Friday, November 16, 2012

Vachana 116: Kudiyuva Neerennabahude – Indulgent


 
ಕುಡಿಯುವ ನೀರೆನ್ನಬಹುದೆ ಹುಡುಕುನೀರಲ್ಲದ್ದುವಾಗ?
ಆಡುವ ಕಿಚ್ಚೆನ್ನಬಹುದೆ ಮನೆಯ ಸುಡುವಾಗ?
ಒಡಲು ತನ್ನದೆನ್ನಬಹುದೆ ಪುಣ್ಯ ಪಾಪವನುಂಬಾಗ?
ಒಡಲಜೀವ ತನ್ನದೆನ್ನಬಹುದೆ ಇಕ್ಕಿ ಹೋಹಾಗ?
ಇವನೊಡನೆ ಬಡಿದು ಕಳೆ ಎಂದಾತ ಅಂಬಿಗರ ಚೌಡಯ್ಯ,

TRANSLITERATION

kuDiyuva nIrennabahude huDukunIralladduvaaga?
aaDuva kiccennabahude maneya suDuvaaga?
oDalu tannadennabahude puNya paapavanuMbaaga?
oDala jIva tannadennabahude ikki hOhaaga?
ivanoDane baDidu kale eMdaata aMbigara couDayya.

CLICK HERE TO READ-ALONG:


TRANSLATION (WORDS)

kuDiyuva (drinking)  nIrennabahude (can one say it is just water?) huDuku (hot water)nIralladduvaaga (while drowning)?
aaDuva (negligible, harmless) kiccennabahude (can one say it fire?) maneya suDuvaaga (while it is burning the house)?
oDalu (stomach) tannadennabahude (can one say it is my?)  puNya paapavanuMbaaga (while eating good and bad, doing good  and bad deeds)?
oDala jIva (my life)  tannadennabahude (can one call one’s own ?) ikki hOhaaga (while going leaving the body behind)?
Ivanu (these) oDane (immediately) baDidu kale (shake them away, get rid of) eMdaata (said) aMbigara couDayya (Ambigara Choudayya).
 

TRANSLATION

Can one say ‘it is just drinking water’ while drowning in hot water?
Can one say ‘it is just a harmless fire’ while it is burning the house?
Can one say ‘it is just my stomach’ while eating good and bad (i.e. performing good and bad deeds)?
Can one say ‘it is my own life’ while it is abandoning the body and going away?
Get rid of these (attachments) immediately said Ambigara Choudayya.

COMMENTARY

In this Vachana, Sharana Ambigara Choudayya examines our ways of life to impress on how we go wrong. He uses four examples to show how we forego the true happiness when consumed by trivial aspects in life.

Water is an important part of our lives. We cannot live without water. It has become fashionable to hold a bottle of water all through the day. It is a must for our lives. But, can we ignore its destructive power when we are drowning in hot water saying that it is ‘just drinking water’? In small (appropriate) volume water saves our lives; as a flood it kills us. Realization of these extremes of its power is a must! 

Fire can bring us a lot of enjoyment when it is small and utilitarian. It keeps us warm, cooks our food, lights our nights and is indispensable. But, can we ignore its power saying that ‘it is just a fire’ while it is burning the house? It is important to take precautions to make sure that we are not burnt by it. 

We stomach sour and sweet dishes. We enjoy both types in appropriate quantities. A heavy Indulgent in either kind brings us pain. So are the good and bad deeds we perform in our lives. 

Can we hold on to our ‘life’ when the body is taking its last breath? It is certainly beyond our control. If so, why make an all-out effort to stop it?   

Ambigara Choudayya urges us to be mindful of what we do and what we have. Use them at the level appropriate to their utility and make sure we are not consumed by them.   

 

Let us be ‘appropriate’, not ‘over indulgent’!

KANNADA COMMENTARY

ಇಂದಿನ ನಮ್ಮ ಬದುಕಿನ ರೀತಿಗೆ ಕನ್ನಡಿ ಹಿಡಿದು ನಮ್ಮ ತಪ್ಪಿನರಿವನ್ನುಂಟು ಮಾಡಿಕೊಡುವ ವಚನವಿದು. ಸೂಕ್ತವಾದ ಉದಾಹರಣೆಗಳನ್ನು ಕೊಟ್ಟು ನಾವು ಸಣ್ಣ ವಿಷಯಗಳೆಂದುಕೊಂಡವುಗಳು ಹೇಗೆ ನಮ್ಮನ್ನು ಆವರಿಸಿಕೊಂಡು ನಮ್ಮ ನಿಜವಾದ ಸುಖವನ್ನೇ ಹಾಳು ಮಾಡುತ್ತವೆ ಎಂಬುದನ್ನು ತೋರಿಸುತ್ತಿದ್ದಾರೆ ಅಂಬಿಗರ ಚೌಡಯ್ಯನವರು. 

“ಕುಡಿಯುವ ನೀರೆನ್ನಬಹುದೆ ಹುಡುಕುನೀರಲ್ಲದ್ದುವಾಗ?” ಎನ್ನುತ್ತಾರೆ. ನೀರು ಜೀವಿಗೆ ಅತಿ ಮುಖ್ಯವಾದದ್ದು. ಕುಡಿಯಲು ನೀರಿಲ್ಲದೆ ಬದುಕೇ ಅಸಾಧ್ಯ. ಹಾಗಾಗಿ  ನೀರನ್ನು ಪ್ರೀತಿಸುವುದು ಸಹಜ. ಆದರೆ ಆ ನೀರು ಬಿಸಿಯಾಗಿ ನಮ್ಮನ್ನು ಮುಳುಗಿಸುತ್ತಿರುವಾಗ “ಅದು ಕುಡಿಯುವ ನೀರು” ಎಂದು ಸುಮ್ಮನೆ ಇರಲು ಸಾಧ್ಯವೆ? ಹಾಗೆ ಸುಮ್ಮನೆ ಇದ್ದರೆ ಅದು ನಮ್ಮನ್ನು ಪೂರ್ತಿಯಾಗಿ ಮುಳುಗಿಸಿಬಿಡುತ್ತದೆ.  

“ಆಡುವ ಕಿಚ್ಚೆನ್ನಬಹುದೆ ಮನೆಯ ಸುಡುವಾಗ?” ಆಟ ಆಡುವ ಮಕ್ಕಳು ಯಾರಿಗೆ ತೊಂದರೆಯುಂಟುಮಾಡಲು ಸಾಧ್ಯ? ಅದೇ ರೀತಿ ಸಣ್ಣದಾಗಿ ಉರಿಯುವ ಕಿಚ್ಚಿನಿಂದ ಯಾರಿಗೂ ಅಪಾಯವಾಗುವುದಿಲ್ಲ. ಸ್ವಲ್ಪ ಸಮಯದನಂತರ ಅದು ತಾನಾಗಿಯೇ ಆರಿಹೋಗುತ್ತದೆ. ಆದರೆ ಮನೆಯನ್ನೇ ಸುಡುತ್ತಿರುವಾಗ ಅದನ್ನು ಆಡುವ ಕಿಚ್ಚು ಎಂದು ಸುಮ್ಮನಿರುವುದು ಸರಿಯೆ? ಹಾಗೆಂದು ಸುಮ್ಮನಿದ್ದರೆ ಅದು ನಮ್ಮ ಮನೆಯನ್ನೇ ಸುಟ್ಟುಬಿಟ್ಟು ನಮಗೇ ನೆಲೆಯಿಲ್ಲದಂತೆ ಮಾಡುತ್ತದೆ. 

