Friday, June 17, 2011

Vachana 44: baktaru kaayakavendu - True Service


ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು ದಾಸೋಹವ ಮಾಡಬಹುದೆ?
ಒಮ್ಮನವ ತಂದು ಒಮ್ಮನದಲ್ಲಿಯೆ ಮಾಡಿ ಇಮ್ಮನವಾಗದ ಮುನ್ನವೆ
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಸಲ್ಲಬೇಕು ಮಾರಯ್ಯ

TRANSLITERATION

Baktaru kAyakaveMdu dAyagArikeyalli taMdu dAsOhava mADabahude?
ommanava taMdu ommanadalliye mADi immanavAgada munnave
mArayyapriya amarESvaraliMgakke sallabEku mArayya

CLICK HERE TO HEAR IT:


TRANSLATION
Baktaru(devotees) kAyakaveMdu(thinking it as sacred work) dAyagArikeyalli(from inherited property) taMdu(brought) dAsOhava(sacred community service) mADabahude(can it be done)?
ommanava (single mind) taMdu(brought, develop) ommanadalliye(single mindedly) mADi (done) immanavAgada(getting to two mindedness) munnave(before)
mArayyapriya(beloved of Maarayya) amarESvaraliMgakke(to Lord amarESvara Linga) sallabEku(should be offered)  mArayya(Maarayya).

Can the devotees perform the sacred community service using inherited property, rather than the earnings from sacred work?
One must develop single mindedness, perform the sacred work with the single mind, before it gets distracted into two, and offer the fruits of work to Lord Amaresvara Linga.

COMMENTARY

In this Vachana, Sharane Lakkamma says that one must perform kaayaka (the sacred work) and devote the fruits of work to daasoha (the sacred community service). Further, one must develop a strong (single) mind, and with the strong single mindedness should perform the work. Before the mind gets corrupted due to other desires and distractions, one must offer the fruits of work to the Lord and to community service.  Lakkamma says that it is improper to say that donating the inherited wealth to the community is daasoha.  

Daasoham stands for daasa = servant aham= me. Through daasoha, we are enhancing our ‘serving the community’ mentality. When we perform our work with the strong mindset of  using the fruits of work for the service of the community, we will have dedicated ourselves completely to the service of the fellow beings. On the other hand, when inherited wealth is used for community service, our mental set up is one of  “I gave” rather than “I served”. Lakkamma advocates ‘served’ over ‘gave’ mentality. It is always easier to give away the wealth we inherit compared to that we work hard to earn. Conducting daasoha through our earnings thus makes us humbler and less attached to the mundane wealth.

Professor T. R. Mahadevayya equates kaayaka and daasoha to the two faces of the same coin. He says, that kaayaka is the means of acquiring wealth while daasoha is the means of disposing it. As such, the two should go hand in hand. We should offer the threefold means (tanu = body, mana = mind, dhana= wealth) we have to the service of the community in general, and the trio (guru = teacher, linga = Lord and jangama = wandering ascetic) in particular, with the deepest humility.

Let us develop the single mindedness to devote our work to community service with the deepest humility!

KANNADA COMMENTARY

ಇಲ್ಲಿ ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ಯಾವುದು ಎಂಬುದನ್ನು ಲಕ್ಕಮ್ಮ ಹೇಳುತ್ತಾಳೆ. ಭಕ್ತರು ತಮ್ಮ ಪಾಲಿಗೆ ಪಿತ್ರಾರ್ಜಿತವಾಗಿ ಬಂದುದರಲ್ಲಿ ದಾಸೋಹ ಮಾಡುತ್ತಾರೆ. ಅದನ್ನು  ಕಾಯಕವೆನ್ನುತ್ತಾರೆ. ಆಕೆ  ಅದು ತಪ್ಪು ಎಂದು ಹೇಳುತ್ತಾಳೆ. ಬೇರೆಯವರಿಂದ ಬಂದುದನ್ನು ಕೊಟ್ಟುಬಿಡುವುದು ಸುಲಭ, ಆದರೆ ತಾನು ಸ್ವತಃ ಕಷ್ಟಪಟ್ಟು ದುಡಿದುದನ್ನು ಕೊಡುವುದು ಕಷ್ಟ, ಎಂದು ಇಲ್ಲಿ ಸೂಚ್ಯವಾಗಿ ಹೇಳುತ್ತಾಳೆ ಲಕ್ಕಮ್ಮ. ಸ್ವತಃ ದುಡಿಯಬೇಕು. ಒಂದೇ ಮನಸ್ಸಿಂದ ದುಡಿದು, ಒಂದೇ ಮನಸ್ಸಿನಿಂದ ಅದನ್ನು ಲಿಂಗಕ್ಕೆ ಅರ್ಪಿಸಲು ಅಣಿಗೊಳಿಸಿ, ಇಮ್ಮನ ವಾಗದ ಮುನ್ನ ಅಂದರೆ ಮನಸ್ಸು ಇನ್ನಾವುದೋ ಆಸೆಗೆ ಪಕ್ಕಾಗದ ಮುನ್ನ ಅದು ಲಿಂಗಕ್ಕೆ ಅರ್ಪಿತವಾಗಬೇಕು. ಆಗ ಮಾತ್ರ ಅದು ನಿಜವಾದ ಕಾಯಕ ಮತ್ತು ದಾಸೋಹವಾಗುತ್ತದೆ.

