Saturday, November 19, 2011

Vachana 64: Naanembudu Ahankaara - I and You

ನಾನೆಂಬುದು ಅಹಂಕಾರ, ನೀನೆಂಬುದು ಮಾಯೆ
ನಾನು ನೀನೆಂಬ ಉಭಯವಳಿದರೆ
ನಾನೆಂಬವನೂ ನೀನೆಂಬವನೂ ನೀನೇ ಅಯ್ಯ
ಇವೆರಡರ ಭೇದವೆಲ್ಲಿಯದೋ ಮಹಾಲಿಂಗ ಗುರು ಶಿವಸಿದ್ಧೇಶ್ವರಪ್ರಭುವೇ?

TRANSLITERATION

nAneMbudu ahaMkAra, nIneMbudu mAye
nAnu nIneMba uBayavaLidare
nAneMbavanU nIneMbavanU nInE ayya
iveraDara BEdavelliyadO mahAliMga guru SivasiddhESvarapraBuvE?

CLICK HERE TO HEAR IT
http://www.youtube.com/watch?v=hp635bBY2AQ

TRANSLATION (WORDS)

nAnu (I) eMbudu (so called) ahaMkAra (ego), nInu (you) eMbudu (so called) mAye (illusion)
nAnu(I) nInu (you) eMba(so called) uBayavu (both) aLidare(ended)
nAneMbavanU (the so called I) nIneMbavanU(the so called you) nInE (only you) ayya (my Lord)
iveraDara (between these two) BEdavelliyadO (where is the difference) mahAliMga (Lord superior) guru (teacher) Siva (Shiva) siddhESvara (the realized one) praBuvE (Lord)?

TRANSLATION

The I-ness is ego, the you-ness is illusion!
If both I and you are ended,
The so called I and the so called you are only You, my Lord!
Where is the difference between these two, Oh Lord mahAliMga guru SivasiddhESvarapraBu!

COMMENTARY

In this Vachana, Thontada Sri Siddalingeswara Swami comments on the barrier we create in our lives because of ‘I’ and ‘you’. He says, the I-ness is ego and the you-ness is illusion. When we end the I and you duality and understand that there is no difference between the two, we realize the two are one and the same: the Lord within. The basic reason for ego and illusion is the lack of knowledge and awareness. When the light of knowledge shines the illusion of the rope lying in darkness as a serpent goes away and we realize that it is really the rope. So does the ego.  
The ‘I’ envelops our lives completely. We say that I achieved this, I created this, this land is mine, I built this house, I earned this wealth, my children, etc. We create a partition of our own by being with individuals of our own profession, our own religion or faith, our own status in society, etc. We feel comfortable to be in this partition hoping that everyone within the partition are always supportive of our wellbeing and progress. We feel that the individuals from other partitions to be more of our competitors rather than supporters. Thus the I and you peaks create a gulf between the partitions. When we open our minds and observe others, we realize that the concepts of happiness and sorrow, big and small, rich and poor, success and failure, etc. are basically same in all the partitions, The I-you gap then begins to narrow. When life’s events prove to us that the individuals from other partitions come to our rescue equally well as those in our partitions, and those in our partition may not be as supportive as we thought, the I-you duality starts to vanish. We start feeling that we are all one and the same and realize the one Lord within all of us. Basavanna said “no one is inferior to me, no one is superior to the devotees of the Lord”.

Realizing that the soul within each of us (Jeevaatma - Anga) is a spark of the supreme soul (paramaatma - Linga), and the purpose of the individual soul is to eventually merge with the supreme (Linga-Anga Saamarsya), allows us to erase the gap of I and you. Further, recognizing that in this journey towards the supreme, each soul follows its own script, allows us to treat others just like we expect them to treat us. It gives us strength to walk in other’s shoes before we judge their actions.

Let us erase the ‘I – you’ gap!

KANNADA COMMENTARY

ಈ ವಚನ ತೋಂಟದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳದ್ದು. ಇಲ್ಲಿ “ನಾನು” “ನೀನು” ಎಂಬ ಭೇದಭಾವ ಯಾವಾಗ ಇರುತ್ತದೆ ಎಂಬ ವಿಷಯ ಹೇಳುತ್ತಿದ್ದಾರೆ. ನಾನು ಎಂಬುದು ಅಹಂಕಾರ ಮತ್ತು ನೀನು ಎಂಬುದು ಮಾಯೆ ಅಂದರೆ ಅಜ್ಞಾನ. ಅಜ್ಞಾನದಲ್ಲಿ ಮುಳುಗಿರುವದರಿಂದಲೇ ನಮಗೆ ಈ ಭೇದ ಕಾಣುವುದು. ನಾವೆಲ್ಲರೂ ಇರುವ ಸ್ಥಿತಿಯೇ ಇದು. ನಾವು ಯಾವಾಗಲೂ “ನಾನು” “ನನ್ನ” ಎಂಬ ಅಹಂಕಾರದಲ್ಲಿಯೇ ಇರುತ್ತೇವೆ. ಸದಾ ನಾವು, ಅದನ್ನು ಮಾಡಿರುವುದು ನಾನು, ಅದನ್ನು ಕೊಂಡಿರುವುದು ನಾನು, ಅದನ್ನು ಆರಿಸಿರುವುದು ನಾನು, ಅದನ್ನು ಹೇಳಿರುವುದು ನಾನು, ಅದನ್ನು ಕಲಿಸುತಿರುವುದು ನಾನು, ಅದನ್ನು ತಂದಿರುವುದು ನಾನು, ಇದು ನನ್ನ ವಸ್ತು, ನನ್ನ ದೇಶ,ನನ್ನ ಮನೆ, ನನ್ನ ಮಗ, ನನ್ನ ದೇವರು, ನನ್ನ ಧರ್ಮ, ನನ್ನ ವಿಚಾರ, ಇತ್ಯಾದಿಯಾಗಿ ಪ್ರತಿಯೊಂದನ್ನು ನಾನು ನನ್ನದು ಎಂದು ಹೇಳುತ್ತಲೇ ಇರುತ್ತೇವೆ. ಇದು ಅಹಂಕಾರದ ಅಭಿವ್ಯಕ್ತಿ. ಅಲ್ಲಿ “ನಾನು” ಬಿಟ್ಟು ಬೇರೇನೂ ಇಲ್ಲ. ಈ ನಾನು ನನ್ನದು ಎಂಬುದರ ವಿರುದ್ಧವಾಗಿ ನೀನು ನಿನ್ನದು ಎಂಬುದು ಇರಲೇ ಬೇಕಲ್ಲವೆ? ಹೀಗಾಗಿ ಅದು ನಾನು ನೀನು ನನ್ನದು ನಿನ್ನದು ಎಂಬ ಭೇದವನ್ನು ಸಹಜವಾಗಿಯೇ ಸೃಷ್ಟಿಸುತ್ತದೆ. ಒಟ್ಟಿನಲ್ಲಿ “ನಾನು” ಮತ್ತು “ನೀನು” ಎಂಬ ದ್ವೈತ ಭಾವ. ಈ “ನಾನು” “ನೀನು” ಎಂಬ ಭಾವ ಅಳಿದರೆ ಆ “ನೀನೇ ನಾನು” ಎಂಬ ಭಾವ ಅಳವಡುತ್ತದೆ, ಆ ಎರಡರಲ್ಲಿ ಯಾವ ಭೇದವೂ ಇರುವುದಿಲ್ಲ ಎನ್ನುತ್ತಾರೆ ಸಿದ್ಧಲಿಂಗೇಶ್ವರರು.

ನಾನು ನೀನು ಎಂಬ ಭೇದ ಉಂಟಾಗುವುದು ಹೇಗೆ? ಮತ್ತು ಅಳಿಯುವುದು ಹೇಗೆ? ನಾವೆಲ್ಲರೂ ನೋಡಲು ಬೇರೆ ಬೇರೆ ಯಾಗಿದ್ದೇವೆ; ನಮ್ಮ ಜನಾಂಗ, ಬಣ್ಣ, ಎತ್ತರ, ಭಾಷೆ, ಮುಖದ ಲಕ್ಷಣ ಇತ್ಯಾದಿಗಳು ಬೇರೆಯಾಗಿರುವವು. ಇದನ್ನು ಅಲ್ಲಗಳೆಯಲು ಸಾಧ್ಯವೆ? ಇಲ್ಲ. ಆದ್ದರಿಂದ ನಾನು ನೀನು ಎಂಬ ಭಾವ ಹುಟ್ಟುವುದು ಸಹಜ. ಆದರೆ ಎಲ್ಲರ ಮನಸ್ಸುಗಳು ಒಂದೇ. ಎಲ್ಲರ ಅನುಭವಗಳೂ ಒಂದೇಯಾಗಿರುತ್ತವೆ. ವಿಶ್ವಾದ್ಯಂತ ಎಲ್ಲರೂ ಹರ್ಷ, ದುಃಖ, ಚಿಂತೆ, ವ್ಯಾಕುಲತೆ, ಭಯ ಮುಂತಾದವುಗಳನ್ನು ಒಂದೇ ರೀತಿಯಾಗಿ ಅನುಭವಿಸುತ್ತಾರೆ. ಆಂತರಿಕವಾಗಿ ಅಲ್ಲಿ ಯಾವ ಭೇದವೂ ಇಲ್ಲ. ಭೇದವಿರುವುದೆಲ್ಲ ಮೇಲುನೋಟದಲ್ಲಿ ಮಾತ್ರ. ಆದರೆ ನಾವು ಮಾತ್ರ ಮೇಲೆ ಕಾಣುವುದನ್ನೇ ನಿಜವೆಂದು ನಂಬುತ್ತೇವೆ. ಇತರರಿಂದ ನಾವು ಬೇರೆ ಎಂದುಕೊಳ್ಳುತ್ತೇವೆ. ನಮ್ಮಂತೆ ಇರುವವರೊಂದಿಗೆ, ನಮ್ಮ ಮತಧರ್ಮದವರೊಂದಿಗೆ, ನಮ್ಮಂತೆ ವಿಚಾರಿಸುವರೊಂದಿಗೆ, ನಮ್ಮ ದೇಶದವರೊಂದಿಗೆ ನಮ್ಮನ್ನು ಗುರುತಿಸಿಕೊಂಡು ನಮ್ಮನ್ನು ನಾವು ಇತರರಿಂದ ಬೇರ್ಪಡಿಸಿಕೊಳ್ಳುತ್ತವೆ. ನಾವು ಒಂದು ಗುಂಪಿಗೆ ಸೇರಿರುವುದರಿಂದ ನಮಗೆ ಒಂದು ರೀತಿಯ ಸುರಕ್ಷತೆಯ ಭಾವ ಉಂಟಾಗುತ್ತದೆ. ಈ ಬೇರ್ಪಡಿಕೆಯಲ್ಲಿ ನಾವುಗಳು ಭದ್ರವಾಗಿದ್ದೇವೆ ಎಂದು ಕೊಳ್ಳುತ್ತೇವೆ. ಆದರೆ ಈ ಯಾವುವೂ ನಮಗೆ ಭದ್ರತೆಯನ್ನು ಒದಗಿಸುವುದಿಲ್ಲ. ಏಕೆಂದರೆ ಬೇರೆ ಗುಂಪಿನವರಿಂದ, ಬೇರೆ ಜನಾಂಗದವರಿಂದ, ಬೇರೆ ಧರ್ಮದವರಿಂದ ಮಾತ್ರವಲ್ಲದೆ ನಮ್ಮವರಿಂದಲೂ ಕೂಡ ನಮಗೆ ಹಾನಿಯಾಗುವ, ನೋವಾಗುವ ಸಂಭವವಿರುತ್ತದೆ. ವಾಸ್ತವವಾಗಿ ನಾವು ಎಣಿಸುವಂತಹ ಭದ್ರತೆ ಎಂಬುದು ಇಲ್ಲವೇ ಇಲ್ಲ. ವಿಚಾರವು, ವಾಸ್ತವವಾಗಿ ಇಲ್ಲದ ಭದ್ರತೆಯನ್ನು ಪಡೆಯಬೇಕೆಂದು ಮನಸ್ಸನ್ನು ಪ್ರೇರೇಪಿಸುತ್ತದೆ. ನಾವುಗಳು ನಾನಾ ರೀತಿಯಲ್ಲಿ ಕಟ್ಟಿಕೊಂಡ ಭದ್ರತೆಯ ಗೋಡೆ ಒಂದಿಲ್ಲ ಒಂದು ದಿನ ಕುಸಿದು ಬೀಳುತ್ತದೆ. ಅದನ್ನು ಯಾರೂ ತಡೆಯಲಾರರು. ಯಾವಾಗ ನಾವು ಇದನ್ನು ಆಳವಾಗಿ ಅರಿಯುತ್ತೇವೆಯೋ, ಅಂದರೆ ನಮಗೆ ಏಕೆ ನೋವಾಗುತ್ತದೆ, ಆ ನೋವನ್ನು ತಪ್ಪಿಸಬಹುದೇ? ಎಂಬುದನ್ನು ಆಳವಾಗಿ ಅರಿಯುತ್ತೇವೆಯೋ ಆಗ ನಾವು ಭದ್ರತೆಗಾಗಿ ಆಸೆ ಪಡುವುದು ಕೊನೆಗೊಳ್ಳುತ್ತದೆ. ಆಗ ಎಲ್ಲದರಲ್ಲಿಯೂ ನಮಗೆ ವಿರುದ್ಧವಾದುದು ಏನೂ ಕಂಡು ಬರುವುದಿಲ್ಲ. ಆ ಅರಿವು ಉಭಯ ಭೇದವಳಿಯಲು ಸಹಾಯಕವಾಗುತ್ತದೆ. ಆ ಎರಡರ ಭೇದ ಅಳಿದರೆ ನೀನೇ ನಾನು ಎಂಬುದು ಅಳವಡುತ್ತದೆ.














