Friday, February 14, 2014

Vachana 181: Kolondaralli Halau Kulada Govugala Nilisuvante – The Stick


VACHANA IN KANNADA

ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ
ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು,  
ಇಂದ್ರಿಯಂಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ
ವಸ್ತುವಿನ ಅಂಗದಲ್ಲಿಯೆ ತನ್ನಂಗ ತಲ್ಲೀಯವಾಗಿಪ್ಪುದೆ ಮಹಾ ನಿಜದನೆಲೆ.
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೆ ಬಟ್ಟೆ

TRANSLITERATION

kOloMdaralli  halavu kulada  gOvugaLa  calisade nilisuvaMte
Ekacittanaagi sarva vikaaraMgaLa kaTTuvadedu
iMdriyaMgaLa icCeyalli trividhava  hiDidiruvara saMdiyalli nusuLade
vastuvina aMgadalliye tannaMga tallIyavaagippude mahaa nijada nele
gOpinaatha vishVEshvaraliMgavanarivudakke ide baTTe

CLICK HERE FOR A RECITATION

TRANSLATION (WORDS)
kOloMdaralli (with one stick)   halavu kulada (of several kinds) gOvugaLa (the cows)  calisade (without moving)  nilisuvaMte (like stopping)
Ekacittanaagi (one minded) sarva (all) vikaaraMgaLa (distortions of the mind)  kaTTuvadedu (bound, tied up)
iMdriyaMgaLa (of senses)  icCeyalli (in/ with desires)  trividhava (mind body wealth) hiDidiruvara (are in the grip of) saMdiyalli (in between a crowd)  nusuLade (not going)
vastuvina (of the truth)  aMgadalliye  (the body) tannaMga (own body) tallIyavaagippude (becomimg one with)  mahaa nijada nele (is the abode of the truth)
gOpinaatha vishVEshvaraliMgavanarivudakke (to know Gopinatha Vishveshvaralinga) ide (This alone is) baTTe(the way)

VACHANA IN ENGLISH

Like stopping several kinds of cows from moving, with one stick!
Becoming single minded and tying up all distortions of the mind,
Not mingling with the crowd that is in the grip of the desires of the trio (mind, body, wealth),
Merging own body with the body of the Divine (Truth), is reaching the abode of the Truth!
This alone is the way to know Gopinatha Vishveshvaralinga!

COMMENTARY

In this Vachana Turugahi Ramanna identifies the abode of the Divine (the Truth) and how to reach there.
A cowherd can control a herd of cows of different kinds with just one stick. Ramanna equates the distortions of the mind to the herd of cows and says that the only way to reach the Truth is to tie these distortions up by become single minded seeker of the Truth. The distortions of the mind are due to the desires and the sense organs generating and feeding these desires. Obviously, one cannot completely concur them, neither one should completely surrender to them. The senses should be used appropriately for their intended function, but one should not indulge in them. Man is a social animal. He tends to follow the trends in the society. It is tempting to become one like the neighbor in terms of the materialistic aspects brought up by body, mind and wealth. Ramanna urges us not to join the crowd. He says that the only way to realize God (Self, Divine, Truth) is to merge with Him with the utmost single mindedness we can muster. This alone is the way to reach Him! This alone should be the goal of life!  

Let us stick our mind to Divine and merge with Him!

KANNADA COMMENTARY
ಅರ್ಥ:
ಕೋಲೊಂದರಲ್ಲಿ (ಒಂದು ಕೋಲಿನಿಂದ)  ಹಲವು ಕುಲದ (ಬೇರೆ ಬೇರೆ ಜಾತಿಯ, ಕುಲದ)  ಗೋವುಗಳ ಚಲಿಸದೆ (ಹಸುಗಳನ್ನು ಅಲ್ಲಾಡದೆ, ಸುಮ್ಮನೆ) ನಿಲಿಸುವಂತೆ
ಏಕಚಿತ್ತನಾಗಿ (ಒಂದೇ ಮನಸ್ಸಿನವನಾಗಿ) ಸರ್ವವಿಕಾರಂಗಳ (ಎಲ್ಲ ಮನೋ ವಿಕಾರಗಳು)  ಕಟ್ಟುವಡೆದು (ಕಟ್ಟಿಹಾಕಿ),  
ಇಂದ್ರಿಯಂಗಳ ಇಚ್ಛೆಯಲ್ಲಿ  (ಇಂದ್ರಿಯಗಳ ಇಚ್ಛೆಗೆ ಅನುಗುಣವಾಗಿ) ತ್ರಿವಿಧವ (ತನು, ಮನ, ಧನ) ಹಿಡಿದಿರುವರ (ಹಿಡಿತಕ್ಕೆ ಒಳಗಾಗಿರುವರ, ತನು ಮನ, ಧನಗಳು ಇಂದ್ರಿಯಗಳ ಇಚ್ಛೆಗಳಿಂದ ಹಿಡಿದಿಟ್ಟಲ್ಪಟ್ಟಿವೆ)   ಸಂದಿಯಲ್ಲಿ (ನಡುವೆ) ನುಸುಳದೆ (ಸೇರಿಕೊಳ್ಳದೆ)
ವಸ್ತುವಿನ (ಆ ಪರವಸ್ತು, ಸತ್ಯದ ನೆಲೆ)  ಅಂಗದಲ್ಲಿಯೆ ತನ್ನಂಗ ತಲ್ಲೀಯವಾಗಿಪ್ಪುದೆ (ಅದರಲ್ಲಿ ಒಂದಾಗಿರುವುದೇ) ಮಹಾ ನಿಜದನೆಲೆ(ತನ್ನ ನಿಜವಾದ ಪರಮ ನೆಲೆ)
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ (ಲಿಂಗವನ್ನು ಅರಿಯುವುದಕ್ಕೆ) ಇದೆ ಬಟ್ಟೆ (ಇದೇ ದಾರಿ)

ತಾತ್ಪರ್ಯ:
ಈ ವಚನದಲ್ಲಿ ರಾಮಣ್ಣನವರು ನಿಜದ ನೆಲೆ ಯಾವುದು ಮತ್ತು ಅದಕ್ಕೆ ದಾರಿಯಾವುದು ಎನ್ನುವುದನ್ನು ತಮ್ಮ ವೃತ್ತಿಗೆ ಸಂಬಂಧಪಟ್ಟಂತೆ ಹೇಳುತ್ತಾರೆ.
ಗೋವಳಿಗನು ಒಂದೇ ಕೋಲಿನಿಂದ ಅನೇಕ ಜಾತಿಯ ಗೋವುಗಳನ್ನು ಎಲ್ಲಿಯೂ ಓಡಿಹೋಗದಂತೆ ನಿಲ್ಲಿಸುತ್ತಾನೆ. ಅದೇ ರೀತಿಯಾಗಿ ಒಮ್ಮನಸ್ಸಿನಿಂದ ಮನಸ್ಸಿನ ವಿಕಾರಗಳನ್ನು ಕಟ್ಟಿ ಹಾಕಬೇಕು ಎನ್ನುತ್ತಾರೆ ರಾಮಣ್ಣನವರು. ಇಲ್ಲಿ ಕಟ್ಟಹಾಕಬೇಕು ಎಂದರೆ ಅವಗಳ ಮಿತಿಯಲ್ಲಿ ಅವಿರುವಂತೆ ಮಾಡುವುದು ಎಂದರ್ಥ. ಅವುಗಳು ತಮ್ಮ ಮಿತಿಯನ್ನು ಮೀರಿ ಸುಖವನ್ನು ಅರಸುತ್ತ  ಎಲ್ಲಂದರಲ್ಲಿ ಅಲೆದಾಡುವುದಲ್ಲ. ಗೋಪಾಲಕನು ಒಂದು ಕೋಲಿನ ಸಹಾಯದಿಂದ ಗೋವುಗಳ ಇಡೀ ಗುಂಪನ್ನು ತನ್ನ ವಶದಲ್ಲಿಟ್ಟುಕೊಳ್ಳುವಂತೆ ಏಕಾಗ್ರಚಿತ್ತದಿಂದ ತನ್ನೆಲ್ಲ ವಿಕಾರಗಳನ್ನು ತನ್ನ ವಶದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ.