ಹಾಗಾದರೆ ತಮಗೆ ಬಳುವಳಿಯಾಗಿ ಬಂದುದರಲ್ಲಿ ದಾಸೋಹ ಮಾಡುವುದು ತಪ್ಪೆ? ಇಲ್ಲ ಅದು ತಪ್ಪಲ್ಲ. ಆದರೆ ಅದು ಕಾಯಕವಾಗಲಿ ಅಥವಾ ಶುದ್ಧ ದಾಸೋಹವಾಗಲಿ  ಆಗುವುದಿಲ್ಲ. ಅದು ದಾನ ಅನ್ನಿಸಿಕೊಳ್ಳಬಹುದು. ದಾನ ಮಾಡುವುದು ತಪ್ಪಲ್ಲ. ದಾನ ಮತ್ತು ದಾಸೋಹದಲ್ಲಿ ಅಂತರವಿದೆ. ದಾನ ಮಾಡುವಾಗನಾನು ದಾನ ಮಾಡುತ್ತಿದ್ದೇನೆಎನ್ನುವ ಅಹಂ ಭಾವವಿರುತ್ತದೆ. ಆದರೆ ದಾಸೋಹ ಮಾಡುವಲ್ಲಿ  ಕೃತಕೃತ್ಯಭಾವ ವಿರುತ್ತದೆ.  ದಾಸೋಹ ಮಾಡಿ ತಾನು ಉಪಕಾರ ಮಾಡುತ್ತಿಲ್ಲ, ಉಪಕೃತನಾಗುತ್ತಿದ್ದೇನೆ ಎನ್ನುವ ಭಾವವಿರುತ್ತದೆ.

ಕಾಯಕ ಮತ್ತು ದಾಸೋಹದ ವಿಷಯ ಹೇಳುತ್ತ  ಪ್ರೊ. ಟಿ. ಅರ್. ಮಹದೇವಯ್ಯನವರು “....ಕಾಯಕ ಮತ್ತು ದಾಸೋಹ ತತ್ವಗಳು ಬೇರೆ ಬೇರೆಯಲ್ಲ. ಅವು ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಒಂದು ಇನ್ನೊಂದಕ್ಕೆ ಪೂರಕ, ಪೋಷಕ. ಒಂದು ಗಳಿಕೆಯ ಮಾರ್ಗವಾದರೆ ಇನ್ನೊಂದು ಬಳಕೆಯ ಮಾರ್ಗ. ಕಾಯಕದಲ್ಲಿ ದುಡಿಮೆಯ ಫಲ ಕಂಡರೆ ದಾಸೋಹದಲ್ಲಿ ಹಂಚಿ ಉಣ್ಣುವ ಕೃತಕೃತ್ಯತೆಯಿದೆ. ಹೀಗೆ ಇವು ಸಂಪತ್ತಿನ ಉತ್ಪಾದನೆ ಮತ್ತು ವಿತರಣೆಯ ಸೂತ್ರಗಳು.
ದಾಸಃ ಅಹಂದಾಸೋಹಃ - ನಾನು ದಾಸನಾಗಿದ್ದೇನೆ ಎಂಬ ಮನಸ್ಥಿತಿಯಿಂದ ಜನ ಸೇವೆ ಮಾಡುವುದು. ಇದಕ್ಕೆ  ಶರಣರು ಹೊಸ ಅರ್ಥವನ್ನು ಟಂಕಿಸಿದ್ದಾರೆ.ತನ್ನ ತನು ಮನ ಧನಗಳನ್ನು (ತ್ರಿವಿಧಗಳನ್ನು) ಗುರು ಲಿಂಗ ಜಂಗಮಕ್ಕೆ ( ತ್ರಿವಿಧಕ್ಕೆ) ನಿರಹಂಕಾರ ಬುದ್ಧಿಯಿಂದ , ಸೇವಾ ಮನೋಭಾವದಿಂದ ಅರ್ಪಿಸಿ, ಪ್ರಸಾದವನ್ನು  ತಾನು ಸ್ವೀಕರಿಸುವುದು ಎಂದರ್ಥ. ಅಂದರೆ ಕಾಯಕ ಕೃತಾರ್ಥವಾಗುವುದು ದಾಸೋಹದಲ್ಲಿ  ಎಂದು ಹೇಳುತ್ತಾರೆ.

