Friday, June 28, 2013

Vachana 148: Enagondu Linga, Ninagondu Linga - An icon for each!

VACHANA IN KANNADA

ಎನಗೊಂದು ಲಿಂಗ ನಿನಗೊಂದು ಲಿಂಗ
ಮನೆಗೊಂದು ಲಿಂಗವಾಯಿತ್ತು.
ಹೋಯಿತ್ತಲ್ಲ ಭಕ್ತಿ ಜಲವ ಕೂಡಿ!
ಮನ ಮುಟ್ಟದ ಲಿಂಗ ಉಳಿ ಮುಟ್ಟಬಲ್ಲುದೆ ಗುಹೇಶ್ವರಾ?

TRANSLITERATION

enagoMdu liMga ninagoMdu liMga
manegoMdu liMgavaayittu.
hOyittalla bhakti jalava kUDi!
man amuTTada liMga uLi muTTaballude guhEshvaraa?

CLICK HERE FOR A RECITATION:

TRANSLATION (WORDS)

enagoMdu liMga ( a Linga for me)  ninagoMdu liMga (a Linga for you)
manegoMdu liMgavaayittu. (there is a Linga for a every house)
hOyittalla bhakti jalava kUDi! (devotion  got washed away in the water)
mana muTTada liMga (the Linga which cannot be touched by the subtle mind)  uLi muTTaballude guhEshvaraa? (can that be touched by the chisel?)

VACHANA IN ENGLISH

A Linga (icon) for me, a Linga for you,
There is a Linga for each house.
Alas! The devotion got washed away in the water!
The Linga which cannot be touched by the subtle mind, can that be touched by the chisel, Lord Guhesvara?

COMMENTARY

In this simple yet powerful Vachana Allama Prabhu wonders how we have forgotten the true utility of the Linga (icon) and immersed in our rituals. He questions as to how the Linga can be touched (i.e. God can be realized) by an instrument like chisel (that makes the icon) while He is beyond the reach of even the subtle mind?

Sharanas offered Ishtalinga as a dynamic icon that be worn on the body and is available for worship and meditation by the devotee when and where he/she is. Thus, there is one Linga for me, one for you and one for everyone who wishes to have one.  Devotees started installing Lingas in their houses and temples. These static (Sthavara) Lingas appeared all over – homes and temples.  We started washing these Lingas in water, milk and honey; started offering them flowers and food; we started enjoying these rituals with the company of friends and relatives. It seemed as though the larger the crowd the deeper our devotion.  Being consumed in this ritualistic activity, we forgot that the icon was simply to get us started in the spiritual path. We need to go past the icon, develop the calm and clean mind to become aware of the divine and the subtle Self.  Allama Prabhu reminds us that the divine is beyond the reach of our minds and logic. He questions how an icon built out of a chisel be that divine. The gist of this Vachana then is that we cannot reach Him through this external, ritualistic worship. What is needed is the journey inwards, with an intense desire, awareness and discipline to reach Him within! 

Let us go past the icon worship!

KANNADA COMMENTARY

ಅರ್ಥ:

ಎನಗೊಂದು ಲಿಂಗ ನಿನಗೊಂದು ಲಿಂಗ (ವ್ಯಕ್ತಿ ವ್ಯಕ್ತಿಗೊಂದು ಲಿಂಗ)
ಮನೆಗೊಂದು ಲಿಂಗವಾಯಿತ್ತು. (ಪ್ರತಿ ಮನೆಗೊಂದು ಲಿಂಗವಾಯಿತು)
ಹೋಯಿತ್ತಲ್ಲ ಭಕ್ತಿ ಜಲವ ಕೂಡಿ! (ಭಕ್ತಿಯು ನೀರಿನಲ್ಲಿ ಕೊಚ್ಚಿಹೋಯಿತು)
ಮನಮುಟ್ಟದ ಲಿಂಗ ಉಳಿ ಮುಟ್ಟಬಲ್ಲುದೆ ಗುಹೇಶ್ವರಾ? (ಸುಕ್ಷ್ಮವಾದ ಮನಸ್ಸೇ ಮುಟ್ಟದ ಲಿಂಗವನ್ನು ಅದನ್ನು ಕೆತ್ತುವ ಉಳಿ ಮುಟ್ಟ ಬಹುದೆ?)

ತಾತ್ಪರ್ಯ;

ಸ್ಥೂಲಲಿಂಗಗಳು ಹುಟ್ಟಿಕೊಂಡು ಹೇಗೆ ಮಾನವನ ಮನಸ್ಸನ್ನು ಇನ್ನೂ ಹೆಚ್ಚಿನ ಭಿನ್ನಭಾವಕ್ಕೆ ಎಡೆ ಮಾಡಿಕೊಟ್ಟಿವೆ ಎಂಬುದನ್ನು ಅಲ್ಲಮರು ಇಲ್ಲಿ ಹೇಳುತ್ತಾರೆ.
 
ಆ ಪರವಸ್ತುವು ಅತ್ಯಂತ ಸೂಕ್ಷ್ಮ. ಅದನ್ನು ಹೊಂದುವುದು, ಭಾವಿಸುವುದು ಯಾವುದೂ  ಸುಲಭವಲ್ಲ.  ಆ ಪರವಸ್ತು ಬಹು ಬೇಗ ಮನದಿಂದ ಜಾರಿ ಹೋಗುತ್ತದೆ.  ಆದ್ದರಿಂದ, ಅದರ ನೆನೆಹು ಸುಲಭವಾಗಲಿ ಎಂಬ ಉದ್ದೇಶದಿಂದ ಸ್ಥಾವರ ಲಿಂಗಗಳು ಹುಟ್ಟಿಕೊಂಡವು. ಕಣ್ಣಮುಂದೆ ಆ ಪರವಸ್ತುವಿನ ರೂಪ, ಕುರುಹು ಒoದು ಇದ್ದರೆ ಅದನ್ನು ನೆನೆಯುವುದು ಸ್ವಲ್ಪ ಸುಲಭವಾಗುವುದು ಎಂದು ಭಾವಿಸಿ ಲಿಂಗಗಳು ಸೃಷ್ಟಿಯಾದವು. ಹೀಗಾಗಿ ನನಗೊಂದು ನಿನಗೊಂದು ಎನ್ನುತ್ತ ಮನೆಗೊಂದೊಂದು ದೇವರುಗಳು ಹುಟ್ಟಿಕೊಂಡವು. ಆ ದೇವರುಗಳನ್ನು ಜನರು ತಮ್ಮ ತಮ್ಮ ಭಕ್ತಿಯನ್ನು ತೋರುತ್ತ ಅನೇಕ ರೀತಿಯಲ್ಲಿ ಉಪಚರಿಸುತ್ತ ಪೂಜಿಸತೊಡಗಿದರು.  ಆದರೆ ಈ ಬಾಹ್ಯ ಭಕ್ತಿಯ ಹೊನಲಿನಲ್ಲಿ ನಿಜವಾದ ಭಕ್ತಿ ಕೊಚ್ಚಿಕೊಂಡು ಹೋಯಿತ್ತು ಎನ್ನುತ್ತಾರೆ ಅಲ್ಲಮರು. ಏಕೆಂದರೆ ಆ ಪರವಸ್ತು ಅತ್ಯಂತ ಸೂಕ್ಷ್ಮ. ಅದನ್ನು ನೆನೆಯಲು ಮನಸ್ಸು ಪರಮ ಶಾಂತವಾಗಬೇಕು.  ಬಾಹ್ಯ ಪೂಜೆಯ ಅಬ್ಬರ ಆ ಶಾಂತಿಯನ್ನು ನಾಶಗೊಳಿಸುತ್ತದೆ. ನನ್ನದು ನಿನ್ನದು ಎಂಬಂತಹ ಭಿನ್ನ ಭಾವಗಳನ್ನು ಹುಟ್ಟಿಸುತ್ತದೆ. ಅಲ್ಲದೆ ಅಲ್ಲಿಂದ ಮುಂದೆ ಹೋಗದಂತೆ ತಡೆಯುತ್ತದೆ. ಪತ್ರೆ, ಫಲ ಪುಷ್ಪ, ದೀಪ ಧೂಪ, ಮಂತ್ರ, ಅಕ್ಷತೆ, ಎಡೆ ಮುಂತಾದವುಗಳಲ್ಲಿ ಮನಸ್ಸು ಪೂರ್ತಿಯಾಗಿ ಮುಳುಗಿ ಹೋಗುವಂತೆ ಮಾಡುತ್ತದೆ. ಮನಸ್ಸು ಆ ಪರವಸ್ತುವನ್ನು ಮುಟ್ಟುವುದಿಲ್ಲ. ಈ ರೀತಿಯಾಗಿ ಸೂಕ್ಷ್ಮವಾದ ಮನಸ್ಸು ಮುಟ್ಟದ ಲಿಂಗವನ್ನು ಆ  ಸ್ಥೂಲವಾದ ಮತ್ತು ನಿರ್ಜೀವ ವಸ್ತುವಾದ ಉಳಿ ಮುಟ್ಟಬಲ್ಲುದೆ? ಮುಟ್ಟಲಾರದು ಎಂದ ಮೇಲೆ ಲಿಂಗಗಳನ್ನು ಸ್ಥಾಪಿಸುವ ಉದ್ದೇಶವೇನು? ಎಂದು ಕೇಳುತ್ತಾರೆ ಅಲ್ಲಮ ಪ್ರಭುಗಳು. ಒಟ್ಟಿನಲ್ಲಿ ಬಾಹ್ಯ ಪೂಜೆಯಿಂದ ಲಿಂಗವನ್ನು ಕಾಣಲಾಗುವುದಿಲ್ಲ ಎಂಬ ಭಾವ ಇಲ್ಲಿದೆ.