“ಒಡಲು ತನ್ನದೆನ್ನಬಹುದೆ ಪುಣ್ಯಪಾಪವನುಂಬಾಗ?” ಹೊಟ್ಟೆ ನನ್ನದು ನಾನು ಏನು ಬೇಕಾದರೂ ತಿನ್ನುತ್ತೇನೆ ಎಂದು ಕೆಟ್ಟದ್ದನ್ನೂ

ಒಳ್ಳೆಯದನ್ನೂ ಬೇಕಾದಹಾಗೆ ತಿನ್ನಲು ಸಾಧ್ಯವೆ? ಒಳ್ಳೆಯದಾದರೂ ಆಗಲಿ ಕೆಟ್ಟದ್ದಾದರೂ ಆಗಲಿ ನನ್ನಿಷ್ಟಬಂದಂತೆ ನಾನು ನಡೆದುಕೊಳ್ಳುತ್ತೇನೆ ಎನ್ನಬಹುದೆ? ಹಾಗೇನಾದರೂ ಮಾಡಿದರೆ ಅದರ ಪರಿಣಾಮದಿಂದ ಕಷ್ಟಕ್ಕೊಳಗಾಗಬೇಕಾಗುತ್ತದೆ.  

“ಒಡಲ ಜೀವ ತನ್ನದೆನ್ನಬಹುದೆ ಬಿಟ್ಟು ಹೋಹಾಗ?” ಜೀವವು ದೇಹವನ್ನು ಬಿಟ್ಟು ಹೋಗುತ್ತಿರುವಾಗ “ಈ ಜೀವ ನನ್ನದು ನಾನು ಬಿಡಲಾರೆ” ಎನ್ನಲು ಸಾಧ್ಯವೆ? ಅದು ಹೇಗಾದರೂ ಹೋಗಿಯೇ ಹೋಗುತ್ತದೆ. ಆದ್ದರಿಂದ ಅದಕ್ಕೆ ಅಂಟಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. 

ತಮಗೆ ಪ್ರಿಯವಾದವುಗಳು, ಅನಿವಾರ್ಯವಾದವುಗಳು, ತನ್ನದೇ ಆಗಿರುವವಂತಹವುಗಳು ಎಲ್ಲವುಗಳನ್ನು ನಾವು ಅವುಗಳ ಮಿತಿಯನ್ನು ಅರಿತು ಅನುಭವಿಸಬೇಕು. ಅವುಗಳನ್ನು ಆಯಾ ಸ್ಥಾನಗಳಲ್ಲಿ ಇರಿಸಬೇಕು. ಅಲ್ಲದಿರೆ ಅವು ನಮ್ಮನ್ನೇ ನುಂಗಿಬಿಡುತ್ತವೆ. ಅವುಗಳು ಅತಿಯಾಗಿ ಹೆಚ್ಚಿ ನಮ್ಮನ್ನು ನುಂಗಲು ಬಂದಾಗ “ಬಡಿದು ಕಳೆ” ಎನ್ನುತ್ತ್ತಾರೆ ಅಂಬಿಗರ ಚೌಡಯ್ಯನವರು.
ನಮ್ಮ ಬದುಕಿನಲ್ಲಿ ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ನಮಗೆ ಬದುಕಿನಲ್ಲಿ  ಅನಿವಾರ್ಯವಾದವುಗಳು, ಪ್ರಿಯವಾದವುಗಳು, ಆಕರ್ಷಕವಾದವುಗಳು, ನಮ್ಮವು ಎಂದು ಭ್ರಮೆಹುಟ್ಟಿಸುವಂತಹವು ಅನೇಕ ವಿಷಯಗಳಿರುವವು. ಉದಾಹರಣೆಗೆ; ನಮ್ಮ ವೃತ್ತಿ, ಹವ್ಯಾಸ, ಮನೋರಂಜನೆಯ ಉಪಾಯಗಳು, ನಾನಾ ಅಭ್ಯಾಸಗಳು, ಪರಂಪರಾಗತ ರೀತಿ ನೀತಿಗಳು ಇತ್ಯಾದಿ. ಇವುಗಳು ನಮ್ಮನ್ನು ಆವರಿಸಿರುತ್ತವೆ. ಮೇಲುನೋಟಕ್ಕೆ ಇವೆಲ್ಲ ಅಡ್ಡಿಗಳಂತೆ ತೋರುವುದೇ ಇಲ್ಲ. ನಾವು ಅವುಗಳನ್ನು “ಕೇವಲ” ಎನ್ನುವ ದೃಷ್ಟಿಯಿಂದಲೇ ಕಾಣುತ್ತೇವೆ. ಅವು ಯಾವಾಗ ನಮ್ಮನ್ನು ಮುಳುಗಿಸಿ ಬಿಡುತ್ತವೆ ಎನ್ನುವುದು ತಿಳಿಯುವುದೇ ಇಲ್ಲ. 

ಅವು ನಮ್ಮನ್ನು ಮುಳುಗಿಸಿದರೆ ಏನಾಗುತ್ತದೆ? ಎಂಬ ಪ್ರಶ್ನೆ ಹುಟ್ಟುತ್ತದೆ. 

ಅವು ನಿತ್ಯ ಸುಖಕೊಡುವವಲ್ಲ. ಅವು ಕೊಡುವ ಸುಖಕ್ಕೆ ಕೊನೆ ಎಂಬುದು ಇದೆ. ಮೊದ ಮೊದಲು ಅವೆಲ್ಲ ಬಲು ಸುಖಕರವೆನಿಸುತ್ತವೆ. ಆದರೆ ನಿಧಾನವಾಗಿ ಅವು ತಮ್ಮ ಆಕರ್ಷಣೆ ಕಳೆದುಕೊಳ್ಳುತ್ತವೆ. ಮನಸ್ಸು ಅವುಗಳಿಂದ ವಿಮುಖವಾಗುತ್ತದೆ. ಶಾಂತಿ ಇಲ್ಲದಾಗುತ್ತದೆ. ಆದ್ದರಿಂದ ಅವುಗಳು ನಮ್ಮನ್ನು ಆವರಿಸಿಕೊಳ್ಳುತ್ತಿರುವಾಗಲೇ ಅರಿತುಕೊಂಡು ಅವುಗಳನ್ನು ಸರಿಯಾದ ಸ್ಥಾನದಲ್ಲಿರಿಸಬೇಕು ಎನ್ನುತ್ತಾರೆ ಅಂಬಿಗರ ಚೌಡಯ್ಯನವರು.

 

Friday, November 9, 2012

Vachana 115: Tarugala Muridu – The Formless


ತರುಗಳ ಮುರಿದು ಗಗನಕ್ಕೀಡಾಡುವ
ಅನಿಲ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಗಜ ಸಿಂಹ ಶಾರ್ದೂಲವೆಂಬ ಅಧಿಕ  ಮೃಗಂಗಳ ಮುರಿದೊತ್ತಿ ಕೆಡಹುತಿಪ್ಪ
ವ್ಯಾಧಿ  ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಕಾಣಲೀಯದೆ ಕೇಳಲೀಯದೆ ಅವಧಾನಂಗಳ ಕೆಡಿಸುತಿರ್ಪ
ನಿದ್ರೆ ರೂಪೋ ನಿರೂಪೋ ನೀವು ಹೇಳಿ ಭೋ!
ಇಂತು ಆಳಿನಾಳಿನ ಅಂತಸ್ಥವನಾರಿಗೂ ಅರಿಯಬಾರದು.
ಅನಾದಿಮೂಲದೊಡೆಯನ  ಬಲ್ಲೆನೆಂಬ ಪರಿ ಎಂತೋ?
ರೂಪೆಂದಡೆ ಶಬ್ದ ನಿರೂಪೆಂದಡೆ ಶೂನ್ಯ;
ಈ ಎರಡರ ಆದಿಯಿಂದತ್ತತ್ತ ಕಾಣಾ
ಎನ್ನ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು
ಗುರುಕಾರುಣ್ಯವುಳ್ಳವರಿಗಲ್ಲದೆ ಅರಿಯಬಾರದು.

TRANSLITERATION 

tarugaLa muridu gaganakkIDaaDuva
anila roopO niroopO ? ballaDe nIvu hELi bhO!
Gaja siMha shaardUlaveMba adhika mRugaMgaLa muridotti keDahutippa
Vyaadhi roopO niroopO? ballaDe nIvu hELibhO!
kaaNalIyade kELalIyade avadhaanaMgaLA keDisutirpa
nidre roopO niroopO? nIvu hELi bhO!
iMtu aaLinaaLina  aMtaMsthavanaarigU ariyabaaradu.
anaadimUladoDeyana balleneMba pari eMtO?
roopeMdaDe shabda nirooopeMdaDe shoonya,
I eraDara aadiyiMdattatta kaaNaa
Enna taMde kapilasiddhamallikaarjunaliMgavu
gurukaaruNyavuLLavarigallade ariyabaaradu. 