Friday, November 11, 2011

Vachana 63: Vichaaravembudu - Thought

ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ!
ವಿಚಾರಿಸುವನ್ನಕ್ಕರ ನೀನಾನೆಂಬುದನೆತ್ತ  ಬಲ್ಲೆ?
ಮರುಳೆ, ವಾಙ್ಮನೋತೀತವಾದ ಘನವು ವಿಚಾರಕ್ಕೆ ನಿಲುಕುವುದೇ?
ಗುಹೇಶ್ವರಲಿಂಗವು ತನ್ನ ತಿಳಿದು ನೋಡಿಹೆನೆಂಬವರ ವಿಚಾರದ ಬಲೆಯಲ್ಲಿ ಕೆಡಹಿದನು!

TRANSLITERATION

vicAraveMbudu saMdEhakkoLagu nODA !
vicArisuvannakkara nInAneMbudanetta balle? 
maruLe, vA~gmanOtItavAda Ganavu vicArakke nilukuvudE? 
guhESvaraliMgavu tanna tiLidu nODiheneMbavara vicArada baleyalli keDahidanu!

CLICK HERE TO HEAR IT:

http://www.youtube.com/watch?v=S3yEeMcOPzk

TRANSLATION (BY WORDS)

vicAravu (thought) eMbudu (so called) saMdEhakke (doubt) oLagu (part of, arises) nODA (you see) !
vicArisuvannakkara (by thinking)  nInu (you) Anu (I) eMbudanu (so called) etta (how) balle (will you know)? 
maruLe (oh fool), vA~g (speech) manO (mind) atItavAda (beyond)  Ganavu (profound, self) vicArakke (for thought) nilukuvudE (grasped by)? 
guhESvaraliMgavu (Lord of caves) tanna (self) tiLidu (understood) nODihenu (have seen) eMbavara (those who say) vicArada (of thought) baleyalli (in the net) keDahidanu (tripped them over)!


TRANSLATION

Thought arises when there is doubt, you see!
By thinking, how will you realize that you and I are one?
Oh fool! Can the profound (self),  which is beyond  speech and mind be grasped by thought?
The Lord of Caves  has put  those  that claim to have seen and understood self, in to  the net of thought!


COMMENTARY

In this Vachana, Allama Prabhu says that ‘thought’ cannot bring about realization of the Self (i.e. the Lord within). Thoughts occur when there are doubts or when there is no clarity. In fact, we are always immersed in thoughts, implying that we are always in doubt or lack of clarity. Further, our thoughts are not independent, but are results of our experiences and memories. They get modified by time, place, culture, experiences, memories, etc. Thoughts bring in the duality of you and me.  Allama Prabhu asks, how can these thoughts being bearers of duality, can result in the realization of the unbound, unified state of ‘you and I are one and the same’?

Allama Prabhu says that the profound (Self) is beyond the limits of speech and mind. Speech and mind are within the boundary of thoughts in the sense that the speech expresses thoughts and mind is influenced by thoughts. Both are always in the mode of argument and questioning rather than the state of clarity and calmness required realizing the Lord within.  Allama Prabhu says that, those who claim that they have seen the Lord within or have achieved  self-realization, are in fact,  trapped in the network of thought.

Philosopher J. Krishnamurti  has addressed the issue of thoughts extensively. Please scroll down to Kannada commentary for some excerpts (in English) from his addresses.

Let us break the network of thought and move towards self-realization!


KANNADA COMMENTARY

ಶರಣರ ವಚನಗಳನ್ನು ಓದುತ್ತಿರುವಾಗ ನನ್ನ ದೃಷ್ಟಿ ಅಕಸ್ಮಾತ್ತಾಗಿ  ವಿಚಾರದ ಬಗ್ಗೆ ಅಲ್ಲಮರು ಬರೆದಿರುವ ಈ ವಚನದ ಮೇಲೆ ಬಿದ್ದಿತು. ಒಮ್ಮಿಲೆ ನನ್ನ  ಮೈ ಜುಮ್ಮೆಂದಿತು. ಏಕೆಂದರೆ ಕೆಲವು ದಿನಗಳ ಹಿಂದೆಯಷ್ಟೆ ನಾನು ಜೆಕೆಯವರ “The Network of Thought” ಅನ್ನು ಓದುತ್ತಿದ್ದೆ. ಜೆಕೆಯವರು ವಿಚಾರದ ಬಗ್ಗೆ ವಿಶ್ವಾದ್ಯಂತ ವರ್ಷಾನುಗಟ್ಟಲೆ ಮಾತನಾಡಿದ್ದಾರೆ.  ಅವರು ಹೇಳಿದ ವಿಷಯದ ಸಾರವನ್ನೇ  ಹನ್ನೆರಡನೆ  ಶತಮಾನದಲ್ಲಿ ಅಲ್ಲಮರು ಈ ವಚನದಲ್ಲಿದೆ ಹೇಳಿದ್ದಾರೆ. ಅದನ್ನೇ  ಎಲ್ಲರೊಂದಿಗೆ ಹಂಚಿಕೊಳ್ಳಬೇಕೆನಿಸಿತು.

“ಘನ”ವನ್ನು (ಲಿಂಗವನ್ನು, ತನ್ನನ್ನು ತಾನು) ವಿಚಾರದಿಂದ ತಿಳಿದುಕೊಳ್ಳುವುದು ಸಾಧ್ಯವಿಲ್ಲ ಎನ್ನುತ್ತಾರೆ ಅಲ್ಲಮಪ್ರಭುಗಳು. ಏಕೆಂದರೆ ವಿಚಾರವು ಸಂದೇಹಕ್ಕೆ ಒಳಗಾಗಿರುತ್ತದೆ. ಅಂದರೆ  ಯಾವಾಗ ನಮ್ಮ ಮನದಲ್ಲಿ ಸಂದೇಹ ವಿರುತ್ತದೆಯೋ ಆಗ ನಾವು ವಿಚಾರಿಸಲು ಆರಂಭಿಸುತ್ತೇವೆ. ಸ್ಪಷ್ಟತೆಯಿಲ್ಲದಿದ್ದಾಗ ವಿಚಾರ  ತಲೆ ಎತ್ತುತ್ತದೆ. ನಮ್ಮನ್ನೇ  ನಾವು ಗಮನಿಸಿ ನೋಡಿದಾಗ ತಿಳಿದುಬರುವುದೇನೆಂದರೆ ನಾವು ಸದಾ ವಿಚಾರದಲ್ಲಿಯೇ ಮುಳುಗಿರುತ್ತೇವೆ. ಅಂದರೆ ಸದಾ ನಮ್ಮ ಮನದಲ್ಲಿ ಸಂದೇಹವಿದೆ ಎಂದಾಯಿತು. ಮತ್ತು ವಿಚಾರವು ಸ್ವತಂತ್ರವೂ ಅಲ್ಲ.  ಏನು ಹಾಗೆಂದರೆ?  ವಿಚಾರವು ನಮ್ಮ ಅನುಭವ ಮತ್ತು ನೆನಪುಗಳ ಪರಿಣಾಮ. ನಮ್ಮ ಸಂಸ್ಕೃತಿ, ದೇಶ, ಕಾಲ, ಧರ್ಮ, ಜಾತಿ, ಅನುಭವ, ನೆನಪುಗಳಿಗೆ ತಕ್ಕಂತೆ ವಿಚಾರವು ರೂಪುಗೊಳ್ಳುತ್ತದೆ. ಇವುಗಳನ್ನು ಬಿಟ್ಟು ವಿಚಾರವಿಲ್ಲ. ಈ ವಿಚಾರವೇ “ನೀನು” “ನಾನು” ಎಂಬ ಭೇದ ಭಾವವನ್ನು ಸೃಷ್ಟಿಸಿದೆ.   ಅದು ಯಾವಾಗಲೂ “ನನ್ನ” “ನಿನ್ನ” ಎಂಬ ನೆಲೆಯಿಂದಲೇ ಕೆಲಸಮಾಡುತ್ತದೆ. ಆದ್ದರಿಂದ ವಿಚಾರವು ಸ್ವತಂತ್ರವಲ್ಲ. ಸ್ವತಂತ್ರವಲ್ಲದ ವಿಚಾರದ ಮೂಲಕ “ಅರಿವು” (ಯಾವ ಬಂಧನವೂ ಇಲ್ಲದ ಸ್ಥಿತಿ) ಪಡೆಯುವುದು ಹೇಗೆ ಸಾಧ್ಯ?  ವಿಚಾರದಿಂದ  “ನೀನೇ ನಾನು” ಎಂಬುದನ್ನು ಅರಿಯಲು ಬರುವುದಿಲ್ಲ. ಎಲ್ಲಿಯವರೆಗೆ ವಿಚಾರದ ಪ್ರಭಾವ ವಿರುತ್ತದೆಯೊ ಅಲ್ಲಿಯವರೆಗೆ “ನೀನು” “ ನಾನು”  ಬೇರೆ ಬೇರೆ ಎಂಬ ಭಾವ ಮನೆಮಾಡಿರುತ್ತದೆ. ಐಕ್ಯಭಾವ ವಿಚಾರದಿಂದ ಅಳವಡುವುದಿಲ್ಲ. 

ಇದನ್ನು ಜೆಕೆಯವರು ಹೀಗೆ ಹೇಳುತ್ತಾರೆ.
 “………. the `you', the ego, the `me', is altogether memory. There is no spot or space in which there is clarity.............. the fact is that our whole existence is entirely memory, remembrances. There is no spot or space inwardly which is not memory.............” 
“......Thought, to the human being, is astonishingly important; and thought itself is limited; its action is to bring about fragmentation - the fragmentation between people - my religion, my country, my god, my belief as opposed to yours, all that is the movement of thought...............”
“ ........Thought is the response of the memory of things past; it also projects itself as hope into the future. Memory is knowledge; knowledge is memory of experience. That is, there is experience, from experience there is knowledge as memory, and from memory you act. From that action you learn, which is further knowledge. So we live in this cycle - experience, memory, knowledge, thought and thence action - always living within the field of knowledge.” (The Network of Thought –J. Krishnamurti)

ಘನವು ಮಾತು ಮತ್ತು ಮನಸ್ಸಿಗೆ ನಿಲುಕದಂತಹದು ಎನ್ನುತ್ತಾರೆ ಅಲ್ಲಮಪ್ರಭುಗಳು. ಮಾತು ಮತ್ತು ಮನಸ್ಸು ಕೂಡ ವಿಚಾರದ ಪರಿಧಿಯಲ್ಲಿಯೇ ಬರುತ್ತದೆ. ವಾಕ್ಕು ಎಂದರೆ ಮಾತು ಮತ್ತು ಮನಸ್ಸು ಕೂಡ ಮೇಲೆ ಹೇಳಿದ ಅನೇಕ ವಿಷಯಗಳಿಂದ ಪ್ರಭಾವಗೊಂಡಿರುತ್ತವೆ.  ಪ್ರಭಾವಕ್ಕೆ ಒಳಗಾದ ಮನಸ್ಸು  ತನ್ನ ಪ್ರಭಾವದ ಬಲೆಯಲ್ಲಿಯೇ ಸುತ್ತುತ್ತದೆ. ಅದು ಕೇವಲ ತರ್ಕಮಾಡಲು ತಿಳಿದಿರುತ್ತದೆಯೇ ಹೊರತು ಅದನ್ನು ಮೀರಿ ಹೋಗುವುದಿಲ್ಲ. ಆದರೆ ಘನವು  ವಾಕ್ಕು ಮತ್ತು ಮನಸ್ಸನ್ನು ಮೀರಿರುವುದು, ತರ್ಕವನ್ನು ಮೀರಿರುವುದು.  ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ?