ಮನಸ್ಸು ಬಹು ಬೇಗ ಇತರರನ್ನು ನೋಡಿ ಅವರನ್ನು ಅನುಕರಿಸುತ್ತದೆ. ಇತರರು ಇಂದ್ರಿಯಗಳ ಇಚ್ಛೆಗಳಿಗೆ ಬಲಿಯಾಗಿ ತಮ್ಮ ತನು, ಮನ, ಧನವನ್ನು ಅದಕ್ಕೆ ಅರ್ಪಿಸಿರುತ್ತಾರೆ. ತ್ರಿವಿಧಗಳನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸುವುದನ್ನು ಮರೆತು ಇಚ್ಛೆಗಳ ಪೂರ್ತಿಗಾಗಿ ಮೀಸಲಾಗಿಡುತ್ತಾರೆ. ಅಂತಹವರ ಸಂದಿಯಲ್ಲಿ ನುಸುಳಬಾರದು ಎನ್ನುತ್ತಾರೆ ರಾಮಣ್ಣನವರು. ಅಂತಹವರ ಸಂದಿಯಲ್ಲಿ ನುಸುಳುವದು ಎಂದರೆ ತನಗೆ ತಾನೇ ಕೇಡು ಬಗೆದಂತೆ. ಸಂದಿಯಲ್ಲಿ ನುಸುಳು ಎನ್ನುವ ಪದ ಇಲ್ಲಿ ಬಹಳ ಅರ್ಥಪೂರ್ಣ. ಇಚ್ಛೆಗಳಿಗೆ ದಾಸರಾಗಿರುವವರು ಬಹಳ ಜನರಿದ್ದಾರೆ. ಅವರ ದೊಡ್ಡ ಜನಸಂದಣಿಯೇ ಇದೆ. ಆ ಸಂದಿಯಲ್ಲಿ, ಆ ಗೊಂದಲದಲ್ಲಿ ನೀನೂ ನುಸುಳಿಕೊಂಡು ಹೋಗದಿರು ಎಂದು ಹೇಳುತ್ತಿದ್ದಾರೆ. ಹಾಗೆ ಮಾಡದೆ ಆತ್ಮ ಹೇಳುತ್ತಿರುವುದನ್ನು ಏಕಾಗ್ರಚತ್ತನಾಗಿ ಪಾಲಿಸಬೇಕು. ಆ ಪರವಸ್ತುವಿನಲ್ಲಿ ಲೀನವಾಗಬೇಕು. ಇದೇ ಆ ನಿಜದ ನೆಲೆ. ಇದೇ ಆ ಅಖಂಡ ಸತ್ಯದ ನೆಲೆ. ಆ ನೆಲೆಗೆ ಹೋಗಲು ಇದೇ ಏಕೈಕ ದಾರಿ ಎನ್ನುತ್ತಾರೆ.

Friday, February 7, 2014

Vachana 180: Erida Vaaji Oho Endu Karedoridalli - When the Rider says ‘Oho’



VACHANA IN KANNADA

ಏರಿದ ವಾಜಿ ಓಹೋ ಎಂದು ಕರೆದೋರಿದಲ್ಲಿ
ನಿಂದಿತ್ತು ವಾಹನ ವಾಹಕನ  ಹೃದಯವನರಿತು,
ವಸ್ತುವ ಮುಟ್ಟಿ ಆಡುವ ಚಿತ್ತ ನಿಜ ವಸ್ತುವಿನ ಗೊತ್ತನರಿಯದೆ
ತನ್ನ ಇಚ್ಛೆಯಲ್ಲ್ಲಿ ಹರಿದಾಡುತ್ತಿದೆ  ನೋಡಾ!
ಇದಕ್ಕೆ ಒಂದು ಕಟ್ಟಣೆಯ ಗೊತ್ತ ಲಕ್ಷಿಸಿ ಕಟ್ಟುವಡೆವಂತೆ  ಮಾಡು
ಗೋಪಿನಾಥ ವಿಶ್ವೇಶ್ವರಲಿಂಗ               (ತುರುಗಾಹಿ ರಾಮಣ್ಣ)

TRANSLITERATION

Erida vaaji OhO eMdu karedOridalli
niMdittu  vaahana vahakana hRudayavanaritu
vastuva muTTi aaDuva citta nijavastuvina gottanariyade
tanna icCeyalli haridaaDuttide nODaa!
idakke oMdu kaTTaNeya gotta lakShisi kaTTuvaDevaMte maaDu
gOpinaatha vishvEshvaraliMga

CLICK HERE FOR A RECITATION


TRANSLATION (WORDS)

Erida vaaji (the horse with a rider)  OhO eMdu karedOridalli (hearing the  rider’s words)
niMdittu (stopped)  vaahana (vehicle)  vahakana (rider’s)
hRudayavanaritu (knowing his mind)
vastuva(attractions , wealth etc.)  muTTi (experienced) aaDuva (playing, indulging)  citta (mind)  nijavastuvina (the truth)  gottanariyade (not knowing)
tanna( own) icCeyalli (interest)  haridaaDuttide (roaming)  nODaa! (you see)
idakke (to this)  oMdu kaTTaNeya (a house, restriction) gotta (a fixed place)  lakShisi (observing)
kaTTuvaDevaMte maaDu (see that it is tied to it)
gOpinaatha vishvEshvaraliMga (Gopinatha Vishveshvaralinga)

VACHANA IN ENGLISH

On hearing the rider’s words, the horse
Stopped the vehicle, knowing the mind of the rider!
The mind indulged in materialistic desires,
Not knowing the truth,
Roaming around with its own interests! You see.
Please restrict this to a boundary and tie it to the fixed post,
Gopinatha Visvesvaralinga!


COMMENTARY

In this Vachana, Turugahi Ramanna is requesting Lord Gopinatha Visvesvaralinga (signature of Turugahi Ramanna) to help him contain the desires and discipline his mind to make it concentrate on the Divine.

It is easy to stop the cart drawn by a horse – all it takes is the rider calling ‘Oho’. The horse hears it and understands the rider’s intention and stops. But the mind, supposedly more sophisticated than a horse does not hear or pay attention to any word from its owner. It continues to be indulged in materialistic desires. The desires never end. The mind jumps from desire to desire like a monkey. There is no desire to home in on that permanent bliss, the divine. Ramanna is requesting the Lord to help him tie up the mind within a boundary to a permanent post, i.e. give him the strength to discipline the mind and point it towards realizing the Self. Indeed, we can stop a powerful horse from running just by few spoken words. We cannot control our mind. We often hear that voice from within urging us to stop being materialistic and move towards the Divine. We simply ignore it and continue to be indulged in the impermanent pleasures of this world. We need God’s help to contain our mind and see Him!


Oh Divine, help me realize You!

KANNADA COMMENTARY
 
ಅರ್ಥ:

ಏರಿದ ವಾಜಿ (ಸವಾರಿ ಮಾಡಿದ ಕುದುರೆ)  ಓಹೋ ಎಂದು ಕರೆದೋರಿದಲ್ಲಿ (ಓಹೋ ಎಂದು ಕರೆದಾಗ)
ನಿಂದಿತ್ತು (ನಿಂತು ಬಿಟ್ಟಿತು) ವಾಹನ ವಾಹಕನ  ಹೃದಯವನರಿತು (ಒಡೆಯನ, ಸವಾರನ ಮನಸ್ಸನ್ನು ತಿಳಿದು)
ವಸ್ತುವ (ಇಂದ್ರಿಯ ಗೋಚರವಾದ ಪದಾರ್ಥ, ದ್ರವ್ಯ. ಧನ)  ಮುಟ್ಟಿ ಆಡುವ ಚಿತ್ತ (ಅನುಭವಿಸಿ ಆಡುವ ಮನಸ್ಸು)  ನಿಜ ವಸ್ತುವಿನ (ಪರಮಾತ್ಮನ) ಗೊತ್ತನರಿಯದೆ (ಗುರಿ, ತನ್ನ ನಿಶ್ಚಿತ ಸ್ಥಳವನ್ನು ತಿಳಿಯದೆ)
ತನ್ನ ಇಚ್ಛೆಯಲ್ಲಿ ಹರಿದಾಡುತ್ತಿದೆ (ತನ್ನ ಇಷ್ಟದಂತೆ ಅಲೆಯುತ್ತಿದೆ) ನೋಡಾ!
ಇದಕ್ಕೆ ಒಂದು ಕಟ್ಟಣೆಯ (ಮನೆ, ಬಂಧ)  ಗೊತ್ತ  (ನೆಲೆ) ಲಕ್ಷಿಸಿ (ಪರಿಗಣಿಸಿ,ಗಮನಕ್ಕೆ ಬರುವಂತೆ)
ಕಟ್ಟುವಡೆವಂತೆ (ಕಟ್ಟುವಂತೆ,) ಮಾಡು
ಗೋಪಿನಾಥ ವಿಶ್ವೇಶ್ವರಲಿಂಗ


ತಾತ್ಪರ್ಯ:


ಇದು ತುರುಗಾಹಿ ರಾಮಣ್ಣನವರ ವಚನ. ಇಲ್ಲಿ ಅವರು ಕುದುರೆಯು ಒಡೆಯನ ಮಾತು ಕೇಳುವಂತೆ ತನ್ನ ಮನಸ್ಸು ತನ್ನ ಮಾತು ಕೇಳುತ್ತಿಲ್ಲ. ಆದ್ದರಿಂದ ಮನಸ್ಸಿಗೆ ಒಂದು ನೆಲೆಯನ್ನು ಗೊತ್ತು ಮಾಡಿ ಆ ನೆಲೆಗೆ ಅದು ಕಟ್ಟಿರುವಂತೆ ಮಾಡು ಎಂದು ದೇವರನ್ನು ಕೇಳುತ್ತಿದ್ದಾರೆ.