CLICK HERE TO READ-ALONG:


TRANSLATION (WORDS)

tarugaLa  (trees)  muridu (breaking)  gaganakkIDaaDuva (  that which throws in the sky)
anila (wind)  roopO (does it have a form) niroopO  (or is it formless)? ballaDe nIvu (if you know) hELi bhO! (please say sirs!)
Gaja (elephant) siMha (lion) shaardUla (tiger) veMba  (called) adhika (great) mRugaMgaL (animals) muridotti (breaking and pushing them to death) keDahutippa (striking down)
Vyaadhi (ailment, disease)  roopO (does it have a form) niroopO  (or is it formless)? ballaDe nIvu (if you know) hELi bhO! (please say sirs!)
kaaNalIyade (without letting to be seen) kELalIyade (without letting to be heard) avadhaanaMgaLA (consciousness,  intelligence) keDisutirpa (destroying)
nidre (sleep)  roopO (does it have a form) niroopO  (or is it formless)? ballaDe nIvu (if you know) hELi bhO! (please say sirs!)
iMtu (in this way)  aaLinaaLina  (servant of a servant) aMtaMsthavan (inward) aarigU (no one) ariyabaaradu  (will be able to comprehend).
anaadimUladoDeyana (the lord of that which is without beginning) balleneMba pari (saying“ I know” ) eMtO (how is it possible)?
roopeMdaDe (to give it a form) shabda (it is a word) nirooopeMdaDe (if considered formless) shoonya (it is nothing),
I (these) eraDara (of two)  aadiyiMdattatta ( it is far away from the origin)  kaaNaa (you see)
Enna (my)  taMde (father, Lord)  kapilasiddhamallikaarjunaliMgavu (the God  Chennamallikarjuna)
gurukaaruNya ( the benevolence of the Teacher, Guru)vuLLavarigallade (other than those who have) ariyabaaradu  (will not be aware, will not comprehend).
 

TRANSLATION

The wind that breaks the trees and throws them to the sky, does it have a form or is it formless? Please tell me Sir, if you know!
The disease that strikes and kills strong animals such as Elephant, Lion and Tiger, does it have a form or is it formless? Please tell me Sir, if you know!
The sleep that destroys the consciousness, without being seen or heard, does it have a form or is it formless? Please tell me Sir, if you know!
Thus, no one can comprehend the nature (secret) of the servant of the servant!
How is it possible to say that ‘I know the nature of that which is without beginning’?
If given a form, it is a word; if considered formless, it is nothing!
He is far away from the scope of both of these, you see!
Without the benevolence of the teacher one cannot comprehend my Lord KapilasiddhamallikaarjunaliMga

COMMENTARY

In this Vachana, Sharana Siddarameswara describes the formless God, through three examples.

The wind (hurricane) breaks the plants and trees and throws them towards the sky. Does the wind has a form or is it formless? The wind cannot be seen. But, we cannot say that it is not there, since we can see its effect. The disease pushes strong animals like Lion, Tiger and Elephant to their death. Does the disease has a form or is it formless? We cannot say that the disease is not there, since we can see its effect. Along the same lines, the sleep destroys the consciousness without being seen or heard. Does it have a form or is it formless? We cannot say that it is not there, since we feel its effect.  

Siddarameswara seems to be referring to Basavanna in the next line of the Vachana. Basavanna always called himself the servant of the (servants) devotees of Lord Shiva. Siddarameswara wonders how one can comprehend the formless God, when one cannot even comprehend the realized soul Basavanna who is right in front of (not formless) them.   

When we cannot comprehend the one with a form and in front of us, how can we comprehend that ultimate truth and that which is without a beginning? If we try to give Him a form, it just becomes a set of words. If we say He is formless, it implies ‘nothing’. Siddarameswara says that He is beyond the scope of both of these. The only way to comprehend Him is through the benevolence of a Guru, the teacher. Benevolence of the Guru is the light that emanates from within; it is the intense desire to realize the ultimate truth.

We addressed the concept of Guru in Vachana 87. It is said that the Guru looks out for disciple ready to receive the knowledge. It is also said that when an intense desire and thirst for knowledge and awareness appear in the disciple, the Guru appears. These concepts imply that the Guru is an individual. It is important to realize that the concept of Guru is a formless principal that comes to light, when one develops the intense desire to realize the ultimate. When that happens, the disciple starts examining everything with a new, subtle sight. He begins to admire the influence (effect) of some formless entity on and in everything.  Obtaining that subtle sight is the benevolence of the Guru.

Let us develop the subtle sight to see the ultimate truth!


ಈ ವಚನದಲ್ಲಿ ಸಿದ್ಧರಾಮೇಶ್ವರರು ನಿರಾಕಾರನಾದ ಕಪಿಲಸಿದ್ಧಮಲ್ಲಿಕಾರ್ಜುನನ ಬಗ್ಗೆ ಹೇಳುತ್ತಿದ್ದಾರೆ.
ತರುಗಳನ್ನು(ಮರಗಿಡಗಳನ್ನು) ಮುರಿದು, ಕಿತ್ತು ಆಕಾಶದಲ್ಲಿ  ಎಸೆಯುತ್ತದೆ  ಬಿರುಗಾಳಿ. ಆ ಗಾಳಿಗೆ ರೂಪವಿದೆಯೆ? ಅಥವಾ ಅದು ನಿರಾಕಾರವೆ? ಗಾಳಿ ಕಣ್ಣಿಗೆ ಕಾಣುವುದಿಲ್ಲ ಎಂದು, ಅದು ಇಲ್ಲವೆಂದು ಹೇಳಲು ಬರುವುದಿಲ್ಲ. ಏಕೆಂದರೆ ಅದರ ಪರಿಣಾಮವು ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ.

ಆನೆ, ಸಿಂಹ, ಹುಲಿ ಮುಂತಾದ ಬಲಶಾಲಿಗಳಾದ ಪ್ರಾಣಿಗಳನ್ನು ಬಾಧಿಸಿ ಸಾವಿಗೆ ನೂಕುವ ವ್ಯಾಧಿಗೆ ರೂಪವಿದೆಯೆ? ಅಥವಾ ಅದು ನಿರೂಪವೆ? ವ್ಯಾಧಿ ಕಣ್ಣಿಗೆ ಕಾಣುವುದಿಲ್ಲ ಎಂದು ಅದು ಇಲ್ಲವೆಂದು ಹೇಳಲು ಬರುವುದಿಲ್ಲ. ಏಕೆಂದರೆ ಅದರ ಪರಿಣಾಮವು ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ.  
ಕಣ್ಣಿಗೆ ಕಂಡೂ ಬರುವುದಿಲ್ಲ ಮತ್ತು ಕಿವಿಗೆ ಕೇಳಿಸುವುದೂ ಇಲ್ಲ. ಆದರೆ ಎಲ್ಲರಿಗೂ ಎಚ್ಚರ ತಪ್ಪಿಸುತ್ತದೆ ನಿದ್ರೆ.  ಅದಕ್ಕೆ ರೂಪವಿದೆ ಎನ್ನಬಹುದೆ ಅಥವಾ ರೂಪವಿಲ್ಲ ಎನ್ನಬಹುದೆ?
ಈ ಎಲ್ಲವುಗಳನ್ನು ಪೂರ್ತಿಯಾಗಿ ರೂಪವಿಲ್ಲದವು ಅಥವಾ ರೂಪವುಳ್ಳವವು ಎನ್ನಲು ಬರುವುದಿಲ್ಲ. ಅವುಗಳು ತೋರಿಬರುವ ವಿಧವು ಬೇರೆಯದು. ಅವು ಒಬ್ಬೊಬ್ಬರಲ್ಲಿ ಒಂದೊಂದು ಬಗೆಯಾಗಿ, ಒಂದೊಂದು ಸಮಯದಲ್ಲಿ ಒಂದೊಂದು ಬಗೆಯಾಗಿ ತೋರಿಬರುತ್ತವೆ. ಅವುಗಳ ರೂಪ ಅರಿಯುವುದು ಬಹು ಕಷ್ಟ. ಅವುಗಳ ಪರಿಣಾಮ ನಮ್ಮ ಮುಂದೆಯೇ ಇದ್ದರೂ “ಅವು ಹೀಗೆಯೇ” ಎಂದು ಹೇಳಲು ಬರುವುದಿಲ್ಲ.  