“ A religious mind is a very factual mind; it deals with facts, with what is actually happening with the world outside and the world inside. The world outside is the expression of the world inside; there is no division between the outer and the inner. A religious life is a life of order, diligence, dealing with that which is actually within oneself, without any illusion, so that one leads an orderly, righteous life..............
“.........There is no system, no practice but the clarity of perception of a mind that is free to observe, a mind which has no direction, no choice..........” (The Network of Thought – J. Krishnamurti) 

ಘನವನ್ನು ಅರಿಯುವುದು ಎಂದರೆ  ತಥ್ಯವನ್ನು ಹಂಬಲಿಸುವುದು.  ವಾಸ್ತವವಾಗಿ ನಡೆಯುತ್ತಿರುವುದರಲ್ಲಿ ಆಸಕ್ತಿ ಹೊಂದಿರುವುದು. ಅದನ್ನು ಕಂಡುಕೊಳ್ಳಲು  ಮನದಲ್ಲಿ ಸ್ಪಷ್ಟತೆಯಿರಬೇಕು. ವಿಚಾರವಿದ್ದಲ್ಲಿ ಸ್ಪಷ್ಟತೆಯಿರುವುದಿಲ್ಲ. ಯಾರು  ವಿಚಾರದ ಮೂಲಕ ಘನವನ್ನು, ಲಿಂಗವನ್ನು ಅರಿತಿದ್ದೇನೆ ಎಂದು ಹೇಳುವರೋ ಅವರು ವಾಸ್ತವವಾಗಿ ಇನ್ನೂ ಹೆಚ್ಚು ಸಂಕೀರ್ಣವಾದ  (complex)ವಿಚಾರಗಳ ಬಲೆಯಲ್ಲಿ ಸಿಲುಕಿರುತ್ತಾರೆ, ಎನ್ನುತ್ತಾರೆ ಅಲ್ಲಮಪ್ರಭುಗಳು.  ಏಕೆಂದರೆ ಅಲ್ಲಿ “ಅರಿವು” ಮತ್ತು “ಅರಿತಿರುವವನು” ಎಂಬ ದ್ವೈತ ಭಾವ ವಿರುತ್ತದೆ. ಇದು ವಿಚಾರದ ಪರಿಣಾಮ. 

Friday, November 4, 2011

Vachana 62: Otti Hanna Maadidade - True Realization


ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೋ?
ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೇ ಭಂಗ
ಭಾವಿಸಿದ ಭಾವನೆಗಿಂತ ಸಾವುದೇ ಲೇಸು ಕಾಣಾ ಗುಹೇಶ್ವರಾ

TRANSLITERATION

otti haNNa mADidaDe adettaNa ruciyappudO?
kAmisi kalpisi BAvisidaDe adE BaMga
BAvisida BAvanegiMta sAvudE lEsu kANA guhESvarA

CLICK HERE TO HEAR IT:

http://www.youtube.com/watch?v=PDf_77izXRY

TRANSLATION

otti ( by pressing) haNNa mADidaDe (if ripened) adettaNa(how can it be) ruciyappudO (delicious)?
kAmisi (wanting, longing) kalpisi (imagining) BAvisidaDe (assuming) adE(that is) BaMga (incorrect)
BAvisida(to have an assumed) BAvanegiMta(instead of the assumption) sAvudE(dying) lEsu(is better) kANA(you see) guhESvarA(the Lord of caves)

Can a raw fruit be ripened and made delicious by pressing it?
It is wrong to long (want), imagine and assume!
Dying is better than being full with assumptions, you see, the Lord of Caves!


COMMENTARY

A fruit should take its natural course and ripe. Only then it is delicious to consume. If we did not let it ripe, but press it and squeeze it in an effort to ripen it faster, we succeed in making it softer, but not delicious. It is better not to eat such squeezed raw fruit, since we will never experience its true taste. Longing for the taste of the fruit, imagining its taste, and assuming that we can get it through our efforts of pressing it, do not yield the proper result. The fruit must be ripe to be delicious.

Along the same lines, in achieving the spiritual maturity, imagining, longing and assuming that we have achieved it is not the way. In this Vachana, Allama Prabhu says that dying is better than just imagining, longing and assuming spiritual maturity. Imagination, longing and assumption are due to our thoughts and purturbances of the mind. They are not natural.  When these disturbances are relieved, one attains the natural calmness of the mind. Just as the fruit requires an environment favorable for it to ripe and become delicious, the devotee needs an environment attain the calmness. This state of a true devotee on attaining spiritual maturity is like a ripened fruit. He becomes one with the Lord who is beyond imagination, beyond assumptions and beyond longings. 

Let us 'let it happen'!


KANNADA COMMENTARY

ಇಲ್ಲಿ ಅಲ್ಲಮಪ್ರಭುಗಳು ಮಾನವನ ಮನಸ್ಸು ವಿಚಾರಕ್ಕೆ ಒಳಗಾಗಿ ಏನೇನು ಮಾಡಿ ಮೋಸಹೋಗುತ್ತದೆ ಎನ್ನುವುದನ್ನು ಸುಂದರವಾದ ಉದಾಹರಣೆಸಹಿತ ತಿಳಿಸುತ್ತಾರೆ. ಕಾಯಿಯನ್ನು ಒತ್ತಿ ಒತ್ತಿ ಹಣ್ಣು ಮಾಡಿದರೆ ಅದಕ್ಕೆ ಸಹಜವಾಗಿ ಪಕ್ವವಾದ ಹಣ್ಣಿನ ರುಚಿ ಬರಲು ಸಾಧ್ಯವೆ? ಒತ್ತಿದ್ದರ ಪರಿಣಾಮವಾಗಿ ಗಟ್ಟಿಯಾದ ಕಾಯಿ ಮೃದುವಾಗುತ್ತದೆಯೆ ಹೊರತು ಅದರಲ್ಲಿನ ತಿರುಳಿಗೆ ಪಕ್ವವಾದ ಹಣ್ಣಿನ ರುಚಿ ಬರಲು ಸಾಧ್ಯವಿಲ್ಲ. “ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೇ ಭಂಗ” ಎಂದರೆ, ಪಕ್ವವಾದ ಹಣ್ಣಿನ ರುಚಿಯನ್ನು ಆಶಿಸಿ, ಅದರ ರುಚಿಯ ಕಲ್ಪನೆ ಮಾಡಿಕೊಂಡು, ಅದನ್ನು ನಾನು ನನ್ನ ಪ್ರಯತ್ನದಿಂದ ಹೇಗಾದರೂ ಪಡೆಯುತ್ತೇನೆ ಎಂದು ಭಾವಿಸುವುದೇ ತಪ್ಪು. ಏಕೆಂದರೆ ಇಲ್ಲಿ ನಡೆಯುವುದೆಲ್ಲವೂ ಮನದಲ್ಲಿ, ವಿಚಾರಗಳಲ್ಲಿ. ಬಯಸುವುದು, ಕಲ್ಪಿಸಿಕೊಳ್ಳುವುದು ಮತ್ತು ಭಾವಿಸುವುದು ಎಲ್ಲವೂ ವಿಚಾರದಲ್ಲಿ ನಡೆಯುತ್ತದೆ. ವಾಸ್ತವವು ವಿಚಾರಗಳಿಂದ ಭಿನ್ನವಾಗಿರುತ್ತದೆ. ವಿಚಾರವು ಸಹಜವಾದುದಲ್ಲ. ಅಂದರೆ ಅದು ಅನೇಕ ನೆನಪುಗಳ ಮತ್ತು ಹಿಂದೆ ಆದ ಅನುಭವಗಳ ಪರಿಣಾಮವಾಗಿರುತ್ತದೆ. ಎಲ್ಲರ ಅನುಭವಗಳು ಮತ್ತು ನೆನೆಪುಗಳು ಒಂದೇ ರೀತಿಯಾಗಿರುವುದಿಲ್ಲ. ಅವು ಆಯಾ ವ್ಯಕ್ತಿಯ ಹಿನ್ನೆಲೆಯನ್ನು ಅವಲಂಬಿಸಿರುತ್ತವೆ. ಅವು ದೇಶ ಮಾತು ಕಾಲದ ಮಿತಿಗೆ ಒಳಗಾಗಿರುತ್ತವೆ. ಆದ್ದರಿಂದ ವಿಚಾರವನ್ನು ನಂಬುವುದು ಎಂದರೆ ಮೋಸಹೋಗುವುದೆಂದೇ ಅರ್ಥ. ಹಣ್ಣಿಗಾಗಿ ಆಸೆ ಪಡುವುದು, ಅದರ ರುಚಿಯ ಕಲ್ಪನೆ ಮಾಡಿಕೊಳ್ಳುವುದು ಮತ್ತು ಕಾಯಿಯಿಂದ ಹಣ್ಣು ಪಡೆಯುತ್ತೇನೆ ಎಂದು ಭಾವಿಸುವುದು ಎಲ್ಲವೂ ವಿಚಾರದ ಪರಿಣಾಮ. ಇದರಿಂದ ದೋಷವುಂಟಾಗುತ್ತದೆ. ಹಣ್ಣು ಪಡೆಯಲಾಗುವುದಿಲ್ಲ. ನಿಜವಾದ ಹಣ್ಣಿನ ರುಚಿ ಆಸ್ವಾದಿಸಲು ಸಾಧ್ಯವಿಲ್ಲ. ಆದ್ದರಿಂದ ಅಲ್ಲಮಪ್ರಭುಗಳು “ ಭಾವಿಸಿದ ಭಾವೆನೆಗಿಂತ ಸಾವುದೇ ಲೇಸು “ ಎಂದು ಹೇಳುತ್ತಾರೆ.

ಈ ಉದಾಹರಣೆ ಬದುಕಿನ ಎಲ್ಲ ವಿಷಯಗಳಿಗೂ ಅನ್ವಯವಾಗುತ್ತದೆ. ಇಂದ್ರಿಯಗಳನ್ನು ತುಳಿದಿಟ್ಟು ಅವುಗಳನ್ನು ಗೆದ್ದಿದ್ದೇನೆ ಎಂದುಕೊಳ್ಳುವುದು, ಭಕ್ತಿಯ ಆಡಂಬರ ಮಾಡಿ ಮಹಾ ಭಕ್ತನಾಗಿದ್ದೇನೆ ಎಂದುಕೊಳ್ಳುವುದು, ದೊಡ್ಡ ದೊಡ್ಡ ಗ್ರಂಥಗಳನ್ನು ಓದಿ ಜ್ಞಾನಿಯಾಗಿದ್ದೇನೆ ಎಂದುಕೊಳ್ಳುವುದು ಇತ್ಯಾದಿ ಎಲ್ಲವೂ “ಕಾಮಿಸಿ, ಕಲ್ಪಿಸಿ, ಭಾವಿಸಿ ಭಂಗ” ತಂದುಕೊಳ್ಳುವುದೇ ಆಗಿದೆ.

ಈ ರೀತಿಯಾಗಿ ಅವಾಸ್ತವಾದ ಭಾವನೆಗಳಲ್ಲಿ ಮುಳುಗುವುದು, ಎಂದರೆ , ಆಶಿಸುವುದು, ಕಲ್ಪಿಸಿಕೊಳ್ಳುವುದು ಮತ್ತು ಪಡೆಯುತ್ತೇನೆ ಅಥವಾ ಪಡೆದಿದ್ದೇನೆ ಎಂದುಕೊಳ್ಳುವುದು ಎಲ್ಲವೂ ಭಾವನೆಗಳೇ ಹೊರತು ವಾಸ್ತವವಲ್ಲ. ನಾವೇ ಏನೋ ಭಾವಿಸಿಕೊಂಡು ಆ ಭಾವನೆಗಳ ಅವಾಸ್ತವತೆಯಲ್ಲಿ ಬದುಕುವುದಕ್ಕಿಂತ ಸಾವೇ ಲೇಸು ಎನ್ನುತ್ತಾರೆ ಅಲ್ಲಮರು.