ಅದಕ್ಕೇ ಒಮ್ಮನದಿಂದ ಕೆಲಸ ಮಾಡಿ, ಏನನ್ನು ಕೊಡಬೇಕೆಂದುಕೊಂಡಿರುತ್ತೇವೆಯೋ ಅದನ್ನು ಒಮ್ಮನದಿಂದ ತಂದು, ಇಮ್ಮನವಾಗುವುದಕ್ಕೆ ಮುಂಚೆ, ಅಂದರೆ ಮನದಲ್ಲಿ ಬೇರೆ ಆಸೆ ಸುಳಿಯುವುದಕ್ಕೆ ಮುನ್ನವೆ ಲಿಂಗಕ್ಕೆ ಅರ್ಪಿಸಬೇಕು. ಇಲ್ಲಿ ಇಮ್ಮನ ಎಂಬ ಪದ ಬಹಳ ಮುಖ್ಯವಾದದ್ದು. ಮನಸ್ಸು ಬಹಳ ಚಂಚಲವಾದದ್ದು. ಒಂದು ಕ್ಷಣದಲ್ಲಿ ಅದು ಯೋಚಿಸುವ ರೀತಿಯೇ ಬದಲಾಗಿ ಹೋಗುತ್ತದೆ. 
ತಾನು ಮಾಡುತ್ತಿರುವುದು ತನಗಾಗಿ ಅಲ್ಲ, ಕೇವಲ ತನ್ನ ಅನುಕೂಲತೆಯ ಬಗ್ಗೆ  ಯೋಚಿಸುವುದಲ್ಲ, ತಾನು ಮಾಡುವ ಕೆಲಸದಲ್ಲಿ  ಕೊರತೆಯುಂಟಾಗಬಾರದು, ಯಾರಿಗೂ ಮೋಸವಾಗಬಾರದು,ಕೆಲಸಕ್ಕೆ ಸಿಗುವ ಫಲವೇನಾದರಾಗಲಿ ತಾನು ಮಾಡುವ  ಕೆಲಸವು ಉತ್ಕೃಷ್ಟ ಮಟ್ಟದ್ದಾಗಿರಬೇಕು, ಅದರಿಂದ ಇತರರ ಕಲ್ಯಾಣವಾಗಬೇಕು ಎಂಬ ಭಾವದಿಂದ ಕೆಲಸಮಾಡಬೇಕು. ಸ್ವಾರ್ಥ ಭಾವ ಇಲ್ಲದಿದ್ದಾಗ  ಮನಸ್ಸು ಏಕಾಗ್ರತೆಯಿಂದ ಕೆಲಸದಲ್ಲಿ ತೊಡಗುತ್ತದೆ. ಅದರಿಂದ ಸಿಗುವ ಫಲದ ಬಗ್ಗೆ ಯೋಚಿಸುವುದಿಲ್ಲ. ನಿಸ್ವಾರ್ಥವಾಗಿ ಒಮ್ಮನದಿಂದ ಮಾಡಿದ ಕೆಲಸವು ಉದಾತ್ತತೆ ಪಡೆಯುತ್ತದೆ. ಅದರ ಫಲವನ್ನು ಅದೇ ರೀತಿ ಒಮ್ಮನದಿಂದ ಗುರು ಲಿಂಗ ಜಂಗಮರ ದಾಸೋಹದಲ್ಲಿ ತೊಡಗಿಸಿದಾಗ ಅದು ಸತ್ಯ ಶುದ್ಧಕಾಯಕವೆನಿಸಿಕೊಳ್ಳುತ್ತದೆ. ಆದರೆ ಮನಸ್ಸು ಬಹಳ ಚಂಚಲವಾದದ್ದು. ಅದು ಬಹು ಬೇಗ ಎರಡು ಬಗೆಯುತ್ತದೆ. ಕೈಯಲ್ಲಿ ಫಲ ಬಂದಕೂಡಲೇ ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ನಾನಾ ಉಪಾಯಗಳನ್ನು ಮಾಡತೊಡಗುತ್ತದೆ. ಆದ್ದರಿಂದಲೇ ಆಯದಕ್ಕಿ ಲಕ್ಕಮ್ಮಇಮ್ಮನವಾಗುವುದಕ್ಕೆ ಮುನ್ನವೆಲಿಂಗಕ್ಕೆ ಅರ್ಪಿಸಬೇಕು ಎಂದು ಹೇಳುತ್ತಾಳೆ.  


Friday, June 10, 2011

Vachna 43: mana shuddavilladavange - Needs versus Wants!


ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ,
ಚಿತ್ತ ಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ
ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು,
ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕಾ.

TRANSLITERATION

mana SuddhavilladavaMge dravyada baDatanavallade,
citta Suddhadalli kAyakava mADuvalli sadBaktaMge
etta nODidaDatta lakShmi tAnAgippaLu,
mArayyapriya amarESvaraliMgada sEveyuLLannakkA.


CLICK HERE TO HEAR IT:

http://www.youtube.com/watch?v=FWwzWTvFKN0

TRANSLATION

Mana (mind) Suddhavillada (is corrupted) avaMge(to him, whose) dravyada(funds, wealth) baDatanavu (poverty) allade(but not),
Citta (mind) Suddhadalli (uncorrupted) kAyakava(work) mADuvalli (doing) sadBaktaMge(for the true devotee)
etta nODidaDatta(wherever seen) lakShmi(Goddess of wealth) tAnAgippaLu(appears/ manifests herself),
mArayyapriya(beloved of Maarayya) amarESvaraliMgada(of Lord amarESvara Linga) sEveyuLLannakkA(as long as in service).


One with a corrupted mind is always in nothing but poverty!
For a true devotee performing his work with uncorrupted mind, the Goddess of wealth (lakShmi) manifests herself everywhere,
as long as he serves Lord amarESvara linga!