“ಇಂತು ಆಳಿನಾಳಿನ ಅಂತಸ್ಥವನಾರಿಗೂ ಅರಿಯಬಾರದು”  ಬಹುಶಃ ಈ ಮಾತನ್ನು ಅವರು ಬಸವಣ್ಣನವರನ್ನು ಕುರಿತು ಹೇಳುತ್ತಿದ್ದಾರೆ. ಬಸವಣ್ಣನವರು ತಮ್ಮನ್ನು “ಕೂಡಲಸಂಗಮದೇವನ ಕಿಂಕರರನ ಕಿಂಕರ ಅಥವಾ ತೊತ್ತಿನ ತೊತ್ತು” ಎಂದು
ಹೇಳಿಕೊಳ್ಳುತ್ತಾರೆ. ಅದನ್ನೆ ಇಲ್ಲಿ ಸಿದ್ಧರಾಮರು, ಅಂತಹ ಬಸವಣ್ಣನವರು ಎದುರಿಗೇ ಇದ್ದರೂ ಅವರನ್ನು ನಾವು ಪೂರ್ತಿಯಾಗಿ ತಿಳಿದುಕೊಳ್ಳಲಾಗುವುದಿಲ್ಲ ಎಂಬರ್ಥದಲ್ಲಿ ಹೇಳುತ್ತಿದ್ದಾರೆ.  

ಕಣ್ಣ ಮುಂದಿರುವವರನ್ನೇ ಪೂರ್ತಿಯಾಗಿ ಅರಿಯಲು ಸಾಧ್ಯವಿಲ್ಲದಾಗ ಆ ಅನಾದಿಮೂಲನನ್ನು ಬಲ್ಲೆವು ಎಂದು ಹೇಳಲು ಸಾಧ್ಯವೆ? ಆ ದೇವರು ಹಾಗೆ ಹೀಗೆ ಎಂದು ಹೇಳುವುದು ಸರಿಯೆ? ಆತನನ್ನು ರೂಪಹೊಂದಿರುವವನು ಎಂದು ಪದಗಳಲ್ಲಿ
ಹೇಳಲು ಹೋದರೆ ಅದು ಕೇವಲ ಪದವಾಗಿ, ಶಬ್ದವಾಗಿ ಉಳಿಯುತ್ತದೆ. ಆತನು ನಿರೂಪನು ಎಂದರೆ ಅದು ಶೂನ್ಯವಾಗುತ್ತದೆ.
ಸಿದ್ಧರಾಮರು, ತಮ್ಮ ಕಪಿಲಸಿದ್ಧಮಲ್ಲಿಕಾರ್ಜುನನು ಈ ಎರಡರಿಂದಲೂ ಬೇರೆ ಎಂದು ಹೇಳುತ್ತಾರೆ. ಆತನು, ರೂಪ ಅಥವಾ
ನಿರೂಪದ  ವ್ಯಾಪ್ತಿಯಿಂದ ಅತ್ತತ್ತ ಎಂದು ಹೇಳುತ್ತಾರೆ. ಆತನನ್ನು ಕಾಣಲು ಗುರುಕಾರುಣ್ಯವೇ ಮುಖ್ಯ ಎನ್ನುತ್ತಾರೆ. “ಗುರು
ಕಾರುಣ್ಯ” ವ್ಯಕ್ತಿಯ ಅಂತರಂಗದಲ್ಲಿ ಉದಿಸುವ ಬೆಳಕು, ಅದು ಸತ್ಯವನ್ನು ಕಾಣಬೇಕೆಂಬ ತೀವ್ರ ಜಿಜ್ಞಾಸೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು.

ಇಲ್ಲಿ ಹಿಂದೆ ೮೭ ನೆ ವಚನದ ವ್ಯಾಖ್ಯಾನದಲ್ಲಿ ಹೇಳಿದುದನ್ನು ನೆನಪಿಗೆ ತಂದುಕೊಳ್ಳುವುದು ಸೂಕ್ತವೆನಿಸುತ್ತದೆ:  ಗುರು ಕಾರುಣ್ಯವೆಂದರೇನು? ಅದು ಹೇಗೆ ಉಂಟಾಗುತ್ತದೆ? ಸಾಮಾನ್ಯವಾಗಿ ನಾವು ಗುರುಕಾರುಣ್ಯವೆಂದರೆ ಗುರು ವ್ಯಕ್ತಿಯ ರೂಪದಲ್ಲಿ ಬಂದು ಶಿಷ್ಯನಿಗೆ ಉಪದೇಶಿಸುತ್ತಾನೆ ಎಂದುಕೊಳ್ಳುತ್ತೇವೆ. ಗುರುವು ಶಿಷ್ಯನನ್ನು ಹುಡುಕಿಕೊಂಡು ಬರುತ್ತಾನೆ, ಶಿಷ್ಯನು ಹಂಬಲಿಸಿದರೆ ಸಾಕು ಗುರು ತಾನೇ ಸ್ವತಃ ಹುಡುಕಿಕೊಂಡು ಬಂದು ಕರುಣಿಸುತ್ತಾನೆ ಎಂಬಂತಹ ಮಾತುಗಳನ್ನು ಎಲ್ಲರೂ ಕೇಳಿರುತ್ತಾರೆ. ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಹಿಂದೆಯೇ ನಾವು ಗುರುವು ಕೇವಲ ವ್ಯಕ್ತಿಯಲ್ಲ, ಅಮೂರ್ತವಾದ ಬೆಳಕಾಗಿ ಬರುವ ತತ್ವ ಎಂಬುದನ್ನು ಕಂಡುಕೊಂಡಿದ್ದೇವೆ. ಯಾರಿಗೆ ಮನಸ್ಸಿನಲ್ಲಿ ಆ ತತ್ವವನ್ನು ಹೊಂದಬೇಕೆನ್ನುವ ಆಳವಾದ  ಹಂಬಲವಿರುತ್ತದೆಯೋ ಆತನಿಗೆ ದೈವಕೃಪೆಯಾಗುತ್ತದೆ. ಅಂದರೆ ಆತನ ಮನಸ್ಸು ಸೂಕ್ಷ್ಮವಾಗಿ ಎಲ್ಲವನ್ನೂ ಹೊಸ ದೃಷ್ಟಿಯಿಂದ ನೋಡಲುಪಕ್ರಮಿಸುತ್ತದೆ. ಆತನಿಗೆ ಜಗತ್ತಿನ ಪ್ರತಿಯೊಂದರಲ್ಲಿ ಬೇರೆ ಯಾವುದೋ ತತ್ವದ ಆಟ ಕಾಣುತ್ತದೆ. ಮೇಲು ನೋಟಕ್ಕೆ ಕಾಣುವುಷ್ಟೇ ಪೂರ್ಣ ಸತ್ಯವಲ್ಲ, ಅದನ್ನು ಮೀರಿದುದದೇನೋ ಕಾಣಿಸುತ್ತದೆ. ಈ ಸೂಕ್ಶ್ಮ ದೃಷ್ಟಿಯ ಲಾಭವೇ ಒಂದು ರೀತಿಯಿಂದ ಗುರು ಕಾರುಣ್ಯವೆಂದು ಹೇಳಬಹುದು.”