ಹಾಗಾದರೆ ಬದುಕಿನಲ್ಲಿ ಏನನ್ನೂ ಆಶಿಸಬಾರದೆ? ಎನ್ನುವ ಪ್ರಶ್ನೆ ಹುಟ್ಟುತ್ತದೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ನಾವು ಕೆಲವು ಗುರಿಗಳನ್ನು ಹೊಂದಿ ಅವುಗಳನ್ನು ಸಫಲಗೊಳಿಸಲು ಪ್ರಯತ್ನಿಸುವುದು ಸಹಜ. ಅವು ಲೌಕಿಕ ದೃಷ್ಟಿಯಲ್ಲಿ ಮುಖ್ಯವಾಗಿರುವಂತಹವು. ಉದಾಹರಣೆಗೆ- ನಾನು ಡ್ರೈವಿಂಗ್ ಕಲಿಯಬೇಕು, ನಾನು ಇಂತಿಂತಹ ಪದವಿಯನ್ನು ಪಡೆಯಬೇಕು ಇತ್ಯಾದಿ. ಇಲ್ಲಿ ಆಶಿಸುವುದು, ಕಲ್ಪಿಸುವುದು, ಭಾವಿಸುವುದು ಎಲ್ಲವೂ ನಡೆಯುತ್ತದೆ. ಆದರೆ ಅದೇ ಬದುಕಲ್ಲ. ಇಂದಿನ ಬದುಕಿನಲ್ಲಿ ಅವುಗಳ ಅವಶ್ಯಕತೆಯನ್ನು ಅರಿಯಬೇಕು. ಆದರೆ ಅವುಗಳ ಮಿತಿಯನ್ನೂ ಅರಿತಿರಬೇಕು. ತನ್ನ ತಾ ಅರಿಯುವುದರಿಂದ ಉಂಟಾಗುವ ಜ್ಞಾನದ ಮುಂದೆ ಅದರ ಕ್ಷುಲ್ಲಕತೆಯನ್ನು ತಿಳಿದು ವಿಚಾರಗಳ ಬದುಕಿನಿಂದ ತನ್ನನ್ನು ತಾ ಬಿಡಿಸಿಕೊಂಡು ಸಹಜವಾಗಿರಬೇಕು, ಎಂಬುದು ಈ ವಚನದ ಆಶಯ. ಮುಂದಿನ ವಚನದಲ್ಲಿ ವಿಚಾರದ ಬಗ್ಗೆ ವಿಷದವಾಗಿ ತಿಳಿಯೋಣ.


Friday, October 28, 2011

Vachana 61: Bekenalaagadu Sharanange - Neither Want, Nor Reject


ಬೇಕೆನಲಾಗದು ಶರಣಂಗೆ, ಬೇಡೆನಲಾಗದು ಶರಣಂಗೆ
 ಬಂದ ಸುಖವನತಿಗಳೆಯಲಾಗದು ಶರಣಂಗೆ
ಇದು ಕಾರಣ, ಕೂಡಲ ಚೆನ್ನ ಸಂಗಯ್ಯಾ ನಿಮ್ಮ ಶರಣರು
ಉಂಡುಪವಾಸಿಗಳು ಬಳಸಿ ಬ್ರಹ್ಮಚಾರಿಗಳು

TRANSLITERATION

bEkenalAgadu SaraNaMge, bEDenalAgadu SaraNaMge
baMda suKavanatigaLeyalAgadu SaraNaMge
idu kAraNa, kUDala cenna saMgayyA nimma SaraNaru
uMDupavAsigaLu baLasi brahmacArigaLu

CLICK HERE TO HEAR IT:

http://www.youtube.com/watch?v=NnhsSHSQTFY

TRANSLATION

bEkenalAgadu (can’t say I want, can’t wish to have) SaraNaMge (a Sharana, devotee), bEDenalAgadu (can’t refuse, reject) SaraNaMge (a Sharana)
baMda (that which is coming your way) suKa (the pleasure) vanatigaLeyalAgadu (can’t deny) SaraNaMge (a Sharana)
idu kAraNa (for this reason), kUDala cenna saMgayyA (Lord of meeting rivers) nimma (your) SaraNaru(Sharanas)
uMDu (after eating) upavAsigaLu (remain fasting/ hungry) baLasi (enjoying sensual pleasures) brahmacArigaLu (remain untouched/ remain celibates)

A devotee can’t say I want, A devotee can’t refuse!
A devotee can’t deny the pleasure coming his way!
For this reason, Oh! Lord of Meeting Rivers, your devotees
remain fasting (hungry) even after eating, remain untouched even after enjoying worldly pleasures!

COMMENTARY

In Vachana 60, Basavanna advocated ‘sublimating’ senses rather than ‘indulging’ or ‘controlling’. Sharana Chenna Basavanna (Nephew of Basavanna) extends that thought further in this Vachana to characterize a ‘true devotee’. A devotee should not want something, neither should he reject something. He cannot deny the pleasure (or sorrow) coming his way. But, he remains undisturbed by the ups and downs the life brings his way. He does not over indulge in eating although he eats. Neither he over indulges in worldly pleasures although he participates in them. Since the devotee puts his sense organs in a sublimating mode, they do not bind him to the ups and downs of the daily life.

The sense organs provide us the opportunity to enjoy the beauty of the objects around us. Controlling these organs and denying ourselves of the sensation they bring is the same as death according to philosopher J. Krishnamurthy (JK).  Please scroll down to the Kannada Commentary below, for additional excerpts (in English) from JK’s work.

Let us accept the things coming our way with equal ease!


KANNADA COMMENTARY

ಇದು ಚೆನ್ನಬಸವಣ್ಣನವರ ವಚನ. ಇಲ್ಲಿ ಶರಣನಾದವನು ಹೇಗಿರಬೇಕು ಎಂಬುದನ್ನು ಹೇಳುತ್ತಾರೆ. ಶರಣನು ತನಗೆ “ಇದು ಬೇಕು ಇದು ಬೇಡ” ಎನ್ನುವುದಿಲ್ಲ. ತನ್ನ ಪಾಲಿಗೆ ಬಂದ ಕಷ್ಟ ಸುಖಗಳನ್ನು ತಿರಸ್ಕರಿಸುವುದಿಲ್ಲ. ಅವುಗಳನ್ನು ನಿರ್ಲಿಪ್ತನಾಗಿ ಸ್ವೀಕರಿಸುತ್ತಾನೆ.  ಕಷ್ಟಗಳನ್ನು ಮನದಲ್ಲಿ ಯಾವುದೇ ಕಹಿ ಭಾವನೆ ತಾಳದೆ, ಸುಖವನ್ನು ಅತಿಯಾಗಿ ಹರ್ಷತಾಳದೆ  ಸಮಾನ ಭಾವದಿಂದ ಅಂಗೀಕರಿಸುತ್ತಾನೆ. ಆತನು ಇಂದ್ರಿಯಗಳನ್ನು ಉದಾತ್ತೀಕರಿಸಿರುತ್ತಾನೆ. ಆದ್ದರಿಂದ ಆತನಿಗೆ ಇಂದ್ರಿಯಗಳು ಬಂಧನವಾಗುವುದಿಲ್ಲ.  ಅಂತಹ ಸ್ಥಿತಿಯಲ್ಲಿ ಶರಣರು ಉಂಡು ಉಪವಾಸಿಗಳಾಗಿರುತ್ತಾರೆ. ಬಳಸಿ ಬ್ರಹ್ಮಚಾರಿಗಳಾಗಿರುತ್ತಾರೆ. ಎಂದರೆ, ಅವರು ಇಂದ್ರಿಯಗಳಿಗೆ ಸಲ್ಲಬೇಕಾದ ಸ್ಥಾನವನ್ನು ಕೊಡುವ ಕಾರಣದಿಂದ ಅವು ಅವರನ್ನು ಬಾಧಿಸುವುದಿಲ್ಲ. 

ಜೆ. ಕೃಷ್ಣಮೂರ್ತಿಯವರು ಈ ವಿಷಯದ ಬಗ್ಗೆ ವಿಷದವಾಗಿ ಹೇಳಿದ್ದಾರೆ:

ನಿಗ್ರಹವು ಆಸೆಯ ರೂಪವೇ ಅಲ್ಲವೆ? “ನಾನು ನಿಗ್ರಹಿಸಬೇಕು” ಎನ್ನುವುದು ಆಸೆಯೇ ಅಲ್ಲವೆ?  ನಿಗ್ರಹಿಸುವವನು ಇಂತಹುದನ್ನು ಮಾಡಬೇಕು ಇಂತಹುದನ್ನು ಮಾಡಬಾರದು ಎಂದೆಲ್ಲ ಆಸೆ ಪಡುತ್ತಾನೆ. ಅವನ  ಆಸೆಗಳು ಆತನ ವಿಚಾರಗಳಿಂದ ಹುಟ್ಟಿರುತ್ತವೆ. ಆ ವಿಚಾರಗಳು ಮೊದಲೇ ರೂಪಿಸಿದ ಯಾವುದೋ ಒಂದು ವಿನ್ಯಾಸಕ್ಕೆ ಒಳಗೊಂಡಿರುತ್ತವೆ. ಅವರ ಮಾತಿನಲ್ಲಿಯೇ ಹೇಳುವುದಾದರೆ-The mind then is never free, always subjugating itself to a pattern, whether that pattern is established by another or by oneself. ಅಂದಮೇಲೆ ಅಲ್ಲಿ ಬಂಧನವಿದೆಯೇ ಹೊರತು ಮುಕ್ತಿಯಿಲ್ಲ.

ಆದ್ದರಿಂದ ನಿಗ್ರಹಿಸುವುದನ್ನು ಪೂರ್ತಿಯಾಗಿ ಬಿಡಬೇಕು. ಹಾಗಾದರೆ ಇಂದ್ರಿಯಗಳನ್ನು ಮನಬಂದೆಡೆಗೆ ಹೋಗಲು ಬಿಡಬೇಕೆ? ಅವು ಬಯಸಿದ್ದನ್ನೆಲ್ಲ ಒದಗಿಸಬೇಕೆ? ಇಲ್ಲ. “ಬೇಕೆನಲಾಗದು ಬೇಡೆನಲಾಗದು” ಎಂದು ಮೊದಲೇ ಹೇಳಿದ್ದಾರೆ ಶರಣರು. ಇದನ್ನು ಅರ್ಥಮಾಡಿಕೊಳ್ಳಲು ಜೆಕೆಯವರ (ಜಿಡ್ಡು ಕೃಷ್ಣಮೂರ್ತಿಯವರ) ಮಾತುಗಳನ್ನು ಗಮನಿಸುವುದು ಒಳ್ಳೆಯದು.

ಜೆಕೆ ಅವರು ಹೇಳುತ್ತಾರೆ: ಇಂದ್ರಿಯಗಳಿರುವುದರಿಂದಲೇ ಸೌಂದರ್ಯವನ್ನು ಸವಿಯುವ ಅವಕಾಶ ಉಂಟಾಗುತ್ತದೆ. ನಾವು ಇಂದ್ರಿಯಗಳಿಂದ  ಉಂಟಾಗುವ ಜ್ಞಾನದಿಂದಲೇ ಜೀವಿಸುತ್ತೇವೆ. ಇಂದ್ರಿಯ ಜ್ಞಾನವು ಸಹಜವಾದದ್ದು. ಇಂದ್ರಿಯಗಳನ್ನು ತುಳಿಯುವುದು ಎಂದರೆ ನಾವು ಸತ್ತಂತೆಯೇ ಸರಿ. ಆದ್ದರಿಂದ ಅವುಗಳನ್ನು ತುಳಿಯದೆ ಅವುಗಳನ್ನು ಎಚ್ಚರಿಕೆಯಿಂದ ಗಮನಿಸುವುದು ಸರಿ. ಇಂದ್ರಿಯಗಳು ಸೌಂದರ್ಯ ಸವಿಯುವ ಪ್ರಕ್ರಿಯೆ, ಮತ್ತು  ಆನಂತರ, ಅವು  ಸ್ವಾರ್ಥದಲ್ಲಿ ಮುಳುಗುವ ಪ್ರಕ್ರಿಯೆಯ ನಡುವಿನ  ಅಂತರವನ್ನು ತಿಳಿಯುವುದು ಮುಖ್ಯ ಎನ್ನುತ್ತಾರೆ ಜೆಕೆ ಯವರು. ಇದನ್ನು ಅರ್ಥಮಾಡಿಕೊಳ್ಳಲು ಅವರು ಅನೇಕ ಒಳ್ಳೆಯ ಉದಾಹರಣೆಗಳನ್ನು ಕೊಡುತ್ತಾ ವಿವರಿಸುತ್ತಾರೆ:

What is the origin, the source, of desire? Go into it very, very deeply to capture the whole movement of desire, the implication of it, the depth of it, the reality of it. If you had no senses, there will be no sensation. Sensation arises when you see something in the window of a shop, a shirt, a radio, or what you will. You see it - visual perception. Then you go inside that shop, touch the material, and from the touching of it, there is a sensation.........  Then, if you observe very closely, thought says, `How nice it would be if I had that shirt on me.... So, at that moment when thought creates the image out of the sensation, is the origin of desire...... The fact is, it is natural to be sensitive, to have sensations. Otherwise you are paralyzed. You must have sensation, you must have sensitivity in your fingers, in your eyes, in your hearing and looking, and you are sensitive to watch, to look - out of that looking, watching, observing, sensation inevitably arises. It must arise; otherwise you are blind, deaf. When there is sensation, then thought creates an image, and at that moment desire is born..... Find out whether thought can be in abeyance, not immediately create a picture, an image of you in that shirt, or in that car, and so on. Can there be a gap between sensation and thought impinging upon that sensation? Find out. It will make your mind, brain, alert, watchful. (Mind Without Measure  By J. Krishnamurti )

ಇಂದ್ರಿಯಗಳು ಸೌಂದರ್ಯ ಸವಿಯುವ ಪ್ರಕ್ರಿಯೆ, ಮತ್ತು  ಆನಂತರ ಅವು, ಸ್ವಾರ್ಥದಲ್ಲಿ ಮುಳುಗುವ ಪ್ರಕ್ರಿಯೆಯ ನಡುವಿನ  ಅಂತರದಲ್ಲಿ ಇಂದ್ರಿಯಗಳ ಉದಾತ್ತೀಕರಣದ ಸಂಭವವಿರುತ್ತದೆ.