COMMENTARY

In our previous posting, Sharane Lakkamma addressed the concept of accumulating just enough to satisfy the daily needs and dedicating the excess to the service of the community. She extends that concept further in this Vachana, saying that an individual with a corrupted mind is always in poverty, while an individual with an uncorrupted mind, who performs his work (kaayaka) in an unselfish way, and as a service to the Lord is always rich.
How does the mind get corrupted? Human tendency is to aspire always for something better than (or perceived to be better than) what one has in terms of material and comforts. We are in general, never satisfied with what we have. Even when our basic needs are met, we would still want more and better things. This desire for more is the main cause of corruption of mind. It is the first of the arishadvarga, the six passions of mind or enemies: kama (desire, lust), krodha (anger), lobha (greed), moha (delusion), mada (pride) and matsarya (jealousy). These negative characteristics prevent man from realizing the atman (Reality that is his True Being). As long as our ‘wants’ dictate our lives, we have corrupted minds and are always in poverty. As we size our ‘needs’ to provide us a comfortable life and curb our ‘wants’ we get richer and richer. Performing our duty (work) with the best of our efforts, sharing our excess with the fellow beings, dedicating the work we do as our service to the Lord, and curbing ‘desire’ from our minds is the path to the true riches. A true devotee sees the Lord in everyone and everything around him. The richness a true devotee seeks is not materialistic, but the knowledge of the Lord within.


Let us be rich by balancing our needs and wants and sharing our riches with fellow beings.