Friday, November 2, 2012

Vachana 114: karikeya kandu – The Jangama


ಕರಿಕೆಯ ಕಂಡು ಪಶುಗಳಾಶ್ರಯಿಸುವವು,
ಔತಣ ಕಂಡು ದ್ವಿಜರಾಶ್ರಯಿಸುವರು,
ಯುದ್ಧವ ಕಂಡು ಶೂರರಾಶ್ರಯಿಸುವರು,
ಸಭೆಯ ಕಂಡು ವಿದ್ವಾಂಸರಾಶ್ರಯಿಸುವರು,
ಇವರೆಲ್ಲ ಮಾಯಾ ಮೂಕರಲ್ಲದೆ ಮಾಯಾರಹಿತರಲ್ಲಯ್ಯಾ,
ಕಂಡು ಕಂಡು ಕಣ್ದೆರೆದು ನೋಡದ
ಮಹಾಮಹಿಮ ಜಂಗಮನ ಪಾದಕ್ಕೆ
ನಮೋ ನಮೋ ಎಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.

TRANSLITERATION

karikeya kaMDu pashugaLaashrayisuvsvu,
outaNa kaMDu dvijaraashrayisuvaru,
yuddhava kaMDu shooraraashrayisuvaru,
sabheya aMDu vidvaaMsaraashrayisuvaru,
ivarella maayaamUkarallade maayaarahitarallayyaa,
kaMDu kaMDu kaNderedu nODada
mahaamahima jaMgamana paadakke
namO namO eMbenayyaa kapilasiddhamallikaarjunaa

CLICK HERE TO READ-ALONG:

http://youtu.be/XFcm4eAR2eg

TRANSLATION (WORDS)

karikeya (grass) kaMDu (seeing)  pashugaLaashrayisuvsvu (animals go, fall for),
outaNa (feast) kaMDu (seeing) dvijaraashrayisuvaru (Brahmins go, fall for),
yuddhava (war)  kaMDu (seeing)  shooraraashrayisuvaru (brave, valiant go. fall for)
sabheya  (Congregation, assembly)  kaMDu (seeing)  vidvaaMsaraashrayisuvaru (scholars go,  fall for)
ivarella (all these are)  maayaamUkarallade  (dumbstruck by illusion but) maayaarahitarallayyaa (are not free of illusion)kaMDu (seeing ) kaMDu (seeing again and again) kaNderedu  nODada (not looking,being uninterested)
ahaamahima  (great)  jaMgamana  (the jangama) paadakke (to the feet of )
namO namO (salutations)  eMbenayyaa (I offer)
kapilasiddhamallikaarjunaa ( Oh, Kapilasiddhamallikarjuna)
TRANSLATION
Animals fall for the green grass,
Brahmins fall for the feast,
The valiant fall for the war,
The scholars fall for the assembly,
All these are dumbstruck by illusion; they are not free of it.
I offer my salutations to the feet of that great Jangama, who stays uninterested, even after multiple exposures to these! Oh, kapilasiddhamallikaarjunaa!

COMMENTARY 

Sharana Siddarameswara has illustrated the roles of the Guru (teacher), the disciple, the Linga (icon) and Jangama (the roaming ascetic) through the Vachanas in our previous postings. We have called Jangama a roaming ascetic, an illumined individual dedicating himself to spreading the awareness and knowledge to the community, a dynamic individual in the sense that his knowledge is not static, but keeps deepening and sharpening all the time. Thus, the immediate association of the tag of Jangama to an individual who happens to dress in saffron robes, chants the Lord’s names continuously and visits his disciples, is not accurate. Siddarameswara qualifies Jangama with four scenarios of common occurrence, in this Vachana.     

Animals are attracted by the green grass. It is their staple food. They quit all other activities when they see the green grass and start consuming it. That is the nature of the animal.

The role of Brahmin sect in the four-sect society was to be in charge of knowledge and impart it to others.  As a compensation for this activity, the society would offer them food and other items. As the times progressed, the Brahmin forgets his role in the society, but concentrates on food and feasts. This is not to ridicule all Brahmins as a sect. This is just an illustration of how great ideas turn into rituals. In turn this ritualistic living becomes the norm and accepted behavior.

The soldier is eager to get in the midst of war; he is more interested in exhibiting his bravery and might even create wars to satisfy himself that his bravery is noticed.

The scholar is fond of participating in assemblies and congregations to show off his knowledge. He never thinks in terms of using the knowledge he has to contain his ego , rather he enhances his ego in trying to exhibit his accomplishments.

Siddarameswara says that all the above instances indicate the participants consumed by illusion, rather than overcoming it. He offers salute to those individuals who do not get attracted by opportunities to just show off , rather they utilize their knowledge and awareness for containing the ego, realizing the ultimate truth and spreading it appropriately. He calls such individuals, the great Jangamas. These are the individuals who do not accept everything they come across freely. They examine and analyze every aspect of what they see very carefully, before accepting it. They are always awake and dynamic! 

Let us grasp the real purpose of what we see and what we have! 

