂತೂ ಎಲ್ಲವೂ ಕೇವಲ ಶಿವಮಯವಾಗಿ ಕಾಣುತ್ತದೆ. ಶಿವನಲ್ಲದೆ ಇರುವುದು ಬೇರೇನೂ ಕಾಣುವುದೇ ಇಲ್ಲ. ತಾನು ತನ್ನದೆಂಬ ಭಾವ ಸಂಪೂರ್ಣವಾಗಿ ಇಲ್ಲವಾಗಿರುವುದರಿಂದ ಮಾಡಿಸಿಕೊಂಬುವವನು ಕೂಡ ಆ ಶಿವನೇ ಆಗಿರುತ್ತಾನೆ. ಹೀಗಾಗಿ “ಕೊಡುವಾತ ಕೊಂಬಾತ” ಆ ಶಿವನೇ ಹೊರತು ತಾನಲ್ಲ. “ನಾನು” ಎಂಬುದನ್ನು ಮರೆತು ಮಾಡುವ ಪ್ರತಿಯೊಂದು ಕೆಲಸವೂ ಕಾಯಕ ಮತ್ತು ದಾಸೋಹವಾಗುತ್ತದೆ. ಕಾಯಕ ಮತ್ತು ದಾಸೋಹ ಬೇರೆ ಅಲ್ಲ, ಅವು ಒಂದೇ ನಾಣ್ಯದ ಎರಡು ಮುಖಗಳು. ಸ್ವಾರ್ಥವಿಲ್ಲದ ಕಾಯಕವೇ ದಾಸೋಹ ವಾಗುತ್ತದೆ.

ಇಂದು “ದಾಸೋಹ” ದ ಅರ್ಥ ಸಂಕುಚಿತಗೊಂಡಿದೆ. ದಾಸೋಹವೆಂದರೆ ಕೇವಲ ಊಟಕ್ಕೆ ಹಾಕುವುದು ಎಂಬ ಅರ್ಥ ಉಳಿದುಕೊಂಡಿದೆ. ಪ್ರೊಫೆಸರ್ ಟಿ. ಆರ್. ಮಹದೇವಯ್ಯನವರು “ ದಾಸೋಹವೆಂದರೆ ಬರಿ ಆಹಾರ ದಾನವಲ್ಲ, ಇದಕ್ಕೆ ವಿಶಾಲವಾದ ಅರ್ಥವಿದೆ. ಉಳ್ಳವರು ಇಲ್ಲದವರಿಗೆ ನೀಡುವುದು, ತಿಳಿದವರು ತಿಳಿಯದವರಿಗೆ ಕಲಿಸುವುದು, ಹತಾಶರಾದವರ ಎದೆಯಲ್ಲಿ ಆಶಾಜ್ಯೋತಿಯನ್ನು ಬೆಳಗಿಸುವುದು. ಬಲ್ಲಿದವರಾದವರು ಅಶಕ್ತರಿಗೆ ನೆರವಾಗಿ ಸಬಲಗೊಳಿಸುವುದು, ಕೀಳರಿಮೆಯಿಂದ ಮೂಲೆಗುಂಪಾದವರಿಗೆ ತಲೆ ಎತ್ತಿ ನಿಲ್ಲುವ ಆತ್ಮ ವಿಶ್ವಾಸ ಮೂಡಿಸುವುದು, ಜಡರಾದವರಿಗೆ, ನವೋತ್ಸಾಹ, ಕ್ರಿಯಾಶೀಲತೆಯನ್ನುಂಟುಮಾಡುವುದು, ಸುಪ್ತ ಪ್ರತಿಭೆಗಳ ಪ್ರಕಾಶನಕ್ಕೆ ಸೂಕ್ತ ಪ್ರೋತ್ಸಾಹ ನೀಡುವುದು, ಇವೆಲ್ಲವೂ ಸೇರುತ್ತವೆ, ಇವುಗಳ ಲಾಭ ಸಮಾಜಕ್ಕೆ, ದೇಶಕ್ಕೆ” ಎಂದು ಹೇಳುತ್ತಾರೆ.

ಶರಣರು ಈ ಲೋಕವನ್ನು, ಈ ಸಮಾಜವನ್ನು, ಈ ಬದುಕನ್ನು ಕಡೆಗಣಿಸಲಿಲ್ಲ. ಅವರು ಅದನ್ನು ಪೂರ್ತಿಯಾಗಿ ಸ್ವೀಕರಿಸಿ ಅದರ ಕಲ್ಯಾಣ ಮತ್ತು ಆತ್ಮೋನ್ನತಿಯಲ್ಲಿ ತೊಡಗಿದರು. ಈ ನಿಟ್ಟಿನಲ್ಲಿ ಅವರು ಕೈಗೊಂಡ ಕಾಯಕ ಮತ್ತು ದಾಸೋಹಗಳು ಅತ್ಯಂತ ಉದಾತ್ತವಾದ ವಿಚಾರಗಳು.