ಕುದುರೆಯ ಸವಾರ ತನ್ನ ಕುದುರೆಗೆ ಓಹೋ! ಎಂದು ಕರೆದರೆ ಸಾಕು ಅದು ತನ್ನ ಸವಾರನ ಹೃದಯವನ್ನರಿತು ನಿಂತು ಬಿಡುತ್ತದೆ. ಮೂಕ ಪ್ರಾಣಿಯಾದರೂ ತನ್ನ ಸವಾರನ ಮನಸ್ಸನ್ನು ಅರಿತುಕೊಂಡು ಆತನ ಇಚ್ಛೆಯಂತೆನಡೆಯುತ್ತದೆ. ಆದರೆ ನನ್ನ ಚಿತ್ತ ನನ್ನ ಮಾತು ಕೇಳುತ್ತಿಲ್ಲ. ಧನ, ಸಂಪತ್ತು ಮತ್ತು ಇತರ ಭೋಗವಸ್ತುಗಳೊಂದಿಗೆ ಆಟವಾಡುತ್ತಿದೆ.  ಇಚ್ಛೆಗಳ  ಆಳಾಗಿ ಅಲೆದಾಡುತ್ತಿದೆ. ತಾನು ಹೇಳಿದಂತೆ ಕೇಳುತ್ತಿಲ್ಲ. ಅದಕ್ಕೆ ಒಂದು ನೆಲೆಯನ್ನು ತೋರಿಸಿ ಆ ನೆಲೆಗೆ ಕಟ್ಟಿರುವಂತೆ ಮಾಡು, ಎಂದು ಆ ದೇವರನ್ನು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಇದು ಎಲ್ಲ ಸಾಮಾನ್ಯರ ಅನುಭವ. ನಾವು ಬೇಡವೆಂದದ್ದನೆಲ್ಲ ಮನಸು ಇನ್ನೂ ಇನ್ನೂ ಬಯಸುತ್ತದೆ. ಕುದುರೆ ಹಸುರನ್ನು ಕಂಡು ತಿನ್ನಲು ಧಾವಿಸುವಂತೆ ಮನಸ್ಸು ವಿಷಯಗಳ ಕಡೆಗೆ ಹರಿಯುತ್ತದೆ. ಒಂದು ಆಸೆಗೆ ಸಿಕ್ಕು ಅಲ್ಲಿಗೇ ಅದು ನಿಲ್ಲುವುದಿಲ್ಲ. ಇನ್ನೂ ಇನ್ನೂ ಆಸೆಗಳನ್ನು ತೀರಿಸಿಕೊಳ್ಳುವುದರಲ್ಲಿಯೇ ಮುಳುಗಿ ಹೋಗುತ್ತದೆ. ತನ್ನ ನಿಜವಾದ ನೆಲೆ ಯಾವುದು? ತಾನು ಎಲ್ಲಿಗೆ ಹೋಗಬೇಕು? ಎಂಬ ವಿಷಯಗಳ ಬಗ್ಗೆ ಅದು  ಚಿಂತಿಸುವುದಿಲ್ಲ. ಆತ್ಮ ಅದಕ್ಕೆ ತಿಳಿಹೇಳಿದರೂ  ಅದು  ಅದರ ಮಾತು ಕೇಳುವುದಿಲ್ಲ. ಮಾತು ಕೇಳದೆ ಇರುವದಕ್ಕೆ ಅದು ನಾನಾ ಕಾರಣಗಳನ್ನು ಕೊಡುತ್ತದೆ, ನಾನಾ ನೆಪಗಳನ್ನೊಡ್ಡುತ್ತದೆ. ತನ್ನ ಮನಸ್ಸನ್ನು ತನ್ನ ನಿಗ್ರಹದಲ್ಲಿರಿಸಿಕೊಳ್ಳುವುದು ಅಸಾಧ್ಯವೆನ್ನುವಷ್ಟು ಕಷ್ಟವಾದಾಗ, ತಾನು ಮಾಡಿದ ಉಪಾಯಗಳಲ್ಲ ಸೋತು ಹೋದಾಗ ಆ ದೇವರನ್ನೇ ಮೊರೆಹೋಗುತ್ತಾರೆ ತುರುಗಾಹಿ ರಾಮಣ್ಣನವರು.
ಆ ಮನಸ್ಸಿಗೆ ಒಂದು ನೆಲೆಯನ್ನು (ಆ ಪರವಸ್ತುವಿನ ನೆಲೆ) ತೋರಿಸಿ ಅದನ್ನೇ ಗಮನದಲ್ಲಿರಿಸಿಕೊಂಡು ಮನಸ್ಸು ಆ ನೆಲೆಗೆ ಬಂಧಿತವಾಗಿರುವಂತೆ ಮಾಡಿರಿ ಎಂದು ಕೇಳಿಕೊಳ್ಳುತ್ತಿದ್ದಾರೆ.

 

Friday, January 31, 2014

Vachana 179: Orategala kandintu Kelaree Bhaviya Thodembaru - On seeing a spring, they say Dig up a Well!

 VACHANA IN KANNADA

ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು!
ಅರವಟಿಗೆ ಛತ್ರವು ತಮ್ಮದೆಂಬರು!
ಎಲೆ ಪಯಿರೈದದಿರೆ, ಸುರಿವ ಮಳೆ ಸುರಿಸದಿದ್ದಡೆ,
ಅವರೇತರಲ್ಲಿ ನೀಡುವರಯ್ಯಾ? ರಾಮನಾಥಾ.

TRANSLITERATION

orategaLa kaMDiMtu kelarI baaviya tODeMbaru
aravaTige Catravu tammadeMbaru
ele payiraidadire, suriva maLe surusadiddaDe,
avarETaralli nIDuvaraiyyaa? raamanaathaa.

CLICK HERE FOR A RECITATION


TRANSLATION (WORDS)

orategaLa  (springs) kaMDiMtu  (after seeing)  kelarI (some people)  baaviya  ( a well) tODeMbaru ( say, dig up)
aravaTige  ( a place where  water and other drinks are served to travelers ) Catravu  (a place where food and a place for stay is offered to travelers)  tammadeMbaru ( people say, is their own)
ele payiraidadire (if greenery does not grow), suriva maLe  (rain) surusadiddaDe ( If  does not pour),
avarETaralli (how will they)  nIDuvaraiyyaa?  (serve ? sir) raamanaathaa (Ramanatha)

VACHANA IN ENGLISH

On seeing a spring, some say dig up a well!
They say that they provide the food, water and shelter!
If the green stops growing and the rain stops pouring,
How will they serve, Sir?  Raamanatha!

COMMENTARY

This is another simple, yet powerful Vachana by Devara Dasimayya impressing on us to remember that everything we have is given to us by the Divine. As such, there is no point in becoming too proud saying ‘I did this and I gave this’.

Just as they run across a spring, some people make arrangements to dig up a well. They build shelters by the well. They start inviting travelers to take rest in these shelters, provide them food and water. Immediately, they start spreading the word that ‘they did it’ with all the pride they can muster.  Eventually the service attitude goes away and what remains is the thirst for the fame and recognition by everyone of this great deed they are doing! Dasimayya questions “how will you serve the water if the well dries up because of no rain? How will you serve food if the crops stop growing?” These materials that form the basis of service are provided by Him. If they are not there, our capability to provide food and shelter to others withers away. In fact, if we reflect on any aspect of our life or any object we are using,  the fundamental components needed to create it comes from the nature.

This Vachana drives home two points. First, everything we have is His. We need to be thankful to all this blessing we have. Second, our giving should be to serve Him and returning His back to Him. It should not be for advertising that we are doing a great service to humanity. What the right hand gives, should not be known by the left hand! Giving must be for the sake of returning that we received and not for boosting our ego!

Let us return His to Him with our right hand and let the left hand not know it!

KANNADA COMMENTARY  

ಅರ್ಥ:

ಒರತೆಗಳ (ನೀರು  ಒಸರುವ ಸ್ಥಳ)  ಕಂಡಿಂತು (ನೋಡಿ)  ಕೆಲರೀ (ಕೆಲವರು)  ಬಾವಿಯ ತೋಡೆಂಬರು!
ಅರವಟ್ಟಿಗೆ (ಪ್ರವಾಸಿಗರಿಗೆ ನೀರು ಮತ್ತು ಇತರ ಪಾನೀಯಗಳನ್ನು ಸ್ಥಳ) ಛತ್ರವು
(ಪ್ರವಾಸಿಗರಿಗೆ ಇರಲು ಸ್ಥಳ ಹಾಗೂ ಊಟವನ್ನು ಕೊಡುವ ಸ್ಥಳ)  ತಮ್ಮದೆಂಬರು!
ಎಲೆ ಪಯಿರೈದದಿರೆ (ಬೆಳೆ ಬೆಳೆಯದಿದ್ದರೆ) , ಸುರಿವ ಮಳೆ ಸುರಿಸದಿದ್ದಡೆ (ಮಳೆ ಸುರಿಯದಿದ್ದರೆ),
ಅವರೇತರಲ್ಲಿ ನೀಡುವರಯ್ಯಾ (ಕೊಡುವವರು ಹೇಗೆ ಕೊಡುವರು)? ರಾಮನಾಥಾ.