 

Friday, June 21, 2013

Vachana 147: Hidiva Kailgala Mele Kattaleyayya - The Darkness


VACHANA IN KANNADA
ಹಿಡಿವ ಕೈಗಳ ಮೇಲೆ ಕತ್ತಲೆಯಯ್ಯಾ
ನೋಡುವ ಕಂಗಳ ಮೇಲೆ ಕತ್ತಲೆಯಯ್ಯಾ
ನೆನೆವ ಮನದ ಮೇಲೆ ಕತ್ತಲೆಯಯ್ಯಾ
ಕತ್ತಲೆ ಎಂಬುದು ಇತ್ತಲೆಯಯ್ಯಾ
ಗುಹೇಶ್ವರನೆಂಬುದು ಅತ್ತಲೆಯಯ್ಯಾ 

TRANSLITERATION

hiDiva kaigaLa mEle kattaleyayyaa
nODuva kamgaLa mEle  kattaleyayyaa
neneva manada mEle kattaleyayyaa
kattale eMbudu ittaleyayyaa
guhEshvaranaeMbudu attaleyayyaa.

CLICK HERE FOR A RECITATION

TRANSLATION (WORDS)
hiDiva  ( that are holding)  kaigaLa (the hands)   mEle (on)  kattaleyayyaa (there is darkness)nODuva (that are seeing)  kamgaLa  (the eyes) mEle   (on)  kattaleyayyaa (there is darkness)neneva (that is thinking)  manada (the mind)  mEle (on)  kattaleyayyaa (there is  darkness)kattale (darkness)  eMbudu (so called)  ittaleyayyaa (is here, on this side)
guhEshvaranaeMbudu  (the God Guheshvara) attaleyayyaa (Is  there,  on the other side)

 VACHANA IN ENGLISH
There is darkness on the hand that is holding, Sir!
There is darkness on the eyes that are seeing, Sir!
There is darkness on the mind that is thinking, Sir!
The so called darkness is near, on this side, Sir!
Lord Guhesvara is far, on the other side, Sir!

COMMENTARY

 Sharanas provided Ishtalinga or Linga as an icon representing Pranalinga or Atmalinga, the God within.  It was said that one should hold the Linga on the palm of the hand, raise it to the level of the eyes, set the sight on it and meditate upon Him. This icon was just to initiate the spiritual path.  Sharanas insisted that the devotee has to go past the icon to develop an awareness of the God within and to realize the Self.  Allama Prabhu, in this Vachana stresses that just these ritualistic and mechanical means will not bring us to the realization of God. We need to go beyond the icon worship and become aware of the true nature of the divine, who is beyond the limits of our senses and mind.
The Vachana says that the hand holding Linga, the eyes that have set the sight on the Linga, and the mind that is thinking about Him are all in darkness, meaning that one is ignorant if he or she thinks that God can be realized through our senses and mind.  He is way beyond these. He is far away from this darkness. The true awareness of the divine and the spiritual inward journey is what is needed to reach Him.
Let us journey towards the light within!

KANNADA COMMENTARY
ಅರ್ಥ:

 
ಹಿಡಿವ ಕೈಗಳ ಮೇಲೆ ಕತ್ತಲೆಯಯ್ಯಾ (ಲಿಂಗವನ್ನು ಹಿಡಿಯುವ ಕೈಗಳ ಮೇಲೆ ಕತ್ತಲೆ ಆವರಿಸಿದೆ)
ನೋಡುವ ಕಂಗಳ ಮೇಲೆ ಕತ್ತಲೆಯಯ್ಯಾ (ಲಿಂಗವನ್ನು ನೋಡುವ ಕಣ್ಣುಗಳ ಮೇಲೆ ಕತ್ತಲೆ ಆವರಿಸಿದೆ)
ನೆನೆವ ಮನದ ಮೇಲೆ ಕತ್ತಲೆಯಯ್ಯಾ (ದೇವರನ್ನು ನೆನೆಯುವ ಮನಸ್ಸಿನ ಮೇಲೆಯೂ ಕತ್ತಲೆ ಆವರಿಸಿದೆ)
ಕತ್ತಲೆ ಎಂಬುದು ಇತ್ತಲೆಯಯ್ಯಾ (ಈ ಕಡೆ ಇರುವುದೆಲ್ಲ ಬರಿ ಕತ್ತಲೆ)
ಗುಹೇಶ್ವರನೆಂಬುದು ಅತ್ತಲೆಯಯ್ಯಾ (ಗುಹೇಶ್ವರನು ಇರುವುದು ಕತ್ತಲೆಯಿಂದ ಆ ಕಡೆಗೆ, ಬಹು ದೂರ)

 
 ತಾತ್ಪರ್ಯ:

ಕೈಗಳಲ್ಲಿ  ಲಿಂಗವನ್ನು  ಹಿಡಿದು ಅದರಲ್ಲಿ ದೃಷ್ಟಿಯನ್ನು ನೆಟ್ಟು  ಮನಸ್ಸನ್ನು ಲಿಂಗದ ನೆನೆಹಿನಲ್ಲಿ ತೊಡಗಿಸುತ್ತೇನೆ ಎನ್ನುವವರು ಅಜ್ಞಾನದಲ್ಲಿ ಮುಳುಗಿದ್ದಾರೆ  ಎನ್ನುತ್ತಾರೆ ಅಲ್ಲಮ ಪ್ರಭುಗಳು.
ಆ ಪರವಸ್ತುವಿನ ಕುರುಹಾದ ಲಿಂಗವನ್ನು ಕೈಯಲ್ಲಿ ಹಿಡಿದುಕೊಂಡು, ದೃಷ್ಟಿಯನ್ನು ಅದರಲ್ಲಿ ಏಕಾಗ್ರಗೊಳಿಸಿ,  ಮನದಲ್ಲಿ ಆ ದೇವನನ್ನು ನೆನೆಯುತ್ತೇನೆ ಎನ್ನುವುದು  ಮರವೆ. ಮತ್ತು ಆ ಮರವೆಯೆ ಕತ್ತಲೆ.  ಆದ್ದರಿಂದ ಅಲ್ಲಮರು ಹೇಳುತ್ತಾರೆ- ಹಿಡಿವ ಕೈಗಳ ಮೇಲೆ ಕತ್ತಲೆಯೆಂದು. ಅಜ್ಞಾನದಿಂದ  ಪೂಜಿಸುವುದು  ಕತ್ತಲೆಯಲ್ಲಿರುವುದರ ಸಮಾನ. ದೃಷ್ಟಿಯನ್ನು ಲಿಂಗದಲ್ಲಿ ನೆಟ್ಟು ಲಿಂಗವನ್ನು ಕಾಣುತ್ತೇನೆ ಎಂಬುದು ಸಹ ಅಜ್ಞಾನದ ಮಾತು.  ಮನಸ್ಸಿನಲ್ಲಿ  ಆ ದೇವರನ್ನು ನೆನೆದು ಆತನನ್ನು ಪಡೆಯುತ್ತೇನೆ ಎಂಬುದು  ಮೂರ್ಖತನ. ಆದ್ದರಿಂದ ಅದೂ ಕತ್ತಲೆಯೆ. ಏಕೆಂದರೆ ಆ ಲಿಂಗ ಅಥವಾ ಆ ಪರವಸ್ತು  ಇಂದ್ರಿಯಗಳಿಗೆ ನಿಲುಕುವಂತಹುದಲ್ಲ.  ಅದು ಇಂದ್ರಿಯಾತೀತವಾದದ್ದು.  ಅಂತಹದ್ದನ್ನ್ನು ನಾನು ಕೈಯಲ್ಲಿ ಹಿಡಿದು ಪೂಜಿಸುತ್ತೇನೆ, ನನ್ನ ದೃಷ್ಟಿಯಿಂದ ನೋಡುತ್ತೇನೆ ಮತ್ತು ಮನದಲ್ಲಿ ನೆನೆಯುತ್ತೇನೆ ಎನ್ನುವುದು ಅಜ್ಞಾನ,  ಆ ಪರವಸ್ತು ಕೈಗೆ ಸಿಗುವಂತಹದ್ದಲ್ಲ, ದೃಷ್ಟಿಗೆ ನಿಲುಕುವಂತಹದ್ದಲ್ಲ, ಮನಸ್ಸಿಗೆ ವೇದ್ಯವಾಗುವಂತಹದ್ದಲ್ಲ.  ಆ ಪರವಸ್ತುವಿನ ಕುರುಹಾದ ಲಿಂಗವನ್ನೇ ಆ ಪರವಸ್ತು ಎಂದು ಭಾವಿಸುವವರು ಅಜ್ಞಾನಿಗಳು, ಕತ್ತಲೆಯಲ್ಲಿ ಮುಳುಗಿದವರು. ಇಂತಹ ಕತ್ತಲೆಯಲ್ಲಿ ಮುಳುಗಿರುವವರ ಹತ್ತಿರ  ಬೆಳಕು ಅಥವಾ ಅರಿವು ಬರುವುದಿಲ್ಲ. ಅದು ಅವರಿಂದ ಬಲು ದೂರ. ಆದ್ದರಿಂದಲೇ ಅಲ್ಲಮರು “ಗುಹೇಶ್ವರನು ಅತ್ತಲೆಯಯ್ಯಾ”ಎಂದು ಹೇಳುತ್ತಾರೆ.