KANNADA COMMENTARY 

ಇಲ್ಲಿ ಸಿದ್ಧರಾಮರು ಸಾಧಾರಣ ಮನುಷ್ಯರ ಮತ್ತು ಜಂಗಮರ ನಡುವಿನ ಅಂತರವನ್ನು ವಿವರಿಸುತ್ತಿದ್ದಾರೆ.  ಸಾಧಾರಣ ಮಾನವರು ಬಹು ಬೇಗ ಆಸೆಗಳಿಗೆ ಬಲಿಯಾಗುತ್ತಾರೆ. ಅವರು ತನುಗುಣಗಳಿಗೆ ಪಕ್ಕಾಗುತ್ತಾರೆ, ಆದರೆ ಜಂಗಮರು ಅವುಗಳ ಕಡೆಗೆ ಕಣ್ಣೆತ್ತಿಯೂ  ನೋಡರು ಎಂದು ಹೇಳುತ್ತಾರೆ. ಇಲ್ಲಿ ಕೆಲವು ಉದಾಹರಣೆಗಳನ್ನೂ ಕೊಡುತ್ತಾರೆ. ಪಶುಗಳು ಹಸುರು ಗರಿಕೆ ಹುಲ್ಲನ್ನು ನೋಡಿ ಆಕರ್ಷಿತಗೊಂಡು ಅದನ್ನು ಆಶ್ರಯಿಸುತ್ತವೆ. ಇದು ಪಶುಗಳ ಗುಣ.  ಆದರೆ ಅದೇ ರೀತಿಯಾದ ನಡತೆ ಮಾನವರಲ್ಲಿಯೂ ಕಂಡು ಬರುತ್ತದೆ ಎಂಬುದನ್ನುಹೇಳುತ್ತಿದ್ದಾರೆ. ಬ್ರಾಹ್ಮಣರು ಔತಣವನ್ನು ಕಂಡರೆ ಅಲ್ಲಿಗೆ ಹೋಗುವರು ಎನ್ನುತ್ತಿದ್ದಾರೆ. ಇದನ್ನು ಬ್ರಾಹ್ಮಣರ ಲೇವಡಿ ಎಂದು ಅರ್ಥಮಾಡಿಕೊಳ್ಳುವುದು ತರವಲ್ಲ. ಬ್ರಾಹ್ಮಣರು ಬ್ರಹ್ಮ ವಿದ್ಯೆಯನ್ನು ಪಡೆಯುವುದರಲ್ಲಿ ಮತ್ತು ಅದನ್ನು ಸಮಾಜಕ್ಕೆ ದಾನ ಮಾಡುದರಲ್ಲಿ ನಿರತರಾಗಿರುತ್ತಾರೆ.ಆದ್ದರಿಂದ ಅವರ ದೈಹಿಕವಾದ ಬೇಕುಗಳನ್ನು ನೋಡಿಕೊಳ್ಳುವುದು  ಸಮಾಜದ ಕರ್ತವ್ಯ. ಇದು ನಡೆದುಕೊಂಡು ಬಂದ ಪದ್ಧತಿ. ಆದರೆ ಕಾಲಾಂತರದಲ್ಲಿ ಅದು ಕೇವಲ ಪದ್ಧತಿಯಾಗಿ ಉಳಿದು ಬ್ರಾಹ್ಮಣನು ಬ್ರಹ್ಮ ವಿದ್ಯೆಯನ್ನು ಪಡೆಯುವುದನ್ನು ಬಿಟ್ಟು ಕೇವಲ ಪೌರೋಹಿತ್ಯವನ್ನು ಮಾಡುತ್ತ ಹೊಟ್ಟೆಗಾಗಿ ಪರದಾಡುವ ಪರಿಸ್ಥಿತಿಯುಂಟಾಯಿತು. ಬ್ರಾಹ್ಮಣ ಕೇವಲ ಕೆಲ ಅನುಷ್ಠಾನಗಳನ್ನು ಮಾಡುತ್ತ ಬ್ರಹ್ಮವಿದ್ಯ್ರೆಯನ್ನು ಗಳಿಸುವುದನ್ನು ಮರತೇ ಬಿಟ್ಟನು. ಆದ್ದರಿಂದ ಆತನೂ ಕೂಡ ಸಾಮಾನ್ಯನಂತೆ ಆಸೆಗಳಿಗೆ ಬಲಿಯಾಗುತ್ತಾನೆ ಎಂಬುದನ್ನು ಇಲ್ಲಿ ತಿಳಿಸುತ್ತಿದ್ದಾರೆ. ಈ ಮಾತು, ಕೇವಲ ವೇಷದಲ್ಲಿ ಜಂಗಮನಾಗಿರುವವನಿಗೂ ಅನ್ವಯಿಸುತ್ತದೆ. ಇನ್ನು ಶೂರನು ಯುದ್ಧವನ್ನು ಕಂಡರೆ ಸಾಕು ತನ್ನ ಶೌರ್ಯವನ್ನು ಮೆರೆಯಲು ಹಾತೊರೆದು ಹೋಗುತ್ತಾನೆ. ತನ್ನ ಶೌರ್ಯದ ಪ್ರದರ್ಶನವೇ ಆತನಿಗೆ ಮುಖ್ಯವಾಗುತ್ತದೆ. ವಿದ್ವಾಂಸನು  ಗೋಷ್ಠಿ ನಡೆಯುತ್ತಿರುವುದನ್ನು ಕಂಡರೆ ಅಲ್ಲಿ ತನ್ನ ವಿದ್ವತ್ತನ್ನು ಪ್ರದರ್ಶಿಸಲು ಹೋಗುತ್ತಾನೆ. ಅವರಿಗೆ ತಮ್ಮ ವಿದ್ವತ್ತಿನ ಪ್ರದರ್ಶನ ಮುಖ್ಯವಾಗುತ್ತದೆ. ಇಲ್ಲಿ ಮೊದಲ ಎರಡು ಉದಾಹರಣೆಗಳಲ್ಲಿ  ದೈಹಿಕ ಆಸೆ ತಣಿಸುವುದು ಮುಖ್ಯವಾಗುತ್ತದೆ. ಆಮೇಲಿನ ಎರಡು ಉದಾಹರಣೆಗಳಲ್ಲಿ ತಮ್ಮ ಅಹಂಕಾರವನ್ನು ತಣಿಸುವುದೇ ಮುಖ್ಯವಾಗುತ್ತದೆ. ಒಟ್ಟಿನಲ್ಲಿ “ತಾನು” ಎನ್ನುವುದು ಮುಖ್ಯವಾಗುತ್ತದೆ. ಅವರೆಲ್ಲರು ಮಾಯೆಗೊಳಗಾಗುತ್ತಾರೆ. ಆದರೆ (ನಿಜವಾದ) ಜಂಗಮರು ಈ ಆಕರ್ಷಣೆಗಳತ್ತ ಕಣ್ದೆರುದು ಕೂಡ ನೋಡುವುದಿಲ್ಲ ಎನ್ನುತ್ತಾರೆ. ಅಂತಹ ಜಂಗಮನಿಗೆ ನಾನು ನಮೋ ಎನ್ನುತ್ತೇನೆ ಎನ್ನುತ್ತಾರೆ ಸಿದ್ಧರಾಮರು. ಅಂದರೆ ತಮ್ಮ ಆಸೆಗಳಿಗೆ, ಅಹಂಕಾರಕ್ಕೆ ಬಲಿಯಾಗುವವರು ಸಾಮಾನ್ಯರು. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ ಆ ಆಕರ್ಷಣೆಗಳ ಕಡೆಗೆ ಕಣ್ಣೆತ್ತಿಯೂ ನೋಡದವನು ಶ್ರೇಷ್ಠ ಎಂಬುದನ್ನು ಇಲ್ಲಿ ಸಾರುತ್ತಿದ್ದಾರೆ. ಇಲ್ಲಿ “ಕಂಡು ಕಂಡು” ಎನ್ನುವ ಪದ ಬಹು ಮುಖ್ಯವಾದದ್ದು. ಇತರರು ಆಸೆಗಳಿಗೆ, ಅಹಂಕಾರಕ್ಕೆ ಬಲಿಯಾದವರು ಪಡುವ ಪಾಡನ್ನು ಕಂಡು, ಅದರಿಂದ ಯಾವ ಸುಖವೂ ಇಲ್ಲ ಎಂಬುದನ್ನು ಅರಿತು ಅದನ್ನು ಬಯಸದಿರುವುದು, ಆಸೆ ಅಹಂಕಾರಗಳು ಆತ್ಮ ಜ್ಞಾನವನ್ನು ಪಡೆಯುವ ದಾರಿಯಲ್ಲಿ ಅಡ್ಡಿಯಾಗುತ್ತವೆ ಎಂದು ಅರಿತುಕೊಳ್ಳುವುದು. ಇದು ಕೇವಲ ಜಂಗಮರಿಗೆ ಮಾತ್ರ ಸಾಧ್ಯ. ಏಕೆಂದರೆ ಅವರು ಯಾವದನ್ನೂ ಸುಲಭವಾಗಿ ಒಪ್ಪಿಕೊಂಡು ಅಂಗೀಕರಿಸುವುದಿಲ್ಲ. ಯಾವುದನ್ನೂ ಯಾಂತ್ರಿಕವಾಗಿ ಮಾಡುವವರಲ್ಲ.  ಎಲ್ಲವನ್ನೂ ತಳಮಟ್ಟದವರೆಗೆ ಪರೀಕ್ಷಿಸುವವರು. ಪ್ರತಿಯೊಂದನ್ನು ಒರೆಗೆ ಹಚ್ಚಿ ಸತ್ಯವನ್ನು ಕಂಡುಕೊಳ್ಳುವವರು. ಅವರು ಸದಾ ಎಚ್ಚರದಿಂದಿರುವರು. ಇಂತಹವರಿಗೆ ನಾನು ನಮೋ ನಮೋ ಎನ್ನುತ್ತೇನೆ ಎನ್ನುತ್ತಾರೆ ಸಿದ್ಧರಾಮರು.

Friday, October 26, 2012

Vachana 113: Guruvininda Lingava kandenallade - Dynamic Awareness


ಗುರುವಿನಿಂದ ಲಿಂಗವ ಕಂಡೆನಲ್ಲದೆ
ಲಿಂಗದಿಂದ ಲಿಂಗವ ಕಾಣಲಿಲ್ಲಯ್ಯಾ.
ಲಿಂಗದಿಂದ ಫಲಪದಂಗಳಲ್ಲದೆ
ಫಲಪದಂಗಳಿಂದ ಫಲಪದಂಗಳ ಕಾಣಲಿಲ್ಲಯ್ಯಾ,
ಜಂಗಮದಿಂದ ಮೋಕ್ಷವ ಕಂಡೆನಲ್ಲದೆ
ಮೋಕ್ಷದಿಂದ ಮೋಕ್ಷವ ಕಾಣಲಿಲ್ಲಯ್ಯಾ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ

TRANSLITERATION

guruviniMda liMgava kaMDenallade 
liMgadiMda  liMgava kaaNalillayyaa,
liMgadiMda phala padaMgaLallade 
phalapadaMgaLiMda  phalapadaMgala kaaNlillayyaa
jaMgamadiMda mOkShava  kaMDenallade
mOkShadimda mOkaShava kaaNalillayyaa nODaa 
kapilasiddhamallikaarjunaa.