ತಾತ್ಪರ್ಯ:

ಬಹಳ ಸಾಮಾನ್ಯದಂತೆ ಕಾಣುವ ಈ ವಚನ ಆಳವಾದ ಅರ್ಥದಿಂದ ತುಂಬಿದೆ. ಇಲ್ಲಿ ದಾಸಿಮಯ್ಯನವರು  ಜನರು “ನಾನು ತೋಡಿಸಿದ ಭಾವಿ, ನಾನು ಕಟ್ಟಿಸಿದ  ಛತ್ರ”ವೆಂದು ಉಬ್ಬುಬ್ಬಿ ಹೇಳಿಕೊಳ್ಳುತ್ತಿರುವವರನ್ನು ಕುರಿತು ಹೇಳುತ್ತಿದ್ದಾರೆ.
ನೀರಿನ ಒರತೆಯನ್ನು ನೋಡಿ ಇಲ್ಲಿ ಬಾವಿ ತೋಡು ಎನ್ನುತ್ತಾರೆ. ಮೊದಲೇ ಒರತೆ ಇರುವಲ್ಲಿ ಅದರ ನೀರು ಜಿನುಗಿ ಭೂಮಿಯಲ್ಲಿ ನೀರು ಇಂಗಿ ಕೆಳಗೆ ನೀರಿರುವುದು ಸಹಜ. ಅಂತಹ ಸ್ಥಳದಲ್ಲಿ ಬಾವಿ ತೋಡಿ ಅರವಟ್ಟಿಗೆಯನ್ನು ಇಟ್ಟು ತಾನೇ ಅದನ್ನು ಮಾಡಿದವನು ಎಂದು ಹೇಳುವುದು ಮನುಷ್ಯನ ಸ್ವಭಾವ. ಛತ್ರವನ್ನು ಕಟ್ಟಿ  ಪಥಿಕರಿಗೆ ಇರಲು ಸ್ಥಳ  ಮತ್ತು ಊಟಕ್ಕೆ  ಆಹಾರ ಕೊಡುತ್ತಾರೆ ಕೆಲವರು. ಮತ್ತು ತಾನು ಆಹಾರವನ್ನು ಕೊಡುತ್ತಿದ್ದೇನೆ ಎಂದು ಬೀಗುತ್ತಾರೆ. ಆದರೆ ಇದರಲ್ಲಿ ತಾನು ಮಾಡಿದುದೇನು ಎಂದು ಕೇಳುತ್ತಾರೆ ದಾಸಿಮಯ್ಯನವರು. ಮಳೆಯೇ ಬರದಿದ್ದಿದ್ದರೆ, ಪೈರು ಬೆಳೆಯದೆ ಇದ್ದಿದ್ದರೆ ಅರವಟ್ಟಿಗೆ, ಛತ್ರ ನಡೆಸಲು ಸಾಧ್ಯವಾಗುತ್ತಿತ್ತೇ? ಎಂದು ಕೇಳುತ್ತಾರೆ. 

ಬಾವಿ ತೋಡುವುದಕ್ಕಿಂತ ಮೊದಲೇ ನೀರಿನ ಒರತೆ ಇತ್ತು, ಆಹಾರ ಕೊಡುವುದಕ್ಕಿಂತ ಮೊದಲೇ ಬೆಳೆ ಬೆಳೆದಿತ್ತು. ಇದರಲ್ಲಿ ತಾನು ಮಾಡಿದದು ಏನು? ಇಂದಿನ ದಿನಗಳಲ್ಲಿ ಛತ್ರ ಅರವಟ್ಟಿಗೆಗಳು ಇಲ್ಲ. ಆದ್ದರಿಂದ ನಾವು “ನಾವು ಹಾಗೆಲ್ಲ ಮಾಡುತ್ತಿಲ್ಲ” ಎಂದು ನಿಶ್ಚಿಂತೆಯಿಂದಿರಬಹುದು. ಆದರೆ ಇಂದು ಅದರ ಆಯಾಮ ಬೇರೆಯಾಗಿದೆ. 

ಇಂದು ಅನೇಕ ಕಂಪನಿಗಳು, ಸಂಘ ಸಂಸ್ಥೆಗಳು ಇವೆ. ಅನೇಕರು ವೈಯಕ್ತಿಕವಾಗಿಯೂ  ಎಲ್ಲವೂ ತಾವು ಮಾಡುತ್ತಿರುವ ಕೆಲಸವನ್ನು ಘಂಟಾಘೋಷವಾಗಿ , ಹಿಂದಿನಕ್ಕಿಂತ ಹೆಚ್ಚಿನ ಅಹಂ ನಿಂದ ದೂರ ದರ್ಶನದಲ್ಲಿ, ಅಂತರ್ಜಾಲ ತಾಣಗಳಲ್ಲಿ  ಹೇಳಿಕೊಳ್ಳುತ್ತಾರೆ. ಆದರೆ ಪ್ರಕೃತಿಯ ಕೊಡುಗೆ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿತ್ತೆ? ಎಂಬುದು  ದಾಸಿಮಯ್ಯನವರ ಪ್ರಶ್ನೆ. ಯಾವುದೇ ವಸ್ತು ನಿರ್ಮಾಣ ಮಾಡಲು, ಏನೇ ಆದರು ಕೊಡಲು ಮೂಲ ಸಂಪನ್ಮೂಲ ಪ್ರಕೃತಿಯಿಂದಲೇ ಒದಗಬೇಕಲ್ಲವೆ?  ಪ್ರಕೃತಿಯೇ ಎಲ್ಲವನ್ನೂ ಕೊಡುತ್ತಿರುವಾಗ, ಅಂದರೆ ಯಾವುದೋ ಪರವಸ್ತು ಎಲ್ಲವನ್ನೂ ಆಗು ಮಾಡುತ್ತಿರುವಾಗ ತಾನು ಮಾಡಿದೆ ಎಂದು ಹೇಳುವುದರಲ್ಲಿ ಯಾವ ಅರ್ಥವಿದೆ? ಇದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಂದು ಮಾರುಕಟ್ಟೆಯಲ್ಲಿ ಹಲವು ವಸ್ತುಗಳು  ಪ್ರಕೃತಿಗೆ ಸಂಬಂಧಪಟ್ಟವುಗಳು ಅಲ್ಲವೆಂದೇ ತೋರುತ್ತವೆ. ಆದರೆ ಆಳವಾಗಿ ಯೋಚಿಸಿದಾಗ ಅವುಗಳ ಮೂಲ ಪ್ರಕೃತಿಯ ಯಾವುದೋ ಒಂದು ವಸ್ತು ಆಗಿರುತ್ತದೆ. ಅದನ್ನು ಮಾನವ  ನಿರ್ಮಿಸಲು ಸಾಧ್ಯವಿಲ್ಲ. ಎಂಬುದು ತಿಳಿದುಬರುತ್ತದೆ. ಅದಿಲ್ಲದೆ ತಾನು ತನ್ನದೆಂದು ಹೇಳಿಕೊಂಡು ಬೀಗುತ್ತಿರುವ ವಸ್ತು ಮಾಡಲು ಬರುವುದಿಲ್ಲ. ಎಂಬುದು ತಿಳಿದು ಬರುತ್ತದೆ. ಈ ಅರಿವು ಮೂಡಿದಾಗ ಮನುಷ್ಯ ವಿನೀತನಾಗುತ್ತಾನೆ. ಆ ಪರವಸ್ತುವಿನ ಅರಿವು ಸಾಧ್ಯವಾಗುತ್ತದೆ.


Friday, January 24, 2014

Vachana 178: Aase Parinaamakke Sotu Hoyittu – The Desire Got Defeated

VACHANA IN KANNADA

ಆಸೆ ಪರಿಣಾಮಕ್ಕೆ ಸೋತು ಹೋಯಿತ್ತು
ಆಶ್ರಯದ ನಿದ್ರೆ ಕೆಟ್ಟಿತ್ತು
ಗ್ರಾಸ ಮೆಲ್ಲನಾಯಿತ್ತು
ಸ್ತ್ರೀಯರ ಮೇಲಣ ಇಚ್ಛೆ ಕೆಟ್ಟಿತ್ತು
ಈಶ್ವರ ನಿಮ್ಮ ಪಾದಾಂಬುಜ ಸೇವೆಯಿಂದ ಕಾಣಾ! ರಾಮಾನಾಥಾ.

TRANSLITERATION

aase pariNaamakke sOtu hOyittu
aashrayada nidde keTTittu
graasa mellanaayittu
streeyara  mElaNa  icCe keTTittu
Ishvara nimma paadaaMbuja sEveyiMda kaaNaa! raamanaathaa.

CLICK HERE FOR A RECITATION


TRANSLATION (WORDS)

aase (desire)  pariNaamakke (of the result/ outcome) sOtu hOyittu (got  defeated)
aashrayada (of dependence) nidde (sleep)  keTTittu (was spoilt, ended)
graasa (food)  mellanaayittu (became slow)
streeyara  (of woman/men) mElaNa  icCe (desire for) keTTittu (was spoilt, ended)
Ishvara ( god) nimma (your)  paadaaMbuja  (lotus feet) sEveyiMda (by worshipping)  kaaNaa! (you see) raamanaathaa(Ramanatha).

VACHANA IN ENGLISH

The desire got defeated for its outcome
The sleep of dependence got spoilt
The food became slow
The desire for women ended
Ishvara (God), because of worshipping your lotus feet, you see! Raamanaatha.

COMMENTARY

In this Vachana Devara Dasimayya describes the effect of establishing ones heart and soul in the Divine. Desire is the root cause of all our misery. When we acquire the object of our desire we scale the mountain of joy. We know that the joy could be temporary. Yet, we desire for more. The desire for more never ends. When we fail in acquiring the object of desire we sink to the bottom of the sea. We forget that this state is also not permanent. Setting ourselves in the Divine, takes us out of the ups and downs created by the desire.

We are all social beings. We enjoy the company of people and objects around us. We depend on them for our happiness. For our happiness and existence we are dependent on the books we read, the movies we see, the sports we are involved in, the friendships we have cultivated and our relations with father, mother, wife and husband, etc. Setting on the Divine gets us the freedom from these dependencies.