 

Friday, June 14, 2013

VACHANA IN KANNADA

ಈ ಲೋಕದಲ್ಲಿ ಸತ್ಕ್ರೀಯನೆ ಪ್ರತಿಷ್ಠೆ ಮಾಡುತ್ತಿಪ್ಪರು
ಗೋವಿನ ದೇಹದಲ್ಲಿ ಘೃತವಿಪ್ಪುದು
ಆ ಗೋವಿಂಗೆ ಪುಷ್ಟಿಯಾಗಲರಿಯದು
ಆ ಗೋವಬೋಧಿಸಿ, ಹಾಲ ಕರೆದು ಕಾಸಿ ಹೆಪ್ಪನಿಕ್ಕಿ
ಆ ದಧಿಯ ಮಥನವ ಮಾಡಿ ಬೆಣ್ಣೆಯ ತೆಗೆದು
ಆ ನವನೀತದೆ ತುಪ್ಪವ ಕಾಸಿ ಆ ಗೋವಿಂಗೆ ಕುಡಿಸಲಾಗಿ
ದಿನ ದಿನಕ್ಕೆ ಪುಷ್ಟಿಯಪ್ಪುದು ತಪ್ಪದಯ್ಯ
ಈ ಪ್ರಕಾರದಲ್ಲಿ ಲಿಂಗೋಪಚಾರಮಾಡಲಾಗಿ ಜ್ಞಾನವಹುದು
ಜ್ಞಾನವಾಗಲಿಕೆ ಸಮ್ಯಜ್ಞಾನವಹುದು
ಸಮ್ಯಜ್ಞಾನವಾಗಲಾಗಿ  ಪ್ರಾಣವೇ ಲಿಂಗವಪ್ಪುದು ತಪ್ಪದು, ಸಂದೇಹವಿಲ್ಲವಯ್ಯ
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ

TRANSLITERATION

I lOkadalli satkreeyane prtiShThe maaDuttipparu
gOvina dEhadalli ghRutavippudu,
aa gOviMge puShTiyaagalariyadu
aa gOva bOdhisi, haala karedu kaasi hepppanikki
aadadhiya mathanava maaDi beNNeya tegedu
aa navanItade tuppava kaasi aa gOviMge kuDisalaagi
dina dinakke puShTiyappudu tappadayya
I prakaaradalli liMgOpacaaramaaDalaagi j~jaanavahudu
j~aanavaagalike samyaj~aanahudu
samyaj~aanavaagalaagi praaNavE liMgavappudu tappudu, saMdEhavillavayya
mahaaliMgaguru shiva siddhEshvara prabhuve

CLICK HERE FOR A RECITATION

TRANSLATION (WORDS)

I lOkadalli  (in this world) satkreeyane  (just good deeds)  prtiShThe (prestige)  maaDuttipparu (people are making in to a)
gOvina (of the cow) dEhadall (in the body)  ghRutavippudu  (there is ghee, clarified butter),
aa gOviMge (to that very cow)  puShTiyaagalariyadu (it does not have the intelligence of being nurishment)
aa gOva (that very cow)  bOdhisi (by teaching, making it understand)
haala karedu  (milking) kaasi  (heating) hepppanikki ( making curds)
aa  (that) dadhiya (curds)  mathanava maaDi  (churning) beNNeya tegedu (extracting butter)
aa navanItade (from that butter)  tuppava kaasi (making ghee by heating it)  aa gOviMge (to that cow) kuDisalaagi (by feeding it)
dina dinakke (day by day) puShTiyappudu  (becoming well nourished)  tappadayya (cannot be avoided)
I prakaaradalli (in this way)  liMgOpacaaramaaDalaagi (if one serves God)  j~jaanavahudu (gain knowledge)
j~aanavaagalike (after gaining knowledge) samyaj~aanahudu (that will become complete knowledge)
samyaj~aanavaagalaagi  (complete knowledge) praaNavE liMgavappudu (turns  the breath, or life itself in to God)   tappudu (this cannot be avoided)
saMdEhavillavayya (no doubt)
mahaaliMgaguru shiva siddhEshvara prabhuve (Mahalingaguru Shivasiddheshvara Prabhuve) 

VACHANA IN ENGLISH

In this world people are making just good deeds into a prestige!
There is ghee (clarified butter) in the body of the cow!
That very cow does not know how to nourish with it!
Convincing (petting) the cow, extracting milk, heating it and making curds,
Churning the curds to extract the butter,
From that butter making ghee by heating it and feeding it to the cow,
Day by day, the cow can only be well nourished, it cannot be avoided, Sir!
Along the same lines, one gains knowledge by serving God.
The knowledge gained will become complete knowledge,
The complete knowledge turns the breath (life itself) into God, this cannot be avoided without a doubt, Sir!
Mahalingaguru Shivasiddheshvara Prabhuve! 

COMMENTARY
 
In this Vachana Siddalinga Yathigalu laments on how we fail to recognize what we have and are capable of while being drowned in the activities of mundane life. He says all it takes is for us to surrender to God, which brings knowledge to us, and the knowledge develops into complete knowledge and the complete knowledge merges us with God! 

The Vachana uses an interesting simile to drive home its point. The cow has within it the major ingredient to make Ghee; (clarified butter), it does not know how to utilize it to be nourished. If we pet the cow, extract milk from it, heat the milk to make it into curds, churn the curds to extract butter and finally heat the butter to make the ghee, and feed it to the cow, there is no doubt that the cow will be well nourished. The cow had the basic element within it. This element had to go through a long refinement process to make it suitable to nourish the cow.

Along the same lines, we have what it takes to reach the God within us. We just have to find it, refine it and use it to reach Him. That basic element is simply the act of surrendering to Him and serving Him. This surrender and service will impart us the knowledge, the knowledge turns complete as we progress in our surrendered service. With the complete knowledge of Him we enter His kingdom and become one with Him.

The Vachana says that people of the world are simply not recognizing this inherent component within them. They are busy performing the so called ‘good deeds’; the good deeds as prescribed by the society to bring them prestige. These good deeds make them feel that they are serving the society and are contributing to it. But, they do not realize that all these deeds are simply boosting their ego.

The Vachana urges us to go beyond just performing good deeds and being within this mundane world. It urges us to recognize our inherent potential to be of service to mankind and eventually become one with God!

 Let us push ourselves to gain that ultimate knowledge!

KANNADA COMMENTARY

ಅರ್ಥ:

ಈ ಲೋಕದಲ್ಲಿ ಸತ್ಕ್ರೀಯನೆ (ಒಳ್ಳೆಯ ಕೆಲಸ)  ಪ್ರತಿಷ್ಠೆ  (ಉನ್ನತ ಸ್ಥಾನ) ಮಾಡುತ್ತಿಪ್ಪರು
ಗೋವಿನ ದೇಹದಲ್ಲಿ ಘೃತವಿಪ್ಪುದು (ಆಕಳ ಶರೀರದಲ್ಲಿ ತುಪ್ಪವಿರುವುದು)
ಆ ಗೋವಿಂಗೆ ಪುಷ್ಟಿಯಾಗಲರಿಯದು (ಆದರೆ ಅದು ಆ ದೇಹಕ್ಕೆ ಪೋಷಣೆ ಕೊಡುವುದಿಲ್ಲ)
ಆ ಗೋವಬೋಧಿಸಿ ( ಆ ಆಕಲಿಗೆ ತಿಳಿಹೇಳಿ)
ಹಾಲ ಕರೆದು ಕಾಸಿ ಹೆಪ್ಪನಿಕ್ಕಿ
ಆ ದಧಿಯ ಮಥನವ (ಮೊಸರನ್ನು ಕಡೆದು) ಮಾಡಿ ಬೆಣ್ಣೆಯ ತೆಗೆದು
ಆ ನವನೀತದೆ ( ಆ ಬೆಣ್ಣೆಯಿಂದ)  ತುಪ್ಪವ ಕಾಸಿ ಆ ಗೋವಿಂಗೆ ಕುಡಿಸಲಾಗಿ
ದಿನ ದಿನಕ್ಕೆ ಪುಷ್ಟಿಯಪ್ಪುದು (ಅದು ಪೋಷಣೆಗೊಳ್ಳುವುದು)  ತಪ್ಪದಯ್ಯ
ಈ ಪ್ರಕಾರದಲ್ಲಿ ಲಿಂಗೋಪಚಾರಮಾಡಲಾಗಿ ಜ್ಞಾನವಹುದು (ಈ ರೀತಿಯಾಗಿ ಲಿಂಗಕ್ಕಾಗಿ ಮಾಡುವುದರಿಂದ ಜ್ಞಾನ ಉಂಟಾಗುವುದು)
ಜ್ಞಾನವಾಗಲಿಕೆ ಸಮ್ಯಜ್ಞಾನವಹುದು ( ಆ ಜ್ಞಾನವು ಪೂರ್ಣಜ್ಞಾನವಾಗುವುದು)
ಸಮ್ಯಜ್ಞಾನವಾಗಲಾಗಿ  ಪ್ರಾಣವೇ ಲಿಂಗವಪ್ಪುದು ತಪ್ಪದು (ಆ ಪೂರ್ಣಜ್ಞಾನದಿಂದ ಪ್ರಾಣವೇ ಲಿಂಗವಾಗುವುದು)
ಸಂದೇಹವಿಲ್ಲವಯ್ಯ
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ 