 ಶರಣರು ಇಂದ್ರಿಯಗಳ ಸುಖವನ್ನು ಸವಿಯುತ್ತಾರೆ ಆದರೆ ಅದರಲ್ಲಿ ಸ್ವಾರ್ಥದ ಲವಲೇಶವೂ ಇರುವುದಿಲ್ಲ.  ಅವರು ಏನೇ ಮಾಡಿದರೂ ಅದು “ತನ”ಗಾಗಿಯಲ್ಲ. ಆದ್ದರಿಂದ ಅವರು ಉಂಡೂ ಉಪವಾಸಿಗಳಾಗಿರುತ್ತಾರೆ. ಬಳಸಿದರೂ ಕೂಡ ಎಲ್ಲವನ್ನೂ ಬಿಟ್ಟ ಬ್ರಹ್ಮಚಾರಿಗಳೇ ಆಗಿರುತ್ತಾರೆ. ಯಾವ ಸುಖವಾಗಲಿ ದುಃಖವಾಗಲಿ ಅವರಿಗೆ ಅಂಟುವುದಿಲ್ಲ, ಎನ್ನುತ್ತಾರೆ ಚೆನ್ನಬಸವಣ್ಣನವರು.                                                         







 

Friday, October 21, 2011

Vachana 60: Indriya Nigrahava Maadidade - Sense Control


ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವುವು ಪಂಚೇಂದ್ರಿಯಂಗಳು
ಸತಿಪತಿ ರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯರು?
ಸತಿಪತಿ ರತಿ ಭೋಗೋಪವಿಳಾಸವ ಬಿಟ್ಟನೆ ಸಿಂಧುಬಲ್ಲಾಳನು?
ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳೆಸಿದಡೆ,
ನಿಮ್ಮ ಚರಣಕ್ಕೆ ದೂರ ಕೂಡಲಸಂಗಮದೇವ


TRANSLITERATION

iMdriya nigrahava mADidaDe hoMduvavu dOShaMgaLu,
muMde baMdu kADuvuvu paMcEMdriyaMgaLu
satipati ratisuKava biTTare siriyALa caMgaLeyaru?
satipati rati BOgOpaviLAsava biTTane siMdhuballALanu?
nimma muTTi paradhana-parasatiyarigeLesidaDe,
nimma caraNakke dUra kUDalasaMgamadEva


CLICK HERE TO HEAR IT:

http://www.youtube.com/watch?v=7lesVi0hILU

TRANSLATION

iMdriya(sense organ) nigrahava (control) mADidaDe(if done) hoMduvavu(will become) dOShaMgaLu (faultier, defective),
muMde baMdu(come forth) kADuvuvu(trouble) paMcEMdriyaMgaLu(five senses)
satipati(husband and wife) ratisuKava(sensual pleasure) biTTare(give up) siriyALa caMgaLeyaru (siriyala and chengale)?
Satipati(husband and wife) rati BOgOpaviLAsava(sensual pleasure) biTTane(give up) siMdhuballALanu(Sinduballala)?
Nimma(with You) muTTi(in touch, in contact) paradhana (other’s wealth) –parasatiyarige (other’s wife) eLesidaDe(if longed for),
Nimma(Your) caraNakke(feet) dUra(far away) kUDalasaMgamadEva(Lord KudalaSangamaDeva)


Sense organs if controlled become faultier (defective),
And come forth to trouble the five senses.
Did Siriyala and Changale give up the sensual pleasure of husband and wife?
Did Sinduballala give up the sensual pleasure of husband and wife?
After touching You, if I long for other’s wealth and wife,
I will get far away from your feet, Oh! Lord Kudalasangamadeva!


COMMENTARY

In Vachana 59, Sharana Shanmuka Swamy wondered as to what would be the fate of the man with five sense organs, if an animal with one organ can get destroyed by it. The implication is that the way to avoid destruction is to control sense organs. In this Vachana, Basavanna says that controlling the sense organs is not the way, because if they are controlled, all the five senses become faultier. He uses two couples as examples to say that they continued to enjoy the normal lives of husband and wife yet became ardent devotees of the Lord and self-realized individuals. Basavanna ends this Vachana with the statement that if we aspire for what does not belong to us, we get away from the Lord we already have realized.

When we examine the concept of controlling the sense organs further, we see that we have created a separation between the organs which are to be controlled and the individual who is controlling them. The controller is full of ‘desire’ to control the organs. This desire leads to the illusion (maye) making the sense organs faultier. A better approach would be to utilize the sense organs for the activity they are designed for in an appropriate way (i.e. ‘sublimate’ rather than ‘control’). This is illustrated by the example of two couples in this Vachana. They were well within the realm of daily living utilizing the sense organs appropriately while concentrating on the spiritual path. The last sentence of the Vachana illustrates the ‘appropriateness’. Other’s wealth and other’s wife are symbolic of materials that are beyond one’s needs. Anything above what is absolutely needed belongs to others. Aspiring for the material belonging to others is pushing the sense organs to the undesired limits, which leads us away from the godliness we might have already achieved. The message then is, neither ‘control’ the sense organs, nor become their ‘slave’, but sublimate them with the right (appropriate) usage.


Let us develop the awareness of the appropriate sense!


KANNADA COMMENTARY


ಇಂದ್ರಿಯ ನಿಗ್ರಹಮಾಡುವುದು ಅಪಾಯಕಾರಿ ಎನ್ನುತ್ತಾರೆ ಬಸವಣ್ಣನವರು. ನಿಗ್ರಹಿಸಿದರೆ ಇಂದ್ರಿಯಗಳು ದೋಷಯುಕ್ತವಾಗುತ್ತವೆ. ಅಂದರೆ ಅವುಗಳನ್ನು ತುಳಿದಿಟ್ಟರೆ ಅವು ಹೆಚ್ಚು ಪ್ರಬಲಗೊಂಡು ಹೆಡೆ ಎತ್ತುತ್ತವೆ. ಅವು ತಮ್ಮ ಸಹಜತೆಯನ್ನು ಕಳೆದುಕೊಂಡು ಹೆಚ್ಚು ಆವೇಶಗೊಳ್ಳುತ್ತವೆ. ಅವುಗಳನ್ನು ಶಮನಗೊಳಿಸುವುದು ಇನ್ನೂ ಕಷ್ಟವಾಗುತ್ತದೆ. ಮನದಲ್ಲಿ ಇಂದ್ರಿಯಗಳ ಆಸೆಗಳನ್ನು ಮುಚ್ಚಿಟ್ಟು ಮೇಲೆ ಏನೂ ಇಲ್ಲವೆಂಬಂತೆ ಆಚರಿಸುವುದು ವ್ಯಕ್ತಿಯನ್ನು ಅಡ್ಡದಾರಿಗೆ ಹಚ್ಚುತ್ತದೆ. ಆ ಆಸೆಗಳು ಭೂತಾಕಾರವಾಗಿ ಕಾಡುತ್ತವೆ. ಅಲ್ಲಿ ಮೋಸ ಕಪಟಗಳು ಮನೆಮಾಡುತ್ತವೆ. ವ್ಯಕ್ತಿಯು ಮಾನಸಿಕವಾಗಿ ಬಳಲುತ್ತಾನೆ.


ಇಲ್ಲಿ ನಾವು “ನಿಗ್ರಹ”ಎಂದರೇನು ಮತ್ತು ಏಕೆ ನಿಗ್ರಹಿಸಬಾರದು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಹಿಂದೆ ನಾವು “ಮನದ ಮುಂದಣ ಆಸೆಯೇ ಮಾಯೆ” ಎಂಬುದನ್ನು ಅರ್ಥಮಾಡಿಕೊಂಡಿದ್ದೇವೆ. ಈಗ ನಿಗ್ರಹಕ್ಕೆ ಬರೋಣ. “ಇಂದ್ರಿಯ ನಿಗ್ರಹ ಮಾಡುವುದು” ಎಂಬಲ್ಲಿ ಇಂದ್ರಿಯಗಳು ಬೇರೆ ಮತ್ತು ನಿಗ್ರಹ ಮಾಡುವವನು ಬೇರೆ ಎಂದು ತಿಳಿಯುತ್ತದೆ. ಎಂದರೆ ಅಲ್ಲಿ ವಿಭಜನೆಯಿದೆ, ಐಕ್ಯತೆ ಇಲ್ಲ, ಎಂದು ಅರ್ಥವಾಗುತ್ತದೆ. ನಿಗ್ರಹ ಮಾಡುವವರು ಯಾರು? ಎಂದು ಕೇಳುತ್ತಾರೆ ಜಿಡ್ಡು ಕೃಷ್ಣಮೂರ್ತಿಯವರು. ನಿಗ್ರಹ ಮಾಡುವವ ನಿಗ್ರಹ ಮಾಡಬೇಕೆಂದು “ಆಸೆ” ಪಡುತ್ತಾನೆ ಎಂದಾಯಿತು. ಅಂದರೆ ನಿಗ್ರಹ ಕೂಡ ಆಸೆಯ ಮತ್ತೊಂದು ರೂಪವೇ. ಅಂದರೆ “ ನಾನು ನನ್ನ ಇಂದ್ರಿಯಗಳನ್ನು ನಿಗ್ರಹಿಸಬೇಕು” ಎನ್ನುವ ಮೂಲಕ ನಾವು ಮತ್ತೆ ಆಸೆಗೆ ಅಂದರೆ ಮಾಯೆಗೆ ಒಳಗಾಗುತ್ತಿದ್ದೇವೆ ಎಂದಾಯಿತು ಅಲ್ಲವೆ? ಇದೇ ಮಹಾ ದೋಷ. ಇದನ್ನೇ ಬಸವಣ್ಣನವರು ಹೇಳುತ್ತಿದ್ದಾರೆ. ಆಸೆಗೆ ಪಕ್ಕಾದ ಇಂದ್ರಿಯಗಳು ದೋಷಕ್ಕೆ ಒಳಗಾಗುತ್ತವೆ.


ಆದ್ದರಿಂದ ಅವುಗಳನ್ನು ತುಳಿದಿಕ್ಕದೆ ಅವುಗಳಿಗೆ ಸಲ್ಲಬೇಕಾದ ಸ್ಥಾನವನ್ನು ಕೊಡುವುದೇ ಮೇಲು. ಯಾವುದನ್ನೂ ಅತಿಮಾಡುವುದು ಒಳ್ಳೆಯದಲ್ಲ. ಇಂದ್ರಿಯಗಳನ್ನು ತುಳಿದಿಡದೆ ಅವುಗಳನ್ನು ಅರ್ಥಮಾಡಿಕೊಂಡು ಉದಾತ್ತೀಕರಿಸುವುದು (sublimate) ಸರಿ. ಈ ಸಂದರ್ಭದಲ್ಲಿ ಬಸವಣ್ಣನವರು ಇಬ್ಬರು ಶಿವಭಕ್ತರ ಉದಾಹರಣೆಗಳನ್ನು ಕೊಡುತ್ತಾರೆ. ಸಿರಿಯಾಳ ಚಂಗಳೆಯರು ಮತ್ತು ಸಿಂಧುಬಲ್ಲಾಳ ದಂಪತಿಗಳು ಸತಿಪತಿಯರು ಭೋಗಿಸುವ ರತಿಸುಖವನ್ನು ಬಿಡಲಿಲ್ಲ. ಸತಿಪತಿಗಳಾಗಿ ಪುತ್ರರನ್ನು ಪಡೆದು ಶಿವ ಭಕ್ತಿಯನ್ನೂ ಸಾಧಿಸಿದರು. ಈ ಉದಾಹರಣೆಯ ಮೂಲಕ ಬಸವಣ್ಣನವರು ಇಂದ್ರಿಯಗಳ ಆಸೆಗಳಿಗೆ ಸಲ್ಲಬೇಕಾದ ಸ್ಥಾನವನ್ನು ನೀಡಿ ಅವುಗಳನ್ನು ಉದಾತ್ತೀಕರಿಸುವುದು(sublimate) ಉತ್ತಮವೆಂದು ಹೇಳುತ್ತಿದ್ದಾರೆ.


ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳೆಸಿದಡೆ ನಿಮ್ಮ ಚರಣಕ್ಕೆ ದೂರ ಕೂಡಲಸಂಗಮದೇವ” ಎಂದು ಹೇಳುತ್ತಾರೆ ಬಸವಣ್ಣನವರು. ಅಂದರೆ ವ್ಯಕ್ತಿಯು ಪ್ರಾಮಾಣಿಕವಾಗಿ ಕೂಡಲಸಂಗಮನನ್ನು ಹಂಬಲಿಸಿ, ಆತನ ಹೊಳಹನ್ನು(flash)ಕಂಡ ಮೇಲೆಯೂ, ಆತನ ಸಂಪರ್ಕದಲ್ಲಿ ಬಂದಮೇಲೆಯೂ ಇಂದ್ರಿಯಗಳಿಗೆ ವಶನಾಗಿ ನೀತಿಗೆಟ್ಟ ಬದುಕನ್ನು ಬದುಕಿದರೆ, ಆತನು ಆ ದೇವನ ಚರಣಗಳಿಂದ ದೂರಾಗುತ್ತಾನೆ ಎನ್ನುತ್ತಾರೆ. ಇಂದ್ರಿಯಗಳನ್ನು ತುಳಿದಿಡದೆ ಹಾಗೂ ಅವುಗಳಿಗೆ ವಶವಾಗದೆ ಇರುವುದು ಹೇಗೆಂಬುದನ್ನು ಮುಂದಿನ ವಚನದಲ್ಲಿ ನೋಡೋಣ.






Friday, October 14, 2011

Vachana 59: Ghranendriya Vishayadinde - Sense Organs


ಘ್ರಾಣೇಂದ್ರಿಯ ವಿಷಯದಿಂದೆ ಭ್ರಮರ ಕೆಡುವುದು, ಸಂಪಿಗೆಯ ಪುಷ್ಪದಲ್ಲಿ!
ರಸನೇಂದ್ರಿಯ ವಿಷಯದಿಂದೆ ಮತ್ಸ್ಯ ಕೆಡುವುದು, ಜಾಲಗಾರನ ಬಲೆಯಲ್ಲಿ!
ನಯನೇಂದ್ರಿಯ ವಿಷಯದಿಂದೆ ಪತಂಗ ಕೆಡುವುದು, ದೀಪದ ಜ್ವಾಲೆಯಲ್ಲಿ!
ತ್ವಗಿಂದ್ರಿಯ ವಿಷಯದಿಂದೆ ಗಜವು ಕೆಡುವುದು, ರಾಜನ ಕೃತಕದಲ್ಲಿ!
ಶ್ರವಣೇಂದ್ರಿಯ ವಿಷಯದಿಂದೆ ಎರಳೆ ಕೆಡುವುದು, ಬೇಟೆಗಾರನ ಸರಳಿನಲ್ಲಿ!
ಇಂತೀ ಪ್ರಾಣಿಗಳು ಒಂದೊಂದು ವಿಷಯದಿಂದೆ ಬಂಧನಕ್ಕೊಳಗಾದವು!
ಪಂಚೇಂದ್ರಿಯ ವಿಷಯ ವ್ಯಾಪಾರದಲ್ಲಿ ಲಂಪಟರಾದ ಮನುಜರು ಕೆಟ್ಟ ಕೇಡನೇನೆಂಬೆನಯ್ಯಾ ಅಖಂಡೇಶ್ವರಾ?


TRANSLITERATION

GrANEMdriya viShayadiMde Bramara keDuvudu, saMpigeya puShpadalli!
rasanEMdriya viShayadiMde matsya keDuvudu, jAlagArana baleyalli!
nayanEMdriya viShayadiMde pataMga keDuvudu, dIpada jvAleyalli!
tvagiMdriya viShayadiMde gajavu keDuvudu, rAjana kRutakadalli!
SravaNEMdriya viShayadiMde eraLe keDuvudu, bETegArana saraLinalli!
iMtI prANigaLu oMdoMdu viShayadiMde baMdhanakkoLagAdavu!
paMcEMdriya viShaya vyApAradalli laMpaTarAda manujaru keTTa kEDanEneMbenayyA aKaMDESvarA?

CLICK HERE TO HEAR IT:

http://www.youtube.com/watch?v=p6ESC38SMgg

TRANSLATION

GrANEMdriya (sense organ of smell ) viShayadiMde (through the object of, becoming a victim of, because of) Bramara (Bee) keDuvudu (will be destroyed), saMpigeya (Champaka) puShpadalli (in the flower)!
rasanEMdriya (sense organ of taste) viShayadiMde (because of) matsya (fish) keDuvudu (will be destroyed), jAlagArana (fisherman’s) baleyalli (in the net)!
nayanEMdriya (sense organ of sight) viShayadiMde (because of) pataMga (moth) keDuvudu (will be destroyed), dIpada (of the lamp) jvAleyalli (in the flame)!
tvagiMdriya (sense organ of touch) viShayadiMde (because of) gajavu (Elephant) keDuvudu (will be destroyed), rAjana (of King’s) kRutakadalli (in the trick)!
SravaNEMdriya (sense organ of hearing) viShayadiMde (because of) eraLe (Deer) keDuvudu (will be destroyed), bETegArana (Hunter’s) saraLinalli (in the arrows)!
iMtI (Thus) prANigaLu (animals) oMdoMdu (just one) viShayadiMde (because of) baMdhanakkoLagAdavu (imprisoned, fell in the trap)!
paMcEMdriya (five organs) viShaya (influence, effect) vyApAradalli(in dealing with) laMpaTarAda (self-indulgent) manujaru (men) keTTa kEDanEneMbenayyA (what can I say about the way they are destroyed) aKaMDESvarA (Lord Master of the Universe)?

A victim of the sense organ of smell, the Bee dies in Champaka flower!
A victim of the sense organ of taste, the fish gets trapped in Fisherman’s net!
A victim of the sense organ of sight, the Moth dies in the flame of a lamp!
A victim of the sense organ of touch, the Elephant gets trapped in King’s trickery!
A victim of the sense organ of hearing, the Deer dies by hunter’s arrows!
Thus, animals get destroyed as victims of a single sense organ!
What can I say about the way of destruction of self-indulgent men with five sense organs, Oh! Lord Master of the Universe!

COMMENTARY

In this Vachana, Sharana Shanumuka Swamy comments on how complex a web we weave and gets trapped in to it, through our five sense organs. He illustrates the destructive power of each sense organ through examples of animals with one dominant sense organ in them. The Bee endowed with an intense sense of smell (Nose), gets attracted by the fragrance of the Champaka flowers, gets intoxicated and dies. The fish tries to grab the tasty bait (Tongue) and gets trapped in fisherman’s net. It takes only the organ of sight (Eye) for the Moth to get attracted to the flame of the lamp, to get burnt in it. Elephants are known to enjoy rubbing (Touch) their bodies against each other. It is said that Kings used this sense of touch to attract male elephants to female elephants, to trap them. Deer are known to follow the music (Ear). Hunters use the sense of their hearing to attract them and kill them. If a single sense organ can bring destruction to each of these animals, Shanmuka Swamy wonders what would be the fate of the man with five sense organs.

Man has five times the risk of becoming a victim of his sense organs compared to animals. The obvious message then is that we should train ourselves in utilizing our sense organs to the appropriate level and not become victims of the temptations brought about by them.

It is interesting to note that the animals destroy themselves as victims of their dominant sense organs. The man on the other hand not only creates the web around himself, but also contributes to the destruction of his environment. For example, to satisfy his taste (hunger) he kills other animals and destroys plants more than necessary and causes their extinction. To make himself comfortable (touch), he has created various devices that in turn have contributed to enlarged carbon foot prints, global warming, etc.

We will look at other Sharanas' views on this topic in subsequent postings.

Let us be aware of the consequences of our senses running amuck, to prevent destruction of ourselves and to protect the balance of the nature!


KANNADA COMMENTARY

ಷಣ್ಮುಖಸ್ವಾಮಿಗಳು ಇಲ್ಲಿ ಮಾನವನ ಬಂಧನಗಳ ಸಂಕೀರ್ಣತೆಯನ್ನು (complexity) ಮನದಟ್ಟಾಗುವಂತೆ ಉದಾಹರಣೆಸಹಿತ ತಿಳಿಸುತ್ತಿದ್ದಾರೆ. ಘ್ರಾಣೇಂದ್ರಿಯ(ಮೂಗು)ಕ್ಕೆ ವಶವಾಗಿ ಭ್ರಮರವು (ದುಂಬಿ) ಸಂಪಿಗೆ ಹೂವಿನ ಪರಿಮಳಕ್ಕೆ ಮನಸೋತು ಅಳಿಯುತ್ತದೆ, ರಸನೇಂದ್ರಿಯ(ನಾಲಗೆ)ಕ್ಕೆ ವಶವಾಗಿ ಮೀನು ಮೀನುಗಾರನು ಹಾಕಿದ ಆಹಾರವನ್ನು ತಿನ್ನುಲು ಹೋಗಿ ಬಲೆಯಲ್ಲಿ ಸಿಕ್ಕಿಕೊಳ್ಳುತ್ತದೆ, ನಯನೇಂದ್ರಿಯ(ಕಣ್ಣು)ಕ್ಕೆ ವಶವಾಗಿ ಪತಂಗವು ದೀಪದ ಜ್ವಾಲೆಗೆ ಬಲಿಯಾಗುತ್ತದೆ, ತ್ವಗಿಂದ್ರಿಯ(ಚರ್ಮ)ಕ್ಕೆ ವಶವಾಗಿ ಆನೆಯು ರಾಜನ ಮೋಸ ತಿಳಿಯದೆ ಹೆಣ್ಣಾನೆಯ ಸ್ಪರ್ಶಸುಖ ಬಯಸಿ ಬಂಧನಕ್ಕೆ ಒಳಗಾಗುತ್ತದೆ, ಶ್ರವಣೇಂದ್ರಿಯ(ಕಿವಿ)ಕ್ಕೆ ವಶವಾಗಿ ಎರಳೆಯು ಬೇಟೆಗಾರನು ಬೀಸಿದ ಬಲೆಗೆ ತುತ್ತಾಗುತ್ತದೆ, ಹೀಗೆ ಈ ಪ್ರಾಣಿಗಳೆಲ್ಲ ತಮ್ಮ ಒಂದೊಂದು ಇಂದ್ರಿಯಗಳಿಗೆ ವಶವಾಗಿ ಬಂಧನಕ್ಕೆ ಒಳಗಾಗಿ ನಾಶವಾಗುತ್ತವೆ. ಮಾನವನು ಐದೂ ಇಂದ್ರಿಯಗಳಿಗೆ ವಶನಾಗಿ ಕೆಟ್ಟ ಕೇಡನ್ನು ಹೇಗೆ ವರ್ಣಿಸುವುದು ಎಂದು ಕೇಳುತ್ತಾರೆ ಷಣ್ಮುಖಸ್ವಾಮಿಗಳು.