KANNADA COMMENTARY

ಕಾಯಕದ ಬಗ್ಗೆ ಲಕ್ಕಮ್ಮನ ಇನ್ನೊಂದು ವಚನವಿದು. ಮನ ಶುದ್ಧವಿಲ್ಲವರಿಗೆ ದ್ರವ್ಯದ ಬಡತನ, ಹಣದ ಕೊರತೆ ಉಂಟಾಗುತ್ತದೆ. ಆದರೆ ಚಿತ್ತ ಶುದ್ಧವಾಗಿರುವ ಭಕ್ತನಿಗೆ, ಲಿಂಗದ ಸೇವೆಯಲ್ಲಿ ತೊಡಗಿಸಿಕೊಂಡವನಿಗೆ, ಎಲ್ಲೆಡೆಯೂ ಲಕ್ಷ್ಮಿಯೇ ಕಂಡು ಬರುತ್ತಾಳೆ, ಅಂದರೆ ಸಮೃದ್ಧಿಯೇ ಕಂಡುಬರುತ್ತದೆ, ಯಾವ ಕೊರತೆಯೂ ಉಂಟಾಗುವುದಿಲ್ಲ ಎನ್ನುತ್ತಾಳೆ ಲಕ್ಕಮ್ಮ.
ಮನ ಶುದ್ಧವಿಲ್ಲದವನು ಎಂದರೆ ಏನೆಂದು ತಿಳಿದುಕೊಳ್ಳಲು ಪ್ರಯತ್ನಿಸೋಣ. ಯಾವ ಮನಸ್ಸು ಭ್ರಷ್ಟತೆಗೆ ಒಳಗಾಗಿರುತ್ತದೆಯೋ ಅದನ್ನು ಅಶುದ್ಧ ಮನಸ್ಸೆನ್ನಬಹುದು. ಆಸೆಗೆ ಬಲಿಯಾದ ಮನಸ್ಸು ನ್ಯಾಯ ಅನ್ಯಾಯಗಳ ವಿವೇಚನೆಯನ್ನೇ ಕಳೆದು ಕೊಳ್ಳುತ್ತದೆ.
ಒಂದು ಸಣ್ಣ ಆಸೆಗೆ ಬಲಿಯಾದ ಮನಸ್ಸು ಅದರ ಪರಿಣಾಮವಾಗಿ ಒಂದಾದ ಮೇಲೊಂದರಂತೆ ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳಿಗೆ ಗುರಿಯಾಗಿ ತಾನು ತೊಳಲುತ್ತದೆಯಲ್ಲದೆ ಇತರರಿಗೂ ನೋವನ್ನುಂಟುಮಾಡುತ್ತದೆ. ಹೀಗಾಗಿ ತನ್ನ ಸುತ್ತಮುತ್ತಲೆಲ್ಲ ನಕಾರಾತ್ಮಕ ಭಾವನೆಗಳಿಗೆ ಎಡೆಮಾಡಿಕೊಡುತ್ತದೆ. ಹಾಗಾದರೆ ಆಸೆಗಳೇ ಇಲ್ಲದೆ ಬದುಕಬೇಕೆ? ಬದುಕಬಹುದೆ? ಬದುಕಿಗೆ ಅನೇಕ ಅವಶ್ಯಕತೆಗಳಿರುತ್ತವೆ. ಅವಶ್ಯಕತೆಗಳು ಆಸೆಗಳಲ್ಲ. ಬಯಕೆ ಮತ್ತು ಅವಶ್ಯಕತೆಗೆ ಬಹಳ ವ್ಯತ್ಯಾಸವಿದೆ. ಬದುಕಿಗೆ ಬೇಕೇಬೇಕಾದವುಗಳು ಅವಶ್ಯಕತೆ ಎನ್ನಿಸಿಕೊಳ್ಳುತ್ತವೆ. ಅವಶ್ಯಕತೆಗಿಂತಲೂ ಹೆಚ್ಚಿನವು ಆಸೆ ಎನ್ನಿಸಿಕೊಳ್ಳುತ್ತವೆ. ಬದುಕಲು ಅವಶ್ಯಕವಾದವುಗಳನ್ನು ಬಿಟ್ಟು ಹೆಚ್ಚಿನವುಗಳನ್ನು ಆಶಿಸುವುದು ಅನ್ಯಾಯ. ಏಕೆಂದರೆ ಅದರಿಂದ ಬೇರೆಯವರ ಸ್ವತ್ತನ್ನು ನಾವು ಕಸಿದುಕೊಂಡಂತೆ ಆಗುತ್ತದೆ. ಇನ್ನಾರದೋ ಅವಶ್ಯಕತೆಗಳಿಗೆ ಅಡ್ಡಿ ಮಾಡಿದಂತಾಗುತ್ತದೆ. ಆದ್ದರಿಂದ ಶುದ್ಧ ಮನಸ್ಸು ಎಂದರೆ ತಮಗೆ ಅಗತ್ಯವಿಲ್ಲದ್ದನ್ನು ಬಯಸದೆ ಇರುವುದು.
ಇದನ್ನು ಅರಿತು ಚಿತ್ತವನ್ನು ಶುದ್ಧವಾಗಿಟ್ಟುಕೊಂಡವನಿಗೆ ಎಲ್ಲೆಡೆಯೂ ಲಕ್ಷ್ಮಿ ಕಂಡು ಬರುತ್ತಾಳೆ. ಏಕೆಂದರೆ ಆತನು ತನ್ನಲ್ಲದ ವಸ್ತುವನ್ನು ಬಯಸುವುದಿಲ್ಲ. ತನಗೆ ಅವಶ್ಯಕವಾದುದನ್ನು ತನ್ನ ದುಡಿಮೆಯಿಂದ ತಾನು ಪಡೆದುಕೊಳ್ಳುವುದರಿಂದ ಆತನ ಆತ್ಮ ಸಂಪೂರ್ಣವಾಗಿ ತೃಪ್ತವಾಗಿರುತ್ತದೆ. ಆ ದುಡಿಮೆಯಲ್ಲಿಯೇ ಆತನು ಗುರು, ಲಿಂಗ, ಜಂಗಮರ ಸೇವೆಯೂ ಮಾಡುತ್ತಾನೆ. ಇಂತಹವನಿಗೆ ಯಾವ ಕೊರತೆಯೂ ಇರುವುದಿಲ್ಲ. ವಾಸ್ತವಾಗಿ ಬದುಕಿನ ಅವಶ್ಯಕತೆಗಳು ಬಹಳ ಕಡಿಮೆ. ನಾವುಗಳೆಲ್ಲರೂ ನಮಗೆ ಬೇಡದೆ ಇರುವುದನ್ನೆಲ್ಲ, ಮನೆಯಲ್ಲಿ, ಮನದಲ್ಲಿ ತುಂಬಿಸಿಕೊಂಡು, ಅದರ ನಿರ್ವಹಣೆಯಲ್ಲಿಯೇ ತೊಡಗಿ ತೊಳಲಾಡುತ್ತೇವೆ. ಅದೇ ನಮ್ಮ ಜೀವನದ ಬಹು ಮುಖ್ಯ ಉದ್ದೇಶವಾಗುತ್ತದೆ. ನಾನು ಏನೋ ಬಹು ಮಹತ್ತರವಾದ ಕೆಲಸ ಮಾಡುತ್ತಿದ್ದೇನೆ ಎಂಬ ಭ್ರಮೆ ಹುಟ್ಟಿಸುತ್ತದೆ. ಇಂತಹ ಭ್ರಮೆಯಿಂದ ಮದಮತ್ತರಾಗಿರುತ್ತೇವೆ. ಚಿತ್ತ ಶುದ್ಧತೆಯು ನಮ್ಮ ಹತ್ತಿರವೂ ಸುಳಿಯುವುದಿಲ್ಲ.
ಭಕ್ತನಿಗೆ ಮುಖ್ಯವಾಗಿ ಬೇಕಾಗಿರುವುದು ಆತ್ಮೋನ್ನತಿ. ಅದರ ಹಂಬಲವನ್ನು ಬಿಟ್ಟು ಆತನಿಗೆ ಇನ್ನಾವದೂ ಬೇಕಾಗಿಲ್ಲ. ಹೀಗಾಗಿ ಆತನು ಮಾಡುವ ಕಾಯಕವು ಉದಾತ್ತತೆಯನ್ನು ಪಡೆದುಕೊಳ್ಳುತ್ತದೆ. ಆ ಕಾಯಕದಿಂದ ಬರುವ ದ್ರವ್ಯವು ಕಾಯಕದ ಸಂಭಾವನೆಯಾಗದೆ ಪ್ರಸಾದವಾಗುತ್ತದೆ. ಅದರಲ್ಲಿ ತನಗೆ ಅಗತ್ಯವಾದಷ್ಟನ್ನು ಮಾತ್ರವಿಟ್ಟು ಕೊಂಡು ಉಳಿದುದನ್ನು ತನ್ನ ಬದುಕಿಗೆ ದಾರಿ ದೀಪವಾದ ಸಮಾಜಕ್ಕೆ ಅರ್ಪಿಸುವುದು ನಿಜವಾದ ಕಾಯಕ. ಇದನ್ನೇ ಹೇಳುತ್ತಾಳೆ ಆಯ್ದಕ್ಕಿ ಲಕ್ಕಮ್ಮ.


