ತಾತ್ಪರ್ಯ: 

ಈ ವಚನದಲ್ಲಿ ತೋಂಟದ ಸಿದ್ಧಲಿಂಗ  ಯತಿಗಳು  ಸಾಮಾನ್ಯ ಜನರ ನಡತೆ ಹೇಗಿರುತ್ತದೆ,ಮತ್ತು ಅದನ್ನು ಹೇಗೆ  ಔನ್ನತ್ಯಕ್ಕೆ  ಕೊಂಡೊಯ್ಯುವುದು ಎಂಬುದನ್ನು ಅರ್ಥವತ್ತಾದ ಮತ್ತು ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಹೇಳುತ್ತಿದ್ದಾರೆ. 

ಈ ಲೋಕದಲ್ಲಿ ಅನೇಕರು ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಂದರೆ ಸಮಾಜ ಕಲ್ಯಾಣ, ಬಡವರಿಗೆ ಸಹಾಯ ಮಾಡುವುದು, ಹೆಚ್ಚಿನ ಹಣಕ್ಕೆ ಆಸೆಪಡದೆಯಿರುವುದು,  ಅಲ್ಪ ಸ್ವಲ್ಪ ದಾನ ಮಾಡುವುದು ಇತ್ಯಾದಿಗಳನ್ನು ಮಾಡುವುದು.  ಸಮಾಜವು ಯಾವುದನ್ನು “ಒಳ್ಳೆಯದು” ಎಂದು ಕರೆಯುತ್ತದೆಯೋ ಅಂತಹುದನ್ನು ಮಾಡಿ ಸ್ವಪ್ರತಿಷ್ಠೆ  ಗಳಿಸಿಕೊಳ್ಳುವುದು  ಕಂಡು ಬರುತ್ತದೆ.  “ನಾನು ಸತ್ಕಾರ್ಯ್ಗಳಲ್ಲಿ ತೊಡಗಿದ್ದೇನೆ ಇನ್ನು ನಾನು ಮಾಡುವುದು ಏನೂ ಉಳಿದಿಲ್ಲ” ಎಂದು ಬೀಗುತ್ತದೆ ಮನಸ್ಸು. ಅಲ್ಲಿಗೆ  ಆ ವ್ಯಕ್ತಿಯ ಮನಸ್ಸು ತೃಪ್ತವಾಗಿ ಹೆಚ್ಚಿನದರ ಕಡೆಗೆ ಗಮನ ಹೋಗುವುದಿಲ್ಲ.

ಆದರೆ ಅದು ಕೊನೆಯಲ್ಲ. ಅದು ಕೇವಲಪ್ರತಿಷ್ಠೆಗೆ ದಾರಿಮಾಡಿಕೊಟ್ಟು ಅಹಂಕಾರಕ್ಕೆಡೆಮಾಡಿಕೊಡುತ್ತದೆ. ಇಂತಹ ಒಳ್ಳೆಯ ಕೆಲಸಗಳಿಂದ ಯಾವ ಪ್ರಯೋಜನವೂ ಇಲ್ಲ. ಇದು ಹೇಗೆ ನಿಷ್ಪ್ರಯೋಜಕವೆಂಬುದನ್ನು ಒಂದು ಉದಾಹರಣೆಯಿಂದ ತೋರಿಸಿಕೊಡುತ್ತಾರೆ. ಆಕಳ ದೇಹದಲ್ಲಿಯೇ ತುಪ್ಪವಿರುತ್ತದೆ. ಆದರೆ ಆ ತುಪ್ಪದಿಂದ ಆಕಳ ದೇಹಕ್ಕೆ  ಪುಷ್ಟಿ ದೊರೆಯುವುದಿಲ್ಲ. ಅದಕ್ಕಾಗಿ ನಡೆಯಬೇಕಾದ ದೀರ್ಘ ಪ್ರಕ್ರಿಯೆಯೊಂದಿದೆ.  

ಅದೇ ರೀತಿಯಾಗಿ ಕೇವಲ ಒಳ್ಳೆಯ ಕೆಲಸಗಳು ಆತ್ಮಕ್ಕೆ  ಔನ್ನತ್ಯವನ್ನು ತಂದುಕೊಡುವುದಿಲ್ಲ, ಲಿಂಗ ತತ್ವವನ್ನು ಅರಿವಿಗೆ ತಂದುಕೊಡುವುದಿಲ್ಲ. ಅದಕ್ಕಾಗಿ ನಡೆಯಬೇಕಾದ ದೀರ್ಘ ಪ್ರಕ್ರಿಯೆಯಿದೆ. 

ಆಕಳಿಗೆ ಪ್ರೀತಿಯಿಂದ ಮೈದಡವಿ ತಿಳಿಯಹೇಳಿ ಹಾಲು ಕರೆಯಬೇಕು. ಆ ಹಾಲನ್ನು ಚೆನ್ನಾಗಿ ಕಾಯಿಸಬೇಕು. ಕಾಯಿಸಿದ ಹಾಲಿಗೆ ಹೆಪ್ಪು ಹಾಕಬೇಕು. ಹೆಪ್ಪಾದ ಹಾಲನ್ನು ಮಥಿಸಬೇಕು, ಬೆಣ್ಣೆಯನ್ನು ತೆಗೆಯಬೇಕು,  ಆ ಬೆಣ್ಣೆಯನ್ನು ಕಾಯಿಸಬೇಕು, ಕಾಯಿಸಿದ ತುಪ್ಪವನ್ನು ಹಸುವಿಗೆ ಕೊಟ್ಟಾಗ ಆ ಆಕಳು ಪುಷ್ಟಿಗೊಳ್ಳುವುದನ್ನು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ. ಇದರಲ್ಲಿ ಯಾವ ಸಂದೇಹವೂ ಇಲ್ಲ ಎನ್ನುತ್ತಾರೆ ಸಿದ್ಧಲಿಂಗರು. 

ಇದೇ ಪ್ರಕ್ರಿಯೆ ಮಾನವ ಮನಸ್ಸಿಗೂ ಅನ್ವಯಿಸುತ್ತದೆ.  ಒಳ್ಳೆಯ ಕ್ರಿಯೆಗಳು ನಮ್ಮಲ್ಲಿವೆ. ಆದರೆ ಅವುಗಳಿಂದ ಅಪ್ರಯೋಜನವಿಲ್ಲ. ಏಕೆಂದರೆ ಅಲ್ಲಿ ಲಿಂಗಭಾವವಿಲ್ಲ. ಲಿಂಗ ಭಾವ ಅಳವಡಲು ನಡೆಯಬೇಕಾದದ್ದು ಬಹಳವಿದೆ. ನಾವು ಮನಸ್ಸಿಗೆ ಬೊಧಿಸಿ  ಎಲ್ಲರಿಗೂ ಒಳ್ಳೆಯದಾಗುವಂತಹ ಕೆಲಸ ಮಾಡುವಂತೆ ಮಾಡಬೇಕು. ಅಂದರೆ ಒಂದುಕಡೆ ಒಳ್ಳೆಯದು ಮಾಡುತ್ತ ಇನ್ನೊಂದು ಕಡೆ ಯಾರಿಗೋ ಹಾನಿಯಾಗುವಂತೆ ಮಾಡಬಾರದು. ನಾವು ಮಾಡುವ ಕಾರ್ಯ ಹೆಚ್ಚು ಪರಿಪಾಕಗೊಳ್ಳ ಬೇಕು. ಅದರಲ್ಲಿ ಶಿವಭಾವವೆಂಬ ಹೆಪ್ಪು ಹಾಕಬೇಕು. ಅ ಶಿವ ಭಾವವನ್ನು ಮಥಿಸಿ  ಆ ಶಿವ ಭಾವದ ನವನೀತವನ್ನು ತೆಗೆಯಬೇಕು. ಅಂದರೆ ಆ ಮೊಸರಿನಲ್ಲಿರುವ ಚಟ್ಟ ಮತ್ತು ನೀರು ಎಂಬ ಅಹಂಕಾರ ಮತ್ತು ಇತರ ಕಲ್ಮಶಗಳನ್ನು ಬಿಟ್ಟು ಕೇವಲ ಶಿವಭಾವ ಉಳಿಯುವಂತೆ ಮಾಡಬೇಕು.  ಆ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಬೇಕು. ಅಂದರೆ ಆ ಬೆಣ್ಣೆಯಲ್ಲಿಯೂ ಇರುವ ಅಲ್ಪ ಸ್ವಲ್ಪ ನೀರಿನ ಅಂಶವನ್ನು ಹೋಗುವಂತೆ ಮಾಡಬೇಕು. ಅಂದರೆ  ಅಜ್ಞಾನ ಪೂರ್ತಿಯಾಗಿ ಅಳಿಯಬೇಕು.  ಆಗ ಪೂರ್ಣ ಜ್ಞಾನ ಉಂಟಾಗುತ್ತದೆ. ಆಗ ಮನಸ್ಸು ಲಿಂಗಭಾವದಲ್ಲಿ ಒಂದಾಗಿಯೇ ಆಗುತ್ತದೆ. ಆಗ ಪ್ರಾಣವೇ ಲಿಂಗವಾಗುತ್ತದೆ. ಅದರಲ್ಲಿ ಸಂದೇಹವೇ ಇಲ್ಲ.