The eagerness to consume food slowed down. The food here refers to all the objects we consume to sustain our lives and grow. We are in a constant turmoil to satisfy our hunger. With the Divine blessing, we escape from this turmoil. Our eagerness vanishes and a peaceful pace sets in.

One of the basic instincts of humans is the attraction for the opposite sex. It has turned out to be one of the major weaknesses of the humans and has resulted in destruction of families and kingdoms.  Setting ones heart on the divine defeats this attraction.

The message of the Vachana is that once we realize the Divine and bow our head at His lotus feet and set our soul on Him, we get the freedom from the worldly desires and achieve the bliss.  All the above effects are due to surrendering to the lotus feet of the Divine. This surrender does not correspond to ritual, outward worship. It calls for realizing the Divine within through single minded, intense quest. Through this enquiry one realizes as to how the desires generate, what is their effect and how to overcome them. Along the same lines, one understands how the dependence leads to misery. The dependence is the result of the fear of losing something. Key to overcome dependence is the removal of the fear. This can only be done by the individual himself and not by others. Realization of the Divine erases the selfishness and allows one to see the Divine in everything and everyone around him. It erases the conflict of ‘me and them’ and ‘man and woman’ and brings equanimity. This is the true worship of the Divine. 

Let us invite Him to be with us and relieve us of the mortal tentacles.

KANNADA COMMENTARY

ಅರ್ಥ:

ಆಸೆ (ಬಯಕೆ) ಪರಿಣಾಮಕ್ಕೆ (ಅದರಿಂದ ಉಂಟಾದ ಫಲಿತಾಂಶದಿಂದ) ಸೋತು ಹೋಯಿತ್ತು
ಆಶ್ರಯದ (ಅವಲಂಬನೆಯ) ನಿದ್ರೆ ಕೆಟ್ಟಿತ್ತು
ಗ್ರಾಸ (ಆಹಾರ)  ಮೆಲ್ಲನಾಯಿತ್ತು (ನಿಧಾನವಾಯಿತು)
ಸ್ತ್ರೀಯರ ಮೇಲಣ ಇಚ್ಛೆ ಕೆಟ್ಟಿತ್ತು (ನಿಂತು ಹೋಯಿತು)
ಈಶ್ವರ ನಿಮ್ಮ ಪಾದಾಂಬುಜ (ಪಾದ ಕಮಲಗಳ)  ಸೇವೆಯಿಂದ ಕಾಣಾ! ರಾಮಾನಾಥಾ.

ತಾತ್ಪರ್ಯ:
ಈ ವಚನದಲ್ಲಿ ದೇವರ ದಾಸಿಮಯ್ಯನವರು, ಆ ಪರವಸ್ತುವಿನಲ್ಲಿ ಮನ ನಿಲ್ಲಿಸಿದಾಗ ಆದ ಪರಿಣಾಮದ ಬಗ್ಗೆ ಹೇಳುತ್ತಿದ್ದಾರೆ.
ಆಸೆ ಪರಿಣಾಮಕ್ಕೆ ಸೋತು ಹೋಯಿತು ಎನ್ನುತ್ತಾರೆ. ಸಾಮಾನ್ಯವಾಗಿ  ಮನುಷ್ಯನಲ್ಲಿ ಆಸೆ ಸಾಯುವುದಿಲ್ಲ. ಆಸೆಯಿಂದ ಮನಸ್ಸು ಕೋಟಲೆಗೊಳಗಾದರೂ ಮತ್ತೆ ಮತ್ತೆ ಆಸೆ ಹುಟ್ಟುತ್ತಲೇ ಇರುತ್ತದೆ. ತನ್ನ ಆಸೆಗಳು ಎಲ್ಲವೂ ಪೂರ್ತಿಗೊಳ್ಳುವುದಿಲ್ಲ, ಮತ್ತೆ ಮತ್ತೆ ನಿರಾಸೆ ಕಾದಿರುತ್ತದೆ ಎಂದು ತಿಳಿದಿದ್ದರೂ ಆಸೆ ಸೋಲುವುದಿಲ್ಲ. ಅದು ಇದ್ದೇ ಇರುತ್ತದೆ. ಆದರೆ ಕೊನೆಗೊಮ್ಮೆ ಅದು ಸೋತಿತು ಎಂದು ಹೇಳುತ್ತಾರೆ. ಯಾವಾಗ ಎಂಬುದನ್ನು ಮುಂದೆಹೇಳುತ್ತಾರೆ.

ಆಶ್ರಯ ನಿದ್ದೆ ಕೆಟ್ಟಿತ್ತು ಎಂದು ಹೇಳುತ್ತಾರೆ. ಆಶ್ರಯ ಎಂದರೆ ಅವಲಂಬನೆ. ಸಾಮಾನ್ಯವಾಗಿ ಜೀವ ತನ್ನ ಸುಖಕ್ಕಾಗಿ   ಯಾವುದಾವುದನ್ನೋ ಯಾರ ಯಾರನ್ನೋ ಆಶ್ರಯಿಸಿ ಸುಖವಾಗಿದ್ದೇನೆ ಎಂದುಕೊಳ್ಳುತ್ತದೆ. ಉದಾಹರಣೆಗೆ: ಮನೋರಂಜನೆಯನ್ನು, ಕೆಲಸವನ್ನು, ಪುಸ್ತಕವನ್ನು, ಧರ್ಮವನ್ನು, ಆಚರಣೆಯನ್ನು, ಅಪ್ಪನನ್ನು, ಹೆಂಡತಿಯನ್ನು, ಗಂಡನನ್ನು, ಗೆಳೆಯ ಗೆಳತಿಯನ್ನು ಮುಂತಾದವರನ್ನು ಜೀವ ಆಶ್ರಯಿಸುತ್ತದೆ. ತನ್ನ ಸುಖಕ್ಕಾಗಿ ಅವರು ಖಂಡಿತವಾಗಿಯೂ ನೆರವಾಗುತ್ತಾರೆ ಎಂದು ನಂಬುತ್ತದೆ. ಅವರಿರುವರೆಗೆ ತನಗೆ ಯಾವ ಚಿಂತೆಯೂ ಇಲ್ಲವೆಂದು ತಿಳಿದುಕೊಂಡಿರುತ್ತದೆ. ಆದರೆ ಅದೆಲ್ಲ ಸುಳ್ಳು ಎಂಬ ಅರಿವು ಉಂಟಾಗುತ್ತದೆ. ಆಗ ಜೀವನ ಸುಖವಾದ ಅಥವಾ ನಂಬುಗೆಯ ನಿದ್ದೆ ಕಳೆದು ಹೋಗುತ್ತದೆ.

ಗ್ರಾಸ ಮೆಲ್ಲನಾಯಿತ್ತು ಎನ್ನುತ್ತಾರೆ. ಗ್ರಾಸ ಎಂದರೆ ಆಹಾರ.ಎಂದರೆ ಕೇವಲ ಊಟದ ವಸ್ತುಗಳಷ್ಟೇ ಅಲ್ಲ. ಜೀವಪಡೆದುಕೊಳ್ಳುವ ಎಲ್ಲವೂ ಆಹಾರವೇ.  ಈ ಆಹಾರವೆಲ್ಲವೂ ಮೆಲ್ಲನಾಯಿತು. ಎಂದರೆ ಜೀವ ಸ್ವೀಕರಿಸುವ ಎಲ್ಲದರ ಗತಿ ನಿಧಾನವಾಯಿತು. ಎಂದರೆ ಮುನ್ನಿನಂತೆ ಹಪಹಪಿಸುವಿಕೆ ನಿಂತುಹೋಯಿತು. ಗತಿ ನಿಧಾನವಾದ್ದರಿಂದ  ತನಗೆ ಆವಶ್ಯಕವಾದದ್ದನ್ನು ಮಾತ್ರ ಅವಶ್ಯಕವಾದಷ್ಟೇ ಸ್ವೀಕರಿಸುವಂತಾಯಿತು.

“ಸ್ತ್ರೀಯರ ಮೇಲಣ ಇಚ್ಛೆ ಕೆಟ್ಟಿತ್ತು” ಎನ್ನುತ್ತಾರೆ. ಎಂದರೆ ಪುರುಷರಿಗೆ ಸ್ತ್ರೀಯರ ಹಾಗೂ ಸ್ತ್ರೀಯರಿಗೆ ಪುರುಷರ ಬಗ್ಗೆ ಆಸಕ್ತಿ ಒಮ್ಮಿಲೆ ನಿಂತು ಹೋಯಿತು ಎನ್ನುತ್ತಾರೆ. ವಿರುದ್ಧ ಲಿಂಗದವರಲ್ಲಿ ಆಸಕ್ತಿ ಬಹಳ ಆಳ ಮತ್ತು ಬಲವಾದದ್ದು ಅದು ತಾನಾಗಿಯೇ ನಿಂತು ಹೋಯಿತು ಎನ್ನುವುದು ಸೋಜಿಗದ ವಿಷಯವೆ ಹೊರತು ಸಾಮಾನ್ಯವಲ್ಲ.