CLICK HERE TO READ-ALONG:
http://youtu.be/xV-KU_tKVsw

TRANSLATION (WORDS)

guruviniMda  (through the Guru) liMgava (Limga, God)  kaMDenallade (realized but not, attained  but not)
liMgadiMda  (through the Linga, icon) liMgava ( God,) kaaNalillayyaa,(did not realize, Sir)
liMgadiMda (through the Linga, God)  phala padaMgaLallade  (awareness, realization as the product but not)
phalapadaMgaLiMda  (through  fruits and chanting)   phalapadaMgala (knowledge, fruitfulness) kaaNlillayyaa ( did not realize, Sir)
jaMgamadiMda (the which is moving and not static)  mOkShava (salvation)  kaMDenallade (realized but not)
mOkShadimda  (through  so called salvation)  mOkaShava (salvation)  kaaNalillayyaa nODaa (did not realize , atttain  Sir) nODaa (you see)
kapilasiddhamallikaarjunaa.(Kapilasiddhamallikarjuna)

TRANSLATION

I realized Linga (God) through the Guru,
I did not realize Linga (God) through the Linga (icon), oh Sir!
I attained knowledge (realization,fruitfulness) through the Linga (God),
I did not attain knowledge (fruitfulness) through fruits and chanting, oh Sir!
I attained salvation through the Jangama (dynamic, never static),
I did not attain salvation through the so called salvation, you see
Sir kapilasiddhamallikaarjunaa.

COMMENTARY

In this Vachana Sharana Siddarameswara   emphasizes the roles of Guru (Teacher) and Linga (icon), and clarifies the meaning of Jangama (the dynamic). In the first line of the Vachana he says that he realized Linga (God) through the teacher, but not through the Linga (icon). Recall that the role of Guru is to impart awareness to the disciple, mark the occasion with the offer of icon, and moving forward to other disciples. The disciple does not have any use for the icon once he has gained the awareness and lost his ignorance. As such, one does not realize Linga (God) through the Linga (icon). The Linga (icon) is simply a stone carved out of a larger stone. It does not offer anything if the awareness for what it stands for is forgotten.

The second line of the Vachana says that one attains the awareness (fruitfulness) through Linga (God), but not through offering fruits and chanting.  Siddarameswara is emphasizing that offering fruits and flowers and continuous chanting does not take one towards realization of God. 

The third line provides the meaning of Jangama as that which is not static. We have said that the Jangama is a realized ascetic who has taken the vow of spreading his realization to the community at large by moving from disciple to disciple. Siddarameswara interprets Jangama as the non-static awareness, meaning that the knowledge and what one knows should not stay static; it should continue to improve upon itself. One should not assume that he/she knows it all. The thirst for enhancing one’s awareness and knowledge should continue forever.  Siddarameswara says that one attains salvation by being dynamic. Moksha (salvation) is the ultimate state. As such it can be viewed as static.  Siddarameswara says that static nature does not lead to salvation.

It is said that Siddarameswara was a builder of temples and tanks. He was an avid worshipper of the static form of Shivalinga in these temples. He believed that building tanks as offering immense service to the community since these tanks became sources of water for the community.  Once Allama Prabhu meets him and makes him aware of a higher cause than just being a philanthropic citizen of the community. Siddarameswara takes Allama Prabhu as his Guru. This Vachana seems to illustrate his own experience and journey towards the realization of the ultimate principle.

Let us be aware and dynamic!

 KANNADA COMMENTARY

ಇದು ಸಿದ್ಧರಾಮೆಶ್ವರರ ಚಿಕ್ಕದಾದ ಆದರೆ ಬಹಳ ಸುಂದರವಾದ ಮತ್ತು  ಆಳವಾದ ಅರ್ಥವನ್ನು ಸುಲಭವಾಗಿ ತಿಳಿಸುವ ವಚನ. ಈ ವಚನದ ಮೊದಲನೆ ಸಾಲೇ ನಮ್ಮನ್ನು ಯೋಚಿಸಲು ಹಚ್ಚುತ್ತದೆ. “ಗುರುವಿನಿಂದ ಲಿಂಗವ ಕಂಡೆನಲ್ಲದೆ ಲಿಂಗದಿಂದ ಲಿಂಗವನ್ನು ಕಾಣಲಿಲ್ಲಯ್ಯಾ” ಎನ್ನುತ್ತಾರೆ ಅವರು. 