ಭ್ರಮರವು ದೂರದಿಂದ ಸಂಪಿಗೆಯ ಗಂಧಕ್ಕೆ ಮರುಳಾಗಿ ಅದರ ಹತ್ತಿರ ಹೋಗುತ್ತದೆ. ಆದರೆ ಸಂಪಿಗೆಯ ಕಟು ಗಂಧದಿಂದ ನಾಶ ಹೊಂದುತ್ತದೆ. ಮೀನು ತಾನು ಬಲೆಯಲ್ಲಿ ಬಿದ್ದುಬಿಡುತ್ತೇನೆ ಎಂಬುದರ ಅರಿವಿಲ್ಲದೆ ನಾಲಗೆಯ ಚಪಲಕ್ಕೆ ಮೀನುಗಾರನು ಎಸೆದ ಆಹಾರವನ್ನು ತಿನ್ನಲು ಹೋಗಿ ನಾಶವಾಗುತ್ತದೆ. ಪತಂಗವು ದೀಪದ ಜ್ವಾಲೆಯ ಬಣ್ಣಕ್ಕೆ ಸೋತು ಅದರ ಹತ್ತಿರ ಹೋಗಿ ತನ್ನ ರೆಕ್ಕೆಗಳನ್ನು ಸುಟ್ಟುಕೊಂಡು ನಾಶಹೊಂದುತ್ತದೆ. ಆನೆಯು ದೂರದಲ್ಲಿ ನಿಂತ ಹೆಣ್ಣಾನೆಯ ಸ್ಪರ್ಶ ಸುಖವನ್ನು ಅನುಭವಿಸುವ ಆಸೆಯಿಂದ ಅದರ ಹತ್ತಿರಕ್ಕೆ ಹೋಗಿ ರಾಜನ ಮೋಸಕ್ಕೆ ತುತ್ತಾಗಿ ಬಂಧನಕ್ಕೊಳಗಾಗುತ್ತದೆ. ಜಿಂಕೆಯು ಸಂಗೀತದಿಂದ ಆಕರ್ಷಣೆಗೊಂಡು ಬೇಟೆಗಾರನ ಬಲೆಗೆ ಬೀಳುತ್ತದೆ. ಈ ಉದಾಹರಣೆಗಳಲ್ಲಿ ನಾವು, ಒಂದೊಂದು ಪ್ರಾಣಿಯು ಒಂದೊಂದೇ ಇಂದ್ರಿಯಕ್ಕೆ ವಶವಾಗಿ ನಾಶಹೊಂದುವುದನ್ನು ನೋಡುತ್ತೇವೆ. ಆದರೆ ಮಾನವನೆಡೆಗೆ ನೋಡಿದಾಗ ವಸ್ತು ಸ್ಥಿತಿ ಬೇರೆಯಾಗಿದೆ. ಮಾನವನು ತನ್ನ ಐದೂ ಇಂದ್ರಿಯಗಳಿಗೆ ವಶನಾಗಿದ್ದಾನೆ. ಶಬ್ದ, ರಸ, ರೂಪ, ಗಂಧ ಮತ್ತು ಸ್ಪರ್ಶ ಗಳ ಸುಖಕ್ಕೆ ಆಕರ್ಷಿತನಾಗಿ ಅವುಗಳನ್ನು ಪಡೆಯಲು ಆತನು ಏನೇನು ಮಾಡುವುದಿಲ್ಲ? ಒಂದೊಂದು ಇಂದ್ರಿಯಗಳಿಗೆ ವಶವಾದ ಪ್ರಾಣಿಯೇ ನಾಶವಾಗುತ್ತದೆ. ಇನ್ನು ಐದೂ ಇಂದ್ರಿಯಗಳಿಗೆ ವಶವಾದವನ ಸ್ಥಿತಿಯನ್ನು ವರ್ಣಿಸಲು ಸಾಧ್ಯವೆ? ಆತನು ಕೇವಲ ಅವುಗಳ ವಶವಾಗಿಲ್ಲ. ಅವುಗಳ ವಶವಾಗುವ ಚಟಕ್ಕೆ ಸಿಕ್ಕಿದ್ದಾನೆ. ಆತನು ಪದೇ ಪದೇ ಅವುಗಳ ವಶವಾಗುತ್ತಾನೆ. ಆತನ ನಾಶ ಯವ್ಯಾವ ರೀತಿಯಲ್ಲಿ ನಡೆಯಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳುತ್ತಾರೆ ಷಣ್ಮುಖಸ್ವಾಮಿಗಳು.

ನಾವೆಲ್ಲರೂ “ನಾವೇನೂ ಮೇಲೆ ಹೇಳಿದ ಪ್ರಾಣಿಗಳಂತೆ ಇಂದ್ರಿಯಗಳಿಗೆ ವಶವಾಗಿ ನಾಶ ಹೊಂದುತ್ತಿಲ್ಲ. ಆದ್ದರಿಂದ ಈ ಮಾತು ನಮಗೆ ಅನ್ವಯವಾಗುವುದಿಲ್ಲ” ಎಂದುಕೊಳ್ಳಬಹುದು. ಆದರೆ ಕೇವಲ ದೈಹಿಕವಾಗಿ ಬಂಧನಕ್ಕೆ ಒಳಗಾಗುವುದು ಮತ್ತು ದೈಹಿಕವಾಗಿ ಸಾಯುವುದು ಮಾತ್ರ ಸಾವಲ್ಲ. ಚೆನ್ನಾಗಿ ಗಮನಿಸಿದಾಗ ನಮಗೆ ತಿಳಿದು ಬರುವುದೇನೆಂದರೆ ಇಂದ್ರಿಯಗಳಿಗೆ ವಶನಾಗಿ ಮೇಲೆ ಹೇಳಿದ ಪ್ರಾಣಿಗಳಂತೆ ಮಾನವನು ತಾನು ಮಾತ್ರ ನಾಶ ಹೊಂದುತ್ತಿಲ್ಲ, ಅವುಗಳ ದಾಸನಾಗಿ ತನ್ನೊಂದಿಗೆ ಸಮಸ್ತ ಜೀವರಾಶಿಯನ್ನು ವಿನಾಶದ ಅಂಚಿಗೆ ತಳ್ಳುತ್ತಿದ್ದಾನೆ. ಅವನು ತನ್ನ ನಾನಾ ಆಸೆಗಳಿಗೆ ವಶನಾಗಿ ಪರಿಸರವನ್ನು ನಾಶಮಾಡತ್ತಿರುವುದನ್ನು ನೋಡಿದರೆ ಇದು ತಿಳಿದುಬರುತ್ತದೆ. ಆತನ ಪ್ರತಿಯೊಂದು ಚಟುವಟಿಕೆಯು ದೊಡ್ಡ “ಹೆಜ್ಜೆ ಗುರುತು” (carbon footprint) ಮೂಡಿಸುತ್ತಿದೆ. ಆತನ ನಾಲಗೆ ರುಚಿಗಾಗಿ ಅನೇಕ ಪ್ರಾಣಿಗಳು ಜೀವತೆರುತ್ತಿವೆ, ನಿರ್ವಂಶವಾಗುತ್ತಿವೆ. ಆತನ ಸ್ವಾರ್ಥಕ್ಕಾಗಿ ಆತನು ಬಳಸುತ್ತಿರುವ ಅನೇಕ ವಸ್ತುಗಳು ಜಗತ್ತಿನಲ್ಲಿ ಕಸದ ಬೆಟ್ಟವನ್ನೇ ನಿರ್ಮಿಸುತ್ತಿವೆ, ತನ್ನ ಕಣ್ಣುಗಳನ್ನು ತಣಿಸಲು ಆತನು ಬಳಸುತ್ತಿರುವ ದೀಪಗಳು ಮಾಡತ್ತಿರುವ ನಾಶವನ್ನು ವರ್ಣಿಸಲಾಗದು. ರಾತ್ರಿಯನ್ನು ಕೃತಕ ದೀಪಗಳಿಂದ ಹಗಲಾಗಿ ಪರಿವರ್ತಿಸಿ ತನ್ನ ಬುದ್ಧಿಮತ್ತೆಗೆ ತಾನೆ ಗರ್ವಪಡುವ ಆತನು ಆ ದೀಪಗಳಿಂದ ಕತ್ತಲೆಯಲ್ಲಿ ಬದುಕುವ ವಿವಿಧ ಜೀವಿಗಳು ಹೇಳ ಹೆಸರಿಲ್ಲದೆ ನಾಶ ಹೊಂದಿರುವುದರಬಗ್ಗೆ ಆಲೋಚಿಸುವುದಿಲ್ಲ. ಆತನು ಬಳಸುವ ವಸ್ತುಗಳು ಭೂಮಿಯ ನೀರನ್ನು, ಗಾಳಿಯನ್ನು, ಸಮಸ್ತ ವಾತಾವರಣವನ್ನು ಕಲುಷಿತಗೊಳಿಸಿ ಕೇವಲ ಆತನಿಗೆ ಮಾತ್ರ ಹಾನಿಯುಂಟು ಮಾಡುತ್ತಿಲ್ಲ, ಮುಂಬರುವ ಮಾನವನ ಎಲ್ಲ ಪೀಳಿಗೆಯವರನ್ನು ಅನಂತ ಕಷ್ಟಕ್ಕೆ ಈಡು(target) ಮಾಡುತ್ತಿವೆ, ಸಮಸ್ತ ಜೀವಜಾಲಕ್ಕೆ(web of life) ಆಪತ್ತಾಗಿ ಪರಿಸರದ ಸಂತುಲನ (balance)ವನ್ನು ಕೆಡಿಸುತ್ತಿವೆ. ಇದೆಲ್ಲ ಇಂದ್ರಿಯಗಳಿಗೆ ವಶವಾಗಿ ತಾನು ಮಾತ್ರ ನಾಶಹೊಂದುವ ಪ್ರಾಣಿಗಳ ನಡತೆಗಿಂತಲೂ ಬಲು ವಿನಾಶಕಾರಿ. ಆದ್ದರಿಂದಲೇ ಷಣ್ಮುಖಸ್ವಾಮಿಗಳು “ಪಂಚೇಂದ್ರಿಯ ವಿಷಯ ವ್ಯಾಪಾರದಲ್ಲಿ ಲಂಪಟರಾದ ಮನುಜರು ಕೆಟ್ಟ ಕೇಡನೇನೆಂಬೆನಯ್ಯಾ ಅಖಂಡೇಶ್ವರಾ?” ಎನ್ನುವ ಉದ್ಗಾರದಲ್ಲಿಯೇ ಎಲ್ಲವನ್ನೂ ಹೇಳಿದ್ದಾರೆ.

ಹಾಗಾದರೆ ಇಂದ್ರಿಯ ಸುಖವನ್ನು ಅನುಭವಿಸುವುದೇ ಮಹಾ ಅಪರಾಧವೇ? ಇಂದ್ರಿಯಗಳನ್ನು ಸಂಪೂರ್ಣವಾಗಿ ತುಳಿದಿಡಬೇಕೆ? ಆ ಬಗ್ಗೆ ವಚನಕಾರರು ಏನು ಹೇಳಿದ್ದಾರೆ ಎಂಬುದನ್ನು ಮುಂದಿನ ವಚನದಲ್ಲಿ ನೋಡೋಣ.

Friday, October 7, 2011

Vachana 58: Honnu Maye Embaru - Desire is Illusion

ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ

TRANSLITERATION

honnu mAyeyeMbaru honnu mAyeyalla
heNNu mAyeyeMbaru heNNu mAyeyalla
maNNu mAyeyeMbaru maNNu mAyeyalla
manada muMdaNa ASeyE mAye kANA guhESvara

CLICK HERE TO HEAR IT:

http://www.youtube.com/watch?v=tDPhaQ4QcFw

TRANSLATION

honnu (Gold) mAye (illusion) yeMbaru (they say) honnu (Gold) mAyeyalla (is not illusion)
heNNu (woman) mAye (illusion) yeMbaru (they say) heNNu (woman) mAyeyalla (is not illusion)
maNNu (Earth, land) mAye (illusion) yeMbaru (they say) maNNu (Earth, land) mAyeyalla (is not illusion)
manada (of the mind) muMdaNa (before, arising) ASeyE (the desire is) mAye (illusion) kANA (you see) guhESvara (the Lord of Caves)

They say Gold (wealth) is Maye (Illusion), it is not!
They say woman is Maye, she is not!
They say land is Maye, it is not!
Desire arising in the mind is Maye, Oh Lord of Caves!

COMMENTARY

Gold, woman (man) and land symbolize everything we strive to possess in our lives. Gold represents the wealth. Woman (to man, and man to woman) represents the relationships and conquest of desirable individuals. Land represents the properties and territorial acquisitions. Our state of happiness and sorrow depends on how much of these we possess. We blame these as illusion, especially when things do not go our way in terms of possessing these. In this popular Vachana, Allama Prabhu says that gold, woman(man), and land are not the illusion, but the desire in us to possess them is the illusion.

Consider the case of a gold bar lying on the road. A passerby desirous of wealth would immediately pick it up. He might even try to make sure that no one else saw him picking it up, with the fear that they may claim it back. He will be immediately high with joy of this sudden increment in wealth. Another passerby who is not enamored by Gold will either simply walk away from it or try to find the owner to return it. Either way, he is not disturbed by the Gold bar. So, it is not the Gold that created the ebb and tide in individuals, but the desire for possessing it!