ಇಷ್ಟೆಲ್ಲ ಆದದ್ದು ದೇವರ ಪಾದಗಳ ಸೇವೆಯಿಂದ ಎನ್ನುತ್ತಾರೆ. ದೇವರ ಪಾದ ಸೇವೆ ಎಂದರೇನು? ದೇವಸ್ಥಾನದಲ್ಲಿರುವ ದೇವರ ಮೂರ್ತಿಯ ಪಾದಪೂಜೆಯೆ? ಖಂಡಿತ ಅಲ್ಲ. ಮತ್ತೇನು? ಆ ಪರವಸ್ತುವಿನ ಅರಿವು ಪಡೆಯುವುದು.ಆದನ್ನು ಏಕ ನಿಷ್ಠೆಯಿಂದ ಅನ್ವೇಷಿಸಿ ಪಡೆಯಬೇಕು. ಅದೇ ದೇವರ ಪಾದ ಪೂಜೆ. ಆ ಪರವಸ್ತುವಿನ ಅರಿವು ಆದಾಗ ಆಸೆ ತನಗಾದ ಪರಿಣಾಮದಿಂದ  ಸೋತು ಹೋಗುತ್ತದೆ. ಅದಕ್ಕೆ ಆಸೆಯ ಇಡೀ ರಚನಾಕ್ರಮದ ಅರಿವು ಉಂಟಾಗುತ್ತದೆ. ಅಂದರೆ ಮನಸ್ಸಿನಲ್ಲಿ ಆಸೆ ಏಕೆ ಹುಟ್ಟುತ್ತದೆ? ಆಸೆಯ ಪರಿಣಾಮ ಏನಾಗುತ್ತದೆ ಮತ್ತೆ ಏಕಾಗುತ್ತದೆ ಎಂಬುದು ತಾನಾಗಿಯೇ ಸ್ಪಷ್ಟವಾಗುತ್ತದೆ. ಆಗ ಆಸೆ ತಾನಾಗಿಯೇ ಹಿಂದೆ ಸರಿಯುತ್ತದೆ.

ಇದೇ ರೀತಿ ಅವಲಂಬನೆ, ಆಶ್ರಯ ಹೇಗೆ ಮನುಷ್ಯನನ್ನು ದುಃಖಕ್ಕೀಡು ಮಾಡುತ್ತದೆ ಎಂಬುದರ ಅರಿವಾಗುತ್ತದೆ. ತನ್ನ ಮನದಲ್ಲಿರುವ ಭಯವೇ ತನ್ನನ್ನು ಅವಲಂಬಿಸುವಂತೆ ಮಾಡುತ್ತದೆ. ಮತ್ತು ಈ ಭಯವನ್ನು ತಾನು ಮಾತ್ರ ನಿವಾರಿಸಿಕೊಳ್ಳಬಲ್ಲ. ಇನ್ನೊಬ್ಬರು ಅದನ್ನು ಮಾಡಲಾರರು. ಮತ್ತು ಭಯಕ್ಕೆ ಕಾರಣ ತಾನು ಬೇರೆ ಎಂಬ ಭಾವನೆ. ಈ ಸೃಷ್ಟಿಯಲ್ಲಿ ಎಲ್ಲವೂ ದೇವರ ಅಂಶವೇ ಎಂಬ ಭಾವ ಆಳವಾಗಿ ಬೇರೂರಿದಾಗ ಭಯ ತಾನಾಗಿಯೇ ಇಲ್ಲವಾಗುತ್ತದೆ. ಇದು ಆ ಪರವಸ್ತುವಿನ ಅರಿವಿನಿಂದ ಉಂಟಾಗುತ್ತದೆ.ಇದರಿಂದಲೇ ತನ್ನ ಸ್ವಾರ್ಥ ಭಾವ ಅಳಿಯುತ್ತದೆ. ತನಗೆ ಬೇಕು, ಇಂದಿಗೆ ಮಾತ್ರವಲ್ಲ ನಾಳೆಗೂ ಎಂಬ ಭಾವ ನಿರ್ನಾಮವಾಗುತ್ತದೆ. ಎಲ್ಲವನ್ನೂ ಎಷ್ಟು ಬೇಕೋ ಅಷ್ಟೆ ತೆಗೆದುಕೊಳ್ಳುವ ಗುಣ ಅಳವಡುತ್ತದೆ. ಎಲ್ಲವೂ ನಿಧಾನಗತಿಯಲ್ಲಿ ನಡೆಯುತ್ತದೆ. ಯಾವುದರಲ್ಲಿಯೂ ಅವಸರವಿರುವುದಿಲ್ಲ. ಏಕೆಂದರೆ ಯಾವುದೇ ರೀತಿಯ ಭಯವಿರುವುದಿಲ್ಲ. ಸ್ತ್ರೀ ಪುರುಷರಬಗ್ಗೆಯಾಗಲಿ ಆಸಕ್ತಿಯಿರುವುದಿಲ್ಲ. ಸ್ತ್ರೀ ಪುರುಷವೆಂಬ ಭೇದ ಭಾವ ಕಳೆಯುತ್ತದೆ. ಇಷ್ಟೆಲ್ಲವೂ ಆ ಪರವಸ್ತುವಿನ ಅರಿವಿನಿಂದ ಆಗುತ್ತದೆ. ಅದೇ ದೇವರ ಪಾದಪೂಜೆ.

Friday, January 17, 2014

Vachana 177: Okkudu Prasaadavalla – The blessing

VACHANA IN KANNADA

ಒಕ್ಕುದು ಪ್ರಸಾದವಲ್ಲ, ಮಿಕ್ಕುದು ಪ್ರಸಾದವಲ್ಲ
ಹತ್ತೆ ಕರೆದಿಕ್ಕಿದುದು ಪ್ರಸಾದವಲ್ಲ
ತರ್ಕೈಸಿ ನಿಮ್ಮವನಪ್ಪಿಕೊಂಡಡೆ
ಅದು ನಿಶ್ಚಯ ಪ್ರಸಾದ ಕಾಣಾ ರಾಮನಾಥಾ.

TRANSLITERATION

okkudu prasaadavalla, mikkudu prasaadavalla
hatte karedikkidudu prasaadavalla
tarkaisi nimmavanappikoMDaDe
adu niScaya prasaada kaaNaa raamanaathaa.

CLICK HERE FOR A RECITATION:


TRANSLATION (WORDS)

okkudu (food given to a devotee) prasaadavalla (is not prasaada/ generally prasaada is food given by the God which cannot be wasted and to be consumed with complete reverence), mikkudu  (leftover food ) prasaadavalla (is not prasaada)
hatte (near)  karedikkidudu (given after requesting one to come near )  prasaadavalla (is not prasaada)
tarkaisi ( thinking logically)  nimmavanappikoMDaDe (if embraced Him/ God)
adu (that)  niScaya (surely is) prasaada (prasaada)  kaaNaa raamanaathaa (you see Ramanatha).

VACHANA IN ENGLISH

The food offered to a devotee is not prasaada, leftover food is not prasaada
That offered after asking one to come close is not prasaada
Having thought logically, if you embrace Yours (God)
That surely is prasaada, you see Ramanatha!

COMMENTARY

It is a common practice to cook food and offer it (Naivedya) to God as part of the worship. The food is then distributed to devotees who consume it with complete reverence, considering it ‘prasaada’ (blessing) from God. Devara Dasimayya says that such food is not prasaada. This food is actually a leftover after offering it to God. Such leftover food is not prasaada too. Even if the food is offered with utmost love by inviting one to come close and accept it, it is not prasaada. If one debates (thinks) logically and embraces Him, then it is truly prasaada.

The ingredients for the food we cook to offer to God are actually created by Him. We take His material and offer it back to Him in cooked form and accept the same as His blessing. We offer the food to devotees by inviting them very lovingly to come and accept our offering. We then consume the leftover with all the reverence as it is the blessing. We go through this circuitous path to take what was given to us by Him and does not even think about what we are going through. Dasimayya says that what is needed is the realization that everything we have is His. We already have His blessing and we do not need to convert it into anything else, but accept it with reverence.

Let us accept everything we have as His blessing and everything we do as His work!

KANNADA COMMENTARY

ಅರ್ಥ:

ಕ್ಕುದು(ಜಂಗಮರಿಗೆ ಕೊಟ್ಟದ್ದು) ಪ್ರಸಾದವಲ್ಲ, ಮಿಕ್ಕುದು (ಅಥವಾ ಉಳಿದದ್ದು) ಪ್ರಸಾದವಲ್ಲ
ಹತ್ತೆ  (ಹತ್ತಿರ) ಕರೆದಿಕ್ಕಿದುದು (ಕರೆದು ಬಡಿಸಿದದು) ಪ್ರಸಾದವಲ್ಲ
ತರ್ಕೈಸಿ (ತರ್ಕದಿಂದ ಯೋಚಿಸಿ) ನಿಮ್ಮವನಪ್ಪಿಕೊಂಡಡೆ (ದೇವರನ್ನು ಅಪ್ಪಿಕೊಂಡರೆ)
ಅದು ನಿಶ್ಚಯ (ಅದು ನಿಜವಾದ) ಪ್ರಸಾದ ಕಾಣಾ ರಾಮನಾಥಾ.