ಹಾಲು ತಿಳಿದುಪ್ಪವಾಗುವವರೆಗೆ ಅದು ಅನೇಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಅದೇ ರೀತಿ ನಮ್ಮ ಮನಸ್ಸು ಕೂಡ ಇಂತಹ ಪರಿಪಾಕಗೊಳಿಸುವ ಪ್ರಕ್ರಿಯೆಗೆ ಒಳಗಾಗಬೇಕು ಎಂಬುದು ಈ ವಚನದ ಭಾವ, ಕೇವಲ ಒಳ್ಳೆಯ ಕೆಲಸಗಳನ್ನು ಮಾಡುತ್ತ ಅಲ್ಲಿಯೆ ನಿಂತುಬಿಡುವುದಲ್ಲ ಎಂದು ಹೇಳುತ್ತಾರೆ ಸಿದ್ಧಲಿಂಗರು.

 

 

 

 

 

 

 

 

 

Friday, June 7, 2013

Vachana 145: Antarangadalli j~naana – Inwardly Knowledge

VACHANA IN KANNADA
 
ಅಂತರಂಗದಲ್ಲಿ ಜ್ಞಾನ
ಬಹಿರಂಗದಲ್ಲಿ ಸತ್ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ
ಏಕಭಾವವೆನಿಸಕೊಂಬುದಯ್ಯ
ಅದು ಹೇಗೆಂದಡೆ:
ಹೊರಗೆ ಅಗ್ನಿ ಉರಿವುತ್ತಿಪ್ಪುದಯ್ಯ
ಕುಂಭದಲ್ಲಿ ಉದಕವಿಪ್ಪುದು
ಅಗ್ನಿಯ ಜ್ವಾಲೆಯ ಸಾಮರ್ಥ್ಯದಿಂದ
ಕುಂಭದೊಳಗಿನ ಉದಕವು ಹೇಂಗೆ ಉಷ್ಣವಪ್ಪುದು ಹಾಂಗೆ
ಜ್ಞಾನ ಸತ್ಕ್ರಿಯೋಪಚಾರವ ಮಾಡಲಾಗಿ
ಪ್ರಾಣವೇ ಲಿಂಗಸ್ವರೂಪವಪ್ಪುದು ತಪ್ಪದಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ

TRANSLITERATION 
 
aMtaraMgadalli j~naana
bahiraMgadalli satkriyOpacaarayiruttiralikkaagi
EkabhaavavenisikoMbudayya
adu hEgeMdaDe
horage agni urivuttippudayya
kuMbhadalli udakavippudu
agniya jvaaleya saamarthyadiMda
kuMbhadoLagina udakavu hEMge uShNavappudu haaMge
j~aana satkriyPpacaarava maaDalaagi
praaNavE liMgasvarUpavappudu tappadayya
mahaaliMgaguru shivasiddhEshvara prabhuve
 
CLICK HERE FOR A RECITATION
 
TRANSLATION (WORDS)

aMtaraMgadalli  (inwardly, in the heart)   j~naana (knowledge)
bahiraMgadalli (outwardly)  satkriyOpacaarayiruttiralikkaagi (engaged in good deeds, leading a pious life)
EkabhaavavenisikoMbudayya (that is said to be the unity, Sir; that is called oneness)
adu hEgeMdaDe (if asked how)
horage  (outside) agni (fire)  urivuttippudayya (is burning, Sir)
kuMbhadalli (in the pot)  udakavippudu (there is water)
agniya  jvaaleya  (flame of fire) saamarthyadiMda (with the potential of)
kuMbhadoLagina (in the pot) udakavu (the water)  hEMge (the way) uShNavappudu (becomes hot) haaMge (in the same way)
j~aana  (the knowledge) satkriyOpacaarava (good deeds)  maaDalaagi (if done, practiced)
praaNavE  (the breath, life itself) liMgasvarUpavappudu (becoming  God) tappadayya (will not be avoided, stopped)
mahaaliMgaguru shivasiddhEshvara prabhuve (mahaalingaguru Shivasiddheshvara Prabhuve)
 
VACHANA IN ENGLISH
 
The inwardly knowledge,
If combined with outwardly good deeds and pious living,
that is said to be unity, Sir!
If asked how?
The fire is burning outside, Sir!
There is water in the pot,
With the potential of the flame of the fire,
The way the water in the pot becomes hot,
In the same way,
If good deeds are practiced with the inward knowledge,
The life (breath) itself becoming God will not be stopped (is certain)!
Mahaalingaguru Shivasiddheshvara Prabhuve!
 
COMMENTARY
 
In our previous postings we have said that the goal of life is to merge with God, to achieve linga-anga saamarasya and to realize the Self. We have said that what we need to achieve this is an intense desire to gain the knowledge and develop the awareness of the God within. We have also said that a prerequisite for this spiritual journey is minimizing our desires, not over indulging in our sense, and be aware of the illusory nature of the mundane life. With all this, one could infer that once the knowledge is gained and the awareness sets in, we can get away from the mundane world and concentrate on God and enjoy the awareness within. Siddalinga Yathigalu wakes us up through this Vachana urging us to complement our inward knowledge with outward good deeds and pious living. He says that it is not good enough to acquire the knowledge and get away from the world we live in; we must contribute to this world through our good deeds. Only then we can become Him! The Vachana goes a bit further and says that when knowledge is combined with good deeds, no one can stop the human from becoming the God!

The Vachana uses a simple but interesting simile to drive home this point. The knowledge is compared to the fire and the outward world is compared to water within a pot. The water can only be boiled when the fire is brought in contact with the pot. In the absence of the two aspects not coming together, the water does not boil!
 
Let us be aware, pious and active!
 
KANNADA COMMENTARY
 
ಅರ್ಥ:
ಅಂತರಂಗದಲ್ಲಿ   (ಹೃದಯದಲ್ಲಿ)  ಜ್ಞಾನ (ಅರಿವು)
ಬಹಿರಂಗದಲ್ಲಿ (ಹೊರಗೆ)  ಸತ್ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ (ಒಳ್ಳೆಯ ಕ್ರಿಯೆ ಮತ್ತು ಸತ್ಕಾರ  ಇರಲು)
ಏಕಭಾವವೆನಿಸಕೊಂಬುದಯ್ಯ  (ಒಂದೇ ಭಾವ ವೆನಿಸಿಕೊಳ್ಳುತ್ತದೆ)
ಅದು ಹೇಗೆಂದಡೆ:
ಹೊರಗೆ ಅಗ್ನಿ ಉರಿವುತ್ತಿಪ್ಪುದಯ್ಯ  (ಹೊರಗೆ ಬೆಂಕಿ ಉರಿಯುತ್ತಿದೆ)
ಕುಂಭದಲ್ಲಿ (ಮಡ್ಕೆಯಲ್ಲಿ)  ಉದಕವಿಪ್ಪುದು (ನೀರು ಇರುವುದು)
ಅಗ್ನಿಯ  (ಬೆಂಕಿಯ) ಜ್ವಾಲೆಯ  (ಉರಿಯ) ಸಾಮರ್ಥ್ಯದಿಂದ (ಶಕ್ತಿಯಿಂದ)
ಕುಂಭದೊಳಗಿನ  (ಮಡಲೆಯೊಳಗಿನ) ಉದಕವು (ನೀರು) ಹೇಂಗೆ ಉಷ್ಣವಪ್ಪುದು ಹಾಂಗೆ (ಹೇಗೆ ಬಿಸಿಯಾಗುವುದು ಹಾಗೆ)
ಜ್ಞಾನ  (ಅರಿವು) ಸತ್ಕ್ರಿಯೋಪಚಾರವ ಮಾಡಲಾಗಿ (ಒಳ್ಳೆಯ ಕ್ರಿಯೆ ಮತ್ತು ಸತ್ಕಾರ ಮಾಡಿದರೆ)
ಪ್ರಾಣವೇ ಲಿಂಗಸ್ವರೂಪವಪ್ಪುದು ತಪ್ಪದಯ್ಯ (ಪ್ರಾನವು ಲಿಂಗಸ್ವರೂಪವಾಗುವುದು ತಪ್ಪದು)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ
 
ತಾತ್ಪರ್ಯ:

ವ್ಯಕ್ತಿ ಲಿಂಗಸ್ವರೂಪಿ ಆಗುವುದು ಹೇಗೆ ಎಂಬುದನ್ನು ಈ ವಚನದಲ್ಲಿ ದೃಷ್ಟಾಂತದ ಮೂಲಕ ಹೇಳುತ್ತಾರೆ ಸಿದ್ಧಲಿಂಗ ಯತಿಗಳು.
“ಅಂತರಂಗದಲ್ಲಿ ಜ್ಞಾನ   ಬಹಿರಂಗದಲ್ಲಿ ಸತ್ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ  ಏಕಭಾವವೆನಿಸಕೊಂಬುದಯ್ಯ” ಎನ್ನುತ್ತಾರೆ ಅವರು.  ಅಂತರಂಗದಲ್ಲಿ ಜ್ಞಾನವಿರಬೇಕು. ಆ  ಜ್ಞಾನ  ಆತನ ಬಹಿರಂಗ ಕ್ರಿಯೆಗಳಲ್ಲಿ ಕಾಣಬೇಕು. ಕ್ರಿಯೆಯ ರೂಪದಲ್ಲಿ ಅರಳದೆ ಕೇವಲ ಅಂತರಂಗದಲ್ಲಿ ಮಾತ್ರ ಜ್ಞಾನವಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ  ವ್ಯಕ್ತಿಯು ತನ್ನ ಅಂತರಂಗದ ಜ್ಞಾನಕ್ಕೆ ಅನುಗುಣವಾಗಿ ಸತ್ಕ್ರಿಯೆಗಳಲ್ಲಿ ತೊಡಗಬೇಕು. ಆಗ ಆತನ ಅಂತರಂಗ ಹಾಗೂ ಬಹಿರಂಗ ಎರಡೂ ಒಂದಾಗುತ್ತವೆ.

ಇದಕ್ಕೆ ಒಂದು ಉದಾಹರಣೆ ಕೊಡುತ್ತಾರೆ. ಒಂದು ಕುಂಭವಿದೆ. ಅದರಲ್ಲಿ ಜಲವಿದೆ. ಈ ಕುಂಭ ಉರಿಯಮೇಲಿಡಲಾಗಿದೆ. ಮಡಕೆ ಮತ್ತು ಬೆಂಕಿ ಎರಡೂ ಬೇರೆ ಬೇರೆಯಾಗಿವೆ. ಆದರೆ ಬೆಂಕಿಯ ಸಾಮರ್ಥ್ಯದಿಂದ ಅದರ ಉಷ್ಣತೆಯೆಲ್ಲ  ಕುಂಭದ ನೀರಿಗೆ ಬರುತ್ತದೆ. ಅದೇ ರೀತಿಯಾಗಿ  ಸತ್ಕ್ರಿಯೆಗಳಲ್ಲಿ ತೊಡಗಿಕೊಂಡರೆ ಪ್ರಾಣವು ಲಿಂಗಸ್ವರೂಪವಾಗುವುದು ಎನ್ನುತ್ತಾರೆ.
ಕುಂಭ ಉರಿಯಮೇಲಿದ್ದರೆ ಮಾತ್ರ ಇದು ಸಾಧ್ಯ. ಜ್ವಾಲೆ ಕುಂಭಕ್ಕೆ ಮುಟ್ಟಬೇಕು. ಆಗಮಾತ್ರ ಜ್ವಾಲೆಯ ಉಷ್ಣತೆ ಉದಕಕ್ಕೆ, ನೀರಿಗೆ ಬರುತ್ತದೆ.  ಕುಂಭವನ್ನು ಉರಿಯ ಮೇಲಿಡದೆ, ಬೇರೆ ಎಲ್ಲಿಯೋ ಇಟ್ಟು ಜ್ವಾಲೆಯು ಬೇರೆ ಎಲ್ಲಿಯೋ ಉರಿಯುತ್ತಿದ್ದರೆ  ಜ್ವಾಲೆಯ ಉಷ್ಣತೆ ನೀರಿಗೆ ಬರಲು ಸಾಧ್ಯವಿಲ್ಲ. ಅದೇ ರೀತಿ ಜ್ಞಾನವು ಕೇವಲ ಅಂತರಂಗದಲ್ಲಿ ಇದ್ದರೆ ಸಾಲದು.  ಅದು  ಕ್ರಿಯೆಯೊಂದಿಗೆ ಒಂದಾಗಬೇಕು. ಜ್ಞಾನ  ಕ್ರಿಯೆ ಎರಡೂ ಒಂದಾಗುವುದು ಎಂದರೆ ಪ್ರಾಣವು ಲಿಂಗಸ್ವರೂಪಿಯಾಗುವುದು.
ಅಷ್ಟೇ ಅಲ್ಲ ಅವರು ಹೇಳುತ್ತಾರೆ, ಜ್ಞಾನ ಮತ್ತು ಸತ್ಕ್ರಿಯೆಗಳು ಒಂದಾದಾಗ ಪ್ರಾಣವು ಲಿಂಗಸ್ವರೂಪಿಯಾಗುವುದನ್ನು ಯಾರೂ ತಪ್ಪಿಸಲಾರರು. ಅದು ಶತಃ ಸದ್ಧ. ಅಂದರೆ ಅಲ್ಲಿ ಅನುಮಾನಕ್ಕೆ ಆಸ್ಪದವೇ ಇಲ್ಲ.

Friday, May 31, 2013

Vachana 144: Surataruva Bittu – Leaving aside the tree of Heaven


VACHANA IN KANNADA
 
ಸುರತರುವ ಬಿಟ್ಟು ಎಲವದ ಮರಕ್ಕೆ ನೀರೆರೆವಂತೆ                    
ನೊರೆವಾಲ ಚೆಲ್ಲಿ ಕಾಟೆಯ ಬಯಸಿ ಬಾಯಾರುವಂತೆ
ತಾಯ ಮಾರಿ ತೊತ್ತ ಕೊಂಬವರಂತೆ
ರಂಭೆಯ ಬಿಟ್ಟು ಸಿಂಬೆಯ ಬಯಸುವ ಶಿಖಂಡಿಗಳಂತೆ
ನಿತ್ಯವಲ್ಲದ ನಿರುತವಲ್ಲದ ಸತ್ತು ಹೋಹ
ಮಾಯಾಪ್ರಪಂಚವ ಮೆಚ್ಚಿದ ಮನುಜರು
ಮುಕ್ತ್ಯಂಗನೆಯನಪ್ಪಿ ಭಕ್ತ್ಯಮೃತವ ಸೇವಿಸಿ(ಸುವ)
ನಿತ್ಯಪದದ ಸುಖವ ವ್ಯರ್ಥಕಾಯರಿವರೆತ್ತಬಲ್ಲರು ಹೇಳ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
TRANSLITERATION
surataruva biTTu elavada  marakke nIrerevaMte
norevaala celli kaaTeya bayasi baayaaruvaMte
taaya maari totta koMbavaraMte
raMbheya biTTu siMbeya bayasuva shikhaMDigaLaMte
nityvallada nirutvallada sattuhOha
maayaa prapaMcava meccida manujaru
muktyaMganeyanappi bhaktymRutava sEvisi
nityapadada sukhava vyarthakaayarivaretta ballaru hELa,
mahaaliMgaguru shivasiddhEshvara prabhuve.
CLICK THE LINK FOR A RECITATION:
TRANSLATION (WORDS)
surataruva (tree of heaven which grants all wishes) biTTu  (leaving a side) elavada (white silk cotton tree)  marakkenIrerevaMte  (watering the tree)
norevaala (creamy/ frothy milk) celli (throwing, spilling)  kaaTeya ( for watery white sauce, ganji) bayasi (longing) baayaaruvaMte (as being thirsty)
taaya (the mother) maari  (selling) totta (a servant)  koMbavaraMte (like buying)
raMbheya (celestial nymph) biTTu (leaving)  siMbeya  (a head gear) bayasuva (liking, longing) shikhaMDigaLaMte (like the eunuch)
nityvallada  (not eternal)  nirutvallada (not true)  sattuhOha (which dies)
maayaa prapaMcava (illusory world) meccida ( who like, adore) manujaru (the people)muktyaMganeyanappi (embracing the damsel called the freedom, mukti) bhaktymRutava sEvisi  (drinking the nectar of bhakti)
nityapadada (eternal state)  sukhava (joy, bliss) vyarthakaayarivaretta (how do these  unworthy bodied people) ballaru (know)  hELa,(tell me)
mahaaliMgaguru shivasiddhEshvara prabhuve. (Mahalingaguru Shiva Siddheshvara Prabhuve)
VACHANA IN ENGLISH
Like leaving aside the tree of Heaven and watering the cotton tree!
Like throwing out the frothy milk and being thirsty longing for the watery sauce, ganji!
Like selling the mother and buying a servant!
Like the eunuch casting aside the celestial nymph longing for a head gear!
People adore this not eternal, not true, illusory world which dies!
How do these unworthy bodied people know the eternal state of bliss,
Embracing the damsel of liberation and drinking the nectar of devotion, pray tell?
Mahalingaguru Shiva Siddheshvara Prabhuve.
COMMENTARY
In this Vachana Tontada Siddalinga yathigalu continues to stress on how important it is to develop the awareness of the profound and cultivate a devotional life style. He uses some strong but real-life similes to drive his point home.
The mythical tree of heaven (Kalpa vruksha) is said to offer whatever the devotee seeks. Instead of cultivating it, the human is busy watering the cotton silk (doodi)tree. This tree does not even provide any fruits fit for consumption. Yet, we are busy running around this tree while ignoring the divine. We certainly have to cultivate the cotton silk tree of mundane life, since we do not have the option of discarding it. But, we must keep our eyes on the tree of heaven, the devotional attitude and the awareness of the profound. Only then, we will not be disappointed by what the cotton silk tree has to offer us!
The frothy, creamy milk is always good for our health. Instead, we are longing for the watery sauce made with flour (ganji), when we are completely muddled in the mundane. We have strong bodies and powerful minds to enable us to see the divine if we care to. It is up to us to make the right choice of the milk or the sauce!
We are all bestowed with the unconditional love of the mother. We discard the soothing love of the mother and embrace the servant for all her help in getting across the mundane ocean. The servant is needed, but why sacrifice the mother? Let us offer the appropriate status for each in our lives!
A celestial nymph has no use for a eunuch, who is more interested in what he wears. He is fond of the colorful turban over the celestial company of the nymph. What a choice? How easily we forget what leads us to the liberation and ultimate bliss?
The Vachana questions as to how the unworthy bodies people who adore this non eternal, temporary, illusory world realize the embrace of the damsel of liberation and the taste of the nectar of devotion?
Indeed, we all have the capability to seek the divine. We are equipped to gain the awareness of the profound. But, we go after the low hanging fruit of the mundane world and forget the ultimate aim of life, which is to be one with Him!
Let us embrace the damsel of liberation with the cup of nectar of devotion in hand!
KANNADA COMMENTARY  