Let us rightsize our desires!

KANNADA COMMENTARY

ಶೂನ್ಯಸಿಂಹಾಸನಾಧೀಶ್ವರರಾದ ಅಲ್ಲಮ ಪ್ರಭುಗಳು ಇಲ್ಲಿ ಮಾಯೆಯನ್ನು ಅದರ ನಾನಾ ರೂಪಗಳಿಂದ ನಗ್ನ ಗೊಳಿಸಿ ಅದನ್ನು ತನ್ನ ನಿಜರೂಪದಲ್ಲಿ ನಮ್ಮೆದುರಿಗೆ ಬಿಂಬಿಸುತ್ತಾರೆ. ಥಳಥಳನೆ ಹೊಳೆದು ಎಲ್ಲರ ಕಣ್ಣು ಕೋರೈಸುವ ಚಿನ್ನವನ್ನು ಜನರು ಮಾಯೆ ಯೆನ್ನುವರು. ತನ್ನ ಲಾವಣ್ಯ, ಸೌಂದರ್ಯ ಮತ್ತು ಹಾವಭಾವಗಳಿಂದ ಆಕರ್ಷಿಸುವ ಹೆಣ್ಣನ್ನು ಮಾಯೆಯೆನ್ನುವರು (ಇಲ್ಲಿ ಲೋಕದಲ್ಲಿ ಬಳಕೆಯಲ್ಲಿರುವ ಮಾತನ್ನು ಮಾತ್ರ ಹೇಳುತ್ತಿರುವರು, ಅದನ್ನ್ನು ಅಕ್ಷರಶಃ ತೆಗೆದುಕೊಳ್ಳದೆ, ಅಂದರೆ, ಗಂಡಿಗೆ ಹೆಣ್ಣು ಮಾಯೆಯಾಗುವಂತೆ ಹೆಣ್ಣಿಗೆ ಗಂಡು ಮಾಯೆಯಾಗುತ್ತಾನೆ ಎಂದು ತೆಗೆದುಕೊಳ್ಳದೆ ಹೋದರೆ ಅದು ನಮ್ಮ ಮೂರ್ಖತನವಾಗತ್ತದೆ.) ಸಮೃದ್ಧಿಯನ್ನು ಕೊಡುವ ಮಣ್ಣು ಮಾಯೆಯೆಂಬುವರು. ಆದರೆ ಅಲ್ಲಮಪ್ರಭುಗಳು ಇವಾವೂ ಮಾಯೆಯಲ್ಲ, ಇವುಗಳ ಬಗ್ಗೆ ನಾವು ಬೆಳೆಸಿಕೊಂಡ ಆಸೆಯೇ ಮಾಯೆಯೆನ್ನುವರು.

ಚಿನ್ನ ಎಂತೆಂತಹವರನ್ನೂ ಮರುಳುಗೊಳಿಸುತ್ತದೆ, ಅದರ ಆಕರ್ಷಣೆಗೆ ಒಳಗಾಗದವರೇ ಇಲ್ಲ, ಅದಕ್ಕಾಗಿ ಜನರು ಏನನ್ನೂ ಮಾಡಲು ಸಿದ್ಧರಾಗುತ್ತಾರೆ ಎಂಬಂತಹ ಮಾತುಗಳನ್ನು ನಾವು ಕೇಳುತ್ತೇವೆ. ಚಿನ್ನಕ್ಕೆ ಸುಂದರವಾದ ಬಣ್ಣವಿದೆ, ಅದು ತುಕ್ಕು ಹಿಡಿಯುವುದಿಲ್ಲ, ಅದಕ್ಕೆ ಕೆಲ ಔಷಧೀಯ ಗುಣಗಳೂ ಇವೆ, ಅದು ಅತ್ಯಂತ ಬೆಲೆಬಾಳುವ ವಸ್ತು, ಅದರಿಂದ ನಾನಾ ಆಭರಣಗಳನ್ನು ಮಾಡಬಹುದು, ಅದು ಇತರ ಲೋಹಗಳಿಗೆ ಹೋಲಿಸಿದರೆ ಬಹು ಮೃದುವಾದದ್ದು ಎಂಬುದರಿಂದ ಅದರ ಈ ಗುಣಗಳ ಅರಿವಿರುವ ಜನರು ಅದಕ್ಕಾಗಿ ಮರುಳುಗೊಳ್ಳುತ್ತಾರೆ. ಅದನ್ನು ಧರಿಸಿ ತಾನೇ ಚಿನ್ನವಾದೆನೆಂಬ, ತನ್ನ ಸಮಾನರಿಲ್ಲೆಂಬ ಭ್ರಮೆಯಲ್ಲಿರುತ್ತಾರೆ. ಅದೇ ರೀತಿ, ಹೆಣ್ಣು ಗಂಡುಗಳು ಕೂಡ. ಗುಣ, ಸೌಂದರ್ಯ, ಯೌವನ, ಅವರಿಂದ ತನಗಾಗುವ ಉಪಯೋಗ ಮತ್ತು ಸುಖಗಳಿಗಾಗಿ ಹೆಣ್ಣು ಗಂಡುಗಳು ಪರಸ್ಪರ ಆಕರ್ಷಣೆಗೊಳಗಾಗುತ್ತಾರೆ. ಇನ್ನು ಭೂಮಿ. ಅದು ಕೊಡುವ ಸಮೃದ್ಧಿ ಅಪಾರವಾದದ್ದು. ಅದನ್ನು ತನ್ನದಾಗಿಸಿಕೊಳ್ಳಬೇಕು, ತಾನು ಅದರ ಒಡೆಯನೆನಿಸಿಕೊಳ್ಳಬೇಕು, ಅದರ ಸಮೃದ್ಧಿಯನ್ನು ತನ್ನ ಪೀಳಿಗೆಯವರಿಗಾಗಿ ಕಾದಿಡಬೇಕು ಎಂದು ಬಯಸುತ್ತಾನೆ. ಹಾಗೆ ಮಾಡಿದಾಗ ಅವರು ನಿರುಮ್ಮಳವಾಗಿ ಬದುಕುತ್ತಾರೆ ಎನ್ನುವ ಭ್ರಮೆಗೆ ಒಳಗಾಗುತ್ತಾನೆ. ಇದನ್ನೆಲ್ಲ ನೋಡಿ ಜನರು ಹೊನ್ನು, ಹೆಣ್ಣು (ಗಂಡು) ಮತ್ತು ಮಣ್ಣುಗಳನ್ನು ಮಾಯೆಯೆಂದರು. ಆದರೆ ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ಇನ್ನೊಂದೇ ಸತ್ಯ ಗೋಚರವಾಗುತ್ತದೆ. ಹೊನ್ನು, ಹೆಣ್ಣು, ಮಣ್ಣುಗಳು ನಿಸರ್ಗದಲ್ಲಿಯ ಅನೇಕ ವಸ್ತು ಮತ್ತು ಜೀವಿಗಳಂತೆ ಸಾಮಾನ್ಯವಾದವುಗಳು. ಅವುಗಳ ಬಗ್ಗೆ ನಾವು ತಳೆದ ಭಾವನೆಗಳಿಂದ, ಅವು ನಮಗೆ ಅತಿ ಆಕರ್ಷಕವಾಗಿ ಕಾಣುತ್ತವೆ. ಆದ್ದರಿಂದ ಅವುಗಳ ಸ್ವಾಮ್ಯ ನಮಗೆ ಅಪಾರ ಸುಖಕೊಡುತ್ತವೆ, ಆ ಸುಖ ಶಾಶ್ವತವಾದದ್ದು ಎನ್ನುವ ಭ್ರಮೆ ಹುಟ್ಟಿಸುತ್ತವೆ. ಅದು ಸತ್ಯವಾಗಿರದೆ ಕೇವಲ ಭ್ರಮೆಯಾಗಿರುವುದರಿಂದ ಅದರಿಂದ ನಾವು ಆಶಿಸಿದ ಸುಖ ಸಿಗದೆ ಭ್ರಮನಿರಸನವಾಗುತ್ತದೆ. ಎಷ್ಟೋಸಲ ಭ್ರಮನಿರಸನವಾದರೂ ಅದನ್ನು ಅರಿತುಕೊಳ್ಳದೆ, ಮತ್ತೆ ಮತ್ತೇ ಅದರ ಆಸೆಗೆ ಒಳಗಾಗುತ್ತೇವೆ. ವಾಸ್ತವವಾಗಿ ಆ ವಸ್ತುಗಳು ಕೇವಲ ವಸ್ತುಗಳಾಗಿವೆ. ನಾವು ನಮ್ಮ ಆಸೆಗಳ ಕಾರಣದಿಂದ ಅವುಗಳಿಗೆ ಅತಿ ಹೆಚ್ಚಿನ ಬೆಲೆ ಕೊಡುತ್ತೇವೆ. ಮತ್ತು ಅವುಗಳನ್ನು ಮಾಯೆ ಎಂದು ಕರೆಯುತ್ತೇವೆ. ಒಂದು ವೇಳೆ ಆ ವಸ್ತುಗಳೇ ಮಾಯೆಯಾಗಿದ್ದಿದ್ದರೆ ಎಲ್ಲರೂ, ಯಾರೇ ಆದರೂ, ಅವುಗಳನ್ನು ನೋಡಿದ ಕೂಡಲೆ ಅವುಗಳ ಮಾಯೆಯೆಗೆ ತುತ್ತಾಗಬೇಕು. ಆದರೆ ಹಾಗಾಗುವುದಿಲ್ಲ. ಒಬ್ಬನಿಗೆ ಅತಿ ಆಕರ್ಷಕವಾಗಿ ಕಂಡ ಆಭರಣ, ಹೆಣ್ಣು, ಗಂಡು, ಭೂಮಿ ಇನ್ನೊಬ್ಬನಿಗೆ ಹಾಗೆ ಕಂಡು ಬರುವುದಿಲ್ಲ.ಅಷ್ಟೇ ಅಲ್ಲದೆ ಅನೇಕರು ಹೊನ್ನು, ಹೆಣ್ಣು, ಮಣ್ಣುಗಳ ಮೋಹಕ್ಕೆ ಒಳಗಾಗುವುದಿಲ್ಲ. ಇದಕ್ಕೆ ಕಾರಣವೇನು? ಅವುಗಳಿಗೆ ತುತ್ತಾಗುವ ವ್ಯಕ್ತಿಯ ಮನಸ್ಸನ್ನು ಸೂಕ್ಷ್ಮವಾಗಿ ಗಮನಿಸಿದಾಗ ವ್ಯಕ್ತಿಯ ಆಸೆಯೇ ನಿಜವಾದ ಮಾಯೆ ಎಂಬುದು ಅರಿವಾಗುತ್ತದೆ. ವ್ಯಕ್ತಿಯ ಮನದಲ್ಲಿ ಆಸೆಯಿರದಾಗ ಈ ಯಾವ ವಸ್ತುಗಳೂ ಆತನ ಮೇಲೆ ಯಾವ ಪರಿಣಾಮವೂ ಬೀರಲಾರವು. ಆಸೆಯಿಂದ ತುಂಬಿದ ವ್ಯಕ್ತಿಯು ತನ್ನ ಆಸೆಗಳನ್ನು ಪೂರೈಸುವ ಅದೇ ಗುಣಗಳನ್ನು ಹೊಂದಿದ ಇತರ ವಸ್ತುಗಳ ಮೋಹಕ್ಕೂ ಒಳಗಾಗುತ್ತಾನೆ. ಈ ಎಲ್ಲವನ್ನೂ ಗಮನಿಸಿದಾಗ ಮೂಲತಃ ಯಾವ ವಸ್ತುವೂ ಸ್ವತಃ ಮಾಯೆಯಲ್ಲ. ಆಯಾ ವಸ್ತುಗಳ ಬಗ್ಗೆ ನಮ್ಮ ಮನದಲ್ಲಿರುವ ಆಸೆಯೇ ಮಾಯೆ ಎಂಬುದು ತಿಳಿದುಬರುತ್ತದೆ. ಈ ರೀತಿಯಾಗಿ ಅಲ್ಲಮಪ್ರಭುಗಳು “ಮಾಯೆ”ಯ ಬಗ್ಗೆ ನಮ್ಮ ಮನದಲ್ಲಿದ್ದ ಭ್ರಮೆಯನ್ನು ಬಾಳೆಯ ಹಣ್ಣಿನ ಸಿಪ್ಪೆ ಸುಲಿವಂತೆ ಸುಲಿದು ಸ್ಪಷ್ಟಪಡಿಸಿದ್ದಾರೆ.