ತಾತ್ಪರ್ಯ:

ಇಲ್ಲಿ ದೇವರ ದಾಸಿಮಯ್ಯನವರು ಪ್ರಸಾದವೆಂದರೇನು ಎಂಬುದನ್ನು ತಿಳಿಸಿ ಹೇಳುತ್ತಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಜಂಗಮರಿಗೆ ಅರ್ಪಿಸಿದುದು ಪ್ರಸಾದವೆಂದು ನಂಬುತ್ತಾರೆ. ತಮಗೆ ಅರ್ಪಿಸಿದುದನ್ನು ಜಂಗಮರು ಮುಟ್ಟಿ ಇತರರಿಗೆ ಕೊಡುವುದನ್ನು ಜನರು ಬಹಳ ಗೌರವದಿಂದ ಸ್ವೀಕರಿಸುತ್ತಾರೆ. ಪ್ರಸಾದವೆಂದರೆ ಅದು ದೇವರೇ ಕೊಟ್ಟದ್ದು, ಅದನ್ನು ವ್ಯರ್ಥ ಮಾಡಬಾರದು ಎನ್ನುವ ಭಾವನೆ ಜನರಲ್ಲಿದೆ. ಅದನ್ನು ಅತ್ಯಂತ ಗೌರವದಿಂದ, ಪೂರ್ತಿಯಾಗಿ, ಅದರ ರುಚಿಯ ಕಡೆಗೆ ಗಮನಕೊಡದೆ ಏಕನಿಷ್ಠೆಯಿಂದ  ಸ್ವೀಕರಿಸುತ್ತಾರೆ. ಆದರೆ ಅದು ಪ್ರಸಾದವಲ್ಲ, ಮಿಕ್ಕಿದದು ಪ್ರಸಾದವಲ್ಲ, ಮತ್ತು ಹತ್ತಿರ ಕರೆದು ಪ್ರೀತಿಯಿಂದ ಕೊಟ್ಟದ್ದು ಪ್ರಸಾದವಲ್ಲ ಎನ್ನುತ್ತಾರೆ ದಾಸಿಮಯ್ಯನವರು. ಏಕೆ ಹಾಗೆ ಹೇಳುತ್ತಾರೆ? ಸಾಮಾನ್ಯ ನಂಬಿಕೆ ಹಾಗಿರಬೇಕಾದರೆ ಅದು ಪ್ರಸಾದವಲ್ಲ ಎಂಬುದು ಏಕೆ?
ಪ್ರಸಾದವೆಂದರೆ ದೇವರು ಕೊಟ್ಟದ್ದು ಎಂಬುದು ಎಲ್ಲರೂ ಒಪ್ಪುವ ಮಾತು. ಆದರೆ ಜಂಗಮರಿಗೆ ಅರ್ಪಿಸಿದ ಮಾತ್ರಕ್ಕೆ ಅದು ಪ್ರಸಾದವಾಗಲಾರದು, ಅಥವಾ ಜಂಗಮರಿಗೆ ಅರ್ಪಿಸಿ ಉಳಿದದ್ದು ಪ್ರಸಾದವಾಗಲಾರದು ಎನ್ನುತ್ತಾರೆ. ಏಕೆಂದರೆ ದೇವರು ಕೊಟ್ಟದ್ದು ಪ್ರಸಾದವಾದರೆ ಯಾರನ್ನು ದೇವರು ಎನ್ನುವುದು ಮತ್ತು ಏಕೆ? ಆತನು ಏನನ್ನು ಕೊಡುತ್ತಾನೆ?  ಹೇಗೆ ಕೊಡುತ್ತಾನೆ?ಎಂಬುದು ಮುಖ್ಯ. ಆದ್ದರಿಂದ ಜಂಗಮರಿಗೆ ಕೊಟ್ಟದ್ದು ಮಾತ್ರವೇ ಪ್ರಸಾದವೆ? ಅವರಿಗೆ ಕೊಟ್ಟು ಉಳಿದದ್ದು ಪ್ರಸಾದವೆ? ಅಥವಾ ಬೇರೆಯವರು ಹತ್ತಿರ ಕರೆದು ಕೊಟ್ಟದ್ದು ಪ್ರಸಾದವೆ? ಎಂಬುದನ್ನು ತರ್ಕದ ಒರೆಗೆ ಹಚ್ಚಿ ಅರ್ಥಮಾಡಿಕೊಳ್ಳಬೇಕು ಎನ್ನುತ್ತಾರೆ ದೇವರ ದಾಸಿಮಯ್ಯನವರು. ಜಂಗಮನು ದೇವರೆ? ಎಲ್ಲ ಜಂಗಮರೂ ದೇವರೆ?  ಜಂಗಮರ ವೇಶ ತೊಟ್ಟವರೆಲ್ಲ ದೇವರಾಗಲು ಸಾಧ್ಯವೆ? ಎಂದು ತರ್ಕದ ಒರೆಗೆ ಹಚ್ಚಿ ನೋಡಬೇಕು. ಆಗ ಎಲ್ಲ ಜಂಗಮರಿಗೆ ಕೊಟ್ಟದ್ದು, ಮಿಕ್ಕಿದುದು ಮಾತ್ರ ಪ್ರಸಾದವಾಗಲು ಸಾಧ್ಯವಿಲ್ಲ ಎಂಬುದು ತಿಳಿಯುತ್ತದೆ. ಅವರಿಗೆ ಅರ್ಪಿತವಾಗದೆ ಇದ್ದದ್ದು ಏಕೆ ಪ್ರಸಾದವಲ್ಲ ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಮತ್ತು ಅದಕ್ಕೆ ಉತ್ತರವಿರುವುದಿಲ್ಲ.
ಈ ಪ್ರಶ್ನೆಗಳನ್ನು ಆಳವಾಗಿ, ಯಾವುದೇ ಪೂರ್ವಗ್ರಹವಿಲ್ಲದೆ ಯೋಚಿಸಬೇಕು. ಆಗ ಈ ಎಲ್ಲವೂ ಪ್ರಸಾದವಲ್ಲ. ಅಥವಾ ಅವುಗಳಲ್ಲಿ ಯಾವ ಭೇದಭಾವವೂ ಇಲ್ಲ ಎಂಬುದು ಗಮನಕ್ಕೆ ಬರುತ್ತದೆ. ಹಾಗಾದರೆ ಪ್ರಸಾದವೆಂದರೆ ಏನು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಅದನ್ನು ಯೋಚಿಸಿದಾಗ ದೇವರು ಕೊಟ್ಟದ್ದು ಪ್ರಸಾದವೆಂದಾದರೆ ದೇವರು ಯಾರು ಎಂಬುದರ ಕಡೆಗೆ ಗಮನ ಹರಿಯುತ್ತದೆ. ಆದರೆ ದೇವರು ಯಾವಾಗ ಏನು ಕೊಡುತ್ತಾನೆಎಂಬಂತಹ ಪ್ರಶ್ನೆಗಳು  ಹುಟ್ಟುತ್ತವೆ. ಈ ಪ್ರಶ್ನೆಗಳಿಗೆ ಅರ್ಥ ಹುಡುಕುವಾಗ ತರ್ಕವನ್ನು ಮೀರಿನಿಂತ ದೇವರ ಅನುಭವವಾಗಬಹುದು. ಹಾಗಾಗಿ ಆ ದೇವರನ್ನು ಅಪ್ಪಿಕೊಂಡಾಗ, ದೇವರಲ್ಲಿ ಒಂದಾದಾಗ, ಇಲ್ಲಿ ಇರುವುದೆಲ್ಲ ದೇವರ ಪ್ರಸಾದವೇ ಎಂಬ ಭಾವ ಬೆಳೆಯುತ್ತದೆ.


Friday, January 10, 2014

Vachana 176: Hasivemba Hebbaavu Basira bandu Hidivade – When the Python of Hunger Squeezes!

VACHANA IN KANNADA

ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿವಡೆ
ವಿಷವೇರಿತ್ತಯ್ಯ ಅಪಾದಮಸ್ತಕಕ್ಕೆ
ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ
ವಸುಧೆಯೊಳಗೆ ಆತನೆ ಗಾರುಡಿಗ ಕಾಣಾ ರಾಮನಾಥಾ.

TRANSLITERATION

hasiveMba hebbaavu basira baMdu hiDivaDe
viShavErittayya apaadamastakakke
hasivigannavanikki viShavaniLuhaballaDe
vasudheyoLage aatane gaaruDiga kaaNaa raamanaathaa

CLICK HERE FOR A RECITATION


TRANSLATION (WORDS)

hasiveMba (called hunger)  hebbaavu (a python) basira ( the stomach, belly)  baMdu hiDivaDe (when comes and catches)
viShavErittayya (the poison was spread)  apaadamastakakke (from toe to the head)
hasivigannavanikki (by feeding the  hunger) viShavaniLuhaballaDe (if one knows to remove the poison)
vasudheyoLage (on the earth)  aatane (he alone is) gaaruDiga (the one who knows to takes complete control of the snake) kaaNaa (you see)  raamanaathaa (Ramanatha).

VACHANA IN ENGLISH

When the python called hunger comes and squeezes the stomach,
The poison spreads from toe to head!
If one knows to remove the poison by feeding the hunger,
He alone is the controller of the python on this earth, you see, Raamanatha!

COMMENTARY

This is an interesting but cryptic Vachana by Devara Dasimayya.
The hunger is compared to a python. The nature of the python is to squeeze its prey before consuming it. The python is not poisonous. Yet, Dasimayya says that the poison spreads from toe to head when python squeezes. The squeezing converts the hunger into poison. One way to escape from this poison is to make the python stop squeezing the stomach by feeding it. Dasimayya says that he alone who knows how to feed the hunger to remove the poison is the real controller of the python!