ಅರ್ಥ:
ಸುರತರುವ ( ದೇವಲೋಕದ ಮರ, ಕಲ್ಪವೃಕ್ಷ)  ಬಿಟ್ಟು ಎಲವದ ಮರಕ್ಕೆ (ಬೂರುಗದ ಮರಕ್ಕೆ )  ನೀರೆರೆವಂತೆ                      ಎಲವ ನಾಮಪದ
(ದೇ) ಬೂರುಗದ ಮರ, ದೂದಿಮರ
ನೊರೆವಾಲ ಚೆಲ್ಲಿ ಕಾಟೆಯ (ಗಂಜಿ)  ಬಯಸಿ ಬಾಯಾರುವಂತೆ (ಬಾಯಾರಿ ಆಸೆ ಪಡುವಂತೆ) ಕಾಟಿ ನಾಮಪದ
(ದೇ) ೧ ಕಾಡೆಮ್ಮೆ ಅಥವಾ ಕಾಡುಕೋಣ ೨ ರಾಗಿ ಯಾ ಜೋಳದ ಗಂಜಿ, ಸಂಗಟಿ ೨ ಒಂದು ನಾಣ್ಯ
ತಾಯ ಮಾರಿ ತೊತ್ತ (ದಾಸಿ) ಕೊಂಬವರಂತ
ರಂಭೆಯ ಬಿಟ್ಟು ಸಿಂಬೆಯ (ರುಮಾಲು) ಬಯಸುವ ಶಿಖಂಡಿಗಳಂತೆ (ನಪುಂಸಕರಂತೆ)
ನಿತ್ಯವಲ್ಲದ (ಶಾಶ್ವತವಲ್ಲದ)  ನಿರುತವಲ್ಲದ (ಸತ್ಯವಲ್ಲದ) ಸತ್ತು ಹೋಹ (ನಾಶವಾಗುವ)
ಮಾಯಾಪ್ರಪಂಚವ (ಭ್ರಮೆಯ ಜಗತ್ತು) ಮೆಚ್ಚಿದ ಮನುಜರು
ಮುಕ್ತ್ಯಂಗನೆಯನಪ್ಪಿ (ಮುಕ್ತಿ ಎಂಬ ಸ್ತ್ರೀಯನ್ನು ಅಪ್ಪಿ, ಪಡೆದು) ಭಕ್ತ್ಯಮೃತವ ಸೇವಿಸಿ(ಸುವ) (ಭಕ್ತಿಯೆಂಬ ಅಮೃತವನ್ನು ಸೇವಿಸುವ )
ನಿತ್ಯಪದದ (ಸತ್ಯವಾದ) ಸುಖವ (ಸುಖವನ್ನು) ವ್ಯರ್ಥಕಾಯರಿವರೆತ್ತಬಲ್ಲರು ಹೇಳ, (ದೇಹವನ್ನು ವ್ಯರ್ಥಗೊಳಿಸಿತ್ತಿರುವ ಇವರು ಹೇಗೆ ತಿಳಿಯ ಬಲ್ಲರು?)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. 
ತಾತ್ಪರ್ಯ:
ಯಾವುದು ಸುಲಭ, ಸುಖದಾಯಕ, ಲಾಭದಾಯಕ, ಶ್ರೇಯಸ್ಕರ ಎಂಬುದನ್ನು ತಿಳಿಯದೆ , ಅಂತಹವುಗಳು ತನ್ನ ಎಟುಕಿನಲ್ಲಿಯೇ ಇದ್ದರೂ ಗುರುತಿಸದೆ ವ್ಯರ್ಥವಾದವುಗಳನ್ನು ಬಯಸಿ ಕಷ್ಟಪಡುವವರು ತಮ್ಮ ಬದುಕನ್ನೇ ವ್ಯರ್ಥವಾಗಿಸುತ್ತಾರೆ ಎನ್ನುತ್ತಾರೆ ತೋಂಟದ ಸಿದ್ಧಲಿಂಗ ಯತಿಗಳು.
ಸುರತರು ದೇವಲೋಕದ ವೃಕ್ಷ. ಅದು ಕೇಳಿದುದನ್ನು ಕೊಡುತ್ತದೆ. ಅದನ್ನು ಪೋಷಿಸಿದರೆ ಸಾಕು ತನ್ನ ಇಷ್ಟಾರ್ಥಗಳು ನೆರವೇರುತ್ತವೆ. ಅಂತಹ ವೃಕ್ಷಕೆ ನೀರೆರೆಯುವುದನ್ನು ಬಿಟ್ಟು ಎಲವದ ಮರಕ್ಕೆ ನೀರೆರೆಯುತ್ತಾರೆ ಜನರು. ಈ ಲೋಕದ ಜನರು ಬಹಳ ದಡ್ಡರು. ಬೇಡಿದ್ದನೆಲ್ಲ ಕೊಡುವ ಮರ ತಮ್ಮ ಬಳಿಯಿರುವಾಗ ಅದಕ್ಕೆ ನೀರೆರೆದು ಪೋಷಿಸುವುದನ್ನು ಬಿಟ್ಟು ಬೂರುಗದ ಮರಕ್ಕೆ ನೀರೆರೆಯುತ್ತಾರೆ.  ಬೂರುಗದ ಮರ ತಿನ್ನುವಂತಹ ಹಣ್ಣನ್ನೂ ಕೊಡುವುದಿಲ್ಲ. ಅದೇ ರೀತಿ  ಶಿವನ ಭಕ್ತಿ ಮಾಡಿದರೆ ಎಲ್ಲ ಇಚ್ಛೆಗಳು ಪೂರ್ತಿಯಾಗುತ್ತವೆ. ಅಂತಹ ಭಕ್ತಿಯನ್ನು ಪೋಷಿಸ ಬೇಕು. ಆದರೆ ಅದನ್ನು ಬಿಟ್ಟು ಸಂಸಾರದಲ್ಲಿ ಮುಳುಗಿ ಬೇರೇನೇನೋ ಬಯಸುತ್ತ ಅದನ್ನು ಪಡೆಯಲು ನೂರಾರು ಕಷ್ಟಗಳನ್ನು ಅನುಭವಿಸುತ್ತಾರೆ. ಸಾಮಾನ್ಯರು.
ನೊರೆನೊರೆಯಾದ ಒಳ್ಳೆಯ ಹಾಲನ್ನು ಚೆಲ್ಲಿ  ಗಂಜಿಯನ್ನು ಬಯಸುವಂತೆ ಎನ್ನುತ್ತಾರೆ ಸಿದ್ಧಲಿಂಗರು. ನೊರೆಹಾಲು ಬಳಿಯಲ್ಲಿರುವಾಗ, ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳದೆ ಅದನ್ನು ಚೆಲ್ಲಿ ಗಂಜಿಯನ್ನು ಬಯಸುತ್ತಾರೆ ಜನರು. ಹಾಲಿನ ಗುಣ ಗಂಜಿಗೆಲ್ಲಿರುತ್ತದೆ. ಹಾಲು ಪೌಷ್ಟಿಕವಾದ ಪೂರ್ಣ ಆಹಾರ. ಅದು ಸುಲಭಾವಾಗಿಯೂ ಸಿಗುತ್ತದೆ. ಅದರ ಗುಣ ಗಂಜಿಗೆ ಇಲ್ಲ. ಆದರೂ ಹಾಲಿನ ಗುಣವನ್ನರಿಯದೆ ಗಂಜಿಗಾಗಿ ಹಪಹಪಿಸುವುದು ಬಹು ದೊಡ್ಡ ಮೂರ್ಖತನ. ಆದರೆ ಬಹುಪಾಲು ಜನರು ಅದನ್ನೇ ಮಾಡುತ್ತಾರೆ.