ದೇವರ ಕುರುಹಾದ ಲಿಂಗವನ್ನು ಕೈಯಲ್ಲಿ ಹಿಡಿದು ಕೇವಲ ಬಾಹ್ಯ ಪೂಜೆ ಮಾಡುವುದರಿಂದ ನಿಜವಾದ ಲಿಂಗವು (ಅರಿವು) ಕೈಗೂಡಲಿಲ್ಲ. ಗುರುವಿನ ಕಾರುಣ್ಯದಿಂದ ಮಾತ್ರ ಅದು ನನಗೆ ಲಭ್ಯವಾಯಿತು ಎನ್ನುತ್ತಾರೆ. ಲಿಂಗವನ್ನು ಕೈಯಲ್ಲಿ ಇಟ್ಟುಕೊಂಡು ಘಂಟಾನುಗಟ್ಟಲೆ ಪೂಜೆ ಮಾಡುವುದರಿಂದ ಯಾವ ಲಾಭವೂ ಇಲ್ಲ. ಎಷ್ಟೇ ಆದರು ಅದು ಕೇವಲ ಜೀವವಿಲ್ಲದ ಕಲ್ಲಿಂದ ಕಟೆದ ಲಿಂಗ. ಅದು ದೇವರ ಕುರುಹು ಮಾತ್ರ, ಆ ಕುರುಹಿನ ಹಿಂದೆ ಇರುವ ಅರಿವನ್ನು ತೋರಿಸಿ ಕೊಟ್ಟವನು ಗುರು. ಆದ್ದರಿಂದ ಆ ಗುರುವಿನಿಂದ ನಾನು ಲಿಂಗವನ್ನು ಕಂಡುಕೊಂಡೆ ಎನ್ನುತ್ತಾರೆ ಸಿದ್ಧರಾಮೇಶ್ವರರು. ಇಲ್ಲಿ “ಗುರು” ಎಂಬುದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹು ಮುಖ್ಯ.  ಸಿದ್ಧರಾಮೇಶ್ವರರ ಜೀವನದಲ್ಲಿ ಅಲ್ಲಮರು, ಒಂದು ರೀತಿಯಿಂದ ಮೊದಲ ಗುರುಗಳಾಗಿ ಬಂದರು. ಅವರು ದೀಕ್ಷೆ ಕೊಟ್ಟ ಗುರುಗಳಲ್ಲ. ಆದರೂ ಲೋಕಕಲ್ಯಾಣವೇ ಎಲ್ಲವೂ ಅಲ್ಲ ಎಂಬ ಅರಿವಿನ ಕಡೆಗೆ ಅವರ ಮನವನ್ನು ತಿರುಗಿಸಿದವರು ಅಲ್ಲಮರು. ಅವರಿಂದ ಸಿದ್ಧರಾಮರ  ಆಂತರ್ಯದಲ್ಲಿ ಉದಿಸಿದ ಜ್ಞಾನ, ಪ್ರತಿಯೊಂದನ್ನು ಒರೆಗೆ ಹಚ್ಚಿ ಸತ್ಯವನ್ನು ಕಂಡುಕೊಳ್ಳುವ ಗುಣ, ಯಾವುದನ್ನೂ ಯಾಂತ್ರಿಕವಾಗಿಮಾಡದೆ, ಸದಾ ಎಚ್ಚರದಿಂದಿರುವ ರೀತಿ, ಇದಕ್ಕಿಂತ ಹೆಚ್ಚಿನದು. ಅದು ನಿಜವಾದ ಗುರು, ಗುರು ತತ್ವ. ಅದರಿಂದಲೇ ಅವರಿಗೆ ಲಿಂಗದ ಜ್ಞಾನವಾಯಿತು. ಅವರು,ಇನ್ನೂ ಮುಂದುವರಿದು, ಅಂತಹ, ಅಂದರೆ ಆ ಗುರು ತೋರಿಸಿದ ಲಿಂಗದ ಮುಖಾಂತರ ನಾನು “ಫಲಪದಂಗಳ”ನ್ನು ಪಡೆದೆನೆ ಹೊರತು “ಫಲಪದಂಗಳಿಂದ” “ಫಲಪದಗಳ”ನ್ನು ಕಾಣಲಿಲ್ಲ ಎನ್ನುತ್ತಾರೆ. ಇಲ್ಲಿ ಮೊದಲನೆ ಸಲ ಬರುವ “ಫಲಪದಂಗಳು” ಎಂದರೆ, ಕುರುಹಿನ ಹಿಂದಿರುವ ಆ ಪರಮತತ್ವದ ಅರಿವು. ಗುರುವು ತೋರಿಸಿಕೊಟ್ಟ ಆ ವಿಶೇಷವಾದ ಲಿಂಗದ ಮುಖಾಂತರ  ಉಂಟಾಯಿತು, ಅರಿವೆಂಬ ಫಲ, ಅಜ್ಞಾನದ ಪದ ಹೋಗಿ ಜ್ಞಾನದ ಪದ ಪ್ರಾಪ್ತಿಯಾಯಿತು  ಎನ್ನುತ್ತಾರೆ. ಎರಡನೆ ಸಲ ಬರುವ “ಫಲಪದಂಗಳು” ಎಂಬ ಪದಕ್ಕೆ “ಹಣ್ಣು ಹಂಪಲು ಮತ್ತು ಸ್ತುತಿಪದ್ಯಗಳೆಂ”ಬ ಅರ್ಥವಿರುವುದು.  ಲಿಂಗಕ್ಕೆ ಬಾಹ್ಯ ಫಲಗಳನ್ನು, ಹಣ್ಣು ಹಂಪಲುಗಳನ್ನು ಅರ್ಪಿಸುವುದರಿಂದ ಮತ್ತು ಪದಗಳು ಅಂದರೆ ಸ್ತುತಿ ಪದ್ಯಗಳ ಮೂಲಕ ಪೂಜಿಸುವುದರಿಂದ ಅರಿವು ಉಂಟಾಗುವುದಿಲ್ಲವೆನ್ನುತ್ತಾರೆ.  “ಜಂಗಮದಿಂದ ಮೋಕ್ಷವ ಕಂಡೆನಲ್ಲದೆ ಮೋಕ್ಷದಿಂದ ಮೋಕ್ಷವ ಕಾಣಲಿಲ್ಲಯ್ಯಾ” ಎನ್ನುತ್ತಾರೆ. “ಜಂಗಮ”  ಎಂದರೆ ಸದಾ ಚಲಿಸುವಂತಹದು, ನಿಂತ ನೀರಿನಂತಲ್ಲದ್ದು. ನವ ನವೀನವಾದದ್ದು. ಈ ಹುಟ್ಟು ಸಾವಿನ ಚಕ್ರದಿಂದ ಮುಕ್ತಿಯನ್ನು  ಪಡೆಯ ಬೇಕಾದರೆ ಸದಾ ಬುದ್ಧಿ, ಮನಸ್ಸು ಜಾಗೃತವಾಗಿರಬೇಕೇ ಹೊರತು ಒಂದು ಸಲ ಯವುದನ್ನೋ ಅರಿತುಕೊಂಡು ಅದೇ ಕೊನೆ ಎಂದು ನಿರ್ಣಯಿಸಿ ಅಲ್ಲಿಯೇ ನಿಂತುಬಿಡುವುದಲ್ಲ. ಆ ಎಚ್ಚರವೇ ಜಂಗಮ. ಈ ಜಂಗಮ ತತ್ವದಿಂದಲೇ ಬಿಡುಗಡೆ ಸಾಧ್ಯ. ಅಂತಹ ಜಂಗಮ ತತ್ವದಿಂದ ಮೋಕ್ಷವ ಪಡೆದೆ ಎನ್ನುತ್ತಾರೆ. ಇಲ್ಲಿಯೂ ಸಹ “ಜಂಗಮ” ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವದು ಮುಖ್ಯ. ವಿಭೂತಿ, ರುದ್ರಾಕ್ಷಿ, ಕಾವಿ ಧಾರಿಯಾದ ವ್ಯಕ್ತಿಯನ್ನು ಮಾತ್ರ ಜಂಗಮವೆಂದುಕೊಂಡರೆ ಅದು ಅಜ್ಞಾನದ ಪರಮಾವಧಿ.  ಜಂಗಮ ತತ್ವ ಅರಿಯುವುದು ಮುಖ್ಯ. ಯಾಂತ್ರಿಕತೆಯನ್ನು ತ್ಯಜಿಸಿ ಸದಾ ಎಚ್ಚರದಿಂದಿರುವುದು ಜಂಗಮ ತತ್ವ. ಇದರಿಂದಲೇ  ಬಿಡುಗಡೆ ಸಾಧ್ಯ. ಆಮೇಲೆ ಸಿದ್ಧರಾಮರು “ಮೋಕ್ಷದಿಂದ ಮೋಕ್ಷವಲ್ಲ” ಎನ್ನುತ್ತಾರೆ. ಏನು ಹಾಗೆಂದರೆ. “ಲಿಂಗದ ಬಾಹ್ಯ ಪೂಜೆಯಿಂದ, ಸ್ತುತಿಗಳಿಂದ, ಫಲಪುಷ್ಪಗಳಿಂದ, ಗಂಧ, ದೀಪ ಧೂಪಗಳಿಂದ ತಪ್ಪದೆ ಪೂಜಿಸಿದರೆ ಮೋಕ್ಷ ಸಿಗುತ್ತದೆ ಎಂದು ಬಲವಾಗಿ ನಂಬಿ ಆ ನಂಬಿಕೆಯಿಂದ ಚಲಿಸದೆ, ಅದರಲ್ಲಿಯೇ ಮುಳುಗಿರುವುದರಿಂದ ಮೋಕ್ಷ ಸಿಗುತ್ತದೆ ಎಂಬುದು ಸಾಮಾನ್ಯವಾದ ಒಂದು ನಂಬಿಕೆ.ಇಂತಹ ನಾನಾ ನಂಬಿಕೆಗಳು ಜನರಲ್ಲಿ ಪ್ರಚಲಿತವಾಗಿವೆ. ಆದರೆ ಅವೆಲ್ಲವುಗಳಿಂದ ಅದು ಖಂಡಿತ ಸಾಧ್ಯವಿಲ್ಲ ಎನ್ನುತ್ತಾರೆ ಸಿದ್ಧರಾಮರು. ಅಂತಹುದರಿಂದ ನಾನು ಮೋಕ್ಷವನ್ನು ಕಾಣಲಿಲ್ಲಯ್ಯ ಎನ್ನುತ್ತಾರೆ. ಮೊದಲು ಸ್ಥಾವರ ಪೂಜೆಯಲ್ಲಿ ಮತ್ತು ಕೆರೆ ಅರವಟ್ಟಿಗೆಗಳನ್ನು ಕಟ್ಟಿಸಿ ಲೋಕಾಲ್ಯಾಣದ ಕಾರ್ಯದಲ್ಲಿ ನಿರತರಾದವರು ಅದರ ಸೀಮಿತ ಫಲವನ್ನು ಅರಿತು ಲಿಂಗದ ನಿಜವಾದ ಅರ್ಥವನ್ನು ಕೈಗೂಡಿಸಿಕೊಂಡ ಸಿದ್ಧರಾಮರು ತಮ್ಮ ಸ್ವಂತ ಅನುಭವವನ್ನೇ ಇಲ್ಲಿ ಹೇಳಿದ್ದಾರೆ.