The hunger referred to here is the ‘desire’. When the desire is activated (squeezed) it becomes the poison that takes over the whole body, spreading from toe to head. Feeding the hunger corresponds to sublimating the desires. When this is done, the poison vanishes and the python of desires come under control. Note that the hunger is a natural aspect of the individual. Feeding the hunger excessively results in stomach ache and other ailments. Not feeding the hunger results in weakness, anger and other emotions. But when the stomach is fed just right, the body functions normally and efficiently. The lesson then is not to ignore the sense organs, not to involve them in excessive desires, but to use them appropriately for the function they are for. Only that individual who does not curb his desires, not excessively immersed in his desires, but sublimate them just enough, is the truly realized!

Let us not be taken by our desires!

KANNADA COMMENTARY

ಅರ್ಥ:
ಹಸಿವೆಂಬ ಹೆಬ್ಬಾವು ಬಸಿರ (ಹೊಟ್ಟೆ) ಬಂದು ಹಿಡಿವಡೆ (ಹಿಡಿದಾಗ)
ವಿಷವೇರಿತ್ತಯ್ಯ (ವಿಷವು ಏರಿತ್ತು)  ಅಪಾದಮಸ್ತಕಕ್ಕೆ (ಪಾದದಿಂದ ತಲೆಯವರೆಗೆ)
ಹಸಿವಿಗನ್ನವನಿಕ್ಕಿ (ಅದರ ಹಸಿವಿಗೆ ಅನ್ನವನ್ನು ಕೊಟ್ಟು) ವಿಷವನಿಳುಹಬಲ್ಲಡೆ (ವಿಷವನ್ನು ಕಳೆದರೆ)
ವಸುಧೆಯೊಳಗೆ ( ಈ ಭೂಮಿಯಲ್ಲಿ) ಆತನೆ ಗಾರುಡಿಗ (ಹಾವನ್ನು ವಶಪಡಿಸಿಕೊಳ್ಳುವವ) ಕಾಣಾ ರಾಮನಾಥಾ.

ತಾತ್ಪರ್ಯ:
ನಾಲಕ್ಕೇ ಸಾಲಿನ ದೇವರ ದಾಸಿಮಯ್ಯರ ಈ ವಚನ ಅಪಾರ ಅರ್ಥವನ್ನು ಒಳಗೊಂಡಿದೆ. ಇಲ್ಲಿ ಇಂದ್ರಿಯಗಳ ಹಸಿವಿನ ಪರಿಣಾಮದ ಬಗ್ಗೆ ಹೇಳುತ್ತಿದ್ದಾರೆ.
“ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿವಡೆ ವಿಷವೇರಿತ್ತಯ್ಯ ಅಪಾದಮಸ್ತಕಕ್ಕೆ” ಎನ್ನುತ್ತಾರೆ. ಹಸಿವು ಎಂಬ ಹೆಬ್ಬಾವು ಎಂದರೆ ಇಂದ್ರಿಯಗಳ ಹಸಿವು ಎಂಬ ಹೆಬ್ಬಾವು. ಇಂದ್ರಿಯಗಳು ’ಅದು ಬೇಕು, ಇದು ಬೇಕ’ ಎಂದು ವಿಷಯಗಳ ಬಗ್ಗೆ ಅಪಾರ ಆಸೆ ಹೊಂದಿರುತ್ತವೆ. ಹಸಿವೆಂಬ ಹೆಬ್ಬಾವು ಹೊಟ್ಟೆಯನ್ನು ಹಿಡಿದುಕೊಂಡಾಗ ಇಡೀ ಶರೀರದಲೆಲ್ಲ ವಿಷ ಪರಸರಿಸುವಂತೆ ಆ ಇಂದ್ರಿಯಗಳ ಹಸಿವು ಇಡಿ ಶರೀರವೆನ್ನೆಲ್ಲ  ಘಾಸಿಗೊಳಿಸುತ್ತವೆ. ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಹೆಬ್ಬಾವು ವಿಷಕಾರಿ ಹಾವಲ್ಲ. ಆದರೆ ಬಹಳ ದೊಡ್ಡದು. ಆದರೂ ಇಲ್ಲಿ ದಾಸಿಮಯ್ಯರು ಅದರ ವಿಷ ದೇಹವೆಲ್ಲ ಪಸರಿಸುತ್ತದೆ ಎಂದು ಹೇಳುತ್ತಿದ್ದಾರೆ. ಇಲ್ಲಿ ಅವರ ಉದ್ದೇಶ ಇಂದ್ರಿಯಗಳು ಸ್ವಭಾವತಃ ಕೆಟ್ಟವಲ್ಲ ಆದರೆ ಅವುಗಳಿಗೆ ಪಕ್ಕಾದಾಗ ಅದರ ಪರಿಣಾಮ ವಿಷದಂತೆ ಆಗುತ್ತದೆ ಎಂದು ಹೇಳುವುದು. ಈ ಇಂದ್ರಿಯಗಳು ಹೆಬ್ಬಾವಿನಂತೆ ಬಹಳ ದೊಡ್ಡವು ಮತ್ತು ಬಲಶಾಲಿ. ಇಂದ್ರಿಯಗಳ ಹಸಿವು ಸಹ ಅಪಾರ, ಅನಂತ ಮತ್ತು ಬಲಶಾಲಿ. ಅದನ್ನು ತೋರಿಸಲು ಅವರು ಹೆಬ್ಬಾವಿನ ಹೋಲಿಕೆಯನ್ನು ಕೊಡುತ್ತಿದ್ದಾರೆ. 

“ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ  ವಸುಧೆಯೊಳಗೆ ಆತನೆ ಗಾರುಡಿಗ”  ಎಂದು ಹೇಳುತ್ತಾರೆ ದೇವರ ದಾಸಿಮಯ್ಯನವರು.ಹೆಬ್ಬಾವು ಬಂದು ಹೊಟ್ಟೆಯನ್ನೇ ಹಿಡಿದುಕೊಂಡಾಗ ಏನು ಮಾಡುವುದು. ಉಪಾಯವಾಗಿ ದೇಹದ ವಿಷವನ್ನು ತೆಗೆದು ಹಾವನ್ನು ವಶಪಡಿಸಿಕೊಳ್ಳಬೇಕು. ಅದನ್ನು ಹೇಗೆ ಮಾಡಬೇಕು? “ಹಸಿವಿಗನ್ನವನಿಕ್ಕಿ” ಎನ್ನುತ್ತಾರೆ. ಹಾವನ್ನು ಎಳೆದು ಕೊಲ್ಲುವುದಲ್ಲ. ಅಂದರೆ ಅಸ್ವಾಭಾವಿಕವಾಗಿ ಇಂದ್ರಿಯಗಳನ್ನು  ನಿಷ್ಕ್ರಿಯಗೊಳಿಸುವುದಲ್ಲ. ಆದರೆ ಅವುಗಳ ಹಸಿವಿಗೆ ಅನ್ನವನ್ನಿಕ್ಕಿ ತಣಿಸುವುದರಿಂದ ಅದನ್ನು ವಶಪಡಿಸಿಕೊಳ್ಳಬೇಕು ಎನ್ನುತ್ತಾರೆ. ಆಗ ಆ ಹೆಬ್ಬಾವು ವಶವಾಗುತ್ತದೆ. ಇದು ಬಹಳ ಮುಖ್ಯವಾದದ್ದು. ಹಸಿವು ಸ್ವಾಭಾವಿಕವಾದದ್ದು. ಅದರ ಹಸಿವನ್ನು ತಣಿಸಬೇಕು. ಅದರ ಹೊಟ್ಟೆಯನ್ನು ಮಿತಿಮೀರಿ ತುಂಬುವುದಲ್ಲ. ಅಥವಾ ತಿನಿಸುಗಳ ಬಗ್ಗೆ ಹೆಚ್ಚಿನ ಆಸೆ ಹುಟ್ಟಿಸುವುದಲ್ಲ. ಅವುಗಳ ಸ್ವಾಭಾವಿಕವಾದ ಹಸಿವನ್ನು ಇತಿಮಿತಿಯಿಂದ  ತೀರಿಸುವುದು. ಆಗ ಆ ಹೆಬ್ಬಾವು ಸುಮ್ಮನಾಗುತ್ತದೆ. ಆ ಹೆಬ್ಬಾವು ನಾವು ಹೇಳಿದಂತೆ ಕೇಳುತ್ತದೆ. ಅಂದರೆ ಇಂದ್ರಿಯಗಳು ನಮ್ಮ ವಶವಾಗುತ್ತವೆ. ನಮಗೆ ಆ ಗಾರುಡಿ ವಿದ್ಯೆಯ ತಿಳಿವು ಇರಬೇಕು.
ಇಂದ್ರಿಯಗಳನ್ನು ನಿಷ್ಕ್ರಿಯ ಗೊಳಿಸದೆ ಅವುಗಳ ಸ್ವಭಾವವನ್ನು ಅರಿತು ಅವುಗಳನ್ನು ಅವುಗಳ ಮಿತಿಯಲ್ಲಿಡುವುದು ಗಾರುಡಿಗತನ. ಅಂತಹವನೇ ನಿಜವಾದ ಗಾರುಡಿಗ ಎನ್ನುತ್ತಾರೆ ದೇವರ ದಾಸಿಮಯ್ಯನವರು.