Friday, June 3, 2011

Vachana 42: Aase Embudu Arasingallade - Desire is for Kings!


ಆಸೆ ಎಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ,
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ.


TRANSLITERATION

Ase eMbudu arasiMgallade SivaBaktariguMTe ayyA?
rOShaveMbudu yamadUtarigallade ajAtariguMTe ayyA?
IsakkiyAse nimagEke? ISvaranoppa,
mArayyapriya amarESvaraliMgakke dUra mArayya.


CLICK HERE TO HEAR IT:

http://www.youtube.com/watch?v=eAx0hyJjIag


TRANSLATION

Ase eMbudu(desire is) arasiMgallade(if not for a king) SivaBaktariguMTe(is it for devotees of Shiva) ayyA(Sir)?
rOShaveMbudu(anger is) yamadUtarigallade(if not for the emissaries of the God of death) ajAtariguMTe(is it for those who are not born) ayyA(Sir)?
Isakkiy(This much Rice) Ase(desire) nimagEke(why is it for you)? ISvaranoppa(Lord ISvara will not approve),
mArayyapriya(Maarayya’s beloved) amarESvaraliMgakke(Lord Immortal ISvara Linga) dUra (you will be driven away) mArayya(Maarayya).


Sir! Desire is for the King, not for devotees of the Lord!
Sir! Anger is for the emissaries of the God of death (Yama), not for those who are not born!
Why did you desire this much rice? The Lord will not approve of it!
You will be driven away from your beloved Lord Immortal ISvara Linga, Maarayya!

COMMENTARY

In our previous posting Sharana Maarayya attached the highest priority to work or duty. His occupation was collecting spilled rice from stores. He and his wife Lakkamma would then clean the collected grains, use just enough needed for them and distribute the rest to others in need. Basavanna observes Maarayya’s work and feels that he may not be collecting adequate quantity for a good living, and spills a large quantity of rice intentionally. Unaware, Maarayya collects and brings the rice home. This vachana is from Sharane Lakkamma in her effort to impress on Maarayya that there is no need for them to have such a large quantity of rice. It will only bleed desire into them, the Lord will not approve of it and the eventual result is that the Lord will move away from their lives!

Lakkamma says that the desire is a natural attribute of kings. They desire a large army, a wide kingdom, a golden palace, etc. and always go after such mundane needs. Being desireless is what the devotees of the Lord strive for. Buddha said that desire is the root cause of sadness. Desire when unfulfilled leads to anger. Anger eventually destroys the individual. The emissaries of Lord Yama have the thankless job of bringing those whose time has come to Yama. It is said that the living, being afraid of death, try to escape from these emissaries, thus making them frustrated and angry. But, for those who have conquered the fear of death are also free from anger and frustration. The devotees, who have advanced in their spiritual quest to realize the Lord within, would have reached such fearless state.

In saying that aspiring for the riches of rice makes us strangers to the Lord, Lakkamma summarizes the divine economic principle that can bring peace on Earth, the principle of living with just enough (minimizing the needs), not hoarding and sharing the excess with fellow beings. She feels that when we hoard, we are depriving those who need the same.

Maarayya and Lakkamma lived the ‘work is bliss’ principle, cultivated simplicity and living with less attributes and through the distribution of excess grains they collected made daasoha the prime part of their lives!

Let us not desire more than what we need, for the harmony of us and those around us!


KANNADA COMMENTARY

ಇದು ಆಯ್ದಕ್ಕಿ ಮಾರಯ್ಯನವರ ಪತ್ನಿಯಾದ ಲಕ್ಕಮ್ಮನವರ ವಚನ. ಮಹಾಮನೆಯಲ್ಲಿ, ಅಂಗಡಿಗಳ ಮುಂಗಟ್ಟುಗಳಲ್ಲಿ, ಕೆಳಗೆ ಚೆಲ್ಲಿದ ಅಕ್ಕಿಯನ್ನು ಆರಿಸುವ ಕಾಯಕ ಮಾರಯ್ಯನವರದ್ದು. ಪ್ರತಿನಿತ್ಯವೂ ಅವರು ತಂದ ಅಕ್ಕಿಯನ್ನು ಹಸನು ಮಾಡಿ ಪತಿಪತ್ನಿಯರು ಏಕೋಭಾವದಿಂದ ದಾಸೋಹ ಮಾಡುವರು. ಇದು ಅವರ ಜೀವನ. “ಚೆಲ್ಲಿದ ಅಕ್ಕಿ ಅವರಿಗೆ ಎಷ್ಟು ಮಹಾ ಸಿಗುತ್ತಿರಬಹುದು? ಅವರು ಕಷ್ಟಪಡುತ್ತಿರಬಹುದು” ಎಂದುಕೊಂಡ ಕರುಣಾಮಯಿ ಬಸವಣ್ಣನವರು ಒಮ್ಮೆ ಬೇಕೆಂದೇ ಹೆಚ್ಚು ಅಕ್ಕಿಯನ್ನು ಚೆಲ್ಲಿದರು. ಇದನ್ನು ಗಮನಿಸದ ಮಾರಯ್ಯನವರು ಹೆಚ್ಚು ಅಕ್ಕಿಯನ್ನು ಆರಿಸಿ ಮನೆಗೆ ತಂದರು. ಆದರೆ ಅದು ಲಕ್ಕಮ್ಮನ ಗಮನಕ್ಕೆ ಬಂದಿತು. ಆಗ ಆಕೆ ಈ ವಚನದ ಮೂಲಕ ತನ್ನ ಪತಿಯನ್ನು ಎಚ್ಚರಿಸುತ್ತಾಳೆ.