ತನ್ನ ಸಾಕಿ ಸಲಹಿ ಪ್ರೀತಿಯನ್ನು ತೋರುವ ತಾಯಿಯನ್ನು ಮಾರಿಕೊಂಡು ಒಬ್ಬ ದಾಸಿಯನ್ನು ಕೊಂಡುಕೊಳ್ಳುವಂತಾಗುತ್ತದೆ ಭಕ್ತಿಯನ್ನು ತ್ಯಜಿಸಿ ಸಂಸಾರದಲ್ಲಿ ಮುಳುಗುವುದು.  ತಾಯಿಯ ಮಮತೆ ತೊತ್ತಿನ ಕೆಲಸದ ರೀತಿಗೆ ಸರಿಸಮಾನವೆ? ತಾಯಿಯ ಗುಣ ತೊತ್ತಿಗೆ ಬರಲು ಸಾದ್ಯವೆ? ತಾಯಿಯದು ನಿರ್ವ್ಯಾಜ್ಯ ಪ್ರೇಮ. ತೊತ್ತು ದುಡ್ಡಿಗಾಗಿ ದುಡಿಯುವವಳು.
ದೇವಲೋಕದ ಚೆಲುವೆಯಾದ ರಂಭೆಯನ್ನು ಬಿಟ್ಟು ನಿರ್ಜೀವವಾದ ಸಿಂಬೆ ಅಥವಾ ರುಮಾಲಿಗೆ ಆಸೆ ಪಡುವ ಶಿಖಂಡಿಯಂತೆ ಎಂದು ಹೇಳುತ್ತಾರೆ. ಶಿಖಂಡಿಯಲ್ಲಿ, ರಂಭೆಯನ್ನು ಪಡೆದು ಆಕೆಯ ಚೆಲುವನ್ನು ಮೆಚ್ಚುವ ಚೈತನ್ಯವೇ ಇಲ್ಲ. ಹೇಡಿಯಾದ ಆತನು ರುಮಾಲಿಗೆ ಮಾತ್ರ ಆಸೆಪಡುತ್ತಾನೆ.
ಶಾಶ್ವತ ವಲ್ಲದ, ಸತ್ಯವಲ್ಲದ, ನಾಶವಾಗಿ ಹೋಗುವಂತಹ ಭ್ರಮೆಯ ಈ ಪ್ರಪಂಚವನ್ನು ಮೆಚ್ಚುವ ಜನರು ಮುಕ್ತಿಯೆಂಬ ಸ್ತ್ರೀಯನ್ನು ಅಪ್ಪಿಕೊಂಡು ಭಕ್ತಿಯೆಂಬ ಅಮೃತವನ್ನು ಸೇವಿಸುವ ಸುಖವನ್ನು ಹೇಗೆ ಅನುಭವಿಸಲು ಸಾಧ್ಯ? ಇಂತಹ ಜನರು ವ್ಯರ್ಥಕಾಯರು. ತಮಗೆ ಸಿಕ್ಕ ದೇಹವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಈ ದೇಹ ಮುಕ್ತಿ ಪಡೆಯುವುದಕ್ಕೆ ಒಂದು ಸಾಧನ. ಅದನ್ನು ಸರಿಯಾಗಿ ಬಳಸಿಕೊಳ್ಳದೆ ವ್ಯರ್ಥಗೊಳಿಸಿವುದು ಸಲ್ಲ. ಆದರೆ ಈ ಪ್ರಪಂಚದ ಜನರು ಅದನ್ನೇ ಮಾಡುತ್ತಿದ್ದಾರೆ.  ತಮ್ಮ ಕಣ್ಣಿಗೆ ಕಾಣುವ ಮಾಯಾಪ್ರಪಂಚವನ್ನೇ ನಿಜವೆಂದು ನಂಬಿ ತಮ್ಮ ಬದುಕನ್ನೇ ಹಾಳು ಮಾಡಕೊಳ್ಳುತ್ತಿದ್ದಾರೆ.
ಒಟ್ಟನಲ್ಲಿ ಅನೇಕ ಉದಾಹರಣೆಗಳನ್ನು ಕೊಟ್ಟು ಈ ಮಾಯಾ ಪ್ರಪಂಚದ ಸ್ಥಾನವನ್ನು ವಿಶದಗೊಳಿಸಿದ್ದಾರೆ. ಭಕ್ತಿಯೊಂದಿದ್ದರೆ ಸಾಕು ಆ ಶಾಶ್ವತವಾದ ಸುಖ ಪಡೆಯಲು, ಈ ಮಾಯಾಪ್ರಪಂಚದ ಕೋಟಲೆಗಳಿಂದ ದೂರವಿರಲು. ಆದರೆ ಅದರ ಕಡೆಗೆ ಜನರಿಗೆ ಗಮನವೇ ಇಲ್ಲ. ಹಾಗಾದರೆ ಈ ಜಗತ್ತು ಮಿಥ್ಯೆಯಾದುದೆ? ಅಲ್ಲ. ಹಾಗಲ್ಲ. ಈ ಪ್ರಾಪಂಚದಲ್ಲಿಯ ಎಲ್ಲವನ್ನೂ ಸ್ವೀಕರಿಸಿದರೂ ಅದಕ್ಕೆ ಅಂಟಿಕೊಳ್ಳದೆ ಆ ಪರದ ಬಗ್ಗೆ ಆಸ್ಥೆ ಇರಬೇಕು. ಏಕೆಂದರೆ ಅದು ಸುರತರು ಇದ್ದಹಾಗೆ. ಅದು ಶಾಶ್ವತ ಸುಖ ಕೊಡವ ವಿಷಯ. ಶಾಶ್ವತವಾದ ಸುಖಕ್ಕೆ ಮನ ಕೊಡಬೇಕೆ ಹೊರತು ನಶ್ವರವಾದ ಸುಖಕ್ಕೆ  ಅಲ್ಲ. ಏಕೆಂದರೆ ನಶ್ವರವಾದ ಸುಖ ಹೆಚ್ಚು ದಿನ ಉಳಿಯುವುದಿಲ್ಲ ಮತ್ತು ಇನ್ನೂ ಇನ್ನೂ ಸುಖ ಪಡೆಯುವ ಆಸೆಯನ್ನು ಹುಟ್ಟಿಸಿ ಕೋಟಲೆಗೆ ಒಳಗಾಗಿಸುತ್ತದೆ. ಅದಕ್ಕೆ ಕೊನೆಯೇ ಇಲ್ಲ.
ಇಲ್ಲಿ ಇಷ್ಟೊಂದು ಒಂದೇ ರೀತಿಯ ಉದಾಹರಣೆಗಳನ್ನು ಕೊಡುವ ಅವಶ್ಯಕತೆ ಇದೆಯೆ ಎನ್ನುವ ಪ್ರಶ್ನೆ ಹುಟ್ಟಬಹುದು. ಅದಕ್ಕೆ ಹೌದು ಎಂಬುದೇ ಉತ್ತರ. ಏಕೆಂದರೆ  ಭಕ್ತಿ ಅಥವಾ ಆ ಅರಿವಿನ ಬಗ್ಗೆ ಅಪಾರ ಪ್ರೀತಿ ಮತ್ತು ಆಳವಾದ ಹಂಬಲ   ಉಂಟಾಗಬೇಕಾದರೆ ಈ ಪ್ರಪಂಚದ ನಶ್ವರತೆ ಅರ್ಥವಾಗಬೇಕು. ಆ ಅರಿವಿನ ಬಗ್ಗೆ ಪ್ರೀತಿಯುಂಟಾಗುವುದು ಸುಲಭವಲ್ಲ. ಏಕೆಂದರೆ ಅದು ಅಮೂರ್ತವಾದದ್ದು. ಅದು ಮನಸ್ಸು ಸೂಕ್ಷ್ಮವಾದಾಗ ಅರಿವಿಗೆ ಬರುತ್ತದೆಯೇ ಹೊರತು ಕಣ್ಣಿಗೆ ಕಾಣುವುದಿಲ್ಲ. ಅದನ್ನು ಗುರುತಿಸುವುದು ಸುಲಭ ಸಾಧ್ಯವಲ್ಲ. ಆದ್ದರಿಂದ ಮೇಲೆ ಹೇಳಿದ ಅನೇಕ ರೀತಿಯ ಉದಾಹರಣೆಗಳನ್ನು ಕೊಡಬೇಕಾಗುತ್ತದೆ. ಅರಿವಿನ ಹಂಬಲವಿಲ್ಲದವರಿಗೆ ಈ ಉದಾಹರಣೆಗಳು ಪುನರಾವರ್ತನೆಗಳಂತೆ ತೋರುತ್ತವೆ. ನಮ್ಮ ಬದುಕಿನ ಪ್ರತಿಯೊಂದನ್ನೂ ಆಳವಾಗಿ ವಿಶ್ಲೇಸಿ ನೋಡಿದಾಗ ಇದು ಅರಿವಿಗೆ ಬರುತ್ತದೆ.