ಅರಸನಿಗೆ ಆಸೆ ಎಂಬುದು ಸಹಜ. ಆತನಿಗೆ, ಸೈನ್ಯಬಲ, ಸೇವಕರು, ಒಡವೆ, ವಸ್ತ್ರ, ಮನೆ. ಅರಮನೆ, ವಸ್ತು, ವಾಹನ, ಧನ, ಕನಕ ಎಲ್ಲವೂ ಬೇಕು. ಇಡೀ ಪ್ರಜಾಸ್ತೋಮವನ್ನು ಮೆಚ್ಚಿಸಬೇಕು, ತನ್ನ ಪ್ರತಿಷ್ಠೆಯನ್ನು ಕಾಪಾಡಬೇಕು. ತನ್ನ ಸ್ಥಾನಮಾನಕ್ಕೆ ತಕ್ಕಂತೆ ಆತನಿಗೆ ಎಲ್ಲವೂ ಬೇಕು. ಹಾಗಾಗಿ ಅರಸನಿಗೆ ಆಸೆ ಇರುವುದು ಸಹಜ.

ರೋಷವು ಯಮದೂತರಿಗೆ ಸಹಜವಾದದ್ದು. ಅವರ ಕೆಲಸವೇ ಅಂತಹದು. ಯಮನ ಆಜ್ಞೆಯಂತೆ ಅವರು ಜೀವನನ್ನು ಯಮಪುರಿಗೆ ಕರೆದೊಯ್ಯಲು ಬರುವರು. ಆದರೆ ಜೀವನಿಗೆ ಯಮಪುರಿಗೆ ಹೋಗಲು ಇಷ್ಟವಿಲ್ಲ. ಜೀವ ಯಮಪುರಿಯನ್ನು ತಪ್ಪಿಸಿಕೊಳ್ಳಲು ನಾನಾ ಉಪಾಯ ಮಾಡುತ್ತದೆ. ಇದರಿಂದ ಯಮದೂತರ ಕೆಲಸ ಸುಲಭವಾಗಿ ಕೈಗೂಡುವುದಿಲ್ಲ. ಆದರೆ ಅವರು ಯಮನ ದೂತರಾದ್ದರಿಂದ ಯಮನ ಆಜ್ಞೆಯನ್ನು ಪಾಲಿಸುವ ಕಟ್ಟಿಗೆ ಒಳಗಾಗಿದ್ದಾರೆ. ತಮ್ಮ ಮೇಲೆ ಕರ್ತವ್ಯದ ಭಾರವಿರುವುದರಿಂದ ಯಮದೂತರಿಗೆ ಕೋಪ ಬರುವುದು ಸಹಜ. ಆದರೆ ಅಜಾತನಿಗೆ ಏಕೆ ರೋಷ? ಅಜಾತ ಎಂದರೆ ಹುಟ್ಟು ಇಲ್ಲದವನು. ಹುಟ್ಟೇ ಇಲ್ಲದವನಿಗೆ ರೋಷವು ಇರುವುದಿಲ್ಲ. ಆದರೆ ಹುಟ್ಟು ಇಲ್ಲದವನು ಇರಲು ಹೇಗೆ ಸಾಧ್ಯ? ಹುಟ್ಟು ಸಾವುಗಳ ಚಕ್ರದಲ್ಲಿ ತೊಳಲುವವನು ಸಾಮಾನ್ಯ ಜೀವಿ. ಆದರೆ ಭಕ್ತರು ದಿನ ನಿತ್ಯದ ಆಗು ಹೋಗುಗಳಲ್ಲಿ ಮುಳುಗದೆ, ತನ್ನ್ನ ತಾನರಿಯುವುದರಲ್ಲಿ , ಆತ್ಮೋನ್ನತಿಯಲ್ಲಿ ತೊಡಗಿಸಿ ಕೊಂಡವರು. ಇದನ್ನು ಸಾಧಿಸಿದವರಿಗೆ ಹುಟ್ಟು ಸಾವುಗಳು ಬಾಧಿಸುವುದಿಲ್ಲ. ಅವರು ಅದನ್ನು ಗೆದ್ದು ಅತೀತರಾಗಿ ನಿಲ್ಲುತ್ತಾರೆ. ಹಾಗಾಗಿ ಕೋಪ ತಾಪಗಳೂ ಉಂಟಾಗುವುದಿಲ್ಲ. ಅಂತಹವರನ್ನು ಇಲ್ಲಿ ಅಜಾತರು ಎನ್ನುತ್ತಿದ್ದಾರೆ ಲಕ್ಕಮ್ಮನವರು.

ನಾವು ಶಿವ ಭಕ್ತರು, ಅರಿವುಳ್ಳವರು. ಶಿವಭಕ್ತರಿಗೆ ಎಂತಹ ಆಸೆ, ಎಂತಹ ರೋಷ? ಕೇವಲ ಶಿವನನ್ನು ಮೆಚ್ಚಿಸುವುದು ಮಾತ್ರ ನಮಗೆ ಬೇಕು. ಇನ್ನೇನೂ ಬೇಡ. ಶಿವನನ್ನು ಮೆಚ್ಚಿಸಲು ಬೇಕಾದದ್ದು ಪ್ರಾಮಾಣಿಕತೆ. ಪ್ರಾಮಾಣಿಕತೆಯಿಂದ ಕಾರೆಸೊಪ್ಪಾದರೂ ತಂದು ದಾಸೋಹ ಮಾಡಿದರೂ ಶಿವನು ಒಪ್ಪುತ್ತಾನೆ. ನನಗೆ ಮೃಷ್ಟಾನ್ನವನ್ನೇಕೆ ಅರ್ಪಿಸಲಿಲ್ಲವೆಂದು ಮುನಿಯನು. ಆದರೆ ಅತಿಯಾಸೆಯಿಂದ, ಅಪ್ರಾಮಾಣಿಕತೆಯಿಂದ ಅರ್ಪಿಸಿದುದನ್ನು ಆತನು ಒಪ್ಪನು. ಹಾಗೆ ಮಾಡಿದಲ್ಲಿ ಆತನು ನಮ್ಮಿಂದ ದೂರನಾಗುತ್ತಾನೆ ಎನ್ನುತ್ತಾಳೆ ಲಕ್ಕಮ್ಮ. ಹೀಗಿರುವಾಗ ನೀವು ಹೆಚ್ಚಿನ ಅಕ್ಕಿಯಾಸೆಯಿಂದ ನಮಗೆ ಸೇರದ್ದನ್ನು ತಂದಿರುವಿರಿ. ಇದನ್ನು ಶಿವ ಮೆಚ್ಚನು. ನಮ್ಮದಲ್ಲದ್ದನ್ನು ಅಲ್ಲಿಯೇ ಸುರಿದು ಬನ್ನಿರಿ ಎನ್ನುತ್ತಾಳೆ.

“ಈಸಕ್ಕಿಯಾಸೆ ನಿಮಗೇಕೆ” ಎನ್ನುವಲ್ಲಿ, ನಮ್ಮ ಬಳಿ ಇರುವುದರಲ್ಲಿ ನಮಗೆ ತೃಪ್ತಿಯಿಲ್ಲವೆ? ಅದು ನಮಗೆ ಸಾಲುವುದಿಲ್ಲವೆ? ಹೆಚ್ಚಿನದಕ್ಕಾಗಿ, ನೀವು ಇಂದು ಆರಿಸಿಕೊಂಡು ಬಂದ ಇಷ್ಟೊಂದು ಅಕ್ಕಿಗೆ ಹಾತೊರೆಯುವ ಅವಶ್ಯಕತೆ ಇದೆಯೆ? ಸಂಗ್ರಹ ಬುದ್ಧಿ ಪಾಪಕ್ಕೆ ಹಾದಿ ಮಾಡಿಕೊಡುವುದು. ಅದು ಅಗತ್ಯವಿರುವವನಿಗೆ ಮೋಸ ಮಾಡಿದಂತೆ. ಪ್ರತಿಯೊಬ್ಬನೂ ತನಗೆ ಅಗತ್ಯವಾಗಿ ಬೇಕಾದುದಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಅದಕ್ಕಿಂತ ಹೆಚ್ಚಿನದಕ್ಕೆ ಆಸೆಪಡುವುದು ಈಶ್ವರನೊಪ್ಪದ ಮಾತು. ಈಶ್ವರನೊಪ್ಪದ ಬದುಕಿನಿಂದೇನು ಫಲ? ಆಸೆಯಿಂದ ಮಾಡುವ ಕೆಲಸ ಕಾಯಕವಾಗುವುದಿಲ್ಲ. ಎನ್ನುವ ಅರ್ಥ ಅಡಗಿದೆ.
 
ಈಶ್ವರನು ಒಪ್ಪಬೇಕು ಅದು ಮುಖ್ಯ. ಈಶ್ವರನು, ಸತ್ಯ ಶುದ್ಧ ಕಾಯಕವನ್ನು ಮಾತ್ರ ಒಪ್ಪುತ್ತಾನೆ. ವಂಚನೆ, ದುರಾಸೆಯಿಂದ ಮಾಡುವ ಕೆಲಸ ಕಾಯಕವಲ್ಲ. ಅಂತಹ ಕೆಲಸಮಾಡುವವರಿಂದ ಆತನು ದೂರ ಸರಿಯುತ್ತಾನೆ ಎನ್ನುತ್ತಾಳೆ ಲಕ್ಕಮ್ಮ.ಇಡೀ ಸಮಾಜದ ಆರ್ಥಿಕ ಸಮತೋಲನಕ್ಕೆ ಅಗತ್ಯವಾದ ಭೂಮಿಕೆ ಶಿವಭಕ್ತಳಾದ ಆಯ್ದಕ್ಕಿ ಲಕ್ಕಮ್ಮನ ಮಾತಿನಲ್ಲಡಗಿದೆ.